Tag: Bombay budda

  • ‘ಬಾಂಬೆ ಬುಡ್ಡಾ’ ಕುಖ್ಯಾತಿ ದರೋಡೆಕೋರನ ಬಂಧನಕ್ಕೆ ಬಲೆ

    ‘ಬಾಂಬೆ ಬುಡ್ಡಾ’ ಕುಖ್ಯಾತಿ ದರೋಡೆಕೋರನ ಬಂಧನಕ್ಕೆ ಬಲೆ

    ಮೈಸೂರು: ಬಾಂಬೆ ಬುಡ್ಡಾ ಕುಖ್ಯಾತಿ ದರೋಡೆಕೋರನ ಬಂಧನ ಮುಂದಾಗಿರುವ ಮೈಸೂರಿನ ಪೊಲೀಸರ ತಂಡ ಮುಂಬೈಗೆ ತೆರಳಿದೆ.

    ಚಿನ್ನದಂಗಡಿಯಲ್ಲಿ ನಡೆದ ದರೋಡೆ ಶೂಟ್‍ಔಟ್ ಪ್ರಕರಣದಲ್ಲಿ 2 ಕೆಜಿಗೂ ಹೆಚ್ಚು ಚಿನ್ನಾಭರಣ ಕಳ್ಳತನವಾಗಿತ್ತು. ದರೋಡೆ ಮಾಡಿದವರಲ್ಲಿ ವೃದ್ಧನ ಬಳಿ ಈ ಚಿನ್ನಾಭರಣದ ಸಿಂಹಪಾಲಿದೆ. ಇನ್ನು ಪೊಲೀಸರ ಕೈಗೆ ಸಿಗದ 60 ವರ್ಷದ ವೃದ್ಧನ ಬಳಿಯೇ 1 ಕೆಜಿಗೂ ಹೆಚ್ಚು ಚಿನ್ನಾಭರಣವಿದೆ.

    20 ವರ್ಷದವನಿದ್ದಾಗಲಿಂದಲೂ ಆಭರಣ ಕಳ್ಳತನದಲ್ಲಿ ಪರಿಣಿತಿ ಹೊಂದಿರುವ ವೃದ್ಧ ಬಾಂಬೆ ಬುಡ್ಡಾ ಅಂತಲೇ ಕುಖ್ಯಾತಿ ಹೊಂದಿದ್ದಾನೆ. ಈ ಆರೋಪಿ ಸದ್ಯ ತಲೆ ಮರೆಸಿ ಕೊಂಡಿದ್ದಾನೆ. ಇವನ ಪತ್ತೆಗೆ ಮೈಸೂರು ಪೊಲೀಸರು ಮುಂಬೈಗೆ ತೆರಳಿದ್ದಾರೆ.

    ಆ. 23ರಂದು ಮೈಸೂರಿನ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ ನಲ್ಲಿ ದರೋಡೆ ಮಾಡಿ ಶೂಟ್‍ಔಟ್ ಮಾಡಲಾಗಿತ್ತು. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಪೊಲೀಸ್ ಠಾಣೆ ಮುಂದೆಯೇ ಯುವಕನ ಮೇಲೆ ಹಲ್ಲೆ – 6 ಜನರ ಬಂಧನ