Tag: book

  •  ಕನ್ನಡದಲ್ಲಿ ಕ್ರಿಕೆಟ್ ನಿಯಮ ಪ್ರಕಟಿಸಿದ ಇಂಗ್ಲೆಂಡ್ ಕ್ರಿಕೆಟ್ ಕ್ಲಬ್- ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ

     ಕನ್ನಡದಲ್ಲಿ ಕ್ರಿಕೆಟ್ ನಿಯಮ ಪ್ರಕಟಿಸಿದ ಇಂಗ್ಲೆಂಡ್ ಕ್ರಿಕೆಟ್ ಕ್ಲಬ್- ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ

    ಬೆಂಗಳೂರು: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ರಿಕೆಟ್ ನಿಯಮಗಳನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಿದ್ದು, ಈ ಕುರಿತು ಕನ್ನಡದಲ್ಲಿ ಪುಸ್ತಕ ಬರೆದಿದ್ದ ಬೆಂಗಳೂರಿನ ಮಾಜಿ ಅಂಪೈರ್ ವಿನಾಯಕ ಕುಲಕರ್ಣಿ ಅವರ ಪುಸ್ತಕವನ್ನು ಇಂಗ್ಲೆಂಡಿನ ಮಲೊಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.

    1998ರಲ್ಲಿ ಕ್ರಿಕೆಟ್ ನಿಯಮಗಳನ್ನು ಮೊದಲ ಬಾರಿಗೆ ಕನ್ನಡದಲ್ಲಿ ಬರೆದ ವಿನಯ್ ಕುಲಕರ್ಣಿ ಅವರು `ಕ್ರಿಕೆಟ್ ನಿಯಮಗಳು’ ಅನುವಾದ ಪುಸ್ತಕವನ್ನು ಪ್ರಕಟಿಸಿದ್ದರು. ಇದಾದ ಬಳಿಕ ಪರಿಷ್ಕೃತ ನಿಯಮಗಳ ಪುಸ್ತಕ 2017 ರಲ್ಲಿ ಕ್ರಿಕೆಟ್ ನಿಯಮಗಳು ಎಂಬ ಹೆಸರಿನಲ್ಲಿ ಪ್ರಕಟಗೊಂಡಿತ್ತು. ಈ ಪುಸ್ತಕವನ್ನು ಮಲೊರ್ಬೊನ್ ಕ್ರಿಕೆಟ್ ಕ್ಲಬ್ ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಈ ಮೂಲಕ ಕನ್ನಡ ಭಾಷೆಯ ಕೀರ್ತಿ ವಿಶ್ವಮಟ್ಟದಲ್ಲಿ ಹೆಚ್ಚಳವಾಗಿದೆ. ಈ ಹಿಂದೆ ಎಂಸಿಸಿ ಹಿಂದಿ ಗುಜರಾತಿ ಭಾಷೆಯಲ್ಲಿ ನಿಯಮಗಳನ್ನ ಪ್ರಕಟಿಸಿದನ್ನು ಇಲ್ಲಿ ನೆನಪಿಸಬಹುದಾಗಿದೆ.

    ಪುಸ್ತಕ 124 ಪುಟಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ ಕ್ರಿಕೆಟ್ ಬೆಳವಣಿಗೆ ಪ್ರಮುಖ ಇಸವಿಗಳು, ಆಟಗಾರರು, ಅಂಪೈರ್, ಸ್ಕೋರ್ ಗಳು, ಆಟದ ಮೈದಾನ, ವಿರಾಮ, ಇನ್ನಿಂಗ್ಸ್, ಓವರ್, ಟೈಮ್ ಔಟ್, ಆಟಗಾರರ ನಡವಳಿಕೆ, ನಿಯಮಬಾಹಿರ ಆಟ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ವಿವರಣೆ ನೀಡಲಾಗಿದೆ.

    ತಂತ್ರಜ್ಞಾನದಿಂದ ಅಂಪೈರ್ ಮೇಲಿನ ಒತ್ತಡ ಹೆಚ್ಚಳವಾಗಿದ್ದು, ಟೆಲಿವಿಷನ್ ಅಲ್ಟ್ರಾ ಸ್ಲೋ ಮೋಷನ್ ಮೂಲಕ ಅಂಪೈರ್ ಗಳ ಸಣ್ಣ ತಪ್ಪು ದೊಡ್ಡದಾಗಿ ಕಾಣುತ್ತದೆ. ಅಲ್ಲದೇ ಅಂಪೈರ್ ಅಂತರಾಷ್ಟ್ರೀಯ ದರ್ಜೆಗೇರಲು ಹಲವು ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಅಂಪೈರ್ ತರಬೇತಿ ಅವಧಿಯಲ್ಲಿ ಕ್ರಿಕೆಟ್ ನಿಯಮಗಳು ಸುಲಭವಾಗಿ ಆರ್ಥೈಸಿಕೊಳ್ಳಲು ನಿಯಮಗಳನ್ನು ಪ್ರಕಟಿಸಲಾಗಿದೆ ಎಂದು ವಿನಾಯಕ ಕುಲಕರ್ಣಿ ಅವರು ತಿಳಿಸಿದ್ದಾರೆ.

