Tag: Bommai

  • ಹಿಂದೂ ಪದ ಬಗ್ಗೆ ಮಾತನಾಡಿದ್ದು ತಪ್ಪು ಅಂತ ಪ್ರೂವ್‌ ಮಾಡಿದ್ರೆ, ರಾಜಕೀಯ ನಿವೃತ್ತಿ: ಸತೀಶ್ ಜಾರಕಿಹೊಳಿ

    ಹಿಂದೂ ಪದ ಬಗ್ಗೆ ಮಾತನಾಡಿದ್ದು ತಪ್ಪು ಅಂತ ಪ್ರೂವ್‌ ಮಾಡಿದ್ರೆ, ರಾಜಕೀಯ ನಿವೃತ್ತಿ: ಸತೀಶ್ ಜಾರಕಿಹೊಳಿ

    -ಅಶ್ಲೀಲ ಪದ ಅನ್ನೋದು ಡಿಕ್ಷನರಿಯಲ್ಲಿದೆ, ನಾನು ಬರೆದಿದ್ದೀನಾ?
    – ನಾನು ಭಾರತೀಯ ಎಂದ ಸತೀಶ್ ಜಾರಕಿಹೊಳಿ

    ಬೆಳಗಾವಿ: ಹಿಂದೂ ಪದದ ಬಗ್ಗೆ ನಾನು ತಪ್ಪು ಮಾತನಾಡಿದ್ದೇನೆ ಅಂತಾ ಪ್ರೂವ್ ಮಾಡಿದರೆ ಕ್ಷಮೆಯಷ್ಟೇ ಅಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಷ್ಟು ಜನ ನಾವು ಹೇಳಿದ್ದನ್ನು ಅರ್ಥ ಮಾಡಿಕೊಂಡಿದ್ದಾರೆ. ಅಶ್ಲೀಲ ಎಂಬ ಪದದಿಂದ ತಮಗೆ ಬೇಕಾದ ಹಾಗೇ ಓದಿದ್ದಾರೆ. ಹಿಂದೂ ಶಬ್ದ ಪರ್ಷಿಯನ್ ಶಬ್ದ. ದಾಖಲೆ ಇದೆ. ವಿಕಿಪೀಡಿಯಾದಲ್ಲಿ ನೋಡಬಹುದು ಅಂತಾ ಹೇಳಿದ್ದೇನೆ. ಕೆಟ್ಟ ಶಬ್ದ ಬಳಸಿದ್ದು ಡಿಕ್ಷನರಿಯಲ್ಲಿ ಇದೆ. ಆ ಡಿಕ್ಷನರಿ 1963ರಲ್ಲಿ ಪ್ರಿಂಟ್ ಆಗಿದೆ. ನಾನು ಏನು ಹೇಳಿದ್ದೇನೋ, ಇದರ ಬಗ್ಗೆ ಚರ್ಚೆ ಆಗಬೇಕು ಅಂತ ಹೇಳಿದ್ದೇನೆ ಎಂದರು.

    ಹಿಂದೂ ಪದ ಅಶ್ಲೀಲವಾಗಿ ಅಂತಾ ಇದ್ದಿದ್ದು ಆ ಡಿಕ್ಷನರಿಯಲ್ಲಿ ಇದೆ. ಇವರು ತಮಗೆ ಬೇಕಾದ ಹಾಗೇ ಹೇಳಿದರೆ ನಾನು ಹೇಗೆ ಉತ್ತರ ಕೊಡಬೇಕಾಗುತ್ತದೆ. ವಿಕಿಪೀಡಿಯಾದಲ್ಲಿ ಇದ್ದಿದ್ದನ್ನು ಹೇಳಿದ್ದೇನೆ. ಅದನ್ನು ನೋಡಿ ಇಡೀ ರಾಷ್ಟ್ರದಲ್ಲಿ ಮುಂದುವರಿಸಿದ್ದಾರೆ. ವಿಕಿಪೀಡಿಯದಲ್ಲಿ ಯಾರಾದರೂ ಬರೆಯಬೇಕಿದರೂ ಕಮೀಟಿ ಇದೆ. ಹಾಗೇ ಅದನ್ನು ಅಪ್‍ಲೋಡ್ ಮಾಡಬಹುದು. ನಾವು ಯಾರ ಬಗ್ಗೆಯೂ ಮಾತನಾಡಲ್ಲ. ನಿಮ್ಮ ಪ್ಯಾನಲ್ ಡಿಸ್ಕಷನ್‍ಲ್ಲಿ ಚರ್ಚೆ ಮಾಡಬೇಕು. ಯಾರು ಬೇಕಾದರೂ ಬರಲಿ ನನ್ನ ಸ್ಟ್ಯಾಂಡ್ ಏನಿದೆ ಅದನ್ನು ಹೇಳುತ್ತೇನೆ. ಯಾರೂ ಸಹ ನಮ್ಮ ನಿಲುವು ನೋಡೇ ಇಲ್ಲ. ನ್ಯಾಷನಲ್ ಮೀಡಿಯಾದಲ್ಲಿ ಬಂದ ತಕ್ಷಣ ಒಂದ್ ಸ್ಟ್ಯಾಂಡ್ ಆಗಿದೆ. ನಾನು ತಪ್ಪು ಹೇಳೆದ್ದೇನೆ ಅಂತ ಪ್ರೂವ್ ಮಾಡಿದರೆ, ಕ್ಷಮೆ ಅಷ್ಟೇ ಅಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದ ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೆ ಮೊಳಗಿದ `ಮುಂದಿನ ಸಿಎಂ ಸಿದ್ದರಾಮಯ್ಯ’ ಘೋಷಣೆ

    ತಮಗೆ ಬೈದಿದ್ದನ್ನು ತಾವು ನೋಡಿಕೊಂಡಿಲ್ಲ. ಇದರ ಬಗ್ಗೆ ಹೀಗೆ ಹೇಳಿದ್ದೀರಿ ಅದನ್ನು ಚರ್ಚೆ ಮಾಡಿ ಅಂದಿದ್ದೇನೆ. ಡಿಕ್ಷನರಿಯಲ್ಲಿ ಹಿಂದೂ ಪದದ ಅರ್ಥ ಏನು ಅಂತಾ ಇದೆ. ಕೆಟ್ಟ ಶಬ್ದ ಉಪಯೋಗ ಮಾಡಿದ್ದಾರೆ ಎಂದರ್ಥ. ಆ ಡಿಕ್ಷನರಿಯಲ್ಲಿ ಹಿಂದೂ ಪದದ ಅರ್ಥ ಅಶ್ಲೀಲ ಎಂಬುವುದು ಇದೆ. ವಾಜಪೇಯಿಯವರು ಸಹ ಹಿಂದೂ ಪದ ಪರ್ಷಿಯನ್‍ನಿಂದ ಬಂದಿದ್ದು ಅಂತಾ ಹೇಳಿದ್ದಾರೆ. ನಾವು ಯಾವುದೇ ಜಾತಿ ನೋಡಿ ಕೆಲಸ ಮಾಡಲ್ಲ ಎಂದು ಹೇಳಿದರು.

