Tag: Boni Kapoor

  • ಹಿಂಭಾಗಕ್ಕೆ ಬೋನಿ ಕಪೂರ್ ಟಚ್ – 5 ತಿಂಗಳ ಬಳಿಕ ಊರ್ವಶಿ ಮೌನ ಸ್ಫೋಟ

    ಹಿಂಭಾಗಕ್ಕೆ ಬೋನಿ ಕಪೂರ್ ಟಚ್ – 5 ತಿಂಗಳ ಬಳಿಕ ಊರ್ವಶಿ ಮೌನ ಸ್ಫೋಟ

    ಮುಂಬೈ: ಐದು ತಿಂಗಳ ಹಿಂದೆ ಬಾಲಿವುಡ್ ಸಿನಿಮಾ ನಿರ್ದೇಶಕ ಬೋನಿ ಕಪೂರ್ ಮದುವೆಯಲ್ಲಿ ನಟಿ ಊರ್ವಶಿ ರೌಥೆಲಾರ ಹಿಂಭಾಗಕ್ಕೆ ಟಚ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಐದು ತಿಂಗಳ ಬಳಿಕ ಊರ್ವಶಿ ವಿಡಿಯೋಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

    ಏಪ್ರಿಲ್ ನಲ್ಲಿ ಸ್ನೇಹಿತರ ಮದುವೆ ಸಮಾರಂಭದಲ್ಲಿ ನಾನು ಭಾಗಿಯಾಗಿದ್ದಾಗ ಅಲ್ಲಿ ಬೋನಿ ಕಪೂರ್ ಸಹ ಬಂದಿದ್ದರು. ವೇದಿಕೆ ಮೇಲೆ ನವದಂಪತಿ ಜೊತೆ ಫೋಟೋಗೆ ಪೋಸ್ ಕೊಡುತ್ತಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಕೈ ನನಗೆ ತಾಕಿದ್ದು, ಅದಕ್ಕಿಂತ ಹೆಚ್ಚಿನದು ಅಲ್ಲಿ ಏನು ನಡೆದಿಲ್ಲ. ಅವರ ಕೈ ನನಗೆ ತಾಕಿದ್ದಾಗ ನಾನು ಯಾವುದೇ ಪ್ರತಿಕಿಯೆ ಸಹ ನೀಡಿರಲಿಲ್ಲ. ಆದ್ರೆ ಬೆಳಗ್ಗೆ ಆಗುವಷ್ಟರಲ್ಲಿ ಈ ಸಣ್ಣ ಘಟನೆಯೊಂದು ಹಲವು ಆಯಾಮಗಳನ್ನು ಪಡೆದುಕೊಂಡು ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಬಿತ್ತರವಾಗಿತ್ತು. ಸತತ ಒಂದು ವಾರಗಳ ಕಾಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು ಎಂದು ಊರ್ವಶಿ ಬೇಸರ ವ್ಯಕ್ತಪಡಿಸಿದ್ದಾರೆ.

    ವಿಡಿಯೋ ವೈರಲ್ ಬಳಿಕ ಬೋನಿ ಕಪೂರ್ ಸಹ ಜೊತೆ ಮಾತನಾಡಿದ್ದೇನೆ. ಬೋನಿ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡದೇ ಅಸಮಾಧಾನ ಹೊರ ಹಾಕಿದ್ದರು. ವಿಡಿಯೋವನ್ನು ಕೆಟ್ಟದಾಗಿ ಬಿಂಬಿಸಿದವರ ವಿರುದ್ಧ ಬೇಸರ ಹೊರಹಾಕಿದ್ದರು ಎಂದು ಊರ್ವಶಿ ತಿಳಿಸಿದ್ದಾರೆ.

    ಏನದು ವಿಡಿಯೋ?
    ಮದುವೆ ಕಾರ್ಯಕ್ರಮದಲ್ಲಿ ನವದಂಪತಿ ಜೊತೆ ಫೋಟೋ ತೆಗೆದುಕೊಳ್ಳುವಾಗ ಬೋನಿ ಕಪೂರ್ ಪಕ್ಕದಲ್ಲಿದ್ದ ಊರ್ವಶಿ ಯ ಹಿಂಭಾಗ ಟಚ್ ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಣ್ಣದ ಕಥೆಗಳೊಂದಿಗೆ ಸಂಚರಿಸಿತ್ತು.

  • ಅಮ್ಮ ಐ ಲವ್ ಯು, ನನ್ನ ಸರ್ವಸ್ವವೂ ನೀನೇ: ಜಾಹ್ನವಿ ಕಪೂರ್

    ಅಮ್ಮ ಐ ಲವ್ ಯು, ನನ್ನ ಸರ್ವಸ್ವವೂ ನೀನೇ: ಜಾಹ್ನವಿ ಕಪೂರ್

    ಮುಂಬೈ: ತಾಯಿ ಶ್ರೀದೇವಿ ಸಾವಿನ ಬಗ್ಗೆ ಇದೂವರೆಗೂ ಎಲ್ಲಿಯೂ ಮಾತನಾಡದ ಮಗಳು ಜಾಹ್ನವಿ ಕಪೂರ್ ಇಂದು ತಮ್ಮ ಇನ್ ಸ್ಟಾಗ್ರಾಂ ಭಾವನಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ತಾಯಿ ಸಾವಿನ ಬಳಿಕ ನೊಂದಿದ್ದ ಜಾಹ್ನವಿ, ಅಮ್ಮ ಐ ಲವ್ ಯು, ನನ್ನ ಸರ್ವಸ್ವವೂ ನೀನೇ ಆಗಿದ್ದೆ ಎಂಬ ದೀರ್ಘ ಬರಹವನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಶ್ರೀದೇವಿ, ತಂದೆ ಬೋನಿ ಕಪೂರ್, ಸೋದರಿ ಖುಷಿ ಕಪೂರ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

    ಫೆಬ್ರವರಿ 24ರಂದು ದುಬೈನಲ್ಲಿ ಸಂಬಂಧಿಕರ ಮದುವೆಯಲ್ಲಿ ಶ್ರೀದೇವಿ ಭಾಗಿಯಾಗಿದ್ದರು. ಮದುವೆಯಲ್ಲಿ ಪಾಲ್ಗೊಂಡಿದ್ದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡು ‘ಐ ಮಿಸ್ ಯು’ ಅಂತಾ ಬರೆದುಕೊಂಡು ಮಗಳು ಜಾಹ್ನವಿಗೆ ಟ್ಯಾಗ್ ಮಾಡಿಕೊಂಡಿದ್ದರು.