    ಅಂದಹಾಗೇ ಬಾಗಲಕೋಟೆಯಲ್ಲಿ ಮೂಲದ ವಿನಾಯಕ ಕುಲಕರ್ಣಿ ಅವರು 1999 ರಿಂದ 2000 ಅವಧಿಯಲ್ಲಿ 2 ಏಕದಿನ ಪಂದ್ಯಗಳಿಗೆ ಫೀಲ್ಡ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಇವರನ್ನು ಅಂಪೈರ್ ಕೋಚ್ ಆಗಿ ಬಿಸಿಸಿಐ ಆಯ್ಕೆ ಮಾಡಿತ್ತು. ಉಳಿದಂತೆ 60 ರಣಜಿ ಪಂದ್ಯಗಳಲ್ಲಿ ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಭಾರತದಲ್ಲಿ ಅಂಪೈರ್ ಗುಣಮಟ್ಟ ಸುಧಾರಿಸಲು ಬಿಸಿಸಿಐ ನಾಗಪುರ ಅಂಪೈರ್‍ಗಳ ಅಕಾಡೆಮಿ ಆರಂಭಿಸಿತ್ತು. ಈ ಆಕಾಡೆಮಿಯಲ್ಲಿ ವಿನಾಯಕ ಕುಲಕರ್ಣಿ ಅವರು ಮೊದಲ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

    ಕನ್ನಡಲ್ಲಿರುವ ಕ್ರಿಕೆಟ್ ನಿಮಯಮದ ಪಿಡಿಎಫ್ ಪ್ರತಿಯನ್ನು ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: www.lords.org

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್-ಸುಟ್ಟು ಬೂದಿಯಾದ ಪುಸ್ತಕ ಭಂಡಾರ

    ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್-ಸುಟ್ಟು ಬೂದಿಯಾದ ಪುಸ್ತಕ ಭಂಡಾರ

    ಕೋಲಾರ: ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಸಾಹಿತಿ, ಪತ್ರಕರ್ತ ಕೋಟಿಗಾನಹಳ್ಳಿ ರಾಮಯ್ಯ ಅವರ ಮನೆ ಬೆಂಕಿಗಾಹುತಿಯಾಗಿದ್ದು, ಮನೆಯಲ್ಲಿ ಸಂಗ್ರಹಿಸಿದ್ದ ಪುಸ್ತಕ ಭಂಡಾರ ಸುಟ್ಟು ಬೂದಿಯಾಗಿದೆ.

    ಕೋಲಾರ ತಾಲೂಕು ಪಾಪರಾಜನಹಳ್ಳಿಯ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ರಾಮಯ್ಯ ಅವರ ಮನೆ ಇದ್ದು, ಮಂಗಳವಾರ ರಾತ್ರಿ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಬೆಂಕಿಯ ಜ್ವಾಲೆಗೆ ಮನೆಯಲ್ಲಿ ಸಂಗ್ರಹಮಾಡಿದ್ದ ಪುಸ್ತಕಗಳು ಸುಟ್ಟು ಬೂದಿಯಾಗಿದೆ. ಅಲ್ಲದೇ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪುಸ್ತಕಗಳು, ಟಿವಿ, ಕಂಪ್ಯೂಟರ್, ಬಟ್ಟೆಗಳು ಮತ್ತು ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿದೆ. ಸ್ಥಳೀಯರ ನೆರವಿನಿಂದ ಮನೆಯ ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಕೋಲಾರದ ಆದಿಮ ಸಂಸ್ಕೃತಿಕ ಕೇಂದ್ರ ಸ್ಥಾಪನೆಯ ಹಿಂದೆ ರಾಮಯ್ಯ ಅವರು ಹೆಚ್ಚು ಶ್ರಮವಹಿಸಿದ್ದು, ಆದಿಮ ಕೇಂದ್ರದಲ್ಲೇ ಮನೆ ನಿರ್ಮಾಣ ಮಾಡಿ ವಾಸಿಸುತ್ತಿದ್ದರು. ಆದಿಮ ಕೇಂದ್ರವೂ ನೆಲ ಸಂಸ್ಕೃತಿ ಉಳಿಸಿ ಯುವ ಸಮುದಾಯಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿದೆ. ಅಲ್ಲದೇ ಯುವ ಸಮುದಾಯದಲ್ಲಿರುವ ಸುಪ್ತ ಪತ್ರಿಭೆಯನ್ನು ಗುರುತಿಸಿ ನೀರೆರೆಯುವ ಕಾರ್ಯ ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ಅಕ್ರಮ ಪುಸ್ತಕ ಮಾರಾಟಜಾಲ ಪತ್ತೆ

    ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ಅಕ್ರಮ ಪುಸ್ತಕ ಮಾರಾಟಜಾಲ ಪತ್ತೆ

    ಚಾಮರಾಜನಗರ: ಸರ್ಕಾರಿ ಶಾಲೆಗಳ ಪಠ್ಯಪುಸ್ತಗಳನ್ನು ಅಕ್ರಮವಾಗಿ ಮಾರಾಟ ಮಾಡುವ ದಂಧೆ ಶಿಕ್ಷಣ ಸಚಿವ ಎನ್.ಮಹೇಶ್ ರವರ ತವರು ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹನೂರು ಶಿಕ್ಷಣ ವಲಯ ಕಚೇರಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

