Tag: Bonnet

  • Viral Video: ಬಾನೆಟ್‌ ಮೇಲೆ ವ್ಯಕ್ತಿಯನ್ನ ಮಲಗಿಸಿ BMW ಕಾರು ಚಲಾಯಿಸಿದ ಅಪ್ರಾಪ್ತ!

    Viral Video: ಬಾನೆಟ್‌ ಮೇಲೆ ವ್ಯಕ್ತಿಯನ್ನ ಮಲಗಿಸಿ BMW ಕಾರು ಚಲಾಯಿಸಿದ ಅಪ್ರಾಪ್ತ!

    ಮುಂಬೈ: ಪೋರ್ಶೆ ಕಾರು ಅಪಘಾತದ ಬೆನ್ನಲ್ಲೇ ಮುಂಬೈನ 17 ವರ್ಷದ ಹುಡುಗನೊಬ್ಬ ವ್ಯಕ್ತಿಯೊಬ್ಬನನ್ನು BMW ಕಾರಿನ ಮೇಲೆ ಮಲಗಿಸಿಕೊಂಡು ಕಲ್ಯಾಣ್‌ನ ಜನನಿಬಿಡ ರಸ್ತೆಯಲ್ಲಿ ಪರವಾನಗಿ ಇಲ್ಲದೆ ಓಡಿಸಿದ ಘಟನೆ ಬೆಳಕಿಗೆ ಬಂದಿದೆ.

    ಪುಣೆ ಪೋರ್ಶೆ ಕಾರು ಅಪಘಾತದಲ್ಲಿ (Pune Porsche Car Accident) ಅಪ್ರಾಪ್ತ ತನ್ನ ಐಷಾರಾಮಿ ಕಾರನ್ನು ಬೈಕ್‌ಗೆ ಡಿಕ್ಕಿಯಾಗಿಸಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣವಾಗಿದ್ದನು. ಈ ಘಟನೆಯ ಬಗ್ಗೆ ಭಾರೀ ಆಕ್ರೋಶದ ನಡುವೆ ಈ ಘಟನೆ ಬೆಳಕಿಗೆ ಬಂದಿದೆ. ಈ ಸ್ಟಂಟ್‌ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೋ ವೈರಲ್ ಆದ ತಕ್ಷಣ, ಪೊಲೀಸರು ಕಾರಿನ ಬಾನೆಟ್ ಮೇಲೆ ಮಲಗಿದ್ದ ವ್ಯಕ್ತಿಯನ್ನು ಸುಭಮ್ ಮಿಥಿಲಾ ಎಂದು ಗುರುತಿಸಿದ್ದಾರೆ. ಕಾರು ಚಾಲಕ 17 ವರ್ಷದ ಹುಡುಗ ಮತ್ತು ಅವನ ತಂದೆ, ನಿವೃತ್ತ ಸರ್ಕಾರಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಅಪ್ರಾಪ್ತರು ಶನಿವಾರ ಥಾಣೆ ಜಿಲ್ಲೆಯ ಕಲ್ಯಾಣ್ ನಗರದ ಜನನಿಬಿಡ ಶಿವಾಜಿ ಚೌಕ್ ಪ್ರದೇಶದಲ್ಲಿ ಕಾರನ್ನು ಚಲಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಹನಿಮೂನ್ ಪೀರಿಯೆಡ್ ಮುಗಿದಿದ್ರೂ ಇನ್ನೂ ಅಭಿವೃದ್ಧಿ ಕೆಲಸ ಮಾಡ್ತಿಲ್ಲ: ವಿಜಯೇಂದ್ರ

    ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಗುಂಡ್ ಮಾತನಾಡಿ, ಸಾಮಾಜಿಕ ಮಾಧ್ಯಮದ ರೀಲ್ಸ್‌ಗಳಿಂದ ಪ್ರೇರಿತನಾಗಿ ಅಪ್ರಾಪ್ತ ತಂದೆ 5 ಲಕ್ಷ ರೂ.ಗೆ ಸೆಕೆಂಡ್ ಹ್ಯಾಂಡ್ ಬಿಎಂಡಬ್ಲ್ಯು ಕಾರನ್ನು ಖರೀದಿಸುವಂತೆ ಹಠ ಹಿಡಿದಿದ್ದಾನೆ. ಅಲ್ಲದೇ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ರಸ್ತೆಯಲ್ಲಿ ಓಡಿಸಿದ್ದಾನೆ. ಇನ್ನು ಕಾರಿನ ಕಾರಿನ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.‌

