Tag: bollywood

  • ಬಾಲಿವುಡ್‌ ನಟ ಗೋವಿಂದ ಸಂಸಾರದಲ್ಲಿ ಬಿರುಕು; ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

    ಬಾಲಿವುಡ್‌ ನಟ ಗೋವಿಂದ ಸಂಸಾರದಲ್ಲಿ ಬಿರುಕು; ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

    ಬಾಲಿವುಡ್‌ ಹಿರಿಯ ನಟ ಗೋವಿಂದ (Actor Govinda) ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾ (Sunita Ahuja) ಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    ಪ್ರೀತಿ ಮತ್ತು ವಿವಾಹದಲ್ಲಿ ಮೋಸ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಅಂತ ಕಾರಣ ಕೊಟ್ಟು ಸುನೀತಾ ಅವರು ವಿಚ್ಛೇದನ ಕೋರಿದ್ದಾರೆ. ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13 (1), (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ರಾಗಿಣಿ ಎಂಎಂಎಸ್-3ಗೆ ಮಿಲ್ಕಿ ಬ್ಯೂಟಿ ನಾಯಕಿ..!?

    ಈ ಹಿಂದೆಯೇ ಅಹುಜಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದುಬಂದಿತ್ತು. ಮೇ 25ರಂದು ನ್ಯಾಯಾಲಯವು ಗೋವಿಂದ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಜೂನ್‌ನಿಂದ ಇಬ್ಬರೂ ವಿಚ್ಛೇದನ ಕುರಿತಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ, ವಿಚಾರಣೆ ಸಮಯದಲ್ಲಿ ಗೋವಿಂದ ಅವರು ಹಾಜರಾಗುತ್ತಿರಲಿಲ್ಲ. ಸುನೀತಾ ಅವರು ಹಾಜರಾಗುತ್ತಿದ್ದರು. ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆ ಎಂದೇ ಹೇಳಲಾಗಿತ್ತು.

    ಈ ಜೋಡಿ 37 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಸುನೀತಾ ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿದ ಕೆಲವು ವಾರಗಳ ನಂತರ ಈ ವರದಿ ಬಂದಿದೆ. ಸುನೀತಾ ಬಾಂದ್ರಾ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು

    ಗೋವಿಂದ ಮತ್ತು ಸುನೀತಾ 1987ರ ಮಾರ್ಚ್‌ 11 ರಂದು ಮದುವೆಯಾದರು. ದಂಪತಿಗೆ ಟೀನಾ ಅಹುಜಾ ಮತ್ತು ಯಶವರ್ಧನ್ ಅಹುಜಾ ಎಂಬ ಇಬ್ಬರು ಮಕ್ಕಳಿದ್ದಾರೆ. ಟೀನಾ 2015 ರಲ್ಲಿ ರೊಮ್ಯಾಂಟಿಕ್ ಕಾಮಿಡಿ ‘ಸೆಕೆಂಡ್ ಹ್ಯಾಂಡ್ ಹಸ್ಬೆಂಡ್‌’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

  • ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು

    ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು

    ಟಾಲಿವುಡ್‌ನ ಎಂಗ್ ಟೈಗರ್ ಎಂತಲೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ಜೂ.ಎನ್‌ಟಿಆರ್ ಆರ್‌ಆರ್‌ಆರ್ ಸಿನಿಮಾದ ನಂತರ ದೇವರ ಸಿನಿಮಾದಲ್ಲಿ ನಟಿಸಿದ್ದರು. ದೇವರ ಸಿನಿಮಾ ಅಂದುಕೊಟ್ಟ ಮಟ್ಟಿಗೆ ಹಿಟ್ ಆಗಲಿಲ್ಲ. ಜೂ.ಎನ್‌ಟಿಆರ್ ಅಭಿಮಾನಿಗಳಿಗೆ ಇದರಿಂದ ನಿರಾಸೆ ಉಂಟಾಗಿತ್ತು. ಇದೀಗ ಮತ್ತೊಮ್ಮೆ ತಾರಕ್‌ಗೆ ಹಿನ್ನಡೆಯಾಗಿದೆ. ಜೂ.ಎನ್‌ಟಿಆರ್ ದೇವರ ಸಿನಿಮಾ ಬಳಿಕ ಬಾಲಿವುಡ್‌ನ ವಾರ್-2 ಸಿನಿಮಾದಲ್ಲಿ ನಟಿಸಿದ್ದರು. ವಾರ್-2 ಸಿನಿಮಾ ಕೂಡಾ ಬಂಡವಾಳ ಹೂಡಿದ ನಿರ್ಮಾಪಕನಿಗೆ ಸಂಕಷ್ಟ ತಂದೊಡ್ಡಿದೆ.

    ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ನಟಿಸಿದ ವಾರ್-2 ಸಿನಿಮಾ ಇದೇ ಆ.14ಕ್ಕೆ ತೆರೆಕಂಡಿತ್ತು. ತೆರೆಕಂಡು ಒಂದು ವಾರವಾದರೂ ಸಿನಿಮಾ 200 ಕೋಟಿ ಗಳಿಕೆ ಕಂಡಿಲ್ಲ. 150 ಕೋಟಿ ಕಲೆಹಾಕುವಲ್ಲಿ ಸಿನಿಮಾ ತೆವಳುತ್ತ ಸಾಗುತ್ತಿದೆ. ಯಶ್‌ರಾಜ್ ಫಿಲಂಸ್ ಸಂಸ್ಥೆ ನಿರ್ಮಾಣ ಮಾಡಿದ್ದ ವಾರ್-2 ಕಲೆಕ್ಷನ್ ಸಿಂಗಲ್ ನಂಬರ್‌ಗೆ ಬಂದು ನಿಂತಿದೆ.‌ ಇದನ್ನೂ ಓದಿ: ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ `45’ ರಿಲೀಸ್ ಡೇಟ್ ಫಿಕ್ಸ್

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತೆರೆಗೆ ಬಂದಿದ್ದ ದೇವರ ಸಿನಿಮಾ ಕೂಡಾ ಸೋತು ಸುಣ್ಣವಾಗಿತ್ತು. ಈ ವರ್ಷ ತೆರೆಕಂಡ ವಾರ್-2 ಕೂಡ ತಾರಕ್‌ಗೆ ಸಕ್ಸಸ್ ತಂದುಕೊಟ್ಟಿಲ್ಲ. ಒಂದು ಕಡೆ ವಾರ್-2 ಸಿನಿಮಾ ರಿಲೀಸ್ ಆದ ದಿನವೇ ರಜನಿಕಾಂತ್ ನಟನೆಯ ಕೂಲಿ ಸಿನಿಮಾ ಕೂಡ ತೆರೆಗೆ ಬಂದಿತ್ತು. ಇದು ಸಿನಿಮಾದ ಕಲೆಕ್ಷನ್‌ಗೆ ಮುಳುವಾಯ್ತು ಎಂದು ಕೆಲವರ ಅಭಿಪ್ರಾಯವಾದ್ರೆ, ಇನ್ನು ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದು ನೇರವಾಗಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ತಾರಕ್‌ಗೆ ಸೋಲಿನ ಪಟ್ಟ ಸಿಕ್ಕಿದೆ.

  • ಹಾರರ್ ಅವತಾರದಲ್ಲಿ ಜನರನ್ನ ಬೆಚ್ಚಿಸಿದ ಶ್ರೀವಲ್ಲಿ

    ಹಾರರ್ ಅವತಾರದಲ್ಲಿ ಜನರನ್ನ ಬೆಚ್ಚಿಸಿದ ಶ್ರೀವಲ್ಲಿ

    ಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಹಾರರ್-ಕಾಮಿಡಿ-ಥ್ರಿಲ್ಲರ್ ಜಾನರ್‌ನ ಥಮಾ ಸಿನಿಮಾದ ಫಸ್ಟ್ಲುಕ್ ಟೀಸರ್ ರಿಲೀಸ್ ಆಗಿದೆ. ಕೇವಲ ಸೌತ್‌ನಲ್ಲಷ್ಟೇ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಗ್ಲಾಮರಸ್ ಪಾತ್ರಗಳ ಮೂಲಕ ಅಭಿಮಾನಿಗಳ ಮನಸ್ಸನ್ನ ಕದ್ದಿದ್ದಾರೆ. ಇದೀಗ ತಮ್ಮ `ಥಮ’ (Thama) ಸಿನಿಮಾದ ಮೂಲಕ ಬೆಚ್ಚಿಬೀಳಿಸೋಕೆ ಹೊಸ ಪ್ರಯೋಗ ಮಾಡಿದ್ದಾರೆ.

    ಇದೇ ವರ್ಷ ದೀಪಾವಳಿಗೆ ಸಿನಿಮಾ ತೆರೆಗೆ ಬರಲಿದ್ದು, ಸಿನಿಮಾದ ಟೀಸರ್ ರಿಲೀಸ್ ಆಗಿದೆ. ರಶ್ಮಿಕಾ ವಿಭಿನ್ನವಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಅತಿದೊಡ್ಡ ತಾರಾಗಣವಿದೆ. ಆಯುಷ್ಮಾನ್ ಖುರಾನಾ, ರಶ್ಮಿಕಾ ಮಂದಣ್ಣ, ಪರೇಶ್ ರಾವಲ್, ನವಾಜುದ್ದೀನ್ ಸಿದ್ದಿಕ್ ಸೇರಿದಂತೆ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ರಶ್ಮಿಕಾ ವಿಶೇಷವಾಗಿ ತಾಡಾಕಾ ಅನ್ನೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ತಮ್ಮ ವಿಭಿನ್ನ ಪ್ರಯತ್ನದಿಂದ ಮತ್ತಷ್ಟು ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ: ಶಿವರಾಜ್‌ಕುಮಾರ್‌ ನಟನೆಯ ಡ್ಯಾಡ್ ಚಿತ್ರಕ್ಕೆ ಚಾಲನೆ

    ಮ್ಯಾಡ್‌ಡಾಕ್ ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದು, ಈ ಮೊದಲು ಹಲವಾರು ಹಾರರ್ ಸಿನಿಮಾಗಳನ್ನ ನಿರ್ಮಾಣ ಮಾಡಿದೆ. ರಶ್ಮಿಕಾ ಮಂದಣ್ಣ ಪುಷ್ಪ-2, ಛಾವಾ ಚಿತ್ರಗಳ ಬಿಗ್ ಸಕ್ಸಸ್‌ನ ನಂತರ `ಥಮ’ ಸಿನಿಮಾ, ವಿಶ್ವದಾದ್ಯಂತ ದೀಪಾವಳಿಗೆ ಧಮಾಕಾ ಮಾಡಲು ಬರುತ್ತಿದೆ. ರಶ್ಮಿಕಾ ನಯಾ ಅವತಾರವನ್ನ ಅವರ ಭಕ್ತಗಣ, ಪ್ರೇಕ್ಷಕ ವರ್ಗ ಯಾವರೀತಿ ಸ್ವೀಕಾರ ಮಾಡುತ್ತೆ ಕಾದು ನೋಡ್ಬೇಕು.

