Tag: bollywood

  • ಬಾಲಿವುಡ್ ಹಾಸ್ಯ ನಟ ಸತೀಶ್‌ ಶಾ ನಿಧನ

    ಬಾಲಿವುಡ್ ಹಾಸ್ಯ ನಟ ಸತೀಶ್‌ ಶಾ ನಿಧನ

    ನಪ್ರಿಯ ಹಾಸ್ಯ ನಟ ಸತೀಶ್‌ ಶಾ (74) ಅವರು ಶನಿವಾರ ನಿಧನರಾದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ನಟ ಸತೀಶ್‌ ಶಾ ಅವರ ನಿಧನ ಸುದ್ದಿಯನ್ನು ಚಲನಚಿತ್ರ ನಿರ್ಮಾಪಕ ಅಶೋಕ್‌ ಪಂಡಿತ್‌ ಅವರು ದೃಢಪಡಿಸಿದ್ದಾರೆ. ‘ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ. ನಮ್ಮ ಸ್ನೇಹಿತ ಮತ್ತು ನಟ ಸತೀಶ್ ಶಾ ಇಂದು ಮಧ್ಯಾಹ್ನ 2:30 ರ ಸುಮಾರಿಗೆ ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು ಎಂದು ನಾನು ಹೇಳಲು ಬಯಸುತ್ತೇನೆ. ಅವರು ಮನೆಯಲ್ಲಿದ್ದಾಗ ಆರೋಗ್ಯ ಹದಗೆಟ್ಟಿತು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಬದುಕಲು ಸಾಧ್ಯವಾಗಲಿಲ್ಲ. ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಇದು ಸಿನಿಮಾರಂಗಕ್ಕೆ ಬಹಳ ದೊಡ್ಡ ನಷ್ಟ. ನಾನು ಅವರೊಂದಿಗೆ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ್ದೇನೆ. ಪಿಯೂಷ್ ಪಾಂಡೆ ಅವರ ಅಂತ್ಯಕ್ರಿಯೆ ಮುಗಿಸಿ ಹಿಂತಿರುಗುತ್ತಿದ್ದಾಗ, ಸತೀಶ್ ಅವರ ನಿಧನದ ವಾರ್ತೆ ತಿಳಿಯಿತು’ ಎಂದು ಅಶೋಕ್‌ ಪಂಡಿತ್‌ ತಿಳಿಸಿದ್ದಾರೆ.

    ಸತೀಶ್ ಶಾ ಭಾರತೀಯ ಜನಪ್ರಿಯ ನಟ. ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿ ವಿಶೇಷವಾಗಿ ಹಾಸ್ಯ ಪಾತ್ರಗಳಲ್ಲಿ ಹೆಸರುವಾಸಿಯಾಗಿದ್ದಾರೆ. 1951 ರ ಜೂನ್ 25 ರಂದು ಬಾಂಬೆಯಲ್ಲಿ ಜನಿಸಿದರು. 1978 ರಲ್ಲಿ ಅರವಿಂದ್ ದೇಸಾಯಿ ಕಿ ಅಜೀಬ್ ದಸ್ತಾನ್ ಚಿತ್ರದ ಮೂಲಕ ಶಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು 1983 ರ ವಿಡಂಬನಾತ್ಮಕ ಜಾನೆ ಭಿ ದೋ ಯಾರೋದಲ್ಲಿ ಮುನ್ಸಿಪಲ್ ಕಮಿಷನರ್ ಡಿ’ಮೆಲ್ಲೋ ಪಾತ್ರ ನಿರ್ವಹಿಸಿ ಖ್ಯಾತಿ ಗಳಿಸಿದರು.

    ಹಮ್ ಸಾಥ್ ಸಾಥ್ ಹೈ (1999), ಕಲ್ ಹೋ ನಾ ಹೋ (2003), ಮುಜ್ಸೆ ಶಾದಿ ಕರೋಗಿ (2004), ಮತ್ತು ಓಂ ಶಾಂತಿ ಓಂ (2007) ಸೇರಿದಂತೆ 250 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1984 ರ ಸಿಟ್ಕಾಂ ಯೇ ಜೊ ಹೈ ಜಿಂದಗಿ ಮೂಲಕ ದೂರದರ್ಶನದಲ್ಲಿ ಅವರು ವ್ಯಾಪಕವಾಗಿ ಹೆಸರುವಾಸಿಯಾಗಿದ್ದರು.

