Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬೆಂಗಳೂರು: ರಂಗಾಯಣದ ಅಡ್ಡಂಡ ಕಾರ್ಯಪ್ಪನವರ ಟಿಪ್ಪು (Tipp Nija Kanasugalu) ನಿಜ ಕನಸುಗಳು ಪುಸ್ತಕ (Book) ಕರ್ನಾಟಕದಲ್ಲಿ ವಿವಾದವನ್ನು ಸೃಷ್ಟಿಸಿತ್ತು. ಈಗ ಅದೇ ಮಾದರಿಯಲ್ಲಿ ಸಿದ್ದು ನಿಜಕನಸುಗಳು (Siddu Nija Kanasugalu) ಪುಸ್ತಕ ಸೋಮವಾರ ಲೋಕಾರ್ಪಣೆಗೊಳ್ಳಲಿದೆ.

ಸಚಿವ ಅಶ್ವಥ್ ನಾರಾಯಣ (Dr. Ashwathnarayan) ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಚಿಂತಕ ರೋಹಿತ್ ಚಕ್ರತೀರ್ಥ, ಪತ್ರಕರ್ತ ಸಂತೋಷ್ ತಮ್ಮಯ್ಯ, ಸಂವಾದದ ಸಂಪಾದಕ ವೃಷಾಂಕ್ ಭಟ್, ಬರಹಗಾರ ರಾಕೇಶ್ ಶೆಟ್ಟಿ ಉಪಸ್ಥಿತಿ ಇರಲಿದ್ದು, ಪರಿಷತ್ ಸದಸ್ಯರಾದ ಛಲವಾದಿ ನಾರಾಯಣ ಸ್ವಾಮಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಜೊತೆ ಪ್ರಾಮಿಸ್ ಪಾಲಿಟಿಕ್ಸ್
"ಸಿದ್ದು ನಿಜಕನಸುಗಳು" ಎಂಬ ಪುಸ್ತಕದ ಮೂಲಕ ಹಲವು ಸೂಕ್ಷ್ಮ ವಿಷಯಗಳನ್ನು ಬಹಿರಂಗಪಡಿಸುವ ಜತೆ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಿ ಕೊಡುವ ಪ್ರಯತ್ನವನ್ನು ಶ್ಲಾಘಿಸುತ್ತೇನೆ.
ಈ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ನೀವೂ ಬನ್ನಿ. pic.twitter.com/GRnvlmqGrp
— Dr. C.N. Ashwath Narayan (@drashwathcn) January 8, 2023
ಚುನಾವಣಾ ಹೊಸ್ತಿಲಲ್ಲಿ ಟಿಪ್ಪುವಿಗೆ ಹೋಲಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತಾದ ಪುಸ್ತಕ ಹೊರಬರುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಟಿಪ್ಪು ನಿಜಕನಸುಗಳು ಪುಸ್ತಕದಲ್ಲಿ ಈಗಾಗಲೇ ಟಿಪ್ಪು ಮತಾಂಧ, ಕ್ರೂರಿ ಅಂತಾ ಬಿಂಬಿಸಲಾಗಿದ್ದು ಅದೇ ಟಿಪ್ಪುವನ್ನು ಸಿದ್ದುವಿಗೆ ಹೋಲಿಸಿ ಸಿದ್ದರಾಮಯ್ಯ ಹಿಂದೂ ವಿರೋಧಿ ಧೋರಣೆ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಮವಾರ ಸಂಜೆ ಮೂರು ಗಂಟೆಗೆ ಟೌನ್ ಹಾಲ್‍ನಲ್ಲಿ ಪುಸ್ತಕ ಬಿಡುಗಡೆಯಾಗಲಿದೆ. ಇದನ್ನೂ ಓದಿ: ದೇವೇಗೌಡರ ಫೋಟೋ ಹಿಡಿದು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಅಭಿಮಾನಿಗಳು
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬೆಂಗಳೂರು: ವಿದ್ಯಾರ್ಥಿನಿ (Student) ಅಮನ ಜೆ. ಕುಮಾರ್ ಅವರ 3ನೇ ಹಾಗೂ ಪ್ರಥಮ ಹಿಂದಿ ಕವನ ಸಂಕಲನ Lafzon ki Mehfil ಎಂಬ ಪುಸ್ತಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಇಂದು ಬಿಡುಗಡೆ ಮಾಡಿದರು.
