Tag: book fair

  • ಸಾಹಿತ್ಯಾಸಕ್ತರಿಗಾಗಿ 37 ದಿನಗಳ ಕಾಲ ಕನ್ನಡ ಪುಸ್ತಕ ಹಬ್ಬ – ರಾಷ್ಟ್ರೋತ್ಥಾನ ಸಾಹಿತ್ಯದ `ಸಾಹಿತ್ಯ-ಸಂಸ್ಕೃತಿ ಉತ್ಸವ’

    ಸಾಹಿತ್ಯಾಸಕ್ತರಿಗಾಗಿ 37 ದಿನಗಳ ಕಾಲ ಕನ್ನಡ ಪುಸ್ತಕ ಹಬ್ಬ – ರಾಷ್ಟ್ರೋತ್ಥಾನ ಸಾಹಿತ್ಯದ `ಸಾಹಿತ್ಯ-ಸಂಸ್ಕೃತಿ ಉತ್ಸವ’

    ಬೆಂಗಳೂರು: ಸಾಹಿತ್ಯಾಸಕ್ತರಿಗಾಗಿ ರಾಷ್ಟ್ರೋತ್ಥಾನ ಸಾಹಿತ್ಯವು (Rashtrotthana Sahitya) ನ.1ರಿಂದ ಡಿ.7 ರವರೆಗೆ 37 ದಿನಗಳ ಕಾಲ ಕನ್ನಡ ಪುಸ್ತಕ ಹಬ್ಬ (Book Fair) ನಡೆಸಲಿದೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ಥ ಕೆ.ಎಸ್. ನಾರಾಯಣ್ ತಿಳಿಸಿದ್ದಾರೆ.

    ಕನ್ನಡ ರಾಜ್ಯೋತ್ಸವ (Kannada Rajyotsava) ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸುವ 5ನೇ ವರ್ಷದ ಕನ್ನಡ ಪುಸ್ತಕ ಹಬ್ಬದ ಕುರಿತು ಇಂದು ರಾಷ್ಟ್ರೋತ್ಥಾನ ಪರಿಷತ್‌ನ ಕೇಶವ ಶಿಲ್ಪದಲ್ಲಿ ಸುದ್ದಿಗೋಷ್ಠಿ ನಡೆಯಿತು. ಇದನ್ನೂ ಓದಿ: SVR @ 50 – ಕನ್ನಡ ಚಿತ್ರರಂಗದ ಗಣ್ಯರು ಭಾಗಿ

    `ಕನ್ನಡ ಪುಸ್ತಕ ಹಬ್ಬ’ದ 5ನೇ ಆವೃತ್ತಿ ನ.1ರಿಂದ ಡಿ.7ರ ವರೆಗೆ `ಕೇಶವಶಿಲ್ಪ’ ಸಭಾಂಗಣದಲ್ಲಿ ನಡೆಯಲಿದೆ. ನ.1 ಬೆಳಗ್ಗೆ 11 ಗಂಟೆಗೆ ಮೈಸೂರು ರಾಜವಂಶಸ್ಥರು, ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುಸ್ತಕ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಸಾಮರ್ಥ್ಯ ನಿರ್ಮಾಣ ಆಯೋಗದ ಮಾನವಸಂಪನ್ಮೂಲ ಸದಸ್ಯ, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್ ಸ್ಥಾಪಕ ಡಾ. ಆರ್. ಬಾಲಸುಬ್ರಮಣ್ಯಂ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಭಾಗವಹಿಸಲಿದ್ದಾರೆ. ರಾಷ್ಟೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಕನ್ನಡ ಪುಸ್ತಕ ಹಬ್ಬ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 9:30ಕ್ಕೆ ಎನ್.ಆರ್ ಕಾಲೋನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಅವರಣದಿಂದ ರಾಷ್ಟ್ರೋತ್ಥಾನ ಪರಿಷತ್ತಿನವರೆಗೆ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ.

