Tag: bombay highcourt

  • 15ರ ರೇಪ್ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಬಾಂಬೆ ಹೈಕೋರ್ಟ್

    ಮುಂಬೈ: 15 ವರ್ಷದ ಅಪ್ರಾಪ್ತ ಅತ್ಯಾಚಾರ (Rape) ಸಂತ್ರಸ್ತೆಯ 28 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಲು ಬಾಂಬೆ ಹೈಕೋರ್ಟ್ (Bombay Highcourt) ಔರಂಗಬಾದ್ ಪೀಠ ನಿರಾಕರಿಸಿದೆ.

    28 ವಾರಗಳ ಹಂತದಲ್ಲಿ ಬಲವಂತವಾಗಿ ಹೆರಿಗೆ ಮಾಡಿಸಿದರೆ ಮಗು ಜೀವಂತವಾಗಿ ಜನಿಸುತ್ತದೆ. ನವಜಾತ ಶಿಶುವಿಗೆ ಆರೈಕೆಯ ಅಗತ್ಯವಿರುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಗರ್ಭಪಾತಕ್ಕೆ (Abortion) ಅನುಮತಿ ನೀಡಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಾಧೀಶರಾದ ಆರ್‌ವಿ ಘುಗೆ (R.V.Ghuge) ಮತ್ತು ವೈಜಿ ಖೋಬ್ರಗಡೆ (Y.G.Khobragade) ಅವರ ಪೀಠವು ಜೂನ್ 20ರಂದು ಈ ಆದೇಶವನ್ನು ನೀಡಿದೆ. ಇದನ್ನೂ ಓದಿ: 16ನೇ ವಯಸ್ಸಿನವ್ರಿಗೆ ಲೈಂಗಿಕ ವಿಚಾರದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿದೆ: ಮೇಘಾಲಯ ಹೈಕೋರ್ಟ್

    ಅತ್ಯಾಚಾರಕ್ಕೆ ಒಳಗಾದ ಬಾಲಕಿಯ 28 ವಾರಗಳ ಗರ್ಭಪಾತಕ್ಕೆ ಅನುಮತಿ ಕೋರಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. 2023ರ ಫೆಬ್ರವರಿಯಲ್ಲಿ ತನ್ನ ಮಗಳು ನಾಪತ್ತೆಯಾಗಿದ್ದು, 3 ತಿಂಗಳ ಬಳಿಕ ರಾಜಸ್ಥಾನದಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಪತ್ತೆಯಾಗಿದ್ದಾಳೆ ಎಂದು ಮಹಿಳೆ ಮನವಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸೌಜನ್ಯ ರೇಪ್‌, ಮರ್ಡರ್‌ ಕೇಸ್‌- ಆರೋಪಿ ಸಂತೋಷ್‌ ರಾವ್‌ ಖುಲಾಸೆ

    ಘಟನೆಯ ಕುರಿತು ವ್ಯಕ್ತಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕ ಮಗು ಜೀವಂತವಾಗಿ ಜನಿಸುತ್ತದೆ ಮತ್ತು ನವಜಾತ ಶಿಶುವನ್ನು ಆರೈಕೆ ಮಾಡಬೇಕಾಗುತ್ತದೆ. ಅಲ್ಲದೇ ಸಂತ್ರಸ್ತೆಗೆ ಅಪಾಯವಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ಕೋರ್ಟ್ ಗಮನಕ್ಕೆ ತಂದಿದ್ದರು. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಪೋಕ್ಸೊ ಕೇಸ್‌ ರದ್ದಿಗೆ ದೆಹಲಿ ಪೊಲೀಸರ ಶಿಫಾರಸ್ಸು

    ಈ ಕುರಿತು ಹೈಕೋರ್ಟ್ ಬಲತ್ಕಾರವಾಗಿ ಹೆರಿಗೆಯಾದರೆ ಮಗುವಿನ ಆರೋಗ್ಯದಲ್ಲಿ ಅಥವಾ ಬೆಳವಣಿಗೆಯಲ್ಲಿ ಸಮಸ್ಯೆ ಕಾಣಿಸುವ ಸಾಧ್ಯತೆಯಿದೆ. ಒಂದು ವೇಳೆ ಸಾಮಾನ್ಯ ಹೆರಿಗೆಗೆ 12 ವಾರಗಳ ಮುನ್ನ ಮಗುವಿನ ಜನನವಾದರೆ ಅದರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಪರಿಗಣಿಸುವ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಸುಪ್ರೀಂ ತಡೆ