ಅಮನ ಜೆ. ಕುಮಾರ್ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ ಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿದ್ದು, ಹಾರ್ವರ್ಡ್ (Harvard) ವಿಶ್ವ ವಿದ್ಯಾಲಯದಿಂದ Masterpieces of World Literature ಕೋರ್ಸ್ ಅನ್ನು ಸಹ ಮಾಡಿದ್ದಾರೆ. ಜೈವಂತ್ ಕುಮಾರ್ ಹಾಗೂ ಡಾ. ಲತಾ ಟಿ.ಎಸ್. ಅವರ ಮಗಳಾದ ಅಮನ 6ನೇ ತರಗತಿಯಲ್ಲಿದ್ದಾಗ ಇಂಗ್ಲಿಷ್ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದು, ಅವರ ಪ್ರಥಮ ಕವನ ಸಂಕಲನ ಎಕೋಸ್ ಆಫ್ ಸೋಲ್ಪುಲ್ ಕವನಗಳು (Echoes of Soulful Poems) ಅನ್ನು ಡಿಸೆಂಬರ್ 2020ರಲ್ಲಿ ಶಿಕ್ಷಣ ಸಚಿವರು ಬಿಡುಗಡೆ ಮಾಡಿದ್ದರು. ಅದಾದ ಬಳಿಕ ಎರಡನೇ ಕವನ ಸಂಕಲನ ಪದಗಳ ನಡುವಿನ ಪ್ರಪಂಚ (World Amidst the Words)ವನ್ನು ಡಿಸೆಂಬರ್ 2021 ರಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಬಿಡುಗಡೆ ಮಾಡಿದ್ದಾರೆ.

ಈ ಪುಸ್ತಕವು Amazon, Flipkart, Kindle, Evincepub, Playstore ನಲ್ಲಿ ಲಭ್ಯವಿದೆ. ಇದೀಗ ಅಮನ ಕನ್ನಡದಲ್ಲಿಯೂ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದು, ಈಗಾಗಲೇ ಅಮಲ ಅನೇಕ ದಾಖಲೆಗಳನ್ನು ಬರೆದಿದ್ದಾರೆ.
ದಾಖಲೆಗಳೇನು?: ಭಾರತದ ಕಿರಿಯ ಕವಯಿತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಮಲ, ಇಂಡಿಯಾ ಬುಕ್ ಆಫ್ ರೆಕಾಡ್ಸ್-2021 ಸೇರ್ಪಡೆ ಆಗಿದೆ. ಅಷ್ಟೇ ಅಲ್ಲದೇ ಕಿರಿಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆದಿರುವುದಕ್ಕೆ ಗ್ರ್ಯಾಡ್ ಮಾಸ್ಟರ್ – ಏಷ್ಯಾ ಬುಕ್ ಆಫ್ ರೆಕಾಡ್ಸ್-2021 ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಕೌಟಿಲ್ಯ ವರ್ಷದ ಕಿರಿಯ ಕವಿ ಪ್ರಶಸ್ತಿ – 2021ಯನ್ನು ಸ್ವೀಕರಿಸಿರುವ ಇವರಿಗೆ, ಈ ಪ್ರಶಸ್ತಿ ಗೋವಾದ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ – 2021 ಅತ್ಯಂತ ಸಮೃದ್ಧ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಏಪ್ರಿಲ್‌ನಿಂದ 2020 ರಿಂದ ನವೆಂಬರ್ 2021 ರವರೆಗೆ, ವಿವಿಧ ಥಿಮ್‌ಗಳ ಅಡಿಯಲ್ಲಿ 337 ಕವಿತೆಗಳನ್ನು ಬರೆದಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಪರಿಷತ್ ಸಭಾಪತಿ ಹುದ್ದೆಗೆ ಬಸವರಾಜ ಹೊರಟ್ಟಿ ಅಭ್ಯರ್ಥಿ
