Tag: bollywood

  • ಅಕ್ಷಯ್ ಕುಮಾರ್‍ಗೆ ಶ್ರೇಷ್ಠ ನಟ ಪ್ರಶಸ್ತಿ, ಕನ್ನಡದ ಅಲ್ಲಮ ಚಿತ್ರಕ್ಕೆ ಎರಡು ಪ್ರಶಸ್ತಿ

    ಅಕ್ಷಯ್ ಕುಮಾರ್‍ಗೆ ಶ್ರೇಷ್ಠ ನಟ ಪ್ರಶಸ್ತಿ, ಕನ್ನಡದ ಅಲ್ಲಮ ಚಿತ್ರಕ್ಕೆ ಎರಡು ಪ್ರಶಸ್ತಿ

    ನವದೆಹಲಿ: 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ‘ರುಸ್ತುಮ್’ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಬಾಲಿವುಡ್ ನಟ ಕುಮಾರ್‍ಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಸಿಕ್ಕಿದೆ.

    ಟಿ.ಎಸ್.ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರ ಎರಡು ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು  ಬಾ.ಪು. ಪದ್ಮನಾಭ ಗೆದ್ದುಕೊಂಡರೆ, ಅತ್ಯುತ್ತಮ ಮೇಕಪ್ ಪ್ರಶಸ್ತಿ ಎನ್.ಕೆ.ರಾಮಕೃಷ್ಣನ್  ಅವರಿಗೆ ಸಿಕ್ಕಿದೆ.

    ಮಲೆಯಾಳಂ ಭಾಷೆಯಲ್ಲಿರುವ ‘ಮಿನ್ನಮಿನುಗು’ ಚಿತ್ರದ ಅಭಿನಯಕ್ಕಾಗಿ ಸುರಭಿ ಲಕ್ಷ್ಮಿ ಅವರಿಗೆ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿ ಸಿಕ್ಕಿದೆ. ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ‘ರಿಸರ್ವ್‍ವೇಶನ್’ಗೆ ಲಭಿಸಿದ್ದರೆ, ಸೋನಂ ಕಪೂರ್ ಅಭಿನಯದ ‘ನೀರ್ಜಾ’ ಹಿಂದಿಯ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

    ಮದಿಪುಗೆ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿ ಸಿಕ್ಕಿದರೆ, ಅತ್ಯುತ್ತಮ ಕೊಂಕಣಿ ಚಿತ್ರ ಡಿ ಝರಾ ಝರಾಗೆ ಸಿಕ್ಕಿದೆ. ಸಾಮಾಜಿಕ ವಿಭಾಗದಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಪಿಂಕು ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.

    ದಂಗಲ್ ಚಿತ್ರದ ಅಭಿನಯಕ್ಕಾಗಿ ಜೈರಾ ವಾಸಿಂಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ. ಅಕ್ಷಯ್ ಕುಮಾರ್ ಅವರು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಸಿನಿ ಉದ್ಯಮಕ್ಕೆ ಸ್ನೇಹ ರಾಜ್ಯ ಪ್ರಶಸ್ತಿಯನ್ನು ಉತ್ತರಪ್ರದೇಶ ಗೆದ್ದುಕೊಂಡಿದೆ.

    ನಿರ್ದೇಶಕ, ನಿರ್ಮಾಪಕ ಪ್ರಿಯದರ್ಶನ್ ನೇತೃತ್ವದ ಸಮಿತಿ ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಿದೆ.

     

  • ಬಾಲಿವುಡ್ ನಟಿ ರಾಖಿ ಸಾವಂತ್ ಬಂಧನ

    ಬಾಲಿವುಡ್ ನಟಿ ರಾಖಿ ಸಾವಂತ್ ಬಂಧನ

    ಮುಂಬೈ: ಪಂಜಾಬ್ ಪೊಲೀಸರು ಇಂದು ಮುಂಬೈ ನಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ರನ್ನು ಬಂಧಿಸಿದ್ದಾರೆ. ವಾಲ್ಮಿಕಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಖಿ ಸಾವಂತ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಏನಿದು ಪ್ರಕರಣ?: ಕಳೆದ ವರ್ಷ ಖಾಸಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮದ ವೇಳೆ ರಾಖಿ ಸಾವಂತ್, ರಾಮಾಯಣ ಬರೆದ ವಾಲ್ಮಿಕಿ ಮತ್ತು ವಾಲ್ಮಿಕಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರೆಂದು ಆರೋಪಿಸಿ ದೂರು ದಾಖಲಿಸಲಾಗಿತ್ತು.

    ಪ್ರಕರಣ ಸಂಬಂಧಿಸಿದಂತೆ ಮಾರ್ಚ್ 9ರಂದು ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ಹಾಜರಾಗುವಂತೆ ರಾಖಿ ಸಾವಂತ್ ಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದ್ರೆ ರಾಖಿ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಸೋಮವಾರ ರಾಖಿ ಸಾವಂತ್ ವಿರುದ್ಧ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ಇದೀಗ ಪಂಜಾಬ್ ಪೊಲೀಸರು ನಟಿಯನ್ನು ಬಂಧಿಸಿದ್ದು, ಏಪ್ರಿಲ್ 10ರಂದು ವಿಚಾರಣೆ ನಡೆಯಲಿದೆ.