    ನೀವು ಹಿಂದೂನಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಭಾರತೀಯ ಎಂದ ಸತೀಶ್ ಜಾರಕಿಹೊಳಿ ಅವರು, ಪಕ್ಷದ ಬೇರೆ ಇದು ವೈಯಕ್ತಿಕ, ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡಿಲ್ಲ. ಪಕ್ಷಕ್ಕೂ ನನ್ನ ಹೇಳಿಕೆಗೂ ಸಂಬಂಧ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ತಿಂಗಳಿಗೆ 655 ರೂ. ಪಾವತಿಸಿ ಟ್ವಿಟ್ಟರ್ ಬ್ಲೂಟಿಕ್ ಪಡೆದ ಭಾರತದ ಮೊದಲ ಮಹಿಳೆ

    ಸತೀಶ್ ಜಾರಕಿಹೊಳಿ ಅರೆ ಬರೆ ಓದಿಕೊಂಡಿದ್ದಾರೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಅರೆ ಬರೆ ಓದಿಕೊಂಡಿಲ್ಲ. ನಾವು ಹಿಂದೂಗೆ ಎಲ್ಲಿ ಅವಮಾನ ಮಾಡಿದ್ದೀವಿ ಅಂತ ಸಾಬೀತು ಮಾಡಬೇಕು. ಹಲವು ಬಿಜೆಪಿ ನಾಯಕರೇ ಹಿಂದೂ ಪದ ಪರ್ಷಿಯನ್‍ನಿಂದ ಬಂದಿದೆ ಅಂತಾ ಹೇಳಿದ್ದಾರೆ. ಮನುವಾದಿಗಳು ಹಾಗೂ ಸಿಸ್ಟಮ್ ಇದೆ, ವ್ಯವಸ್ಥಿತವಾಗಿ ಇದನ್ನು ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ಹೇಳಿಕೆ ಸುರ್ಜೇವಾಲಾ ಖಂಡನೆ ಮಾಡಿದ್ದಾರೆ. ಅವರು ನಮಗಿಂತ ಹಿರಿಯರು ಆಕ್ಷೇಪ ಮಾಡಲ್ಲ. ನಾವು ಮಾಡಿದ್ದಾದರೂ ಏನು? ನಾವು ಕ್ಷಮೆ ಕೇಳುವ ಪ್ರಶ್ನೆ ಇಲ್ಲ. ಸಿಎಂ ಬೊಮ್ಮಾಯಿ ಬೇಕಾದರೆ ಒಂದು ಕಮಿಟಿ ಮಾಡಲಿ. ಆ ಡಿಕ್ಷನರಿಯಲ್ಲಿ ಹಿಂದೂ ಪದದ ಅಶ್ಲೀಲ ಅಂತ ಬರೆದಿದ್ದಾರೆ, ಆ ಬಗ್ಗೆ ಚರ್ಚೆ ಮಾಡಿ ಅಂತ ಹೇಳಿದ್ದೇನೆ ಎಂದರು.

    1963ರಲ್ಲಿ ಆ ಡಿಕ್ಷನರಿ ಪ್ರಕಟ ಆಗಿದೆ. ಅದನ್ನು ನೋಡಿ. ಯಾವುದೇ ಸಮಾಜದವರಿಗೆ ಬೈದರೆ ಹರ್ಟ್ ಆಗುತ್ತದೆ. ಅಶ್ಲೀಲ ಪದ ಅನ್ನೋದು ಡಿಕ್ಷನರಿಯಲ್ಲಿದೆ. ನಾನು ಬರೆದಿದ್ದೀನಾ? “ಹಿಂದೂ ಪದದ ಅರ್ಥ ಕೆಟ್ಟದಿದೆ ನೋಡಿ ಅದರ ಬಗ್ಗೆ ಚರ್ಚೆ ಮಾಡಿ ಅಂತಾ ಹೇಳಿದ್ದೇನೆ. ನಿಮ್ಮ ಕಡೆ ಏನಾದರೂ ಕರೆಕ್ಟ್ ಇದ್ದರೆ ಮಾಡಿ, ದಾಖಲೆ ಇದ್ದರೆ ಮುಂದುವರಿಸಿ. ಅವರದ್ದೇ ಸರ್ಕಾರ ಇದೆ. ಸಿಎಂ ತನಿಖೆ ಮಾಡಲಿ ಒಂದು ಕಮಿಟಿ ಮಾಡಿ ಸತ್ಯಾಸತ್ಯತೆ ಹೊರಗೆ ಬರುತ್ತದೆ. ಬೇರೆ ಪುಸ್ತಕಗಳಲ್ಲಿ ಉಲ್ಲೇಖ ಇದೆ. ವಿಕಿಪೀಡಿಯಾದಲ್ಲಿ ಇದೆ ಅಂತಾ ಸುರ್ಜೆವಾಲಾರಿಗೂ ತಿಳಿಸಿದ್ದೇನೆ. ನಾನು ಚುನಾವಣೆ ದೃಷ್ಟಿಯಿಂದ ಹೇಳಿದ್ದಲ್ಲ. ಈ ಬಗ್ಗೆ ಸಾಮೂಹಿಕ ಚರ್ಚೆ ಮಾಡಬೇಕು. ನಾಲ್ಕು ಜನ ಚರ್ಚೆ ಮಾಡಿದ್ದನ್ನು ನಾವು ಒಪ್ಪಿಕೊಳ್ಳಲ್ಲ. ಸತ್ಯ ಹೇಳೋದೇ ಅಪರಾಧ. ಎಲ್ಲರಿಗೂ ನ್ಯಾಯ ಕೊಡಿಸುವುದೇ ಅಪರಾಧ ಆಗಿದೆ. ನಾನು ಪರ್ಷಿಯನ್ ಪದ ಅಂತಾ ಹೇಳಿದ್ದು, ಅದರ ಬಗ್ಗೆ ಚರ್ಚೆ ಆಗಬೇಕು ಅಂತ ಹೇಳಿದ್ದೇನೆ. ಅದು ಸತೀಶ್ ಜಾರಕಿಹೊಳಿ ಸಂಶೋಧನೆ ಮಾಡಿ ಬರೆದ ಬುಕ್ ಅಲ್ಲ. ಯಾರು ಚರ್ಚೆಗೆ ಬರುತ್ತಾರೋ ಬರಲಿ, ಚರ್ಚೆಗೆ ನಾನು ಸಿದ್ಧ ಎಂದು ಕಿಡಿಕಾರಿದರು.