    ಪುಸ್ತಕ ಹಬ್ಬದ ವೈಶಿಷ್ಟ್ಯ
    ಈ ಬಾರಿಯ 37 ದಿನಗಳ ಪುಸ್ತಕ ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಪ್ರತಿದಿನ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಡೆಯುವ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ ಪುಸ್ತಕಗಳು ಮಾತ್ರವಲ್ಲದೇ, ಬೇರೆ ಬೇರೆ ಪ್ರಕಾಶಕರ ಪ್ರಮುಖ ಸಾಹಿತಿ-ಲೇಖಕರ ಪುಸ್ತಕಗಳು 10% ರಿಂದ 50% ವರೆಗಿನ ರಿಯಾಯಿತಿಯಲ್ಲಿ ದೊರೆಯಲಿವೆ.

    ಪ್ರತಿದಿನ ಸಾಯಂಕಾಲ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ, ಯಕ್ಷಗಾನ, ಹಾಸ್ಯ, ಮ್ಯಾಜಿಕ್, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ನಾಟಕ, ಅಷ್ಟಾವಧಾನ, ತಾಳವಾದ್ಯ ಕಛೇರಿ ನಾಡಿನ ನುರಿತ ಹೆಸರಾಂತ ಕಲಾವಿದರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಇದರೊಂದಿಗೆ ಈ ಬಾರಿ ಸುಮಾರು 10 ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.

    ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ
    ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪರಿಚಯ ಮತ್ತು ಲೇಖನ ಸ್ಪರ್ಧೆಗಳನ್ನು ಯೋಜಿಸಲಾಗಿದೆ.

    ಮಕ್ಕಳಿಗಾಗಿ ಮಂಕುತಿಮ್ಮನ ಕಗ್ಗ ಹೇಳುವ ಸ್ಪರ್ಧೆ, ಕನ್ನಡ ಗದ್ಯ ಮತ್ತು ಪದ್ಯಭಾಗಗಳನ್ನು ತಪ್ಪಿಲ್ಲದೆ ಓದುವ ಸ್ಪರ್ಧೆ ಹಾಗೂ ಆಶುಭಾಷಣ ಸ್ಪರ್ಧೆಗಳು ನಡೆಯಲಿವೆ. ಇವುಗಳಿಗೆ ಉಚಿತ ಪ್ರವೇಶ ಇರುತ್ತದೆ.

    ವರ್ಷದಿಂದ ವರ್ಷಕ್ಕೆ ಕನ್ನಡ ಪುಸ್ತಕಕ್ಕೆ ಹಬ್ಬದಲ್ಲಿ ಭಾಗವಹಿಸುವವರು ಹಾಗೂ ಪುಸ್ತಕ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು ಪುಸ್ತಕ ಹಬ್ಬಕ್ಕೆ ಬಂದು ಪುಸ್ತಕ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ಉಸ್ತುವಾರಿ ಮತ್ತು ಸಂವಿತ್ ರೀಸರ್ಚ್ ಫೌಂಡೇಶನ್ ನಿರ್ದೇಶಕ ಸುಬ್ರಹ್ಮಣ್ಯ ಬಿಎ ತಿಳಿಸಿದ್ದಾರೆ.

    ಕನ್ನಡ ಪುಸ್ತಕ ಹಬ್ಬದಲ್ಲಿ ಬೇರೆ ಬೇರೆ ಪ್ರಕಾಶನದ ಪುಸ್ತಕಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ. ಸಾಹಿತ್ಯದ ಜೊತೆಗೆ ಪುರಾಣ, ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳೂ ಮಾರಾಟಕ್ಕಿರುತ್ತವೆ. ಹಿಂದಿನ ಬಾರಿ ಪುಸ್ತಕ ಹಬ್ಬಗಳಲ್ಲಿ ಕುವೆಂಪು, ತೇಜಸ್ವಿ, ಕೆ.ಎನ್. ಗಣೇಶಯ್ಯ ಮುಂತಾದವರ ಪುಸ್ತಕಗಳಿಗೆ ಹೆಚ್ಚು ಬೇಡಿಕೆ ಇತ್ತು ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ವಿಘ್ನೇಶ್ವರ ಭಟ್ ಹೇಳಿದ್ದಾರೆ.

