Tag: bolywood

  • ಮುಸ್ಲಿಮರ ಟೋಪಿ ಧರಿಸಿ ಶುಭಾಶಯ – 1 ಲಕ್ಷ ಅಭಿಮಾನಿಗಳನ್ನು ಕಳೆದುಕೊಂಡ ನಟ ಅಭಿಷೇಕ್

    ಮುಸ್ಲಿಮರ ಟೋಪಿ ಧರಿಸಿ ಶುಭಾಶಯ – 1 ಲಕ್ಷ ಅಭಿಮಾನಿಗಳನ್ನು ಕಳೆದುಕೊಂಡ ನಟ ಅಭಿಷೇಕ್

    ಹಿಂದಿ ವೆಬ್ ಸರಣಿಗಳಲ್ಲಿ ನಟಿಸಿರುವ ಅಭಿಷೇಕ್ ಸಿಂಗ್ (Abhishek Singh) ಅವರು ಬಕ್ರೀದ್ ಹಬ್ಬಕ್ಕೆ ಶುಭ ಕೋರಿ ಪೋಸ್ಟ್ ಹಾಕಿದ ಪರಿಣಾಮ 1 ಲಕ್ಷ ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ.

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಭಿಷೇಕ್ ಸಿಂಗ್ ಪೋಸ್ಟ್ ಮಾಡಿದ್ದಾರೆ. ಮುಸ್ಲಿಮರ ಟೋಪಿ ಧರಿಸಿ ಶುಭ ಕೋರಿದ್ದಕ್ಕೆ 1 ಲಕ್ಷ ಫಾಲೋವರ್ಸ್ ನನ್ನನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಗುರುವಾರ ಕೆಂಪು ಬಣ್ಣದ ಕುರ್ತಾದ ಜೊತೆ ಮುಸ್ಲಿಮರು ಧರಿಸುವ ಬಿಳಿ ಬಣ್ಣದ ಟೋಪಿ ಧರಿಸಿದ ಫೋಟೋವನ್ನು ಶೇರ್ ಮಾಡಿದ್ದರು. ಪಕ್ಕಾ ಇಸ್ಲಾಂ ಸಂಪ್ರದಾಯದಂತೆ ರೆಡಿಯಾಗಿದ್ದ ಅಭಿಷೇಕ್ ಸಿಂಗ್ ಅವರ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್‌ ಮಾಡಲ್ಲ- ಪ್ರಿಯಾಮಣಿ ಖಡಕ್‌ ಉತ್ತರ

    ಈ ಪೋಸ್ಟ್ ಹಲವು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅನೇಕರು ಪೋಸ್ಟ್ ಡಿಲೀಟ್ ಮಾಡಿ ಎಂದು ಹೇಳಿದ್ದರು. ಈ ಪೋಸ್ಟ್‌ಗೆ ರಿಪ್ಲೈ ರೂಪದಲ್ಲಿ ಕಮೆಂಟ್ ಮಾಡಿದ ಅಭಿಷೇಕ್ ಈ ಒಂದು ಪೋಸ್ಟ್‌ನಿಂದ ನಾನು 1 ಲಕ್ಷ ಅಭಿಮಾನಿಗಳನ್ನು ಕಳೆದುಕೊಂಡೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಅಭಿಷೇಕ್ ಅವರನ್ನು ಇನ್‌ಸ್ಟಾದಲ್ಲಿ 48.46 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.

    https://www.instagram.com/p/CauB6eblbh8/?utm_source=ig_web_copy_link&igshid=MzRlODBiNWFlZA==

    ಅಭಿಷೇಕ್ ಸಿಂಗ್ ಐಎಎಸ್ ಅಧಿಕಾರಿಯಾಗಿಯೂ ಈ ಹಿಂದೆ ಕೆಲಸ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಅಭಿಷೇಕ್ ಅವರನ್ನು ಅಮಾನತುಗೊಳಿಸಿತ್ತು. 82 ದಿನಗಳ ಕಾಲ ಕಾರಣ ತಿಳಿಸಿದೇ ಕರ್ತವ್ಯಕ್ಕೆ ಗೈರು ಹಾಜರಿ ಹಾಕಿದ್ದಕ್ಕೆ ಸರ್ಕಾರ ಅಭಿಷೇಕ್ ಅವರನ್ನು ಅಮಾನತು ಮಾಡಿತ್ತು. ಈಗ ಇನ್‌ಸ್ಟಾ ಪೋಸ್ಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾರುಖ್‌ ಖಾನ್‌ ನಟನೆಯ ʻಜವಾನ್‌ʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌

    ಶಾರುಖ್‌ ಖಾನ್‌ ನಟನೆಯ ʻಜವಾನ್‌ʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌

    ‘ಪಠಾಣ್’ (Pathaan) ಸಿನಿಮಾದ ಸಕ್ಸಸ್ ಅಲೆಯಲ್ಲಿರುವಾಗಲೇ ಶಾರುಖ್ ಖಾನ್ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಸಿನಿಮಾ ಸಕ್ಸಸ್ ಕಾಣದೇ ಬೆಸತ್ತ ಶಾರುಖ್‌ಗೆ ‘ಪಠಾಣ್’ ಸಿನಿಮಾದಿಂದ ಮರುಜೀವ ಸಿಕ್ಕಿದೆ. ಇದೀಗ ‘ಜವಾನ್’ (Jawan) ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ. ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

    ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರೀಕರಣ ನಡೆಯುತ್ತಿರುವಾಗಲೇ ಶಾರುಖ್ ಖಾನ್, ಆಕ್ಷನ್-ಮಾಸ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದರು. ಅದುವೇ ಜವಾನ್. ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನದ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಲಾಗಿದೆ. ಇದನ್ನೂ ಓದಿ:ನಾನು ಮಾತಾಡಿದರೆ ಸಮಂತಾ ಕಥೆ ಅಷ್ಟೆ: ಮತ್ತೆ ಗುಡುಗಿದ ಚಿಟ್ಟಿ ಬಾಬು

    ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರುವ ‘ಜವಾನ್’ ಜೂನ್ 2ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಮೇ ತಿಂಗಳ ಮೊದಲ ವಾರದಿಂದ ಶಾರುಖ್ ಖಾನ್ ಹಾಗೂ ತಂಡ ಪ್ರಾರಂಭಿಸಲಿದೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಸಹ ಅಂತಿಮ ಹಂತದಲ್ಲಿವೆ. ಇವುಗಳು ಮುಗಿದ ಬಳಿಕ ಸಿನಿಮಾ ತಂಡವು ಪ್ರಚಾರ ಕಾರ್ಯ ಮಾಡಲಿದ್ದಾರೆ.

    ಶಾರುಖ್ ಖಾನ್‌ಗೆ ಜೋಡಿಯಾಗಿ ಕಾಲಿವುಡ್ ಸೂಪರ್ ಸ್ಟಾರ್ ನಯನತಾರಾ (Nayanatara) ನಟಿಸಿದ್ದಾರೆ. ಹಾಸ್ಯ ನಟ ಯೋಗಿ ಬಾಬು ಕೂಡ ಸಿನಿಮಾದ ಭಾಗವಾಗಿದ್ದಾರೆ. ತಮಿಳಿನ ಸ್ಟಾರ್ ವಿಜಯ್ (Vijay) ಕೂಡ ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಇಬ್ಬರ ಜುಗಲ್‌ಬಂದಿ ನೋಡಲು ಜೂನ್ 2ರವರೆಗೂ ಕಾದುನೋಡಬೇಕಿದೆ.

  • ಕೊನೆಯ ಪ್ರಶ್ನೆಗೆ ಜಾಣ್ಮೆಯ ಉತ್ತರ- ಅಮೆರಿಕ ಸುಂದರಿಗೆ ಒಲಿಯಿತು ವಿಶ್ವ ಸುಂದರಿ ಪಟ್ಟ

    ಕೊನೆಯ ಪ್ರಶ್ನೆಗೆ ಜಾಣ್ಮೆಯ ಉತ್ತರ- ಅಮೆರಿಕ ಸುಂದರಿಗೆ ಒಲಿಯಿತು ವಿಶ್ವ ಸುಂದರಿ ಪಟ್ಟ

    `ಮಿಸ್ ಯೂನಿವರ್ಸ್ 2022′ (Miss Universe 2022) ಪಟ್ಟ ಈ ಬಾರಿ ಅಮೆರಿಕದ ಪಾಲಾಗಿದೆ. 88 ದೇಶದ ಸುಂದರಿಯರಿಗೆ ಸೆಡ್ಡು ಹೊಡೆದು ಬೊನ್ನೀ ಗ್ಯಾಬ್ರಿಯಲ್ ನೂತನ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಈ ಪಟ್ಟ ಗಿಟ್ಟಿಸಿಕೊಳ್ಳಲು ಗ್ಯಾಬ್ರಿಯಲ್ ಕೊಟ್ಟ ಉತ್ತರದಿಂದ ಸಕ್ಸಸ್‌ಗೆ ದಾರಿ ಮಾಡಿಕೊಟ್ಟಿದೆ.