    ಯಡಿಯೂರಪ್ಪ, ಬೊಮ್ಮಾಯಿಗೆ ಒಂದು ಕಮಿಟಿ ರಚನೆ ಮಾಡಲು ಹೇಳಿ. ಅದರಲ್ಲಿ ಪ್ರೂವ್ ಆದರೆ ಕ್ಷಮೆ ಅಲ್ಲ, ರಾಜೀನಾಮೆ ಸಹ ನೀಡುತ್ತೇನೆ. ಯಾರು ಬರೆದಿದ್ದಾರೆ ಅವರ ಮೇಲೆ ಕೇಸ್ ಹಾಕಿ ಫೈಟ್ ಮಾಡಬೇಕು. ಇಂತಹ ವಿಷಯಗಳ ಮೇಲೆ ಹಿಂದುತ್ವ ಗಟ್ಟಿ ಮಾಡುವುದು ಬಿಜೆಪಿಯವರ ಉದ್ದೇಶವಾಗಿದೆ. ಬೊಮ್ಮಾಯಿಯವರಿಗೆ ಕಮಿಟಿ ರಚಿಸಿ ಒಂದು ತಿಂಗಳಲ್ಲಿ ವರದಿ ನೀಡಿ ಅಂತ ಹೇಳಿ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಸಿಎಂ ಕ್ರಮಕ್ಕೆ ದಿಂಗಾಲೇಶ್ವರ ಸ್ವಾಮೀಜಿ ತೀವ್ರ ವಿರೋಧ

    ಸಿಎಂ ಕ್ರಮಕ್ಕೆ ದಿಂಗಾಲೇಶ್ವರ ಸ್ವಾಮೀಜಿ ತೀವ್ರ ವಿರೋಧ

    ಗದಗ: ಲಿಂಗೈಕ್ಯ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಜನ್ಮ ದಿನವನ್ನು ಭಾವೈಕ್ಯತಾ ದಿನ ಎಂದು ಘೋಷಿಸಿದ ಸಿಎಂ ಕ್ರಮವನ್ನು ದಿಂಗಾಲೇಶ್ವರ ಸ್ವಾಮೀಜಿ ತೀವ್ರವಾಗಿ ವಿರೋಧಿಸಿದ್ದಾರೆ.

    ಆರ್‍ಎಸ್‍ಎಸ್ ಬಗ್ಗೆ, ಬ್ರಾಹ್ಮಣರ ಬಗ್ಗೆ ಬಾಯಿಗೆ ಬಂದಂತೆ ತೋಂಟದಾರ್ಯ ಶ್ರೀಗಳು ಮಾತನಾಡುತ್ತಿದ್ರು. ಜಾತಿ ಜಾತಿ ನಡ್ವೆ ತಂದಿಡ್ತಾ ಇದ್ರು. ಅಂಥವರ ಹೆಸರಲ್ಲಿ ಭಾವೈಕ್ಯ ದಿನ ಎಂದು ಘೋಷಿಸಿದ್ದು ತಪ್ಪು. ಸಿಎಂ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ. ಇದಕ್ಕೆ ಸಚಿವ ಸಿಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂತಹ ಆರೋಪ ಮಾಡೋದು ಸರಿಯಲ್ಲ. ದಿಂಗಾಲೇಶ್ವರರ ಮಠಕ್ಕೆ ಅನುದಾನ ಕೊಟ್ಟಿಲ್ಲ ಅಂತಾ ಹೀಗೆಲ್ಲಾ ಮಾತಾಡ್ತಾ ಇದ್ದಾರೆ. ನಿಮ್ಮ ಪೂರ್ವಾಶ್ರಮದ ಕತೆ ನಮಗೂ ಗೊತ್ತು. ಮೂರುಸಾವಿರ ಮಠದ ಗದ್ದುಗೆಯನ್ನು ತೋಳ್ಬಲದ ಮೂಲಕ ಏರಲು ನೋಡಿದ್ರಿ.. ನೀವು ಪೀಠದಲ್ಲಿದ್ದೀರಿ ಎಂಬ ಕಾರಣಕ್ಕೆ ಸ್ವಾಮೀಜಿ ಎಂದು ಒಪ್ಪಿದ್ದೀವಿ ಅಷ್ಟೇ ಎಂದು ಸಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ದಿಂಗಾಲೇಶ್ವರ ಶ್ರೀಗಳು ತಿರುಗೇಟು ನೀಡಿದ್ದಾರೆ. ವ್ಯಕ್ತಿ ವಿಚಾರಗಳ ಚರ್ಚೆಗೆ ವೇದಿಕೆ ನಿರ್ಮಾಣವಾಗಲಿ ಎಂದು ಸವಾಲ್ ಹಾಕಿದ್ದಾರೆ.

    ಸ್ವಾಮೀಜಿ ಆರೋಪಕ್ಕೆ ಬಿಜೆಪಿ ಗರಂ: ಮಠಗಳ ಅನುದಾನಕ್ಕೂ 30 ಪರ್ಸೆಂಟ್ ಕಮೀಷನ್ ಕೊಡ್ಬೇಕಿದೆ ಎಂಬ ದಿಂಗಾಲೇಶ್ವರ ಸ್ವಾಮೀಜಿ ಆರೋಪ ಬಗ್ಗೆ ಪರ ವಿರೋಧದ ಮಾತುಗಳು ಕೇಳಿಬರುತ್ತಿವೆ. ಬೊಮ್ಮಾಯಿ ಸರ್ಕಾರದಲ್ಲಿ ಮಠಗಳಿಂದ 30% ಕಮೀಷನ್ ಪಡೆಯೋದು ಸರ್ವೇ ಸಾಮಾನ್ಯ ಆಗಿದೆ. ಕರ್ನಾಟಕ ಭ್ರಷ್ಟಾಚಾರದ ದುರ್ವಾಸನೆ ಎಲ್ಲೆಡೆಯೂ ಹಬ್ಬಿದೆ.. ಮುಖ್ಯಮಂತ್ರಿಗಳು ತನಿಖೆಗೆ ಆದೇಶ ನೀಡದೇ ಪುರಾವೆ ಕೇಳುತ್ತಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

    ಆದರೆ ಸ್ವಾಮೀಜಿ ಹೇಳಿಕೆಗೆ ಬಿಎಸ್‍ವೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಿಸಿ ಪಾಟೀಲರಂತೂ ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಉಡುಪಿಯ ಪಲಿಮಾರು ಶ್ರೀಗಳು, ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಇದರ ಹಿಂದೆ ಬೇರೇನೋ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

