Tag: bombs

  • ಕುಂದುಜ್ಹ್‌ ಮಸೀದಿ ಮೇಲೆ ಬಾಂಬ್ ದಾಳಿ- 10ಕ್ಕೂ ಹೆಚ್ಚು ಮಂದಿ ದಾರುಣ ಸಾವು

    ಕುಂದುಜ್ಹ್‌ ಮಸೀದಿ ಮೇಲೆ ಬಾಂಬ್ ದಾಳಿ- 10ಕ್ಕೂ ಹೆಚ್ಚು ಮಂದಿ ದಾರುಣ ಸಾವು

    ಕಾಬೂಲ್: ಅಫ್ಘಾನಿಸ್ತಾನದ ಮಝಾರ್ ಇ-ಷರೀಫ್ ಮಸೀದಿ ಮೇಲೆ ಉಗ್ರರು ಬಾಂಬ್ ಸ್ಫೋಟ ನಡೆಸಿದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 65 ಜನರು ಗಾಯಗೊಂಡಿರುವ ಘಟನೆ ನಡೆದಿದೆ.

    BOMB BLAST (1)

    ಪ್ರಾರ್ಥನಾ ಸಮಯದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಉತ್ತರ ಅಫ್ಘಾನ್ ನಗರದ ಶಿಯಾ ಪಂಗಡದ ಮಝಾರ್ ಇ ಷರೀಫ್ ಮಸೀದಿ ಮೇಲೆ ಬಾಂಬ್ ದಾಳಿ ನಡೆಸಿರುವುದು ತಾನೇ ಎಂದು ತಾಲಿಬಾನ್‌ನ ಸ್ಥಳೀಯ ಮುಖಂಡನೊಬ್ಬ ಹೊಣೆ ಹೊತ್ತುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಮಾಹಿತಿಯನ್ನು ಪೊಲೀಸ್ ವಕ್ತಾರ ಒಬೈದುಲ್ಲಾ ಅಬೇದಿ ಎಎಫ್‌ಪಿಗೆ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿಮಾಡಿದೆ. ಇದನ್ನೂ ಓದಿ: ಇಮ್ಲಿವಾಲಿ ಮಸೀದಿ ಮುಂದೆ ನಮಾಜ್ ಮಾಡಿದ 150 ಮಂದಿ ವಿರುದ್ಧ FIR

    BOMB BLAST

    ಶಿಯಾ ಮಸೀದಿಯೊಳಗೆ ಸಂಭವಿಸಿರುವ ಬಾಂಬ್ ಸ್ಫೋಟದಲ್ಲಿ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 30-40 ಮಂದಿ ಗಾಯಗೊಂಡಿರುವುದಾಗಿ ತಾಲಿಬಾನ್ ಕಮಾಂಡರ್‌ನ ವಕ್ತಾರ ಮೊಹಮ್ಮದ್ ಅಸೀಫ್ ವಾಝೇರಿ ತಿಳಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಪ್ರಾಂತೀಯ ಆರೋಗ್ಯ ಮಂಡಳಿಯ ವಕ್ತಾರ ಝಿಯಾ ಝೆಂಡಾನಿ ಅವರು, ಸ್ಫೋಟದಲ್ಲಿ 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಲಂಡನ್‌ ವ್ಯಕ್ತಿಯ ದೇಹದಲ್ಲಿ ಬರೋಬ್ಬರಿ ಒಂದೂವರೆ ವರ್ಷ ಅಡಗಿತ್ತು ಕೋವಿಡ್‌ – ಅಧ್ಯಯನದಿಂದ ದೃಢ

