Tag: bommanahalli police

  • ಶಾಪಿಂಗ್‌ ವಿಚಾರಕ್ಕೆ ಗಲಾಟೆ; ಪತ್ನಿ ಕುತ್ತಿಗೆ ತುಳಿದು ಕೊಲೆ – ಮಗಳ ಸನ್ನೆಯಿಂದ ಆರೋಪಿ ಲಾಕ್!

    ಶಾಪಿಂಗ್‌ ವಿಚಾರಕ್ಕೆ ಗಲಾಟೆ; ಪತ್ನಿ ಕುತ್ತಿಗೆ ತುಳಿದು ಕೊಲೆ – ಮಗಳ ಸನ್ನೆಯಿಂದ ಆರೋಪಿ ಲಾಕ್!

    ಬೆಂಗಳೂರು: ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆ ಇದೆ. ಆದರೆ ಇಲ್ಲೊಂದು ದಂಪತಿಯ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಹೌದು, ಪತ್ನಿ ಶಾಪಿಂಗ್ ಹೋಗಿದ್ದಕ್ಕೆ ಆಕೆಯ ಕುತ್ತಿಗೆಗೆ ಕಾಲಿನಿಂದ ತುಳಿದು ಪತಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಬೊಮ್ಮನಹಳ್ಳಿಯಲ್ಲಿ ನಡೆದಿದೆ.

    ಶ್ರೀನಿವಾಸಪುರ ಮೂಲದ ಪದ್ಮಜಾ (29) ಕೊಲೆಯಾದ ಪತ್ನಿ. ಪತಿ ಹರೀಶ್ ಕೊಲೆ ಮಾಡಿದ ಆರೋಪಿ. ಬಿಇ ವ್ಯಾಸಾಂಗ ಮುಗಿಸಿದ್ದ ದಂಪತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಇದನ್ನೂ ಓದಿ: ಶಾಲೆಯಲ್ಲಿ ಪಾಠ ಕೇಳುವಾಗಲೇ ಹೃದಯಾಘಾತ – 4ನೇ ತರಗತಿ ವಿದ್ಯಾರ್ಥಿ ಸಾವು

    ಕೆಲ ತಿಂಗಳಿಂದ ಆರೋಪಿ ಹರೀಶ್ ಕೆಲಸ ಬಿಟ್ಟಿದ್ದ. ಅಲ್ಲದೇ ಪತ್ನಿಯ ಜೊತೆ ಸಾಂಸಾರಿಕ ಜೀವನ ನಡೆಸದೆ ಪ್ರತಿದಿನ ಗಲಾಟೆ ಮಾಡ್ತಿದ್ದ. ಜೂ. 7ರಂದು ಪದ್ಮಜಾ, ಶಾಪಿಂಗ್ ಹೋಗಿದ್ದ ವಿಚಾರವಾಗಿ ಹರೀಶ್ ಮನೆಯಲ್ಲಿ ಗಲಾಟೆ ತೆಗೆದಿದ್ದ. ಗಲಾಟೆ ವೇಳೆ ಪತ್ನಿಯ ಕುತ್ತಿಗೆ ಹಿಸುಕಿ ಹಲ್ಲೆ ಮಾಡಿದ ಬಳಿಕ ನೆಲಕ್ಕೆ ಬೀಳಿಸಿ ಪದ್ಮಜಾ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ್ದ. ಇದನ್ನೂ ಓದಿ: ಮನೆಯಲ್ಲಿ ಪ್ರೀತಿಗೆ ನಿರಾಕರಣೆ; ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನ – ಅಪ್ರಾಪ್ತೆ ಸಾವು

