Tag: Bollywood Films

  • ಯುವರಾಜ್ ಕುಮಾರ್ ಚಿತ್ರಕ್ಕೆ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ನಾಯಕಿ?

    ಯುವರಾಜ್ ಕುಮಾರ್ ಚಿತ್ರಕ್ಕೆ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ನಾಯಕಿ?

    ನಿನ್ನೆಯಷ್ಟೇ ಹೊಂಬಾಳೆ ಫಿಲ್ಮ್ಸ್ ಕಚೇರಿಗೆ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ಭೇಟಿ ನೀಡಿದ ಸುದ್ದಿಯನ್ನು ಬೆಳಗ್ಗೆಯಷ್ಟೇ ಪಬ್ಲಿಕ್ ಟಿವಿ ಡಿಜಿಟಲ್ ಪ್ರಕಟಿಸಿತ್ತು. ಹೊಂಬಾಳೆ ಬ್ಯಾನರ್ ನಲ್ಲಿ ಹಲವು ಸಿನಿಮಾಗಳು ಮೂಡಿ ಬರುತ್ತಿದ್ದು, ಯಾವ ಚಿತ್ರಕ್ಕಾಗಿ ಅವರನ್ನು ಕರೆಯಿಸಲಾಗಿದೆ ಎಂಬ ಕುತೂಹಲ ಕೂಡ ಮೂಡಿಸಿತ್ತು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಯುವರಾಜ್ ಕುಮಾರ್ ಸಿನಿಮಾಗೆ ಮಾನುಷಿ ಚಿಲ್ಲರ್ ನಾಯಕಿ ಎನ್ನಲಾಗುತ್ತಿದೆ.

    ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಅವರನ್ನು ಹೊಂಬಾಳೆ ಫಿಲ್ಮ್ಸ್ ಕನ್ನಡ ಸಿನಿಮಾ ಜಗತ್ತಿಗೆ ಲಾಂಚ್ ಮಾಡುತ್ತಿದೆ. ಈ ವಿಷಯವನ್ನೂ ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಪ್ರಕಟಿಸಿದೆ. ಅದೇ ಸಿನಿಮಾದಲ್ಲೇ ಮಾನುಷಿ ನಾಯಕಿಯಾಗಿ ನಟಿಸಲಿದ್ದಾರಂತೆ. ಆ ವಿಷಯವನ್ನು ಮಾತನಾಡಲೆಂದೇ ನಿರ್ಮಾಪಕ ವಿಜಯ್ ಕಿರಗಂದೂರು ಬೆಂಗಳೂರಿಗೆ ಅವರನ್ನು ಕರೆಯಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಆಕೆಯೂ ಕೂಡ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಸ್ಕ್ರಿಪ್ಟ್ ಸೇರಿದಂತೆ ಹಲವು ಕೆಲಸಗಳು ಮುಗಿದಿವೆ. ಶೂಟಿಂಗ್ ಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಿನಿಮಾಗಾಗಿಯೇ ಹಲವು ತಿಂಗಳಿನಿಂದ ಯುವ ಸಖತ್ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ. ಕನ್ನಡ ಸಿನಿಮಾ ರಂಗಕ್ಕೆ ಯುವ ಮತ್ತು ಮಾನುಷಿ ಚಿಲ್ಲರ್ ಈ ಸಿನಿಮಾದ ಮೂಲಕ ಪರಿಚಯವಾಗಲಿದ್ದಾರೆ. ಅಂದಹಾಗೆ ಮಾನುಷಿ ಇದು ಎರಡನೇ ಸಿನಿಮಾವಾಗಲಿದೆ. ಈಗಾಗಲೇ ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಜೊತೆ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ಅವರು ನಟಿಸಿದ್ದಾರೆ.

    Live Tv

  • ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಟಿಸಲಿದ್ದಾರೆ ಮಾಜಿ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಟಿಸಲಿದ್ದಾರೆ ಮಾಜಿ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್

    ಚ್ಚರಿಯ ಮೇಲೆ ಅಚ್ಚರಿ ನೀಡುತ್ತಿದೆ ಹೊಂಬಾಳೆ ಫಿಲ್ಮ್ಸ್. ಈಗಾಗಲೇ ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಕೆಜಿಎಫ್ 2 ಸಾವಿರಾರು ಕೋಟಿ ಗಳಿಸಿದ ನಂತರ ಭಾರತೀಯ ಸಿನಿಮಾ ರಂಗವನ್ನೇ ಹೊಂಬಾಳೆ ಫಿಲ್ಮ್ಸ್ ಆವರಿಸಿಕೊಳ್ಳುತ್ತಿದೆ. ಈ ನಡುವೆ ಮತ್ತೊಂದು ಅಚ್ಚರಿಯ ಸುದ್ದಿ ಸಿಕ್ಕಿದೆ. ನಿನ್ನೆಯಷ್ಟೇ ಸದ್ದಿಲ್ಲದೇ ಹೊಂಬಾಳೆ ಫಿಲ್ಮ್ಸ್ ಕಚೇರಿಗೆ ಮಾಜಿ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಭೇಟಿ ನೀಡಿದ್ದಾರೆ.