    TALIBAN
    ಅಫ್ಘಾನಿಸ್ಥಾನದ ಕಾಬೂಲ್‌ನಲ್ಲಿ ತಾಲಿಬಾನಿ ಉಗ್ರರು ನಿಂತಿದ್ದ ದೃಶ್ಯ

    ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ದಾಳಿ ಬಗೆಗಿನ ಚಿತ್ರಗಳನ್ನು ಪರಿಶೀಲಿಸಲಾಗಿ ಬಾಂಬ್ ದಾಳಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರತ್ಯಕ್ಷದರ್ಶಿಯೊಬ್ಬರು ಎಎಫ್‌ಪಿಗೆ ದೂರವಾಣಿ ಕರೆಯ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಅಧೀಕೃತ ದಾಖಲೆಗಳು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

    ತಾಲಿಬಾನ್ ಅಫ್ಘಾನಿಸ್ಥಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಬಾಂಬ್ ದಾಳಿಗಳು ಕಡಿಮೆಯಾಗಿದೆ. ಆದರೂ ಆಗಾಗ್ಗೆ ಶಿಯಾ ಉಪಸಮುದಾಯದವರ ಮಸೀದಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ.

  • ನಮ್ಮ ಮಕ್ಕಳು ವಾಸವಿರುವ ಬಿಲ್ಡಿಂಗ್ ಮೇಲೆ ಬಾಂಬ್ ಸ್ಫೋಟವಾಗುತ್ತಿವೆ: ಪೋಷಕರ ಕಣ್ಣೀರು

    ನಮ್ಮ ಮಕ್ಕಳು ವಾಸವಿರುವ ಬಿಲ್ಡಿಂಗ್ ಮೇಲೆ ಬಾಂಬ್ ಸ್ಫೋಟವಾಗುತ್ತಿವೆ: ಪೋಷಕರ ಕಣ್ಣೀರು

    ಬೀದರ್: ನಮ್ಮ ಮಕ್ಕಳು ವಾಸವಿರುವ ಬಿಲ್ಡಿಂಗ್ ಮೇಲೆ ಕ್ಷಿಪಣಿಗಳು ಹಾಗೂ ಬಾಂಬ್ ಗಳು ಸ್ಫೋಟವಾಗುತ್ತಿದ್ದು, ನಮ್ಮ ಮಕ್ಕಳು ಆತಂಕದಲ್ಲಿ ಇದ್ದಾರೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

    ಸದ್ಯ ಯುದ್ಧ ನಡೆಯುತ್ತಿರುವ ಖಾರ್ಕಿವ್‍ನಲ್ಲಿ ಬೀದರ್ ಮೂಲದ 6 ಜನ ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಪ್ರತಿ ಕ್ಷಣ ಭಯದಲ್ಲಿ ಬದುಕುತ್ತಿದ್ದಾರೆ. ವಿದ್ಯಾರ್ಥಿ ಅಮಿತ್ ಮೆಟ್ರೋ ಸ್ಟೇಷನ್ ಬಂಕರ್‍ನಲ್ಲಿ ರಕ್ಷಣೆ ಪಡೆಯುತ್ತಿದ್ದರೆ ಉಳಿದ ಐದು ಜನ ಹಾಸ್ಟೆಲ್ ಬಂಕರ್‍ನಲ್ಲಿ ವಾಸವಾಗಿ ರಕ್ಷಣೆ ಪಡೆಯುತ್ತಿದ್ದಾರೆ. ಆದರೆ ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರು ಸಿಗದೇ ನಗರದ ವಿದ್ಯಾರ್ಥಿಗಳು ಕ್ಷಣ ಕ್ಷಣಕ್ಕೂ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನೂ ಓದಿ : ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು

    ನಮ್ಮ ಮಕ್ಕಳು ವಾಸವಿರುವ ಬಿಲ್ಡಿಂಗ್ ಮೇಲೆ ಕ್ಷಿಪಣಿಗಳು, ಬಾಂಬ್‍ಗಳು ಸ್ಪೋಟವಾಗುತ್ತಿವೆ. ಖಾರ್ಕಿವ್‍ನಲ್ಲಿರುವ ನಮ್ಮ ಮಕ್ಕಳು ಕಷ್ಟದಲ್ಲಿದ್ದು ಸರ್ಕಾರ ಮೊದಲು ಅವರನ್ನು ಭಾರತಕ್ಕೆ ಕರೆಸಿಕೊಳ್ಳಲಿ. ಖಾರ್ಕಿವ್‍ನಲ್ಲಿ ಸದ್ಯ ಪರಿಸ್ಥಿತಿ ಭಯಾನಕವಾಗಿದ್ದು, ಅಷ್ಟೇ ಭಯಂಕರವಾಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ

  • ಒಂದೇ ಜಿಲ್ಲೆಯಲ್ಲಿ 112 ಸಜೀವ ಬಾಂಬ್ ಪತ್ತೆ, 399 ಜನರ ಬಂಧನ

    ಒಂದೇ ಜಿಲ್ಲೆಯಲ್ಲಿ 112 ಸಜೀವ ಬಾಂಬ್ ಪತ್ತೆ, 399 ಜನರ ಬಂಧನ

    ಕೊಲ್ಕತಾ: ಪಶ್ಚಿಮ ಬಂಗಾಳದ ಒಂದೇ ಜಿಲ್ಲೆಯಲ್ಲಿ ಭಾರೀ ಪ್ರಮಾಣ ಮದ್ದುಗುಂಡುಗಳು ಪತ್ತೆಯಾಗುವ ಮೂಲಕ ದೇಶವನ್ನೇ ತಲ್ಲಣಗೊಳಿಸಿದೆ.

    ಪಶ್ಚಿಮ ಬಂಗಾಳದ ಬಿರ್ಭಮ್‍ನಲ್ಲಿ ಶಸ್ತ್ರಾಸ್ತ್ರ ಮತ್ತು ಹಿಂಸಾಚಾರದ ಕುರಿತ ಸುಳಿವಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಏಕಕಾಲದಲ್ಲಿ ದಾಳಿ ನಡೆಸಿ ಒಟ್ಟು 112 ಸಜೀವ ಬಾಂಬ್‍ಗಳು, 6 ದೇಸಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ 399 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಬಿರ್ಭಮ್ ಜಿಲ್ಲೆಯಾದ್ಯಂತ ಪೊಲೀಸರು ಭಾರೀ ಹುಡುಕಾಟ ನಡೆಸಿದ್ದು, ನನೂರ್(32), ಲಬ್‍ಪೂರ್(40), ಪನ್ರೂಯಿ(20), ಸದಾಯಿಪುರ್(9), ಕಂಕರ್ತಲ(9), ರಾಮ್‍ಪುರಾತ್(2) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 112 ಜೀವಂತ ಕಚ್ಚಾ ಹಾಗೂ ಸಾಕ್ಕೆಟ್ ಬಾಂಬ್‍ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಶ್ಯಾಮ್ ಸಿಂಗ್ ತಿಳಿಸಿದ್ದಾರೆ.

    ಒಟ್ಟು 399 ಆರೋಪಿಗಳನ್ನು ಬಂಧಿಸಲಾಗಿದ್ದು, ನಿರ್ಧಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 65, ಮುನ್ನೆಚ್ಚರಿಕಾ ಕ್ರಮವಾಗಿ 228 ಮತ್ತು ಬಾಕಿ ಇರುವ ಪ್ರಕರಣಗಳಲ್ಲಿ 106 ಜನರನ್ನು ಬಂಧಿಸಲಾಗಿದೆ ಎಂದು ಶ್ಯಾಮ್ ಸಿಂಗ್ ವಿವರಿಸಿದ್ದಾರೆ.

    ಈ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟ ಸೇರಿದಂತೆ ಹಿಂಸಾತ್ಮಕ ಅಪರಾಧಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ಬಿರ್ಭಮ್‍ನ ಪಾಂಚಾಯತ್ ಉಪ ಆರೋಗ್ಯ ಕೇಂದ್ರದ ಹಳೆಯ ಕಟ್ಟಡದಲ್ಲಿ ಸ್ಫೋಟ ಸಂಭವಿಸಿತ್ತು. ಹೀಗಾಗಿ ಪರಿಶೀಲನೆ ಕಾರ್ಯಾಚರಣೆ ನಡೆಸಿದೆವು. ಈ ವೇಳೆ ಇಷ್ಟೊಂದು ಬಾಂಬ್‍ಗಳು ಪತ್ತೆಯಾಗಿವೆ ಎಂದು ಸಿಂಗ್ ತಿಳಿಸಿದ್ದಾರೆ.

