Tag: Bonus

  • ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆ್ಯಪಲ್

    ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆ್ಯಪಲ್

    ನವದೆಹಲಿ: ಆ್ಯಪಲ್ ಕಂಪನಿಯು (Apple Company) ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ತನ್ನ ಕಂಪನಿಯ ಕಾರ್ಪೊರೇಟ್ ವಿಭಾಗದ ಉದ್ಯೋಗಿಗಳ ಬೋನಸ್‌ಗಳನ್ನು (Bonus) ವಿಳಂಬಗೊಳಿಸಲು ನಿರ್ಧರಿಸಿದೆ ಹಾಗೂ ಹಲವು ಉದ್ಯೋಗಿಗಳ ಬೋನಸ್ ಕೂಡಾ ಕಡಿಮೆಗೊಳಿಸುತ್ತದೆ ಎಂದು ವರದಿಗಳು ತಿಳಿಸಿವೆ.

    ಈ ವರದಿಗಳು ನಿಜವಾದಲ್ಲಿ ಉದ್ಯೋಗಿಗಳ ಒಂದು ವರ್ಗಕ್ಕೆ ಮುಂದಿನ ತಿಂಗಳು ಬಡ್ತಿ (Promtion) ದೊರೆಯುವುದಿಲ್ಲ. ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಕಂಪನಿಯು ವರ್ಷಕ್ಕೆ ಎರಡು ಬಾರಿ (ಎಪ್ರಿಲ್ ಮತ್ತು ಅಕ್ಟೋಬರ್) ತನ್ನ ಉದ್ಯೋಗಿಗಳಿಗೆ ಬೋನಸ್ ನೀಡುತ್ತದೆ. ಬಡ್ತಿ ಹಾಗು ಬೋನಸ್ ಹೊರತಾಗಿ ಆ್ಯಪಲ್ ಕಂಪನಿಯು ನೇಮಕಾತಿಯನ್ನು (Recruitment) ಸ್ಥಗಿತಗೊಳಿಸುವ ನಿರೀಕ್ಷೆಯಿದೆ. ಇದಕ್ಕೂ ಮೊದಲು 2020ರಲ್ಲಿ ಗೂಗಲ್, ಮೆಟಾ ಹಾಗು ಇನ್ನಿತರೆ ಟೆಕ್ ಕಂಪನಿಗಳು ಲೆಕ್ಕಕ್ಕಿಂತ ಜಾಸ್ತಿ ಉದ್ಯೋಗಿಗಳ ನೇಮಕಾತಿಯನ್ನು ಮಾಡಿಕೊಂಡು ಪ್ರಸ್ತುತ ಸಾವಿರಾರು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿದೆ. ಇದನ್ನೂ ಓದಿ: Infosys ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ 

    ಆ್ಯಪಲ್ ಕಂಪನಿಯ ಹೆಚ್‌ಆರ್ ತಂಡವು ಉದ್ಯೋಗಿಗಳ ಹಾಜರಾತಿಯನ್ನು ಸೂಕ್ಷ್ಮರೀತಿಯಲ್ಲಿ ಗಮನಿಸುತ್ತಿದೆ. ಈ ಕಂಪನಿಯು ಮನೆಯಿಂದ ಕೆಲಸ ಮಾಡುವುದನ್ನು ಕೊನೆಗೊಳಿಸಿ ಉದ್ಯೋಗಿಗಳು ವಾರಕ್ಕೆ ಮೂರು ಸಲ ಕಚೇರಿಗೆ ಬಂದು ಕೆಲಸ ಮಾಡುವಂತೆ ಹೇಳಿದೆ. ಇದನ್ನೂ ಓದಿ: ಕೋವಿಡ್‌ ಬಳಿಕ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಬೆಲೆ ಭಾರೀ ಇಳಿಕೆ

