Tag: bollywood actor kangana ranaut

  • ಪಂಜಾಬಿ ಸಂಪ್ರದಾಯದಂತೆ ನೆರವೇರಿದ ಮಲೈಕಾ ಅರೋರಾ ತಂದೆ ಅಂತ್ಯಕ್ರಿಯೆ

    ಪಂಜಾಬಿ ಸಂಪ್ರದಾಯದಂತೆ ನೆರವೇರಿದ ಮಲೈಕಾ ಅರೋರಾ ತಂದೆ ಅಂತ್ಯಕ್ರಿಯೆ

    ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ತಂದೆ ಅನಿಲ್ (Anil) ಅಂತ್ಯಕ್ರಿಯೆ ಇಂದು (ಸೆ.12) ನೆರವೇರಿದೆ. ಪಂಜಾಬಿ ಸಂಪ್ರದಾಯದಂತೆ ಅನಿಲ್ ಅಂತ್ಯಸಂಸ್ಕಾರ ಮಾಡಲಾಗಿದೆ. ಇದನ್ನೂ ಓದಿ:ನೆಪೋಟಿಸಂನಿಂದ ನಾನು ಕೂಡ ಸಮಸ್ಯೆ ಎದುರಿಸಿದ್ದೇನೆ: ರಕುಲ್ ಪ್ರೀತ್ ಸಿಂಗ್

    ಮಲೈಕಾ ಅರೋರಾ ತಂದೆ ಅನಿಲ್ ಸೆ.11ರಂದು ಬೆಳಗ್ಗೆ ಆತ್ಯಹತ್ಯೆಗೆ ಶರಣಾದರು. ಮುಂಬೈನಲ್ಲಿರುವ ಬಾಂದ್ರಾದ ತಮ್ಮ ಮನೆಯ ಟೆರೇಸ್‌ನಿಂದ ಹಾರಿ ಆತ್ಯಹತ್ಯೆ ಮಾಡಿಕೊಂಡರು. ತಮ್ಮ ಮನೆಯ 7ನೇ ಮಹಡಿಯಿಂದ ಬಿದ್ದು ಮಲೈಕಾ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಸಾವಿನ ದುಃಖದಲ್ಲಿದ್ದ ಮಲೈಕಾಗೆ ಮಾಜಿ ಪತಿ ಅರ್ಬಾಜ್ ಖಾನ್ ಸಂತಾಪ ಸೂಚಿಸಿದರು. ಬಾಲಿವುಡ್‌ನ ಹಲವು ನಟ-ನಟಿಯರು ಭೇಟಿ ನೀಡಿದ್ದು, ಕರೀನಾ ಕಪೂರ್ ಖಾನ್, ಅನನ್ಯಾ ಪಾಂಡೆ, ಸೈಫ್ ಅಲಿ ಖಾನ್ ಭೇಟಿ ನೀಡಿ ಸಂತಾಪ ಸೂಚಿಸಿದರು. ಜೊತೆಗೆ ನಟಿಯ ಎಕ್ಸ್ ಬಾಯಫ್ರೆಂಡ್ ಅರ್ಜುನ್ ಕಪೂರ್ ಕೂಡ ಭೇಟಿ ನೀಡಿದ್ದರು.

    ಇತ್ತೀಚಿಗಷ್ಟೇ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಅವರ ಮಧ್ಯೆ ಬ್ರೇಕಪ್ ಆಗಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ರೂಮರ್ಸ್ ಹಬ್ಬಿಕೊಂಡಿತ್ತು. ಬ್ರೇಕಪ್ ರೂಮರ್ ನಡುವೆಯೇ ಮಲೈಕಾ ಅರೋರಾ ತಂದೆಯ ಸಾವಿನ ಸುದ್ದಿ ತಿಳಿದು, ಮುಂಬೈ ನಿವಾಸಕ್ಕೆ ಎಕ್ಸ್ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದರು.

  • ನಟಿ ಕಂಗನಾ ರಣಾವತ್‌ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಸೆನ್ಸಾರ್‌ಗೆ ಸುಪ್ರೀಂ ನಕಾರ

    ನಟಿ ಕಂಗನಾ ರಣಾವತ್‌ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಸೆನ್ಸಾರ್‌ಗೆ ಸುಪ್ರೀಂ ನಕಾರ

    ನವದೆಹಲಿ: ವಿವಾದಿತ ಹೇಳಿಕೆಗಳ ಮೂಲಕ ಸದಾ ಸುದ್ದಿಯಾಗುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ಸೆನ್ಸಾರ್‌ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

    ಕಂಗನಾ ವಿವಾದಿತ ಹೇಳಿಕೆಗಳ ಪೋಸ್ಟ್‌ಗಳು ಹಾಗೂ ಅವರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಆಧರಿಸಿ ಕ್ರಮಕೈಗೊಳ್ಳುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಬೇಲಾ ತ್ರಿವೇದಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಇದನ್ನೂ ಓದಿ: ತಂದೆ-ತಾಯಿಯಾದ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್!

