Tag: bollywood

  • ರಾಮನ ಪಾತ್ರಕ್ಕಾಗಿ ಮಾಂಸಾಹಾರ, ಮದ್ಯ ಸೇವನೆ ಬಿಟ್ಟಿದ್ದರಂತೆ ರಣ್‌ಬೀರ್ ಕಪೂರ್

    ರಾಮನ ಪಾತ್ರಕ್ಕಾಗಿ ಮಾಂಸಾಹಾರ, ಮದ್ಯ ಸೇವನೆ ಬಿಟ್ಟಿದ್ದರಂತೆ ರಣ್‌ಬೀರ್ ಕಪೂರ್

    ಯಶ್ ನಟನೆಯ ʻರಾಮಾಯಣʼ ಚಿತ್ರದ (Ramayana Cinema) ಫಸ್ಟ್‌ ಗ್ಲಿಂಪ್ಸ್ ರಿಲೀಸ್ ಆದ ಬಳಿಕ‌ವಂತೂ ಕುತೂಹಲ ಹೆಚ್ಚಾಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ರಣ್‌ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಿದ್ದರೇ ಸಾಯಿಪಲ್ಲವಿ (Sai Pallavi) ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ದೀಪಾವಳಿಗೆ ʻರಾಮಾಯಣʼ ಮೊದಲ ಭಾಗ ತೆರೆಕಾಣೋಕೆ ಸಜ್ಜಾಗಿದೆ.

    ಮೊದಲ ಭಾಗದ ಚಿತ್ರೀಕರಣವೂ ಮುಕ್ತಾಯವಾಗಿದ್ದು, ಈ ನಡುವೆ ನಟ ರಣ್‌ಬೀರ್‌ ಕಪೂರ್‌ (Ranbir Kapoor) ಕುರಿತಾಗಿ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ. ಈ ಚಿತ್ರದಲ್ಲಿ ಶ್ರೀರಾಮನ ಪಾತ್ರಧಾರಿಯಾಗಿರುವ ರಣ್‌ಬೀರ್ ಕಪೂರ್ ಇದೇ ಪಾತ್ರಕ್ಕಾಗಿ ಆಹಾರ ಪದ್ಧತಿಯನ್ನ ಸಂಪೂರ್ಣವಾಗಿ ಬದಲಿಸಿಕೊಂಡಿದ್ದರಂತೆ. ಮಾಂಸಾಹಾರ, ಮದ್ಯಸೇವನೆ ತ್ಯಜಿಸಿ ಸಾತ್ವಿಕ ಆಹಾರ ಪದ್ಧತಿಯ ಮೊರೆ ಹೋಗಿದ್ದರಂತೆ. ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

    ಮರ್ಯಾದಾ ಪುರುಷೋತ್ತಮ ರಾಮ ಸಕಲ ಆಸೆಗಳನ್ನ ತ್ಯಜಿಸಿದ್ದ ರಘುಕುಲ ತಿಲಕ. ಇಂಥಹ ದೈವಾಂಶಸಂಭೂತ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಆಧ್ಯಾತ್ಮಿಕ ಶಿಸ್ತನ್ನ ರೂಢಿಸಿಕೊಂಡಿದ್ದರಂತೆ ರಣ್‌ಬೀರ್ ಕಪೂರ್. ಮದ್ಯ ಹಾಗೂ ಮಾಂಸಾಹಾರ ಸೇವನೆ ತ್ಯಜಿಸಿದ್ದರಂತೆ. ಧ್ಯಾನ ಹಾಗೂ ಯೋಗದ ಮೂಲಕ ದೇಹ ಹುರಿಗೊಳಿಸಿಕೊಂಡು ರಾಮನ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದರಂತೆ. ಈ ವಿಚಾರ ಬಾಲಿವುಡ್ ಅಂಗಳದಲ್ಲಿ ಬಹಳವೇ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ವಿನಯ್ ಜೊತೆ ರಮ್ಯಾ ಸುತ್ತಾಟ ಎಂದವರಿಗೆ ತಿರುಗೇಟು ಕೊಟ್ಟ ಮೋಹಕತಾರೆ

    ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ʻರಾಮಾಯಣʼ ಮಹಾಕಾವ್ಯದಲ್ಲಿ ರಾಮನ ಪಾತ್ರದಲ್ಲಿ ನಟಿಸಲು ರಣಬೀರ್ ಕಪೂರ್ ತಮ್ಮ ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿರುವ ವಿಚಾರ ಒಂದೊಂದಾಗೇ ಇದೀಗ ರಿವ್ಹೀಲ್‌ ಆಗುತ್ತಿದೆ. ಪರದೆಯ ಮೇಲೆ ರಾಮನ ದೈವಿಕತೆಯನ್ನ ಪ್ರತಿಬಿಂಬಿಸುವ ಪಾತ್ರ ಮಾಡುವಾಗ ರಣ್‌ಬೀರ್ ಜೀವನಶೈಲಿ ಬದಲಾವಣೆಯ ಮಹತ್ವದ ತೀರ್ಮಾನ ತೆಗೆದುಕೊಂಡು ವಿಶೇಷ ವ್ಯಕ್ತಿತ್ವ ಪ್ರದರ್ಶಿಸಿದ್ದಾರೆ.

    ಬಹುಶಃ ಮುಂದಿನ ದಿನಗಳಲ್ಲಿ ಖುದ್ದು ರಣ್‌ಬೀರ್ ಕಪೂರ್ ಈ ವಿಚಾರವಾಗಿ ಮಾತನಾಡುವ ಸಾಧ್ಯತೆ ಇದೆ. ಅದಕ್ಕೂ ಮುನ್ನವೇ ಅವರು ಕೈಗೊಂಡಿದ್ದ ಮಹತ್ವದ ಸಂಕಲ್ಪ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಕರಾವಳಿಯ ಮತ್ತೊಂದು ಕಥನ `ದಿಂಸೋಲ್’ ಪೋಸ್ಟರ್ ರಿಲೀಸ್

  • ಸಂಜಯ್ ದತ್ ಕತ್ತಿಗೆ ರೇಜರ್ ಹಿಡಿದಿದ್ದ ಡಬಲ್ ಮರ್ಡರ್ ಅಪರಾಧಿ!