  • ಬಿಜೆಪಿ, ಕಾಂಗ್ರೆಸ್‍ನಲ್ಲಿ ಒಬ್ಬೊಬ್ಬರು ಲೋಫರ್‌ಗಳಿದ್ದಾರೆ: ಯತ್ನಾಳ್ ಹೇಳಿಕೆಗೆ ಬೊಮ್ಮಾಯಿ ಪ್ರತಿಕ್ರಿಯೆ

    ಬಿಜೆಪಿ, ಕಾಂಗ್ರೆಸ್‍ನಲ್ಲಿ ಒಬ್ಬೊಬ್ಬರು ಲೋಫರ್‌ಗಳಿದ್ದಾರೆ: ಯತ್ನಾಳ್ ಹೇಳಿಕೆಗೆ ಬೊಮ್ಮಾಯಿ ಪ್ರತಿಕ್ರಿಯೆ

    ಬಾಗಲಕೋಟೆ: ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು, ಮಾಜಿ ಸಚಿವ ಈಶ್ವರಪ್ಪ ಮೇಲಿನ ಆರೋಪ ಪ್ರಕರಣವನ್ನು ಎಲ್ಲ ಆಯಾಮಾದಲ್ಲೂ ತನಿಖೆ ಮಾಡಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರ‍್ಯಾರು ಹತ್ತಿರ ಏನೇನು ಮಾಹಿತಿ ಇದೆ ಅದೆಲ್ಲ ಮಾಹಿತಿ ಕಲೆ ಹಾಕಿ ತನಿಖೆ ಮಾಡಲಾಗುತ್ತದೆ. ಬರುವಂತಹ ದಿನದಲ್ಲಿ ಎಲ್ಲ ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?

    ಇಂದು ಶುಕ್ರವಾರ ಜಿಲ್ಲೆಯ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಪುತ್ರಿಯ ಮದುವೆಗೆ ಆಗಮಿಸಿದ್ದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‍ನಲ್ಲಿ ಒಬ್ಬೊಬ್ಬರು ಲೋಫರ್ ಗಳಿದ್ದಾರೆ. ಅವರಿಂದಲೇ ಈಶ್ವರಪ್ಪ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ

    ಈಗಾಗಲೇ ಆ ಬಗ್ಗೆ ನಿನ್ನೆಯೇ ಹೇಳಿದ್ದೇನೆ. ಈಗ ಹೇಳಿದರೆ ನೀವು ಸುದ್ದಿ ಹಾಕಲ್ಲ ಎಂದು ನಗೆ ಚಟಾಕಿಯನ್ನು ಹಾರಿಸಿದರು. ನಂತರ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಬರುತ್ತಾರೆ. ಆಗ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ನುನುಚಿಕೊಂಡರು.

    ಎಸ್ ಆರ್ ಪಾಟೀಲ್‍ರ ಹೋರಾಟ ಸ್ವಾಗತಾರ್ಹ ಮಾಜಿ ಸಚಿವ ಎಸ್ ಆರ್ ಪಾಟೀಲ್‍ರ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಅವರ ಸರ್ಕಾರ ಇದ್ದಾಗ ಇದನ್ನ ಮಾಡಿದರೆ ಅವರಿಗೆ ಒಳ್ಳೆಯ ಹೆಸರು ಬರ್ತಿತ್ತು. ಎಸ್ ಆರ್ ಪಾಟೀಲ್‍ರವರು ಮಂತ್ರಿ ಆಗಿದ್ದರು. ಐದು ವರ್ಷ ಸರ್ಕಾರ ಇತ್ತು. ನಂತರ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಆಗ ಹೋರಾಟ ಮಾಡಿದರೆ, ಈಗ ಟ್ರ್ಯಾಕ್ಟರ್ ರ್‍ಯಾಲಿ ಮಾಡುವ ಅವಶ್ಯಕತೆ ಇರ್ತಿರಲಿಲ್ಲ ಎಂದು ತಿಳಿಸಿದರು.

     

  • ರಾಜ್ಯ ಬಿಜೆಪಿಯಲ್ಲಿ ಸಂಪುಟ, ನಿಗಮ ಮಂಡಳಿ ಬೇಗುದಿ – ಬಿಎಸ್‍ವೈ ಆಪ್ತರಿಗೆ ಕೊಕ್?

    ರಾಜ್ಯ ಬಿಜೆಪಿಯಲ್ಲಿ ಸಂಪುಟ, ನಿಗಮ ಮಂಡಳಿ ಬೇಗುದಿ – ಬಿಎಸ್‍ವೈ ಆಪ್ತರಿಗೆ ಕೊಕ್?

    ಬೆಂಗಳೂರು: ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಪಟ್ಟದ ಫೈಟ್ ಶುರುವಾದಂತೆ ಕಾಣುತ್ತಿದೆ. ಸಂಪುಟ ಪುನಾರಚನೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.

    ಲಕ್ಷ್ಮಣ ಸವದಿ ದೆಹಲಿಯಲ್ಲಿ ಬೀಡುಬಿಟ್ಟು ಲಾಬಿ ಮಾಡುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾದ ಯತ್ನಾಳ್ ಮತ್ತು ರೇಣುಕಾಚಾರ್ಯ ಸಭೆ ನಡೆಸಿದ್ದಾರೆ. ಇವರು ಮಂತ್ರಿಯಾಗಲಿ ಎಂದು ಇಬ್ಬರು ಪರಸ್ಪರ ಹಾರೈಸಿಕೊಂಡಿದ್ದಾರೆ. ಈ ಕೂಡಲೇ ಸಂಪುಟ ಪುನಾರಚನೆಯಾಗಬೇಕು ಸ್ವಾರ್ಥಕ್ಕೆ ಸಂಪುಟದಲ್ಲಿರುವವರನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅಂಬುಲೆನ್ಸ್‌ಗೆ ದಾರಿ ಬಿಡದೇ ಪುಂಡಾಟ – ಕಾರು ಚಾಲಕ ಬಂಧನ

    ಮಾರ್ಚ್ ನಂತರ ಸಂಪುಟ ಪುನಾರಚನೆ ಆದರೆ ಪ್ರಯೋಜನವಿಲ್ಲ. ಡಿಕೆಶಿ ವೇಗಕ್ಕೆ ತಡೆಹಾಕುವ ಬಗ್ಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಅಗತ್ಯ ಬಿದ್ದರೆ ಹೈಕಮಾಂಡ್ ಭೇಟಿ ಆಗುವುದಾಗಿಯೂ ರೇಣುಕಾಚಾರ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ಅತ್ಯಾಚಾರ ಆರೋಪಿ ಸೇರಿ 10 ಶಾಸಕರನ್ನು ಪಟ್ಟಿಯಿಂದ ಕೈಬಿಟ್ಟ ಬಿಜೆಪಿ