    ಸದೈಪುರ, ರಾಮ್‍ಪುರ್ ಘಾಟ್, ದುಬ್ರಾಜ್‍ಪುರ್, ನಲ್ಹತಿ, ಮೊಹಮ್ಮದ್ ಬಜಾರ್ ಮತ್ತು ಲಬ್‍ಪುರ್ ಪ್ರದೇಶಗಳಲ್ಲಿ ತಲಾ ಒಂದರಂತೆ ಒಟ್ಟು 6 ದೇಸಿ ನಿರ್ಮಿತ ಬಂದೂಕು ಹಾಗೂ ಮದ್ದು ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು ಎಂದು ವಿವರಿಸಿದ್ದಾರೆ.

  • ಬಾಲಾಕೋಟ್ ಪ್ರೇರಣೆ – ಈಗ ಕಟ್ಟಡವನ್ನೇ ಉಡೀಸ್ ಮಾಡೋ ಬಾಂಬ್ ಖರೀದಿಗೆ ಮುಂದಾದ ಭಾರತ

    ಬಾಲಾಕೋಟ್ ಪ್ರೇರಣೆ – ಈಗ ಕಟ್ಟಡವನ್ನೇ ಉಡೀಸ್ ಮಾಡೋ ಬಾಂಬ್ ಖರೀದಿಗೆ ಮುಂದಾದ ಭಾರತ

    ನವದೆಹಲಿ: ಪಾಕಿಸ್ತಾನದ ಬಾಲಕೋಟ್ ಮೇಲಿನ ಏರ್ ಸ್ಟ್ರೈಕ್‍ನಿಂದ ಉತ್ತೇಜನಗೊಂಡಿರುವ ಭಾರತ ಈಗ ಕಟ್ಟಡವನ್ನೇ ಸಂಪೂರ್ಣವಾಗಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿರುವ ಬಾಂಬ್ ಖರೀದಿಸಲು ಮುಂದಾಗಿದೆ.

    ಹೌದು. ಬಾಲಾಕೋಟ್ ದಾಳಿ ವೇಳೆ ಭಾರತ ಇಸ್ರೇಲ್ ನಿರ್ಮಿತ ಸ್ಪೈಸ್-2000 ಬಾಂಬ್ ಬಳಸಿತ್ತು. ಈಗ ಸರ್ಕಾರ ಈ ಬಾಂಬ್‍ಗಿಂತ ಶಕ್ತಿಶಾಲಿಯಾಗಿರುವ ಮಾರ್ಕ್ 84 ಖರೀದಿಸಲು ಮುಂದಾಗಿದೆ ಎಂದು ವಾಯು ಸೇನೆಯಯ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    ಬಾಲಾಕೋಟ್ ದಾಳಿ ವೇಳೆ ಮಿರಾಜ್ ಯುದ್ಧ ವಿಮಾನದ ಮೂಲಕ ಉಗ್ರರ ಶಿಬಿರದ ಮೇಲೆ ಸ್ಪೈಸ್ -2000 ಬಾಂಬ್ ಹಾಕಲಾಗಿತ್ತು. ಈ ಬಾಂಬ್ ಗಳು ಮೇಲಿನಿಂದ ಸಿಮೆಂಟ್ ಶೀಟ್ ಗಳನ್ನು ತೂತು ಮಾಡಿ ಕೆಳಗಡೆ ಬಿದ್ದ ಬಳಿಕ ಸ್ಫೋಟಗೊಂಡಿತ್ತು. ಈ 70-80 ಕೆಜಿ ಸ್ಫೋಟಕಗಳನ್ನು ಹೊಂದಿರುವ ಈ ಬಾಂಬ್‍ಗಳು ಸ್ಫೋಟಗೊಳ್ಳುತ್ತದೆ ಹೊರತು ಸಂಪೂರ್ಣ ಕಟ್ಟಡವನ್ನು ಧ್ವಂಸಗೊಳಿಸುವ ಸಾಮಥ್ರ್ಯವನ್ನು ಹೊಂದಿಲ್ಲ.