    ಸಂಜಯ್ ದತ್ ಕತ್ತಿಗೆ ರೇಜರ್ ಹಿಡಿದಿದ್ದ ಡಬಲ್ ಮರ್ಡರ್ ಅಪರಾಧಿ!

    ಬಾಲಿವುಡ್ ನಟ ಸಂಜಯ್ ದತ್ (Sanjay Dutt) ತಮ್ಮ ಜೀವನದಲ್ಲಿ ನಡೆದ ಭಯಾನಕ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಸಂಜಯ್ ದತ್ 1993ರ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದರು. ಯೆರ್ವಾಡಾ ಜೈಲಿನಲ್ಲಿ ಐದು ವರ್ಷಗಳ ಶಿಕ್ಷೆಯನ್ನು ಅನುಭವಿಸಿದರು. ಬಳಿಕ ಉತ್ತಮ ನಡವಳಿಕೆ ತೋರಿಸಿದ್ದಕ್ಕೆ ಅವರನ್ನು ಶಿಕ್ಷೆ ಪೂರ್ಣವಾಗುವ ಮೊದಲೇ ಬಿಡುಗಡೆ ಮಾಡಲಾಯಿತು. ಇದೀಗ ಜೈಲು ದಿನದ ಒಂದು ಘಟನೆಯನ್ನ ನೆನೆದಿದ್ದಾರೆ. ಈಗಲೂ ಬೆಚ್ಚಿಬೀಳಿಸುವ ಘಟನೆ ಅದೊಂದೇ ಎಂದಿದ್ದಾರೆ ಸಂಜಯ್ ದತ್.

    ಯೆರ್ವಾಡಾ ಜೈಲಿನಲ್ಲಿದ್ದಾಗ ಒಮ್ಮೆ ನಡೆದ ಘಟನೆ ನೆನೆದ ಸಂಜಯ್ ದತ್, ಹದಿನೈದು ವರ್ಷ ಶಿಕ್ಷೆಗೆ ಒಳಗಾದ ಅಪರಾಧಿಯೊಬ್ಬ ತಮ್ಮನ್ನ ಭಯಬೀಳಿಸಿದ ಸಂದರ್ಭವನ್ನ ವಿವರಿಸುತ್ತಾರೆ. ಜೈಲಿನಲ್ಲಿದ್ದಾಗ ದಟ್ಟವಾಗಿ ಬೆಳೆದಿದ್ದ ಸಂಜಯ್ ದತ್‌ ಅವರ ಗಡ್ಡ ಬೋಳಿಸಲು ಜೈಲಧಿಕಾರಿಗಳು ಓರ್ವ ಡಬಲ್ ಮರ್ಡರ್ ಮಾಡಿರುವ ಅಪರಾಧಿಯನ್ನ ನೇಮಿಸಿದ್ದರಂತೆ. ಆತನ ಹೆಸರು ಮಿಶ್ರಾ. ಆ ವ್ಯಕ್ತಿ ಸಂಜಯ್ ದತ್ ಕತ್ತಿಗೆ ರೇಜರ್ ಹಿಡಿದಿದ್ದ. ಇವರು ಆ ವ್ಯಕ್ತಿಯನ್ನು ‘ಎಷ್ಟು ದಿನ ಜೈಲಿನಲ್ಲಿರುತ್ತೀರಿ’ ಎಂದು ಆಕಸ್ಮಿಕವಾಗಿ ಕೇಳಿದರಂತೆ. ಆತ ಹದಿನೈದು ವರ್ಷಗಳು ಎಂದನಂತೆ. ಸಂಜಯ್ ದತ್ ಕುತೂಹಲದಿಂದ ಏನಕ್ಕೆ ಎಂದು ಒತ್ತಿ ಕೇಳಿದರಂತೆ. ಆತ ಡಬಲ್ ಮರ್ಡರ್ ಮಾಡಿದ್ದಕ್ಕೆ ಎಂದನಂತೆ. ಆಗ ತಮ್ಮ ರಕ್ತ ತಣ್ಣಗಾಯಿತು ಎಂದು ಹೇಳುವ ಮೂಲಕ ಜೈಲಿನ ಭಯಾನಕ ಘಟನೆ ನೆನೆದಿದ್ದಾರೆ ಸಂಜಯ್ ದತ್. ಇದನ್ನೂ ಓದಿ: ಅಮ್ಮ ಮಗನ ಮಾತುಕತೆ ಕಂಡು ಕಣ್ಣೀರಿಟ್ಟ ಸಲ್ಮಾನ್ ಖಾನ್

    ಅಂದಹಾಗೆ ಸಂದರ್ಶನವೊಂದರಲ್ಲಿ ಸಂಜಯ್ ದತ್ ಈ ಘಟನೆ ನೆನಪು ಮಾಡಿಕೊಂಡಿದ್ದಾರೆ. `ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮದಲ್ಲಿ ಈ ನಟ, ಮಿತ್ರ ಸುನಿಲ್ ಶೆಟ್ಟಿ ಜೊತೆ ವೇದಿಕೆ ಹಂಚಿಕೊಂಡಿದ್ದ ವೇಳೆ ತಮ್ಮ ಜೈಲು ಜೀವನದ ಒಂದು ಭಯಾನಕ ಹಳೆಯ ಅಧ್ಯಾಯವನ್ನು ನೆನಪಿಸಿಕೊಂಡಿದ್ದಾರೆ. 1993 ರ ಮುಂಬೈ ಸ್ಫೋಟ ಪ್ರಕರಣ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದಕ್ಕೆ ಜೈಲುಶಿಕ್ಷೆ ಅನುಭವಿಸಿದ್ದರು. ಹಲವು ವರ್ಷಗಳ ನಂತರವೂ ತಮ್ಮನ್ನು ಬೆಚ್ಚಿಬೀಳಿಸಿದ ಕ್ಷಣವನ್ನು ಇದೀಗ ಸಂಜಯ್ ದತ್ ಹಂಚಿಕೊಂಡಿದ್ದಾರೆ.