    ಈ ಮಧ್ಯೆ ಬಿಎಸ್‍ವೈ ಆಪ್ತರನ್ನು ನಿಗಮಮಂಡಳಿಗಳಿಂದ ತೆಗೆದು ಹೊಸಬರಿಗೆ ನೀಡಲು ಬಿಜೆಪಿ ಪ್ರಯತ್ನ ನಡೆಸಿದೆ. ಆದರೆ ಇದಕ್ಕೆ ಬಿಎಸ್‍ವೈ ಒಪ್ಪಿಲ್ಲ ಎನ್ನಲಾಗಿದೆ. ಬಿಎಸ್‍ವೈ ಒಪ್ಪಿಸುವ ಬಗ್ಗೆ ಬೊಮ್ಮಾಯಿ ಜೊತೆ ನಿನ್ನೆ ತಡರಾತ್ರಿವರೆಗೂ ನಳಿನ್ ಕುಮಾರ್ ಕಟೀಲ್ ಮತ್ತು ಇತರರು ಚರ್ಚೆ ನಡೆಸಿದ್ದಾರೆ. ಎಲ್ಲಾ ಓಕೆ ಆದರೆ ಮುಂದಿನ ವಾರವೇ ನಿಗಮಮಂಡಳಿಗಳಿಗೆ ಹೊಸಬರ ನೇಮಕ ಆಗಲಿದೆ.

  • ನಾನು ಮುಖ್ಯಮಂತ್ರಿಯಾಗುತ್ತೇನೆಂದು ಎಲ್ಲಿಯೂ ಹೇಳಿಲ್ಲ: ಮುರುಗೇಶ್ ನಿರಾಣಿ

    ನಾನು ಮುಖ್ಯಮಂತ್ರಿಯಾಗುತ್ತೇನೆಂದು ಎಲ್ಲಿಯೂ ಹೇಳಿಲ್ಲ: ಮುರುಗೇಶ್ ನಿರಾಣಿ

    ಬಾಗಲಕೋಟೆ: ನಾನೂ ಮುಖ್ಯಮಂತ್ರಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎನ್ನುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ವದಂತಿಗಳಿಗೆ ತೆರೆ ಎಳೆದಿದ್ದಾರೆ.

    ಶುಕ್ರವಾರ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣ ಪಂಚಾಯತಿ ತೆರೆದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥವಾಗಿದ್ದಾರೆ. ಅವರ ನೇತೃತ್ವದಲ್ಲಿ ಉತ್ತಮ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿವೆ. ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ:  ಹೆಲಿಕಾಪ್ಟರ್ ದುರಂತ ಬಗ್ಗೆ ಊಹಾಪೋಹ ನಿಲ್ಲಿಸಿ: ಐಎಎಫ್

    ಒಂದೂವರೆ ವರ್ಷಗಳ ಕಾಲ ನಾನು ಮಂತ್ರಿಯಾಗಿದ್ದಿಲ್ಲ. ಈಗ ನಮ್ಮ ಪಕ್ಷದ ನಾಯಕರು ಮಂತ್ರಿ ಜವಾಬ್ದಾರಿ ನೀಡಿದ್ದಾರೆ ಅದನ್ನು ನಿಭಾಯಿಸಲು ಕೆಲಸ ಮಾಡುತ್ತಿದ್ದೇನೆ. ನನ್ನ ಬಗ್ಗೆ ಕೆಲವರು ಮಾತನಾಡುತ್ತಾರೆ. ಅದಕ್ಕೆಲ್ಲ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು.

    ಸಮಸ್ತ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜನರಿಗೆ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇವೆ. ಮಠಾಧೀಶರ ಒಕ್ಕೂಟದ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನನ್ನೂ ಯಾರೊಬ್ಬರೂ ಸಭೆಗೆ ಬರುವಂತೆ ಕರೆದಿಲ್ಲ. ಒಕ್ಕೂಟದ ಸಭೆಗೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಪತ್ನಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದ

    ವಿಧಾನ ಪರಿಷತ್ ಚುನಾವಣೆಯಲ್ಲಿ 15 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ವಿಧಾನ ಪರಿಷತ್‍ನಲ್ಲಿ ನಮ್ಮ ಪಕ್ಷ ಸ್ಪಷ್ಟ ಬಹುಮತ ಬರಲಿದೆ. ಬೀಳಗಿ ಮತಕ್ಷೇತ್ರ ಬಿಟ್ಟು ಎಲ್ಲಿಯೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಬೀಳಗಿಯಲ್ಲೇ ನನ್ನ ರಾಜಕೀಯ ಶುರು ಮಾಡಿದ್ದೇನೆ. ಇಲ್ಲಿಯ ಮತದಾರರಿಂದಲೇ ಶಾಸಕನಾಗಿ, ಮಂತ್ರಿಯಾಗಿದ್ದೇನೆ ಎಂದರು.

  • ಕಾಂಗ್ರೆಸ್ ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ಬಿಜೆಪಿಗೆ ಎಲ್ಲಾ ವರ್ಗದವರ ಬೆಂಬಲ: ಸಿಎಂ ಬೊಮ್ಮಾಯಿ

    ಕಾಂಗ್ರೆಸ್ ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ಬಿಜೆಪಿಗೆ ಎಲ್ಲಾ ವರ್ಗದವರ ಬೆಂಬಲ: ಸಿಎಂ ಬೊಮ್ಮಾಯಿ

    ಬೆಳಗಾವಿ: ಕಾಂಗ್ರೆಸ್ ನವರು ಕೆಳಮಟ್ಟದ ಮಾತುಗಳನ್ನಾಡುತ್ತಾ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ವಿಧಾನ ಪರಿಷತ್ ಚುನಾವಣಾ ಹಿನ್ನಲೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

    ತಮ್ಮ ಅಧಿಕಾರಾವಧಿಯಲ್ಲಿ ಸಾಧಿಸಲಾಗದ ಅಭಿವೃದ್ಧಿಯನ್ನು ಮರೆಮಾಚಿ ಈ ಚುನಾವಣೆಯ ವ್ಯಾಖ್ಯಾನವನ್ನೇ ಬದಲಾಯಿಸುವ ಕೆಲಸವನ್ನು ಕಾಂಗ್ರೆಸ್‍ನವರು ಮಾಡುತ್ತಿದ್ದಾರೆ. ಅವರ ಈ ಕೃತ್ಯವನ್ನು ನಾವು ಕಡೆಗಣಿಸಿ ನಮ್ಮ ಪಕ್ಷದ ಸಂಘಟನೆಯನ್ನು ಬಲಪಡಿಸಿ ವಿಧಾನ ಪರಿಷತ್ ಚುನಾವಣೆಯ ಗೆಲುವಿಗಾಗಿ ದುಡಿಯಬೇಕಿದೆ ಎಂದರು. ಇದನ್ನೂ ಓದಿ: ಗುಡ್‌ನ್ಯೂಸ್‌ – ಇಳಿಯಲಿದೆ ಎಲ್‍ಪಿಜಿ ಸಿಲಿಂಡರ್ ತೂಕ