    ಅನಕೃ ಪ್ರಶಸ್ತಿ ಪ್ರದಾನ
    ಈ ಬಾರಿ ನಡೆಯುವ ಕನ್ನಡ ಪುಸ್ತಕ ಹಬ್ಬದಲ್ಲಿ ಅನಕೃ ಪ್ರತಿಷ್ಥಾನ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ಇರಲಿದೆ. 2024ರ ಸಾಲಿನ ಅನಕೃ ಪ್ರಶಸ್ತಿಗೆ ಎಲ್‌ವಿ ಶಾಂತಕುಮಾರಿ ಭಾಜನರಾದರೆ, 2025ರ ಸಾಲಿನ ಪ್ರಶಸ್ತಿಯನ್ನು ಶತಾವಧಾನಿ ಆರ್.ಗಣೇಶ್ ಸ್ವೀಕರಿಸಲಿದ್ದಾರೆ.

  • ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ ವೀಕ್ಷಿಸಿದ ರಾಜ್ಯಪಾಲರು

    ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ ವೀಕ್ಷಿಸಿದ ರಾಜ್ಯಪಾಲರು

    ಬೆಂಗಳೂರು: ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ (Thawarchand Gehlot) ಅವರು ಭಾನುವಾರ ವಿಧಾನಸೌಧ (Vidhana Soudha) ಆವರಣದಲ್ಲಿ ವಿಧಾನಸಭೆ ಸಚಿವಾಲಯ ಆಯೋಜಿಸಿದ್ದ ಪುಸ್ತಕ ಮೇಳಕ್ಕೆ (Book Fair) ಭೇಟಿ ನೀಡಿದರು. ತಮ್ಮ ಭೇಟಿಯ ಸಮಯದಲ್ಲಿ, ರಾಜ್ಯಪಾಲರು ವಿವಿಧ ಪ್ರಕಾಶನ ಸಂಸ್ಥೆಗಳ ಮಳಿಗೆಗಳನ್ನು ವೀಕ್ಷಿಸಿದರು ಮತ್ತು ಮೇಳದಲ್ಲಿ ಭಾಗವಹಿಸಿದವರೊಂದಿಗೆ ಸಂವಾದ ನಡೆಸಿದರು.

    ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷ ಬಸವರಾಜ್ ಎಸ್.ಹೊರಟ್ಟಿ ಅವರು ರಾಜ್ಯಪಾಲರೊಂದಿಗೆ ಓದು ಮತ್ತು ಜ್ಞಾನ ಪ್ರಸರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಈ ಮೇಳದ ಉದ್ದೇಶದ ಬಗ್ಗೆ ವಿವರಿಸಿದರು. ಇದನ್ನೂ ಓದಿ: ಡಿಕೆಶಿ ಪರ ಬ್ಯಾಟ್ ಬೀಸಿದ ರಮ್ಯಾ

    ಪುಸ್ತಕ ಮೇಳ ವೀಕ್ಷಣೆಗೆ ಬಂದಿದ್ದ ಕೆಲ ಮಕ್ಕಳನ್ನು ರಾಜ್ಯಪಾಲರು ಕನ್ನಡದಲ್ಲಿ ಮಾತನಾಡಿಸಿದ್ದು, ನೆರೆದಿದ್ದವರ ಗಮನ ಸೆಳೆಯಿತು. ಇದನ್ನೂ ಓದಿ: ಡಿಕೆಶಿ ಸಿಎಂ ಆಗೋದು ಸೆಟಲ್ಡ್ ಮ್ಯಾಟರ್, ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮೊಯ್ಲಿ

  • ಫೆ.27ರಿಂದ ವಿಧಾನಸೌಧದ ಆವರಣದಲ್ಲಿ 4 ದಿನಗಳ ಪುಸ್ತಕ ಮೇಳ: ಯು.ಟಿ.ಖಾದರ್

    ಫೆ.27ರಿಂದ ವಿಧಾನಸೌಧದ ಆವರಣದಲ್ಲಿ 4 ದಿನಗಳ ಪುಸ್ತಕ ಮೇಳ: ಯು.ಟಿ.ಖಾದರ್

    ಬೆಂಗಳೂರು: ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನಸೌಧದ (Vidhan Soudha) ಆವರಣದಲ್ಲಿ 4 ದಿನಗಳ ಪುಸ್ತಕ ಮೇಳ ನಡೆಯುತ್ತಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ (U T Khader) ತಿಳಿಸಿದರು.