  • ಹಿಟ್ ಆಂಡ್ ರನ್ ಕೇಸ್‌ಗೆ ಟ್ವಿಸ್ಟ್ – ಸಾರ್ವಜನಿಕರು, ಸಿಸಿಟಿವಿ ದೃಶ್ಯಗಳಿಂದ ನಿಜ ಬಯಲಿಗೆ

    ಹಿಟ್ ಆಂಡ್ ರನ್ ಕೇಸ್‌ಗೆ ಟ್ವಿಸ್ಟ್ – ಸಾರ್ವಜನಿಕರು, ಸಿಸಿಟಿವಿ ದೃಶ್ಯಗಳಿಂದ ನಿಜ ಬಯಲಿಗೆ

    ಬೆಂಗಳೂರು: ನಗರದ ಉಲ್ಲಾಳ ರಸ್ತೆಯಲ್ಲಿ (Ullala Road) ನಡೆದಿದ್ದ ಹಿಟ್ ಅಂಡ್ ರನ್ ಕೇಸ್ (Hit And Run Case) ಸಂಬಂಧ ಮತ್ತಷ್ಟು ಸ್ಫೋಟಕ ಸತ್ಯಗಳು ಹೊರಬರುತ್ತಿವೆ. ಹಿಟ್ ಅಂಡ್ ರನ್ ಕೇಸ್ ಸಂಬಂಧ ಪ್ರತ್ಯಕ್ಷ ದರ್ಶಿಗಳು, ಸ್ಥಳದಲ್ಲಿದ್ದ ಸಿಸಿಟಿವಿಗಳು ಆಸಲಿಗೆ ಘಟನೆ ಏನಾಯ್ತು ಎನ್ನುವುದರ ಬಗ್ಗೆ ಮಾಹಿತಿಗಳನ್ನು ಬಿಚ್ಚಿಟ್ಟಿವೆ.

    ಮೊದಲ ಬಾರಿಗೆ ಉಲ್ಲಾಳ ಜಂಕ್ಷನ್‌ನಲ್ಲಿ ನೇಕ್ಸಾನ್ ಕಾರು ಚಾಲಕಿ ಪ್ರಿಯಾಂಕಾ, ಸ್ವಿಫ್ಟ್ ಕಾರು ಚಾಲಕ ದರ್ಶನ್ ನಡುವೆ ಮಾತಿನ ಚಕಮಕಿ ಆಗಿತ್ತು. ಅಲ್ಲಿಂದ ಹೋಗುವ ವೇಳೆ ಸ್ವಿಫ್ಟ್ ಕಾರು ಚಾಲಕ ದರ್ಶನ್‌ಗೆ ಪ್ರಿಯಾಂಕಾ ಮಧ್ಯದ ಬೆರಳು ತೋರಿಸಿ ಎಸ್ಕೇಪ್ ಆಗಿದ್ದಳು. ಈ ವೇಳೆ ಹಿಂಬಾಲಿಸಿದ ದರ್ಶನ್ ಕಾರನ್ನು ಅಡ್ಡಗಟ್ಟಿ ಮತ್ತೆ ಪ್ರಶ್ನೆ ಮಾಡಿದ್ದ.

    ಬಳಿಕ ಮತ್ತೆ ಮಾತಿನ ಚಕಮಕಿ ಮುಂದುವರಿದು ದರ್ಶನ್, ಪ್ರಿಯಾಂಕಾಳ ನೆಕ್ಸಾನ್ ಕಾರಿನ ಮುಂದೆ ಅಡ್ಡಗಟ್ಟಿ ನಿಂತಿದ್ದಾನೆ. ಈ ವೇಳೆ ದರ್ಶನ್ ಕಾರಿನ ಮುಂಭಾಗ ಬಂದಿದ್ದು, ಬದಿಗೆ ಸರಿಯದೇ ಹೋಗಿದ್ದರಿಂದ ಆಕೆ ಕಾರು ಚಾಲನೆ ಮಾಡುವ ವೇಳೆ ಬಾನೆಟ್ (Bonnet) ಮೇಲೆ ಹತ್ತಿದ್ದಾನೆ. ಪ್ರಿಯಾಂಕಾ ಕಾರು ನಿಲ್ಲಿಸದೇ ವೇಗವಾಗಿ ಸುಮಾರು 3 ಕಿ.ಮೀ ದೂರ ಚಾಲನೆ ಮಾಡಿದ್ದಾಳೆ. ಇದನ್ನು ನೋಡಿದ ಸಾರ್ವಜನಿಕರು ಕಾರು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆಕೆಗೆ ಎಷ್ಟೇ ಹೇಳಿದರೂ ಪ್ರಿಯಾಂಕಾ ಕಾರು ನಿಲ್ಲಿಸದೇ ಹತ್ತಾರು ಹಂಪ್‌ಗಳನ್ನು ಎಗರಿಸಿಕೊಂಡು ಹೋಗಿದ್ದಾಳೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅವಳಿ ಬ್ಲಾಸ್ಟ್- ಭಾರತ್ ಜೋಡೋ ಯಾತ್ರೆಗೆ ಹೈಅಲರ್ಟ್

