Tag: Bollywood Films

  • ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಪ್ರತಿ ಬಾರಿಯೂ ಅಭಿಮಾನಿಗಳ ಜತೆ ಅಥವಾ ಮಂತ್ರಾಲಯದಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಜಗ್ಗೇಶ್, ಈ ಬಾರಿ ಬರ್ತಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಪುನೀತ್ ನಿಧನದ ನೋವಿನಲ್ಲಿರುವ ಅವರು ‘ಯಾವ ಸಡಗರಕ್ಕೆ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕು’ ಎನ್ನುವ ಅರ್ಥದಲ್ಲಿ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್

    “ಈ ಬಾರಿ ನನ್ನ 59ನೇ ಹುಟ್ಟು ಹಬ್ಬವನ್ನು ಆಚರಿಸುವುದಿಲ್ಲ ಹಾಗೂ ಮನಸ್ಸೂ ಇಲ್ಲ. ಕಾರಣ ಪ್ರತಿ ಮಾರ್ಚ್ 17ಕ್ಕೆ ತಪ್ಪದೇ ಬರುತ್ತಿದ್ದ ಪುನೀತ್ ಕರೆ ಮತ್ತೆಂದೂ ಬರದಂತಾಗಿದೆ” ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಜಗ್ಗೇಶ್, ಪುನೀತ್ ಜತೆ ತೆಗೆಸಿಕೊಂಡಿದ್ದ ಕೊನೆಯ ಚಿತ್ರವನ್ನೂ ಅವರು ಹಾಕಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಪುನೀತ್ ಮತ್ತು ಜಗ್ಗೇಶ್ ಮಾ.17ರಂದು ಹುಟ್ಟಿದವರು. ಹಾಗಾಗಿ ಎಷ್ಟೋ ಸಲ ಒಟ್ಟಿಗೆ ಮಂತ್ರಾಲಯದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡದ್ದು ಇದೆ. ಒಟ್ಟಿಗೆ ಅಲ್ಲಿಗೆ ಪ್ರಯಾಣ ಮಾಡಿದ್ದೂ ಇದೆ. ಜಗ್ಗೇಶ್ ಇರುವ ಮನೆ ಹತ್ತಿರ ಪುನೀತ್ ಅವರು ಬಂದರೆ, ತಪ್ಪದೇ ಜಗ್ಗೇಶ್ ಅವರಿಗೆ ಕರೆ ಮಾಡುತ್ತಿದ್ದರು. ಪುನೀತ್ ನಿಧನದ ಒಂದು ವಾರದ ಮುಂಚೆಯೇ ಒಟ್ಟಿಗೆ ಇದ್ದರು. ಇಬ್ಬರ ಮಧ್ಯೆ ಒಂದೊಳ್ಳೆ ಬಾಂಧವ್ಯ ಕೂಡ ಇತ್ತು. ಹೀಗಾಗಿ ಪುನೀತ್ ನಿಧನದ ನೋವಿನಲ್ಲಿರುವ ಜಗ್ಗೇಶ್ ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

    ಸದ್ಯ ಜಗ್ಗೇಶ್, ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಪುನೀತ್ ಅವರ ಸಿನಿಮಾದ ಮೂಲಕ ಈ ಸಂಸ್ಥೆ ಹುಟ್ಟಿಕೊಂಡಿದ್ದು ಎನ್ನುವುದು ವಿಶೇಷ.