    ರಾಜ್ಯದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪಠ್ಯ ಪುಸ್ತಕಗಳ ಅಭಾವ ಉಂಟಾಗಿದೆ. ಆದರೆ ಕೊಳ್ಳೇಗಾಲ ತಾಲೂಕಿನ ಹನೂರು ಶಿಕ್ಷಣ ವಲಯ ಕಚೇರಿಯಲ್ಲಿ ಹಣದ ಆಸೆಗೆ ಶಿಕ್ಷಣ ಸಂಯೋಜಕ ಮಹದೇವಶೆಟ್ಟಿ ಅಕ್ರಮವಾಗಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಹನೂರು ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ವಿತರಣೆ ಮಾಡಲು ಗೋದಾಮಿನಲ್ಲಿ ಸಂಗ್ರಹಿಸಿರುವ ಪಠ್ಯ ಪುಸ್ತಗಳನ್ನು ಖಾಸಗಿ ಶಾಲೆ ಹಾಗೂ ಅರೆ ಸರ್ಕಾರಿ ಶಾಲೆಗಳ ಪೋಷಕರಿಗೆ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇದಕ್ಕೂ ಮುಂದೆ ಹೋಗಿರುವ ಅಧಿಕಾರಿಗಳು ಪುಸ್ತಕಗಳನ್ನು ಖಾಸಗಿ ಪುಸ್ತಕ ಮಳಿಗೆಗಳಿಗೂ ಸಹ ಕಡಿಮೆ ಬೆಲೆಯಲ್ಲಿ ಮಾರಾಟಮಾಡುತ್ತಿದ್ದಾರೆ.

    ಒಂದು ಕಡೆ ಸರ್ಕಾರಿ ಶಾಲೆಯ ಮಕ್ಕಳು ನಮಗೆ ಇನ್ನೂ ಪುಸ್ತಕಗಳೇ ಬಂದಿಲ್ಲ ಎನ್ನುತ್ತಿದ್ದರೆ, ಇನ್ನೊಂದೆಡೆ ಅಕ್ರಮವಾಗಿ ಪಠ್ಯ ಪುಸ್ತಕಗಳು ಮಾರಾಟವಾಗುತ್ತಿವೆ. ಕೂಡಲೇ ಶಿಕ್ಷಣ ಇಲಾಖೆ ಎಚ್ಚೆತ್ತು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಗೊಳ್ಳಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗ್ಳೂರು ವಿವಿ ಪದವಿ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಅಶ್ಲೀಲ ಕಥೆ!

    ಮಂಗ್ಳೂರು ವಿವಿ ಪದವಿ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಅಶ್ಲೀಲ ಕಥೆ!

    ಮಂಗಳೂರು: ಇಲ್ಲಿನ ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಮತ್ತೊಂದು ಎಡವಟ್ಟು ಕಂಡುಬಂದಿದೆ. ದ್ವಿತೀಯ ಬಿಕಾಂ ಪದವಿ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಅಶ್ಲೀಲತೆಯನ್ನು ಬಿಂಬಿಸುವ ಕಥೆಯೊಂದನ್ನು ಪಠ್ಯವಾಗಿ ನೀಡಿದ್ದು ಈಗ ಆಕ್ಷೇಪಕ್ಕೆ ಕಾರಣವಾಗಿದೆ.

    ನುಡಿ ನೂಪುರ ಎಂಬ ಪುಸ್ತಕದಲ್ಲಿ ಮಗುವಿನ ತಂದೆ ಹೆಸರಿನ ಪಠ್ಯ ಅಳವಡಿಸಲಾಗಿದೆ. ಇದರಲ್ಲಿ ಗಂಡ ಹೆಂಡತಿಯ ಸಂಬಂಧವನ್ನು ಹೊರತುಪಡಿಸಿ ಅಕ್ರಮ ಸಂಬಂಧ ಸರಿ ಅನ್ನುವಂತೆ ಬಿಂಬಿಸುವ ಕಥೆಯನ್ನು ಪಠ್ಯವಾಗಿ ಸೇರಿಸಲಾಗಿದೆ. ಅಲ್ಲದೆ, ವಿವಾಹೇತರ ಸಂಬಂಧವನ್ನು ಲಘು ಭಾಷೆಯಲ್ಲಿ ವಿವರಿಸಲಾಗಿದ್ದು, ಸ್ವತಃ ಇದನ್ನು ಬೋಧನೆ ಮಾಡುವ ಶಿಕ್ಷಕ ವೃಂದಕ್ಕೆ ಮುಜುಗರ ಸೃಷ್ಟಿಸುವಂತಿದೆ.