    ಬಿಜೆಪಿ ಸಂಘಟಿತವಾಗಿದೆ
    ಭಾರತೀಯ ಜನತಾ ಪಕ್ಷ ಸಂಘಟಿತವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರು ಹತಾಶರಾಗಿರುವುದು ಅವರ ಭಾಷೆಯಿಂದ ಸ್ಪಷ್ಟವಾಗುತ್ತಿದೆ. ತಮ್ಮ ಸ್ಥಾನ ಹಾಗೂ ಘನತೆಗೆ ತಕ್ಕಂತೆ ಮಾತನಾಡದೇ ಮನಸೋ ಇಚ್ಛೆ ಮಾತನಾಡುತ್ತಾರೆ. ಮನುಷ್ಯ ಹತಾಶರಾಗಿ ನಿರಾಶೆಯಾದಾಗ ಈ ರೀತಿ ಮಾತನಾಡುವುದು ಸಹಜ. ನಮಗೆ ಇಂತಹ ಭಾಷೆಯ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷದ ನಾಯಕರಿಂದ ಯಾವುದೇ ಸರ್ಟಿಫಿಕೇಟ್ ಬೇಕಾಗಿಲ್ಲ. ನಮಗೆ ಸರ್ಟಿಫಿಕೇಟ್ ಕೊಡುವವರು ಬೆಳಗಾವಿಯ ಮಹಾಜನತೆ. ನಮಗೆ ಪ್ರೀತಿ ವಿಶ್ವಾಸವನ್ನು ತೋರುವ ಜೊತೆಗೆ ನಮ್ಮಿಂದ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ. ಬಿಜೆಪಿ ಪಕ್ಷ ಅವರ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂಬ ವಿಶ್ವಾಸ ಅವರಿಗಿದೆ ಎಂದರು. ಇದನ್ನೂ ಓದಿ: ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ

    ತಳಹಂತದಲ್ಲಿ ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಜನರು ಪಕ್ಷದ ಪರವಾಗಿದ್ದಾರೆ ಎನ್ನುವುದಕ್ಕೆ ಮಹಂತೇಶ್ ಕವಟಗಿಮಠ ಅವರು ಅಧಿಕ ಮತಗಳ ಅಂತರದಿಂದ ಗೆಲ್ಲಬೇಕು. ಇದು ಮುಂದೆ ನಡೆಯುವ ಜಿಲ್ಲಾ ಪಂಚಾಯತ್, ತಾಲೂಕು  ಪಂಚಾಯತ್‍ಗಳ ಪದಾಧಿಕಾರಿಗಳ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದರು.

    ಎಲ್ಲ ವರ್ಗದವರ ಬೆಂಬಲವಿದೆ:
    ಶಾಸಕರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿಯೂ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದು ಸರ್ವಸ್ವತಂತ್ರವಾಗಿ ಆಡಳಿತ ಮಾಡುತ್ತಿದ್ದೇವೆ. ಸಮಾಜದ ಎಲ್ಲಾ ವರ್ಗದ ಜನ, ಎಲ್ಲ ಭಾಷಿಕರು ಭಾಜಪ ಕ್ಕೆ ಬೆಂಬಲ ನೀಡುತ್ತಿರುವುದು ಗಮನಾರ್ಹ. ಈಗ ನಡೆಯುತ್ತಿರುವ ಚುನಾವಣೆ ಚುನಾಯಿತರಾಗಿರುವವರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆ. ಪದಾಧಿಕಾರಿಗಳ ಶ್ರಮದಿಂದ ಗ್ರಾಮ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಯಲ್ಲಿ ಆಯ್ಕೆಯಾಗಿದ್ದಾರೆ. ನಿಮ್ಮ ಸಂಪರ್ಕದಲ್ಲಿರುತ್ತಾರೆ. ನೀವು ಅವರ ಮನಸ್ಸನ್ನು ಗೆದ್ದು ಭಾರತೀಯ ಜನತಾ ಪಕ್ಷ ಅಭ್ಯರ್ಥಿಯಾದ ಮಹಂತೇಶ ಕವಟಗಿಮಠ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತವನ್ನು ಕೊಡಿಸಿ ಆರಿಸಬೇಕು ಎಂದು ಮನವಿ ಮಾಡಿದರು.

    ಶಾಸಕರು ಪಂಚಾಯಿತಿಯ ನಿಟಕ ಸಂಪರ್ಕದಲ್ಲಿರುವವರು, ಅದರ ಅಭಿವೃದ್ಧಿಗೆ ಸತತ ಪ್ರಯತ್ನ ಮಾಡುವವರು ನಿಮ್ಮ ಸಂಪರ್ಕದಲ್ಲಿ ಎಲ್ಲಾ ಸದಸ್ಯರಿರುತ್ತಾರೆ. ಯಾವುದೇ ಪಕ್ಷದಿಂದ ಆಯ್ಕೆಯಾಗಿದ್ದರೂ, ನಿಮ್ಮ ಪ್ರಭಾವ ಎಲ್ಲ ಸದಸ್ಯರ ಮೇಲೂ ಇರುತ್ತದೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

    ಬೆಳಗಾವಿ ದೊಡ್ಡ ಬಲ ನೀಡಿದೆ
    ಬೆಳಗಾವಿ ಬಹಳ ವಿಶೇಷ ಹಾಗೂ ಮುಖ್ಯವಾದ ಜಿಲ್ಲೆ. ಬೆಳಗಾವಿ ಎಲ್ಲಾ ಸಂದರ್ಭಗಳಲ್ಲಿಯೂ ಬಿಜೆಪಿಗೆ ದೊಡ್ಡ ಬಲವನ್ನು ಕೊಟ್ಟಿದೆ. ಅತಿ ಹೆಚ್ಚು ಶಾಸಕರನ್ನು ಕರ್ನಾಟಕದಲ್ಲಿ ಬೆಳಗಾವಿಯಿಂದ ಆಯ್ಕೆಯಾಗಿದ್ದಾರೆ. ನಮ್ಮ ವಿರೋಧ ಪಕ್ಷದಲ್ಲಿ ಇರುವವರ ಅತಿ ಹೆಚ್ಚಿನ ಕೊಡುಗೆಯೂ ಬೆಳಗಾವಿ ಜಿಲ್ಲೆಯಿಂದ ಬಂದಿದೆ. ರಾಜ್ಯ ಸಭಾ ಸದಸ್ಯರು, ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯನ್ನೇ ಜನ ಆಯ್ಕೆ ಮಾಡಿದ್ದಾರೆ. ವಿಜಯದ ಪರಂಪರೆ ಬೆಳಗಾವಿಯಲ್ಲಿ ಭಾಜಪಕ್ಕೆ ಸದಾ ಕಾಲವಿದ್ದು, ಅದಕ್ಕೆ ಕಾರಣೀಭೂತರು ಬೆಳಗಾವಿಯ ಮಹಾಜನತೆ ಹಾಗೂ ನಮ್ಮೆಲ್ಲಾ ಕಾರ್ಯಕರ್ತರು ಮತ್ತು ಪದಾಧಿಕಾರಿ ಬಂಧುಗಳು ಎಂದರು.

