ಹುಬ್ಬಳ್ಳಿ: ಸೋದರ ಮಾವನ ಹೆಸರಿನಲ್ಲಿ ನಕಲಿ ಬಾಂಡ್ ಸೃಷ್ಟಿ ಮಾಡಿ ಮಾವನ ಮಕ್ಕಳಿಗೆ ತೊಂದರೆ ಕೊಡುತ್ತಿದ್ದಾರೆಂಬ ಆರೋಪವೊಂದು ಭಾರತೀಯ ಜನತಾ ಪಕ್ಷದ ಮುಖಂಡನ ವಿರುದ್ಧ ಕೇಳಿಬಂದಿದೆ.
ಸಂಗಮೇಶ ಗೌರಕ್ಕನವರ್ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ. ಇವರು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದು, ಇದೀಗ ತೊಂದರೆ ಕೊಡುತ್ತಿದ್ದಾರೆಂದು ಆರೋಪಿಸಿ ಅಳಿಯಂದಿರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಂಗಾಧರ ವಾಲಿ ಎಂಬವರ ಕುಟುಂಬಕ್ಕೆ ಸಂಗಮೇಶ್ ಅನ್ಯಾಯ ಮಾಡಿ 17 ಲಕ್ಷ 68 ಸಾವಿರ ಕೊಡುವಂತೆ ಪೀಡಿಸುತ್ತಿದ್ದಾರೆಂದು ವಾಲಿ ಪುತ್ರ ದೂರಿನಲ್ಲಿ ತಿಳಿಸಿದ್ದಾರೆ.
ಗಂಗಾಧರ ವಾಲಿಯವರು ತೀರಿಕೊಳ್ಳುವ ಮುನ್ನವೇ ಬಾಂಡ್ ಒಂದನ್ನ ಮಾಡಿಕೊಂಡಿದ್ದು, ಅದರಲ್ಲಿ 10 ಲಕ್ಷ ರೂಪಾಯಿ ಕೈಗಡ ಎಂದು ಬರೆಯಲಾಗಿದೆ. ಆದರೆ ಒಂದು ವರ್ಷದಲ್ಲಿ ಅದರ ಬಡ್ಡಿ ಸಮೇತ 17 ಲಕ್ಷಕ್ಕೂ ಹೆಚ್ಚು ಹಣವನ್ನ ಕೊಡುವಂತೆ ಪೀಡಿಸುತ್ತಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಸಂಗಮೇಶ ಗೌರಕ್ಕನವರ್ ಬಿಜೆಪಿ ಮುಖಂಡರ ಜೊತೆಗೂಡಿ ಇಂತಹ ದಂಧೆಗಳನ್ನ ಮಾಡುತ್ತಿದ್ದಾರೆಂದು ವಾಲಿ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ನಕಲಿ ಬಾಂಡ್‍ಗೆ ಮೃತ ರಾಘವೇಂದ್ರ ರಾಮದುರ್ಗ ಅವರ ಸಹಿ ಕೂಡಾ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೋದರ ಮಾವನ ಮಕ್ಕಳು ಬಿಜೆಪಿ ಮುಖಂಡನ ಅಕ್ರಮದ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ತನಿಖೆಯಿಂದ ಸತ್ಯ ತಿಳಿಯಲಿದೆ.
– ಶ್ಯೂರಿಟಿ ಕೊಟ್ಟವರ ಬಗ್ಗೆ ಬಾಯ್ಬಿಡದ ಪೊಲೀಸರು
– ಗೃಹ ಸಚಿವ ಬೊಮ್ಮಾಯಿ ಮೇಲೆ ಹೈಕಮಾಂಡ್ ಸಿಟ್ಟು
ಹುಬ್ಬಳ್ಳಿ: ದೇಶದ್ರೋಹಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಸ್ಟೇಷನ್ ಬೇಲ್ ಕೊಟ್ಟ ಪ್ರಕರಣ ಹುಬ್ಬಳ್ಳಿ ಪೊಲೀಸರಿಗೆ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಉರುಳಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ. ದೇಶದ್ರೋಹಿಗಳಿಗೆ ಬೇಲ್ ಕೊಟ್ಟ ಪ್ರಕರಣವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.