    ಇದಾದ ಬಳಿಕ ಜು. 7ರಂದು ರಾತ್ರಿ ಸಹಜ ಸಾವಾಗಿದೆ ಎಂದು ಬೊಮ್ಮನಹಳ್ಳಿ ಪೊಲೀಸರು ಕರೆ ಬಂದಿತ್ತು. ವಿಚಾರ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರ ವಿಚಾರಣೆ ನಡೆಸಿದ್ದರು. ಈ ವೇಳೆ ಸ್ಥಳೀಯರು, ಗಂಡ ಹೆಂಡತಿ ನಡುವೆ ತಡರಾತ್ರಿ ಜಗಳ ಆಗಿದ್ದ ಬಗ್ಗೆ ತಿಳಿಸಿದ್ದರು. ಇದನ್ನೂ ಓದಿ: ಡಿಕೆ ಬ್ರದರ್ಸ್ ಹೆಸ್ರಲ್ಲಿ ವಂಚನೆ ಕೇಸ್; ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದ `ಬಂಗಾರಿ’ ಗೌಡ!

    ಆದರೆ ಪ್ರಜ್ಞೆ ತಪ್ಪಿ ನನ್ನ ಹೆಂಡತಿ ಸಾವನ್ನಪ್ಪಿದ್ದಾಳೆ ಎಂದು ಹರೀಶ್ ಪೊಲೀಸರ ಬಳಿ ಹೇಳಿದ್ದ. ಆದರೆ ಪೊಲೀಸರಿಗೆ ಹರೀಶ್‌ನ ನಡವಳಿಕೆ ಮೇಲೆ ಸಾಕಷ್ಟು ಅನುಮಾನ ಮೂಡಿತ್ತು. ಕೊಲೆಯಾದ ಮೇಲೆ ಹರೀಶ್ ಅಂಬುಲೆನ್ಸ್‌ಗೆ ಕರೆ ಮಾಡಿ, ಮೃತ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಅದಾಗಲೇ ಮೃತಪಟ್ಟಿರುವ ಬಗ್ಗೆ ವೈದ್ಯರು ಧೃಡಪಡಿಸಿದ್ದರು. ಇದನ್ನೂ ಓದಿ: ಕಳ್ಳ ಸಂಬಂಧ ಆರೋಪ – ಯುವಕನನ್ನ ಥಳಿಸಿ ಚಿಕ್ಕಮ್ಮನೊಂದಿಗೆ ಮದುವೆ ಮಾಡಿಸಿದ ಗ್ಯಾಂಗ್‌

    ಇವರಿಬ್ಬರ ಜಗಳವನ್ನು ಮಗಳು ನೋಡಿದ್ದಳು. ವಿಚಾರಣೆ ವೇಳೆ ಬಾಲಕಿ ನೀಡಿದ ಸನ್ನೆಯಿಂದ ಅನುಮಾನಗೊಂಡ ಪೊಲೀಸರು ಪತಿ ಹರೀಶ್‌ನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಹರೀಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಶಾಸಕ ಸತೀಶ್ ರೆಡ್ಡಿ ಕೊಲೆಗೆ 2 ಕೋಟಿ ಸುಪಾರಿ – ಇಬ್ಬರು ಅರೆಸ್ಟ್, ವಿಲ್ಸನ್ ಗಾರ್ಡನ್ ನಾಗ ಪರಾರಿ

    ಶಾಸಕ ಸತೀಶ್ ರೆಡ್ಡಿ ಕೊಲೆಗೆ 2 ಕೋಟಿ ಸುಪಾರಿ – ಇಬ್ಬರು ಅರೆಸ್ಟ್, ವಿಲ್ಸನ್ ಗಾರ್ಡನ್ ನಾಗ ಪರಾರಿ

    ಬೆಂಗಳೂರು: ಬಿಜೆಪಿ (BJP) ಶಾಸಕ ಮತ್ತು ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ (Satish Reddy) ಕೊಲೆಗೆ 2 ಕೋಟಿ ರೂ. ಸುಪಾರಿ ನೀಡಿರುವ ಆರೋಪದಲ್ಲಿ ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸರು (Bommanahalli Police) ಹೊಳಲ್ಕೆರೆಯಲ್ಲಿ ಬಂಧಿಸಿದ್ದಾರೆ.

