ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಶಾಲೆಯೊಂದರ (School) ಬಳಿಯೇ ಬಾಂಬ್ ಸ್ಫೋಟಗೊಂಡು (Bomb Blast) ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್ ಪ್ರೌಢಶಾಲೆಯ ಬಳಿ ಸೋಮವಾರ (ಆ.18) ಮುಂಜಾನೆ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಬರಾಸತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರತೀಕ್ಷಾ ಜಾರ್ಖರಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಶಾಲೆಗಳಿಗೆ ಬಾಂಬ್ ಬೆದರಿಕೆ – ತೀವ್ರ ಶೋಧ
ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ಆಹಾರ ಮತ್ತು ಸರಬರಾಜು ಸಚಿವ ರತಿನ್ ಘೋಷ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬಾಂಬ್ ಬ್ಲಾಸ್ಟ್ ಮಾಡಿರುವುದು ಸಿಲ್ಲಿ ಅಟೆಂಪ್ಟಾ? – ಬಿಜೆಪಿ ಕಿಡಿ
ಕಲಬುರಗಿ: ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe ) ಬಾಂಬ್ ಸ್ಫೋಟ ಪ್ರಕರಣವನ್ನು (Bomb Blast Case) ಸಿಲ್ಲಿ ಪ್ರಕರಣ ಎಂದು ಹೇಳಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ (Sharan Prakash Patil) ಜನತೆಗೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಲಬುರಗಿಯ ಜಯದೇವ ಆಸ್ಪತ್ರೆಯ ಕಾಮಗಾರಿ ವೀಕ್ಷಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಶರಣಪ್ರಕಾಶ್ ಪಾಟೀಲ್, ರಾಜ್ಯದಲ್ಲಿ ಶಾಂತಿ ಭಂಗ ಮಾಡೋಕೆ ಕೆಲವರು ಸೃಷ್ಟಿ ಮಾಡುತ್ತಾರೆ. ನಮ್ಮ ಸರ್ಕಾರ ಇವುಗಳಿಗೆಲ್ಲ ಸೊಪ್ಪು ಹಾಕುವುದಿಲ್ಲ.ನಮ್ಮ ಗುರಿ ರಾಜ್ಯದ ಅಭಿವೃದ್ಧಿ. ಇಂತಹ ಸಣ್ಣ ಘಟನೆಗೆ ನಾವು ವಿಚಲಿತರಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿವರಾತ್ರಿ ದಿನ ಮತ್ತೆ ರಾಮೇಶ್ವರಂ ಕೆಫೆ ತೆರೆಯುತ್ತೇವೆ: ಮಾಲೀಕ ರಾಘವೇಂದ್ರ ರಾವ್
ಈ ರೀತಿ ಕೃತ್ಯ ಪ್ರತಿ ದಿನ ನಡೆಯುವುದಿಲ್ಲವಲ್ಲ. ಬಿಗಿ ಭದ್ರತೆಯ ಸಂಸತ್ ಭವನದಲ್ಲೇ ದೊಡ್ಡ ಘಟನೆ ನಡೆದಿದೆ. ದಿಸ್ ಆರ್ ಆಲ್ ಫ್ರಿಂಜ್ ಎಲಿಮೆಂಟ್ಸ್. ಇದೊಂದು ಸಿಲ್ಲಿ ಅಂಟೆಪ್ಟ್ ಎಂದು ತಿಳಿಸಿದರು. ಇದನ್ನೂ ಓದಿ: ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ
ನಾನು ಸಿಲ್ಲಿ ಅಂದಿಲ್ಲ:
ತನ್ನ ಹೇಳಿಕೆ ಸುದ್ದಿಯಾಗುತ್ತಿದ್ದಂತೆ ಶರಣಪ್ರಕಾಶ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಕೆಲವು ಶಕ್ತಿಗಳು ಶಾಂತಿ ಹಾಳು ಮಾಡುವ ಕೆಲಸ ಮಾಡುತ್ತಿವೆ. ಹೀಗಾಗಿ ಆ ಪ್ರಕರಣವನ್ನು ಉಲ್ಲೇಖಿಸಿ ಸಿಲ್ಲಿ ಅಂತಾ ಹೇಳಿದ್ದೆನೆ ಹೊರತು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಹೇಳಿಲ್ಲ. ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದು ದೇಶದ್ರೋಹದ ಕೆಲಸವಾಗಿದ್ದು ಉಗ್ರರ ಕೃತ್ಯಕ್ಕೆ ನಾನು ಸಿಲ್ಲಿ ಅಂತಾ ಹೇಳಿಲ್ಲ. ರಾಜಕೀಯ ಅಸ್ಥಿರ ಮಾಡುವ ಪ್ರಯತ್ನ ನಡೆಯುತ್ತಿವೆ ಅದಕ್ಕೆ ನಾನು ಸಿಲ್ಲಿ ಎಂದಿದ್ದೇನೆ ಎಂದು ಹೇಳಿದರು.