    ಕಂಪನಿಯು ಕಳೆದ ಎರಡು ವರ್ಷಗಳಿಂದ ಇತರೆ ಕಂಪನಿಗಳ ತರಹ ಅಧಿಕ ನೇಮಕಾತಿಯನ್ನು ಮಾಡಿಕೊಳ್ಳದೆ ಎಚ್ಚರಿಕೆಯಿಂದ ನೇಮಕ ಮಾಡಿಕೊಳ್ಳುವ ಮೂಲಕ ಸಾಮೂಹಿಕ ವಜಾಗೊಳಿಸುವಿಕೆಯನ್ನು (Mass Layoff) ತಪ್ಪಿಸಿದೆ. ಈ ಕಂಪನಿಯು 2020 ಮತ್ತು 2021ರ ನಡುವೆ ಕೇವಲ 7,000 ಸಾವಿರ ಉದ್ಯೋಗಿಗಳನ್ನು ಮಾತ್ರ ನೇಮಕ ಮಾಡಿಕೊಂಡಿದೆ. ವರದಿಗಳ ಪ್ರಕಾರ ಅದೇ ಕಂಪನಿಯು 2022ನೇ ವರ್ಷದ ಸೆಪ್ಟೆಂಬರ್ ತಿಂಗಳ ಒಳಗಾಗಿ 1,64,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಇದು 2021ನೇ ವರ್ಷದ ನೇಮಕಾತಿಯಿಂದ ಶೇ.6.5ರಷ್ಟು ಹೆಚ್ಚಳವಾಗಿದೆ. ಇದನ್ನೂ ಓದಿ: ಮತ್ತೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಮೆಟಾ 

    ಆ್ಯಪಲ್ ಕಂಪನಿಯ ಷೇರುದಾರರ ಸಭೆಯ ಸಂದರ್ಭದಲ್ಲಿ ಕಂಪನಿಯ ಕಾರ್ಯ ನಿರ್ವಾಹಕ (CEO) ಟಿಮ್ ಕುಕ್ (Tim Cook) ಅವರು, ಹಣದ ವಿಷಯದಲ್ಲಿ ಕಂಪನಿಯು ವಿಶೇಷವಾದ ಜಾಗರೂಕತೆಯನ್ನು ಮುಂದುವರೆಸಿದೆ. ನಾವು ಹಣಖರ್ಚು ವಿಷಯದಲ್ಲಿ ಬಹಳ ವಿವೇಕವಾಗಿ ಹಾಗೂ ಚಿಂತನಾಶೀಲರಾಗಿದ್ದೇವೆ ಮತ್ತು ನೇಮಕಾತಿ ಮಾಡಿಕೊಳ್ಳುವುದರಲ್ಲಿ ಉದ್ದೇಶಪೂರ್ವಕವಾಗಿ ಮುಂದುವರೆಯುತ್ತೇವೆ ಎಂದು ಷೇರುದಾರರಿಗೆ ಮಾಹಿತಿಯನ್ನು ತಿಳಿಸಿದರು. ಇದನ್ನೂ ಓದಿ: ಚೀನಾದಿಂದ ಬೆಂಗಳೂರಿಗೆ ಶಿಫ್ಟ್ – ಸ್ಥಾಪನೆಯಾಗಲಿದೆ ಐಫೋನ್ ತಯಾರಿಕಾ ಘಟಕ, 1 ಲಕ್ಷ ಮಂದಿಗೆ ಉದ್ಯೋಗ

