Tag: Bomb Attack

  • ಗುರುಗ್ರಾಮ್ ಬಾಂಬ್ ಸ್ಫೋಟದ ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್

    ಗುರುಗ್ರಾಮ್ ಬಾಂಬ್ ಸ್ಫೋಟದ ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್

    ಚಂಡೀಗಢ: ಗುರುಗ್ರಾಮ್‌ನಲ್ಲಾದ (Gurugram) ಬಾಂಬ್ ಸ್ಫೋಟದ (Bomb Attack) ಹಿಂದೆ ತಮ್ಮ ಕೈವಾಡವಿರುವುದಾಗಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ (Lawrence Bishnoi Gang) ಸಹಚರರು ಹೊಣೆ ಹೊತ್ತುಕೊಂಡಿದ್ದಾರೆ.

    ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಹಚರರಾದ ರೋಹಿತ್ ಗೋಡಾರಾ ಹಾಗೂ ಗೋಲ್ಡಿ ಬ್ರಾರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಗುರುಗ್ರಾಮ್ ಸೆಕ್ಟರ್ 29ರ ಬಾರ್‌ನ ಹೊರಗೆ ಬಾಂಬ್ ಸ್ಫೋಟ್‌ದ ಬಗ್ಗೆ ತಿಳಿಸಿದ್ದಾರೆ.ಇದನ್ನೂ ಓದಿ: ವಿದ್ಯುತ್‌ ಕಂಬವನ್ನೂ ಸೇರಿಸಿ ಕಟ್ಟಡ ನಿರ್ಮಾಣ – ಅಧಿಕಾರಿಗಳಿಂದ ಬುಲ್ಡೋಜರ್‌ ಅಸ್ತ್ರ ಪ್ರಯೋಗ

    ಪೋಸ್ಟ್ನಲ್ಲಿ ಇದು ಕೇವಲ ಸಣ್ಣ ಮಟ್ಟದ ಸ್ಫೋಟ, ಇನ್ನೂ ದೊಟ್ಟ ಮಟ್ಟದಲ್ಲಿ ಸ್ಫೋಟಗೊಳಿಸುವ ನಮ್ಮ ಬಳಿ ಇದೆ. ಬಾರ್‌ನ ಮಾಲೀಕ ಅಕ್ರಮವಾಗಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾನೆ. ಜೊತೆಗೆ ತೆರಿಗೆಯಿಂದ ವಂಚಿಸುವ ಮೂಲಕ ದೇಶದ ಸ್ಥಿತಿಗೆ ಹಾನಿಯುಂಟು ಮಾಡುತ್ತಿದ್ದಾನೆ ಎಂದು ಬಿಷ್ಣೋಯ್ ಗ್ಯಾಂಗ್ ಆರೋಪಿಸಿದೆ. ಘಟನೆಗೆ ಸಂಬಂಧಿಸಿದಂತೆ ಸಚಿನ್ ಎಂಬಾತನನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಮಂಗಳವಾರ (ಡಿ.10) ಬಾರ್‌ನ ಹೊರಗೆ ಆರೋಪಿ ಎರಡು ಬಾಂಬ್‌ಗಳನ್ನ ಸ್ಫೋಟಿಸಿದ್ದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಆರೋಪಿ ಘಟನೆಯ ವೇಳೆ ಅಮಲಿನಲ್ಲಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.

    ಐಪಿಎಸ್ ಅಧಿಕಾರಿ ವಿಕಾಸ್ ಅರೋರಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ಹಾಗೂ ಭದ್ರತೆಗಾಗಿ ಬಾಂಬ್ ನಿಷ್ಕ್ರೀಯ ತಂಡವನ್ನು ಕರೆಯಿಸಲಾಯಿತು. ಘಟನೆಯಿಂದ ಅಲ್ಲಿದ್ದ ವಾಹನ ಹಾಗೂ ಬೋರ್ಡ್ಗೆ ಸಣ್ಣಪುಟ್ಟ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೃತ್ಯದ ಹಿಂದಿನ ಮೂಲ ಉದ್ದೇಶವನ್ನು ತಿಳಿಯಲು ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ತುಮಕೂರು | ಕಾಂಗ್ರೆಸ್‌ನ ಮಾಜಿ ಶಾಸಕ ಆರ್. ನಾರಾಯಣ ನಿಧನ

     

  • ಮ್ಯಾನ್ಮಾರ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಭಾರತದಿಂದ ಬಾಂಬ್‌ ದಾಳಿ!