    ಆಕಾಶ್, ಗಗನ್ ಬಂಧಿತ ಆರೋಪಿಗಳು. ಬಂಧಿತರನ್ನು ಕಸ್ಟಡಿಗೆ ಪಡೆದುಕೊಂಡು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯ ಆರೋಪಿ (ಎ1) ವಿಲ್ಸನ್ ಗಾರ್ಡನ್ ನಾಗ (Wilson Garden Naga) ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:
    ಶಾಸಕರ ಪಿಎ ಹರೀಶ್ ಬಾಬು ಅವರಿಗೆ ಫೆ.11 ರಂದು ಬೊಮ್ಮನಹಳ್ಳಿ ನಿವಾಸಿ ಚಂದ್ರು ಎಂಬುವವರು ಕರೆ ಮಾಡಿ, ಶಾಸಕ ಸತೀಶ್ ರೆಡ್ಡಿ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎಂದು ತಿಳಿಸಿದ್ದ. ಚಂದ್ರುಗೆ ಭೈರೇಶ್ ಎಂಬುವನು ಫೋನ್ ಮಾಡಿ ವಿಚಾರ ತಿಳಿಸಿದ್ದಾಗಿ ಹರೀಶ್ ಬಾಬು ಬಳಿ ಹೇಳಿದ್ದ. ಭೈರೇಶ್‍ಗೆ ಆತನ ಸ್ನೇಹಿತ ಹೊಳಲ್ಕೆರೆಯ ಆಕಾಶ್ ವಿಚಾರ ತಿಳಿಸಿದ್ದಾಗಿ ಹೇಳಿದ್ದ.

    ಶಾಸಕರನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾಗಿ ಹೊಳಲ್ಕೆರೆಯ ಆಕಾಶ್, ಭೈರೇಶ್‍ಗೆ ಹೇಳಿದ್ದ. ಭೈರೇಶ್ ಈ ವಿಚಾರ ಚಂದ್ರುಗೆ ಹೇಳಿದ್ದ. ಚಂದ್ರು ಈ ವಿಚಾರವನ್ನ ಶಾಸಕರ ಪಿಎ ಹರೀಶ್ ಬಾಬುಗೆ ಹೇಳಿದ್ದ. ವಿಲ್ಸನ್ ಗಾರ್ಡನ್ ನಾಗ ಎರಡು ಕೋಟಿ ರೂ.ಗೆ ಸುಪಾರಿ ಪಡೆದಿದ್ದಾನೆ. ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಚಂದ್ರು ತಿಳಿಸಿದ್ದ. ಈ ವಿಚಾರ ತಿಳಿದು ಹರೀಶ್ ಬಾಬು ಬೊಮ್ಮನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು.

    ಘಟನೆಗೆ ಸಂಬಂಧಿಸಿದಂತೆ ಮೊದಲು ಎನ್‍ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದ ಪೊಲೀಸರು, ನಂತರ ಕೋರ್ಟ್‍ನಿಂದ ಒಪ್ಪಿಗೆ ಪಡೆದು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವೇಳೆ 2 ಕೋಟಿ ರೂ. ಹಣಕ್ಕೆ ಡೀಲ್ ನೀಡಲಾಗಿದೆ. ಕೊಲೆ ಮಾಡಲು ಸುಪಾರಿ ಪಡೆದಿದ್ದು ವಿಲ್ಸನ್ ಗಾರ್ಡ್‍ನ ನಾಗ ಎನ್ನುವುದು ಫೋಟೋ ಮುಖಾಂತರ ಬೆಳಕಿಗೆ ಬಂದಿದೆ. ಸದ್ಯ ತಮಿಳುನಾಡಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಆಶ್ರಯ ಪಡೆದುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕುಟುಂಬ ಸಮೇತ ರಾಜ್ಯಪಾಲ ಗೆಹ್ಲೋಟ್‌ ಧರ್ಮಸ್ಥಳಕ್ಕೆ ಭೇಟಿ