  • ಲೇಡಿ ಪೊಲೀಸ್ ಮೇಲೆ ಶಿಲ್ಪಾಶೆಟ್ಟಿ ಗರಂ

    ಲೇಡಿ ಪೊಲೀಸ್ ಮೇಲೆ ಶಿಲ್ಪಾಶೆಟ್ಟಿ ಗರಂ

    ಪ್ರತಿ ಗಣೇಶ ಹಬ್ಬಕ್ಕೂ ಮುಂಬೈನ ಲಾಲ್‌ಬಗೂಚ ರಾಜ ಗಣಪತಿ ಪೆಂಡಾಲ್‌ಗೆ (Lalbaugcha Raja Pandal) ಬಾಲಿವುಡ್ ತಾರೆಯರು ಭೇಟಿ ಕೊಡುವ ಪದ್ಧತಿ ಇದೆ. ಹೇಳಿ ಕೇಳಿ ಇದು ಸಾರ್ವಜನಿಕ ಗಣಪತಿ ಜನಸಂದಣಿ ಹೆಚ್ಚಾಗಿರುತ್ತೆ. ಭೇಟಿಕೊಡುವ ತಾರೆಯರಿಗೆ ಪೊಲೀಸ್ ಭದ್ರತೆಯೂ ಇರುತ್ತೆ. ಹೀಗಾಗಿ ಪ್ರತಿ ವರ್ಷದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಈ ಬಾರಿಯೂ ಸಾರ್ವಜನಿಕ ಗಣೇಶ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ತಮಗೆ ಭದ್ರತೆ ಕೊಡುತ್ತಿದ್ದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ ಮೇಲೆಯೇ ಬೇಸರಗೊಂಡಿದ್ದಾರೆ. ಅವರನ್ನು ಕೈಯಿಂದ ತಳ್ಳಿ ಸೆಲ್ಫಿ ಕೊಡಲು ನಿರಾಕರಿಸಿದ್ದಾರೆ. ಶಿಲ್ಪಾ ವರ್ತನೆಗೆ ಪರ ವಿರೋಧದ ಟೀಕೆ ಟಿಪ್ಪಣಿ ಜೋರಾಗಿದೆ.

    ಗಣಪತಿ ಪೆಂಡಾಲ್‌ಗೆ ಶಿಲ್ಪಾ ಶೆಟ್ಟಿ ಆಗಮಿಸಿದ್ದ ವೇಳೆ ಸುತ್ತ ಮುತ್ತ ಜನಸಂದಣಿ ಕಂಟ್ರೋಲ್ ಮಾಡಲು ಪೊಲೀಸರ ಭದ್ರತೆ ಇತ್ತು. ಅಲ್ಲೇ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಪಕ್ಕದಿಂದ ಓಡಿಬಂದು ಶಿಲ್ಪಾ ಶೆಟ್ಟಿಯ ಭುಜ ಹಿಡಿದು `ಮೇಡಮ್ ಒಂದು ಸೆಲ್ಫಿ’ ಎಂದು ಹೇಳುತ್ತಾ ಫೋಟೋ ಕ್ಲಿಕ್ ಮಾಡಲು ಮುಂದಾಗ್ತಾರೆ. ಈ ವೇಳೆ ಸೆಲ್ಫಿಯನ್ನು ನಿರಾಕರಿಸುವ ಶಿಲ್ಪಾ ಸಮವಸ್ತç ಧರಸಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್‌ನ್ನು ತಳ್ಳುತ್ತಾರೆ. ಹೀಗೆಲ್ಲಾ ಮಾಡಬೇಡಿ ಎಂದು ಕಟುವಾಗೇ ಹೇಳ್ತಾರೆ. ಇಷ್ಟು ಸಾಲದು ಎಂಬAತೆ ಶಿಲ್ಪಾ ಶೆಟ್ಟಿ ಬಾಡಿಗಾರ್ಡ್ ಕೂಡ ಕಾನ್ಸ್ಟೇಬಲ್‌ಗೆ `ಹಾಗೆಲ್ಲಾ ಮಾಡಬೇಡಿ’ ಎಂದಿದ್ದಾರೆ. ಈ ದೃಶ್ಯ ಬಹಳ ವೈರಲ್ ಆಗಿದೆ.  ಇದನ್ನೂ ಓದಿ: ರಸ್ತೆಯಲ್ಲಿ ಅಡುಗೆ ಮಾಡಿ ಖುಷಿಪಟ್ಟ ನಾಗಾರ್ಜುನ ಸೊಸೆ

     

    View this post on Instagram

     

    A post shared by Bollywood News (@bolly_newssss)

    ಶಿಲ್ಪಾ ಶೆಟ್ಟಿ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಬಹಳವೇ ಚರ್ಚೆಯಾಗುತ್ತಿದೆ. ಶಿಲ್ಪಾರನ್ನು ಮುಟ್ಟಿ ಸೆಲ್ಫಿ ಕೊಡಿ ಎಂದು ಕೇಳಿದ್ದು ತಪ್ಪಿರಬಹುದು. ಆದರೆ ಅವರು ಹೆಣ್ಣು ಎಂಬ ಸಲುಗೆಯಿಂದ ಈ ರೀತಿ ಕೇಳಿರಬಹುದು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸೆಲ್ಫಿ ಕೊಡಲು ನಿರಾಕರಣ ಮಾಡಿದ್ದರೂ ನಡೆಯುತ್ತಿತ್ತು, ಬದಲಿಗೆ ಶಿಲ್ಪಾ ತಳ್ಳಿದ್ದು ಸರಿಯಲ್ಲ ಎಂದು ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕಿಚ್ಚನ ಮಾರ್ಕ್ ಟೈಟಲ್ ಟೀಸರ್‌ಗೆ ಫುಲ್ ಮಾರ್ಕ್ಸ್

  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿರುತೆರೆ ನಟಿ ಪ್ರಿಯಾ ಮರಾಠೆ ನಿಧನ; 38ನೇ ವಯಸ್ಸಿಗೆ ನಟಿ ದುರಂತ ಅಂತ್ಯ

    ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿರುತೆರೆ ನಟಿ ಪ್ರಿಯಾ ಮರಾಠೆ ನಿಧನ; 38ನೇ ವಯಸ್ಸಿಗೆ ನಟಿ ದುರಂತ ಅಂತ್ಯ

    ಮುಂಬೈ: ಪವಿತ್ರಾ ರಿಶ್ತಾ ಧಾರಾವಾಹಿಯಲ್ಲಿ ವರ್ಷಾ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ಪ್ರಿಯಾ ಮರಾಠೆ ಅವರು ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ.