    ಮ್ಯಾನ್ಮಾರ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಭಾರತದಿಂದ ಬಾಂಬ್‌ ದಾಳಿ!

    – ತನ್ನ ಶಿಬಿರದ ಮೇಲೆ ಬಾಂಬ್‌ ದಾಳಿಯಾಗಿದೆ
    – ಉಲ್ಫಾ-I ಸಂಘಟನೆಯಿಂದ ಹೇಳಿಕೆ ಬಿಡುಗಡೆ

    ಗುವಾಹಟಿ: ಮ್ಯಾನ್ಮಾರ್‌ನಲ್ಲಿರುವ (Myanmar) ಉಗ್ರರ ಶಿಬಿರದ ಮೇಲೆ ಭಾರತ ಡ್ರೋನ್‌ (Drone) ಮೂಲಕ ಬಾಂಬ್‌ ದಾಳಿ (Bomb Attack) ನಡೆಸಿದೆ.

    ಭಾನುವಾರ ತನ್ನ ಶಿಬಿರದ ಮೇಲೆ ಮೂರು ಬಾಂಬ್‌ಗಳನ್ನು ಡ್ರೋನ್‌ಗಳಿಂದ ಬೀಳಿಸಲಾಗಿದೆ ಎಂದು ಪರೇಶ್ ಬರುವಾ ನೇತೃತ್ವದ ಉಲ್ಫಾ-I ಸೋಮವಾರ ಹೇಳಿಕೊಂಡಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ; ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳುವ ವಿಶ್ವಾಸವಿದೆ: ಫಾರೂಕ್‌ ಅಬ್ದುಲ್ಲಾ

    ಭಾನುವಾರ ಸಂಜೆ 4:10, 4:12 ಮತ್ತು 4:20 ಕ್ಕೆ ಮೂರು ಬಾಂಬ್‌ಗಳನ್ನು ಡ್ರೋನ್‌ಗಳಿಂದ ಬೀಳಿಸಲಾಗಿದೆ. ದಾಳಿಯಿಂದ ಇಬ್ಬರು ಗಾಯಗೊಂಡಿದ್ದು, ಡ್ರೋನ್‌ ದಾಳಿಯನ್ನು ಭಾರತೀಯ ಭದ್ರತಾ ಪಡೆಗಳು ನಡೆಸಿವೆ ಎಂದು ಸಂಘಟನೆಯು ಹೇಳಿಕೊಂಡಿದೆ. ಇದನ್ನೂ ಓದಿ: ಗೋವಾದಲ್ಲಿ ಹೆತ್ತ ಮಗುವನ್ನೇ ಹತ್ಯೆಗೈದ ಬೆಂಗ್ಳೂರಿನ CEO – ಸೂಟ್‌ಕೇಸ್‌ನಲ್ಲಿ ಶವವಿಟ್ಕೊಂಡು ಹೋಗುವಾಗ ಅರೆಸ್ಟ್

    ಮೊದಲ ಎರಡು ಸ್ಫೋಟಗಳಲ್ಲಿ ನಮ್ಮ ಸಂಘಟನೆಯ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂರನೇ ಬಾಂಬ್ ಸ್ಫೋಟಿಸಲಿಲ್ಲ. ಈ ರೀತಿಯ ದಾಳಿಯಿಂದ ನಾವು ನಮ್ಮ ಉದ್ದೇಶದಿಂದ ವಿಚಲಿತಗೊಳ್ಳುವುದಿಲ್ಲ ಎಂದು ಹೇಳಿದೆ.

    ಭಾರತದ ವಿದೇಶಾಂಗ ಸಚಿವಾಲಯ ಇಲ್ಲಿಯವರೆಗೆ ಈ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

     

  • ಅಫ್ಘಾನ್‍ನಲ್ಲಿ ತ್ರಿವಳಿ ಬಾಂಬ್ ಸ್ಫೋಟ- 12 ಸಾವು, 21ಕ್ಕೂ ಹೆಚ್ಚು ಮಂದಿಗೆ ಗಾಯ

    ಅಫ್ಘಾನ್‍ನಲ್ಲಿ ತ್ರಿವಳಿ ಬಾಂಬ್ ಸ್ಫೋಟ- 12 ಸಾವು, 21ಕ್ಕೂ ಹೆಚ್ಚು ಮಂದಿಗೆ ಗಾಯ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಕಾಬೂಲ್‍ನಲ್ಲಿ ಇಂದು ತ್ರಿವಳಿ ಬಾಂಬ್ ಸ್ಫೋಟಗೊಂಡ ಪರಿಣಾಮ 12 ಮಂದಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ.