ಬಿಜೆಪಿ ಕಿಡಿ:
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದು ಸಿಲ್ಲಿ ಅಟೆಂಪ್ಟಾ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿರುವುದು ಸಿಲ್ಲಿ ಅಟೆಂಪ್ಟಾ. ನೂರಾರು ಜನ ಸತ್ತರೆ ಮಾತ್ರ ಅದು ನಿಮ್ಮ ಪ್ರಕಾರ ಭಯೋತ್ಪಾದನಾ ದಾಳಿ, ಅದೇ ಹತ್ತು ಜನ ಬಾಂಬ್ ಸ್ಪೋಟದಿಂದ ಗಾಯಗೊಂಡರೆ, ಅದು ನಿಮಗೆ ಸಿಲ್ಲಿ ಅಟೆಂಪ್ಟು. ಬಾಂಬ್ ಇಟ್ಟವನು ಬ್ರದರ್, ಬೆಂಕಿ ಹಚ್ಚಿದವರಿಗೆ ಅಮಾಯಕ ಅನ್ನೋ ಪಟ್ಟ ಕಟ್ಟುವ ನಿಮಗೆ, ನಿಮ್ಮ ಸಿಲ್ಲಿ ಅಟೆಂಪ್ಟ್‌ಗಳಿಗೆ ಕರ್ನಾಟಕದ ಜನತೆ ಇನ್ನೊಂದು ತಿಂಗಳಲ್ಲಿ ತಕ್ಕ ಉತ್ತರ ನೀಡುವುದು ನಿಶ್ಚಿತ ಎಂದು ಬಿಜೆಪಿ ಕಿಡಿಕಾರಿದೆ.
– ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್ ಸ್ಫೋಟ ಪ್ರಕರಣ
– ಎನ್‍ಐಎ ಕೋರ್ಟ್‍ನಲ್ಲಿ ಆರೋಪಿಗಳಿಂದ ತಪ್ಪೊಪ್ಪಿಗೆ
ಬೆಂಗಳೂರು: 2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳು ನ್ಯಾಯಾಲಯದ ಮುಂದೆ ತಪ್ಪೊಪಿಕೊಂಡಿದ್ದಾರೆ.
ಆರೋಪಿಗಳಾದ ಅಹಮ್ಮದ್ ಜಮಾಲ್, ಹಾಗು ಆಫ್ತಾಬ್ ಆಲಮ್ ಅಲಿಯಾಸ್ ಫಾರೂಕ್ ತಪ್ಪೊಪ್ಪಿಕೊಂಡಿದ್ದಾರೆ. ಈ ಇಬ್ಬರು ಎನ್‍ಐಎ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ ನಾವು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯವರು ಎಂದು ಹೇಳಿದ್ದಾರೆ.
ನಾವು ದೆಹಲಿಯ ಜಾಮೀಯಾ ನಗರದ ಮನೆಯೊಂದರಲ್ಲಿ ಬಾಂಬ್ ಸ್ಫೋಟದ ಒಳ ಸಂಚು ರೂಪಿಸಿದ್ದೆವು. ಈ ಮನೆಯಲ್ಲಿರುವಾಗಲೇ ನಮಗೆ ಲಷ್ಕರ್ ಇ-ತೋಯ್ಬಾ ಸಂಘಟನೆಯಿಂದ ಆರ್ಥಿಕ ಸಹಾಯ ದೊರಕಿತ್ತು. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸುವ ಸ್ಥಳವನ್ನು ಪ್ರಕರಣದ ಪ್ರಮುಖ ಆರೋಪಿಯಾದ ಮಹಮದ್ ಯಾಸಿನ್ ನಿರ್ದೇಶನದಂತೆ ಗುರುತಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ಹಾಗೂ ತುಮಕೂರಿನಲ್ಲಿ ಸ್ಫೋಟದ ಸಂಚು ರೂಪಿಸಲಾಗಿತ್ತು. ಹೀಗಾಗಿ ಬಾಂಬ್ ಸ್ಫೋಟಕವನ್ನು ತುಮಕೂರಿನಿಂದ ಬೆಂಗಳೂರಿಗೆ ತಂದಿದ್ದೇವು. ಯಾಸಿನ್ ಮತ್ತು ಇತರ ನಾಲ್ವರು ಸೇರಿಕೊಂಡು ಸ್ಟೇಡಿಯಂ ಬಳಿ 5 ಸ್ಫೋಟಕಗಳನ್ನು ಅಳವಡಿಸಿದ್ದೇವು ಎಂದು ಆರೋಪಿಗಳು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂಬರ್ 12ರಲ್ಲಿದ್ದ ಬಾಂಬ್ ಸ್ಫೋಟಗೊಂಡು 15 ಮಂದಿ ಗಾಯಗೊಂಡಿದ್ದರು. ಉಳಿದ ನಾಲ್ಕು ಬಾಂಬ್‍ಗಳನ್ನು ಪೊಲೀಸರು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದರು.
ಈ ಮಧ್ಯೆ ಆರೋಪಿಗಳ ತಪ್ಪೊಪ್ಪಿಗೆಯನ್ನು ತಿರಸ್ಕರಿಸುವಂತೆ ಸರ್ಕಾರಿ ಪರ ವಕೀಲರಿಂದ ನ್ಯಾಯಲಯಕ್ಕೆ ಮನವಿ ಮಾಡಿದ್ದಾರೆ. ಆರೋಪಿಗಳು ದೇಶದ ವಿರುದ್ಧ ಯುದ್ಧ ಸಾರಿದವರು, ಹೀಗಾಗಿ ಇವರಿಗೆ ಶಿಕ್ಷೆ ಆಗಬೇಕು. ಈ ಹಿನ್ನಲೆ ನ್ಯಾಯಾಲಯ ಆರೋಪಿಗಳ ತಪ್ಪೊಪ್ಪಿಗೆ ಅರ್ಜಿ ವಜಾ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳ ಹೇಳಿಕೆಯ ಆಧಾರದಲ್ಲಿ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.