  • ಒಳ ಉಡುಪು ಕಾಣುವ ಫೋಟೋ ಹಾಕಿ ಹಲ್‌ಚಲ್ ಎಬ್ಬಿಸಿದ ಖುಷಿ – ಇದೇನು ಸಂಡೇ ಸ್ಪೆಷಲ್ಲಾ ಅಂದ್ರು ಫ್ಯಾನ್ಸ್‌

    ಒಳ ಉಡುಪು ಕಾಣುವ ಫೋಟೋ ಹಾಕಿ ಹಲ್‌ಚಲ್ ಎಬ್ಬಿಸಿದ ಖುಷಿ – ಇದೇನು ಸಂಡೇ ಸ್ಪೆಷಲ್ಲಾ ಅಂದ್ರು ಫ್ಯಾನ್ಸ್‌

    ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುವ ಬಹುಭಾಷಾ ನಟಿ ಖುಷಿ ಮುಖರ್ಜಿ (Khushi Mukherjee) ಒಳ ಉಡುಪು ಧರಿಸದೇ ಪಡ್ಡೆ ಹುಡುಗರ ಮೈಬಿಸಿ ಹೆಚ್ಚಿಸುವಂತೆ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ.

    ತಮ್ಮ ಇನ್‌ಸ್ಟಾದಲ್ಲಿ ಮೈಮಾಟ ಪ್ರದರ್ಶಿಸುವ ಫೋಟೋಗಳನ್ನು (Khushi Mukherjee Hot Photos) ಹಂಚಿಕೊಂಡಿರುವ ಖುಷಿ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಒಂದು ಫೋಟೋದಲ್ಲಿ ಒಳಉಡುಪು ಕಾಣುವಂತೆ ಫೋಟೋ ಹಂಚಿಕೊಂಡಿದ್ರೆ, ಮತ್ತೊಂದು ಫೋಟೋದಲ್ಲಿ ಒಳ ಉಡುಪೇ ಧರಿಸಿಲ್ಲದ ಫೋಟೋ ಹಂಚಿಕೊಂಡಿದ್ದಾರೆ. ಕೆಲ ನೆಟ್ಟಿಗರು ನಟಿಯ ಬೋಲ್ಡ್‌ ಅವತಾರಕ್ಕೆ ʻವಾವ್‌ ಸೂಪರ್‌ ಸೆಕ್ಸಿʼ ಅಂತಾ ಕಾಮೆಂಟ್‌ ಮಾಡಿದ್ರೆ ಇನ್ನೂ ಕೆಲವರು ಇದೇನು ಸಂಡೇ ಸ್ಪೆಷಲ್ಲಾ ಅಂತ ಪ್ರಶ್ನೆ ಮಅಡಿದ್ದಾರೆ. ಇದನ್ನೂ ಓದಿ: ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರಿಂದ ಅಜಯ್‌ ರಾವ್‌ ಬಾಳಲ್ಲಿ ಬಿರುಗಾಳಿ!

    ಸಹಜವಾಗಿ ಚಿತ್ರ ನಟಿಯರು ಫಂಕ್ಷನ್​ಗಳಿಗೆ ಹೋಗುವಾಗ.. ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇನ್ನೂ ಕೆಲ ನಟಿಯರಿಗೆ ಮೈಮೇಲೆ ಬಟ್ಟೆಯೇ ನಿಲ್ಲುವುದಿಲ್ಲ ಎನ್ನುವಂತಹ ಡ್ರೆಸ್‌ ತೊಟ್ಟು ಟ್ರೋಲಿಗೆ ಒಳಗಾಗ್ತಾರೆ. ಈಗ ಖುಷಿ ಮುಖರ್ಜಿಯ ಸ್ಥಿತಿಯೂ ಅದೇ ಆಗಿದೆ. ಇದನ್ನೂ ಓದಿ: ಡಿಗ್ನಿಫೈಡ್ ರೀತಿಯಲ್ಲಿ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ: ಅಜಯ್‌ ರಾವ್‌

    ಯಾರು ಖುಷಿ ಮುಖರ್ಜಿ
    ನಟಿಯ ಕುರಿತು ಹೇಳುವುದಾದ್ರೆ, ಖುಷಿ ಮುಖರ್ಜಿ ಬಹುಭಾಷಾ ನಟಿಯಾಗಿದ್ದು, ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ‘ಅಂಜಲಾ ತುರಾಯ್‌’, ತೆಲುಗಿನ ಪೂರಿ ಜಗನ್ನಾಥ್ ನಿರ್ದೇಶನದ ‘ಹಾರ್ಟ್ ಎಟಾಕ್‌’, ತೆಲುಗಿನಲ್ಲೇ ‘ದೊಂಗ ಪ್ರೇಮ’ ಚಿತ್ರ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೂ ಬಂದಿದ್ದ ನಟಿ ಕನ್ನಡದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಪಾತ್ರಕ್ಕೆ ತಕ್ಕಂತೆ ಯಾವ ರೀತಿಯ ಡ್ರೆಸ್​ ಬೇಕಾದರೂ ಧರಿಸಲು ಸಿದ್ಧ ಎಂದಿದ್ದರು… ಈ ಮುಂಬೈ ಬೆಡಗಿ. ಇದನ್ನೂ ಓದಿ: ಬಿಗ್ ಬಾಸ್‌ ವಿಜೇತ ಎಲ್ವಿಶ್ ಮನೆ ಮೇಲೆ 25 ಸುತ್ತು ಗುಂಡಿನ ದಾಳಿ – ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