    ಕಳೆದ ವರ್ಷದ ಮಿಸ್ ಯೂನಿವರ್ಸ್ ಕಿರೀಟ ಗೆದ್ದಿದ್ದ ಭಾರತದ ಹರ್ನಾಜ್ ಸಂಧು ವಿಜಯದ ಕಿರೀಟ ಮುಡಿಗೇರಿಸಿಕೊಂಡಿದ್ದರು. ಈ ವರ್ಷ ಅಮೆರಿಕದ ಸುಂದರಿಗೆ ವಿಶ್ವ ಸುಂದರಿ ಪಟ್ಟ ದಕ್ಕಿದೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?

     

    View this post on Instagram

     

    A post shared by MISS UNIVERSE 2023 (@rbonney_gabriel)

    2022ರ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ದಿವಿತಾ ರೈ ಟಾಪ್ 16ರಲ್ಲಿ ಸ್ಥಾನ ಪಡೆದು ಗೆಲುವಿನ ನಿರೀಕ್ಷೆ ಮೂಡಿಸಿದರೂ, ಆ ನಂತರದ ಆಯ್ಕೆ ಪ್ರಕ್ರಿಯೆಯಲ್ಲಿ ಕಿರೀಟ ಗೆಲ್ಲುವ ನಿರೀಕ್ಷೆಯನ್ನು ಕೈಚೆಲ್ಲಿಬಿಟ್ಟರು. ಭಾರತ ಮತ್ತೊಮ್ಮೆ ಮಿಸ್ ಯೂನಿವರ್ಸ್ ಕಿರೀಟ ಗೆಲ್ಲಲಿದೆ ಎಂಬ ಭಾರತೀಯರ ನಿರೀಕ್ಷೆ ಹುಸಿಯಾಯಿತು. ಟಾಪ್ 3ಗೆ ಬಂದಿದ್ದ ಮಿಸ್ ಅಮೆರಿಕ, ಅಂತಿಮವಾಗಿ ಪ್ರಶ್ನೊತ್ತರ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಬೊನ್ನೀ ಗ್ಯಾಬ್ರಿಯಲ್ (R.Bonney Gabriel) ತಮ್ಮ ಜಾಣ್ಮೆಯ ಉತ್ತರ ನೀಡಿದ್ದಾರೆ. ಈ ಮೂಲಕ ನೂತನ ವಿಶ್ವಸುಂದರಿಯಾಗಿ ಹೊರಹೊಮ್ಮಿದ್ದರು.

    ವಿಶ್ವಸುಂದರಿ ಸ್ಪರ್ಧೆಯಲ್ಲಿ ಮಿಸ್ ಅಮೆರಿಕ ಆರ್ ಬೊನ್ನಿ ಗ್ಯಾಬ್ರಿಯೆಲಾರಿಗೆ, ನೀವು ಮಿಸ್ ಯೂನಿವರ್ಸ್ ಕಿರೀಟ ಗೆದ್ದರೆ ಇದೊಂದು ಸಬಲೀಕರಣದ ಮತ್ತು ಪ್ರಗತಿಪರ ವೇದಿಕೆ ಎಂಬುದನ್ನು ಬಿಂಬಿಸಲು ಹೇಗೆ ಕೆಲಸ ಮಾಡುತ್ತಿರಿ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನನಗೆ ಅಂಥ ಅವಕಾಶ ಸಿಕ್ಕರೆ ನಾನು ಅದನ್ನು ಪರಿವರ್ತನೆಯ ನಾಯಕತ್ವವಾಗಿ ಬಳಸುವೆ. ಕಳೆದ 13 ವರ್ಷಗಳಿಂದ ಪ್ಯಾಷನ್ ಡಿಸೈನರ್ ಆಗಿರುವ ನಾನು ಫ್ಯಾಷನ್‌ನ್ನು ಸದಾ ಉತ್ತಮ ಕಾರ್ಯಕ್ಕಾಗಿ ಬಳಸಿದ್ದೆನೆ. ನನ್ನ ಉದ್ಯಮದಲ್ಲಿ ನಾನು ಮರುಬಳಕೆಯ ಬಟ್ಟೆಗಳಿಗೆ ಆದ್ಯತೆ ನೀಡಿ ಮಾಲಿನ್ಯ ಕಡಿಮೆ ಮಾಡುತ್ತಿದ್ದೇನೆ. ಮಾನವ ಕಳ್ಳ ಸಾಗಣಿಕೆ ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಹೊಲಿಗೆ ತರಗತಿಗಳನ್ನು ನಡೆಸುತ್ತಿದ್ದೇನೆ. ನಮ್ಮಲ್ಲಿರುವ ಪ್ರತಿಭೆಯನ್ನು ನಾವು ಇತರರ ಉದ್ಧಾರಕ್ಕಾಗಿ ಬಳಸಬೇಕು ಎಂದು ಗ್ಯಾಬ್ರಿಯಲ್ ಮಾತನಾಡಿದ್ದಾರೆ.

    ಮಿಸ್ ಅಮೆರಿಕ ಅವರ ಜಾಣ್ಮೆಯ ಉತ್ತರಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಈ ಮೂಲಕ ವಿಶ್ವಸುಂದರಿಯ ಪಟ್ಟವನ್ನ ಬೊನ್ನೀ ಗ್ಯಾಬ್ರಿಯೆಲಾ ತಮ್ಮದಾಗಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೈಲಿನ ಊಟವೂ ಬೇಡ, ಹೊರಗಡೆಯ ಊಟವೂ ಬೇಡ ಎಂದ ಸಲ್ಮಾನ್

    ಜೈಲಿನ ಊಟವೂ ಬೇಡ, ಹೊರಗಡೆಯ ಊಟವೂ ಬೇಡ ಎಂದ ಸಲ್ಮಾನ್

    ಜೋಧಪುರ: ಕೃಷ್ಣಮೃಗ ಭೇಟೆಯಾಡಿದ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್ ಖಾನ್ ಮೊದಲ ದಿನ ಯಾವುದೇ ಆಹಾರ ಸೇವಿಸಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.

    ಜೈಲಿನ ಮೊದಲ ರಾತ್ರಿ ಊಟ ದಾಲ್ ರೋಟಿಯನ್ನು 52 ವರ್ಷದ ಸಲ್ಮಾನ್ ಖಾನ್ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ಹೊರಗಿನಿಂದಲೂ ಊಟವನ್ನು ತರಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

    ಜೈಲಿಗೆ ಬಂದಾಗ ಸಲ್ಮಾನ್‍ಗೆ ರಕ್ತದ ಒತ್ತಡ ಹೆಚ್ಚಾಗಿತ್ತು. ಸ್ವಲ್ಪ ಸಮಯದ ನಂತರ ದೇಹ ಸಹಜ ಸ್ಥಿತಿಗೆ ಮರಳಿತು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಜೈಲಿನ ಅಧೀಕ್ಷಕ ವಿಕ್ರಮ್ ಸಿಂಗ್ ತಿಳಿಸಿದರು. ಇದನ್ನೂ ಓದಿ: ಕೋಟಿ ಕೋಟಿ ಲಾಸ್ – ಸಲ್ಮಾನ್ ಗೆ ಶಿಕ್ಷೆ ಪ್ರಕಟವಾಗ್ತಿದ್ದಂತೆ ಬಾಲಿವುಡ್ ನಿರ್ಮಾಪಕರ ಎದೆಯಲ್ಲಿ ಢವ ಢವ!

    ಸಲ್ಮಾನ್ ಖಾನ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳು ಸಿಗುವುದಿಲ್ಲ. ಅವರ ಕೋಣೆಯಲ್ಲಿ ಒಂದು ಮರದ ಮಂಚ, ಒಂದು ಕಂಬಳಿ, ಒಂದು ಕೂಲರ್ ಇರುತ್ತದೆ. ಜೈಲಿನ ಆಹಾರ ಪದ್ಧತಿಯಂತೆ ದಾಲ್, ಚಪಾತಿ ಇರಲಿದೆ. ಬೆಳಗಿನ ಊಟದಲ್ಲಿ ಕಿಚಡಿ ಇರಲಿದೆ ಎಂದು ಸಿಂಗ್ ತಿಳಿಸಿದ್ದಾರೆ.

    ಇವತ್ತಿನಿಂದ ಕೆಲವು ಕೈದಿಗಳು ಜೊತೆ ಸಲ್ಮಾನ್‍ರನ್ನು ಇರಿಸಲಾಗುತ್ತದೆ. ಬೆದರಿಕೆ ಇರುವ ಹಿನ್ನೆಲೆಯಲ್ಲಿ ಒಂಟಿ ಎಂದು ಭಾವಿಸುವ ಅಗತ್ಯ ಇಲ್ಲ ಎಂದು ಸಿಂಗ್ ತಿಳಿಸಿದ್ದಾರೆ.

    ಎರಡು ದಶಕಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್‍ಗೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡವನ್ನು ವಿಧಿಸಿ ಜೋಧಪುರ ಸಿಜೆಎಂ ಕೋರ್ಟ್ ಶಿಕ್ಷೆಯನ್ನುನಿನ್ನೆ ಪ್ರಕಟಮಾಡಿತ್ತು.