    ಈಗ ಭಾರತದ ವಾಯುಸೇನೆ ಬಂಕರ್ ಮತ್ತು ಕಟ್ಟಡಗಳನ್ನು ಧ್ವಂಸಗೊಳಿಸಬಲ್ಲ ಮಾರ್ಕ್ 84 ಬಾಂಬ್ ಗಳನ್ನು ಖರೀದಿಸಲು ಮುಂದಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಬಾಂಬ್ ಗಳು ಬಂಕರ್ ಬಸ್ಟರ್ ಎಂದೇ ಪ್ರಸಿದ್ಧಿ ಪಡೆದಿದ್ದು, ಶತ್ರುಪಾಳಯದ ಬಂಕರ್‍ಗಳು ಎಷ್ಟೇ ಸುರಕ್ಷಿತವಾಗಿದ್ದರೂ ಛಿದ್ರಗೊಳಿಸುತ್ತವೆ. ಗುರಿ ನಿಗದಿ ಪಡಿಸಿ ಉಡಾವಣೆ ಮಾಡಿದರೆ ಸಾಕು ಗುರಿ ತಪ್ಪುವುದಿಲ್ಲ. ಎಂತಹುದೇ ಪರಿಸ್ಥಿತಿಯಲ್ಲೂ ಗುರಿಯನ್ನು ನಿಖರವಾಗಿ ಭೇದಿಸುತ್ತದೆ.

    ಕೇಂದ್ರ ಸರ್ಕಾರ ಮೂರು ಸೇನೆಗಳಿಗೆ ಗರಿಷ್ಠ 300 ಕೋಟಿ ರೂ. ವರೆಗಿನ ಸಲಕರಣೆಗಳನ್ನು ಖರೀದಿಸಲು ಅನುಮತಿ ನೀಡಿದೆ. ಈ ತುರ್ತು ವಿಶೇಷ ಅಧಿಕಾರದ ಅಡಿಯಲ್ಲಿ ವಾಯುಸೇನೆ ಈ ಬಾಂಬ್‍ಗಳನ್ನು ಖರೀದಿಸಲು ಮುಂದಾಗಿದೆ ಎನ್ನಲಾಗಿದೆ.

    ಭಾರತೀಯ ಸೇನೆ ಈಗಾಗಲೇ ಈ ವಿಶೇಷ ಅಧಿಕಾರದ ಅಡಿಯಲ್ಲಿ ಸ್ಪೈಕ್ ಆಂಟಿ ಟ್ಯಾಂಕ್ ಮಿಸೈಲ್ ಖರೀದಿಸಲು ಮುಂದಾಗಿದೆ. ಇದನ್ನೂ ಓದಿ:ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ 170 ಉಗ್ರರು ಬಲಿ – ಮೃತದೇಹವನ್ನು ನದಿಗೆ ಎಸೆದಿದ್ದ ಪಾಕ್

    ಪುಲ್ವಾಮಾದಲ್ಲಿ 44 ಸಿಆರ್‌ಪಿಎಫ್‌ ಯೋಧರು ಜೈಶ್ ಉಗ್ರನ ದಾಳಿಗೆ ಬಲಿಯಾದ ನಂತರ ಭಾರತ ಪ್ರತೀಕಾರ ತೀರಿಸಲು ಫೆ.26 ರಂದು ಪಾಕ್ ಆಕ್ರಮಿತ ಕಾಶ್ಮೀರವನ್ನು ದಾಟಿ ಬಾಲಾಕೋಟ್ ನಲ್ಲಿದ್ದ ಉಗ್ರರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತ್ತು.