  • ರೋಗ್ ನಾಯಕಿ ಆಂಜೆಲಾ ಸುಳ್ಳು ಹೇಳ್ತಿದ್ದಾರೆ ಎಂದ ಹೃತಿಕ್

    ರೋಗ್ ನಾಯಕಿ ಆಂಜೆಲಾ ಸುಳ್ಳು ಹೇಳ್ತಿದ್ದಾರೆ ಎಂದ ಹೃತಿಕ್

    ಮುಂಬೈ: ರೋಗ್ ಚಿತ್ರದ ನಾಯಕಿ ಆಂಜೆಲಾ ಕ್ರಿಸ್ಲಿಂಕಿ ಸುಳ್ಳು ಹೇಳ್ತಿದ್ದಾರೆಂದು ಬಾಲಿವುಡ್ ನಟ ಹೃತಿಕ್ ರೋಷನ್ ಟ್ವೀಟ್ ಮಾಡಿದ್ದಾರೆ.

    ಇತ್ತೀಚೆಗಷ್ಟೆ ಬಿಡುಗಡೆಯಾದ ರೋಗ್ ಚಿತ್ರದಲ್ಲಿ ಅಭಿನಯಿಸಿದ್ದ ಆಂಜೆಲಾ ಕ್ರಿಸ್ಲಿಂಕಿ ಈ ಹಿಂದೆ ಹೃತಿಕ್ ರೋಷನ್ ಜೊತೆ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ರು. ಇತ್ತೀಚೆಗೆ ಪತ್ರಿಕೆಯೊಂದರ ಸಂದರ್ಶನದಲ್ಲಿ ಆಂಜೆಲಾ, ಹೃತಿಕ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ರು.

    ಆಂಜೆಲಾ ಹೇಳಿದ ಮಾತುಗಳನ್ನ ಕೇಳಿದ್ರೆ ಆಕೆ ಹಾಗೂ ಹೃತಿಕ್ ನಡುವೆ ವಿಶೇಷ ಬಾಂಧವ್ಯವಿದೆ ಎಂಬಂತಿದ್ದು, ಆಕೆಯನ್ನು ಕೈಟ್ಸ್ ಚಿತ್ರದ ನಾಯಕಿ ಬಾರ್ಬಾರಾ ಮೋರಿಯೊಂದಿಗೆ ಹೋಲಿಸಿ ಲೇಖನ ಪ್ರಕಟವಾಗಿತ್ತು. ಈ ಹಿಂದೆ ಬಾರ್ಬಾರಾ ಹಾಗೂ ಹೃತಿಕ್ ಮಧ್ಯೆ ಕುಚ್‍ಕುಚ್ ಇದೆ ಎಂಬ ವಂದಂತಿಗಳು ಹರಿದಾಡಿತ್ತು.

    ಇಂದು ಬೆಳಿಗ್ಗೆ ಪತ್ರಿಕೆ ಓದಿದ ಹೃತಿಕ್, ಅದರ ಸ್ಕ್ರೀನ್‍ಶಾಟ್ ತೆಗೆದು ಮೈ ಡಿಯರ್ ಲೇಡಿ, ಯಾರಮ್ಮಾ ನೀನು? ಯಾಕೆ ಸುಳ್ಳು ಹೇಳ್ತಿದ್ಯಾ ಅಂತ ಟ್ವೀಟ್ ಮಾಡಿದ್ದಾರೆ.

    ಸಂದರ್ಶನದಲ್ಲಿ ಆಂಜೆಲಾ ಹೇಳಿದ್ದೇನು?: ಹೃತಿಕ್ ರೋಷನ್ ಜೊತೆ ಮೊದಲ ಬಾರಿಗೆ ಜಾಹಿರಾತೊಂದಕ್ಕಾಗಿ ಕೆಲಸ ಮಾಡುವಾಗ ನನಗೆ ಅವರ ಮೇಲೆ ಕ್ರಶ್ ಆಗಿತ್ತು. ಅವರು ಕೆಲಸದಲ್ಲಿ ನನಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ನನಗೆ ನಟನೆಯ ಬಗ್ಗೆ ಟಿಪ್ಸ್ ನೀಡುತ್ತಿದ್ದರು. ನಾನು ಹೃತಿಕ್ ಅವರಲ್ಲಿ ಒಬ್ಬ ಗುರು ಹಾಗೂ ಗೆಳೆಯನನ್ನು ಕಂಡುಕೊಂಡಿದ್ದೇನೆ ಅಂತ ಹೇಳಿದ್ದಾರೆ.