  • 200 ಕೋಟಿ ಕ್ಲಬ್ ಸೇರಿದ ಸೆನ್ಸೇಷನ್ `ಸೈಯಾರ’

    200 ಕೋಟಿ ಕ್ಲಬ್ ಸೇರಿದ ಸೆನ್ಸೇಷನ್ `ಸೈಯಾರ’

    ತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಒಳ್ಳೆಯ ಕಂಟೆಂಟ್ ಸಿನಿಮಾಗಳು ಬರುತ್ತಿಲ್ಲ. ಸಿನಿಮಾ ನೋಡೋಕೆ ಥಿಯೇಟರ್‌ನತ್ತ ಪ್ರೇಕ್ಷಕರು ಕೂಡಾ ಬರ್ತಿಲ್ಲ ಅನ್ನುವ ಮಾತುಗಳ ಮಧ್ಯೆ ಹೊಸಬರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸೌಂಡ್ ಮಾಡ್ತಿವೆ. ಜುಲೈ 18ರಂದು ತೆರೆಕಂಡ ಬಾಲಿವುಡ್ ಸಿನಿಮಾ `ಸೈಯಾರ’ (Saiyaara) ಬಾಕ್ಸಾಫೀಸ್ ಉಡೀಸ್ ಮಾಡಿದೆ. ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡ್ತಿದೆ.

    ಸೈಯಾರ ಅದ್ಭುತವಾಗಿ ರೆಸ್ಪಾನ್ಸ್ ಪಡೆದುಕೊಂಡು ಎರಡನೇ ವಾರವೂ ಯಶಸ್ವಿ ಪ್ರದರ್ಶನ ಕಾಣ್ತಿರುವ ಸಿನಿಮಾ. ಅಹಾನ್ ಪಾಂಡೆ (Ahaan Panday) ಹಾಗೂ ಅನೀತಾ ಪಡ್ಡಾ (Anita Padda) ಅಭಿನಯಕ್ಕೆ ಮನಸೋತ ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಬಾಕ್ಸಾಫೀಸ್‌ನಲ್ಲೂ ಹಣ ಹಾಗೆ ಹರಿಯುತ್ತಿದೆ. ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕರ ಜೇಬು ತುಂಬುತ್ತಿದೆ. ಈ ಮೂಲಕ ನಿರ್ಮಾಪಕರಿಗೆ, ಇಂಡಸ್ಟ್ರಿ ಜನರಿಗೆ ಮತ್ತಷ್ಟು ಹೊಸ ಉತ್ಸಾಹ ಸಿಕ್ಕಿದೆ. ಈ ವರ್ಷದ ಮೊದಲಾರ್ಧವನ್ನ ಮರೆತು, ದ್ವಿತಿಯಾರ್ಧದ ಕಡೆಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವಬೆದರಿಕೆ – ಬಾಸ್‌ ಬಗ್ಗೆ ಮಾತಾಡ್ತೀಯಾ ಅಂತ ಅವಾಜ್‌

    ಸೈಯಾರ ತೆರೆಕಂಡ ಮೊದಲ ದಿನವೇ 21.5 ಕೋಟಿ ರೂ. ಗಳಿಕೆ ಮಾಡಿತ್ತು. ವೀಕೆಂಡ್‌ನಲ್ಲಿ ಭರ್ಜರಿ ಮೊತ್ತವನ್ನೇ ಕಲೆಹಾಕಿತ್ತು. ಇದೀಗ ಒಂದು ವಾರಕ್ಕೆ ಬರೋಬ್ಬರಿ 200 ಕೋಟಿ ರೂ. ಗಳಿಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದೆ ಸೈಯಾರ ಸಿನಿಮಾ. ಮೋಹಿತ್ ಸೂರಿ ನಿರ್ದೇಶನದಲ್ಲಿ ಮೂಡಿಬಂದ ರೋಮ್ಯಾಂಟಿಕ್ ಡ್ರಾಮಾ ಜಾನರ್‌ನ ಸಿನಿಮಾ ಈ ಜನರೇಷನ್‌ಗೆ ಮೋಡಿ ಮಾಡಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಒಬಿಸಿಗಳ ಪಾಲಿನ 2ನೇ ಅಂಬೇಡ್ಕರ್ – `ಕೈʼ ಮುಖಂಡ ಉದಿತ್ ರಾಜ್ ಬಣ್ಣನೆ

    ಯಶ್ ರಾಜ್ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಸೈಯಾರ ಸಿನಿಮಾ ಜಗತ್ತಿನಾದ್ಯಂತ ಹಲ್‌ಚಲ್ ಎಬ್ಬಿಸಿದೆ. ಅದ್ಭುತ ಕಲೆಕ್ಷನ್ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಅಂದಹಾಗೆ ಜುಲೈ 26 ಹಾಗೂ 27 ವೀಕೆಂಡ್ ಇರುವ ಕಾರಣ ಇನ್ನು ಹೆಚ್ಚು ಕಲೆಕ್ಷನ್ ಆಗುವ ನಿರೀಕ್ಷೆಗಳಿವೆ. 35-40 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಸೈಯಾರ ಸಿನಿಮಾ ಒಂದೇ ವಾರದಲ್ಲೇ ಹಾಕಿದ ಬಜೆಟ್‌ನ ನಾಲ್ಕರಷ್ಟು ಕಲೆಕ್ಷನ್ ಮಾಡಿದೆ. ಈ ಮೂಲಕ ಇಂಡಸ್ಟ್ರಿ ಜನರಿಗೆ ಮತ್ತಷ್ಟು ಭರವಸೆ ಮೂಡಿಸಿದೆ.