  • ದಸರಾ ಹಬ್ಬಕ್ಕೆ ಬೋನಸ್ ಕೊಡಲಿಲ್ಲವೆಂದು ಗ್ರಾಮ ಪಂಚಾಯತ್ ಕಚೇರಿಗೆ ಚಪ್ಪಲಿ ಹಾರ ಹಾಕಿದ ನೌಕರ

    ದಸರಾ ಹಬ್ಬಕ್ಕೆ ಬೋನಸ್ ಕೊಡಲಿಲ್ಲವೆಂದು ಗ್ರಾಮ ಪಂಚಾಯತ್ ಕಚೇರಿಗೆ ಚಪ್ಪಲಿ ಹಾರ ಹಾಕಿದ ನೌಕರ

    ಚಿಕ್ಕಬಳ್ಳಾಪುರ: ದಸರಾ (Dasara) ಹಬ್ಬಕ್ಕೆ, ಬಟ್ಟೆ ಕೊಟ್ಟಿಲ್ಲ, ಬೋನಸ್ (Bonus)  ನೀಡಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಆವತಿ ಗ್ರಾಮ ಪಂಚಾಯತ್ (Gram Panchayat) ನೌಕರ (Employee) ಪಂಚಾಯತ್ ಕಟ್ಟಡಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ನಡೆದಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಆವತಿ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಚಪ್ಪಲಿ ಹಾರ ಹಾಕುವ ಮೂಲಕ ಆಕ್ರೋಶವನ್ನು ಹೊರಹಾಕಿರುವ ಸ್ವಚ್ಛತಾ ಕೆಲಸಗಾರ ಕೃಷ್ಣಪ್ಪ ವಿರುದ್ಧ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಪಂಚಾಯತ್‍ಗೆ ಭೇಟಿ ನೀಡಿದ ದೇವನಹಳ್ಳಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ಸ್ವಚ್ಛತಾಗಾರರ ಸಭೆ ಕರೆದು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಮಗಳು ಅನ್ಯ ಜಾತಿ ಯುವಕನ ಜೊತೆ ಪರಾರಿ – ತಂದೆ, ತಾಯಿ, ತಮ್ಮ ಆತ್ಮಹತ್ಯೆ

    ಈ ವೇಳೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪಿಡಿಒ ಶಿವರಾಜ್ ಆವತಿ ಗ್ರಾಮ ಪಂಚಾಯತ್‍ಗೆ ಬಂದಾಗಿನಿಂದ ಪಂಚಾಯತ್‍ನಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಚುನಾಯಿತ ಸದಸ್ಯರ ಗಮನಕ್ಕೆ ಬಾರದೆ ಸಭೆಗಳನ್ನು ಕರೆದು ಚುನಾಯಿತ ಸದಸ್ಯರಿಗೆ ಗೊಂದಲ ಸೃಷ್ಟಿಸುವಂತಹ ಕೆಲಸಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಗದ್ದೆಯಲ್ಲಿ ಅನುಮಾನಾಸ್ಪದವಾಗಿ ಯುವತಿ ಶವ ಪತ್ತೆ- ಇದು ರೇಪ್ & ಮರ್ಡರ್ ಅಂತ ಕುಟುಂಬ ಆರೋಪ

    Live Tv
    [brid partner=56869869 player=32851 video=960834 autoplay=true]

  • ಸ್ಕರ್ಟ್ ಧರಿಸಿ ಕೆಲಸಕ್ಕೆ ಬಂದ್ರೆ ಸಿಗತ್ತೆ ಎಕ್ಸ್​ಟ್ರಾ ಬೋನಸ್

    ಸ್ಕರ್ಟ್ ಧರಿಸಿ ಕೆಲಸಕ್ಕೆ ಬಂದ್ರೆ ಸಿಗತ್ತೆ ಎಕ್ಸ್​ಟ್ರಾ ಬೋನಸ್

    ಮಾಸ್ಕೋ: ಸಾಮಾನ್ಯವಾಗಿ ಹಲವು ಕಂಪನಿಗಳನ್ನು ಮಹಿಳಾ ಸಿಬ್ಬಂದಿ ಫಾರ್ಮಲ್ ಅಥವಾ ಸೆಮಿ ಫಾರ್ಮಲ್ ಉಡುಪುಗಳನ್ನು ಧರಿಸಬೇಕು ಎಂಬ ನಿಯಮವಿರುತ್ತೆ. ಆದರೆ ರಷ್ಯಾದ ಕಂಪನಿಯೊಂದು ಸ್ಕರ್ಟ್ ಅಥವಾ ಶಾರ್ಟ್ ಡ್ರೆಸ್ ಧರಿಸಿ ಕೆಲಸಕ್ಕೆ ಬಂದರೆ ಹೆಚ್ಚುವರಿ ಬೋನಸ್ ನೋಡುತ್ತೇವೆ ಎಂದು ಘೋಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ.