ವರ್ಲ್ಡ್ ರೆಕಾರ್ಡ್ ವಿಶ್ವವಿದ್ಯಾಲಯ ಪ್ರವೇಶ 2022ಯಲ್ಲಿ ಕಿರಿಯ ಕವಯಿತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸತತ ವರ್ಷಗಳಲ್ಲಿ ಕವನ ಸಂಕಲನ ಪುಸ್ತಕಗಳನ್ನು ಪ್ರಕಟಿಸಿದ ಕಿರಿಯ ಕವಿಯಿತ್ರಿ ಎಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ 2022ನಲ್ಲಿ ದಾಖಲೆ ಬರೆದಿದ್ದು, ಇಲ್ಲಿಯವರೆಗೂ ಇಂಗ್ಲಿಷ್ ಮತ್ತು ಹಿಂದಿಯಲ್ಲಿ 400 ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕಿಂತ ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆ – ಪಾಕ್ ಸಚಿವರಿಗೆ ಮುಸ್ಲಿಂ ಧರ್ಮಗುರು ತಿರುಗೇಟು

ಲೇಖಕ, ಪತ್ರಕರ್ತ ಶರಣು ಹುಲ್ಲೂರು ಬರೆದ ಪುನೀತ್ ರಾಜ ಕುಮಾರ ಕುರಿತಾದ ಬಯೋಗ್ರಫಿ ‘ನೀನೇ ರಾಜಕುಮಾರ್’ ಪುಸ್ತಕದ 4ನೇ ಆವೃತ್ತಿ ಬಿಡುಗಡೆ ಇಂದು ಬೆಂಗಳೂರಿನಲ್ಲಿ ನಡೆಯಿತು. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈ ಕೃತಿಯನ್ನು ಪಿ.ಆರ್.ಕೆ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು, ಪುಸ್ತಕದೊಳಗಿನ ಹಲವಾರು ವಿಷಯಗಳಿಗೆ ಕಿವಿಯಾದರು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಲೇಖಕ ಶರಣು ಹುಲ್ಲೂರು, ಪ್ರಕಾಶಕ ಜಮೀಲ್ ಸಾವಣ್ಣ ಮತ್ತು ಪಿ.ಆರ್.ಕೆಯ ಸತೀಶ್ ಅವರು ಕೂಡ ಹಾಜರಿದ್ದರು.

15 ಮಾರ್ಚ್ 2022ರಂದು ಮೊದಲ ಬಾರಿಗೆ ಈ ಪುಸ್ತಕವನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಆನಂತರ ಈ ಪುಸ್ತಕವು ಅಮೆಜಾನ್, ಸಪ್ನಾ ಸೇರಿದಂತೆ ಹಲವು ಕಡೆ ಟಾಪ್ ಪಟ್ಟಿಯಲ್ಲಿ ದಾಖಲಾಗಿತ್ತು. ಅಲ್ಲಿಂದ ಈವರೆಗೂ ಸತತ ನಾಲ್ಕು ಮುದ್ರಣಗಳನ್ನು ಕಂಡು ಇನ್ನೂ ದಾಖಲೆ ರೀತಿಯಲ್ಲೇ ಮಾರಾಟವಾಗುತ್ತಿದೆ. ಅಲ್ಲದೇ, ಈ ಪುಸ್ತಕದೊಂದಿಗೆ ಪುನೀತ್ ಅವರ ಸಹಿ ಇರುವಂತಹ ಫೋಟೋ ಮತ್ತು ಬುಕ್ ಮಾರ್ಕ್ ಕೂಡ ಉಚಿತವಾಗಿ ಕೊಡಲಾಗುತ್ತಿದೆ.