  • ʻದೃಶ್ಯಂʼ ಸಿನಿಮಾ ಸ್ಟೈಲ್‌ನಲ್ಲಿ ಕೊಲೆ – ಪ್ರಿಯಕರನ ಜೊತೆಗೂಡಿ ಗಂಡನನ್ನ ಕೊಂದು ಟೈಲ್ಸ್‌ ಕೆಳಗೆ ಹೂತಿದ್ದ ಪತ್ನಿ

    ʻದೃಶ್ಯಂʼ ಸಿನಿಮಾ ಸ್ಟೈಲ್‌ನಲ್ಲಿ ಕೊಲೆ – ಪ್ರಿಯಕರನ ಜೊತೆಗೂಡಿ ಗಂಡನನ್ನ ಕೊಂದು ಟೈಲ್ಸ್‌ ಕೆಳಗೆ ಹೂತಿದ್ದ ಪತ್ನಿ

    ಮುಂಬೈ: ಪ್ರೀತಿ ಎಂಬುದು ಮಾಯೆ.. ಈ ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ, ಆದ್ರೆ ಕೆಲವೊಮ್ಮೆ ಪ್ರೀತಿಗೆ ಹೃದಯವೂ ಇರೋದಿಲ್ಲ, ಅದು ತನ್ನ ಪ್ರೇಮಿಯನ್ನ (Lovers) ಬಿಟ್ಟು ಉಳಿದವರಿಗಾಗಿ ಕಲ್ಲಿನಷ್ಟೇ ಕಠೋರವಾಗಿರುತ್ತೆ. ಇದಕ್ಕೆ ಮಹಾರಾಷ್ಟ್ರದಲ್ಲಿ ನಡೆದಿರುವ ಮತ್ತೊಂದು ಪ್ರಕರಣ ಸಾಕ್ಷಿಯಾಗಿದೆ.

    ಯೆಸ್.‌ ʻದೃಶ್ಯಂʼ ಸಿನಿಮಾ ಶೈಲಿಯಲ್ಲಿ ಮಹಾರಾಷ್ಟ್ರದ (Maharashtr) ಪಾಲ್ಘರ್ ಜಿಲ್ಲೆಯ ಖತರ್ನಾಕ್‌ ಮಹಿಳೆ, ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು ಶವವನ್ನ ತನ್ನ ಮನೆಯೊಳಗೆ ಹೂತಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. 35 ವರ್ಷದ ವಿಜಯ್‌ ಚವಾಣ್‌ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

    ವರದಿಗಳ ಪ್ರಕಾರ, ವಿಜಯ್‌ ಚವಾಣ್‌ ಮುಂಬೈನಿಂದ (Mumbai) ಸುಮಾರು 70 ಕಿಮೀ ದೂರದಲ್ಲಿರುವ ನಲಸೋಪರ ಪೂರ್ವದ ಗಡ್ಗಪದ ಪ್ರದೇಶದಲ್ಲಿ ಪತ್ನಿ ಕೋಮಲ್ ಚವಾಣ್ (28) ಜೊತೆಗೆ ವಾಸವಿದ್ದ. ಆದ್ರೆ ಕಳೆದ 15 ದಿನಗಳಿಂದ ವಿಜಯ್‌ ನಾಪತ್ತೆಯಾಗಿದ್ದ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ದುರಂತ – ಪೈಲಟ್ ಸೇರಿ 16 ಜನ ಸಾವು

    ಸೋಮವಾರ ಚವಾಣ್‌ನನ್ನ ಹುಡುಕುತ್ತಿದ್ದ ಅವನ ಸಹೋದರರು ಕೋಮಲ್‌ ಮನೆಗೆ ಬಂದಿದ್ದರು. ಅಲ್ಲಿ ನೆಲಕ್ಕೆ ಹಾಕಿದ್ದ ಕೆಲ ಟೈಲ್ಸ್‌ಗಳ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇದರಿಂದ ಅನುಮಾನಗೊಂಡ ವಿಜಯ್‌ ಸಹೋದರರು ವ್ಯತ್ಯಾಸ ಕಂಡುಬಂದ ಟೈಲ್ಸ್‌ಗಳನ್ನ ನೆಲದಿಂದ ಕಿತ್ತರು. ಅದರ ಕೆಳಗೆ ಹೂತಿಟ್ಟಿದ್ದ ವೇಸ್ಟೇಜ್‌ನಿಂದ ಕೆಟ್ಟ ದುರ್ವಾಸನೆ ಬರುತಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಗಂಡನ ಶವ ಹೂತಿಟ್ಟಿದ್ದ ರಹಸ್ಯ ಬೆಳಕಿಗೆ ಬಂದಿತು.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ನಿಯನ್ನ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಕೋಮಲ್‌ ತನ್ನ ನೆರೆಯ ಮೋನು ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಷಯ ತಿಳಿದುಬಂದಿದೆ. ಈತನ ಜೊತೆಗೂಡಿಯೇ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ SIT ಹೆಗಲಿಗೆ – ನಿಷ್ಪಕ್ಷಪಾತ ತನಿಖೆ ಬಗ್ಗೆ ಗೃಹ ಸಚಿವ ಪರಂ ಭರವಸೆ