    ಮಗು ಜೀವಂತವಾಗಿ ಜನಿಸುವ ಕಾರಣ 12 ವಾರಗಳ ನಂತರ ವೈದ್ಯರ ಸಲಹೆಯ ಮೇರೆಗೆ ಮಗು ಹುಟ್ಟಲು ಅವಕಾಶ ಮಾಡಿಕೊಡಬಹುದು. ಮಗುವಿನ ಜನನವಾದ ಬಳಿಕ ಸಂತ್ರಸ್ತೆ ಆ ಶಿಶುವನ್ನು ಅನಾಥಾಶ್ರಮಕ್ಕೆ (Orphanage) ಕೊಡಲು ಬಯಸುವುದಾದರೆ ಸಂತ್ರಸ್ತೆಗೆ ಈ ಕುರಿತು ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಬಲವಂತದ ಹೆರಿಗೆಗೆ ಅನುಮತಿ ನೀಡುವುದರಿಂದ ಅವಧಿ ಪೂರ್ವ ಹಂತದಲ್ಲಿ ಮಗುವನ್ನು ಈ ಜಗತ್ತಿಗೆ ತರಬೇಕಾಗುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: 14ರ ಹಿಂದೂ ಬಾಲಕಿ ಕಿಡ್ನ್ಯಾಪ್‌ ಮಾಡಿ ಇಸ್ಲಾಂಗೆ ಮತಾಂತರ – ಪೋಷಕರ ಜೊತೆ ಕಳುಹಿಸಲು ಪಾಕ್‌ ಕೋರ್ಟ್‌ ನಿರಾಕರಣೆ

    ಮಗು ಸಂಪೂರ್ಣ ಬೆಳವಣಿಗೆಯಾಗಿ ಸ್ವಾಭಾವಿಕ ಹೆರಿಗೆಯಾದರೆ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ದತ್ತು ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಕೋರ್ಟ್ ತಿಳಿಸಿದೆ. ಬಳಿಕ ಸಂತ್ರಸ್ತೆಯ ತಾಯಿ ಬಾಲಕಿ ಮಗುವಿಗೆ ಜನ್ಮ ನೀಡುವವರೆಗೂ ಯಾವುದಾದರೂ ಎನ್‌ಜಿಒ ಅಥವಾ ಆಸ್ಪತ್ರೆಯಲ್ಲಿ ಆಕೆಯನ್ನು ಇರಿಸಿಕೊಳ್ಳಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಈ ಮನವಿಯನ್ನು ಆಲಿಸಿದ ಬಳಿಕ ಸಂತ್ರಸ್ತೆಯನ್ನು ನಾಸಿಕ್‌ನಲ್ಲಿರುವ (Nashik) ಗರ್ಭಿಣಿಯರನ್ನು ಆರೈಕೆ ಮಾಡುವ ಆಶ್ರಯ ಮನೆ ಅಥವಾ ಔರಂಗಬಾದ್‌ನಲ್ಲಿ ಮಹಿಳೆಯರಿಗಾಗಿ ಇರುವ ಸರ್ಕಾರಿ ಆಶ್ರಯ ಮನೆಗಳಲ್ಲಿ ಇರಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ- ಯುವಕನಿಗೆ 20 ವರ್ಷ ಜೈಲು, 1 ಲಕ್ಷದ 10 ಸಾವಿರ ರೂ. ದಂಡ