    ಮಟ್ಟಾರು ವಿಠಲ ಹೆಗ್ಡೆ ಎಂಬ ಕಥೆಗಾರ 1939ರಲ್ಲಿ ಬರೆದ ಈ ಕಥೆಯನ್ನು ಈಗ ಪಠ್ಯವಾಗಿ ಸೇರಿಸಿಕೊಂಡಿದ್ದರ ಉದ್ದೇಶವೇನು ಅನ್ನೋ ಪ್ರಶ್ನೆಯನ್ನು ಉಪನ್ಯಾಸಕರು ಮುಂದಿಟ್ಟಿದ್ದಾರೆ. ವಿದ್ಯಾರ್ಥಿಗಳಲ್ಲಿ ವಿವಾಹೇತರ ಸಂಬಂಧದ ಚಿತ್ರಣ ತಿಳಿಸಿ, ಯಾವ ರೀತಿಯ ವಿಕೃತಿಯನ್ನು ಹೇರುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. ವಿವಿಯ ಪಠ್ಯ ಈಗಷ್ಟೆ ಮುದ್ರಣ ಆಗಿ ವಿದ್ಯಾರ್ಥಿಗಳ ಕೈಸೇರಿದ್ದು ಕೂಡಲೇ ಅದನ್ನು ಹಿಂಪಡೆಯಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಮೂಲಕ ಪಠ್ಯ ಪುಸ್ತಕ ರಚನಾ ಸಮಿತಿ ಯಾವ ರೀತಿಯ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಿದೆ ಎಂಬ ಪ್ರಶ್ನೆಯೂ ಕೇಳಿಬಂದಿದೆ.

  • ಕಾವೇರಿ ನನಗೊಬ್ಬನಿಗೆ ಸೇರಿದ್ದಲ್ಲ, ಲೋಕಸಭೆಯಲ್ಲಿ ಚರ್ಚಿಸಿ ಪ್ರಾಧಿಕಾರ ರಚನೆಯಾಗಬೇಕು: ಎಚ್‍ಡಿಡಿ

    ಕಾವೇರಿ ನನಗೊಬ್ಬನಿಗೆ ಸೇರಿದ್ದಲ್ಲ, ಲೋಕಸಭೆಯಲ್ಲಿ ಚರ್ಚಿಸಿ ಪ್ರಾಧಿಕಾರ ರಚನೆಯಾಗಬೇಕು: ಎಚ್‍ಡಿಡಿ

    ಬೆಂಗಳೂರು: ಕಾವೇರಿ ನನಗೊಬ್ಬನಿಗೆ ಸೇರಿದ್ದಲ್ಲ. 35 ತಾಲೂಕಿಗೆ ಸೇರಿದ್ದು. ಹೀಗಾಗಿ ನೀರು ಹಂಚಿಕೆ ವಿಚಾರದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

    ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಕಾವೇರಿ ಪ್ರಾಧಿಕಾರದ ಕುರಿತು ಚರ್ಚೆ ಆಗಬೇಕು. ಇತ್ತೀಚೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಕೂಡಾ ಈ ವಿಚಾರವಾಗಿ ಮಾತನಾಡಿದ್ದಾರೆ. ಕಾವೇರಿ ವ್ಯಾಜ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದ ಸಂಸದರಿಗೆ ಮಾಹಿತಿ ನೀಡಲು ಪುಸ್ತಕವೊಂದನ್ನು ಹೊರತರುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿರುವೆ ಎಂದು ಅವರು ಹೇಳಿದರು.

    ಕಾವೇರಿ ವ್ಯಾಜ್ಯಕ್ಕೆ ಸಂಬಂಧಿಸಿದ ಮಾಹಿತಿ, ಚರ್ಚೆ ಮತ್ತು ದಾಖಲೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಹೇಳಿರುವೆ. ನಮ್ಮ ರಾಜ್ಯಕ್ಕೆ ಕಾವೇರಿ ನೀರು ಎಷ್ಟು ಉಳಿಸಲು ಸಾಧ್ಯವೋ ಅಷ್ಟು ಉಳಿಸಲು ನಾನು ಶ್ರಮಿಸುತ್ತೇನೆ ಎಂದು ಹೇಳಿದ ಅವರು, ಉಜಿರೆಯಲ್ಲಿ ಬಜೆಟ್ ಮತ್ತು ರೈತರ ಸಾಲ ಮನ್ನಾ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿ, ಅದೆಲ್ಲವನ್ನು ನಾನು ಈಗ ಮಾತನಾಡುವುದಿಲ್ಲ ಎಂದು ಸಿಟ್ಟು ವ್ಯಕ್ತಪಡಿಸಿದರು.