    ನಂತರ ಅವರು ಫಿಲ್ಮಿ ಚಕ್ಕರ್ (1995) ಮತ್ತು ಸಾರಾಭಾಯ್ ವರ್ಸಸ್ ಸಾರಾಭಾಯ್ (2004) ಸೇರಿದಂತೆ ಹಲವಾರು ಜನಪ್ರಿಯ ಸರಣಿಗಳಲ್ಲಿ ಕಾಣಿಸಿಕೊಂಡರು. ಇಂದ್ರವಧನ್ ಸಾರಾಭಾಯ್ ಪಾತ್ರವು ಇನ್ನೂ ಜನಪ್ರಿಯತೆ ತಂದುಕೊಟ್ಟಿತು.

  • ದೀಪಾವಳಿಗೆ ಮುದ್ದು ಮಗಳ ಫೇಸ್‌ ರಿವೀಲ್‌ ಮಾಡಿದ ದೀಪಿಕಾ ಪಡುಕೋಣೆ

    ದೀಪಾವಳಿಗೆ ಮುದ್ದು ಮಗಳ ಫೇಸ್‌ ರಿವೀಲ್‌ ಮಾಡಿದ ದೀಪಿಕಾ ಪಡುಕೋಣೆ

    ಬಿಟೌನ್ ಸ್ಟಾರ್‌ಜೋಡಿ ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣ್‌ವೀರ್ ಸಿಂಗ್ (Ranveer Singh) ದಂಪತಿಯ ಮುದ್ದು ಮಗಳ ಹೆಸರು ದುವಾ. ಮಗು ಜನಿಸಿ ಒಂದು ವರ್ಷ ಕಳೆದಿದೆ. ಆದರೆ ಇದುವರೆಗೂ ಮಗುವಿನ ಮುಖವನ್ನ ದಂಪತಿ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಇದೀಗ ಪ್ರಥಮ ಬಾರಿ ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿ ಪೋಸ್ಟ್ ಹಾಕುವ ಮೂಲಕ ಮಗಳ ಫೋಟೋವನ್ನ ರಿವೀಲ್ ಮಾಡಿದ್ದಾರೆ.

    ಇದೀಗ ದೀಪಿಕಾ ತಮ್ಮ ಮೆಟರ್ನಿಟಿ ಸಮಯವನ್ನ ಮುಗಿಸಿ ಅಭಿನಯಕ್ಕೆ ಮರಳಿದ್ದಾರೆ. ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ದೀಪಿಕಾ ಅಮ್ಮನಾದ ಬಳಿಕ ಕೆಲಸದ ಸಮಯ ಕಡಿತ ಮಾಡುವ ವಿಚಾರಕ್ಕೆ ಮನವಿ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ದೀಪಾವಳಿ ಹಬ್ಬದ ದಿನ ಮನೆಯಲ್ಲಿ ಪೂಜೆ ಮಾಡುವ ಫೋಟೋದೊಂದಿಗೆ ಮುದ್ದು ಮಗಳ ಮುಖವನ್ನ ಜಗತ್ತಿಗೆ ಪರಿಚಯಿಸಿದ್ದಾರೆ ದೀಪಿಕಾ ಪಡುಕೋಣೆ.