  • ಸನ್ ಆಫ್ ಸರ್ದಾರ್‌ -2 ರಿಲೀಸ್ ಡೇಟ್ ಮುಂದೂಡಿಕೆ

    ಸನ್ ಆಫ್ ಸರ್ದಾರ್‌ -2 ರಿಲೀಸ್ ಡೇಟ್ ಮುಂದೂಡಿಕೆ

    13 ವರ್ಷಗಳ ನಂತರ ಮತ್ತೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ ಸನ್ ಆಫ್ ಸರ್ದಾರ್‌ (S0n Of Sardaar-2). 2012ರಲ್ಲಿ ತೆರೆಕಂಡು ಅದ್ಭುತ ರೆಸ್ಪಾನ್ಸ್ ಪಡೆದುಕೊಂಡ ಸನ್ ಆಫ್ ಸರ್ದಾರ್‌ ಚಿತ್ರದ ಸಿಕ್ವೇಲ್ ತೆರೆಗೆ ಬರೋಕೆ ರೆಡಿಯಾಗಿದೆ. ಕಾಮಿಡಿ ಎಂಟರ್‌ಟೈನ್ಮೆಂಟ್‌ನಿಂದ ಗಮನ ಸೆಳೆದ ಸನ್ ಆಫ್ ಸರ್ದಾರ್‌ ಚಿತ್ರದ ಪಾರ್ಟ್‌-2 ಆಗಷ್ಟ್ 1ಕ್ಕೆ ತೆರೆಗೆ ಬರ್ತಿದೆ.

    ಅಜಯ್ ದೇವಗನ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸನ್ ಆಫ್ ಸರ್ದಾರ್‌ ಸಿನಿಮಾದ ಸಿಕ್ವೇಲ್ ಇದೇ ಜುಲೈ 25ಕ್ಕೆ ತೆರೆಕಾಣಬೇಕಿತ್ತು. ಆದ್ರೆ ಸಿನಿಮಾದ ರಿಲೀಸ್ ಡೇಟ್ ಅನ್ನು ಚಿತ್ರತಂಡ ಮುಂದೂಡಿದೆ. ಅಂದಹಾಗೆ ಸನ್ ಆಫ್ ಸರ್ದಾರ್‌-2 ಸಿನಿಮಾ ಆಗಷ್ಟ್ 1ಕ್ಕೆ ತೆರೆ ಕಾಣಲಿದ್ದು, ಸಿನಿ ರಸಿಕರ ಹೊಟ್ಟೆ ಹುಣ್ಣಾಗಿಸೋಕೆ ಮತ್ತಷ್ಟು ಎಂಟರ್‌ಟೈನ್ಮೆಂಟ್ ಎಲಿಮೆಂಟ್‌ನಿಂದ ಎಂಟ್ರಿ ಕೊಡುತ್ತಿದೆ. ಇದನ್ನೂ ಓದಿ: ʻಡೆವಿಲ್ʼ ಮೋಷನ್ ಪೋಸ್ಟರ್‌ ರಿಲೀಸ್‌ – ಖದರ್‌ ಲುಕ್‌ನಲ್ಲಿ ದರ್ಶನ್‌, ಡಿಬಾಸ್‌ ಫ್ಯಾನ್ಸ್‌ಗೆ ಹಬ್ಬ

    ಸನ್ ಆಫ್ ಸರ್ದಾರ್‌-2 ಸಿನಿಮಾದಲ್ಲಿ ಅಜಯ್ ದೇವಗನ್ (Ajay Devgn), ಮೃಣಾಲ್ ಠಾಕೂರ್, ರವಿ ಕಿಶನ್, ಸಂಜಯ್ ಮಿಶ್ರಾ, ನೀರು ಭಾಜ್ವಾ ಸೇರಿದಂತೆ ಅತಿದೊಡ್ಡ ತಾರಾಗಣವಿದೆ. ಜುಲೈ 25ಕ್ಕೆ ಮನರಂಜನೆಯನ್ನ ಸ್ವಾಗತಿಸಲು ತಯಾರಾಗಿದ್ದ ಫ್ಯಾನ್ಸ್ ಕೊಂಚ ನಿರಾಶರಾಗಿದ್ದಾರೆ. ಆದರೆ ಮನರಂಜನೆಯ ಮಹಾಪೂರ ಆಗಷ್ಟ್ 1ಕ್ಕೆ ಶಿಫ್ಟ್ ಆಗಿದೆ.

  • ರಿಯಲ್ ಹೀರೋ ಅಕ್ಷಯ್‌ಕುಮಾರ್ ಮಾಡಿದ ಕಾರ್ಯ ಎಲ್ಲರಿಗೂ ಮಾದರಿ

    ರಿಯಲ್ ಹೀರೋ ಅಕ್ಷಯ್‌ಕುಮಾರ್ ಮಾಡಿದ ಕಾರ್ಯ ಎಲ್ಲರಿಗೂ ಮಾದರಿ

    ಸಿನಿಮಾ ತಾರೆಯರು ಕೇವಲ ರೀಲ್‌ನಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಹೀರೋ ಆಗಿ ಮಾಡಿದ ಕಾರ್ಯಗಳು ಸಮಾಜಕ್ಕೆ ಮಾದರಿಗಳಾದ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಬಾಲಿವುಡ್ ನಟ ಅಕ್ಷಯ್‌ಕುಮಾರ್ (Akshay Kumar) ಕೂಡಾ ಮಹತ್ವದ ಕೆಲಸ ಮಾಡಿದ್ದಾರೆ. ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿ ಅವರ ಈ ಮಹತ್ತರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ನಟ ಅಕ್ಷಯ್‌ಕುಮಾರ್, 650-700 ಜನ ಸ್ಟಂಟ್ ಮಾಸ್ಟರ್‌ಗಳಿಗೆ ಲೈಫ್ ಇನ್ಶುರೆನ್ಸ್, ಹೆಲ್ತ್ ಇನ್ಶುರೆನ್ಸ್ ಮಾಡಿಸಿಕೊಟ್ಟಿದ್ದಾರೆ.