    38 ವಯಸ್ಸಿನ ನಟಿ ಪ್ರಿಯಾ ಎರಡು ವರ್ಷಗಳಿಗೂ ಹೆಚ್ಚು ಕಾಲ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಮೀರಾ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಸುಕಿನ 4 ಗಂಟೆಗೆ ನಿಧನರಾಗಿದ್ದಾರೆ. ಪ್ರಿಯಾ ಅವರು ಪತಿ, ನಟ ಶಾಂತನು ಮೋಘೆ ಅವರನ್ನು ಅಗಲಿದ್ದಾರೆ.

    ಪ್ರಿಯಾ ಅವರು ‘ಯಾ ಸುಖನೋ ಯಾ’ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರ ‘ಚಾರ್ ದಿವಸ್ ಸಸುಚೆ’ ಸೇರಿದಂತೆ ಹಲವು ಮರಾಠಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು ಕಾಮಿಡಿ ಸರ್ಕಸ್‌ನ ಭಾಗವೂ ಆಗಿದ್ದರು.

    ಆಕೆ ‘ಬಡೇ ಅಚ್ಚೆ ಲಗ್ತೆ ಹೈ’ನಲ್ಲಿ ಜ್ಯೋತಿ ಮಲ್ಹೋತ್ರಾ ಪಾತ್ರದಲ್ಲಿ ನಟಿಸಿದ್ದರು. ‘ತು ತಿಥೆ ಮಿ’ ಧಾರವಾಹಿಯಲ್ಲಿಯೂ ಕೆಲಸ ಮಾಡಿದ್ದಾರೆ. ಪ್ರಿಯಾ ಮತ್ತು ಶಾಂತನು 2012 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • `ಪರಮ್ ಸುಂದರಿ’ ಪ್ರೀಮಿಯರ್‌ನಲ್ಲಿ ಪರಮ ಸುಂದರಿಯಾಗಿ ಮಿಂಚಿದ ಜಾನ್ವಿ

    `ಪರಮ್ ಸುಂದರಿ’ ಪ್ರೀಮಿಯರ್‌ನಲ್ಲಿ ಪರಮ ಸುಂದರಿಯಾಗಿ ಮಿಂಚಿದ ಜಾನ್ವಿ

    ಬಾಲಿವುಡ್ ಫ್ಯಾಶನ್ ದಿವಾ ಜಾನ್ವಿ ಕಪೂರ್ ತಮ್ಮ ಉಡುಗೆ ವಿನ್ಯಾಸದಿಂದಲೇ ಹೆಚ್ಚು ಗಮನ ಸೆಳೆಯುತ್ತಾರೆ. ಇದೀಗ ಮುಂಬೈನಲ್ಲಿ ನಡೆದ ಪರಮ್ ಸುಂದರಿ ಚಿತ್ರದ ಪ್ರೀಮಿಯರ್‌ಗೆ ವಿಭಿನ್ನ ಸ್ಟೈಲ್ ಉಡುಗೆ ಧರಿಸಿ ಬಂದಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ತಿದ್ದಾರೆ ಈ ನಟಿ.

    ಯಾಕಂದ್ರೆ ಮಿರ ಮಿರ ಮಿಂಚುವ ಕೇಸರಿ ಬಣ್ಣದ ಮಿನಿ ಸ್ಕರ್ಟ್ ಧರಿಸಿದ್ದ ಜಾನ್ವಿ ಇಂಡೋ ವೆಸ್ಟರ್ನ್ ಸ್ಟೈಲ್‍ನಲ್ಲಿ ವಿಭಿನ್ನವಾಗಿ ಕಂಡುಬಂದ್ರು. ಮಿನಿ ಸ್ಕರ್ಟ್ ಧರಿಸಿ ಸೊಂಟಕ್ಕೆ ಚಿನ್ನದ ಡಾಬು ಕಟ್ಟಿಕೊಂಡಿದ್ರು , ಕೈಯಲ್ಲಿ ಬಳೆಗಳನ್ನ ಧರಿಸಿ ಪೋಸ್ ಕೊಟ್ರು. ನಟಿಯ ವಿಚಿತ್ರ ಫ್ಯಾಶನ್ ಸ್ಟೈಲ್‍ಗೆ ನೆಟ್ಟಿಗರ ಟೀಕೆ ಟಿಪ್ಪಣಿ ಜೋರಾಗಿದೆ.

    ಜಾನ್ವಿಅವರೇ ಹೇಳಿಕೊಂಡಂತೆ ಕೆಲವು ಬಾರಿ ಸೆಲ್ಫ್ ಡಿಸೈನ್ ಮಾಡಿಕೊಳ್ತಾರೆ. ಇಂಡೋ ವೆಸ್ಟರ್ನ್ ಸ್ಟೈಲ್ ಅಂತೂ ಹಲವು ಚಾಲ್ತಿಯಲ್ಲಿರೋದೇ ಆದರೆ ಈ ರೀತಿ ವಿಚಿತ್ರ ಉಡುಗೆಯಲ್ಲಿ ಜಾನ್ವಿ ಕಂಡುಬರ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಇದುವರೆಗೆ ಚಿತ್ರದ ಪ್ರಚಾರದಲ್ಲಿ ಸರಳವಾಗೇ ಕಂಡುಬಂದಿದ್ದ ನಟಿ ಇದೀಗ ಗಣೇಶ ಹಬ್ಬದ ದಿನ ನಡೆದ ಪ್ರೀಮಿಯರ್ ಶೋ ವೇಳೆ ವಿಚಿತ್ರ ಉಡುಗೆಯಿಂದ ಕಾಣಿಸ್ಕೊಂಡು ಸೆಂಟರ್ ಆಫ್ ಆ್ಯಟ್ರ್ಯಾಕ್ಷನ್ ಆದ್ರು.