    ಅಷ್ಟು ಮಾತ್ರವಲ್ಲದೇ ಹೆರಿಗೆಯ ಬಳಿಕ ಮಗುವನ್ನು ಇಟ್ಟುಕೊಳ್ಳುವ ಅಥವಾ ದತ್ತು ನೀಡುವ ನಿರ್ಧಾರವನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಸಂತ್ರಸ್ತೆಗೆ ಇದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಇದನ್ನೂ ಓದಿ: ಲಿಂಗಾಯತ ಅವಹೇಳನ ಕೇಸಲ್ಲಿ ಸಿದ್ದರಾಮಯ್ಯಗೆ ರಿಲೀಫ್

  • ಮಹಿಳೆಗೆ ಮಕ್ಕಳನ್ನು ಹೇರುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್

    ಮಹಿಳೆಗೆ ಮಕ್ಕಳನ್ನು ಹೇರುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್

    ಮುಂಬೈ: ಸಂವಿಧಾನದ (Constitution) 21ನೇ ವಿಧಿಯ ಅನ್ವಯ ಪ್ರತಿಯೊಬ್ಬ ಮಹಿಳೆಯು (Women) ಸಂತಾನೋತ್ಪತ್ತಿ ಆಯ್ಕೆಯ ಹಕ್ಕು ಹೊಂದಿರುವುದರಿಂದ, ಆಕೆಗೆ ಮಗು ಹೇರಲು ಬಲವಂತ ಮಾಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ (Bombay HighCourt) ಹೇಳಿದೆ.

    ಪತಿಯ ಒಪ್ಪಿಗೆಯಿಲ್ಲದೇ ಗರ್ಭಪಾತ ಮಾಡಿಸಿರುವುದು ಕ್ರೌರ್ಯ ಎಂಬ ಆಧಾರದಲ್ಲಿ ವಿಚ್ಛೇದನ ಕೋರಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಅತುಲ್ ಚಂದೂರ್ಕರ್ ಹಾಗೂ ಊರ್ಮಿಳಾ ಜೋಶಿ ಫಾಲ್ಕೆ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಇದನ್ನೂ ಓದಿ: ಕೇರಳ ದುರಂತಕ್ಕೆ ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ

    ಸಂವಿಧಾನದ 21ನೇ ವಿಧಿಯ ಅನ್ವಯ ಮಹಿಳೆಯ ಸಂತಾನೋತ್ಪತ್ತಿಯ ಆಯ್ಕೆಯು ವೈಯಕ್ತಿಯ ಸ್ವಾತಂತ್ರ‍್ಯದ ಅಂಗವಾಗಿದೆ. ಆದ್ದರಿಂದ ಆಕೆಗೆ ಮುಗುವಿಗೆ ಜನ್ಮ ನೀಡುವಂತೆ ಒತ್ತಾಯ ಮಾಡಲಾಗದು. ಏಕೆಂದರೆ ಮಹಿಳೆ ವಿವಾಹದ ನಂತರ ಕೆಲಸ ಮಾಡಲು ಬಯಸಿದರೆ ಅದು ಮಾನಸಿಕ ಕ್ರೌರ್ಯವಾಗುವುದಿಲ್ಲ ಎಂದು ಹೇಳಿರುವ ನ್ಯಾಯಾಲಯವು (Court) ಅರ್ಜಿಯನ್ನು ವಜಾಗೊಳಿಸಿದೆ. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್‌: ಪತಿ ಜೊತೆ ದಿವ್ಯಾ ಶ್ರೀಧರ್ ಡಿಶುಂ ಡಿಶುಂ ವಿಡಿಯೋ

    2001ರಲ್ಲಿ ಮದುವೆಯಾದಾಗಿನಿಂದ ಪತ್ನಿಯು ಉದ್ಯೋಗ ಮಾಡಲು ಬಯಸಿದ್ದು, ಗರ್ಭಪಾತ (Miscarriage) ಮಾಡಿಸಿಕೊಳ್ಳುವ ಮೂಲಕ ತಮ್ಮನ್ನು ಕ್ರೌರ್ಯಕ್ಕೆ ಗುರಿಪಡಿಸಲಾಗಿದೆ ಎಂದು ಅರ್ಜಿದಾರ ಪತಿ ಆರೋಪಿಸಿದ್ದರು. 2004ರಲ್ಲಿ ಪುತ್ರನೊಂದಿಗೆ ತಮ್ಮನ್ನು ತೊರೆದು ಹೋಗಿದ್ದಾರೆ. ಹಾಗಾಗಿ ವಿಚ್ಚೇದನ ಕೊಡಿಸಬೇಕು ಎಂದು ಮನವಿ ಸಲ್ಲಿಸಿದ್ದರು.

