Tag: bollywood

  • ಕೊಹ್ಲಿಯಂತೆ ವರುಣ್ ಧವನ್ ಹೇರ್ ಸ್ಟೈಲ್!

    ಕೊಹ್ಲಿಯಂತೆ ವರುಣ್ ಧವನ್ ಹೇರ್ ಸ್ಟೈಲ್!

    ಮುಂಬೈ: ಬಾಲಿವುಡ್‍ನ ಗುಳಿಕೆನ್ನೆ ಹುಡುಗ ವರುಣ್ ಧವನ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೆ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.

    ವರುಣ್ ತಮ್ಮ ಮುಂಬರುವ `ಬದ್ರಿನಾಥ್ ಕಿ ದುಲ್ಹನಿಯಾ’ ಚಿತ್ರದಲ್ಲಿ ಕೊಹ್ಲಿ ಹಾಗೆ ಕೂಲ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಫೋಟೋ ಒಂದನ್ನು ವರುಣ್ ಟ್ವೀಟ್ ಮಾಡಿದ್ದಾರೆ. ಫೋಟೋದಲ್ಲಿ ಕೊಹ್ಲಿ ಮತ್ತು ವರುಣ್ ಹೇರ್ ಸ್ಟೈಲ್ ಇಬ್ಬರದು ಒಂದೇ ತೆರನಾಗಿ ಕಾಣಿಸಿದೆ.

    ನನ್ನು ಮುಂದಿನ ಚಿತ್ರ ಕೊಹ್ಲಿ ಅಭಿಮಾನಿಗಳಿಗೋಸ್ಕರ ನಿರ್ಮಾಣವಾಗುತ್ತಿದೆ. ಕೊಹ್ಲಿ ಅವರೇ ಸ್ವತಃ ಬಂದು ನನ್ನ ಹೇರ್ ಸ್ಟೈಲ್ ಬದಲಾಯಿಸಲು ಸಹಾಯ ಮಾಡಿದ್ದಾರೆ. ಇಂದು ಕೊಹ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡ ನಾಯಕನಾದರೂ ಅವರು ತುಂಬಾ ಸಹೃದಯಿ ಆಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇದ್ದ ಕೊಹ್ಲಿ ಇಂದಿಗೂ ಹಾಗೆ ಇದ್ದಾರೆ ಎಂದು ವರುಣ್ ಧವನ್ ಟ್ವೀಟ್ ಮಾಡಿದ್ದಾರೆ.

    ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರದಲ್ಲಿ ವರುಣ್ ದವನ್‍ಗೆ ನಾಯಕಿಯಾಗಿ ಡಿಯರ್ ಜಿಂದಗಿ ಹುಡುಗಿ ಆಲಿಯಾ ಭಟ್ ಕಾಣಿಸಿಕೊಳ್ಳಿಲಿದ್ದಾರೆ. ಈ ಮೊದಲು ಇದೇ ಜೋಡಿ `ಹಮ್ಟಿ ಶರ್ಮಾ ಕಿ ದುಲ್ಹನಿಯಾ’ದಲ್ಲಿ ನಟಿಸಿದ್ದರು. ವರುಣ್ ಧವನ್‍ರ ಬದ್ರಿನಾಥ್ ಕಿ ದುಲ್ಹನಿಯಾ ಇದೇ ತಿಂಗಳು 10 ರಂದು ತೆರೆಕಾಣಲಿದೆ.

  • 3 ಈಡಿಯಟ್ಸ್ ಚಿತ್ರ ಕನ್ನಡದಲ್ಲಿ ರೀಮೇಕ್- ಆಮೀರ್ ಪಾತ್ರಕ್ಕೆ ಈ ನಟ ಬಣ್ಣ ಹಚ್ಚಲಿದ್ದಾರೆ

    3 ಈಡಿಯಟ್ಸ್ ಚಿತ್ರ ಕನ್ನಡದಲ್ಲಿ ರೀಮೇಕ್- ಆಮೀರ್ ಪಾತ್ರಕ್ಕೆ ಈ ನಟ ಬಣ್ಣ ಹಚ್ಚಲಿದ್ದಾರೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ರಿಮೇಕ್ ಚಿತ್ರಗಳಿಗೇನು ಕಮ್ಮಿಯಿಲ್ಲ. ಯಾವ ಭಾಷೆಯದ್ದೇಯಾಗಲಿ ಸಿನಿಮಾ ಚೆನ್ನಾಗಿದ್ರೆ ಕನ್ನಡದ ಮಂದಿ ರಿಮೇಕ್ ಮಾಡುತ್ತಾರೆ. ಆ ಲಿಸ್ಟ್‍ಗೆ ಈಗ ಬಾಲಿವುಡ್‍ನ ಸೂಪರ್ ಡೂಪರ್ ಹಿಟ್ ಚಿತ್ರ ಸಿರ್ಪಡೆಯಾಗಲಿದೆ.

    2009ರಲ್ಲಿ ಬಿ-ಟೌನ್ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದ 3 ಈಡಿಯೆಟ್ಸ್ ಸಿನಿಮಾ ಈಗ ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ರಾಜಕುಮಾರ್ ಇರಾನಿ ನಿರ್ದೇಶನದ ತ್ರೀ ಈಡಿಯೆಟ್ಸ್ ಸಿನಿಮಾ ಈಗ ಕನ್ನಡಕ್ಕೆ ರಿಮೇಕ್ ಆಗಲಿದೆಯಂತೆ. ಸ್ಯಾಂಡಲ್‍ವುಡ್‍ನ ಸೂಪರ್ ಸ್ಟಾರ್ ಉಪೇಂದ್ರ ಅಮೀರ್ ಖಾನ್ ಮಾಡಿದ ರಾಂಚು ಪಾತ್ರವನ್ನ ಮಾಡಲಿದ್ದರಂತೆ. ಓ ಮೈ ಗಾಡ್ ಚಿತ್ರದ ರಿಮೇಕ್ ಮುಕುಂದ ಮುರಾರಿ ಸಿನಿಮಾದಲ್ಲಿ ನಟಿಸಿ ಸೈ ಅನ್ನಿಕೊಂಡ ಉಪ್ಪಿ ಈಗ ಅಮಿರ್ ಖಾನ್ ನಟಿಸಿದ ಪಾತ್ರವನ್ನ ಹೇಗೆ ನಿಭಾಯಿಸುವರು ಎಂದು ಕಾದುನೋಡಬೇಕು.

    ತ್ರೀ ಈಡಿಯೆಟ್ಸ್ ಸಿನಿಮಾ ಈ ಮೊದಲು ತಮಿಳಿನಲ್ಲಿಯು 2012ರಲ್ಲಿ ನನ್ ಬನ್ ಹೆಸರಿನಲ್ಲಿ ರಿಮೇಕ್ ಆಗಿತ್ತು. ಕಾಲಿವುಡ್‍ನ ಖ್ಯಾತ ನಿರ್ದೇಶಕ ಎಸ್.ಶಂಕರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿತ್ತು. ಇಳಯದಳಪತಿ ವಿಜಯ್ ಹಾಗೂ ಇಲಿಯಾನ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಕೊಂಡಿದ್ರು. ಆದ್ರೆ ಈ ಸಿನಿಮಾ ಕಾಲಿವುಡ್ ಬಾಕ್ಸಾಫೀಸ್‍ನಲ್ಲಿ ಮಕಾಡೆ ಮಲಗಿತ್ತು.

    ಸ್ಯಾಂಡಲ್‍ವುಡ್‍ನಲ್ಲಿ ಗಜ, ರಾಮ್, ಹುಡುಗರು, ಪವರ್, ಬೃಂದವನಗಳಂತ ರಿಮೇಕ್ ಚಿತ್ರಗಳನ್ನ ನಿರ್ದೇಶಿಸಿ ಸೈ ಅನ್ನಿಸಿಕೊಂಡಿರು ಕೆ.ಮಾದೇಶ್ ಪರಿಕಲ್ಪನೆಯಲ್ಲಿ ಕನ್ನಡದ ತ್ರೀ ಈಡಿಯೆಟ್ಸ್ ಬರಲಿದೆ.

    ಉಪ್ರೇಂದ್ರಗೆ ಜೋಡಿಯಾಗಿ ರಚಿತಾ: ರಿಯಲ್ ಸ್ಟಾರ್ ಉಪೇಂದ್ರ ಜೊತೆ ಡ್ಯೂಯೆಟ್ ಹಾಡಲು ರಚಿತಾ ರಾಮ್ ಫಿಕ್ಸ್ ಆಗಿದ್ದಾರೆ. ಕೆಲದಿನಗಳ ಹಿಂದೆ ಕೆ.ಮಾದೇಶ್ ನಿರ್ದೇಶನದಲ್ಲಿ ಉಪೇಂದ್ರ ಹಾಗೂ ರಚಿತಾ ರಾಮ್ ನಟನೆ ಸಿನಿಮಾವೊಂದರ ಮುಹೂರ್ತವಾಗಿತ್ತು. ಈಗ ಅದರ ಬೆನ್ನಲೆ 3 ಈಡಿಯೆಟ್ಸ್ ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ ಕೆ.ಮಾದೇಶ್.

    ಕನ್ನಡದ ಈ 3 ಈಡಿಯೆಟ್ಸ್ ಚಿತ್ರಕ್ಕೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಜೊತೆಗೆ ಮಾಧವನ್ ಹಾಗೂ ಬೊಮನ್ ಇರಾನಿ ಪಾತ್ರವನ್ನ ಕನ್ನಡದಲ್ಲಿ ಯಾರ ಕೈಯಲ್ಲಿ ಮಾಡಿಸೋದು ಎಂಬುದಕ್ಕೆ ಚಿತ್ರತಂಡ ತಲೆಕೆಡಿಸಿಕೊಂಡಿದೆ. ಸಾಧುಕೋಕಿಲಾ ಈ ಚಿತ್ರಕ್ಕೆ ಸಂಗೀತ ಸಂಯೊಜನೆ ಮಾಡಲಿದ್ದು, ಇದೇ ತಿಂಗಳ 28ಕ್ಕೆ ಕೊಲ್ಲಾಪುರದಲ್ಲಿ ಚಿತ್ರದ ಮುಹೂರ್ತವಾಗಲಿದೆ.

    ಬೇರೆ ಭಾಷೆಯ ಸಿನಿಮಾಗಳನ್ನ ಕನ್ನಡಕ್ಕೆ ರಿಮೇಕ್ ಮಾಡುವುದರಲ್ಲಿ ಸಿದ್ದಹಸ್ತರು ಕೆ.ಮಾದೇಶ್. ಬಾಲಿವುಡ್‍ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದ ತ್ರಿ ಈಡಿಯೆಟ್ಸ್ ಕನ್ನಡದಲ್ಲಿ ಸೂಪರ್‍ಹಿಟ್ ಆಗುತ್ತಾ ಅನ್ನೋದನ್ನ ಕಾದು ನೊಡ್ಬೇಕು.