  • ಭಾರತೀಯ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿ: ಬೊಮ್ಮಾಯಿ

    ಭಾರತೀಯ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿ: ಬೊಮ್ಮಾಯಿ

    ಹುಬ್ಬಳ್ಳಿ: ಭಾರತೀಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಜಿಲ್ಲೆಯ ಪ್ರವಾಸ ಕೈಗೊಂಡಿರುವ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನೂತನ ಶಿಕ್ಷಣ ನೀತಿ ಕುರಿತು ಶಿಕ್ಷಣ ತಜ್ಞರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಲಯದ ಮೂರು ವರ್ಷಗಳ ಕಾಲ ಚರ್ಚಿಸಿ ಸಮಗ್ರವಾಗಿ ರೂಪಿಸಲಾಗಿದೆ. 21 ಶತಮಾನಕ್ಕೆ ತಕ್ಕಂತೆ, ದೇಶದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟದ ಪೈಪೋಟಿಗೆ ಸಿದ್ದಪಡಿಸುವುದು, ಕೌಶಲ್ಯವನ್ನು ಹೆಚ್ಚಿಸವುದು ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗದಗಿಗೆ ಸಿಎಂ ಬಾರ್ತಾರೆಂದು ತರಾತುರಿಯಲ್ಲಿ ರಸ್ತೆ ದುರಸ್ತಿ

    ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಪ್ರಯತ್ನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೈಗೊಂಡಿದ್ದಾರೆ. ಭಾರತೀಯರಿಂದ ಭಾರತೀಯ ಮಕ್ಕಳಿಗಾಗಿ ರೂಪಿಸಿರುವ ಶಿಕ್ಷಣ ವ್ಯವಸ್ಥೆ ಇದಾಗಿದೆ ಎಂದರು.

    ಕೋವಿಡ್ ಲಾಕ್‍ಡೌನ್ ತೆರವಿನ ನಂತರ, ಜನರು ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ವ್ಯಾಪಾರ ವಹಿವಾಟುಗಳು ಸಹಜವಾಗಿ ನಡೆಯುತ್ತಿವೆ ಈ ಸಂದರ್ಭದಲ್ಲಿ ಬಂದ್ ಕರೆ ನೀಡುವುದು ಸರಿಯಲ್ಲ. ಪಂಚಮಸಾಲಿ ಮೀಸಲಾತಿಗೆ ಕುರಿತು ಸದನದಲ್ಲಿ ಉತ್ತರಿಸಿದ್ದೇನೆ ಎಂದರು.

    ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಬೃಹತ್ ಮಧ್ಯಮ ಕೈಗಾರಿಕೆ ಸಚಿವ ಮುರಗೇಶ್ ನಿರಾಣಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಆಯುಕ್ತ ಲಾಭುರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಡಿಸ್ಚಾರ್ಜ್ ಬಳಿಕವೂ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಉಚಿತ ಚಿಕಿತ್ಸೆ: ಬಸವರಾಜ್ ಬೊಮ್ಮಾಯಿ

    ಡಿಸ್ಚಾರ್ಜ್ ಬಳಿಕವೂ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಉಚಿತ ಚಿಕಿತ್ಸೆ: ಬಸವರಾಜ್ ಬೊಮ್ಮಾಯಿ

    ಬೆಂಗಳೂರು: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕವು ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿರುವವರಿಗೆ ರಾಜ್ಯ ಸರ್ಕಾರದ ವತಿಯಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ.

    ಬ್ಲ್ಯಾಕ್ ಫಂಗಸ್ ಚಿಕಿತ್ಸೆಯು ದುಬಾರಿಯಾಗಿದ್ದು, ಪ್ರತಿ ಇಂಜೆಕ್ಷನ್‍ಗೆ 10,000 ದಿಂದ 12,000 ರೂ. ಆಗುತ್ತದೆ. ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕವೂ ನಾಲ್ಕು ವಾರಗಳ ಕಾಲ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ರೋಗಿಗಳ ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬ್ಲ್ಯಾಕ್ ಫಂಗಸ್ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಅವರ ಎಲ್ಲಾ ಖರ್ಚನ್ನು ಸರ್ಕಾರವೇ ವಹಿಸಿಕೊಳ್ಳಲು ನಿರ್ಧರಿಸಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಇದೇ ವೇಳೆ ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆ ಕುರಿತಂತೆ ತಜ್ಞರ ಸಲಹೆ ಪಡೆದಿದ್ದು, ಮಕ್ಕಳ ಆರೋಗ್ಯಕ್ಕಾಗಿಯೇ ಶಿಬಿರಗಳನ್ನು ಸ್ಥಾಪಿಸಲಾಗುವುದು ಹಾಗೂ ಅಪೌಷ್ಟಿಕ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಆಹಾರ ಕಿಟ್‍ಗಳನ್ನು ಒದಗಿಸುತ್ತದೆ. ಅಲ್ಲದೇ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ:ಕೋವಿಡ್ ಕಾಲಘಟ್ಟದಲ್ಲಿ ಹೊಸ ಮನ್ವಂತರ – ಇಂದಿನಿಂದ ರಾಜ್ಯದಲ್ಲಿ ಶಾಲೆ-ಕಾಲೇಜು ಓಪನ್

    ಈಗಾಗಲೇ ಕರ್ನಾಟಕ ಸರ್ಕಾರ ಜಿಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಐಸಿಯು ಬೆಡ್‍ಗಳನ್ನು ಸಿದ್ಧಪಡಿಸಲು ನಿರ್ದೇಶಿಸಿದೆ. ಅಲ್ಲದೇ ವಿಜಯಪುರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 40 ವೆಂಟಿಲೇಟರ್‌ಗಳೊಂದಿಗೆ 120 ಬೆಡ್‍ಗಳ ನಿರ್ಮಿಸಿಲು ಸರ್ಕಾರ 22 ಕೋಟಿ ಹಣವನ್ನು ಬಿಡುಗಡೆಗೊಳಿಸಿದೆ.  ಇದನ್ನೂ ಓದಿ:ಕೋವಿಡ್ ಕಾಲಘಟ್ಟದಲ್ಲಿ ಹೊಸ ಮನ್ವಂತರ – ಇಂದಿನಿಂದ ರಾಜ್ಯದಲ್ಲಿ ಶಾಲೆ-ಕಾಲೇಜು ಓಪನ್

  • ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

    ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

    – ಸಿಎಂಗೆ ಹೆಚ್‍ಡಿಡಿ ಮನೆಗೆ ಹೋಗುವ ಅವಶ್ಯಕತೆ ಏನಿತ್ತು?