    ಅವರು ನನ್ನನ್ನು ಮರೆತುಬಿಟ್ಟಿರ್ತಾರೆ ಅಂತ ಅಂದುಕೊಂಡಿದ್ದೆ. ಅವರೊಬ್ಬ ಸ್ಟಾರ್, ಸಾಕಷ್ಟು ಮಾಡೆಲ್‍ಗಳ ಜೊತೆ ಜಾಹಿರಾತು ಚಿತ್ರೀಕರಣ ಮಾಡಿರ್ತಾರೆ. ಆದ್ರೆ ಅವರು ನನಗೆ ಕರೆ ಮಾಡಿ ನಮ್ಮ ಎಲ್ಲಾ ಸಂಭಾಷಣೆಯನ್ನೂ ನೆನಪಿಸಿಕೊಂಡ್ರು. ನಮ್ಮ ತಂದೆ ಸ್ಪೇನ್‍ನ ವೆಲೆಂಸಿಯಾದವರು ಎಂಬುದನ್ನೂ ನೆನಪಿಟ್ಟಿದ್ದರು. ಅಲ್ಲದೆ ನನ್ನ ಕಣ್ಣಿನ ಬಣ್ಣ ಒರಿಜಿನಲ್ಲಾ? ಅಂತ ತಮಾಷೆ ಮಾಡಿದ್ರು. ನಾನು ದಕ್ಷಿಣದಲ್ಲಿ ಚಿತ್ರವೊಂದನ್ನು ಒಪ್ಪಿಕೊಂಡಾಗ ಅದರ ನಿರ್ದೇಶಕರ ಬಗ್ಗೆ ವಿಚಾರಿಸಿ ನಾನು ಈ ಸಿನಿಮಾದಿಂದ ದೊಡ್ಡ ಮಟ್ಟಕ್ಕೆ ಹೋಗ್ತೀನಿ ಎಂದಿದ್ದರು. ನಾನು ಅವರನ್ನು ಗುರುವಿನಂತೆ ನೋಡ್ತೀನಿ. ನನ್ನ ರೋಗ್ ಸಿನಿಮಾದ ಟ್ರೇಲರ್ ಮತ್ತು ಫಸ್ಟ್ ಲುಕ್ ಅವರಿಗೆ ತೋರಿಸಿದ್ದೆ. ಅವರು ಅದನ್ನು ತುಂಬಾ ಇಷ್ಟಪಟ್ಟಿದ್ದರು ಎಂದೆಲ್ಲಾ ಆಂಜೆಲಾ ಸಂದರ್ಶನದಲ್ಲಿ ಹೇಳಿದ್ದಾರೆ.

    ಆಂಜೆಲಾ ಈವರೆಗೆ ದಕ್ಷಿಣದಲ್ಲಿ ಜ್ಯೋತಿ ಲಕ್ಷ್ಮೀ, ಸೈಜ್ ಝೀರೋ ಮತ್ತು ಕನ್ನಡದ ರೋಗ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  • 2017ನೇ ಸಾಲಿನ ಜಗತ್ತಿನ 2ನೇ ಅತ್ಯಂತ ಸುಂದರ ಮಹಿಳೆ ಪ್ರಿಯಾಂಕಾ ಚೋಪ್ರಾ

    2017ನೇ ಸಾಲಿನ ಜಗತ್ತಿನ 2ನೇ ಅತ್ಯಂತ ಸುಂದರ ಮಹಿಳೆ ಪ್ರಿಯಾಂಕಾ ಚೋಪ್ರಾ

    ನವದೆಹಲಿ: ಕೇವಲ ನಟನೆಯಲ್ಲಿ ಮಾತ್ರವಲ್ಲದೇ ತನ್ನ ಸೌಂದರ್ಯದಿಂದಲೂ ನಟಿ ಪ್ರಿಯಾಂಕಾ ಚೋಪ್ರಾ ಎಲ್ಲರ ಮನಸೆಳೆದಿದ್ದಾರೆ.

    ಹೌದು. 34 ವರ್ಷದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 2017ನೇ ಸಾಲಿನ ಜಗತ್ತಿನ ಎರಡನೇ ಅತ್ಯಂತ ಸುಂದರ ಮಹಿಳೆ ಎಂದು ಲಾಸ್ ಏಂಜಲೀಸ್‍ನ ಬುಝ್‍ನೆಟ್ ಘೋಷಣೆ ಮಾಡಿದೆ.

    ಏಂಜಲೀನಾ ಜೂಲಿ, ಎಮ್ಮ ವಾಟ್ಸಾನ್, ಬ್ಲೇಕ್ ಲೈವ್‍ಲಿ ಹಾಗೂ ಮಿಶೆಲ್ ಒಬಾಮಾ ಇದ್ದರು. ಆದ್ರೆ ಇವರೆಲ್ಲರನ್ನೂ ಹಿಂದಿಕ್ಕಿ ಪ್ರಿಯಾಂಕಾ 2ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಮೊದಲ ಸ್ಥಾನವನ್ನು ಪಾಪ್ ತಾರೆ ಬಿಯೋನ್ಸ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಚೋಪ್ರಾ ಶನಿವಾರ ಟ್ವೀಟ್ ಮಾಡಿದ್ದು, ವೋಟ್ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ರು.