    ವಿಚಾರಣೆ ವೇಳೆ ಪತ್ನಿ ತಾನು ಮೊದಲ ಮಗುವಿಗೆ ಜನ್ಮ ನೀಡಿ ಅದನ್ನು ಸಲಹುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ತಾನು 2ನೇ ಬಾರಿಗೆ ಗರ್ಭಿಣಿಯಾದಾಗ ಅನಾರೋಗ್ಯದ ಕಾರಣದಿಂದ ಗರ್ಭಪಾತವಾಗಿದೆ. ಆದರೆ ತನ್ನನ್ನು ಮರಳಿ ಗಂಡನ ಮನೆಗೆ ಕರೆತರಲು ಯಾವುದೇ ಪ್ರಯತ್ನ ಮಾಡಲಾಗಿಲ್ಲ. ತಾನು ಮನೆ ಬಿಡಲು ತನ್ನ ಶೀಲವನ್ನು ಶಂಕಿಸಿದ್ದು ಕಾರಣ ಎಂದು ವಾದಿಸಿದ್ದರು.

    ಈ ಕಾರಣದಿಂದಾಗಿ ನ್ಯಾಯಾಲಯ ಸಣ್ಣಪುಟ್ಟ ವಿಷಯಗಳನ್ನೆಲ್ಲಾ ಕ್ರೌರ್ಯ ಎಂದು ಪರಿಗಣಿಸಲಾಗದು ಎಂದು ಹೇಳಿ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಂಸದ ಉತ್ಪನ್ನಗಳ ಜಾಹೀರಾತುಗಳ ನಿಷೇಧ ಕೋರಿದ ಅರ್ಜಿದಾರರಿಗೆ ಬಾಂಬೆ ಹೈಕೋರ್ಟ್ ತರಾಟೆ

    ಮಾಂಸದ ಉತ್ಪನ್ನಗಳ ಜಾಹೀರಾತುಗಳ ನಿಷೇಧ ಕೋರಿದ ಅರ್ಜಿದಾರರಿಗೆ ಬಾಂಬೆ ಹೈಕೋರ್ಟ್ ತರಾಟೆ

    ಮುಂಬೈ: ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಾಂಸ (Meat) ಮತ್ತು ಮಾಂಸದ ಉತ್ಪನ್ನಗಳ ಜಾಹೀರಾತುಗಳ ಮೇಲೆ ನಿರ್ಬಂಧ ಕೋರಿ ಜೈನ (Jain) ಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ (Bombay HighCourt) ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.

    court order law

    ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಪೀಠವು ಈ ವಿಷಯವು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ. ನಾವು ನಿಷೇಧವನ್ನು ವಿಧಿಸುವ ಕಾನೂನು/ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

    ವಿಚಾರಣೆ ವೇಳೆ ಅರ್ಜಿದಾರರನ್ನು ಟೀಕಿಸಿದ ಪೀಠ, ಮೊದಲು ಇದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿದೆಯೇ ಎಂದು ನಮಗೆ ತಿಳಿಸಿ. ಯಾವುದನ್ನಾದರೂ ನಿಷೇಧಿಸಲು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಲು ನೀವು ಹೈಕೋರ್ಟ್‍ಗೆ ಕೇಳುತ್ತಿದ್ದೀರಿ, ಅದನ್ನು ಶಾಸಕಾಂಗ ನಿರ್ಧರಿಸುತ್ತದೆ ಎಂದು ತರಾಟೆಗೆ ತೆಗೆದುಕೊಂಡಿತು. ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‍ನಲ್ಲಿ ರಾಜಕೀಯ ಬಿಕ್ಕಟ್ಟು – ಅಧಿಕಾರ ಹಿಡಿಯುತ್ತಾ ಬಿಜೆಪಿ?