    ಇದರಿಂದ ಕೋಪಗೊಂಡ ಸಾರ್ವಜನಿಕರು ಮಂಗಳೂರು ಪಿಯೂ ಕಾಲೇಜ್ ಬಳಿ ಕಾರನ್ನು ತಡೆದು ಚಾಲಕಿ ಪ್ರಿಯಾಂಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲ್ಲು, ದೊಣ್ಣೆಗಳಿಂದ ಕಾರಿನ ಗ್ಲಾಸ್ ಅನ್ನು ಒಡೆದಿದ್ದಾರೆ. ಇದನ್ನೂ ಓದಿ: ಬಾಂಬ್ ಬೆದರಿಕೆ – ಮಾಸ್ಕೋದಿಂದ ಗೋವಾ ಬರಬೇಕಿದ್ದ ವಿಮಾನ ಉಜ್ಬೇಕಿಸ್ತಾನದಲ್ಲಿ ಲ್ಯಾಂಡ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Bengaluru Hit & Run Case: ಕಾರ್‌ ಬಾನೆಟ್‌ ಮೇಲೆ ಬೈಕ್‌ ಸವಾರ..!

    Bengaluru Hit & Run Case: ಕಾರ್‌ ಬಾನೆಟ್‌ ಮೇಲೆ ಬೈಕ್‌ ಸವಾರ..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೈನ್ ಕಟ್ಟು ಎಂದಿದ್ದಕ್ಕೆ ಟ್ರಾಫಿಕ್ ಪೊಲೀಸ್‌ನನ್ನೇ ಕಾರಿನ ಬಾನೆಟ್ ಮೇಲೆ 4 ಕಿ.ಮೀ ಹೊತ್ತೊಯ್ದ

    ಫೈನ್ ಕಟ್ಟು ಎಂದಿದ್ದಕ್ಕೆ ಟ್ರಾಫಿಕ್ ಪೊಲೀಸ್‌ನನ್ನೇ ಕಾರಿನ ಬಾನೆಟ್ ಮೇಲೆ 4 ಕಿ.ಮೀ ಹೊತ್ತೊಯ್ದ

    ಭೋಪಾಲ್: ಕಾರು ಚಾಲನೆಯ ವೇಳೆ ಫೋನ್‌ನಲ್ಲಿ ಮಾತನಾಡುತ್ತಿದ್ದುದಕ್ಕೆ ದಂಡ (Fine) ಪಾವತಿಸಲು ಹೇಳಿದ ಟ್ರಾಫಿಕ್ ಪೊಲೀಸ್‌ನನ್ನು (Traffic Police) 4 ಕಿ.ಮೀ ದೂರದವರೆಗೆ ಕಾರಿನ ಬಾನೆಟ್ (Car Bonnet) ಮೇಲೆ ಅಪಾಯಕರ ರೀತಿಯಲ್ಲಿ ವ್ಯಕ್ತಿ ಹೊತ್ತೊಯ್ದ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ಸೋಮವಾರ ನಡೆದಿದೆ.

    ಟ್ರಾಫಿಕ್ ಹೆಡ್ ಕಾನ್‌ಸ್ಟೆಬಲ್ ಶಿವಸಿಂಗ್ ಚೌಹಾಣ್‌ನನ್ನು ವ್ಯಕ್ತಿಯೊಬ್ಬ ಅಪಾಯಕರ ರೀತಿಯಲ್ಲಿ ಕಾರಿನ ಬಾನೆಟ್ ಮೇಲೆ ಎಳೆದೊಯ್ದಿದ್ದಾನೆ. ವ್ಯಕ್ತಿ ಕಾರು ಚಾಲನೆ ಮಾಡುತ್ತಿದ್ದ ವೇಳೆ ಫೋನ್‌ನಲ್ಲಿ ಮಾತನಾಡಿದ್ದಕ್ಕೆ ಆತನ ಕಾರನ್ನು ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸ್ ದಂಡ ಪಾವತಿಸಲು ಹೇಳಿದ್ದಾರೆ. ಆಗ ಕೋಪಗೊಂಡ ಕಾರು ಚಾಲಕ ಪೊಲೀಸ್‌ನನ್ನು ಬಾನೆಟ್ ಮೇಲೆ ಹತ್ತಿಸಿಕೊಂಡೇ 4 ಕಿ.ಮೀ ಎಳೆದೊಯ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಪಾಠ ಮಾಡುವ ಶಿಕ್ಷಕನಿಂದ 18 ಕ್ಕೂ ಹೆಚ್ಚು ದೇವಸ್ಥಾನ ದರೋಡೆ