ಈ ವರ್ಷದಲ್ಲಿ ಕನ್ನಡದಲ್ಲಿ ಬಂದ ಬಯೋಗ್ರಫಿಯಲ್ಲಿ ಹೆಚ್ಚು ಮಾರಾಟಕಂಡ ಪುಸ್ತಕ ಎನ್ನುವ ಹೆಗ್ಗಳಿಕೆ ‘ನೀನೇ ರಾಜಕುಮಾರ’ ಪುಸ್ತಕದ್ದು. ಪುನೀತ್ ಅವರ ಬಾಲ್ಯದಿಂದ ಅವರ ನಿಧನದವರೆಗೂ ಅವರ ಬದುಕನ್ನು ಲೇಖಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪುನೀತ್ ಅವರ ಸಿನಿಮಾ, ಅವರ ಸಮಾಜಸೇವೆ, ಅವರ ಜೀವನದಲ್ಲಿ ನಡೆದ ಘಟನೆಗಳು ಮತ್ತು ಪುನೀತ್ ಅವರ ಜೀವನದ ಜೊತೆಗೆ ಕನ್ನಡ ಸಿನಿಮಾ ರಂಗದ ಸಂಕ್ಷಿಪ್ತ ಚರಿತ್ರೆ ಕೂಡ ಈ ಪುಸ್ತಕದಲ್ಲಿದೆ. ಅಲ್ಲದೇ, ಅಪರೂಪದ ಫೋಟೋಗಳನ್ನು ನೋಡಬಹುದಾಗಿದೆ.

ಪುನೀತ್ ಅವರ ಸಾಕಷ್ಟು ಸಂದರ್ಶನಗಳನ್ನು ಮಾಡಿದ್ದ ಪತ್ರಕರ್ತ ಶರಣು ಹುಲ್ಲೂರು, ಪುನೀತ್ ಅವರ ಕುರಿತಾಗಿ ಅನೇಕ ಅಪರೂಪದ ಸಂಗತಿಗಳನ್ನು ಈ ಪುಸ್ತಕದಲ್ಲಿ ಬರೆಯುತ್ತಾ ಹೋಗಿದ್ದಾರೆ. ಖ್ಯಾತ ಪತ್ರಕರ್ತರಾದ ಮುರಳಿಧರ ಖಜಾನೆ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರೆ, ಜೋಗಿ ಅವರು ಹಿನ್ನುಡಿ ಬರೆದಿದ್ದಾರೆ.

ಹಿರಿಯ ನಟ ಅಶೋಕ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಆತ್ಮೀಯ ಸ್ನೇಹಿತರು. ರಜನಿ ಬಗ್ಗೆ ಯಾರಾದರೂ ವಸ್ತುನಿಷ್ಠವಾಗಿ ಬರೆಯಬಲ್ಲರು ಅಂದರೆ, ಅದು ಅಶೋಕ್ ಅವರಿಗೆ ಮಾತ್ರ ಸಾಧ್ಯವಾಗುವಂಥದ್ದು. ರಜನಿ ಅವರ ಕಷ್ಟದ ದಿನಗಳಿಂದ ಸೂಪರ್ ಸ್ಟಾರ್ ಆಗಿ ಬೆಳೆದ ಪರಿಯನ್ನು ಕಣ್ಣಾರೆ ಕಂಡವರು. ಕಂಡುಂಡು ಮೆರೆದವರು. ಹಾಗಾಗಿ ಗೆಳೆಯನ ಜೊತೆಗಿನ ಅಪರೂಪದ ಭಾವನೆಗಳನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ ಅಶೋಕ್.

ಇದು ಕೇವಲ ಭಾವನೆಗಳ ಗುಚ್ಛವಲ್ಲವಂತೆ. ಸಾಕಷ್ಟು ಘಟನೆಗಳಿಗೆ ಸಾಕ್ಷಿಯಾಗಿಯೂ ಇರಲಿದೆಯಂತೆ. ಅಲ್ಲದೇ, ಅನೇಕ ಊಹಾಪೋಹಗಳಿಗೆ ಈ ಪುಸ್ತಕ ಉತ್ತರವಾಗಿ ನಿಲ್ಲಬಲ್ಲದು. ಗೊತ್ತಿರದ ರಜನಿಯನ್ನು ಗೆಳೆಯ ಅನ್ನುವ ಆಪ್ತತೆಯ ಮೂಲಕ ಅಶೋಕ್ ಅವರು ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ‘ಗೆಳೆಯ ಶಿವಾಜಿ’ ರಜನಿಕಾಂತ್ ಜೀವನದ ದಿ ಬೆಸ್ಟ್ ಪುಸ್ತಕವೂ ಆಗಿದೆ. ಗಿರಿಜಾ ಲೋಕೇಶ್ ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದರೆ, ಬೆಂಗಳೂರಿನ ಬೀ ಕಲ್ಚರ್ ಪ್ರಕಾಶನ ಈ ಪುಸ್ತಕವನ್ನು ಹೊರ ತಂದಿದೆ. ಇದನ್ನೂ ಓದಿ: `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್

ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಡಿಸೆಂಬರ್ 12ರ ಸಂಜೆ 5.30ಕ್ಕೆ ಈ ಪುಸ್ತಕ ಬಿಡುಗಡೆ ಆಗುತ್ತಿದ್ದು, ಅಗ್ರಹಾರ ಕೃಷ್ಣಮೂರ್ತಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ನಟ ನೀನಾಸಂ ಸತೀಶ್ ಈ ಪುಸ್ತಕವನ್ನು ಬಿಡುಗಡೆ ಮಾಡಿದರೆ, ನಿರ್ದೇಶಕಿ ಸುಮನಾ ಕಿತ್ತೂರ್ ಕೃತಿಯನ್ನು ಪರಿಚಯಿಸುತ್ತಾರೆ. ಸಿ.ಎಸ್.ದ್ವಾರಕನಾಥ್ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ಬೆಂಗಳೂರು: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ(Addanda C Cariappa) ರಚಿಸಿದ ಟಿಪ್ಪು ನಿಜ ಕನಸುಗಳು(Tipu Nija Kanasugalu) ಪುಸ್ತಕ ಮಾರಾಟಕ್ಕೆ ಸಿಟಿ ಸಿವಿಲ್ ಕೋರ್ಟ್(City Civil Court) ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ.
ಟಿಪ್ಪು ನಾಟಕ (Drama) ಪ್ರದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲ. ನಾಟಕ ಪ್ರದರ್ಶನಕ್ಕೆ ತಡೆ ನೀಡಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಪುಸ್ತಕವು ಕೋಮು, ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ. ಪುಸ್ತಕ ಸುಳ್ಳುಗಳಿಂದ ತುಂಬಿದೆ. ಲೇಖಕರು ಹೇಳಿದ ವಿಷಯಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ
ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಅಪಾಯವಿದೆ. ಹೀಗಾಗಿ ಎಲ್ಲಿಯೂ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ಬೆಂಗಳೂರು ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ರಫೀಉಲ್ಲಾ ಅರ್ಜಿಯಲ್ಲಿ ಮನವಿ ಮಾಡಿದ್ದರು.
ಈ ಅರ್ಜಿಯನ್ನು ಪುರಸ್ಕರಿಸಿದ 15ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾ. ಜೆ ಆರ್ ಮೆಂಡೋನ್ಸಾ ಪುಸ್ತಕ ಮಾರಾಟಕ್ಕೆ ತಡೆ ನೀಡಿದ್ದಾರೆ. ಪುಸ್ತಕ ಪ್ರಕಟಿಸಿರುವ ಅಯೋಧ್ಯಾ ಪ್ರಕಾಶನ ಮತ್ತು ಪುಸ್ತಕ ಮುದ್ರಿಸಿರುವ ರಾಷ್ಟ್ರೋತ್ಥಾನ ಮುದ್ರಣಾಲಯಕ್ಕೆ ಪುಸ್ತಕ ಹಂಚಿಕೆ ಮತ್ತು ಮಾರಾಟ ಮಾಡದಂತೆ ಆದೇಶ ನೀಡಲಾಗಿದೆ.

ಬೆಂಗಳೂರು: ಪ್ರಮಥ ಪ್ರಕಾಶನದ (Pramatha Publications) ವತಿಯಿಂದ ಲೇಖಕ ಎಸ್.ಬಿ. ಸುಧಾಕರ ಅವರು ಬರೆದಿರುವ ಪಾಕಿಸ್ತಾನದ (Pakistan) ಮಾಜಿ `ಇಮ್ರಾನ್ ಖಾನ್ ಜೀವಂತ ದಂತ ಕಥೆ’ ಪುಸ್ತಕ ಬಿಡುಗಡೆಗೆ ಹಿಂದೂ ಸಂಘಟನೆಗಳಿಂದ (Hindu Organization) ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕಾರ್ಯಕ್ರಮ ರದ್ದಾಗಿದೆ.