ದೇಶದಲ್ಲಿ ದೇಶದ್ರೋಹ ಕೇಸ್‍ಗಳ ವಿರುದ್ಧ ವ್ಯಾಪಕ ಹೋರಾಟ ನಡೆಯುತ್ತಿದೆ. ಹಲವು ಬಾರಿ ದೇಶದ್ರೋಹ ಕೇಸ್ ದಾಖಲಿಸುವಂತೆ ಬಿಜೆಪಿಯೇ ಒತ್ತಾಯಿಸಿದೆ. ಆದ್ರೀಗ ಬಿಜೆಪಿ ಸರ್ಕಾರವೇ ಆಡಳಿತವಿರುವ ಕರ್ನಾಟಕದಲ್ಲೇ ದೇಶದ್ರೋಹಿಗಳಿಗೆ ಸ್ಟೇಷನ್ ಬೇಲ್ ಕೊಡಲಾಗಿದೆ. ಈ ಬೇಲ್ ಹಿಂದೆ ಯಾರೆಲ್ಲಾ ಇದ್ದಾರೆ? ಯಾರ ಒತ್ತಡವಿದೆ? ಎನ್ನುವ ಬಗ್ಗೆ ವಿವರಣೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಹೈಕಮಾಂಡ್ ಸೂಚಿಸಿದೆ. ಆರ್‌ಎಸ್‍ಎಸ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಇಷ್ಟೆಲ್ಲಾ ಆದರೂ ಹುಬ್ಬಳ್ಳಿ ಪೊಲೀಸರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ದೇಶದ್ರೋಹಿಗಳಿಗೆ ಬೇಲ್ ಕೊಟ್ಟವರ್ಯಾರು? ಅನ್ನೋದರ ಬಗ್ಗೆ ಕಿಂಚಿತ್ತೂ ಮಾಹಿತಿ ಸಿಗದಂತೆ ಮಾಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರನ್ನೆ ಪ್ರಶ್ನೆ ಕೇಳಿದರೆ ಪ್ರಕರಣ ತನಿಖಾ ಹಂತದಲ್ಲಿದೆ. ನೋ ಕಾಮೆಂಟ್ಸ್ ಎನ್ನುತ್ತಾರೆ. ಇನ್ನೊಂದೆಡೆ, ದೇಶದ್ರೋಹಿಗಳ ಭೇಟಿಗೆ ಬಂದ ಕುಟುಂಬಸ್ಥರನ್ನು ಮಾಧ್ಯಮಗಳ ಕಣ್ತಪ್ಪಿಸಿ ಜೀಪ್‍ನಲ್ಲಿ ಬೇರೆಡೆಗೆ ಕರೆದೊಯ್ಯಲಾಗಿದೆ. ಇವೆಲ್ಲಾ ಬೆಳವಣಿಗೆಗಳ ಮಧ್ಯೆ, ರಾತ್ರೋರಾತ್ರಿ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಹುಬ್ಬಳ್ಳಿ ಪೊಲೀಸರ ಪ್ರತಿಯೊಂದು ನಡೆಯೂ ಅನುಮಾನಗಳನ್ನು ಮೂಡಿಸುತ್ತಿದೆ. ಸಾರ್ವಜನಿಕ ವಲಯದಲ್ಲಿ ಎದ್ದಿರುವ ಒಂದಿಷ್ಟು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕೊಡಲೇಬೇಕಿದೆ.
ಪೊಲೀಸರೇ ಉತ್ತರ ಕೊಡಿ:
ಪಬ್ಲಿಕ್ ಪ್ರಶ್ನೆ 1 – ಸ್ಟೇಷನ್ ಬೇಲ್‍ಗೆ ಶ್ಯೂರಿಟಿ ಕೊಟ್ಟಿದ್ದು ಯಾರು? ಯಾಕೆ ಗೌಪ್ಯತೆ?
ಪಬ್ಲಿಕ್ ಪ್ರಶ್ನೆ 2 – ದೇಶದ್ರೋಹಿಗಳ ಕುಟುಂಬಸ್ಥರು ನೀಡಿದ್ರಾ? ಕಾಲೇಜಿನ ಮ್ಯಾನೇಜ್‍ಮೆಂಟ್ ನೀಡ್ತಾ?
ಪಬ್ಲಿಕ್ ಪ್ರಶ್ನೆ 3 – ತನಿಖೆ ದೃಷ್ಟಿಯಿಂದ ಬಹಿರಂಗಪಡಿಸುತ್ತಿಲ್ಲ ಅಂದ್ರೆ ಏನರ್ಥ?
ಪಬ್ಲಿಕ್ ಪ್ರಶ್ನೆ 4 – ಆರೋಪಿಗಳ ಪೋಷಕರು ಯಾರಿಗೂ ಸಿಗದಂತೆ ಗೌಪ್ಯ ಸ್ಥಳಕ್ಕೆ ಕರೆದೊಯ್ದಿದ್ಯಾಕೆ?