    ಸದ್ಯ ಪ್ರಿಯಾಂಕಾ ಚೋಪ್ರಾ `ಬೇ ವಾಚ್’ ಎಂಬ ಹಾಲಿವುಡ್ ಚಿತ್ರವೊಂದರಲ್ಲಿ ಅಭಿನಯಿಸಿದ್ದು, ಶೀಘ್ರವೇ ಚಿತ್ರ ರಿಲೀಸ್ ಆಗಲಿದೆ. ಸೇತ್ ಗೋರ್ಡನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಡ್ವೇಯ್ನ್ ಜಾನ್ಸನ್, ಝಾಕ್ ಎಫ್ರಾನ್, ಅಲೆಕ್ಸಾಂಡ್ರಾ ದಡ್ಡಾರಿಯೋ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವು ಮಾರ್ಚ್ 26ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

  • ಗೆಳತಿ ಲೂಲಿಯಾ, ಕುಟುಂಬಸ್ಥರ ಜೊತೆ ಸೋದರಳಿಯನ ಹುಟ್ಟುಹಬ್ಬ ಆಚರಿಸಿದ ಸಲ್ಮಾನ್ ಖಾನ್ -ಫೋಟೋಗಳಲ್ಲಿ ನೋಡಿ

    ಗೆಳತಿ ಲೂಲಿಯಾ, ಕುಟುಂಬಸ್ಥರ ಜೊತೆ ಸೋದರಳಿಯನ ಹುಟ್ಟುಹಬ್ಬ ಆಚರಿಸಿದ ಸಲ್ಮಾನ್ ಖಾನ್ -ಫೋಟೋಗಳಲ್ಲಿ ನೋಡಿ

    ಮಾಲ್ಡೀವ್ಸ್: ಬಾಲಿವುಡ್‍ನ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಗೆಳತಿ ಲೂಲಿಯಾ ವಂಟೂರು ಜೊತೆ ಸೋದರಿ ಅರ್ಪಿತಾ ಮಗನ ಮೊದಲ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ.

    ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಪುತ್ರ ಆಹಿಲ್‍ನ ಮೊದಲ ಹುಟ್ಟುಹಬ್ಬವನ್ನು ಖಾನ್ ಕುಟುಂಬಸ್ಥರೆಲ್ಲರೂ ಮಾಲ್ಡೀವ್ಸ್ ನಲ್ಲಿ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಸಲ್ಮಾನ್ ಖಾನ್ ಸದ್ಯ `ಜಿಂದಾ ಹೈ ಟೈಗರ್’ ಚಿತ್ರದಲ್ಲಿ ನಟಿಸುತ್ತಿದ್ದು, ಕೆಲಸದ ಒತ್ತಡದ ನಡುವೆ ಸೋದರಳಿಯನ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಆಹಿಲ್‍ಗೆ ಬರ್ತಡೇ ವಿಶ್ ಮಾಡಿದ್ದಾರೆ. ಇದರ ಫೋಟೋಗಳನ್ನು ಇನ್ಸ್ ಟಾಗ್ರಾಮ್‍ನಲಿ ಹಂಚಿಕೊಳ್ಳಲಾಗಿದ್ದು, ಸಲ್ಮಾನ್ ಕುಟುಂಬಸ್ಥರೊಂದಿಗೆ ಲೂಲಿಯಾ ಕೂಡ ಇದ್ದಿದ್ದು ವಿಶೇಷವಾಗಿತ್ತು. ರೊಮಾನಿಯಾದ ಮಾಡೆಲ್, ಗಾಯಕಿ ಹಾಗೂ ನಟಿಯಾಗಿರುವ ಲೂಲಿಯಾ ಸಲ್ಮಾನ್ ಖಾನ್‍ರನ್ನ ಮದುವೆಯಾಗಲಿದ್ದಾರೆ ಎಂಬ ವದಂತಿ ವರ್ಷದ ಹಿಂದಿನಿಂದಲೂ ಇದೆ.

    ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರ ಜೂನ್ 25 ರಂದು ಈದ್ ವಿಶೇಷವಾಗಿ ತೆರೆಕಾಣಲಿದೆ. ಇನ್ನೂ `ಏಕ್ ಥಾ ಟೈಗರ್’ ಚಿತ್ರದ ಮುಂದುವರಿದ ಭಾಗವಾದ ಚಿತ್ರ ಡಿಸೆಂಬರ್ ತಿಂಗಳಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸಲ್ಮಾನ್ ಜೊತೆಯಾಗಿ ಕತ್ರಿನಾ ಕೈಫ್ ಜಿಂದಾ ಹೈ ಟೈಗರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    https://www.instagram.com/p/BSQLXllDMXN/

    https://www.instagram.com/p/BSOb1YuDL3j/

    https://www.instagram.com/p/BSQtAu5A6Fe/

     

