Tag: bonet

  • ಕಾರಿನ ಬಾನೆಟ್ ಮೇಲೆ ವೈದ್ಯನನ್ನು 50 ಮೀಟರ್ ಎಳೆದೊಯ್ದ!

    ಕಾರಿನ ಬಾನೆಟ್ ಮೇಲೆ ವೈದ್ಯನನ್ನು 50 ಮೀಟರ್ ಎಳೆದೊಯ್ದ!

    ಚಂಡೀಗಢ: ವೈದ್ಯರೊಬ್ಬರನ್ನು ಕಾರಿನ ಬಾನೆಟ್ ಮೇಲೆ ಸುಮಾರು 50 ಮೀಟರ್ ನಷ್ಟು ದೂರದವರೆಗೆ ಚಾಲಕ ಎಳೆದೊಯ್ದ ಘಟನೆ ಹರಿಯಾಣದ (Haryana) ಪಂಚಕುಳದ (Panchakula) ಸೆಕ್ಟರ್-8 ರಲ್ಲಿ ನಡೆದಿದೆ.

    ವೈದ್ಯನನ್ನು ಡಾ. ಗಗನ್ ಗರ್ಗ್ (42) ಎಂದು ಗುರುತಿಸಲಾಗಿದೆ. ಇವರು ಸೆಕ್ಟರ್ 4 ಮಾನಸ ದೇವಿ ಕಾಂಪ್ಲೆಕ್ಸ್ ನಿವಾಸಿಯಾಗಿದ್ದು, ಪಂಚಕುಳದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಘಟನೆಯ ಸಂಪೂರ್ಣ ವೀಡಿಯೋವನ್ನು ಸ್ಥಳೀಯರು ಮಾಡಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

    ನಡೆದಿದ್ದೇನು..?: ಟ್ಯೂಶನ್‍ಗೆ ತೆರಳಿದ್ದ ಮಗನನ್ನು ಮನೆಗೆ ಕರೆದುಕೊಂಡು ಬರಲು ಡಾ.ಗಗನ್ ಅವರು ತೆರಳಿದ್ದರು. ಈ ವೇಳೆ ಗಗನ್ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿತ್ತು. ಇದರಿಂದ ಕುಪಿತಗೊಂಡ ಗಗನ್, ಆ ಕಾರಿನ ಚಾಲಕನನ್ನು ಪ್ರಶ್ನಿಸಲು ತೆರಳಿದ್ದರು. ಆದರೆ ಆಲ್ಟೋ ಕಾರಿನ ಚಾಲಕ ವೈದನ ಜೊತೆ ಜಗಳವಾಡಿದ್ದಾನೆ. ಅಲ್ಲದೆ ಅವಾಚ್ಯವಾಗಿ ನಿಂದಿಸಿದ ಆತ, ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ. ಬಳಿಕ ಕಾರನ್ನು ಅವರ ಮೇಲೆಯೇ ಹರಿಸಲು ಯತ್ನಿಸಿದ್ದಾನೆ. ಆಗ ಗಗನ್ ಅವರು ಬಾನೆಟ್ ಮೇಲೆ ಬಿದ್ದಿದ್ದು, ಅವರನ್ನು ಆತ ಹಾಗೆಯೇ ಎಳೆದೊಯ್ದಿದ್ದಾನೆ. ಇದನ್ನೂ ಓದಿ: ಬಾಲಕಿಯ ಮೇಲೆ ಸರ್ಕಾರಿ ಅಧಿಕಾರಿ ಅತ್ಯಾಚಾರ – ಸ್ವಯಂ ದೂರು ದಾಖಲಿಸಿಕೊಂಡ ದೆಹಲಿ ಹೈಕೋರ್ಟ್

    ಈ ಸಂಬಂಧ ಗಗನ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, ಮಗನನ್ನು ಕರೆದುಕೊಂಡು ಹೋಗಲೆಂದು ಮನೆಯಿಂದ ಕಾರಿನಲ್ಲಿ ಬಂದಿದ್ದೇನೆ. ಅಂತೆಯೇ ಮನೆಗೆ ಮರಳಿ ಹೋಗುವಾಗ ರಾತ್ರಿ 8.15ರ ಸುಮಾರಿಗೆ ಮಾರುತಿ ಸುಜುಕಿ ಆಲ್ಟೋ ಕಾರು ತಮ್ಮ ಕಾರನ್ನು ಓವರ್ ಟೇಕ್ ಮಾಡುವ ಪ್ರಯತ್ನದಲ್ಲಿ ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಕಾರಿನಲ್ಲಿದ್ದ ಚಾಲಕ, ಅವರ ಕಡೆಗೆ ಚಾಕು ಬೀಸಿ ಬೆದರಿಸಿದ್ದಾನೆ ಎಂದು ಆರೋಪಿಸಿದ್ದಾರೆ.

    ಕಾರು ಚಾಲಕನ ವಿರುದ್ಧ ಪಂಚಕುಳ ಪೊಲೀಸರು ವೈದ್ಯರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೀಡಿಯೋ ಮತ್ತು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು, ಆರೋಪಿ ವೈದ್ಯ ಮತ್ತು ಕಾರಿನಲ್ಲಿದ್ದ ಸಹ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]