    ಸಿನಿಮಾದ (Cinema) ಸಾಹಸ ದೃಶ್ಯಗಳನ್ನ ಮಾಡುವಾಗ ಸಾಕಷ್ಟು ಏಟುಗಳನ್ನ ಮಾಡಿಕೊಳ್ಳುತ್ತಾರೆ. ಕೆಲವೊಂದು ಬಾರಿ ಜೀವಕ್ಕೆ ಕುತ್ತು ಬರುವಂತಹ ರಿಸ್ಕಿ ದೃಶ್ಯಗಳಲ್ಲಿ ಸಾಹಸ ನಿರ್ದೇಶಕರು, ಸ್ಟಂಟ್ (Stunt) ಕೆಲಸದಲ್ಲಿ ತೊಡಗಿದವರು ಭಾಗಿಯಾಗುವಂತಹ ಸನ್ನಿವೇಶಗಳು ಎದುರಾಗುತ್ತವೆ. ಕೆಲದಿನಗಳ ಹಿಂದಷ್ಟೇ ತಮಿಳು ಸಿನಿಮಾದ ಚಿತ್ರೀಕರಣದ ವೇಳೆ ಮೋಹನ್ ರಾಜ್ ಎನ್ನುವ ಹಿರಿಯ ಸ್ಟಂಟ್‌ಮ್ಯಾನ್ ಮೃತಪಟ್ಟಿದ್ದರು. ಆ ವೇಳೆ ಚಿತ್ರತಂಡಕ್ಕೆ ಸಂಕಷ್ಟ ಕೂಡಾ ಎದುರಾಗಿತ್ತು. ಇದನ್ನೂ ಓದಿ: ಸುಪ್ರೀಂ ಟೆನ್ಶನ್‌ ನಡ್ವೆಯೂ ʻಡೆವಿಲ್ʼ ಸಂಭ್ರಮಕ್ಕೆ ಸಜ್ಜಾದ ಡಿಬಾಸ್‌ ಫ್ಯಾನ್ಸ್

    ಸ್ಟಂಟ್ ಮಾಸ್ಟರ್ ಮೋಹನ್ ರಾಜ್ (Mohan Raj) ನಿಧನದ ಘಟನೆ ಬಳಿಕ ಇದೀಗ ಬಾಲಿವುಡ್ ನಟ ಅಕ್ಷಯ್‌ಕುಮಾರ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿ 650 ಮಂದಿಗೆ ಜೀವ ವಿಮೆ ಮಾಡಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಅವಘಡ ನಡೆಯುತ್ತವೆ ಈ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ಪಡೆಯಲು ಸಹಾಯಕವಾಗಲಿ ಎನ್ನುವ ದೂರದೃಷ್ಟಿಯಿಂದ ಈ ಮಹತ್ತರ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಸಿಡಿದೆದ್ದ ಜಯಂ ರವಿ: ಪರಿಹಾರಕ್ಕಾಗಿ 9 ಕೋಟಿ ಬೇಡಿಕೆ

    ಹಿರಿಯ ಸ್ಟಂಟ್‌ಮ್ಯಾನ್ ಹಾಗೂ ಸ್ಟಂಟ್‌ಮ್ಯಾನ್ ಅಸೋಸಿಯೇಷನ್ ಮುಖಂಡ ವಿಕ್ರಮ್ ಸಿಂಗ್ ದಹಿಯಾ ಅವರು ನಟ ಅಕ್ಷಯ್‌ಕುಮಾರ್ ಸಹಾಯವನ್ನ ಕೊಂಡಾಡಿದ್ದಾರೆ. ಸ್ವತಃ ತಾವೇ ಆ್ಯಕ್ಷನ್ ನಟರಾದ ಅಕ್ಷಯ್‌ಕುಮಾರ್ ಆ ದೃಶ್ಯಗಳನ್ನ ಕಣ್ಣಾರೆ ಕಂಡವರು ಹೀಗಾಗಿ 650 ಸ್ಟಂಟ್‌ಮ್ಯಾನ್‌ಗಳಿಗೆ ವಿಮೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಮತ್ತೊಬ್ಬರಿಗೂ ಮಾದರಿಯಾಗಿದ್ದಾರೆ ಎಂದಿದ್ದಾರೆ.