    ಇತ್ತೀಚೆಗಷ್ಟೇ ಮಾನುಷಿ ನಟನೆಯ ಚೊಚ್ಚಲು ಸಿನಿಮಾ ‘ಸಾಮ್ರಾಟ್ ಪೃಥ್ವಿರಾಜ್’ ತೆರೆ ಕಂಡಿದೆ. ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವಂತಹ ಕಮಾಯಿ ಏನೂ ಮಾಡದೇ ಇದ್ದರೂ, ಮಾನುಷಿ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಬೆಂಗಳೂರಿಗೆ ಆಗಮಿಸಿರುವ ಮಾನುಷಿ, ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ ಮಾಡಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಹೊಂಬಾಳೆ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ, ಅವರು ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಸದ್ಯ ಹೊಂಬಾಳೆ ಫಿಲ್ಮ್ಸ್ ಬಳಿ ಎರಡು ಮೆಗಾ ಪ್ರಾಜೆಕ್ಟ್ ಗಳಿವೆ. ಒಂದು ಸಿನಿಮಾವನ್ನು ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೊಂದು ಸಿನಿಮಾ ಬಾಲಿವುಡ್ ನಲ್ಲಿ ಮಾತುಕತೆ ನಡೆದಿದೆ. ಈ ಎರಡು ಸಿನಿಮಾದಲ್ಲಿ ಯಾವುದಾದರೂ ಒಂದು ಸಿನಿಮಾದಲ್ಲಿ ಮಾನುಷಿ ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಒಟ್ಟಿನಲ್ಲಿ ಮಾನುಷಿ ಬೆಂಗಳೂರು ಆಫೀಸಿನಲ್ಲಿ ವಿಜಯ್ ಕಿರಗಂದೂರು ಅವರನ್ನು ಭೇಟಿ ಮಾಡಿದ ಫೋಟೋವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹೊಂಬಾಳಿ ಫಿಲ್ಮ್ಸ್ ಪೋಸ್ಟ್ ಮಾಡಿ, ಕುತೂಹಲ ಹೆಚ್ಚಿಸಿದೆ.

    Live Tv

  • ಮಲಯಾಳಂ ಪೃಥ್ವಿರಾಜ್ ನಟನೆಯ ಮೊದಲ ಕನ್ನಡ ಸಿನಿಮಾ ಐಎಎಸ್ ಆಫೀಸರ್ ಬದುಕಿನ ಕಥೆಯಾ?

    ಮಲಯಾಳಂ ಪೃಥ್ವಿರಾಜ್ ನಟನೆಯ ಮೊದಲ ಕನ್ನಡ ಸಿನಿಮಾ ಐಎಎಸ್ ಆಫೀಸರ್ ಬದುಕಿನ ಕಥೆಯಾ?

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈಗಷ್ಟೇ ಘೋಷಣೆ ಆಗಿರುವ ಟೈಸನ್ ಸಿನಿಮಾದಲ್ಲಿ ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಐಎಎಸ್ ಅಧಿಕಾರಿಯಾಗಿ ನಟಿಸಲಿದ್ದಾರಾ? ಹಾಗೆಂದು ಸೂಚನೆ ನೀಡುತ್ತದೆ ಬಿಡುಗಡೆ ಆಗಿರುವ ಪೋಸ್ಟರ್. ಈ ಪೋಸ್ಟರ್ ನಲ್ಲಿ ವ್ಯಕ್ತಿಯೊಬ್ಬ ‘ರಂಜನ್ ಘೋಷ್ ಐಎಎಸ್’ ಎಂದು ಬರೆಯುತ್ತಿರುವ ಬೋರ್ಡ್ ಕಾಣುತ್ತದೆ. ಹಾಗಾಗಿ ಇದು ಐಎಎಸ್ ಅಧಿಕಾರಿಯ ಬದುಕಿನ ಕಥೆ ಎನ್ನುವ ಪ್ರಶ್ನೆ ಮೂಡಿಸುತ್ತದೆ.

    ಇದೇ ಬೋರ್ಡ್ ನಲ್ಲೇ ಅವರು ಮತ್ತೊಂದು ಇಂಟ್ ಕೊಟ್ಟಿದ್ದಾರೆ. ಇದೇ ವರ್ಷವೇ ಈ ಸಿನಿಮಾ ಶೂಟಿಂಗ್ ಶುರು ಮಾಡಿಕೊಂಡು 2023ರಲ್ಲಿ ತೆರೆ ಕಾಣಬಹುದು. ಹಾಗಾಗಿ ರಂಜನ್ ಘೋಷ್ ಹೆಸರಿನ ಮುಂದೆ 2022-23 ಎಂದು ಇಸವಿಯನ್ನೂ ಬರೆಯಲಾಗಿದೆ. ಬಹುಬೇಗ ಸಿನಿಮಾ ಶುರು ಮಾಡಿ, ಬೇಗ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಮಲಯಾಳಂ ಸಿನಿಮಾ ಮೇಕರ್ಸ್ ತಡಮಾಡಿ ಸಿನಿಮಾ ಮಾಡುವುದು ಕಡಿಮೆ. ಹಾಗಾಗಿ ಈ ಸಿನಿಮಾ ಆದಷ್ಟು ಬೇಗ ತೆರೆಗೆ ಬರಬಹುದು. ಇದನ್ನೂ ಓದಿ: ತಂದೆಯ ಬ್ಯಾನರ್ ನಲ್ಲೇ ಮತ್ತೆ ನಟಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?: ಯದುವೀರ ಡ್ರಾಪ್?