    ಪುಸ್ತಕಮೇಳದ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದರು. ಫೆ.27, 28, ಮಾ.01 ಮತ್ತು 02 ರವರೆಗೆ ವಿಧಾನಸೌಧದಲ್ಲಿ ಪುಸ್ತಕಮೇಳ ನಡೆಯಲಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ. ಮಾ.2 ರಂದು ಸಾಧುಕೋಕಿಲ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿಗಳು ನಡೆಯಲಿದೆ ಎಂದರು. ಇದನ್ನೂ ಓದಿ: ದಲಿತ ಸಿಎಂ ಆಗಲೇಬೇಕು – ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹ

    ಲೇಖಕರು ಪುಸ್ತಕ ಬಿಡುಗಡೆ ಮಾಡುತ್ತಾರೆ. ಪುಸ್ತಕ ಸ್ಟಾಲ್‌ಗಳನ್ನ, ಹೊಸ ಪುಸ್ತಕಗಳನ್ನು ಬೇರೆಯವರಿಗೆ ಕೊಡುತ್ತೇವೆ. ಸರ್ಕಾರದ ಎಲ್ಲಾ ಭಾಷಾ ಅಕಾಡೆಮಿಗಳಿಗೆ ಒಂದೊಂದು ಸ್ಟಾಲ್ ಮೀಸಲು ಕೊಡುತ್ತಿದ್ದೇವೆ. ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ. 15 ವಿಷಯಗಳಲ್ಲಿ ಸಂವಾದ ಕಾರ್ಯಕ್ರಮ ಇರಲಿವೆ. ನಿತ್ಯ 4 ವಿಷಯಗಳ ಮೇಲೆ ಸಂವಾದಗಳು ನಡೆಯಲಿದೆ. ಸಂವಿಧಾನ, ಕ್ರೀಡೆ, ಕನ್ನಡ ಸಾಹಿತ್ಯ, ಮಕ್ಕಳ ಸಾಹಿತ್ಯ, ಚಲನಚಿತ್ರ ಸೇರಿ ಹಲವು ವಿಷಯಗಳ ಬಗ್ಗೆ ಸಂವಾದ ನಡೆಯಲಿದೆ. ವಿವಿಧ ಶಾಲೆಗಳಿಂದ ಬರುವ ಮಕ್ಕಳಿಗೆ ಅಸೆಂಬ್ಲಿ ಹಾಲ್ ನೋಡಲು ಅವಕಾಶ ಕೊಡುತ್ತಿದ್ದೇವೆ. ಶಾಸಕರ ಕ್ಷೇತ್ರಗಳ ಹಾಗೂ ಶಾಲಾ ಗ್ರಂಥಾಲಯಗಳಿಗೆ ಬುಕ್ ಖರೀದಿಗೆ 2 ಲಕ್ಷ ರೂ. ಹಣ ಕೊಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಪಟ್ಟಭದ್ರರು ಬಹಿರಂಗವಾಗಿ ಬಸವಣ್ಣನನ್ನು ವಿರೋಧಿಸುವುದು ಅಸಾಧ್ಯ, ಅದಕ್ಕೆ ಆಂತರಿಕವಾಗಿ ವಿರೋಧಿಸುತ್ತಿದ್ದಾರೆ – ಸಿಎಂ

    5 ಜನರಿಗೆ ಪ್ರತಿಭಾ ಪುರಸ್ಕಾರ ಮಾಡುತ್ತೇವೆ. 5 ಜನರ ಆಯ್ಕೆಗೆ ಸಮಿತಿ ಮಾಡಲಿದೆ. ಮಾ.2 ರವರೆಗೆ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ಮಾ.3 ರಂದು ಶಾಸಕರಿಗೆ ಪುಸ್ತಕ ಮೇಳ ಇರಲಿದೆ. ಪುಸ್ತಕ ಮೇಳಕ್ಕೆ ರಾಜ್ಯಪಾಲರಿಗೂ ಆಹ್ವಾನ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.