    ಹಾಸನ: ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಿಕೊಳ್ಳಲು ನಾವು ಯಾರು ಕೂಡ ರಾಜಕೀಯದಲ್ಲಿ ಸನ್ಯಾಸಿಗಳಲ್ಲ. ನಾನು ರಾಜಕಾರಣ ಮಾಡಬೇಕೆಂದೇ ಬಂದಿರುವುದು ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

    ಇಂದು ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿಯವರು ಮೊದಲು ಸಿದ್ದಗಂಗಾ ಶ್ರೀ, ಸುತ್ತೂರು ಶ್ರೀ, ಸಿರಿಗೆರೆ ಸ್ವಾಮೀಜಿಗಳಿಗೆ ಅಥವಾ ಆದಿ ಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆಯಬೇಕಾಗಿತ್ತು. ಆದರೆ ಅವರ ತಂದೆ ಸರ್ಕಾರ ಉರುಳಿಸಿದಂತಹವರ ಮನೆಗೆ ಹೋಗಿ ಆಶೀರ್ವಾದ ಪಡೆಯುವ ಅಗತ್ಯ ಇರಲಿಲ್ಲ. ಇದು ನಾನು ಹೇಳುತ್ತಿಲ್ಲ ಎಲ್ಲಾ ಕಾರ್ಯಕರ್ತರು ಮಾತನಾಡುತ್ತಿದ್ದಾರೆ ಎಂದಿದ್ದಾರೆ.

    ನಾನು ಯಾವುದೇ ಮುಲಾಜಿಗೆ ಒಳಗಾಗಿ ರಾಜಕಾರಣ ಮಾಡುವಂತನಲ್ಲ. ನಮ್ಮ ಮನೆಗೆ ಕಲ್ಲು ಒಡೆದ ಸಮಯದಲ್ಲಿ ಯಡಿಯೂರಪ್ಪನವರು ಹಾಗೂ ಆರ್. ಅಶೋಕ್ ಬಂದು ಮಾನಸಿಕವಾಗಿ, ನೈತಿಕವಾಗಿ ಧೈರ್ಯ ತುಂಬಿ ಹೆಚ್ಚು ಶಕ್ತಿ ಕೊಟ್ಟಂತಹ ನಾಯಕರ ಮಧ್ಯೆ ನಾನು ಬೆಳೆದು ಬಂದಿದ್ದೇನೆ. ನಾವು ಬೆಳಗಾದರೆ ಜಾತ್ಯತೀಯ ಜನತ ದಳದ ವಿರುದ್ಧ ಗುದ್ದಾಟ ಮಾಡಿ ಪಕ್ಷ ಕಟ್ಟುವುದು, ಇನ್ನೊಬ್ಬರು ಹೋಗಿ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಿಕೊಳ್ಳುವುದು. ಇಂತಹ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಿಕೊಳ್ಳಲು ನಾವು ಯಾರು ಕೂಡ ರಾಜಕೀಯದಲ್ಲಿ ಸನ್ಯಾಸಿಗಳಲ್ಲ. ನಾನು ರಾಜಕಾರಣ ಮಾಡಬೇಕೆಂದೇ ಬಂದಿರುವುದು. ಹಳೇ ಮೈಸೂರು ಜಿಲ್ಲೆಯಲ್ಲಾಗಲಿ, ಹಾಸನ ಜಿಲ್ಲೆಯಲ್ಲಾಗಲಿ ಎಲ್ಲೆಯಾದರು ಯಾವುದೇ ಕಾರಣಕ್ಕೂ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಆಗುವುದಿಲ್ಲ ಎಂದು ನಾನು ಕಾರ್ಯಕರ್ತರಿಗೆ ಪ್ರಾಮಾಣಿಕವಾಗಿ ತಿಳಿಸಿಕೊಡುವಂತಹ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಮುಂದಿನ ದಿನಗಳಲ್ಲಿ ಯಾವುದೇ ಮಂತ್ರಿಗಳಾಗಲಿ ಜನತ ದಳದವರ ಮನೆಗೆ ಹೋಗಿ ಊಟ ಮಾಡುವುದು, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮುಂದೆ ಬರುವ ಚುನಾವಣೆಯಲ್ಲಿ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಬಾರದು. ಈ ಬಗ್ಗೆ ಹಳೇ ಮೈಸೂರಿನ ಕಡೆ ರಾಜಕಾರಣ ಮಾಡುವವರಿಗೆ ನೋವಿನ ಬಗ್ಗೆ ಗೊತ್ತಿರುತ್ತದೆ ಎಂದು ನುಡಿದಿದ್ದಾರೆ.

    ಪಕ್ಕದ ಭಾಗದವರು ಬಂದು ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದವರಿಗೆ ಜನತ ದಳ ಅಂದರೆ ಫ್ರೆಂಡ್ಸ್. ಆದ್ರೆ ಹಳೇ ಮೈಸೂರು ಭಾಗದಲ್ಲಿ ಜಂಜಾಟ ಮಾಡಿಕೊಂಡು ಗುದ್ದಾಟ ಮಾಡಿಕೊಳ್ಳುವವರು ನಮ್ಮ ಕಾರ್ಯಕರ್ತರು ಟಿಪಿ, ಜೆಡ್‍ಪಿ ಚುನಾವಣೆ ಇದೆ. ಆ ಸಮಯದಲ್ಲಿ ಇದೆಲ್ಲಾ ನಡೆದಿದ್ದು, ನಮ್ಮ ಕಾರ್ಯಕರ್ತರಿಗೆ ನೋವುಂಟಾಗಿದೆ. ಆ ನೋವನ್ನು ನನ್ನ ಬಳಿ ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ನಾನು ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಚರ್ಚೆ ಮಾಡುತ್ತೇನೆ. ರಾಜ್ಯಾಧ್ಯಕ್ಷರಿಗೆ ಮನವಿ ಮಾಡುತ್ತೇನೆ, ನಮ್ಮ ಪರಿವಾರದ ಹಿರಿಯರ ಬಳಿ ಈ ಬಗ್ಗೆ ಚರ್ಚಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಖಾತೆ ಹಂಚಿಕೆ ಸಿಎಂ ಪರಮಾಧಿಕಾರ, ವಸತಿ ಖಾತೆ ಮತ್ತೆ ನಿಭಾಯಿಸುತ್ತೇನೆ: ವಿ.ಸೋಮಣ್ಣ