  • ಖುಷಿಯಾಗಿ ಗಣೇಶ ಹಬ್ಬ ಆಚರಣೆ – ಡಿವೋರ್ಸ್ ವದಂತಿ ತಳ್ಳಿಹಾಕಿದ ನಟ ಗೋವಿಂದ ದಂಪತಿ

    ಖುಷಿಯಾಗಿ ಗಣೇಶ ಹಬ್ಬ ಆಚರಣೆ – ಡಿವೋರ್ಸ್ ವದಂತಿ ತಳ್ಳಿಹಾಕಿದ ನಟ ಗೋವಿಂದ ದಂಪತಿ

    ಬಾಲಿವುಡ್ ಖ್ಯಾತ ನಟ ಗೋವಿಂದ (Actor Govind) ವಿವಾಹ ವಿಚ್ಛೇದನ ವಿಚಾರ ಕೆಲ ದಿನಗಳ ಹಿಂದಷ್ಟೇ ಮತ್ತೆ ಮುನ್ನೆಲೆಗೆ ಬಂದಿತ್ತು. ಇದರ ನಡುವೆಯೇ ಗಣೇಶ ಹಬ್ಬದಂದು (Ganesh Festival) ಗೋವಿಂದ ದಂಪತಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ಕೆಲ ತಿಂಗಳಿಂದ ಗೋವಿಂದ ಹಾಗೂ ಪತ್ನಿ ಸುನೀತಾ ಅವರ ವಿಚ್ಛೇದನ ವಿಚಾರ ಚರ್ಚೆಯಲ್ಲಿತ್ತು. ಆದರೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಗೋವಿಂದ ಅವರ ಪತ್ನಿ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರೀತಿ ಮತ್ತು ವಿವಾಹದಲ್ಲಿ ಮೋಸ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಅಂತ ಕಾರಣ ಕೊಟ್ಟು ಸುನೀತಾ ಅವರು ವಿಚ್ಛೇದನ ಕೋರಿದ್ದರು. ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13 (1), (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು.ಇದನ್ನೂ ಓದಿ: ತೇಜ ಸಜ್ಜಾ ನಟನೆಯ ಮಿರಾಯ್ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

    ಇದೀಗ ನಟ/ರಾಜಕಾರಣಿ ಗೋವಿಂದ ಮುಂಬೈನ ತಮ್ಮ ನಿವಾಸದಲ್ಲಿ ಖುಷಿ ಖುಷಿಯಿಂದ ಗಣಪತಿ ಹಬ್ಬ ಆಚರಿಸಿದ್ದಾರೆ. ಮನೆಯ ಹೊರಗೆ ಪತ್ನಿ ಜೊತೆಗೆ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ.

    ದಂಪತಿ ಒಟ್ಟಿಗೆ ನಿಂತು ಎಲ್ಲರಿಗೂ ಸಿಹಿ ಹಂಚಿದ್ದಾರೆ. ಗೋವಿಂದ ಹಾಗೂ ಸುನೀತಾ ಅಹುಜಾ ಜೋಡಿ ಬಹಳ ಅನ್ಯೋನ್ಯವಾಗಿರುವಂತೆ ಕಂಡುಬಂದ್ರು. ವಿಶೇಷ ಅಂದ್ರೆ ಕಪಲ್ ಟ್ವಿನ್ಸ್ ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ಪ್ರೇಯಸಿ ಜೊತೆ ಜಯಂ ರವಿ ಮ್ಯಾಚಿಂಗ್ ಮ್ಯಾಚಿಂಗ್!

  • ರಣ್ವೀರ್ ಸಿಂಗ್ ಸಿನಿಮಾ ಸೆಟ್ಟಲ್ಲಿ ನೂರಕ್ಕೂ ಹೆಚ್ಚು ತಂತ್ರಜ್ಞರಿಗೆ ಫುಡ್ ಪಾಯ್ಸನ್!

    ರಣ್ವೀರ್ ಸಿಂಗ್ ಸಿನಿಮಾ ಸೆಟ್ಟಲ್ಲಿ ನೂರಕ್ಕೂ ಹೆಚ್ಚು ತಂತ್ರಜ್ಞರಿಗೆ ಫುಡ್ ಪಾಯ್ಸನ್!

    ಣ್ವೀರ್ ಸಿಂಗ್ (Ranveer Singh) ನಟನೆಯ ಸಿನಿಮಾ `ಧುರಂಧರ್’ (Dhurandhar) ಚಿತ್ರೀಕರಣ ಭರದಿಂದ ಸಾಗಿದೆ. ಆದರೆ, ಚಿತ್ರೀಕರಣದ ವೇಳೆಯಲ್ಲಿ ನಡೆದ ಮಹಾ ದುರಂತವೊಂದು ತಡವಾಗಿ ಬೆಳಕಿಗೆ ಬಂದಿದೆ. ಲೇಹ್ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಚಿತ್ರತಂಡಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಕಾಸ್ಟ್ & ಕ್ರೂ ಸದಸ್ಯರಿಗೆ ಫುಡ್ ಪಾಯ್ಸನ್ ಆಗಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ.