    ರಣ್‌ವೀರ್ ಸಿಂಗ್, ದೀಪಿಕಾ ಹಾಗೂ ದುವಾ ಕ್ಯಾಂಡಿಡ್ ಫೋಟೋದಲ್ಲಿ ಮಿಂಚಿದ್ದಾರೆ. ಅಮ್ಮ ದೀಪಿಕಾ ಹಾಗೂ ಮಗಳು ದುವಾ ಟ್ವಿನ್ನಿಂಗ್ ಕೆಂಪು ಬಣ್ಣದ ಸಲ್ವಾರ್ ಧರಿಸಿದ್ದಾರೆ. ದೀಪಿಕಾ ಮಗಳಿಗೆ ಖ್ಯಾತ ತಾರೆಯರಾದ ಸೋನಂ ಕಪೂರ್, ಬಿಪಾಶಾ ಬಸು, ಪೂಜಾ ಹೆಗಡೆ, ಶಿಲ್ಪಾ ಶೆಟ್ಟಿ, ದಿಯಾ ಮಿರ್ಜಾ, ನೇಹಾ ಧೂಪಿಯಾ ಸೇರಿದಂತೆ ಹಲವರು ಕಾಮೆಂಟ್ ಮಾಡಿ ಶುಭ ಹಾರೈಸಿದ್ದಾರೆ. ಕೊನೆಗೂ ದೀಪಿಕಾ ಮಗುವಿನ ಮುಖ ನೋಡಿದ್ದಕ್ಕೆ ಖುಷಿಯಾದ ಅಭಿಮಾನಿಗಳಿಂದ 7 ಮಿಲಿಯನ್ ಲೈಕ್ಸ್ ಬಂದಿದೆ.

  • ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸೋನಂ ಕಪೂರ್

    ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸೋನಂ ಕಪೂರ್

    ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ, ನಟಿ ಸೋನಂ ಕಪೂರ್ (Sonam Kapoor) ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

    2022ರಲ್ಲಿ ಗಂಡು ಮುಗುವಿಗೆ ಜನ್ಮ ನೀಡಿದ್ದ ಸೋನಂ ಈಗ ಮತ್ತೆ ಗರ್ಭಿಣಿಯಾಗಿದ್ದಾರೆ. ಮೊದಲ ಮಗು ವಾಯು ಜನಿಸಿದ ಬಳಿಕ ಸಿನಿಮಾದಲ್ಲಿ ನಟಿಸುವುದನ್ನ ಕಡಿಮೆ ಮಾಡಿದ್ದ ಸೋನಂ ಮಾಡೆಲಿಂಗ್ ಕ್ಷೇತ್ರದಲ್ಲೇ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ. ಇದನ್ನೂ ಓದಿ:  ವಿಜಯ್ ದೇವರಕೊಂಡ ಕಾರು ಅಪಘಾತ – ಅಪಾಯದಿಂದ ಪಾರು

    ಗರ್ಭಿಣಿಯಾದ ಬಳಿಕ ಸೋನಂ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಫೋಟೋಗಳನ್ನ ಪೋಸ್ಟ್ ಮಾಡುವ ವೇಳೆ ಹೊಟ್ಟೆಯನ್ನ ಹೈಡ್ ಮಾಡುತ್ತಿದ್ದಾರೆ. ಹೀಗಾಗಿ ಸೋನಂ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿ ಹಬ್ಬಿದೆ.

    ಅಂದಹಾಗೆ ಸೋನಂ ಕಪೂರ್ 2018 ರಲ್ಲಿ ಉದ್ಯಮಿ ಆನಂದ್ ಅಹೂಜಾರನ್ನ ಮದುವೆಯಾಗಿದ್ದರು. ಶೀಘ್ರವೇ ಗರ್ಭಿಣಿಯಾಗುರುವುದನ್ನು ಸೋನಂ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.

  • ರಸ್ತೆ ಬದಿ `ಬಡವರ ಬರ್ಗರ್’ ತಿಂದು ಓವರ್‌ ಆ್ಯಕ್ಟಿಂಗ್ ಮಾಡಿದ್ರಾ ಶಿಲ್ಪಾ ಶೆಟ್ಟಿ?

    ರಸ್ತೆ ಬದಿ `ಬಡವರ ಬರ್ಗರ್’ ತಿಂದು ಓವರ್‌ ಆ್ಯಕ್ಟಿಂಗ್ ಮಾಡಿದ್ರಾ ಶಿಲ್ಪಾ ಶೆಟ್ಟಿ?