Today @HinduJagrutiOrg & SriRam Sena filed complaint in Jnanabharati Police station, Bengaluru against book launching of “life history of @ImranKhanPTI ”
We request @karkalasunil@CTRavi_BJP @BSBommai @JnanendraAraga @CPBlr @Copsview @DcpComdCentre Kindly Cancel above programme pic.twitter.com/Pm0mRcXcFp
— ????Mohan gowda???????? (@Mohan_HJS) October 27, 2022
ಶತ್ರು ದೇಶ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran khan), ಪುಲ್ವಾಮ (Pulwama Attack) ಬಳಿ ದಾಳಿ ನಡೆಸಿ 40 ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಅಂತಹ ಶತ್ರು ದೇಶದ ಮಾಜಿ ಪ್ರಧಾನಿಯನ್ನ ವೈಭವೀಕರಣ ಮಾಡೋದು ಸಹಿಸಲ್ಲ. ಹೀಗಾಗಿ ಕಾರ್ಯಕ್ರಮಕ್ಕೆ ಕೊಟ್ಟಿರುವ ಅನುಮತಿ ರದ್ದು ಮಾಡಬೇಕೆಂದು ಹಿಂದೂ ಜನ ಜಾಗೃತಿ ಸಮಿತಿ ಆಕ್ರೋಶ ವ್ಯಕ್ತಪಡಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ದೂರಿನ ಬೆನ್ನಲ್ಲೇ ಪೊಲೀಸರು (Police) ಕಾರ್ಯಕ್ರಮಕ್ಕೆ ಅನುಮತಿ ನೀಡದ ಕಾರಣ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದಾಗಿದೆ.

ಏನಿದು ವಿವಾದ?
ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲೇಖಕ ಎಸ್.ಬಿ. ಸುಧಾಕರ ಅವರು ಬರೆದಿರುವ ಈ ಪುಸ್ತಕ ಲೋಕಾರ್ಪಣೆಗೆ ಜಸ್ಟೀಸ್ ಎಚ್.ಎಸ್.ನಾಗಮೋಹನ್ ದಾಸ್ (Nagamohan Das) ಅವರನ್ನ ಆಹ್ವಾನಿಸಲಾಗಿತ್ತು. ಮಾಜಿ ಸಚಿವರಾದ ಎಚ್.ಆರ್.ಲೀಲಾದೇವಿ ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರೆ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಪುಸ್ತಕ ಕುರಿತು ಮಾತನಾಡಬೇಕಿತ್ತು.
ಪುಸ್ತಕ ಬಿಡುಗಡೆಗೆ ವಿರೋಧ: ಪುಸ್ತಕ ಬಿಡುಗಡೆಗೆ ಭಜರಂಗದಳ ಹಾಗೂ ಶ್ರೀರಾಮ ಸೇನೆ ವಿರೋಧ ವ್ಯಕ್ತಪಡಿಸಿತ್ತು. ನಮ್ಮ ದೇಶದಲ್ಲಿ ಸಾಕಷ್ಟು ಪರಿಸರವಾದಿಗಳು, ಜೀವಂತ ದಂತಕತೆಗಳಿವೆ. ಅದರ ಬಗ್ಗೆ ಬರೆಯೋದು ಬಿಟ್ಟು ಪಾಕ್ ದಿವಾಳಿಯನ್ನಾಗಿ ಮಾಡಿದ ಇಮ್ರಾನ್ ಪುಸ್ತಕ ಬರೆಯೋದು ಎಷ್ಟರ ಮಟ್ಟಿಗೆ ಸರಿ? ಇಂತಹ ಗಂಜಿ ಗಿರಾಕಿಗಳಿಗೆ ತಕ್ಕ ಪಾಠ ಕಲಿಸ್ಬೇಕು ಎಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ.