    https://www.instagram.com/p/BSOYr0QD4eP/?taken-by=arpitakhansharma

    https://www.instagram.com/p/BSWD2mqjCPs/?taken-by=arpitakhansharma

    https://www.instagram.com/p/BSPJ2_djwEc/?taken-by=arpitakhansharma

  • ಮೂಲ ಹೆಸರು ರಾಜೀವ್ ಭಾಟಿಯಾವನ್ನು ಕೈ ಬಿಟ್ಟದ್ದು ಯಾಕೆ: ಅಕ್ಷಯ್ ಕುಮಾರ್ ವಿವರಿಸಿದ್ರು

    ಮೂಲ ಹೆಸರು ರಾಜೀವ್ ಭಾಟಿಯಾವನ್ನು ಕೈ ಬಿಟ್ಟದ್ದು ಯಾಕೆ: ಅಕ್ಷಯ್ ಕುಮಾರ್ ವಿವರಿಸಿದ್ರು

    ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಮೂಲ ಹೆಸರು ರಾಜೀವ್ ಭಾಟಿಯಾ. ಆದರೆ ಈಗ ಅಕ್ಷಯ್ ಕುಮಾರ್ ತಾವು ರಾಜೀವ್ ಹೆಸರನ್ನು ಯಾವ ಕಾರಣಕ್ಕಾಗಿ ಬದಲಾವಣೆ ಮಾಡಿಕೊಂಡಿದ್ದೇನೆ ಎನ್ನುವ ಬಹು ದಿನಗಳ ಪ್ರಶ್ನೆಗೆ ಈಗ ಉತ್ತರ ನೀಡಿದ್ದಾರೆ.

    ನಾಮ್ ಶಬನಾ ಚಿತ್ರದ ಪ್ರಚಾರಕ್ಕಾಗಿ ಪತ್ರಿಕೆಯೊಂದರ ಕಚೇರಿಗೆ ಅಕ್ಷಯ್ ಕುಮಾರ್ ಆಗಮಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಮೂಲ ಹೆಸರನ್ನು ಬದಲಾಯಿಸಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದರು.

    ಈ ಪ್ರಶ್ನೆಗೆ ಅಕ್ಷಯ್ ಕುಮಾರ್, ಇದೂವರೆಗೂ ನನಗೆ ಈ ಪ್ರಶ್ನೆಯನ್ನು ಯಾರು ಕೇಳಿರಲಿಲ್ಲ. ನನ್ನ ಹೆಸರು ಬದಲಾಗಲು ನಟ ಕುಮಾರ್ ಗೌರವ್ ಕಾರಣ. 1987 ರಲ್ಲಿ ಮಹೇಶ್ ಭಟ್ ನಿರ್ದೇಶನದ ನಟ ಕುಮಾರ್ ಗೌರವ್ ನಟನೆಯ `ಆಜ್’ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದೆ. ಅದು ಕೇವಲ 4.5 ಸೆಕೆಂಡ್‍ಗಳ ಪಾತ್ರವಾಗಿತ್ತು. ನಾಯಕ ನಟ ಕುಮಾರ್ ಗೌರವ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಎಂಬ ಹೆಸರಿನಲ್ಲಿ ನಟಿಸಿದ್ದರು. ಈ ಚಿತ್ರದ ಬಳಿಕ ನನಗೆ ನನಗೆ ಏನಾಯಿತೋ ಗೊತ್ತಿಲ್ಲ, ನೇರವಾಗಿ ಕೋರ್ಟ್ ಗೆ ಹೋಗಿ ರಾಜೀವ್ ಹರಿ ಓಂ ಭಾಟಿಯಾ ಎಂಬ ಹೆಸರಿನ ಬದಲಾಗಿ ಅಕ್ಷಯ್ ಕುಮಾರ್ ಎಂದು ಬದಲಾಯಿಸಿಕೊಂಡೆ ಎಂದು ಉತ್ತರಿಸಿದರು.

    ನಾನು ಕುಮಾರ್ ಗೌರವ್ ನಟನೆಯನ್ನು ನೋಡುತ್ತಿದ್ದೆ. ಅಂದು ನನಗೆ ಏನಾಯಿತೋ ಗೊತ್ತಿಲ್ಲ. ನೇರವಾಗಿ ಮುಂಬೈನ ಬಾಂದ್ರಾ ಕೋರ್ಟ್ ಗೆ ಹೋಗಿ ನನ್ನ ಹೆಸರನ್ನು ಬದಲಾಯಿಸಿದೆ. ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಆದರೂ ನಾನು ವಿಸಿಟಿಂಗ್ ಕಾರ್ಡ್ ಮಾಡಿಸಿಕೊಂಡಿದ್ದೆ ಎಂದು ನಗುತ್ತಾ ಅಕ್ಷಯ್ ಉತ್ತರಿಸಿದರು.