    ಸರ್ಕಾರಿ ನೌಕರರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಮೊದಲ ಬಾಂಬ್ ಸ್ಫೋಟ ಸಂಭವಿಸಿದೆ. ಈ ವೇಳೆ ಗಣಿ ಮತ್ತು ಪೆಟ್ರೋಲಿಯಂ ಸಚಿವಾಲಯದ 5 ಸಿಬ್ಬಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಹಾಗೆಯೇ ಎರಡನೇ ಬಾಂಬ್ ಸ್ಫೋಟದಲ್ಲಿ 7 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಮೊದಲು ಮಿನಿಬಸ್‍ಗೆ ಅಂಟಿಸಲಾದ ಮ್ಯಾಗ್ನೆಟಿಕ್ ಬಾಂಬ್ ಸ್ಫೋಟಗೊಂಡಿದೆ. ನಂತರ ಸ್ಥಳಕ್ಕೆ ಬಂದ ಆತ್ಮಾಹುತಿ ಬಾಂಬ್ ದಾಳಿಕೋರನಿಂದ ಎರಡನೇ ಬಾಂಬ್ ಸ್ಫೋಟಗೊಂಡಿದೆ. ಬಳಿಕ ಅಪರಿಚಿತ ಉಗ್ರರು ಕಾರನ್ನು ಸ್ಫೋಟಿಸಿದಾಗ ಮೂರನೇ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್‍ನ ಆಂತರಿಕ ಸಚಿವಾಲಯದ ವಕ್ತಾರ ನಸ್ರತ್ ರಹೀಮಿ ಹೇಳಿದ್ದಾರೆ.

    ಈವರೆಗೆ ಸ್ಫೋಟಕ್ಕೆ ಒಟ್ಟು 12 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಏರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

    ಈ ಮೂರು ದಾಳಿಗಳಲ್ಲಿ ಒಂದರ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ವಿದೇಶಿ ಪಡೆಗಳ ಮೇಲೆ ನಾವು ದಾಳಿ ನಡೆಸಲು ಬಾಂಬ್ ಸ್ಫೋಟಿಸಿದ್ದೇವೆ. ಉಳಿದ ಎರಡು ದಾಳಿಗೂ ನಮಗೂ ಸಂಬಂಧವಿಲ್ಲ ಎಂದು ತಾಲಿಬಾನ್ ತಿಳಿಸಿರುವುದಾಗಿ ಅಫ್ಘಾನ್ ಅಧ್ಯಕ್ಷರ ವಕ್ತಾರ ಸೇದಿಕ್ ಸಿದ್ದೀಕಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಅಮಾಯಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ಈ ದಾಳಿಯು ಕಾಬೂಲ್ ಹಾಗೂ ಅಫ್ಘಾನಿಸ್ತಾನದಲ್ಲಿ ಇರುವ ಉದ್ವಿಗ್ನ ಪರಿಸ್ಥಿತಿಯನ್ನು ಹೆಚ್ಚು ಮಾಡುವಂತಿದೆ. ತಾಲಿಬಾನ್ ಜೊತೆ ಅಮೆರಿಕ ಶಾಂತಿ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದೆ. ಆದ್ರೆ ಉಗ್ರರು ಬಾಂಬ್ ದಾಳಿಗಳನ್ನು ಮಾಡಿ ಈ ಸಮರವನ್ನು ಉಲ್ಭಣಗೊಳಿಸುತ್ತಿದ್ದಾರೆ.

  • ಈಜಿಪ್ಟ್ ನ ಮಸೀದಿಯಲ್ಲಿ ಉಗ್ರರ ಅಟ್ಟಹಾಸ- 230 ಜನರ ಮಾರಣಹೋಮ

    ಈಜಿಪ್ಟ್ ನ ಮಸೀದಿಯಲ್ಲಿ ಉಗ್ರರ ಅಟ್ಟಹಾಸ- 230 ಜನರ ಮಾರಣಹೋಮ

    ಕೈರೋ: ಈಜಿಪ್ಟ್ ನ ಉತ್ತರ ಭಾಗದ ಸಿನಾಯ್ ಪ್ರಾಂತ್ಯದ ಮಸೀದಿಯೊಂದರಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಬಾಂಬ್ ಸ್ಫೋಟಿಸಿ ಹಾಗೂ ಗುಂಡಿನ ದಾಳಿ ನಡೆಸಿ 230 ಮಂದಿಯನ್ನ ಕೊಂದಿದ್ದಾರೆ.