    ಈ ಹಿಂದೆ ಶಾಸಕ ಸತೀಶ್ ರೆಡ್ಡಿ ನಿವಾಸದ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಐಷಾರಾಮಿ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಫಾರ್ಚೂನರ್ ಕಾರು ಹಾಗೂ ಮಹೀಂದ್ರಾ ಥಾರ್ ಜೀಪ್‍ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ರಾಜ್ಯ ರಾಜಕೀಯದಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೇ ದಿನಗಳಲ್ಲಿ ಆರೋಪಿಗಳ ಬಂಧನ ಆಗಿತ್ತು. ನಾಲ್ವರು ದುಷ್ಕರ್ಮಿಗಳು ಪೆಟ್ರೋಲ್ ಕ್ಯಾನ್ ತಂದು ಎರಡು ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಸಿದ್ದು ಪ್ರಚಾರಕ್ಕೆ ಕೋಲಾರದಲ್ಲಿ ವಾರ್‌ ರೂಂ ಓಪನ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಖ್ಯಾತ ಕಳ್ಳರ ಬಂಧನ: 40 ಲಕ್ಷ ಮೌಲ್ಯದ 6 ವಾಹನ, 50 ಗ್ರಾಂ ಚಿನ್ನಾಭರಣ ವಶ

    ಕುಖ್ಯಾತ ಕಳ್ಳರ ಬಂಧನ: 40 ಲಕ್ಷ ಮೌಲ್ಯದ 6 ವಾಹನ, 50 ಗ್ರಾಂ ಚಿನ್ನಾಭರಣ ವಶ

    ಬೆಂಗಳೂರು: ತಮಿಳುನಾಡಿನ ವೆಲಂಕಣಿಯಲ್ಲಿ ಮೂವರು ಕುಖ್ಯಾತ ಕಳ್ಳರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಜಯಪ್ರಕಾಶ್ ಅಲಿಯಾಸ್ ಜೆ.ಪಿ, ಸುಜಯ್, ಅಲೆಕ್ಸ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 40 ಲಕ್ಷ ಮೌಲ್ಯದ ಆರು ವಾಹನ ಹಾಗೂ 50 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಂಧಿತ ಕಳ್ಳರನ್ನು ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದಾಗ ಮತ್ತೊಂದು ಕಳ್ಳತನ ಕೃತ್ಯ ಎಸಗಿರೋ ಬಗ್ಗೆ ಬಯಲಾಗಿದೆ. ತಮಿಳುನಾಡಿನ ವೆಲಂಕಣಿ ಚರ್ಚ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮತ್ತು ಚಿನ್ನಾಭರಣ ಕಳವು ಮಾಡಿರೋ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯ ಚರ್ಚ್ ನಲ್ಲಿ ಕಳ್ಳತನ ಮಾಡಿದ್ದ ಅಮೆರಿಕ ಕರೆನ್ಸಿ ಮತ್ತು ಚಿನ್ನಾಭರಣಗಳು ವಶಕ್ಕೆ ಪಡೆದಿದ್ದಾರೆ.

    ಆರೋಪಿಗಳು ಜೈಲಿನಲ್ಲಿ ಪರಿಚಯವಾಗಿ ಕಳ್ಳತನ ದಂಧೆಯಲ್ಲಿ ತೊಡಗಿದ್ದರು. ಆರೋಪಿಗಳ ವಿರುದ್ಧ ರಾಮಮೂರ್ತಿನಗರ, ವಿಲ್ಸನ್ ಗಾರ್ಡನ್, ಚಾಮರಾಜಪೇಟೆ, ಎಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇರಳದ ಅರ್ಥಾಕುಲಂ, ಎಡಪಳ್ಳಿ ಮತ್ತು ತ್ರಿಶೂರ್ ಚರ್ಚ್ ಗಳಲ್ಲಿ ಕೂಡ ಆರೋಪಿಗಳು ತಮ್ಮ ಕೈಚಳಕ ತೋರಿಸಿದ್ದರು.