    ಸಿಖ್‌ ರೈತರನ್ನು ಖಲಿಸ್ತಾನ ಉಗ್ರರಿಗೆ ಹೋಲಿಸಿ ಕಾಮೆಂಟ್‌ ಮಾಡಿದ್ದಾರೆ. ಇಂತಹ ಅನೇಕ ವಿವಾದಿತ ಹೇಳಿಕೆಗಳನ್ನು ಅವರು ನೀಡಿದ್ದಾರೆ. ಈ ರೀತಿಯ ಹೇಳಿಕೆಗಳು ಜನಾಂಗೀಯ ತಾರತಮ್ಯ, ಗಲಭೆಗಳಿಗೆ ಕಾರಣವಾಗಬಹುದು. ಇವರ ಹೇಳಿಕೆಗಳು ಅಪರಾಧದ ಅಂಶಗಳನ್ನು ಒಳಗೊಂಡಿವೆ ಎಂದು ಅರ್ಜಿದಾರರು ದೂರಿದ್ದರು.

    ರಣಾವತ್‌ ಅವರ ಪೋಸ್ಟ್‌ಗಳನ್ನು ಓದದಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿದೆ. ಅವರ ಹೇಳಿಕೆಗಳನ್ನು ನೀವು ಹೆಚ್ಚು ಪ್ರಚಾರ ಮಾಡಿ ಅವರ ಉದ್ದೇಶಗಳಿಗೆ ಸೇವೆ ಸಲ್ಲಿಸುತ್ತಿದ್ದೀರಿ. ಆ ಮೂಲಕ ನಿಮ್ಮ ಸ್ವಂತ ಅಭಿಪ್ರಾಯಗಳಿಗೆ ಅಪಚಾರ ಮಾಡುತ್ತಿದ್ದೀರಿ ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ರಾಹುಲ್‌ಗೆ ಕ್ಯಾಪ್ಟನ್‌ ಪಟ್ಟ ಕಟ್ಟಿದ ಲಕ್ನೋ

    ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ, ಖಲಿಸ್ತಾನ ಉಗ್ರರು ಎಂದು ಕಂಗನಾ ಕಾಮೆಂಟ್‌ ಮಾಡಿದ್ದರು. ಈ ವೇಳೆ ಕೇಂದ್ರ ಸರ್ಕಾರದ ಪರವಾಗಿ ಮಾತನಾಡಿದ್ದರು. ಅಷ್ಟೆ ಅಲ್ಲದೇ ತಮ್ಮ ಅನೇಕ ಹೇಳಿಕೆಗಳ ಮೂಲಕ ವಿವಾದಕ್ಕೆ ಕಾರಣವಾಗಿದ್ದರು.

  • ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ಬೆಂಗಳೂರು: ಗಾಂಧೀಜಿ ಅಹಿಂಸಾ ಮಾರ್ಗದ ಬಗ್ಗೆ ವ್ಯಂಗ್ಯವಾಡಿದ್ದ ಬಾಲಿವುಡ್‌ ನಟಿ ಕಂಗನಾ ರಣಾವತ್‌ ವಿರುದ್ಧ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಕಿಡಿಕಾರಿದ್ದಾರೆ. ಬಟ್ಟೆ ಬಿಚ್ಚಿ ಓಡಾಡುವವರಿಗೆ ಗಾಂಧಿ ಮೌಲ್ಯದ ಬಗ್ಗೆ ಏನು ಗೊತ್ತು ಎಂದು ತಿರುಗೇಟು ನೀಡಿದರು.

    ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ರಮೇಶ್‌ ಕುಮಾರ್‌, ಹೊಟ್ಟೆಪಾಡಿಗಾಗಿ ಬಟ್ಟೆಬಿಚ್ಚಿ ತಿರುಗುವವರು ಅವರು. ಅಂಥವರ ಬಗ್ಗೆ ಇಲ್ಲಿ ಮಾತನಾಡಿದರೆ ಅವರೇ ದೊಡ್ಡವರಾಗುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಅವಳಿ ಮಕ್ಕಳಿಗೆ ಪೋಷಕರಾದ ನಟಿ ಪ್ರೀತಿ ಜಿಂಟಾ ದಂಪತಿ

    ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಾರಿದ ಮಾಜಿ ಸ್ಪೀಕರ್‌, ಈ ದೇಶಕ್ಕೆ ಸ್ವಾತಂತ್ರ್ಯ ಯಾರೂ ಗಿಫ್ಟ್ ಕೊಡ್ಲಿಲ್ಲ. ಏನು ಮಾಡಿದೀರ ಅಂತ ಕೇಳ್ತೀರಲ್ಲ, ನೀವು ಹುಟ್ಟಿದ್ರಾ ಆಗ? ಬೇರೆಯವರೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿದ್ರು, ನೀವ್ಯಾಕೆ ಇರಲಿಲ್ಲ? ಆವತ್ತಿನ ಕಾಂಗ್ರೆಸ್‌ಗೂ ಇವತ್ತಿನ ಕಾಂಗ್ರೆಸ್‌ಗೆ ಸಂಬಂಧ ಇಲ್ಲ, ಒಪ್ಕೋತೀವಿ. ಆದರೆ ಅದರಿಂದಲೇ ಬಂದವರಲ್ವಾ ನಾವು? ಕಾಂಗ್ರೆಸ್ ಏನೂ ಮಾಡಿಲ್ಲ ಅಂತೀರ, ಹೆಡ್ಗೇವಾರ್ ಅವರೇ ನೀವು ದೇಶದ ಶಾಂತಿ ಭಂಗ ಮಾಡಿದವರು. ನಿಮ್ಮ ಗುರು ಮುಸಲೋನಿ. 1925ರಲ್ಲಿ ಹೆಡ್ಗೆವಾರ್ ಆರ್‌ಎಸ್‌ಎಸ್‌ ಸ್ಥಾಪಿಸಿದ್ದರು. ಇಡೀ ದೇಶ ಸ್ವಾತಂತ್ರ್ಯಕ್ಕೆ ಹೋರಾಡ್ತಿದ್ರೆ ಇವರು ಆರ್‌ಎಸ್‌ಎಸ್‌ ಸ್ಥಾಪಿಸಿ ಮಕ್ಕಳ ಮನಸ್ಸಿನಲ್ಲಿ ವಿಷ ತುಂಬಿದರು. ಆರ್‌ಎಸ್‌ಎಸ್‌ ಘೋಷಣೆ 2023 ರೊಳಗೆ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾತು ತಪ್ಪಿದ ಸಿಎಂ – ಝೀರೋ ಟ್ರಾಫಿಕ್‍ನಲ್ಲಿ ಬೊಮ್ಮಾಯಿ ಸಂಚಾರ

    ಈಗ ದೇಶಭಕ್ತಿಯನ್ನು ನಾವು ಬಿಜೆಪಿಯಿಂದ ಕಲಿಯಬೇಕಾ? ಗಾಂಧಿ ಹಾರ್ಟ್ ಅಟ್ಯಾಕ್, ಆಕ್ಸಿಡೆಂಟ್, ಕ್ಯಾನ್ಸರ್‌ನಿಂದ ಸತ್ತಿಲ್ಲ. ಗಾಂಧಿ ದೊಡ್ಡ ರಾಮಭಕ್ತ. ಈ ದೇಶದಲ್ಲಿ ಗಾಂಧಿಗಿಂತ ದೊಡ್ಡ ರಾಮಭಕ್ತ ಇಲ್ಲ. ಅಂಥ ರಾಮಭಕ್ತನನ್ನೇ ಕೊಂದರು. ಭಕ್ತನ ಹಾಗೆ ನಟಿಸಿ ಬಗ್ಗಿ ನಮಸ್ಕರಿಸಿ ಬಚ್ಚಿಟ್ಕೊಂಡಿದ್ದ ಪಿಸ್ತೂಲಿನಿಂದ ಗೋಡ್ಸೆ ಗಾಂಧೀನ ಕೊಂದರು. ನಲವತ್ತು ಕೆ.ಜಿ. ತೂಕದ ದೇಹ ಗಾಂಧಿಯವರದ್ದು. ಅಂಥ ಗೋಡ್ಸೆಗೆ ಇವತ್ತು ದೇವಸ್ಥಾನ ಕಟ್ಟುತ್ತಾರಂತೆ. ಯಾಕೆ ಗಾಂಧಿಯನ್ನು ಕೊಂದ್ರಿ? ಅದರಿಂದ ನಿಮಗೆ ಏನ್ ಲಾಭ ಆಯ್ತು ಎಂದು ಖಾರವಾಗಿ ಪ್ರಶ್ನಿಸಿದರು.