    ವ್ಯಕ್ತಿ ಅಪಾಯಕರ ರೀತಿಯಲ್ಲಿ ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದು, ಕಾರನ್ನು ನಿಲ್ಲಿಸಲು ಇತರ ಪೊಲೀಸರು ಸುತ್ತುವರಿಯಬೇಕಾಯಿತು. ಆರೋಪಿ ಚಾಲಕನನ್ನು ಇದೀಗ ಬಂಧಿಸಲಾಗಿದೆ ಎಂದು ಲಸುಡಿಯಾ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆರ್‌ಎಸ್ ದಂಡೋತಿಯಾ ತಿಳಿಸಿದ್ದಾರೆ. ಇದನ್ನೂ ಓದಿ: 6 ಮದುವೆ, 54 ಮಕ್ಕಳಿಗೆ ತಂದೆಯಾದ ಪಾಕಿಸ್ತಾನಿ ವ್ಯಕ್ತಿ ಸಾವು

    ಗ್ವಾಲಿಯರ್ ನಿವಾಸಿಯಾಗಿರುವ ಆರೋಪಿಯ ಬಳಿ ಪಿಸ್ತೂಲ್ ಹಾಗೂ ರಿವಾಲ್ವರ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಶಸ್ತ್ರಾಸ್ತ್ರಗಳನ್ನು ಹೊಂದಲು ಪರವಾನಗಿ ಪಡೆದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾನೆಟ್ ಮೇಲೆ ಕುಳಿತು ಮೆರವಣಿಗೆ – ವಧುವಿಗೆ ದಂಡ

    ಬಾನೆಟ್ ಮೇಲೆ ಕುಳಿತು ಮೆರವಣಿಗೆ – ವಧುವಿಗೆ ದಂಡ

    ಪುಣೆ: ಕಾರಿನ ಬಾನೆಟ್ ಮೇಲೆ ಕುಳಿತು ಮೆರವಣಿಗೆ ಮಾಡಿದ್ದ ವಧುವಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

    23 ವರ್ಷದ ವಧು ಎಸ್‍ಯುವಿ ಕಾರಿನ ಬಾನೆಟ್ ಮೇಲೆ ಕುಳಿತು ಮೆರವಣಿಗೆ ಹೊರಟಿದ್ದಳು. ಪುಣೆ- ಸಾಸ್ವಾಡ್ ರಸ್ತೆಯಲ್ಲಿ ಕಾರು ಸಂಚರಿಸಿತ್ತು. ಬೈಕಿನ ಕುಳಿತು ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಿಸಿದ್ದ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಅಡಿ ಕಾರಿನ ಮಾಲೀಕ, ಯುವತಿ, ಚಾಲಕ, ವಿಡಿಯೋಗ್ರಾಫರ್ ಮೇಲೆ ದಂಡ ವಿಧಿಸಿದ್ದಾರೆ. ಕೊರೊನಾ ನಡುವೆಯೂ ಅಲ್ಲಿದ್ದವರು ರೂ ಮಾಸ್ಕ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ : ಅನಂತ್ ನಾಗ್‍ಗೆ ಪದ್ಮ ಪ್ರಶಸ್ತಿ ನೀಡುವಂತೆ ಅಭಿಯಾನ

    ವಾಹನವು ಸಾಸ್ವಾಡ್‍ನಿಂದ ವಿವಾಹದ ಸ್ಥಳಕ್ಕೆ ತೆರಳುತ್ತಿತ್ತು. ಪುಣೆ-ಸಾಸ್ವಾಡ್ ರಸ್ತೆಯ ಉದ್ದಕ್ಕೂ ಪ್ರಯಾಣಿಸುತ್ತಿದ್ದ ಸನ್ನಿವೇಶವನ್ನು ಚಿತ್ರೀಕರಿಸಲಾಗುತ್ತಿತ್ತು.