ಬೆಂಗಳೂರಿನ ಬಿ. ಪಿ. ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನ ಪ್ರಕಟಿಸಿರುವ ನಟ ರಮೇಶ್ ಅರವಿಂದ್ (Ramesh Aravind) ಅವರ ‘ಪ್ರೀತಿಯಿಂದ ರಮೇಶ್ ಯಶಸ್ಸಿನ ಸರಳ ಸೂತ್ರಗಳು’ ಕೃತಿಯನ್ನು ಹಿರಿಯ ನಟ ಅನಂತ್ ನಾಗ್ (Ananth Nag) ಬಿಡುಗಡೆ ಮಾಡಿದರು. ಇದನ್ನೂ ಓದಿ:ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ ಭರ್ಜರಿ ಡಿಮ್ಯಾಂಡ್

ಈ ವೇಳೆ ಮಾತನಾಡಿದ ಅವರು, ಬಾಲ್ಯದಲ್ಲಿ ನಮಗೆ ೩೦-೪೦ ಪುಟಗಳ ಸಣ್ಣ ಸಣ್ಣ ಕೈಪಿಡಿಗಳು ಸಿಗುತ್ತಿದ್ದವು. ಮನೆಗೆ ನೆಂಟರು ಬರುವಾಗ ವಿವೇಕಾನಂದ, ಪರಮಹಂಸರ ಕುರಿತ ಕೈಪಿಡಿಗಳನ್ನು ತರುತ್ತಿದ್ದರು. ಆ ಕೈಪಿಡಿಗಳಿಂದ ನಮಗೆ ಧಾರ್ಮಿಕ, ದೇವರ ಬಗ್ಗೆ ಮಾರ್ಗದರ್ಶನ ಸಿಗುತ್ತಿತ್ತು. ರಮೇಶ್ ಅವರ ಕೃತಿ ಕೂಡ ಹೆಚ್ಚು-ಕಡಿಮೆ ಅದೇ ಮಾದರಿಯಲ್ಲಿದೆ. ನೈತಿಕತೆಯ ಬಗ್ಗೆ ಉಪಯುಕ್ತ ತಿಳವಳಿಕೆ ನೀಡುವ ಈ ಪುಸ್ತಕ ಬರೆಯುವ ಮೂಲಕ ರಮೇಶ್ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ರಮೇಶ್ ಅರವಿಂದ ಅವರು, ಘಟನೆ, ಸನ್ನಿವೇಶಗಳನ್ನು ನೋಡಿದಾಗ ಅದನ್ನು ತನ್ನ ಹತ್ತಿರದವರ ಜೊತೆ ತಕ್ಷಣವೇ ಹೇಳಿಕೊಳ್ಳಬೇಕು ಎಂದು ಅನಿಸುವುದು ಮಾನವನ ಸಹಜ ಗುಣ. ಮಾತು ಕರಗತವಾಗಿರದಿದ್ದ ಕಾಲಘಟ್ಟದಲ್ಲಿಯೂ ಸಂಜ್ಞೆಗಳ ಮೂಲಕ ತನ್ನವರಿಗೆ ಮಾಹಿತಿಯನ್ನು ಮನುಷ್ಯ ತಿಳಿಸುತ್ತಿದ್ದ. ನಡೆದ ಘಟನೆಯಲ್ಲಿ ತನ್ನ ಪಾತ್ರವಿರದಿದ್ದರೂ ಹೇಳುವ ಸಂದರ್ಭದಲ್ಲಿ ತನ್ನನ್ನು ಸೇರಿಸಿಕೊಂಡು ವಿವರಿಸುತ್ತಿದ್ದ. ಇಂತಹ ಮಾನವ ಸಹಜ ಗುಣದ ಮುಂದುವರಿದ ಭಾಗವೇ ಬರವಣಿಗೆ. ನಾನು ನನ್ನ ಜೀವನದ ಅನುಭವಗಳನ್ನು ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಈ ಕೃತಿಯಲ್ಲಿ ಬರೆಯಲು ಯತ್ನಿಸಿದ್ದೇನೆ ಎಂದರು.