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ಭಾರತೀಯ ಸಿನಿಮಾ ರಂಗವನ್ನೇ ಒಗ್ಗೂಡಿಸಿತ್ತು. ಭಾರತೀಯ ಸಿನಿಮಾ ರಂಗದ ವಿವಿಧ ಭಾಷೆಯ ಕಲಾವಿದರು ಕೆಜಿಎಫ್ 2 ಚಿತ್ರಕ್ಕಾಗಿ ಒಂದಾಗಿ, ತಮ್ಮ ಭಾಷೆಯಲ್ಲೇ ಈ ಚಿತ್ರವನ್ನು ನೋಡಿ ಕೊಂಡಾಡಿದ್ದರು. ಹಾಗಾಗಿ ಹೊಂಬಾಳೆ ಫಿಲ್ಸ್ಮ್ ಜೊತೆಗೆ ಭಾರತೀಯ ಸಿನಿಮಾ ರಂಗದ ಬಹುತೇಕ ಕಲಾವಿದರ ಒಡನಾಟ ಬೆಳೆದಿತ್ತು. ಇಂತಿಪ್ಪ ಈ ಬೆಳವಣಿಗೆಯ ಕಾರಣದಿಂದಾಗಿಯೇ ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಕನ್ನಡಕ್ಕೆ ಬಂದಿದ್ದಾರೆ.

  • ಮಲಯಾಳಂ ಪೃಥ್ವಿರಾಜ್ ಜೊತೆ ಹೊಂಬಾಳೆ ಫಿಲ್ಮ್ಸ್ ಘೋಷಣೆ : ಐದು ಭಾಷೆಗಳಲ್ಲಿ ಸಿನಿಮಾ

    ಮಲಯಾಳಂ ಪೃಥ್ವಿರಾಜ್ ಜೊತೆ ಹೊಂಬಾಳೆ ಫಿಲ್ಮ್ಸ್ ಘೋಷಣೆ : ಐದು ಭಾಷೆಗಳಲ್ಲಿ ಸಿನಿಮಾ

    ಒಂದು ಗಂಟೆಯ ಹಿಂದೆಯಷ್ಟೇ ಪಬ್ಲಿಕ್ ಟಿವಿ ಡಿಜಿಟಲ್ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಲಯಾಳಂ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯನ್ನು ಪ್ರಕಟಿಸಿತ್ತು. ಅದು ಈಗ ನಿಜವಾಗಿದೇ ನಾಲ್ಕು ಭಾಷೆಗಳಲ್ಲಿ ಟೈಸನ್ ಸಿನಿಮಾ ಮಾಡುತ್ತಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಪೃಥ್ವಿರಾಜ್ ಈ ಸಿನಿಮಾದಲ್ಲಿ ಅವರೇ ಮುಖ್ಯ ಪಾತ್ರ ಮಾಡಿ, ನಿರ್ದೇಶನವನ್ನೂ ಮಾಡಲಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ಭಾರತೀಯ ಸಿನಿಮಾ ರಂಗವನ್ನೇ ಒಗ್ಗೂಡಿಸಿತ್ತು. ಭಾರತೀಯ ಸಿನಿಮಾ ರಂಗದ ವಿವಿಧ ಭಾಷೆಯ ಕಲಾವಿದರು ಕೆಜಿಎಫ್ 2 ಚಿತ್ರಕ್ಕಾಗಿ ಒಂದಾಗಿ, ತಮ್ಮ ಭಾಷೆಯಲ್ಲೇ ಈ ಚಿತ್ರವನ್ನು ನೋಡಿ ಕೊಂಡಾಡಿದ್ದರು. ಹಾಗಾಗಿ ಹೊಂಬಾಳೆ ಫಿಲ್ಸ್ಮ್ ಜೊತೆಗೆ ಭಾರತೀಯ ಸಿನಿಮಾ ರಂಗದ ಬಹುತೇಕ ಕಲಾವಿದರ ಒಡನಾಟ ಬೆಳೆದಿತ್ತು. ಇಂತಿಪ್ಪ ಈ ಬೆಳವಣಿಗೆಯ ಕಾರಣದಿಂದಾಗಿಯೇ ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಕನ್ನಡಕ್ಕೆ ಬಂದಿದ್ದಾರೆ. ಇದನ್ನೂ ಓದಿ: ತಂದೆಯ ಬ್ಯಾನರ್ ನಲ್ಲೇ ಮತ್ತೆ ನಟಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?: ಯದುವೀರ ಡ್ರಾಪ್?

    ಮಲಯಾಳಂನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಗಾಯಕರೂ ಆಗಿರುವ ಪೃಥ್ವಿರಾಜ್ ಸುಕುಮಾರನ್ ಕೆಜಿಎಫ್ 2 ಸಿನಿಮಾವನ್ನು ಮಲಯಾಳಂನಲ್ಲಿ ಪ್ರೆಸೆಂಟ್ ಮಾಡಿದ್ದರು. ಈ ಸಿನಿಮಾದ ವಿತರಕರೂ ಕೂಡ ಅವರೇ ಆಗಿದ್ದರು. ಬೆಂಗಳೂರಿನಲ್ಲಿ ನಡೆದ ಕೆಜಿಎಫ್ 2 ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೂ ಆಗಮಿಸಿದ್ದರು. ಇದೀಗ ಹೊಂಬಾಳೆ ಬ್ಯಾನರ್ನಲ್ಲಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ.

  • ಹೊಂಬಾಳೆ ಫಿಲ್ಮ್ಸ್ ಹೊಸ ಪ್ರಾಜೆಕ್ಟ್ : ಕನ್ನಡಕ್ಕೆ ಬರ್ತಾರಾ? ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್

    ಹೊಂಬಾಳೆ ಫಿಲ್ಮ್ಸ್ ಹೊಸ ಪ್ರಾಜೆಕ್ಟ್ : ಕನ್ನಡಕ್ಕೆ ಬರ್ತಾರಾ? ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ಭಾರತೀಯ ಸಿನಿಮಾ ರಂಗವನ್ನೇ ಒಗ್ಗೂಡಿಸಿದೆ. ಭಾರತೀಯ ಸಿನಿಮಾ ರಂಗದ ವಿವಿಧ ಭಾಷೆಯ ಕಲಾವಿದರು ಕೆಜಿಎಫ್ 2 ಚಿತ್ರಕ್ಕಾಗಿ ಒಂದಾಗಿ, ತಮ್ಮ ಭಾಷೆಯಲ್ಲೇ ಈ ಚಿತ್ರವನ್ನು ನೋಡಿ ಕೊಂಡಾಡಿದ್ದಾರೆ. ಹಾಗಾಗಿ ಹೊಂಬಾಳೆ ಫಿಲ್ಸ್ಮ್ ಜೊತೆಗೆ ಭಾರತೀಯ ಸಿನಿಮಾ ರಂಗದ ಬಹುತೇಕ ಕಲಾವಿದರ ಒಡನಾಟ ಬೆಳೆದಿದೆ. ಇಂತಿಪ್ಪ ಈ ಬೆಳವಣಿಗೆಯ ಕಾರಣದಿಂದಾಗಿಯೇ ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಕನ್ನಡಕ್ಕೆ ಬರಲಿದ್ದಾರೆ.

    ಮಲಯಾಳಂನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಗಾಯಕರೂ ಆಗಿರುವ ಪೃಥ್ವಿರಾಜ್ ಸುಕುಮಾರನ್ ಕೆಜಿಎಫ್ 2 ಸಿನಿಮಾವನ್ನು ಮಲಯಾಳಂನಲ್ಲಿ ಪ್ರೆಸೆಂಟ್ ಮಾಡಿದ್ದರು. ಈ ಸಿನಿಮಾದ ವಿತರಕರೂ ಕೂಡ ಅವರೇ ಆಗಿದ್ದರು. ಬೆಂಗಳೂರಿನಲ್ಲಿ ನಡೆದ ಕೆಜಿಎಫ್ 2 ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೂ ಆಗಮಿಸಿದ್ದರು. ಇದೀಗ ಹೊಂಬಾಳೆ ಬ್ಯಾನರ್ನಲ್ಲಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯಿದೆ. ಇಂದು 5.25ಕ್ಕೆ ಈ ಕುರಿತು ಅಧಿಕೃತ ಮಾಹಿತಿಯನ್ನು ಹೊಂಬಾಳೆ ಹಂಚಿಕೊಳ್ಳಲಿದೆ ಎಂದು ಸುದ್ದಿಯಾಗಿದೆ. ಇದನ್ನೂ ಓದಿ: ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್

    ಮಲಯಾಳಂ ಸಿನಿಮಾ ರಂಗದಲ್ಲಿ ಅಪರೂಪ ಎನಿಸುವಂತಹ ಚಿತ್ರಗಳನ್ನು ಕೊಟ್ಟಿರುವ ಪೃಥ್ವಿರಾಜ್ ಸುಕುಮಾರನ್ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದು, ಹೊಸ ರೀತಿಯ ಕಥೆಯೊಂದಿಗೆ ಹೊಂಬಾಳೆ ಫಿಲ್ಮ್ಸ್ ಜೊತೆ ಕೈ ಜೋಡಿಸಲಿದ್ದಾರೆ ಎನ್ನುವ ಸುದ್ದಿಯಿದೆ. ಕೆಲವೇ ಹೊತ್ತಿನಲ್ಲಿ ಈ ಕುರಿತು ಮಾಹಿತಿ ಹೊರ ಬೀಳಲಿದೆ ಎನ್ನುವ ಮಾಹಿತಿ ಬಂದಿದೆ.

  • 50ನೇ ದಿನಕ್ಕೆ ಕೆಜಿಎಫ್ 2 : ಶಾರುಖ್ ಖಾನ್ ಗೆ ಸಿನಿಮಾ ಮಾಡುತ್ತಾ ಹೊಂಬಾಳೆ ಫಿಲ್ಮ್ಸ್

    50ನೇ ದಿನಕ್ಕೆ ಕೆಜಿಎಫ್ 2 : ಶಾರುಖ್ ಖಾನ್ ಗೆ ಸಿನಿಮಾ ಮಾಡುತ್ತಾ ಹೊಂಬಾಳೆ ಫಿಲ್ಮ್ಸ್

    ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಸ್ಮ್ ಕಾಂಬಿನೇಷನ್ ನ, ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಇನ್ನೆರಡು ದಿನಗಳಲ್ಲಿ 50 ದಿನ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಹೊಸ ಸಿನಿಮಾ ಘೋಷಣೆ ಆಗತ್ತಾ? ಅಥವಾ ಯಶ್ ಅವರ ಹೊಸ ಸಿನಿಮಾದ ಬಗ್ಗೆ ಅಪ್ ಡೇಟ್ ಸಿಗತ್ತಾ ಎಂದು ಕಾಯುವಂತಾಗಿತ್ತು. ಆದರೆ, ಹೊಸದೊಂದು ಸುದ್ದಿ ಬಂದಿದೆ ಹೊಂಬಾಳೆ ಅಂಗಳದಿಂದ. ಈಗಾಗಲೇ ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವ ಈ ಸಂಸ್ಥೆ, ಸದ್ಯದಲ್ಲೇ ಬಾಲಿವುಡ್ ಗೂ ಕಾಲಿಡಲಿದೆಯಂತೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

    ಮಾಧ್ಯಮವೊಂದರ ಜೊತೆ ಮಾತನಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ‘ಈಗಾಗಲೇ ಮೂರು ಭಾಷೆಗಳಲ್ಲಿ ನೇರವಾಗಿ ಸಿನಿಮಾ ನಿರ್ಮಾಣ ಮಾಡಿದ್ದೇವೆ. ಬಾಲಿವುಡ್ ನಲ್ಲೂ ಸಿನಿಮಾ ಮಾಡುವ ಮಾತುಕತೆ ನಡೆದಿದೆ. ಅಂದುಕೊಂಡಂತೆ ಆದರೆ, ಮಾರ್ನಾಲ್ಕು ತಿಂಗಳಲ್ಲಿ ಬಾಲಿವುಡ್ ಸಿನಿಮಾ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಈಗಾಗಲೇ ಹೊಂಬಾಳೆ ಫಿಲ್ಮಸ್ ನಿರ್ಮಾಣದ ಕೆಜಿಎಫ್ 2 ಸಿನಿಮಾ ಹಿಂದಿಯಲ್ಲೇ ಅತೀ ಹೆಚ್ಚು ಹಣ ಮಾಡಿದೆ. ಕೆಲವೇ ದಿನಗಳಲ್ಲಿ ಕೇವಲ ಬಾಲಿವುಡ್ ನಲ್ಲೇ ಕೆಜಿಎಫ್ 2 ಸಿನಿಮಾ 500 ಕೋಟಿ ಬಾಚಲಿದೆ. ಹೀಗಾಗಿ ಬಾಲಿವುಡ್ ನಲ್ಲಿ ಸಿನಿಮಾ ಮಾಡಲು ಸಂಸ್ಥೆ ಮುಂದಾಗಿದೆ. ನಿರ್ದೇಶಕನಿಗಾಗಿ ಹುಡುಕಾಟ ಕೂಡ ಮಾಡಲಾಗುತ್ತಿದೆಯಂತೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

    ನಿರ್ಮಾಪಕರು ಆಪ್ತರ ಪ್ರಕಾರ ಮುಂದಿನ ದಿನಗಳಲ್ಲಿ ಹೊಂಬಾಳೆ ಫಿಲ್ಮಸ್ ಶಾರುಖ್ ಖಾನ್ ಗಾಗಿ ಸಿನಿಮಾ ಮಾಡಲಿದೆಯಂತೆ. ಈಗಾಗಲೇ ಮಾತುಕತೆ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿಯೇ ನಿರ್ದೇಶಕರನ್ನು ಹುಡುಕುತ್ತಿದ್ದಾರಂತೆ. ಅಂದುಕೊಂಡಂತೆ ಆದರೆ, ಬಾಲಿವುಡ್ ನಲ್ಲಿ ಶಾರುಖ್ ಖಾನ್ ನಟನೆಯ ಚಿತ್ರದ ಹೊಂಬಾಳೆ ಮೊದಲ ಬಾಲಿವುಡ್ ಚಿತ್ರವಾಗಲಿದೆ.

  • ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’ ಎನ್ನುವ ಹೊಸ ಪೋಸ್ಟರ್ ವೊಂದನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿ ಕುತೂಹಲ ಮೂಡಿಸಿತ್ತು. ಏ.27 ರಂದು ಬೆಳಗ್ಗೆ 9.50ಕ್ಕೆ ಹೊಸ ಪರ್ವದ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿತ್ತು. ಈ ಸುದ್ದಿಯ ಜಾಡು ಹಿಡಿದು ಹೊರಟ ಪಬ್ಲಿಕ್ ಟಿವಿ ಡಿಜಿಟಲ್ ತಂಡಕ್ಕೆ ಹಲವು ಮಾಹಿತಿಗಳೂ ದೊರೆತವು. ಹಾಗಾಗಿ ನೆನ್ನೆಯೇ ಪಬ್ಲಿಕ್ ಟಿವಿಯಲ್ಲಿ ಯುವರಾಜ್ ಕುಮಾರ್ ಲಾಂಚ್ ಮಾಡುತ್ತಿರುವ ಕುರಿತು ಎರಡು ವರದಿಗಳನ್ನು ಮಾಡಲಾಗಿತ್ತು. ಅದೀಗ ನಿಜವಾಗಿದೆ.  ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಪುನೀತ್ ರಾಜ್ ಕುಮಾರ್ ಅವರ ನಿನ್ನೆಂದಲೇ ಸಿನಿಮಾದ ಮೂಲಕ ಹೊಂಬಾಳೆ ಫಿಲ್ಮ್ಸ್ ಲಾಂಚ್ ಆಗಿತ್ತು. ಈಗ ಪುನೀತ್ ಅವರ ಸಹೋದರನ ಪುತ್ರ ಯುವರಾಜ್ ಕುಮಾರ್ ಲಾಂಚ್ ಮಾಡುವ ಮೂಲಕ ಆ ಪ್ರೀತಿಯ ಕೊಡುಕೊಳ್ಳುವಿಕೆ ಅರ್ಥಪೂರ್ಣ ಮುನ್ನುಡಿ ಬರೆದಿದೆ ಹೊಂಬಾಳೆ ಫಿಲ್ಮ್ಸ್. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಲಾಂಚ್ ಮಾಡುವ ಮೂಲಕ ಹೊಸ ಪರ್ವವನ್ನು ಹೊಂಬಾಳೆ ಫಿಲ್ಮ್ಸ್ ಮಾಡಿದೆ. ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿಯನ್ನೂ ಅದು ನೀಡಿದೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಯುವರಾಜ್ ಕಾಂಬಿನೇಷನ್ ನಲ್ಲಿ ಹೊಂಬಾಳೆ ಫಿಲ್ಮ್ಸ್ ಹಲವು ಸಿನಿಮಾಗಳನ್ನು ಮಾಡಲಿದೆ ಎನ್ನುವ ಸುದ್ದಿಯಿತ್ತು. ಅದು ಈಗ ನಿಜವಾಗಿದೆ.  ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 24 ರಂದು ಡಾ.ರಾಜ್ ಹುಟ್ಟು ಹಬ್ಬದಂದೇ ಈ ಹೊಸ ಸಿನಿಮಾದ ಘೋಷಣೆ ಆಗಲಿದೆ ಎಂದು ಸುದ್ದಿಯಿತ್ತು. ಅದು ಏ.27ಕ್ಕೆ ಆಗಿದೆ.

  • ಹೊಂಬಾಳೆ ಫಿಲ್ಮ್ಸ್: ಡಾ.ರಾಜ್ ಸ್ಮಾರಕ ಮುಂದೆ ಯುವರಾಜ್ ಕುಮಾರ್ ಲಾಂಚ್?

    ಹೊಂಬಾಳೆ ಫಿಲ್ಮ್ಸ್: ಡಾ.ರಾಜ್ ಸ್ಮಾರಕ ಮುಂದೆ ಯುವರಾಜ್ ಕುಮಾರ್ ಲಾಂಚ್?

    ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’ ಎನ್ನುವ ಹೊಸ ಪೋಸ್ಟರ್ ವೊಂದನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿಕೊಳ್ಳುವ ಮೂಲಕ ಹೊಂಬಾಳೆ ಫಿಲ್ಮ್ಸ್ ಕುತೂಹಲ ಮೂಡಿಸಿದೆ.  ನಾಳೆ ಬೆಳಗ್ಗೆ 9.50ಕ್ಕೆ ಹೊಸ ಪರ್ವದ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದೆ. ಅದಕ್ಕೂ ಮುನ್ನ ಯುವರಾಜ್ ಕುಮಾರ್ ಫ್ಯಾನ್ಸ್ ಪೇಜ್ ನಲ್ಲಿ ಹಲವು ವಿಚಾರಗಳು ಹರಿದಾಡುತ್ತಿವೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಈ ಪೋಸ್ಟರ್ ಅನ್ನು ಅವರು ಪೋಸ್ಟ್ ಮಾಡುತ್ತಿದ್ದಂತೆಯೇ ನಾನಾ ರೀತಿಯ ಕಾಮೆಂಟ್ ಗಳು ಬರುತ್ತಿವೆ. ಹೊಸ ಪರ್ವ ಅಂದರೆ ಏನು? ಎನ್ನುವ ಚರ್ಚೆ ಕೂಡ ಮಾಡಲಾಗುತ್ತಿದೆ. ಈಗಿರುವ ಸಿನಿಮಾಗಳ ಮಾಹಿತಿಯನ್ನೇ ಅದು ಹಂಚಿಕೊಳ್ಳಲಿದೆಯಾ ಅಥವಾ ಕೆಜಿಎಫ್ 3 ಸಿನಿಮಾದ ಮಾಹಿತಿ ಏನಾದರೂ ಕೊಡಲಿದ್ದಾರೆ ಅನ್ನುವ ಕುತೂಹಲವನ್ನೂ ಹಲವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಹೊಸ ಪರ್ವ ಎಂಬ ಪದವನ್ನು ಬಳಸಿರುವ ಕಾರಣಕ್ಕಾಗಿ ಹೊಸ ವಿಷಯವನ್ನೇ ಅಥವಾ ಹೊಸದಾಗಿ ಯಾರನ್ನಾದರೂ ಲಾಂಚ್ ಮಾಡುತ್ತಾರಾ ಎನ್ನುವ ಕುತೂಹಲ ಕೂಡ ಶುರುವಾಗಿದೆ. ಹಲವು ತಿಂಗಳುಗಳಿಂದ ಹೊಂಬಾಳೆ ಫಿಲ್ಮ್ಸ್ ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಬಹುಶಃ ಯುವರಾಜ್ ಕುಮಾರ್ ಲಾಂಚ್ ಮಾಡುವ ಕುರಿತಾಗಿ ಸುದ್ದಿ ಸಿಗಬಹುದಾ ಎನ್ನುವ ನಿರೀಕ್ಷೆ ಮಾಧ್ಯಮ ವಲಯದ್ದು. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಯುವರಾಜ್ ಕಾಂಬಿನೇಷನ್ ನಲ್ಲಿ ಹೊಂಬಾಳೆ ಫಿಲ್ಮ್ಸ್ ಹಲವು ಸಿನಿಮಾಗಳನ್ನು ಮಾಡಲಿದೆ ಎನ್ನುವ ಸುದ್ದಿಯಿದೆ. ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 24 ರಂದು ಡಾ.ರಾಜ್ ಹುಟ್ಟು ಹಬ್ಬದಂದೇ ಈ ಹೊಸ ಸಿನಿಮಾದ ಘೋಷಣೆ ಆಗಲಿದೆ ಎಂದು ಸುದ್ದಿಯಿತ್ತು. ಅದು ಏ.27ರಂದು ನಿಜವಾಗಲಿದೆ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

    ಅದಕ್ಕೂ ಮುನ್ನ ಯುವರಾಜ್ ಕುಮಾರ್ ಫ್ಯಾನ್ಸ್ ಪೇಜ್ ನಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಯುವರಾಜ್ ಕುಮಾರ್ ಹೊಸ ಸಿನಿಮಾದ ಲಾಂಚ್ ಅನ್ನು ಡಾ.ರಾಜ್ ಕುಮಾರ್ ಸ್ಮಾರಕದ ಮುಂದೆ ಮಾಡಲಾಗುವುದು ಎಂದು ಪೋಸ್ಟ್ ಮಾಡಲಾಗುತ್ತಿದೆ. ಅಭಿಮಾನಿಗಳ ಈ ನಡೆ ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ.

  • ಹೊಂಬಾಳೆ ಫಿಲ್ಮ್ಸ್:  ಯುವರಾಜ್ ಕುಮಾರ್ ಹೊಸ ಸಿನಿಮಾ ಘೋಷಣೆ?

    ಹೊಂಬಾಳೆ ಫಿಲ್ಮ್ಸ್: ಯುವರಾಜ್ ಕುಮಾರ್ ಹೊಸ ಸಿನಿಮಾ ಘೋಷಣೆ?

    ಕೆಜಿಎಫ್ 2 ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಹೊಂಬಾಳೆ ಫಿಲ್ಮ್ಸ್ ನಾಳೆ (ಏ.27) ಹೊಸ ಘೋಷಣೆಯೊಂದನ್ನು ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ. ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’ ಎನ್ನುವ ಹೊಸ ಪೋಸ್ಟರ್ ವೊಂದನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿಕೊಂಡಿದೆ. ನಾಳೆ ಬೆಳಗ್ಗೆ 9.50ಕ್ಕೆ ಹೊಸ ಪರ್ವದ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಈ ಪೋಸ್ಟರ್ ಅನ್ನು ಅವರು ಪೋಸ್ಟ್ ಮಾಡುತ್ತಿದ್ದಂತೆಯೇ ನಾನಾ ರೀತಿಯ ಕಾಮೆಂಟ್ ಗಳು ಬರುತ್ತಿವೆ. ಹೊಸ ಪರ್ವ ಅಂದರೆ ಏನು? ಎನ್ನುವ ಚರ್ಚೆ ಕೂಡ ಮಾಡಲಾಗುತ್ತಿದೆ. ಈಗಿರುವ ಸಿನಿಮಾಗಳ ಮಾಹಿತಿಯನ್ನೇ ಅದು ಹಂಚಿಕೊಳ್ಳಲಿದೆಯಾ ಅಥವಾ ಕೆಜಿಎಫ್ 3 ಸಿನಿಮಾದ ಮಾಹಿತಿ ಏನಾದರೂ ಕೊಡಲಿದ್ದಾರೆ ಅನ್ನುವ ಕುತೂಹಲವನ್ನೂ ಹಲವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಹೊಸ ಪರ್ವ ಎಂಬ ಪದವನ್ನು ಬಳಸಿರುವ ಕಾರಣಕ್ಕಾಗಿ ಹೊಸ ವಿಷಯವನ್ನೇ ಅಥವಾ ಹೊಸದಾಗಿ ಯಾರನ್ನಾದರೂ ಲಾಂಚ್ ಮಾಡುತ್ತಾರಾ ಎನ್ನುವ ಕುತೂಹಲ ಕೂಡ ಶುರುವಾಗಿದೆ. ಹಲವು ತಿಂಗಳುಗಳಿಂದ ಹೊಂಬಾಳೆ ಫಿಲ್ಮ್ಸ್ ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಬಹುಶಃ ಯುವರಾಜ್ ಕುಮಾರ್ ಲಾಂಚ್ ಮಾಡುವ ಕುರಿತಾಗಿ ಸುದ್ದಿ ಸಿಗಬಹುದಾ ಎನ್ನುವ ನಿರೀಕ್ಷೆ ಮಾಧ್ಯಮ ವಲಯದ್ದು.  ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಯುವರಾಜ್ ಕಾಂಬಿನೇಷನ್ ನಲ್ಲಿ ಹೊಂಬಾಳೆ ಫಿಲ್ಮ್ಸ್ ಹಲವು ಸಿನಿಮಾಗಳನ್ನು ಮಾಡಲಿದೆ ಎನ್ನುವ ಸುದ್ದಿಯಿದೆ. ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 24 ರಂದು ಡಾ.ರಾಜ್ ಹುಟ್ಟು ಹಬ್ಬದಂದೇ ಈ ಹೊಸ ಸಿನಿಮಾದ ಘೋಷಣೆ ಆಗಲಿದೆ ಎಂದು ಸುದ್ದಿಯಿತ್ತು. ಅದು ಏ.27ರಂದು ನಿಜವಾಗಲಿದೆ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

    ಯುವರಾಜ್ ಗಾಗಿಯೇ ಮೂರು ಸಿನಿಮಾಗಳನ್ನು ಹೊಂಬಾಳೆ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಮಾಡಲಿದ್ದಾರೆ ಎನ್ನುವುದು ಗಾಂಧಿನಗರದ ಮೂಲಗಳ ಮಾಹಿತಿ. ಈ ಎಲ್ಲ ಊಹಾಪೋಹಗಳಿಗೆ ನಾಳೆ ತೆರೆಬೀಳಲಿದೆ.

  • ಸೋನು ಸೂದ್‌ಗೆ ವಿಲನ್ ಪಾತ್ರಗಳೇ ಬರುತ್ತಿಲ್ಲವಂತೆ

    ಸೋನು ಸೂದ್‌ಗೆ ವಿಲನ್ ಪಾತ್ರಗಳೇ ಬರುತ್ತಿಲ್ಲವಂತೆ

    ಬಾಲಿವುಡ್ ಮತ್ತು ಸೌತ್ ಚಿತ್ರಗಳಲ್ಲಿ ಸೋನು ಸೂದ್ ಖಡಕ್ ವಿಲನ್ ಆಗಿ ಗುರುತಿಸಿಕೊಂಡವರು. ಯಾವುದೇ ಪಾತ್ರ ಕೊಟ್ಟು, ಆ ಪಾತ್ರವೇ ತಾವಾಗಿ ಅಭಿನಯಿಸಿಸೋ ಮಹಾನ್ ಕಲಾವಿದ ಸೋನು ಸೂದ್. ಆದರೆ ಈಗ ಇವರ ಇಮೇಜ್ ಬದಲಾಗಿದೆ. ನಟ ಸೋನು ಸೂದ್‌ಗೆ ಯಾರು ಈಗ ವಿಲನ್ ಪಾತ್ರಗಳನ್ನು ಆಫರ್ ಮಾಡುತ್ತಿಲ್ಲ ಎಂದು ಖುದ್ದು ಸೋನು ಸೂದ್ ಹೇಳಿಕೊಂಡಿದ್ದಾರೆ.

    ವಿಲನ್ ಆಗಿ ಚಿತ್ರರಂಗದಲ್ಲಿ ಸೌಂಡ್ ಮಾಡಿದ್ದ ಸೋನು ಸೂದ್, ಕೊವೀಡ್ ಸಮಯದಲ್ಲಿ ಸಾವಿರಾರು ಜನರ ಕಷ್ಟಗಳಿಗೆ ನೆರವಾಗಿದ್ರು.ರೀಲ್ ಅಲ್ಲಾ ರಿಯಲ್ ಲೈಫ್‌ನಲ್ಲೂ ಹೀರೋ ಆಗಿ ಮಿಂಚಿದ್ರು. ಈ ಮೂಲಕ ಅದೆಷ್ಟೋ ಜನರಿಗೆ ನಟ ಸೋನು ದೇವರಾಗಿದ್ದಾರೆ. ಅಭಿಮಾನಿಗಳು ಕೂಡ ಈಗ ಸೋನು ಸೂದ್ ಅವರನ್ನ ನೋಡುವ ದೃಷ್ಟಿಕೋನ ಬದಲಾಗಿದೆ.

    ಯಾರು ನನಗೆ ವಿಲನ್ ಪಾತ್ರಗಳನ್ನು ಆಫರ್ ಮಾಡುತ್ತಿಲ್ಲ. ಕೋವಿಡ್ ಮೊದಲು ಸಾಕಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದೆ ಆದರೆ ಈಗ ನಿರ್ದೇಶಕರು ನನಗಾಗಿ ಕಥೆಯನ್ನೇ ಬದಲಾಯಿಸಿದ್ದಾರೆ. ಇದು ನನಗೆ ಸಂಪೂರ್ಣ ಹೊಸ ಇನ್ನಿಂಗ್ಸ್ ಎಂದಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ಕಹಾನಿ; ಸಿದ್ಧಾರ್ಥ್-ಕಿಯಾರಾ ದೂರಾ ದೂರ..!

    ನಟ ಸೋನು ಸೂದ್ ಸಿನಿಮಾಗಳ ಜತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಖಾಸಗಿ ವಾಹಿನಿಯ ಶೋವೊಂದಕ್ಕೆ ನಿರೂಪಕನಾಗಿ ಜವಬ್ದಾರಿ ಹೊತ್ತಿದ್ದಾರೆ. ಒಟ್ನಲ್ಲಿ ಸೋನು ಸೂದ್ ಸಿನಿಮಾ ಸಕ್ಸಸ್ ನೋಡಿ ಅಭಿಮಾನಿಗಳು ಖುಷಿಪಡ್ತಿದ್ದಾರೆ.