  • ಬೀಚ್‌ನಲ್ಲಿ ಡೀಪ್‌ ಕಿಸ್‌ – ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ

    ಬೀಚ್‌ನಲ್ಲಿ ಡೀಪ್‌ ಕಿಸ್‌ – ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ

    ಬಾಲಿವುಡ್ ನ ಹೆಸರಾಂತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇಂದು ತಮ್ಮ 43ನೇ ಹುಟ್ಟುಹಬ್ಬವನ್ನ ವಿದೇಶದಲ್ಲಿ ಆಚರಿಸಿಕೊಂಡಿದ್ದಾರೆ. ಹುಟ್ಟು ಹಬ್ಬವನ್ನು (Priyanka Chopra Birthday) ಆಚರಿಸಿಕೊಳ್ಳುವುದಕ್ಕಾಗಿಯೇ ಅವರು ಪತಿ ಮತ್ತು ಮಗಳ ಜೊತೆ ವಿದೇಶ ಪ್ರಯಾಣ ಬೆಳೆಸಿದ್ದರು. ಸಮುದ್ರ ತೀರದಲ್ಲಿ ಬಿಂದಾಸ್ ಆಗಿ ಕಳೆದಿದ್ದಾರೆ.

    ಪತಿ ಜೊತೆ ಬಿಂದಾಸ್ ಆಗಿ ಕಳೆದಿರುವ ಕ್ಷಣಗಳನ್ನು ಅವರು ವಿಡಿಯೋ ರೂಪದಲ್ಲಿ ಪ್ರಕಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಓಡಿ ಬಂದು ಪತಿಯನ್ನು ಅಪ್ಪಿಕೊಳ್ಳುವುದು, ತುಟಿ ತುಟಿ ಸೇರಿಸಿ ಚುಂಬಿಸುವುದು, ಮಗಳ ಜೊತೆ ಸಮಯ ಕಳೆಯುವುದು ಮತ್ತು ಸಮುದ್ರದಲ್ಲಿ ಡ್ರೈವ್ ಮಾಡಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪಾರ್ವತಮ್ಮ ರಾಜ್‌ಕುಮಾರ್ ಕನಸಿನ ಕೂಸಿಗೆ 50 ವರ್ಷ

    ಪ್ರತಿ ವರ್ಷವೂ ಅವರು ತಮ್ಮ ಹುಟ್ಟು ಹಬ್ಬದ ವೇಳೆ ಬೇರೆ ಬೇರೆ ದೇಶಗಳನ್ನು ಸುತ್ತುತ್ತಾ ಇರುತ್ತಾರೆ. ಈ ಬಾರಿಯೂ ಅದನ್ನೇ ಮುಂದುವರೆಸಿದ್ದಾರೆ. ಆ ಕ್ಷಣಗಳನ್ನು ಒಟ್ಟು ಮಾಡಿ, ಫ್ಯಾನ್ಸ್ ಮುಂದೆ ಇಟ್ಟಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿಗೆ ಪ್ಲ್ಯಾನ್‌ – ಪ್ರವಾಸಿಗರಿಗೆ ಸಿಗಲಿದೆ ಥ್ರಿಲ್ಲಿಂಗ್‌ ಅನುಭವ

  • ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಹೆಣ್ಣು ಮಗು ಜನನ

    ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಹೆಣ್ಣು ಮಗು ಜನನ

    ಬಾಲಿವುಡ್ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಹೆಣ್ಣು ಮಗುವಿಗೆ ತಂದೆ-ತಾಯಿಯಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

    ನಟಿಗೆ ಆಗಸ್ಟ್‌ನಲ್ಲಿ ಮಗು ಜನಿಸಬೇಕಿತ್ತು. ಆದರೆ ಮಗು ಬೇಗನೆ ಜನಿಸಿದೆ. ಕಿಯಾರಾಳನ್ನು ಹೆರಿಗೆಗಾಗಿ ಮುಂಬೈನ ಗಿರ್ಗಾಂವ್ ಪ್ರದೇಶದ ಹೆಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

     

    View this post on Instagram

     

    A post shared by KIARA (@kiaraaliaadvani)

    ಕಳೆದ ವಾರ, ಸಿದ್ಧಾರ್ಥ್ ಮತ್ತು ಕಿಯಾರಾ ಮುಂಬೈನ ಕ್ಲಿನಿಕ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್ ಅವರ ತಾಯಿ ರಿಮ್ಮಾ ಮಲ್ಹೋತ್ರಾ ಮತ್ತು ಕಿಯಾರಾ ಅವರ ಪೋಷಕರು ಜೆನೆವೀವ್ ಮತ್ತು ಜಗದೀಪ್ ಅಡ್ವಾಣಿ ಅವರೊಂದಿಗೆ ಆಸ್ಪತ್ರೆಯಲ್ಲಿದ್ದಾರೆ.

    ಕಿಯಾರಾ ಪ್ರೆಗ್ನೆನ್ಸಿ ಘೋಷಿಸಿದಾಗಿನಿಂದ, ಕಿಯಾರಾ ಮತ್ತು ಸಿದ್ಧಾರ್ಥ್‌ ಸೋಷಿಯಲ್‌ ಮೀಡಿಯಾದಲ್ಲಿ ಅಷ್ಟೇನು ಆಕ್ಟೀವ್‌ ಆಗಿರಲಿಲ್ಲ. ಫೆಬ್ರವರಿ 28 ರಂದು, ಸಿದ್ಧಾರ್ಥ್ ಮತ್ತು ಕಿಯಾರಾ ಇನ್ಸ್ಟಾಗ್ರಾಮ್‌ನಲ್ಲಿ ‘ನಮ್ಮ ಜೀವನದ ಶ್ರೇಷ್ಠ ಉಡುಗೊರೆ ಶೀಘ್ರದಲ್ಲೇ ಬರಲಿದೆ’ ಎಂದು ಪೋಸ್ಟ್ ಮಾಡಿದ್ದರು.