    ಹೌದು. ವಿವಿಧ ಕಂಪನಿಗಳು ಮಹಿಳೆಯರ ಮೇಲೆ ಕೆಲಸದ ಸ್ಥಳದಲ್ಲಿ ನಡೆಯುವ ದೌರ್ಜನ್ಯ ತಡೆಯಲು ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ರಷ್ಯಾದ ಅಲ್ಯುಮಿನಿಯಂ ಉತ್ಪಾದಿಸುವ ಟ್ಯಾಟ್‍ಪ್ರೋಫ್ ಹೆಸರಿನ ಕಂಪನಿ ವಿಚಿತ್ರ ಆಫರ್ ಮಹಿಳಾ ಸಿಬ್ಬಂದಿ ಮುಂದಿಟ್ಟಿದೆ.

    `ಫೆಮಿನಿಟಿ ಮ್ಯಾರಥಾನ್’ ಎಂಬ ಅಭಿಯಾನವನ್ನ ಕಂಪನಿ ಆರಂಭಿಸಿದೆ. ಈ ಅಭಿಮಾನದ ವಿಶೇಷತೆ ಏನಪ್ಪಾ ಅಂದರೆ, ಸ್ಕರ್ಟ್ ಅಥವಾ ಮೊಣಕಾಲಿನಿಂದ 5 ಸೆ.ಮೀ ಉದ್ದವಿಲ್ಲದ ಡ್ರೆಸ್ ಧರಿಸಿ ಮಹಿಳಾ ಸಿಬ್ಬಂದಿ ಆಫಿಸ್‍ಗೆ ಬರಬೇಕಾಗುತ್ತದೆ. ಹೌದು ಈ ರೀತಿ ಬಟ್ಟೆ ಧರಿಸಿ ಮಹಿಳಾ ಸಿಬ್ಬಂದಿ ಕೆಲಸಕ್ಕೆ ಬಂದರೆ ನಿತ್ಯ ಅಂದಾಜು 106 ರೂಪಾಯಿ (100 ರೂಬೆಲ್ಸ್) ಎಕ್ಸ್​ಟ್ರಾ ಬೋನಸ್ ನೀಡುವುದಾಗಿ ಕಂಪನಿ ಆಫರ್ ನೀಡಿದೆ.

    ಪುರುಷರಂತೆ ಮಹಿಳೆಯರು ಕೆಲಸದಲ್ಲಿ ಸರಿ ಸಮಾನವಾಗಿ ಕೆಲಸ ಮಾಡುತ್ತಾರೆ. ಆದರಿಂದ ಅವರಿಗೆ ಕಂಪನಿಯಲ್ಲಿ ಉತ್ತಮ ವಾತಾವರಣ ಕಲ್ಪಿಸಿಕೊಡಲು ಈ ಅಭಿಯಾನ ಶುರುಮಾಡಿದ್ದೇವೆ. ಈಗಾಗಲೇ ಈ ಅಭಿಯಾನಕ್ಕೆ 60ಕ್ಕೂ ಹೆಚ್ಚು ಮಂದಿ ಮಹಿಳಾ ಸಿಬ್ಬಂದಿ ಪಾಲ್ಗೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ.

    ಅಲ್ಯುಮಿನಿಯಂ ಉತ್ಪಾದಿಸುವ ಟ್ಯಾಟ್‍ಪ್ರೋಫ್ ಎಂಬ ಕಂಪನಿ, ಕರ್ತವ್ಯದ ಸ್ಥಳವನ್ನು ಆಕರ್ಷಣಿಯಗೊಳಿಸಲು ಈ ಕ್ರಮ ಎಂದು ಹೇಳಿಕೊಂಡಿದೆ. ಆದರೆ ಕಂಪನಿಯ ಆಫರ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಈ ಟೀಕೆಗಳನ್ನು ಬದಿಗೊತ್ತಿ ಕಂಪನಿ ಇದೇ ತಿಂಗಳಲ್ಲಿ ಫೆಮಿನಿಟಿ ಎಂಬ ಕಾರ್ಯಕ್ರಮ ಆಯೋಜಿಸಲಿದೆ. ಇದರಲ್ಲಿ ಪುರುಷ ಸಿಬ್ಬಂದಿಗೂ ಕೂಡ ಸ್ಪರ್ಧೆಯನ್ನು ನಡೆಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