ಕೇವಲ ಪೊಲೀಸರ ಮೇಲೆ ಅಷ್ಟೇ ಅಲ್ಲ, ಗೃಹ ಸಚಿವ ಬಸವರಾಜ ಬೊಮ್ಮಯಿ ಅವರ ನಡೆಯೂ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಬೊಮ್ಮಾಯಿ ಅವರು ಕೂಡ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಒಂದಿಷ್ಟು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕೊಡಲೇಬೇಕಿದೆ.
ಗೃಹ ಸಚಿವರೇ ಉತ್ತರ ಕೊಡಿ:
ಪಬ್ಲಿಕ್ ಪ್ರಶ್ನೆ 1 – ಹುಬ್ಬಳ್ಳಿ ಪ್ರಕರಣದಲ್ಲಿ ಮೃದು ಧೋರಣೆ ಏಕೆ ತಳೆದಿದ್ದೀರಿ?
ಪಬ್ಲಿಕ್ ಪ್ರಶ್ನೆ 2 – ಸ್ಟೇಷನ್ ಬೇಲ್‍ಗೆ ಮುನ್ನ ಪೊಲೀಸರು ನಿಮ್ಮ ಗಮನಕ್ಕೆ ತಂದಿರಲಿಲ್ವಾ?
ಪಬ್ಲಿಕ್ ಪ್ರಶ್ನೆ 3 – ಆಯುಕ್ತರ ವರದಿ ಕೇಳಿದ್ದೇನೆ ಎಂದಿದ್ರಿ? ವರದಿ ಬಂತಾ, ಇಲ್ವಾ?
ಪಬ್ಲಿಕ್ ಪ್ರಶ್ನೆ 4 – ಯಾರ ರಕ್ಷಣೆಗೆ ನಿಂತಿದ್ದೀರಿ? ಯಾರ ಹಿತಾಸಕ್ತಿ ಕಾಪಾಡುತ್ತಿದ್ದೀರಿ?
ಪಬ್ಲಿಕ್ ಪ್ರಶ್ನೆ 5 – ಬೀದರ್ ಮತ್ತು ಮೈಸೂರು ಪ್ರಕರಣದಲ್ಲಿ ವೀರಾವೇಶ ತೋರಿಸಿದ್ರಿ, ಈಗ್ಯಾಕೆ ಮೌನ?
ಹುಬ್ಬಳ್ಳಿ ಕೆಎಲ್‍ಇ ಪ್ರಕರಣ ವಿಧಾನಪರಿಷತ್ ಕಲಾಪದಲ್ಲಿಯೂ ಪ್ರತಿಧ್ವನಿಸಿದೆ. ದೇಶದ್ರೋಹಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಯಾಕೆ? ಪೊಲೀಸರ ಮೇಲೆ ಒತ್ತಡ ಹೇರಿದವರು ಯಾರು? ಎಂದು ಜೆಡಿಎಸ್‍ನ ಬಸವರಾಜ ಹೊರಟ್ಟಿ ಪ್ರಶ್ನೆ ಮಾಡಿದರು. ಸಮಗ್ರ ತನಿಖೆಗೆ ಆಗ್ರಹಿಸಿದರು. ಇದಕ್ಕೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರು ದನಿಗೂಡಿಸಿ, ಇಲ್ಲಿ ಪಾಕಿಸ್ತಾನ ಪರ ಕೆಲಸ ಆಗಿದೆ. ನಮ್ಮ ದೇಶಕ್ಕೆ ದ್ರೋಹವಾಗಿದೆ. ಇದರ ಹಿಂದಿನ ಹುನ್ನಾರ ಏನು ಎಂದು ಪ್ರಶ್ನಿಸಿದರು. ಕೂಡಲೇ ಪೊಲೀಸ್ ಕಮೀಷನರ್ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಬಳಿಕ ಸ್ಪಷ್ಟನೆ ಕೊಟ್ಟ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ದೇಶದ್ರೋಹಿಗಳನ್ನು ಸರ್ಕಾರ ಬಿಡುವ ಮಾತಿಲ್ಲ. ಅನಗತ್ಯವಾಗಿ ಬೇರೆ ಪ್ರಕರಣ ಪ್ರಸ್ತಾಪಿಸಿ ಪೊಲೀಸರ ಮೇಲೆ ಬೊಟ್ಟು ಮಾಡುವುದನ್ನು ಬಿಡಿ ಎಂದರು. ಆಗ ವಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಈ ವೇಳೆ ಮಾತಿನ ಚಕಮಕಿ ನಡೀತು. ಆಡಳಿತ ಪಕ್ಷದ ವಿರೋಧದ ನಡೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಅಂತ ಕಾಂಗ್ರೆಸ್ ನಿಲುವಳಿ ಮಂಡಿಸಿತು. ಇತ್ತ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ, ಪೊಲೀಸರನ್ನು ದೇವದಾಸಿಯರಿಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡರು.
ನವದೆಹಲಿ: ಧರ್ಮನಿಂದನೆ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಹಿಂದೂ ಡಾಕ್ಟರ್ ಒಬ್ಬರನ್ನು ಅರೆಸ್ಟ್ ಮಾಡಲಾಗಿದೆ.
ಈ ಘಟನೆ ಹಿಂದೂಗಳೇ ಹೆಚ್ಚಾಗಿ ವಾಸ ಮಾಡುವ ಪಾಕಿಸ್ತಾನದ ದಕ್ಷಿಣ ಸಿಂಧು ಪ್ರಾಂತ್ಯದಲ್ಲಿ ನಡೆದಿದ್ದು, ಬಂಧನಕ್ಕೊಳಪಟ್ಟ ಹಿಂದೂ ಪಶು ವೈದ್ಯನನ್ನು ರಮೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಸ್ಥಳೀಯ ಮಸೀದಿಯೊಂದರ ಮುಖ್ಯಸ್ಥ ಮೌಲ್ವಿ ಇಶಾಕ್ ನೂಹಿ, ಪಶು ವೈದ್ಯ ರಮೇಶ್ ತಮ್ಮ ಧರ್ಮದ ಪವಿತ್ರ ಪುಸ್ತಕದ ಹಾಳೆಯನ್ನು ಹರಿದು ಅದರಲ್ಲಿ ಔಷಧಿಗಳನ್ನು ಸುತ್ತಿ ಜನರಿಗೆ ನೀಡಿದ್ದಾರೆ. ಈ ಮೂಲಕ ನಮ್ಮ ಧರ್ಮದ ನಿಂದನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನ ಅನ್ವಯ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಈ ವಿಚಾರ ತಿಳಿದು ಕೋಪಗೊಂಡ ಮುಸ್ಲಿಮರು ಸಿಂಧು ಪ್ರಾಂತ್ಯದಲ್ಲಿರುವ ಹಿಂದೂ ಧರ್ಮದವರ ಅಂಗಂಡಿಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ಸಂಬಂಧ ಈಗ ಸಿಂಧು ಪ್ರಾಂತ್ಯದಲ್ಲಿ ಉದ್ವಿಗ್ನ ಪರಿಸ್ಥತಿ ಉಂಟಾಗಿದೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ ಅಹಿದ್ ಹುಸೇನ್ ಲೆಘಾರಿ, ಮೌಲ್ವಿ ನೂಹಿ ಅವರು ನೀಡಿದ್ದ ದೂರಿನ ಅನ್ವಯ ರಮೇಶ್ ಕುಮಾರ್ ಎಂಬ ಪಶು ವೈದ್ಯರನ್ನು ಬಂಧಿಸಲಾಗಿದೆ. ನಗರದಲ್ಲಿ ಅಶಾಂತಿ ಉಂಟಾದ ಕಾರಣ ಅವರನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಈ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ಮಾಡಿ ಕ್ರಮಕೈಗೊಳ್ಳಲಾಗುತ್ತೆದೆ ಎಂದು ಹೇಳಿದ್ದಾರೆ.
ಪಾಕ್‍ನ ಸಿಂಧು ಪ್ರಾಂತ್ಯದಲ್ಲಿ ಅಪಾರ ಸಂಖ್ಯೆಯ ಹಿಂದೂ ಧರ್ಮದವರು ವಾಸಮಾಡುತ್ತಿದ್ದು, ನಮ್ಮ ಮೇಲೆ ಮುಸ್ಲಿಂ ಸಮುದಾಯದವರು ವೈಯಕ್ತಿಕ ದ್ವೇಷವನ್ನು ಇಟ್ಟಿಕೊಂಡಿದ್ದಾರೆ. ಈ ದ್ವೇಷದ ಪ್ರತೀಕಾರವನ್ನು ತೀರಿಸಿಕೊಳ್ಳಲು ಧರ್ಮನಿಂಧನೆ ಮಾಡಿದ್ದೇವೆ ಎಂದು ಆರೋಪ ಮಾಡಿ ನಮ್ಮನ್ನು ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಪಾಕ್‍ನಲ್ಲಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.
ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸವಿದ್ದಾರೆ. ಇದರಲ್ಲಿ 1987 ರಿಂದ 2016 ವರೆಗೆ ಸುಮಾರು 1,472 ಹಿಂದೂಗಳನ್ನು ಧರ್ಮನಿಂದನೆಯ ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗಿದೆ ಎಂದು ಲಾಹೋರ್ ನ ವಕೀಲರ ಸಂಘವೊಂದು ಅಂಕಿಅಂಶಗಳನ್ನು ಬಿಡುಗಡೆ ಮಾಡಿತ್ತು.