  • ಮದ್ವೆಯಲ್ಲಿ ಅತಿಥಿಗಳಿಂದ ಉಡುಗೊರೆಯಾಗಿ ಪುಸ್ತಕಗಳನ್ನು ಪಡೆದ ನವ ದಂಪತಿ

    ಮದ್ವೆಯಲ್ಲಿ ಅತಿಥಿಗಳಿಂದ ಉಡುಗೊರೆಯಾಗಿ ಪುಸ್ತಕಗಳನ್ನು ಪಡೆದ ನವ ದಂಪತಿ

    ಮುಂಬೈ: ಮದುವೆಗಳಿಗೆ ತೆರಳಿದಾಗ ವೇದಿಕೆ ಮೇಲಿರುವ ದಂಪತಿಗೆ ಅತಿಥಿಗಳು ಕಾಣಿಕೆ ನೀಡುವುದು ಸಾಮನ್ಯವಾಗಿ ಕಂಡುಬರುತ್ತದೆ. ಮದುವೆಗೆ ಆಗಮಿಸಿರುವ ಅತಿಥಿಗಳು ಸಹ ದಂಪತಿಗಳಿಗೆ ಗೃಹಪಯೋಗಿ ವಸ್ತುಗಳು, ಬೆಲೆಬಾಳುವ ಒಡವೆಗಳು, ಅಲಂಕಾರಿಕ ವಸ್ತುಗಳು ಅಥವಾ ತುಂಬಾ ಹತ್ತಿರದವರು ಆಗಿದ್ದರೆ ಚಿನ್ನಾಭರಣಗಳನ್ನು ನೀಡುತ್ತಾರೆ. ಮತ್ತೆ ಕೆಲವರು ಯಾವ ಕಾಣಿಕೆ ನೀಡಬೇಕೆಂದು ತಲೆ ಕೆಡಿಸಿಕೊಳ್ಳದೇ ಕವರ್‍ನಲ್ಲಿ ತಮಗೆ ತೋಚಿದಷ್ಟು ಹಣವಿಟ್ಟು ದಂಪತಿಗೆ ನೀಡುತ್ತಾರೆ.

    ಮಹಾರಾಷ್ಟ್ರದ ನವಜೋಡಿಯೊಂದು ಮದುವೆಗೆ ಆಗಮಿಸುವ ಅತಿಥಿಗಳಿಗೆ ಕಾಣಿಕೆ ರೂಪದಲ್ಲಿ ಪುಸ್ತಕಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಜೋಡಿಯ ಆಸೆಯಂತೆ ಅತಿಥಿಗಳೆಲ್ಲಾ ಸುಮಾರು 3 ಸಾವಿರ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

    ಅಮರ್ ಮತ್ತು ರಾಣಿ ಕಲ್ಮಾಕರ್ ಪುಸ್ತಕಗಳನ್ನು ಕಾಣಿಕೆಯಾಗಿ ಪಡೆದ ದಂಪತಿ. ವರ ಅಮರ್ 15 ವರ್ಷಗಳಿಂದ ಯುವ ಚೇತನ ಎಂಬ ಎನ್‍ಜಿಓ ಮುಖಾಂತರ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ವಧು ರಾಣಿ ಪುಣೆಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಮದುವೆಗೂ ಮುನ್ನ ತಮ್ಮ ಎಲ್ಲ ಗೆಳೆಯ ಹಾಗು ಸಂಬಂಧಿಕರಿಗೂ ವಾಟ್ಸಪ್ ಮುಖಾಂತರ ಉಡುಗೊರೆ ರೂಪದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ನೀಡಬೇಕೆಂದು ತಿಳಿಸಿದ್ದರು.

    ಪುಸ್ತಕಗಳು ಯಾಕೆ?: ಮದುವೆಯಲ್ಲಿ ಬರುವ ಪುಸ್ತಕಗಳಿಂದ ಗೃಂಥಾಲಯ ತೆರಯಲು ಅಮರ್ ಮತ್ತು ರಾಣಿ ನಿರ್ಧರಿಸಿದ್ದರು. ಬಹಳಷ್ಟು ಮಂದಿ ಅತಿಥಿಗಳು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದು, ಅಹ್ಮದ್ ನಗರದಲ್ಲಿ ದಂಪತಿ ಗ್ರಂಥಾಲಯವನ್ನು ತೆರೆಯುವ ಪ್ರಯತ್ನದಲ್ಲಿದ್ದಾರೆ. ಹಿಂದುಳಿದ ವರ್ಗದ ಮಕ್ಕಳು ಹಾಗೂ ಶೈಕ್ಷಣಿಕ ಸಂಪನ್ಮೂಲಗಳು ದೊರೆಯದ ವಿದ್ಯಾರ್ಥಿಗಳು ಗ್ರಂಥಾಲಯದ ಉಪಯೋಗವನ್ನು ಪಡೆಯಬಹುದಾಗಿದೆ. ಈ ತಿಂಗಳ ಕೊನೆಯಲ್ಲಿ ಗ್ರಂಥಾಲಯವನ್ನು ತೆರೆಯಲಾಗುತ್ತದೆ.

  • ಬಿಜೆಪಿ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿ ನಗೆಪಾಟಲಿಗೀಡಾದ ಮಂಗಳೂರು ಕೈ ಶಾಸಕ ಲೋಬೋ

    ಬಿಜೆಪಿ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿ ನಗೆಪಾಟಲಿಗೀಡಾದ ಮಂಗಳೂರು ಕೈ ಶಾಸಕ ಲೋಬೋ

    ಮಂಗಳೂರು: ಬಿಜೆಪಿ ಸರ್ಕಾರದ ಸಾಧನೆಗಳನ್ನು ತನ್ನ ಸಾಧನೆಯೆಂದು ಬಿಂಬಿಸಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆಆರ್ ಲೋಬೋ ಮತ್ತೆ ನಗೆಪಾಟಲಿಗೀಡಾಗಿದ್ದಾರೆ.