    ಕಳೆದ ಭಾನುವಾರ (ಆ.17) ಲೇಹ್ ಸುತ್ತಮುತ್ತಲಿನ ಜಾಗದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಊಟ ಸೇವಿಸಿದ ಬಳಿಕ ಅನೇಕರಿಗೆ ತೀವ್ರ ವಾಂತಿ, ಹೊಟ್ಟೆನೋವು, ತಲೆಸುತ್ತುವಿಕೆ, ಅಸ್ವಸ್ಥತೆ ಉಂಟಾಗುತ್ತೆ. ಕೂಡಲೇ ಅವರನ್ನ ಸಜಲ್ ನರಬೂ ಮೆಮೋರಿಯಲ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತೆ. ಅಸ್ವಸ್ಥರೆಲ್ಲರಿಗೂ ಚಿಕಿತ್ಸೆ ನೀಡಿದ ಬಳಿಕ ಮರುದಿನವೇ ಎಲ್ಲರೂ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿರುತ್ತಾರೆ. ಮಕ್ಕಳೂ ಸೇರಿದಂತೆ ಬಹಳಷ್ಟು ಮಂದಿ ತೀವ್ರ ಅಸ್ವಸ್ಥಗೊಂಡಿದ್ದರು. ಸರ್ಕಾರಿ ಆರೋಗ್ಯಾಧಿಕಾರಿಗಳು ಆಹಾರದ ಸ್ಯಾಂಪಲ್‌ನ್ನು ವಶಕ್ಕೆ ಪಡೆದು ತನಿಖೆ ನಡೆಯುತ್ತಿದ್ದಾರೆ. ಅದೃಷ್ಟವಶಾತ್ ಯಾರಿಗೂ ತೀವ್ರ ಗಂಭೀರ ಸಮಸ್ಯೆ ಉಂಟಾಗಲಿಲ್ಲ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆಹಾರ ಹೇಗೆ ವಿಷಪೂರಿತವಾಗಿದೆ. ನೀರು ಪೂರೈಕೆ ಎಲ್ಲಿಂದ ನಡೆದಿದೆ. ಸ್ಥಳದಲ್ಲಿ ವಿಷಪೂರಿತ ಅಂಶಗಳು ಪತ್ತೆಯಾಗಿವೆಯೇ ಅನ್ನೋದ್ರ ಕುರಿತು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: `ನಮ್ಮ ಹತ್ರ ಬರೋ ಅವಶ್ಯಕತೆ ಇಲ್ಲ’ – ಪುಷ್ಪಮ್ಮನಿಗೆ ಮತ್ತೆ ಟಾಂಗ್ ಕೊಟ್ಟ ದೀಪಿಕಾ ದಾಸ್

    ಅಂದಹಾಗೆ ಆರಂಭಿಕ ಮಾಹಿತಿ ಪ್ರಕಾರ ರಣ್ವೀರ್ ಸಿಂಗ್ ಸೆಟ್ಟಲ್ಲಿ ಇರಲಿಲ್ಲ ಎನ್ನಲಾಗುತ್ತಿದೆ. ಈ ಚಿತ್ರವನ್ನು ಆದಿತ್ಯ ಧರ್ ನಿರ್ದೇಶಿಸಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್, ಮಾಧವನ್, ಅಕ್ಷಯ ಖನ್ನಾ ಸೇರಿದಂತೆ ಹಲವರು ನಟಿಸಿದ್ದಾರೆ. ಹೀಗೆ ಧುರಂಧರ್ ಸೆಟ್ಟಲ್ಲಿ ಮಹಾ ದುರಂತವೊಂದು ಸೈಲೆಂಟಾಗೇ ನಡೆದುಹೋಗಿದೆ.

  • ಬಾಘಿ-4 ಟ್ರೈಲರ್‌ಗೆ ಮುಹೂರ್ತ ಫಿಕ್ಸ್

    ಬಾಘಿ-4 ಟ್ರೈಲರ್‌ಗೆ ಮುಹೂರ್ತ ಫಿಕ್ಸ್

    ಟೈಗರ್ ಶ್ರಾಫ್ (Tiger Shroff) ನಟನೆಯ ಬಾಘಿ ಸಿನಿಮಾದ ಸಿರೀಸ್ ಬಿಗ್ ಸಕ್ಸಸ್ ಕಂಡಿದೆ. 2016ರಲ್ಲಿ ಶುರುವಾದ ಬಾಘಿ ಜರ್ನಿ 2025ರವರೆಗೆ 4 ಆವೃತ್ತಿಗಳನ್ನ ಆವರಿಸಿದೆ. 2016ರಲ್ಲಿ ಟೈಗರ್ ಶ್ರಾಫ್ ರೋನಿಯಾಗಿ ಕಾಣಿಸಿಕೊಂಡ ಬಾಘಿ ಸಿನಿಮಾ ಸೂಪರ್ ಹಿಟ್ ಆಗಿದ್ದು, ಈ ಬಿಗ್ ಸಕ್ಸಸ್ ಬಳಿಕ ನಿರ್ಮಾಪಕ ಸಾಜಿದ್ ನಡಿಯಾವಾಲಾ 2018ರಲ್ಲಿ ಬಾಘಿ-2 ಸಿನಿಮಾವನ್ನ ಕೈಗೆತ್ತಿಕೊಂಡರು. 2018ರಲ್ಲೂ ಕೂಡಾ ಪಾರ್ಟ್-2 ಸಿನಿಮಾ ಕೂಡಾ ಹಿಟ್ ಲಿಸ್ಟ್ ಸೇರಿದೆ.

    2020ರಲ್ಲಿ ಬಾಘಿ-3 ಸಿನಿಮಾ ಕೊವಿಡ್ ಸಿಚುವೇಷನ್‍ನಲ್ಲಿ ತೆರೆಕಂಡ ಸಿನಿಮಾ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ ಬಾಘಿ-4 ಸಿನಿಮಾ ರಿಲೀಸ್‍ಗೆ ರೆಡಿಯಾಗಿದ್ದು, ಈ ಸಿನಿಮಾದ ಟ್ರೈಲರ್ ರಿಲೀಸ್‍ಗೆ ಡೇಟ್ ಫಿಕ್ಸ್ ಆಗಿದೆ. ಇದೇ ಆಗಸ್ಟ್ 30ರಂದು ಬಾಘಿ-4  (Baaghi 4) ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್‍ನಿಂದಲೇ ಪ್ರೇಕ್ಷಕರನ್ನ ಅಟ್ರ್ಯಾಕ್ಟ್ ಮಾಡಿರುವ ಈ ಸಿನಿಮಾದ ಟ್ರೈಲರ್‌ಗಾಗಿ ಕಾತುರದಿಂದ ಕಾಯುತ್ತಿದೆ ಅಭಿಮಾನಿ ವರ್ಗ.