    ಯಾವುದೇ ಹಕ್ಕಿನ ಉಲ್ಲಂಘನೆಯಾದಾಗ ಮಾತ್ರ ನಾವು ಹೈಕೋರ್ಟ್ (HighCourt) ಮಧ್ಯಪ್ರವೇಶಿಸಬಹುದು, ಇಂತಹ ನಿಷೇಧವನ್ನು ಕೋರುವ ಮೂಲಕ ಅರ್ಜಿದಾರರು ಇತರೆ ಜನರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಅತಿಕ್ರಮಿಸಲಾಗುತ್ತಿಲ್ಲವೇ ಎಂದು ಪೀಠ ಕೇಳಿತು. ಸಂವಿಧಾನದ 19 ನೇ ವಿಧಿಯ ಉಲ್ಲಂಘನೆಯ ಬಗ್ಗೆ ಏನು ಗೊತ್ತು? ನೀವು ಇತರರ ಹಕ್ಕುಗಳನ್ನು ಏಕೆ ಕಸಿದುಕೊಳ್ಳುತ್ತೀರಿ? ನೀವು ಕೇಳುವುದನ್ನು ಕಾನೂನಿನ ಮೂಲಕ ಒದಗಿಸಬೇಕು, ಇಲ್ಲಿ ಅಂತಹ ಯಾವುದೇ ಕಾನೂನು ಇಲ್ಲ. ಅದಕ್ಕಾಗಿಯೇ ನೀವು ಕಾನೂನನ್ನು ರೂಪಿಸಲು ನಮ್ಮನ್ನು ಕೇಳುತ್ತಿದ್ದೀರಿ. ಕಾನೂನು ರೂಪಿಸಲು ನಮ್ಮಗೆ ಸಾಧ್ಯವಿಲ್ಲ ನಾವು ನ್ಯಾಯಾಲಯ ಎಂದು ಪೀಠ ಹೇಳಿದೆ.

    ಮೂರು ಜೈನ ಧಾರ್ಮಿಕ ಚಾರಿಟಬಲ್ ಟ್ರಸ್ಟ್ ಗಳು ಮತ್ತು ಜೈನ ಧರ್ಮವನ್ನು ಪಾಲಿಸುವ ಕೆಲವು ಮುಂಬೈ ನಿವಾಸಿಗಳು ಈ ಅರ್ಜಿಯನ್ನು ಸಲ್ಲಿಸಿದ್ದರು. ಮನವಿಯಲ್ಲಿ, ತಮ್ಮ ಮಕ್ಕಳು ಸೇರಿದಂತೆ ಅವರ ಕುಟುಂಬಗಳು ಇಂತಹ ಜಾಹೀರಾತು (Advertisement) ಗಳನ್ನು ವೀಕ್ಷಿಸಲು ಒತ್ತಾಯಿಸಲಾಗುತ್ತದೆ. ಶಾಂತಿಯುತವಾಗಿ ಬದುಕುವ ಹಕ್ಕನ್ನು ಉಲ್ಲಂಘಿಸುತ್ತಿದೆ ಮತ್ತು ಮಕ್ಕಳ ಮನಸ್ಸನ್ನು ಹಾಳುಮಾಡುತ್ತದೆ ಎಂದು ಉಲ್ಲೇಖಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸ್ಯಾನಿಟರಿ ಪ್ಯಾಡ್ ಮೇಲೆ ಜಿಎಸ್‍ಟಿ ಯಾಕೆ?: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್

    ಸ್ಯಾನಿಟರಿ ಪ್ಯಾಡ್ ಮೇಲೆ ಜಿಎಸ್‍ಟಿ ಯಾಕೆ?: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್

    ಮುಂಬೈ: ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ಮೇಲೆ ಶೇ. 12ರಷ್ಟು ಜಿಎಸ್‍ಟಿ ತೆರಿಗೆ ಹಾಕಿರೋದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದೆ.

    ಸ್ಯಾನಿಟರಿ ಪ್ಯಾಡ್ ಮೇಲೆ ಜಿಎಸ್‍ಟಿ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ಕೋರ್ಟ್ ಇದಕ್ಕೆ ಪ್ರತಿಕ್ರಿಯಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದೆ.