    ಚುನಾವಣಾ ಹಿನ್ನೆಲೆಯಲ್ಲಿ ಸಾಧನೆಯ ಹಾದಿಯಲ್ಲಿ ಎಂಬ ಅಭಿವೃದ್ಧಿ ಯೋಜನೆಗಳ ಕುರಿತ ಪುಸ್ತಕವನ್ನು ಜೆಆರ್ ಲೋಬೋ ಬಿಡುಗಡೆ ಮಾಡಿದ್ದು, ಪುಸ್ತಕದಲ್ಲಿ ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿ ಆದಂತಹ ಯೋಜನೆಗಳನ್ನು ಸೇರಿಸಿಕೊಂಡಿದ್ದಾರೆ.

    ಮಂಗಳೂರಿನ ಬಿಜೈ ಮಾರ್ಕೆಟ್ ನಿರ್ಮಾಣ, ಪಂಪ್ವಲ್ ಜಂಕ್ಷನ್ ಬಳಿ ಸೇತುವೆ ನಿರ್ಮಾಣ, ಗಣಪತಿ ಹೈ ಸ್ಕೂಲ್ ರಸ್ತೆ ಅಭಿವೃದ್ಧಿ, ಮಿನಿವಿಧಾನಸೌಧ ಕಟ್ಟಡ ರಚನೆ, ಲೋಕಾಯುಕ್ತ ಕಚೇರಿ ಉದ್ಘಾಟನೆ ಸೇರಿದಂತೆ ಬಿಜೆಪಿ ಸರ್ಕಾರದಲ್ಲಿ ಅನುಷ್ಠಾನಗೊಂಡ ಯೋಜನೆಗಳನ್ನು ಪುಸ್ತಕದಲ್ಲಿ ಅಳವಡಿಸಿದ್ದಾರೆ.

    ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕ ಲೋಬೋ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದು, ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಜೆಆರ್ ಲೋಬೋ ಸುಳ್ಳಿನ ಮಾರ್ಗವನ್ನು ಹಿಡಿದಿದ್ದಾರೆ. ಈ ಮೂಲಕ ಜನರ ಮನಗೆಲ್ಲಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

     

  • ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

    ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

    ಬೆಂಗಳೂರು: ಖಾಸಗಿ ಚಾನೆಲೊಂದರಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ ನಲ್ಲಿ ಆ್ಯಂಕರ್ ಅನುಶ್ರೀ ಅವರು ಸ್ಪರ್ಧಿಯೊಬ್ಬರ ಹುಟ್ಟುವನ್ನು ಆಚರಿಸಿಕೊಳ್ಳುವ ಮೂಲಕ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

    ಬೆಳಗಾವಿ ಮೂಲದ ಲಕ್ಷ್ಮೀ ಎಂಬವರ ಹುಟ್ಟುಹಬ್ಬವನ್ನು ಶೋನಲ್ಲಿ ಆಚರಿಸಿಕೊಳ್ಳಲಾಯಿತು. ಈ ವೇಳೆ ಅನುಶ್ರೀ ಅವರು ಲಕ್ಷ್ಮೀ ಅವರಿಗೆ ಶಾಲೆಗೆ ಹೋಗಲು ಬ್ಯಾಗ್ ನೀಡಿ ಬಳಿಕ ತನ್ನ ಶಾಲೆಯ ದಿನಗಳ ಬಗ್ಗೆ ನೆನಪಿಸಿಕೊಂಡರು.

    ನಾನು ಶಾಲೆಗೆ ಹೋಗುವ ಸಮಯದಲ್ಲಿ ನನ್ನಲ್ಲಿ ಬ್ಯಾಗ್ ಇರಲಿಲ್ಲ. ಅವಾಗ ನಮಗೆ ಬ್ಯಾಗ್ ಕೊಡಿಸುವವರೂ ಯಾರೂ ಇರಲಿಲ್ಲ. ಹೀಗಾಗಿ ನಾನು ಪ್ಲಾಸ್ಟಿಕ್ ಚೀಲಗಳಲ್ಲಿ ಪುಸ್ತಕಗಳನ್ನು ಶಾಲೆಗೆ ಕೊಂಡೊಯ್ಯುತ್ತಿದ್ದೆ. ಆದ್ರೆ ಈಗ ಹಾಗೆ ಅಲ್ಲ. ಮಕ್ಕಳಿಗೆ ಬೇಕಾದಂತಹ ವೈರಟಿಯ ಬ್ಯಾಗ್ ಗಳು ಬಂದಿವೆ ಅಂತ ಹೇಳಿದ್ರು.