ಕನ್ನಡಪ್ರಭದ ಪುರವಣಿ ಸಂಪಾದಕ ಗಿರೀಶ್‌ರಾವ್ ಹತ್ವಾರ್ (ಜೋಗಿ) (Jogi) ಮಾತನಾಡಿ, ರಮೇಶ್ ಆವರಿಂದ ಒಂದು ಕೆಟ್ಟ ಮಾತು ಬರಬಹುದು ಎಂದು ಕಳೆದ ೨೫ ವರ್ಷದಿಂದ ಪತ್ರಕರ್ತರಾಗಿ ನಾವು ಕಾಯುತ್ತಿದ್ದೇವೆ.ಆದರೆ ಅವರದ್ದು ಸಕಾರಾತ್ಮಕ ದೃಷ್ಟಿಕೋನ. ಸದಾ ಅಧ್ಯಯನಶೀಲತೆ, ಹುಡುಕಾಟ, ಹೊಸತನದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರ ಈ ಗುಣ ಈ ಕೃತಿಯಲ್ಲಿ ಬಿಂಬಿತವಾಗಿದೆ ಎಂದು ಹೇಳಿದರು. ಝಿ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು (Raghavendra Hunsur) ವೇದಿಕೆಯಲ್ಲಿದ್ದರು. ಜಮೀಲ್ ಸಾವಣ್ಣ (Jameel) ಪ್ರಾಸ್ತಾವಿಕ ಮಾತು ಆಡಿದರು. ರಂಜನೀಕೀರ್ತಿ ನಿರೂಪಣೆ ಮಾಡಿದರು.

ಬೆಂಗಳೂರು: ಸಾವರ್ಕರ್ ಗಣೇಶೋತ್ಸವಕ್ಕೆ ಕರೆಕೊಟ್ಟ ಯುವಾ ಬಿಗ್ರೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯಿಂದ ಈಗ ಸಾವರ್ಕರ್ ಪುಸ್ತಕವನ್ನು ಮನೆ ಮನೆಗೆ ತಲುಪಿಸಲು ಮುಂದಾಗಿದ್ದಾರೆ.
ಕೇವಲ ಆರು ರೂಪಾಯಿಗೆ ಸಾವರ್ಕರ್ ಪುಸ್ತಕವನ್ನು ಮಾರಾಟ ಮಾಡುವುದಾಗಿ ಹೇಳಿದ್ದಾರೆ. ಸಾವರ್ಕರ್ ಯಾತನೆ ಸಾಹಸ ಅವಮಾನಗಳ ಬಗ್ಗೆ ಬರೆದಿರುವ ಪುಸ್ತಕವನ್ನು ಅತಿ ಕಡಿಮೆ ಬೆಲೆಯಲ್ಲಿ ತಲುಪಿಸಲಿದ್ದೇವೆ ಎಂದು ಸೂಲಿಬೆಲೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಗಣೇಶನ ಹಬ್ಬದಂದೇ ಅದ್ಧೂರಿ ಸಾವರ್ಕರ್ ಉತ್ಸವ ಆಚರಣೆಗೆ ಸಿದ್ಧತೆ
ಪೋಸ್ಟ್‌ನಲ್ಲಿ ಏನಿದೆ?
ಸಾವರ್ಕರ್ ಸಾಹಸ, ಯಾತನೆ ಮತ್ತು ಅವಮಾನಗಳ ಕುರಿತ ಪುಟ್ಟ ಕೃತಿಯೊಂದು ಸಿದ್ಧವಾಗಿದೆ. ಈ ಕೃತಿಯನ್ನು ಎಲ್ಲರಿಗೂ ಕೈಗೆಟುಕುವಂತೆ ಆರೇ ರೂಪಾಯಿಗೆ ಕೊಡಬೇಕೆಂದು ನಿಶ್ಚಯಿಸಲಾಗಿದೆ. ಹೀಗಾಗಿ ಈ ಪುಸ್ತಕವನ್ನು ಹಂಚಬೇಕೆಂದು ಬಯಸುವವರು ಈ ಸಂಖ್ಯೆಗೆ ವಾಟ್ಸಪ್ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಡಬಹುದು. ಒಂದು ಪ್ರತಿಗೆ ಆರು ರೂಪಾಯಿ ಇರುವುದರಿಂದ ಕನಿಷ್ಠ ನೂರು ಪ್ರತಿಗಳನ್ನಾದರೂ ತರಿಸಿಕೊಳ್ಳುವವರಿಗೆ ಮೊದಲ ಆದ್ಯತೆ. ಒಂದು-ಎರಡು ಪ್ರತಿಗಳು ಬೇಕಾದವರು ಸ್ಥಳೀಯ ಕಾರ್ಯಕರ್ತರನ್ನು ಸಂಪರ್ಕಿಸಬಹುದು. ಸಂಪರ್ಕಿಸಿ – 72597 44503, 91138 96395