    ಶೆಟ್ಟಿ ವುಮೆನ್ ವೆಲ್‍ಫೇರ್ ಫೌಂಡೇಷನ್ ಎಂಬ ಸರ್ಕಾರೇತರ ಸಂಸ್ಥೆಯೊಂದು ಸ್ಯಾನಿಟರಿ ಪ್ಯಾಡ್‍ಗಳ ಮೇಲೆ 12% ಜಿಎಸ್‍ಟಿ ತೆರಿಗೆ ಹಾಕಿರೋದನ್ನ ಪ್ರಶ್ನಿಸಿ ಪಿಐಎಲ್ ಸಲ್ಲಿಸಿತ್ತು. ಭಾರತದಲ್ಲಿ ಕೇವಲ 12% ಮಹಿಳೆಯರು ಮಾತ್ರ ಸ್ಯಾನಿಟರಿ ನ್ಯಾಪ್‍ಕಿನ್ ಖರೀದಿಸಬಲ್ಲರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

    ಫೌಂಡೇಷನ್ ಪರವಾಗಿ ವಾದ ಮಂಡಿಸಿದ ವಕೀಲರಾದ ಮಿಹಿರ್ ದೇಸಾಯಿ, ಬಹುತೇಕ 90% ನಷ್ಟು ಮಹಿಳೆಯರು ಆರೋಗ್ಯಕರವಾದ ಈ ಉತ್ಪನ್ನವನ್ನ ಬಳಸಲು ಸಾಧ್ಯವಾಗುತ್ತಿಲ್ಲ ಎಂದರು. ಬಳಿಕ ನ್ಯಾಯಾಧೀಶರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಈ ಬಗ್ಗೆ ನೋಟಿಸ್ ನೀಡುವಂತೆ ಸೂಚಿಸಿ ವಿಚಾರಣೆಯನ್ನು 4 ವಾರಗಳವರೆಗೆ ಮುಂದೂಡಿದ್ದಾರೆ.

    ಪಿಐಎಲ್ ಅರ್ಜಿಯ ಪ್ರಕಾರ ಸ್ಯಾನಿಟರಿ ಪ್ಯಾಡ್ ಮೇಲಿನ 12% ಜಿಎಸ್‍ಟಿ ತೆರಿಗೆಯಿಂದಾಗಿ ಅದನ್ನು ಖರೀದಿಸಲು ಕಷ್ಟವಾಗುವ ಕಾರಣ ಮಹಿಳೆಯರ ಋತುಸ್ರಾವ ಹಾಗೂ ಸಂತಾನೋತ್ಪತ್ತಿ ಮತ್ತು ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಲಿದೆ. ಸ್ರ್ತೀಯರ ಆರೋಗ್ಯ ವೃದ್ಧಿಯ ನಿಟ್ಟಿನಲ್ಲಿ ಋತುಸ್ರಾವದ ಮೂಲಭೂತ ಆರೋಗ್ಯಕರ ಉತ್ಪನ್ನ ಮಹಿಳೆಯರ ಕೈಗೆಟುವಂತೆ ಸರ್ಕಾರ ಸೂಕ್ತ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಹೇಳಲಾಗಿದೆ.

    ಇದನ್ನೂ ಓದಿ: ಕಾಂಡೋಮ್ ಟ್ಯಾಕ್ಸ್ ಫ್ರೀ, ಆದ್ರೆ ನ್ಯಾಪ್‍ಕಿನ್‍ಗೆ ಯಾಕೆ ಟ್ಯಾಕ್ಸ್: ಮೋದಿ ವಿರುದ್ಧ ತಿರುಗಿ ಬಿದ್ದ ಮಹಿಳೆಯರು

    ಇದನ್ನೂ ಓದಿ: ಸ್ಯಾನಿಟರಿ ನ್ಯಾಪ್‍ಕಿನ್ ಬದಲು ಬಟ್ಟೆಯೇ ಒಳ್ಳೆದು- ಬಿಜೆಪಿ ವಕ್ತಾರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಲಾಸ್