Tag: bony kapoor

  • ಅಮೆರಿಕಾ ನಟಿಯ ಡ್ರೆಸ್ ಕಾಪಿ ಮಾಡಿ ಟ್ರೋಲ್ ಆದ ಜಾಹ್ನವಿ ಕಪೂರ್

    ಅಮೆರಿಕಾ ನಟಿಯ ಡ್ರೆಸ್ ಕಾಪಿ ಮಾಡಿ ಟ್ರೋಲ್ ಆದ ಜಾಹ್ನವಿ ಕಪೂರ್

    ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಈಗ ಸಾಮಾಜಿಕ ಜಾಲತಾಣದಲ್ಲಿ ಬಟ್ಟೆಯ ವಿಚಾರದಲ್ಲಿ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.

    ಬ್ಯೂಟಿ ಜತೆ ಪ್ರತಿಭೆಯಿರುವ ಬಿಂದಾಸ್ ಬೆಡಗಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಸಿನಿಮಾಗಿಂತ, ಟ್ರೋಲ್ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಜಾಹ್ನವಿ ನಟಿಸಿರುವ ಗುಡ್ ಲಕ್ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಗುಡ್ ಲಕ್ ಪ್ರಚಾರದಲ್ಲಿ ಶ್ರೀದೇವಿ ಪುತ್ರಿ ಭಾಗಿಯಾಗುದ್ದರು. ಅಮೆರಿಕ ನಟಿ ಅನ್ನೆಹ್ಯಾಥ್ವೇ ಅವರು ಧರಿಸಿದ ರೀತಿಯ ಬಟ್ಟೆಯನ್ನೇ ಜಾಹ್ನವಿ ಕಪೂರ್ ಧರಿಸಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ಐಶು ನಯಾ ಫೋಟೋಶೂಟ್: ಅಮ್ಮು ನ್ಯೂ ಲುಕ್‌ಗೆ ಫ್ಯಾನ್ಸ್ ಫಿದಾ

    ಅಮೆರಿಕ ನಟಿ ಅನ್ನೆಹ್ಯಾಥ್ವೇ ಲುಕ್ ಈಗಾಗಲೇ ನೆಟ್ಟಿಗರ ಗಮನ ಸೆಳೆದಿತ್ತು. ಅದೇ ರೀತಿಯ ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆ ಧರಿಸಿ ಜಾಹ್ನವಿ ಬಂದಿದ್ದರು. ಇದೀಗ ಜಾಹ್ನವಿ ಕಾಪಿ ಮಾಡಿರುವ ಲುಕ್ಕಿಗೆ ನೆಟ್ಟಿಗರು ಫುಲ್ ಟ್ರೋಲ್ ಮಾಡ್ತಿದ್ದಾರೆ.

    Live Tv

  • ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ಬಾಲಿವುಡ್ ಗ್ಲಾಮರ್ ಗೊಂಬೆ ಜಾನ್ವಿ ಕಪೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದ ನಟಿ ಜಾನ್ವಿ, ಈಗ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಈ ಡ್ಯಾನ್ಸ್ ನೋಡಿರೋ ಅಭಿಮಾನಿಗಳು, ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್‌ಗೆ ಹೋಲಿಕೆ ಮಾಡಿ ಹೊಗಳಿದ್ದಾರೆ.

    `ದಡಕ್’ ಚಿತ್ರದ ಮೂಲಕ ಬಿಟೌನ್‌ಗೆ ಲಗ್ಗೆಯಿಟ್ಟ ನಟಿ ಜಾನ್ವಿ ಕಪೂರ್, ಮೊದಲ ಚಿತ್ರದಲ್ಲೇ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದ್ರು. ಇನ್ನು ಖ್ಯಾತ ನಟಿ ಶ್ರೀದೇವಿ ಮಗಳು ಎಂಬ ಕಾರಣಕ್ಕೆ ಅನೇಕರಿಗೆ ಜಾನ್ವಿ ಅಚ್ಚುಮೆಚ್ಚು. ಶ್ರೀದೇವಿ ನಿಧನದ ನಂತರ ಜಾನ್ವಿ ಅವರಲ್ಲಿ ಶ್ರೀದೇವಿ ಅವರನ್ನು ಕಾಣುತ್ತಿದ್ದಾರೆ. ಆದರೆ ಜಾನ್ವಿ ನಟನೆಯಲ್ಲಿ ಇನ್ನೂ ಪಳಗಬೇಕಾಗಿದೆ. ಆದರೆ ಡ್ಯಾನ್ಸ್‌ನಲ್ಲಿ ಪಳಗಿದ್ದಾರೆ ಉತ್ತಮವಾಗಿ ಡ್ಯಾನ್ಸ್ ಮಾಡುತ್ತಾರೆ. ಇದೀಗ ಜಾನ್ವಿ ಹಂಚಿಕೊಂಡಿರೋ ಡ್ಯಾನ್ಸ್ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ಬಾಲಿವುಡ್ ನಟಿ ರೇಖಾ ಅವರು ಹೆಜ್ಜೆ ಹಾಕಿದ್ದ `ಆಂಕೋ ಕೋ ಮಸ್ತಿ’ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಏ.29 ಅಂತರಾಷ್ಟ್ರೀಯ ನೃತ್ಯ ದಿನಾಚರಣೆ ಅಂಗವಾಗಿ ಶೇರ್ ಮಾಡಬೇಕಿದ್ದ ವಿಡಿಯೋ ಇದೀಗ ಪೋಸ್ಟ್ ಮಾಡಿದ್ದಾರೆ. ಜಾನ್ವಿ ಟ್ಯಾಲೆಂಟ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜಾನ್ವಿ ಡ್ಯಾನ್ಸ್‌ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್‌ಗೆ ಹೋಲಿಕೆ ಮಾಡಿ ಹೊಗಳಿದ್ದಾರೆ.

    ಎರಡು ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಪ್ರಯತ್ನಿಸಿದ್ದ ಬೈರಕೀ ಭಾವ. ಎಲ್ಲರಿಗೂ ಅಂತರಾಷ್ಟ್ರೀಯ ನೃತ್ಯ ದಿನಾಚರಣೆಯ ಶುಭಾಶಯ. ಎರಡು ದಿನ ತಡವಾಗಿ ಹೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. `ಆಂಕೋ ಕೋ ಮಸ್ತಿ’ ಹಾಡಿಗೆ ಕುಳಿತೇ ಡ್ಯಾನ್ಸ್ ಮಾಡಿದ್ದಾರೆ. ಜಾನು ಡ್ಯಾನ್ಸ್ ನೋಡಿ ಪಡ್ಡೆ ಹುಡುಗರು ದಿಲ್‌ಖುಷ್ ಆಗಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುವಾಗಲೇ ಸೂಪರ್ ಸ್ಟಾರ್: ನಟ ಶಿವಣ್ಣ ಭಾವನ್ಮಾತಕ ಮಾತು

     

    View this post on Instagram

     

    A post shared by Janhvi Kapoor (@janhvikapoor)

    ಇನ್ನು ಸಿನಿಮಾಗಳ ವಿಚಾರಕ್ಕೆ ಬರೋದಾದರೆ ನಟಿ ಜಾನ್ವಿ ಅಕೌಂಟ್‌ನಲ್ಲಿ `ಗುಡ್ ಲಕ್ ಜೆರ್ರಿ’, `ಮಿಲಿ’, `ಬವಾಲ್’, ಮತ್ತು `ಮಿಸ್ಟರ್ ಆ್ಯಂಡ್ ಮಿಸ್ಟರೆಸ್ ಮಾಹಿ’ ಚಿತ್ರಗಳು ಕೈಯಲ್ಲಿವೆ. ಜಾನ್ವಿ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.