    ಬಾಘಿ-4 ಸಿನಿಮಾ ಸೆಪ್ಟಂಬರ್ 5ರಂದು ರಿಲೀಸ್ ಆಗ್ತಿದ್ದು, ಸಿನಿಮಾ ಟ್ರೈಲರ್ ಮೇಲೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಸಿನಿಮಾದ ಟ್ರೈಲರ್‍ಗೆ ಕೌಂಟ್‍ಡೌನ್ ಶುರುವಾಗಿದ್ದು, ಟ್ರೈಲರ್‍ನ್ನ ಅದ್ಧೂರಿಯಾಗಿ ಲಾಂಚ್ ಮಾಡಲು ಚಿತ್ರತಂಡ ಕೂಡಾ ಭರ್ಜರಿಯಾಗಿ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ಇನ್ನೊಂದು ವಿಶೇಷ ಅಂದ್ರೆ ಈ ಸಿನಿಮಾವನ್ನ ಕನ್ನಡದ ನಿರ್ದೇಶಕ ಎ.ಹರ್ಷಾ ನಿರ್ದೇಶನ ಮಾಡಿದ್ದಾರೆ.

    ಅಂದಹಾಗೆ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಟೈಗರ್ ಶ್ರಾಫ್ ಜೊತೆ ಸಂಜಯ್ ದತ್, ಸೋನಮ್ ಬಜ್ವಾ, ಹರ್ನಾಜ್ ಸಂದು ಕಾಣಿಸಿಕೊಂಡಿದ್ದಾರೆ. ಸೆಪ್ಟಂಬರ್ 5ಕ್ಕೆ ತೆರೆಕಾಣಲು ರೆಡಿಯಾಗಿರುವ ಸಿನಿಮಾವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ.

  • ಬಿಕಿನಿ ಫೋಟೋ ಹಾಕಿ ಕಾಮೆಂಟ್ಸ್ ಆಫ್ ಮಾಡಿದ ಆಲಿಯಾ ಭಟ್!

    ಬಿಕಿನಿ ಫೋಟೋ ಹಾಕಿ ಕಾಮೆಂಟ್ಸ್ ಆಫ್ ಮಾಡಿದ ಆಲಿಯಾ ಭಟ್!

    ಬಿಟೌನ್ (Bollywood) ಬ್ಯೂಟಿ ಆಲಿಯಾ ಭಟ್ (Actress Alia Bhatt) ಇದೀಗ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಬೋಲ್ಡ್ ಫೋಟೋಗಳು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ವೆಕೇಷನ್‍ಗೆ ಹೋಗಿರುವ ಆಲಿಯಾ ಬೀಚ್ ಸೈಡ್ ತಂಪು ತಂಗಾಳಿಯಲ್ಲಿ ಹಾಯಾಗಿ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. ಹಾಗಂತ ಸೂಪರ್ ಅಂತ ಕಾಮೆಂಟ್ ಮಾಡ್ತೀನಿ ಅಂದ್ರೆ ಅದಕ್ಕೆ ಅವಕಾಶ ಕೊಟ್ಟಿಲ್ಲ ಆಲಿಯಾ. ಕಾಮೆಂಟ್ಸ್ ಸೆಕ್ಷನ್‍ನ್ನು ಆಫ್ ಮಾಡಿದ್ದಾರೆ ಆಲಿಯಾ. ಅವರು ಹೀಗ್ ಮಾಡಿರೋದು ಮೊದಲೇನಲ್ಲ. ಕೆಲವೊಂದು ವೈಯಕ್ತಿಕ ಫೋಟೋ ಹಾಕಿದಾಗ ಆಲಿಯಾ ಕಾಮೆಂಟ್ ಸೆಕ್ಷನ್ ಆಫ್ ಮಾಡುವ ಪದ್ಧತಿ ರೂಢಿಸಿಕೊಂಡಿದ್ದಾರೆ. ಬ್ಯಾಡ್ ಕಾಮೆಂಟ್ಸ್‍ಗಳ್ಯಾಕೆ ಅದರಿಂದ ಮನಸ್ಸಿಗೆ ನೋವು ಮಾಡಿಕೊಳ್ಳುವ ತಲೆನೋವ್ಯಾಕೆ ಅನ್ನೋದು ಆಲಿಯಾ ಪಾಲಿಸಿ ಇರಬಹುದು. ಹೀಗಾಗಿ ಈಗ ಪೋಸ್ಟ್ ಮಾಡಿರುವ ಆರೇಂಜ್ ಬಿಕಿನಿ ಧರಿಸಿರುವ ಬೋಲ್ಡ್ ಫೋಟೋಗಳಿಗೂ ಕಾಮೆಂಟ್ಸ್ ಆಫ್ ಮಾಡಿದ್ದಾರೆ.

    ಮೇಕಪ್ ಇಲ್ಲದೇ ಸುಂದರವಾಗಿ ಕಾಣಿಸುವ ನಟಿಯರಲ್ಲಿ ಆಲಿಯಾ ಕೂಡ ಒಬ್ಬರು. ಅನೇಕ ಬಾರಿ ಮೇಕಪ್ ಇಲ್ಲದೇ ಕಾಣಿಸಿಕೊಳ್ಳೋದುಂಟು. ಇದೀಗ ತಮ್ಮ ನೈಸರ್ಗಿಕ ಅಂದಕ್ಕೆ ಚೆಂದದ ಕ್ಯಾಪ್ಷನ್ ಕೊಟ್ಟಿರುವ ಆಲಿಯಾ ಸಮುದ್ರದ ಉಪ್ಪು ಹಾಗೂ ಸಮುದ್ರದ ತಂಗಾಳಿ ತಮ್ಮ ಕೇಶವಿನ್ಯಾಸ ಮಾಡಿದೆ ಎಂದು ಕ್ರೆಡಿಟ್ ಕೊಟ್ಟಿದ್ದಾರೆ. ಆಲಿಯಾಳ ಈ ನೈಸರ್ಗಿಕ ಅಂದಕ್ಕೆ ಕಾಮೆಂಟ್ಸ್ ಮಾಡೋದಂತೂ ಅಸಾಧ್ಯ, ನೋಡಬಹುದಷ್ಟೇ. ಇದನ್ನೂ ಓದಿ: ಡಾಲಿ ಹುಟ್ಟುಹಬ್ಬಕ್ಕೆ ಜಿಂಗೋ ಲುಕ್ ಪೋಸ್ಟರ್ ರಿಲೀಸ್

    ಸಾಮಾನ್ಯವಾಗಿ ಆಲಿಯಾ ಮಗಳು ಹಾಗೂ ಪತಿ ಜೊತೆ ವೆಕೇಷನ್ ಹೋಗೋದು ಸಾಮಾನ್ಯ. ಆದರೆ ಈ ಬಾರಿ ತಾಯಿ ತಂಗಿ ಹಾಗೂ ತಂಗಿಯ ಬಾಯ್‍ಫ್ರೆಂಡ್ ಜೊತೆಯಲ್ಲಿ ಆಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಈ ಹಿಂದೆ ಫೋಟೋ ಪೋಸ್ಟ್ ಮಾಡಿದ್ದರು. ಇದೀಗ ಆಲಿಯಾಳ ಸಿಂಗಲ್ ಸೆಲ್ಫಿ ಕ್ಲಿಕ್‍ಗಳು ವೈರಲ್ ಆಗಿವೆ. ಇದನ್ನೂ ಓದಿ: ದರ್ಶನ್ ಬಳ್ಳಾರಿ ಜರ್ನಿ – ಆ.30ರಂದು ಅರ್ಜಿ ವಿಚಾರಣೆ

  • ರಾಗಿಣಿ ಎಂಎಂಎಸ್-3ಗೆ ಮಿಲ್ಕಿ ಬ್ಯೂಟಿ ನಾಯಕಿ..!?

    ರಾಗಿಣಿ ಎಂಎಂಎಸ್-3ಗೆ ಮಿಲ್ಕಿ ಬ್ಯೂಟಿ ನಾಯಕಿ..!?

    ಮನ್ನಾ ಭಾಟಿಯಾ (Tamannaah Bhatia) ಬಾಲಿವುಡ್‍ನಲ್ಲಿ `ಆಜ್ ಕಿ ರಾತ್’ ಅಂತಾ ಸೊಂಟ ಬಳುಕಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಸ್ತ್ರೀ-2 ಸಿನಿಮಾದ ಹಾಡಿನ ಮೂಲಕ ಬಾಲಿವುಡ್‍ನಲ್ಲೂ (Bollywood) ಕಮಾಲ್ ಮಾಡಿದ್ದರು. ಇದಾದ ಬಳಿಕ ಒಂದರ ಮೇಲೊಂದರಂತೆ ತಮನ್ನಾ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಒಡೆಲಾ-2 ಹಾಗೂ ರೇಡ್-2 ಸಿನಿಮಾದ ನಂತರ ಇದೀಗ ಮತ್ತೊಂದು ಹೊಸ ಸಿನಿಮಾಗೆ ಸಹಿ ಹಾಕಿದ್ದಾರಂತೆ ಮಿಲ್ಕಿ ಬ್ಯೂಟಿ.

    ಇನ್ನೊಂದು ವಿಶೇಷ ಅಂದರೆ ತಮನ್ನಾ ಬಾಲಿವುಡ್‍ನಲ್ಲೇ ಸೆಟ್ಲ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ 4 ಹಿಂದಿ ಸಿನಿಮಾಗಳನ್ನ ಒಪ್ಪಿಕೊಂಡಿರುವ ತಮನ್ನಾ, ರಾಗಿಣಿ ಎಂಎಂಎಸ್-3 (Ragini MMS 3) ಸಿನಿಮಾವನ್ನ ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಸದ್ಯ ಸಂಚಲನವನ್ನ ಸೃಷ್ಟಿಸಿದೆ. ರಾಗಿಣಿ ಎಂಎಂಎಸ್-2 ಸಿನಿಮಾದಲ್ಲಿ ಮಾಜಿ ನೀಲಿತಾರೆ ಸನ್ನಿ ಲಿಯೋನ್ ನಟಿಸಿದ್ದರು. ಹಸಿ ಬಿಸಿ ದೃಶ್ಯಗಳ ಜೊತೆಗೆ ಹಾರರ್ ಟಚ್ ಕಥೆಯಾಧಾರಿತ ಈ ಸಿನಿಮಾ ಸಖತ್ ಸೌಂಡ್ ಮಾಡಿತ್ತು. ಇದನ್ನೂ ಓದಿ: ಬಾಲಿವುಡ್‌ ನಟ ಗೋವಿಂದ ಸಂಸಾರದಲ್ಲಿ ಬಿರುಕು; ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

    ಇದೀಗ ಈ ಸಿನಿಮಾದ ಪಾರ್ಟ್-3 ಬಗ್ಗೆ ನಿರ್ಮಾಪಕ ಏಕ್ತಾ ಕಪೂರ್ ಯೋಜನೆಯನ್ನ ಹಾಕಿಕೊಂಡಿದ್ದು, ಈ ಸಿನಿಮಾದ ನಾಯಕಿ ಪಾತ್ರಕ್ಕಾಗಿ ತಮನ್ನಾ ಅವರನ್ನ ಅಪ್ರೋಚ್ ಮಾಡಲಾಗಿದೆಯಂತೆ. ಈ ಸಿನಿಮಾ ಬಗ್ಗೆ ವ್ಯಾನ್ ಚಿತ್ರದ ಸೆಟ್‍ನಲ್ಲಿ ಏಕ್ತಾ ಕಪೂರ್ ಚರ್ಚಿಸಿದ್ದಾರಂತೆ. ಅಲ್ಲದೇ ಈ ಸಿನಿಮಾವನ್ನ ಬೇಗನೇ ಶುರುಮಾಡಿ, 2025ಡಿ ವರ್ಷಾಂತ್ಯಕ್ಕೆ ರಿಲೀಸ್ ಮಾಡುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ ಎನ್ನಲಾಗ್ತಿದೆ. ತಮನ್ನಾ ಕೂಡಾ ಈ ಸಿನಿಮಾವನ್ನ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಮಿಲ್ಕಿ ಬ್ಯೂಟಿ, ಬೋಲ್ಡ್ ಅವತಾರದಲ್ಲಿ ತಮನ್ನಾ ಕಾಣಿಸಿಕೊಳ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. ಇದನ್ನೂ ಓದಿ: ಮೆಗಾಸ್ಟಾರ್‌ಗೆ 70ರ ಸಂಭ್ರಮ: ರಾಮ್‌ ಚರಣ್ ಸೆಲಬ್ರೇಷನ್