    `ನಾಮ್ ಶಬನಾ’ ಚಿತ್ರದ ನಾಯಕಿ ಪ್ರಧಾನ ಚಿತ್ರವಾಗಿದ್ದು, ನಟಿ ತಾಪ್ಸಿ ಪನ್ನು, ನಟ ಮನೋಜ್ ಬಾಜ್‍ಪೇಯಿ, ನಿರ್ದೇಶಕ ಶಿವಂ ನಾಯರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈಗಾಗಲೇ ಟ್ರೇಲರ್ ನಿಂದ ನಿರೀಕ್ಷೆ ಹುಟ್ಟಿಸಿರುವ `ನಾಮ್ ಶಬನಾ’ ಚಿತ್ರ ಇದೇ ತಿಂಗಳು ಮಾರ್ಚ್ 31 ರಂದು ಬಿಡುಗಡೆಯಾಗಲಿದೆ.

     

  • ಬರೋಬ್ಬರಿ 60 ಲಕ್ಷ ವ್ಯೂ ಕಂಡಿರೋ ವಧುವಿನ ವೈರಲ್ ಡ್ಯಾನ್ಸ್ ವೀಡಿಯೋ ನೋಡಿ

    ಬರೋಬ್ಬರಿ 60 ಲಕ್ಷ ವ್ಯೂ ಕಂಡಿರೋ ವಧುವಿನ ವೈರಲ್ ಡ್ಯಾನ್ಸ್ ವೀಡಿಯೋ ನೋಡಿ

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆ ಮಂಟಪದಲ್ಲಿ ವರ ತನ್ನ ಸ್ನೇಹಿತರೊಂದಿಗೆ ಹೆಜ್ಜೆ ಹಾಕೋದನ್ನ ನೋಡಿರ್ತಿವಿ. ಆದ್ರೆ ಇಲ್ಲೊಬ್ಬಳು ವಧು ತನ್ನ ಭಾವಿ ಪತಿಯನ್ನು ಎದುರು ಕುಳ್ಳಿರಿಸಿಕೊಂಡು ತನ್ನ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಹೆಜ್ಜೆ ಹಾಕಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    17 ನಿಮಿಷ ಇರೋ ಈ ವಿಡಿಯೋದಲ್ಲಿ ವಧುವು ತನ್ನ ಗೆಳೆಯ-ಗೆಳತಿ, ಅಪ್ಪ-ಅಮ್ಮ ಅಜ್ಜಿ-ತಾತ ಹೀಗೆ ಎಲ್ಲರೊಂದಿಗೆ ಒಂದೊಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಳೆದ ಜನವರಿಯಲ್ಲಿ ಈ ವಿಡಿಯೋ ಯೂಟ್ಯೂಬ್‍ಗೆ ಅಪ್‍ಲೋಡ್ ಆಗಿದ್ದು, ಇಲ್ಲಿಯವರೆಗೆ ಸುಮಾರು 60 ಲಕ್ಷ ಜನ ವೀಕ್ಷಿಸಿದ್ದಾರೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಅನ್ನೋದರ ಬಗ್ಗೆ ಮಾಹಿತಿಯಿಲ್ಲ.

    ವಧು ಹೆಜ್ಜೆ ಹಾಕಲು ಆರಂಭಿಸಿದಾಗ ಇತ್ತ ವರ ನಾಚಿಕೆಯಿಂದ ಆಕೆಯನ್ನು ನೋಡುತ್ತಿದ್ದ. ಕೂಡಲೇ ವಧುವಿನ ಸ್ನೇಹಿತರು, ಸಹೋದರರು ಆಕೆಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಹಿಂದಿ ಹಾಡುಗಳಿಗೆ ಈಕೆ ಸಖತ್ ಆಗಿ ಸ್ಟೆಪ್ ಹಾಕಿದ್ದಾಳೆ.

    ಈಕೆ ನೃತ್ಯ ಮಾಡುತ್ತಿದ್ದ ವೇಳೆ ಪುಟ್ಟು ಬಾಲಕನೋರ್ವ ಗುಲಾಬಿ ಹಿಡಿದುಕೊಂಡು ವಧುವಿಗೆ ನೀಡಿದ್ದಾನೆ. ವಿಡಿಯೋದಲ್ಲಿ ಬಂಧು-ಬಳಗದವರೆಲ್ಲರೂ ಒಟ್ಟಿಗೆ ಜೊತೆಯಾಗಿ ಕೊನೆಗೆ ವಧುವಿನೊಂದಿಗೆ ಹೆಜ್ಜೆ ಹಾಕಿರುವುದನ್ನು ನಾವು ನೋಡಬಹುದು.

    https://www.youtube.com/watch?v=rB8HNDY2W_U

  • ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್‍ಗೆ ಪಿತೃವಿಯೋಗ

    ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್‍ಗೆ ಪಿತೃವಿಯೋಗ

    ನವದೆಹಲಿ: ಖ್ಯಾತ ಬಾಲಿವುಡ್ ನಟಿ ಐಶ್ಚರ್ಯ ರೈ ಬಚ್ಚನ್‍ಗೆ ಪಿತೃವಿಯೋಗವಾಗಿದೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಐಶ್ವರ್ಯರೈ ತಂದೆ ಕೃಷ್ಣರಾಜ್ ರೈ ಶನಿವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಅಸುನೀಗಿದರು.

    ಕೃಷ್ಣರಾಜ್ ರೈ ಅವರಿಗೆ 78 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರು ಕಳೆದ ಎರಡು ವಾರಗಳಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಅವರ ಅಂತ್ಯಕ್ರಿಯೆ ನಿನ್ನೆ ಸಂಜೆಯೇ ಮುಂಬೈನಲ್ಲಿ ನೆರವೇರಿತು.

    ಕೃಷ್ಣರಾಜ್ ಅವರು ಮೂಲತಃ ಮಂಗಳೂರಿನ ಕೌಡೂರು ಮೂಲದವರಾಗಿದ್ದು, ಮುಂಬೈನಲ್ಲಿ ನೆಲೆಸಿದ್ದರು. ಮೃತರು ಪತ್ನಿ, ಮಗಳು, ಮಗ ಮತ್ತು ಮೊಮ್ಮಗಳನ್ನು ಅಗಲಿದ್ದಾರೆ.

  • `ಟೈಗರ್ ಜಿಂದಾ ಹೈ’ ಸಿನಿಮಾಗಾಗಿ ತೂಕ ಇಳಿಸಿದ ಸಲ್ಮಾನ್ ಖಾನ್

    `ಟೈಗರ್ ಜಿಂದಾ ಹೈ’ ಸಿನಿಮಾಗಾಗಿ ತೂಕ ಇಳಿಸಿದ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಮುಂದಿನ “ಟೈಗರ್ ಜಿಂದಾ ಹೈ” ಸಿನಿಮಾಗಾಗಿ 18 ರಿಂದ 20 ಕೆ.ಜಿ. ತೂಕ ಇಳಿಸಿಕೊಂಡಿದ್ದೇನೆ ಎಂದು ಖಾಸಗಿ ಚಾನೆಲ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

    ಸಲ್ಮಾನ್ ಖಾನ್ ತಾವು ಹಿಂದೆ ನಟಿಸಿದ್ದ ಸುಲ್ತಾನ್ ಚಿತ್ರದಲ್ಲಿ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದರು. ಹರಿಯಾಣದ ಕುಸ್ತಿ ಪಟುವಾಗಿ ಅಭಿನಯಿಸಿದ್ದು, ಚಿತ್ರದ ಮೊದಲ ಭಾಗದಲ್ಲಿ ಯುವಕನಾಗಿ ಕಾಣಿಸಿಕೊಳ್ಳುವ ಸಲ್ಮಾನ್, ನಂತರದ ಭಾಗದಲ್ಲಿ ವಯಸ್ಕರ ಹಾಗೆ ನಟಿಸಿದ್ದರು.

    ಸುಲ್ತಾನ್ ಚಿತ್ರಕ್ಕಾಗಿ ಸಲ್ಮಾನ್ ಕುಸ್ತಿಪಟು ಅಂತೆ ಕಾಣಲು ದೇಹದ ತೂಕವನ್ನು ಹೆಚ್ಚಿಸಿಕೊಂಡು, ಫಿಟ್ ಆಗಿ ಕಾಣಿಸಿದ್ದರು. ಏಕ್ ಥಾ ಟೈಗರ್ ಚಿತ್ರದ ಮುಂದುವರೆದ ಭಾಗ `ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿ ಸಲ್ಮಾನ್ ಆಕ್ಷನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ತೂಕ ಇಳಿಸುವುದು ಅನಿವಾರ್ಯ ಆದ್ರಿಂದ ದೇಹವನ್ನು ಮೊದಲಿನ ಹಾಗೆ ಸ್ಲಿಮ್ ಮತ್ತು ಫಿಟ್ ಮಾಡಿಕೊಂಡಿದ್ದಾರೆ.

    ಸಿನಿಮಾಗಾಗಿ ತೂಕ ಇಳಿಸುವುದು ಮತ್ತು ಹೆಚ್ಚಿಸಿಕೊಳ್ಳುವದು ತುಂಬಾ ಕಷ್ಟವಾದದ್ದು. ಸುಲ್ತಾನ್ ಚಿತ್ರದಲ್ಲಿ 96 ಕೆಜಿಯಿದ್ದ ಸಲ್ಲು ಸದ್ಯ 18-20 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೆನೆ ಎಂದು ಹೇಳಿದ್ದಾರೆ.

    ಸಲ್ಮಾನ್ ಖಾನ್ ಅಭಿನಯದ `ಟ್ಯೂಬ್ ಲೈಟ್’ ಇದೇ ವರ್ಷ ಜೂನ್ ತಿಂಗಳಲ್ಲಿ ಈದ್ ಹಬ್ಬದಂದು ತೆರೆಕಾಣಲಿದೆ. ಟೈಗರ್ ಜಿಂದಾ ಹೈ ವರ್ಷದ ಕೊನೆಯಲ್ಲಿ ತೆರೆಕಾಣುವ ನಿರೀಕ್ಷೆಯಿದೆ.