    ಶ್ರದ್ಧಾಂಜಲಿ ಸಲ್ಲಿಸಿದ್ದು ಹೀಗೆ: ನನ್ನ ಮನಸ್ಸು ದುಖಃದಿಂದ ಇನ್ನು ಮುಕ್ತವಾಗಿಲ್ಲ. ಸಮಾಜದಲ್ಲಿ ಹೇಗೆ ಜೀವನ ನಡೆಸಬೇಕು ಎನ್ನುವುದನ್ನು ನಿನ್ನಿಂದ ಕಲಿತಿದ್ದೇನೆ. ಜೀವನದ ಬಗ್ಗೆ ಪಾಠ ಹೇಳಿಕೊಟ್ಟ ನೀನು ಇಂದು ನನ್ನ ಜೊತೆಯಲಿಲ್ಲ. ಆದ್ರೆ ಇಂದೂ ಕೂಡ ನೀನು ನನ್ನ ಜೊತೆಯಲ್ಲಿಯೇ ಇದ್ದೀಯಾ ಎನ್ನುವ ಫೀಲ್ ನನಗಾಗುತ್ತಿದೆ. ಕಣ್ಣುಗಳನ್ನು ಮುಚ್ಚಿದಾಗ ಕೇವಲ ಒಳ್ಳೆಯ ಸನ್ನಿವೇಶಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ತಾಯಿಯ ಹತಾಶೆ, ದು:ಖ ಮತ್ತು ಅಸೂಯೆ ಎಂದು ಅರ್ಥವಾಗಲಿಲ್ಲ. ಹಳೆಯ ಮಾತುಗಳನ್ನು ಬಿಟ್ಟು ಒಳ್ಳೆಯ ರೀತಿಯಲ್ಲಿ ಪ್ರೀತಿಯಿಂದ ಬಾಳೋಣ. ನಮಗೆ ಏನು ಕೊಡಬೇಕೋ ಎಲ್ಲವನ್ನು ಆಕೆ ನಮಗೆ ನೀಡಿದ್ದಾಳೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಶ್ರೀದೇವಿ ಬಗ್ಗೆ ಮನಬಿಚ್ಚಿ ಟ್ವೀಟ್ ಮಾಡಿದ ಬೋನಿ ಕಪೂರ್

    ಮುಂದುವರೆದು ನಾನು ಮತ್ತು ತಂಗಿ ಖುಷಿ ಇಬ್ಬರೂ ತಾಯಿಯನ್ನು ಕಳೆದುಕೊಂಡಿದ್ದರೆ, ಅಪ್ಪ ಮಾತ್ರ ಅವರ ಜೀವ(ಜಾನ್)ವನ್ನೇ ಕಳೆದುಕೊಂಡಿದ್ದಾರೆ. ಅಮ್ಮ ಪ್ರತಿಯೊಂದು ವಿಷಯವನ್ನು ತಂದೆಯೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರಿಬ್ಬರ ಪ್ರೀತಿ ಅಮರವಾಗಿದ್ದು, ಇಬ್ಬರ ಅನ್ಯೋನ್ಯತೆ ಜಗತ್ತಿನಲ್ಲಿಯ ಯಾವ ವಸ್ತುವಿಗೆ ಹೋಲಿಕೆ ಮಾಡಲು ಅಸಾಧ್ಯ. ಅಪ್ಪ- ಅಮ್ಮನ ಪ್ರೀತಿ ನಿಷ್ಕಲ್ಮಶ ಮತ್ತು ಶುದ್ಧತೆಯಿಂದ ಕೂಡಿತ್ತು. ಹಾಗಾಗಿ ಅವರಿಬ್ಬರ ಪ್ರೀತಿಯನ್ನು ಅನುಮಾನದಿಂದ ನೋಡಿ ತಂದೆಗೆ ನೋವುಂಟು ಮಾಡಬೇಡಿ ಅಂತಾ ಜಾಹ್ನವಿ ಮನವಿ ಮಾಡಿಕೊಂಡಿದ್ದಾರೆ.

    ಫೆಬ್ರವರಿ 24ರಂದು ದುಬೈನಲ್ಲಿ ನಿಧನ ಹೊಂದಿದ್ದ ಶ್ರೀದೇವಿ ಅವರ ಮೃತದೇಹವನ್ನು ಫೆಬ್ರವರಿ 27ರಂದು ಮುಂಬೈಗೆ ತರಲಾಗಿತ್ತು. ಫೆಬ್ರವರಿ 28ರಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ಮುಂಬೈನ ವಿಲೇ ಪಾರ್ಲೆಯ ಸಮಾಜ ಸೇವಾ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಇಂದು ಶ್ರೀದೇವಿಯವರ ಅಸ್ಥಿಯನ್ನು ರಾಮೇಶ್ವರಂನಲ್ಲಿ ವಿಸರ್ಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    https://www.instagram.com/p/Bf2bjvYBRLZ/?hl=en&taken-by=janhvikapoor