    ತನ್ನದೇ ಶೈಲಿಯಲ್ಲಿ ಹಾಡುತ್ತಾ ಜನರ ಮನಗೆದ್ದಿರುವ ಲಕ್ಷ್ಮೀ ಅವರ ಹುಟ್ಟುಹಬ್ಬವನ್ನು ಆಚರಿಸಿರುವುದು ನೆರೆದವರ ಕಣ್ಣಂಚಲ್ಲಿ ನೀರು ತರಿಸಿತ್ತು. ಅಲ್ಲದೇ ಇದೇ ಮೊದಲ ಬಾರಿಗೆ ನಾನು ಕೇಕ್ ಕಟ್ ಮಾಡುತ್ತಿರುವುದಾಗಿ ಹೇಳಿ ಲಕ್ಷ್ಮೀ ಕೂಡ ಭಾವುಕರಾದ್ರು. ಕೇಕ್ ಕಟ್ ಮಾಡಿದ ಬಳಿಕ ಸರಿಗಮಪದ ಜಡ್ಜ್ ಗಳು ಲಕ್ಷ್ಮೀ ಅವರಿಗೆ ಗಿಫ್ಟ್ ನೀಡಿದ್ದಾರೆ. ಹಾಗೆಯೇ ಲಕ್ಷ್ಮೀ ಅವರು ಪುಸ್ತಕಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ತೆಗೆದುಕೊಂಡು ಹೋಗುತ್ತಾರೆ ಅನ್ನೋ ಮಾಹಿತಿ ಪಡೆದಿದ್ದ ಅನುಶ್ರೀ ಬ್ಯಾಗ್ ಉಡುಗೊರೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದರು.

  • ಪ್ರಧಾನಿ ಮೋದಿಯಿಂದ ಪುಸ್ತಕ ಗಿಫ್ಟ್ ಪಡೆದ ಧಾರವಾಡದ ಬಾಲಕಿ

    ಪ್ರಧಾನಿ ಮೋದಿಯಿಂದ ಪುಸ್ತಕ ಗಿಫ್ಟ್ ಪಡೆದ ಧಾರವಾಡದ ಬಾಲಕಿ

    ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಧಾರವಾಡದ ಬಾಲಕಿಯೊಬ್ಬಳಿಗೆ ಪುಸ್ತಕ ಗಿಫ್ಟ್ ಮಾಡಿದ್ದಾರೆ. ರಾಜ್ಯದ ಹಲವು ಸಮಸ್ಯೆಗಳನ್ನ ಬರೆದು ಕಳಿಸಿದ್ದ ಯುವಕ ಯುವತಿಯರಿಗೆ ಪ್ರಧಾನಿ ಮೋದಿ ಪತ್ರದ ಮೂಲಕ ಪ್ರತಿಕ್ರಿಯೆಯನ್ನ ನೀಡಿದ್ದರು. ಆದರೆ ಈ ಬಾರಿ ಅವರು ಸ್ವತಃ ತಾವೇ ಬರೆದಿರುವ ಎಕ್ಸಾಂ ವಾರಿಯರ್ಸ್  ಪುಸ್ತಕವನ್ನ ಈ ಬಾಲಕಿಗೆ ಗಿಫ್ಟ್ ಮಾಡಿದ್ದಾರೆ.

    6ನೇ ತರಗತಿ ಓದುತ್ತಿರುವ ಧಾರವಾಡದ ಸಿರಿ ದೊಡಮನಿ, ಪ್ರಧಾನಿ ಮೋದಿ ಅವರಿಂದ ಪುಸ್ತಕವನ್ನ ಉಡುಗೊರೆಯಾಗಿ ಪಡೆದಿದ್ದಾಳೆ. ಧಾರವಾಡ ನಗರದ ಮಲ್ಲಸಜ್ಜನ ಶಾಲೆಯಲ್ಲಿ ಓದುತ್ತಿರುವ ಸಿರಿ, ಪ್ರಧಾನಿ ಮೋದಿ ತಂದಿರುವ ಯೋಜನೆಗಳನ್ನ ಚಿತ್ರಕಲೆ ಬಿಡಿಸುವ ಮೂಲಕ ಪುಸ್ತಕವನ್ನಾಗಿ ಮಾಡಿದ್ದಾಳೆ. ಈ ಪುಸ್ತಕದಲ್ಲಿ ಆಧಾರ್ ಕಾರ್ಡ್, ಬಡವರಿಗೆ ಮನೆ ನಿರ್ಮಾಣ, ರೇಡಿಯೋದಲ್ಲಿ ಬರುವ ಮನ್ ಕೀ ಬಾತ್, ಸ್ವಚ್ಛ ಭಾರತ ಅಭಿಯಾನ, ಮೋದಿ ವರ್ಲ್ಡ್ ಲಿಡರ್, ಮೋದಿ ಮುಸ್ಲಿಂ ಮಹಿಳೆಯರಿಗೆ ಮಾಡಿದ ಸಹಾಯ ಸೇರಿದಂತೆ ಹಲವು ಯೋಜನೆಗಳನ್ನ ಚಿತ್ರಗಳಲ್ಲಿ ಬಿಡಿಸಿದ್ದಾಳೆ.