  • ದೀಪಾವಳಿ ಬೋನಸ್ ನೀಡದ್ದಕ್ಕೆ ಏರ್ ಇಂಡಿಯಾ ಸಿಬ್ಬಂದಿಯಿಂದ ಸ್ಟ್ರೈಕ್

    ದೀಪಾವಳಿ ಬೋನಸ್ ನೀಡದ್ದಕ್ಕೆ ಏರ್ ಇಂಡಿಯಾ ಸಿಬ್ಬಂದಿಯಿಂದ ಸ್ಟ್ರೈಕ್

    ಮುಂಬೈ: ದೀಪಾವಳಿ ಬೋನಸ್ ನೀಡದ್ದಕ್ಕೆ ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವಿಸಸ್ ಲಿಮಿಟಿಡ್‍ನ (ಎಐಎಟಿಎಸ್‍ಎಲ್) 400 ಸಿಬ್ಬಂದಿ ಮುಂಬೈ ವಿಮಾನ ನಿಲ್ದಾಣದಲ್ಲಿ ದಿಢೀರ್ ಮುಷ್ಕರ ಆರಂಭಿಸಿದ್ದಾರೆ.

    ಬುಧವಾರ ರಾತ್ರಿ ಪ್ರಾರಂಭವಾಗಿದ್ದು ಇಂದು ಕೂಡ ಮುಂದುವರಿದಿತ್ತು. ಏರ್ ಇಂಡಿಯಾ ಸಿಬ್ಬಂದಿ ಏರ್‍ಪೋರ್ಟ್‍ನಲ್ಲಿ ಪ್ರಯಾಣಿಕರ ಟಿಕೆಟ್ ಪರಿಶೀಲನೆ, ಬ್ಯಾಗ್‍ಗಳನ್ನು ಲೋಡ್ ಹಾಗೂ ಅನ್‍ಲೋಡ್ ಮಾಡುವುದು, ವಿಮಾನ ಹಾಗೂ ಕಾರ್ಗೋಗಳನ್ನು ಸ್ವಚ್ಛ ಮಾಡುವ ಕೆಲಸಗಳನ್ನು ನಿರ್ವಹಿಸುತ್ತಾರೆ. ಅಲ್ಲದೆ ಕೆಲವು ವಿದೇಶಿ ಏರ್‍ಲೈನ್ಸ್‍ಗಳ ಗುತ್ತಿಗೆಯನ್ನು ನೋಡಿಕೊಳ್ಳುತ್ತಾರೆ.

    ಪ್ರತಿಭಟನೆಯಿಂದ ಇಂದು ಎಲ್ಲಾ ಏರ್ ಇಂಡಿಯಾ ವಿವಾನಗಳ ಹಾರಾಟ ವಿಳಂಬವಾಗಿದೆ. ಮುಂಬೈ- ಬ್ಯಾಂಕಾಕ್ ಎಐ330 ವಿಮಾನ ಬೆಳಗ್ಗೆ 8.18ಕ್ಕೆ ಮುಂಬೈ ವಿಮಾನ ನಿಲ್ದಾಣದಿಂದ 7 ಗಂಟೆ ತಡವಾಗಿ ಹೊರಟಿದೆ. ಹಾಗೆಯೇ ಬೆಳಗಿನ ಜಾವ 1.30ಕ್ಕೆ ಹೊರಡಬೇಕಾದ ಮುಂಬೈ-ನೆವಾರ್ಕ್ ವಿಮಾನ 4.08ಕ್ಕೆ ಹೊರಟಿದೆ ಎಂದು ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಪ್ರತಿಭಟನೆಯಿಂದ ಹಲವು ಏರ್ ಇಂಡಿಯಾ ವಿವಾನಗಳ ನಿರ್ಗಮನ ಹಾಗೂ ಆಗಮನದಲ್ಲಿ ಸರಿಸುಮಾರು 2 ಗಂಟೆ ಕಾಲ ವಿಳಂಬವಾಗಿದೆ. ಒಟ್ಟು 16 ಅಂತರಾಷ್ಟ್ರೀಯ ಮತ್ತು 8 ದೇಶಿಯ ವಿಮಾನ ಹಾರಾಟಕ್ಕೆ ಈ ಪ್ರತಿಭಟನೆಯ ಬಿಸಿ ತಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv