Tag: Bollywood Film

  • ಕೆಜಿಎಫ್ 2 ಟ್ರೈಲರ್ ಮೊದಲ ವಿಮರ್ಶೆ : ಹೇಗಿದೆ ರಾಕಿಭಾಯ್ KGF 2 ಹವಾ

    ಕೆಜಿಎಫ್ 2 ಟ್ರೈಲರ್ ಮೊದಲ ವಿಮರ್ಶೆ : ಹೇಗಿದೆ ರಾಕಿಭಾಯ್ KGF 2 ಹವಾ

    ಇಂದು ಸಂಜೆ  6.40ಕ್ಕೆ ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಇನ್ನೂ ಕೆಲವೇ ನಿಮಿಷಗಳು ಬಾಕಿ ಇರುವಾಗಲೇ ಈ ಟ್ರೈಲರ್ ವಿಮರ್ಶೆ ಹೊರ ಬಿದ್ದಿದೆ. ಅಷ್ಟಕ್ಕೂ ಈ ಟ್ರೈಲರ್ ಮೊದಲು ನೋಡಿದ್ದು ಯಾರು ಎನ್ನುವ ಕುತೂಹಕ್ಕೂ ತೆರೆ ಬಿದ್ದಿದೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಈಗಾಗಲೇ ಟ್ರೈಲರ್ ರಿಲೀಸ್ ಗಾಗಿ ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ಮತ್ತು ಕೆಜಿಎಫ್ 2 ಸಿನಿಮಾದ ಹೆಸರಿನಲ್ಲಿ ಅಲ್ಲಲ್ಲಿ ಪೂಜೆ ನಡೆದಿವೆ. ಅಲ್ಲದೇ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆ ಎಲ್.ಇ.ಡಿನಲ್ಲಿ ಟ್ರೈಲರ್ ತೋರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲ ಸಂಭ್ರಮದ ಮಧ್ಯೆಯೇ ಟ್ರೈಲರ್ ವೀಕ್ಷಿಸಿದ ಮೊದಲ ವ್ಯಕ್ತಿಯು ಚುಟುಕಾಗಿ ಮತ್ತು ಅರ್ಥಪೂರ್ಣವಾಗಿ ವಿಮರ್ಶೆ ಮಾಡಿದ್ದಾರೆ.

     

    ಇಂದು ಸಂಜೆ ಬಿಡುಗಡೆ ಆಗಲಿರುವ ಕೆಜಿಎಫ್ 2 ಸಿನಿಮಾದ ಟ್ರೈಲರ್ ಐದು ಭಾಷೆಗಳಲ್ಲಿ ಬರಲಿದೆ. ತೆಲುಗಿನಲ್ಲಿ ರಾಮ್ ಚರಣ್, ತಮಿಳಿನಲ್ಲಿ ಸೂರ್ಯ, ಮಲಯಾಳಂನಲ್ಲಿ ಪೃಥ್ವಿರಾಜ್ ಮತ್ತು ಹಿಂದಿಯಲ್ಲಿ ಫರಾನ್ ಅಖ್ತಾರ್ ಆಯಾ ಭಾಷೆಯ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ಸಚಿವ ಅಶ್ವತ್ಥ್ ನಾರಾಯಣ ರಿಲೀಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಓದಿ : ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ಅಂದಹಾಗೆ ಈ ಸಿನಿಮಾದ ಮೊದಲ ಟ್ರೈಲರ್ ನೋಡಿದ್ದು ಪತ್ರಕರ್ತ ಹಾಗೂ ಓವರ್ ಸೀಸ್ ಸೆನ್ಸಾರ್ ಬೋರ್ಡನ ಸದಸ್ಯ  ಉಮೈರ್ ಸಂಧು. ದಕ್ಷಿಣದ ಮತ್ತು ಬಾಲಿವುಡ್ ನ ಯಾವುದೇ ಸಿನಿಮಾ ಅಥವಾ ಟ್ರೈಲರ್, ಟೀಸರ್ ವಿದೇಶದಲ್ಲಿ ಬಿಡುಗಡೆ ಆಗುತ್ತಿದ್ದರೆ, ಅದನ್ನು ಮೊದಲ ವೀಕ್ಷಣೆ ಮಾಡುವುದು ಇದೇ ಉಮೈರ್ ಸಂಧು. ಇವರು ಓವರ್ ಸಿಸ್ ಸೆನ್ಸಾರ್ ಬೋರ್ಡನ ಸದಸ್ಯರಾದ ಕಾರಣಕ್ಕಾಗಿ ಮೊದಲ ನೋಡುವ ಅವಕಾಶ ಇವರಿಗೆ ಸಿಕ್ಕಿದೆ.

    ಕೆಜಿಎಫ್ 2 ಟ್ರೈಲರ್ ಈಗಷ್ಟೇ ಸೆನ್ಸಾರ್ ಆಯಿತು. ಸೆನ್ಸಾರ್ ಬೋರ್ಡ್ ನಲ್ಲಿ ಟ್ರೈಲರ್ ನೋಡಿ ಸ್ಟನ್ ಆದೆ. ಟ್ರೈಲರ್ ನೋಡಿದ ನಂತರ ಮಾತೇ ಬರುತ್ತಿಲ್ಲ. ಸ್ಫೋಟಕ ರೀತಿಯಲ್ಲಿ ಅದು ಫೀಲ್ ಕೊಡುತ್ತಿದ್ದೆ. ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ’ ಟ್ವಿಟ್ ಮಾಡಿದ್ದಾರೆ ಉಮೈರ್ ಸಂಧು.

  • ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ

    ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ

    ಸ್ಟಾರ್ ನಟ ಧನುಷ್ ಅವರ ಮಾಜಿಪತ್ನಿ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯ ಮೊನ್ನೆಷ್ಟೇ ಹೊಸ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈಗಾಗಲೂ ಮೂರು ಚಿತ್ರಗಳನ್ನು ತಮಿಳಿನಲ್ಲೇ ನಿರ್ದೇಶನ ಮಾಡಿರುವ ಅವರು, ಮುಂದಿನ ಚಿತ್ರವನ್ನು ಅದೇ ಭಾಷೆಯಲ್ಲೇ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಈಗ ಅಂದಾಜ ಸುಳ್ಳಾಗಿದೆ. ಇದೇ ಮೊದಲ ಬಾರಿಗೆ ಅವರು ಬಾಲಿವುಡ್ ನಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.

    ‘ನಾನೀಗ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದೇನೆ. ನನ್ನ ಮೊದಲ ಬಾಲಿವುಡ್ ಸಿನಿಮಾದ ಟೈಟಲ್ ಘೋಷಣೆ ಮಾಡುವುದಕ್ಕೆ ಹೆಮ್ಮೆ ಆಗುತ್ತಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಚೊಚ್ಚಲು ಹಿಂದಿ ನಿರ್ದೇಶನದ ಚಿತ್ರಕ್ಕೆ ಅವರು ‘ಓ ಸಾತಿ ಚಲ್’ ಎಂದು ಟೈಟಲ್ ಇಟ್ಟಿದ್ದಾರೆ. ಇದು ಅವರ ಬಾಲಿವುಡ್ ನ ಮೊದಲ ಸಿನಿಮಾವಾಗಿದ್ದರಿಂದ ಎಲ್ಲರ ಹಾರೈಕೆಯನ್ನೂ ಅವರು ಕೇಳಿದ್ದಾರೆ. ಇದನ್ನೂ ಓದಿ : ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಪತಿ ಧನುಷ್ ಮತ್ತು ಶ್ರುತಿ ಹಾಸನ್ ಕಾಂಬಿನೇಷನ್ ನ ‘3’ ಸಿನಿಮಾದ ಮೂಲಕ ನಿರ್ದೇಶಕಿಯಾಗಿ ತಮಿಳು ಸಿನಿಮಾ ರಂಗಕ್ಕೆ ಪ್ರವೇಶ ಪಡೆದವರು ಐಶ್ವರ್ಯ. ಆನಂತರ ಅವರು ಎರಡು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಸ್ವಲ್ಪ ವರ್ಷಗಳ ಬಿಡುಗಡೆ ತಗೆದುಕೊಂಡು ಮತ್ತೆ ನಿರ್ದೇಶನಕ್ಕೆ ಐಶ್ವರ್ಯ ಮುಂದಾಗಿದ್ದಾರೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಮೊನ್ನೆಯಷ್ಟೇ ಇವರ ನಿರ್ದೇಶನದಲ್ಲಿ ಸಿಂಗಲ್ ವಿಡಿಯೋ ಆಲ್ಬಂ ಒಂದು ಮೂಡಿ ಬಂದಿತ್ತು. ಅದು ರಿಲೀಸ್ ಆದ ವೇಳೆಯಲ್ಲಿ ಧನುಷ್ ವಿಶ್ ಮಾಡಿದ್ದರು. ‘ಸ್ನೇಹಿತೆ ನಿಮಗೆ ಒಳ್ಳೆಯದಾಗಲಿ’ ಎಂದು ಸಂದೇಶ ಹಾಕಿ ಅಚ್ಚರಿ ಮೂಡಿಸಿದ್ದರು. ಧನುಷ್ ಅವರ ವಿಶ್ ಗೂ ಐಶ್ವರ್ಯ ಪ್ರತಿಕ್ರಿಯೆ ನೀಡಿದ್ದರು.