Tag: Bombay

  • ಆಶಾ ಕಾರ್ಯಕರ್ತೆಯ ಒಂದು ಮೆಸೇಜ್- ಗಾಬರಿಗೊಂಡ ಹಲಸೂರು ಮಂದಿ

    ಆಶಾ ಕಾರ್ಯಕರ್ತೆಯ ಒಂದು ಮೆಸೇಜ್- ಗಾಬರಿಗೊಂಡ ಹಲಸೂರು ಮಂದಿ

    ಬೆಂಗಳೂರು: ನಗರದ ಹಲಸೂರಿನಲ್ಲಿ ಭಾರೀ ಹೈಡ್ರಾಮವೊಂದು ನಡೆದಿದೆ. ಬಾಂಬೆಯಿಂದ ಬಂದ ವ್ಯಕ್ತಿಯನ್ನು ಕ್ವಾರಂಟೈನ್ ಮಾಡಿಲ್ಲ ಎಂಬ ಆಶಾ ಕಾರ್ಯಕರ್ತೆಯ ಮೆಸೇಜೊಂದು ಭಾರೀ ಸದ್ದು ಮಾಡಿದೆ. ಅಲ್ಲದೆ ಜನ ಆರೋಗ್ಯ ಇಲಾಖೆಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಆಗಿದ್ದೇನು..?:
    ಹಲಸೂರಿನಲ್ಲಿ ವಾಸವಿರುವ ವ್ಯಕ್ತಿ ಎರಡು ದಿನದ ಹಿಂದೆ ಮುಂಬೈನಿಂದ ವಾಪಸ್ ಬಂದಿದ್ದಾರೆ. ಆದರೆ ಕ್ವಾರಂಟೈನ್ ಆಗಿಲ್ಲ ಎಂದು ಸುದ್ದಿಯಾಗಿತ್ತು. ಅಲ್ಲದೆ ಆಶಾ ಕಾರ್ಯಕರ್ತೆಯ ಒಂದು ಮೆಸೇಜ್ ಕೂಡ ಹರಿದಾಡಿತ್ತು. ಹೀಗಾಗಿ ಈ ವ್ಯಕ್ತಿಯ ಮನೆ ಮುಂದೆ ಹೈಡ್ರಾಮವೇ ನಡೆದಿತ್ತು.

    ಸ್ಥಳೀಯರ ಭಯಕ್ಕೆ ಬಾಂಬೆಯಿಂದ ಬಂದಿದ್ದಾರೆ ಎನ್ನಲಾಗಿದ್ದ ವ್ಯಕ್ತಿಯನ್ನು ಹಲಸೂರಿನ ಆಸ್ಪತ್ರೆಯ ಬಳಿಗೆ ಕರೆದುಕೊಂಡು ಬಂದಿದ್ದಾರೆ. ಈ ವ್ಯಕ್ತಿ ನಾನು ಬಾಂಬೆಯಿಂದ ಬಂದಿಲ್ಲ ಎಂದು ವಾದ ಮಾಡಿದರೆ, ಆಸ್ಪತ್ರೆಯ ಮುಂದೆ ಜಮಾಯಿಸಿರುವ ಜನ ಈತನಿಗೆ ಕೊರೊನಾ ಟೆಸ್ಟ್ ಮಾಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಕೊನೆಗೆ ಆತನಿಗೆ ಜ್ವರ ಇದೆಯಾ ಎಂದು ಟೆಸ್ಟ್ ಮಾಡಿ ಈತನಿಗೆ ಬಾಂಬೆ ಹಿಸ್ಟರಿ ಇಲ್ಲ ಎಂದು ಆಸ್ಪತ್ರೆಯವರು ವಾಪಸ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ಯಪಡಿಸುತ್ತಿದ್ದಾರೆ.

  • ಕ್ರಿಕೆಟ್  ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಫೋಟ 8 ಮಂದಿ ಸಾವು

    ಕ್ರಿಕೆಟ್ ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಫೋಟ 8 ಮಂದಿ ಸಾವು

    ಕಾಬೂಲ್: ಕ್ರಿಕೆಟ್ ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ 8 ಜನ ಮೃತಪಟ್ಟಿರುವ ಘಟನೆ ಅಫ್ಘಾನಿಸ್ತಾನದ ಪೂರ್ವ ನಂಗರ್ ಹಾರ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

    ಪವಿತ್ರ ರಮ್ಜಾನ್ ತಿಂಗಳ ನಿಮಿತ್ತ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ದುಷ್ಕರ್ಮಿಗಳು ಸರಣಿ ಬಾಂಬ್ ಸ್ಪೋಟ ನಡೆಸಿದ್ದಾರೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, ಸುಮಾರು 45ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎಂದು ನಗರ್ ಹಾರ್ ಪ್ರಾಂತೀಯ ರಾಜ್ಯಪಾಲರ ವಕ್ತಾರ ಅತ್ತಹುಲ್ಲಾ ಖೋಗ್ಯಾನಿ ಮಾಹಿತಿ ನೀಡಿದ್ದಾರೆ.

    ಬಾಂಬ್ ಸ್ಪೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಪೂರ್ವ ಅಫ್ಘಾನಿಸ್ಥಾನ ಭಾಗದಲ್ಲಿ ತಾಲಿಬಾನ್ ಹಾಗೂ ಐಸಿಸ್ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. ಹೀಗಾಗಿ ಅವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಖೋಗ್ಯಾನಿ ತಿಳಿಸಿದ್ದಾರೆ.

  • ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ: 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ- ಶಾಕಿಂಗ್ ವಿಡಿಯೋ ನೋಡಿ

    ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ: 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ- ಶಾಕಿಂಗ್ ವಿಡಿಯೋ ನೋಡಿ

    ಕೊಲ್ಕತ್ತಾ: ಪಂಚಾಯತ್ ಚುನಾವಣೆ ವೇಳೆ 10 ಕಡೆ ನಡೆದ ಘರ್ಷಣೆ ಹಿಂಸಾ ರೂಪ ಪಡೆದುಕೊಂಡಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಮುಂಜಾನೆ ಪ್ರಾರಂಭವಾದ ಚುನಾವಣೆಯಲ್ಲಿ ವಿವಿಧ ಬೂತ್‍ಗಳಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಪರಸ್ಪರ ಹೊಡೆದಾಡಿದ್ದಾರೆ. ನಂತರ ಇದು ಹಿಂಸಾ ಸ್ವರೂಪ ಪಡೆದುಕೊಂಡಿದೆ. ಪ್ರದೇಶವೊಂದರಲ್ಲಿ ನಡೆದ ಬಾಂಬ್ ದಾಳಿಯಲ್ಲಿ 20 ಜನ ಗಾಯಗೊಂಡಿವುದು ವರದಿಯಾಗಿದೆ.

     

    ಚುನಾವಣೆಗೂ ಮುನ್ನ 34%ರಷ್ಟು ಸ್ಥಾನಗಳಲ್ಲಿ ಅವಿರೋಧವಾಗಿ ಆಡಳಿತ ರೂಢ ತೃಣಮೂಲ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಈ ಬೆಳವಣಿಗೆ ನಂತರ ಪ್ರಾರಂಭವಾದ ಚುನಾವಣೆಯು ಹಿಂಸಾಚಾರ ಸ್ವರೂಪ ಪಡೆದುಕೊಂಡಿದೆ.

    ಘಟನೆಗೆ ಸಂಬಂಧಿಸಿದಂತೆ ಉತ್ತರದ 24 ಪರಗಣದಿಂದ ಹಾಗೂ ದಕ್ಷಿಣದ ಬುದ್ರ್ವಾನ್, ಕೋಚ್‍ಬೆಹರ್‍ನಿಂದ 24 ಪರಗಣಗಳಿಂದ ರಾಜ್ಯ ಚುನಾವಣೆ ಆಯೋಗವು ದೂರು ದಾಖಲಿಸಿಕೊಂಡಿದೆ.

    ಉತ್ತರ ಬಂಗಾಳದ ಕೊಚ್ಬೆಗಾರ್ ಜಿಲ್ಲೆಯ ಶುಕ್ತಾಬಾರಿ ಮತದಾನದ ಬೂತ್‍ನಲ್ಲಿ ನಡೆದ ಬಾಂಬ್ ದಾಳಿ ನಡೆದಿದ್ದು, ಒಬ್ಬ ಟಿಎಂಸಿ ಕಾರ್ಯಕರ್ತ, ಓರ್ವ ಮಹಿಳೆ ಸೇರಿದಂತೆ ಒಟ್ಟು 20 ಜನರು ಗಾಯಗೊಂಡಿದ್ದಾರೆ.

    ಗುಂಪೊಂದು ಉತ್ತರ ಬಂಗಾಳದ ಅಲಿಪುರ್ದಾರ್ ಬೂತ್ ಸುತ್ತ ಗೆರೆ ಏಳೆದಿದ್ದು, ಇದನ್ನು ದಾಟದಂತೆ ಮತದಾರರಿಗೆ ಸೂಚಿಸಿದೆ. ಅಲ್ಲದೇ ದಿನ್ಹಾಟ್‍ದಲ್ಲಿ ಎರಡು ಗುಂಪುಗಳ ನಡುವಿನ ಕಲಹದಿಂದಾಗಿ ಕೆಲವು ಮತದಾರಿಗೆ ಗಾಯವಾಗಿದೆ.

    ದಕ್ಷಿಣ ಪರಗಣದ ಭಾಂಗಾರ್‍ದಲ್ಲಿ ನಡೆದ ಘರ್ಷಣೆ ವೇಳೆ ಮಾಧ್ಯಮದ ವಾಹನಗಳಿಗೂ ಹಾನಿಯಾಗಿದೆ. ಬಿರ್ಪಾರಾದಲ್ಲಿ ಐದು ಜನ ಪತ್ರಕರ್ತರು ಗಾಯಗೊಂಡಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಟ್ರಿಗರ್ ಗ್ಯಾಸ್ ಬಳಕೆ ಮಾಡಿದ್ದಾರೆ. ಬುದ್ರ್ವಾನ್ ನಲ್ಲಿ ಬಿಜೆಪಿ ಹಾಗೂ ಸಿಪಿಎಂ ಕಾರ್ಯಕರ್ತರು ಬಾಂಬ್ ಹಾಗೂ ದೊಣ್ಣೆ ಹಿಡಿದು ಮತದಾರರನ್ನು ಹೆದರಿಸಿದ್ದಾರೆ ಎಂದು ವರದಿಯಾಗಿದೆ.

    ಇತ್ತೀಚಿನ ವರದಿಯ ಪ್ರಕಾರ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.