     

  • 13 ನೇ ವಯಸ್ಸಿನಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡದಿತ್ತು: ಸೋನಮ್ ಕಪೂರ್

    13 ನೇ ವಯಸ್ಸಿನಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡದಿತ್ತು: ಸೋನಮ್ ಕಪೂರ್

    ಮುಂಬೈ: ಬಾಲಿವುಡ್ ನಟಿ, ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಅವರು ತಮ್ಮ 13 ನೇ ವಯಸ್ಸಿನಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಕಹಿ ಘಟನೆಯನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ನಾನು ನಟಿಯಾಗುವ ಮೊದಲು ಸಾಮಾನ್ಯವಾಗಿ ಎಲ್ಲರಂತೆ ಸಾರ್ವಜನಿಕ ಸ್ಥಳಗಳಲ್ಲಿ ಸುತ್ತುತ್ತಿದ್ದೆ. ಒಂದು ದಿನ ಸಿನಿಮಾ ಥಿಯೇಟರ್‍ನಲ್ಲಿ ವ್ಯಕ್ತಿಯೊಬ್ಬ ನನ್ನ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ. ಒಳಗಡೆ ಕತ್ತಲಿದ್ದರಿಂದ ನಾನು ಅವನನ್ನು ಗುರುತಿಸಲಿಲ್ಲ. ಆ ಒಂದು ಸನ್ನಿವೇಶದಿಂದ ನಾನು ತುಂಬಾ ನೊಂದುಕೊಂಡಿದ್ದೆ. ಸಿನಿಮಾ ಥಿಯೇಟರ್‍ನಲ್ಲಿ ನಡೆದ ವಿಷಯವನ್ನು ನನ್ನ ಶಾಲೆಯಲ್ಲಿ ಶಿಕ್ಷಕರಿಗೆ ಮತ್ತು ಕೌನ್ಸೆಲರ್ ಬಳಿ ಹೇಳಿಕೊಂಡಿದ್ದೆ. ಆದರೆ ಅವರು ಮೈ ಕೈ ಮುಟ್ಟುವುದೆಲ್ಲಾ ಮಾಮೂಲಿ ಎಂದು ಹೇಳಿದ್ದರು. ಅವರು ಅತ್ಯಾಚಾರವನ್ನು ಮಾತ್ರ ಲೈಂಗಿಕ ಕಿರುಕುಳ ಎಂದು ಭಾವಿಸಿದ್ದರು. ಆದ್ರೆ ಯಾರಾದ್ರೂ ಅಸಭ್ಯವಾಗಿ ನಮ್ಮ ಮೈ ಮುಟ್ಟಿದ್ರೆ ಅದು ಲೈಂಗಿಕ ದೌರ್ಜನ್ಯವೆಂಬುದು ನನಗೆ 13ನೇ ವಯಸ್ಸಿನಲ್ಲೂ ಗೊತ್ತಿತ್ತು ಎಂದು ಅವರ ಜೀವನದಲ್ಲಿ ನಡೆದ ಕಹಿ ಘಟನೆ ಬಗ್ಗೆ ಸೋನಮ್ ಕಪೂರ್ ಹೇಳಿಕೊಂಡರು.

    ನಮ್ಮ ಶಾಲೆಗಳಲ್ಲಿ ಇದರ ಬಗ್ಗೆ ತಿಳುವಳಿಕೆ ನೀಡುವುದು ಕಡಿಮೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ಕೊರತೆಯಿದೆ. ಶಿಕ್ಷಕರೂ ಕೂಡ ಇಂತಹ ಪ್ರಕರಣಗಳನ್ನು ನಿರ್ವಹಿಸಲು ಶಕ್ತರಾಗಿಲ್ಲ. ಇದೂವರೆಗೂ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗಿಲ್ಲ. ಇದರಿಂದ ಹುಡುಗಿಯರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅವರು ತಮ್ಮನ್ನು ತಾವು ದೂಷಿಸಿಕೊಳ್ತಿದ್ದಾರೆ. ಅದಕ್ಕಿಂತ ಕೆಟ್ಟ ಸ್ತೀತಿ ಬೇರೊಂದಿಲ್ಲ. ನಮ್ಮ ದೇಶದಲ್ಲಿ ಸೇರಿದಂತೆ ಜಗತ್ತಿನ ಯಾವುದೇ ದೇಶದಲ್ಲಿ ಮಹಿಳೆಗೆ ಸುರಕ್ಷಿತ ಸ್ಥಳ ಅಂತ ಇಲ್ಲ. ನೈಟ್ ಕ್ಲಬ್‍ನಲ್ಲಿ ಅಥವಾ ಜನಜಂಗುಳಿಯಲ್ಲಿ ಯಾರಾದ್ರೂ ಮೈ ಮುಟ್ಟಬಹುದು. ಇದು ಗಂಭೀರವಾದ ವಿಷಯ, ಲೈಂಗಿಕ ದೌರ್ಜನ್ಯ ಎಂದು ತಿಳಿದಿರಬೇಕು ಎಂದು ಸೋನಮ್ ಹೇಳಿದ್ರು.