    ಈ ಚಿತ್ರ ಬಿಡಿಸಿದ ಪುಸ್ತಕವನ್ನ ಸಿರಿ ಪ್ರಧಾನಿ ಮೋದಿಗೆ ಕಳಿಸಿಕೊಟ್ಟಿದ್ದಳು. ಈ ಪುಸ್ತಕ ಪಡೆದ ನರೇಂದ್ರ ಮೋದಿ, ವಿದ್ಯಾರ್ಥಿನಿಗೆ ಶ್ಲಾಘನಾ ಪತ್ರ ಹಾಗೂ ಎಕ್ಸಾಂ ವಾರಿಯರ್ಸ್ ಪುಸ್ತಕ ಕಳಿಸಿಕೊಟ್ಟಿದ್ದಾರೆ.

    ಪ್ರಧಾನಿ ಅವರಿಂದ ಈ ಪುಸ್ತಕ ಪಡೆದ ವಿದ್ಯಾರ್ಥಿನಿ ಸಂತಸ ವ್ಯಕ್ತಪಡಿಸಿದ್ದಾಳೆ. ಪ್ರಧಾನಿ ಕಳಿಸಿದ ಪುಸ್ತಕದಲ್ಲಿ ಪರೀಕ್ಷೆಗಳನ್ನ ಹೇಗೆ ಎದುರಿಸಬೇಕು ಎಂದು ಸರಳವಾಗಿ ತಿಳಿಸಲಾಗಿದೆ.

    ಸಿರಿ ದೊಡಮನಿಯ ತಂದೆ ತಾಯಿಯಾದ ಮಂಜುನಾಥ ಹಾಗೂ ಸಂಧ್ಯಾ ದಂಪತಿ ಕೂಡಾ ಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಲೆಯ ಶಿಕ್ಷಕರು ಕೂಡ ಸಿರಿ ಯ ಪುಸ್ತಕವನ್ನ ಪ್ರಧಾನಿಗೆ ಕಳಿಸಲು ಸಹಕಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶ್ಲಾಘನಾ ಪತ್ರದ ಜೊತೆ ಪುಸ್ತಕ ಪಡೆದ ಸಿರಿ ದೊಡಮನಿಗೆ ಶುಭಾಶಯ ಕೊರಿದ್ದಾರೆ.

  • ಬೆಳಗ್ಗೆಯಿಂದ ದೇವರ ಫೋಟೋ ಮುಂದೆ ಹೆಡೆ ಎತ್ತಿ ಕುಳಿತಿದ್ದ ನಾಗ

    ಬೆಳಗ್ಗೆಯಿಂದ ದೇವರ ಫೋಟೋ ಮುಂದೆ ಹೆಡೆ ಎತ್ತಿ ಕುಳಿತಿದ್ದ ನಾಗ

    ದಾವಣಗೆರೆ: ದೇವರ ಮನೆಯಲ್ಲಿ ನಾಗರಹಾವೊಂದು ಹೆಡೆ ಎತ್ತಿ ಕುಳಿತಿದ್ದ ಘಟನೆ ಜಿಲ್ಲೆಯ ಕುಂದುವಾಡ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಚಂದ್ರಪ್ಪ ಎಂಬವರ ಮನೆಯಲ್ಲಿ ಇಂದು ಬೆಳಗ್ಗೆ ನಾಗರಹಾವು ಕಾಣಿಸಿಕೊಂಡಿತ್ತು. ಬೆಳಗ್ಗೆಯಿಂದ ದೇವರ ಮನೆಯನ್ನು ಬಿಟ್ಟು ಬಾರದೆ ದೇವರ ಫೋಟೋ ಮುಂದೆ ಇರುವ ಪುಸ್ತಕಗಳ ಮೇಲೆ ಹೆಡೆ ಎತ್ತಿ ಕುಳಿತಿತ್ತು.

    ಕಳೆದ ಆರು ತಿಂಗಳುಗಳಿಂದ ಈ ನಾಗರಹಾವು ಗ್ರಾಮದ ಹಲವು ಮನೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇಂದು ಬೆಳಗ್ಗೆ ಚಂದ್ರಪ್ಪ ಅವರ ಮನೆಯಲ್ಲಿ ಕಾಣಿಸಿಕೊಂಡಿತ್ತು. ಆದರೆ ಬೆಳಿಗ್ಗೆಯಿಂದ ಒಂದೇ ಮನೆಯಲ್ಲಿ ಇರುವುದಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದರು. ಆದ್ದರಿಂದ ಈ ಹಾವನ್ನು ಹಿಡಿಯಲು ಗ್ರಾಮಸ್ಥರು ಉರಗ ತಜ್ಞರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಉರಗ ತಜ್ಞರು ಬಂದು ಹಾವನ್ನ ರಕ್ಷಣೆ ಮಾಡಿದ್ದಾರೆ. ಇದನ್ನು ಓದಿ: ಒಂದೇ ಜಾಗದಲ್ಲಿ ಎರಡು ಹಾವು, 300ಕ್ಕೂ ಹೆಚ್ಚು ಮೊಟ್ಟೆ – ಅಚ್ಚರಿಗೊಳಗಾದ ಸ್ಥಳೀಯರು!