    ಘಟನೆಯಲ್ಲಿ 109ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎಲ್-ಆರಿಷ್ ಪ್ರಾಂತ್ಯದ ರಾಜಧಾನಿ ಬಿರ್ ಅಲ್ ಅಬ್ದ್ ನಗರ ಅಲ್-ರವ್ದಾಹ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

    ಶುಕ್ರವಾರದ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ ಮಸೀದಿಯ ಬಳಿ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ. ಜೀಪಿನಲ್ಲಿ ಗನ್‍ಗಳನ್ನು ಹಿಡಿದು ಬಂದಿದ್ದ ಸುಮಾರು 40 ಉಗ್ರರು, ಆತಂಕದಿಂದ ಓಡುತ್ತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ಅಟ್ಟಹಾಸಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ.

    ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಳಿಕ ಮಸೀದಿಯ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಈವರೆಗೆ ಘಟನೆಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ ಅಂತ ವರದಿಯಾಗಿದೆ.

    https://twitter.com/kabhishek744/status/934115547943288832

  • ಕೇರಳ ಸಿಎಂ ತಲೆಗೆ 1 ಕೋಟಿ ಘೋಷಿಸಿದ ಬೆನ್ನಲ್ಲೇ ಆರ್‍ಎಸ್‍ಎಸ್, ಸಿಪಿಎಂ ಜಟಾಪಟಿ!

    ಕೇರಳ ಸಿಎಂ ತಲೆಗೆ 1 ಕೋಟಿ ಘೋಷಿಸಿದ ಬೆನ್ನಲ್ಲೇ ಆರ್‍ಎಸ್‍ಎಸ್, ಸಿಪಿಎಂ ಜಟಾಪಟಿ!

    ಕೊಝಿಕೋಡ್: ಕೇರಳದಲ್ಲಿ ಆರ್‍ಎಸ್‍ಎಸ್ ಮತ್ತು ಸಿಪಿಎಂ ನಡುವಿನ ಹಿಂಸಾಚಾರ ಮುಗಿಲು ಮುಟ್ಟಿದೆ. ಮಧ್ಯಪ್ರದೇಶದ ಆರ್‍ಎಸ್‍ಎಸ್ ನಾಯಕ ಚಂದ್ರಾವತ್, ಕೇರಳ ಸಿಎಂ ಪಿಣರಾಯಿ ವಿಜಯನ್ ತಲೆಗೆ ಒಂದು ಕೋಟಿ ಬಹುಮಾನ ಘೋಷಿಸಿದ ಬಳಿಕ ಇದೀಗ ಉರಿದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

    ಈ ಘೋಷಣೆಯ ಬೆನ್ನಲ್ಲೇ ಗುರುವಾರ ಕೇರಳದ ಕೊಝಿಕೋಡ್ ಜಿಲ್ಲೆಯಲ್ಲಿರುವ ಸಿಪಿಎಂ ಕಚೇರಿಗೆ ದುಷ್ಕರ್ಮಿಗಳು ಬಾಂಬ್ ಹಾಕಿದ್ದಾರೆ. ಪರಿಣಾಮ ಕಚೇರಿಯ ಬಾಗಿಲು ಒಡೆದಿದ್ದು, ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಯಾವುದೇ ಸಾವು, ನೋವಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದ್ರೆ ಈ ಘನೆಯ ಹಿಂದೆ ಬಿಜೆಪಿ ಹಾಗೂ ಆರ್‍ಎಸ್‍ಎಸ್ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಇದಕ್ಕೂ ಮೊದಲು ನಾದಪುರಂ ಜಿಲ್ಲೆಯಲ್ಲಿರುವ ಆರ್‍ಎಸ್‍ಎಸ್ ಕಚೇರಿಯ ಮೇಲೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದರು. ಘಟನೆಯಲ್ಲಿ ಇಬ್ಬರು ಆರ್‍ಎಸ್‍ಎಸ್ ಕಾರ್ಯಕರ್ತರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಕೊಝಿಕೋಡ್‍ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

    ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಕೃತ್ಯದ ಹಿಂದೆ ಯಾರ ಕೈವಾಡವಿದೆಯೆಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.