  • ಪಿಕ್‍ಪಾಕೆಟ್ ಪ್ರಕರಣದಲ್ಲಿ ನಟಿ ಅರೆಸ್ಟ್

    ಪಿಕ್‍ಪಾಕೆಟ್ ಪ್ರಕರಣದಲ್ಲಿ ನಟಿ ಅರೆಸ್ಟ್

    ಕೋಲ್ಕತ್ತಾ: ಬೆಂಗಾಳಿ, ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ರೂಪಾ ದತ್ತಾ, ಪಿಕ್‍ಪಾಕೆಟ್ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.

    ನಡೆದಿದ್ದೇನು?: ಕೋಲ್ಕತ್ತಾದಲ್ಲಿ ಅಂತಾರಾಷ್ಟ್ರೀಯ ಮೇಳದಲ್ಲಿ ಭಾಗವಹಿಸಿದ್ದರು. ಈ ವೇಳೆ ರೂಪಾ ದತ್ತಾ, ಪರ್ಸ್‍ವೊಂದನ್ನು ಕಸದ ಬುಟ್ಟಿಗೆ ಎಸೆಯುತ್ತಿರುವುದನ್ನು ಪೊಲೀಸರೊಬ್ಬರು ನೋಡಿದ ನಂತರ ಶನಿವಾರ ಅವರನ್ನು ಬಂಧಿಸಲಾಗಿದೆ ಎಂದು ಬಿದಾನ್ ನಗರ್ ಉತ್ತರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಬಂಧನದ ನಂತರ ವಿಚಾರಣೆ ವೇಳೆಯಲ್ಲಿ ಆಕೆ ನೀಡಿದ್ದ ಉತ್ತರಗಳು ಸಮರ್ಪಕವಾಗಿರಲಿಲ್ಲ. ಶೋಧನೆ ವೇಳೆ ಆಕೆಯ ಬ್ಯಾಗ್‍ನಿಂದ ಅನೇಕ ಪರ್ಸ್‍ಗಳು ಮತ್ತು 75 ಸಾವಿರ ರೂ. ನಗದು ಪತ್ತೆಯಾಗಿದೆ. ಆದರೆ ಈ ಹಣದ ಮೂಲದ ಬಗ್ಗೆ ರೂಪಾ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಗಮನ ಬೇರೆಡೆ ಸೆಳೆದು ಕಳ್ಳತನ ಆರೋಪದ ಮೇರೆಗೆ ನಟಿಯನ್ನು ಬಂಧಿಸಲಾಗಿದೆ. ಈ ಅಪರಾಧದಲ್ಲಿ ಹೆಚ್ಚಿನ ಜನರು ತೊಡಗಿಸಿಕೊಂಡರಬಹುದೇ ಎಂಬುದನ್ನು ತಿಳಿಯಲು ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್

    ಪ್ರಸ್ತುತ ರೂಪಾ ದತ್ತಾಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸರು ವಶಪಡಿಸಿಕೊಂಡ ಬ್ಯಾಗ್ ತನ್ನದಲ್ಲ ಎಂದಿರುವ ನಟಿ, ಅದು ಡ‌ಸ್ಟ್‌ಬಿನ್‌ನಿಂದ  ಎತ್ತಿಕೊಂಡಿರುವ ಚೀಲ ಎಂದು ಹೇಳಿದ್ಧಾರೆ. ಇದನ್ನೂ ಓದಿ: ಭಾವುಕರಾಗಿ ಕಾರ್ಯಕ್ರಮ ಶುರು ಮಾಡಿದ ಅನುಶ್ರೀ

    ಈ ಹಿಂದೆ ಅನುರಾಗ್ ಕಶ್ಯಪ್ ತಮಗೆ ಅನುಚಿತ ಸಂದೇಶ ಕಳುಹಿಸುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದರು. ಕೆಲ ಕಾಲದ ನಂತರ ಅದು ನಿರ್ದೇಶಕ ಅನುರಾಗ್ ಕಶ್ಯಪ್ ಅಲ್ಲ, ಬೇರೆ ಅನುರಾಗ್ ಎನ್ನುವುದು ತಿಳಿದುಬಂದಿತ್ತು. ಇದೀಗ ಪಿಕ್ ಪಾಕೆಟ್ ಪ್ರಕರಣದಲ್ಲಿ ಪೊಲೀಸರ ಅಥಿತಿಯಾಗಿದ್ದಾರೆ.