    ದಾ ಗ್ಲ್ಯಾಮರ್ ಫೋಟೋಶೂಟ್ ಮಾಡಿಸಿ ಆಕರ್ಷಕ ಫೋಟೋ ಪೋಸ್ಟ್ ಮಾಡುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ  (Shilpa Shetty) ಇದೀಗ ಇನ್ಸ್ಟಾಗ್ರಾಂನಲ್ಲಿ ವಡಾಪಾವ್ (Vada Pav) ತಿನ್ನುವ ಫೋಟೋ ಹಾಕಿ ಡಿಫರೆಂಟ್ ಪೋಸ್ ಕೊಟ್ಟಿದ್ದಾರೆ.

    ಮುಂಬೈನ ಸ್ಪೆಷಲ್ ವಡಾಪಾವ್ ಜೊತೆಗೆ ಹುರಿದ ಹಸಿಮೆಣಸಿಕಾಯಿ ಜೊತೆ ತಿನ್ನುವ ಮಜವೇ ಬೇರೆ. ಬಾಯಲ್ಲಿ ನಿರೂರುವ ಈ ಖಾದ್ಯವನ್ನ `ಬಡವರ ಬರ್ಗರ್’ ಎಂದೇ ಕರೆಯಲಾಗುತ್ತೆ. ಫಿಟ್ನೆಸ್ ಮಂತ್ರ ಪಾಲಿಸೋ ಶಿಲ್ಪಾ ಶೆಟ್ಟೆ ಅಪ್ಪಿ ತಪ್ಪಿಯೂ ವಡಾಪಾವ್ ತಿನ್ನೋದನ್ನ ಜನರು ಊಹಿಸಲ್ಲ. ಆದರೆ ಇದೀಗ ಶಿಲ್ಪಾಶೆಟ್ಟಿ ಮುಂಬೈನ ಗಲ್ಲಿಯಲ್ಲಿ ಕಾರು ನಿಲ್ಲಿಸಿ ಎರಡು ಪ್ಲೇಟ್ ವಡಾಪಾವ್ ತಿನ್ನುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಂತಾರದ ಸಕ್ಸಸ್ ಜರ್ನಿ.. ದುನಿಯಾ ವಿಜಯ್ ವಿಭಿನ್ನವಾಗಿ ಅಭಿನಂದನೆ

    ಮೆಣಸಿಕಾಯಿ ಕಡಿಯುತ್ತಾ ವಡಾಪಾವ್ ತಿನ್ನುವ ರುಚಿ ಸವಿದವರಿಗೇ ಗೊತ್ತು. ಹೀಗೆ ಫೀಲ್ ಮಾಡ್ತಿರುವ ಫೋಟೋವನ್ನೇ ಅವರು ಶೇರ್ ಮಾಡಿದ್ದಾರೆ. “ಫಾರೆವರ್ ಬಟಾಟವಡಾ ಗರ್ಲ್” ಎಂದು ಹೇಳಿಕೊಂಡಿದ್ದಾರೆ. 50 ವರ್ಷ ದಾಟಿದ್ರೂ ಶಿಲ್ಪಾ ಸಣ್ಣಗಿನ ದೇಹಸೌಂದರ್ಯ ಕಾಪಾಡಿಕೊಂಡ ಎವರ್‍ಗ್ರೀನ್ ಚೆಲುವೆ ಜೊತೆಗೆ ಫಿಟ್ನೆಸ್ ಫ್ರೀಕ್.

    ಹೀಗಿರಿವಾಗ ನೀವು `ಯಾವಾಗಲೂ ಓವರ್ ಆ್ಯಕ್ಟಿಂಗ್’, ನೆಟ್ಟಿಗರನ್ನ ಯಾಮಾರಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ ನೆಟ್ಟಿಗರು. ಬರೀ ಪೋಸ್ ಕೊಟ್ರಾ ಅಥವಾ ನಿಜವಾಗಲೂ ತಿಂದ್ರಾ ಎಂದು ಪ್ರಶ್ನೆ ಕೇಳುತ್ತಿದ್ದಾರೆ ಫಾಲೋವರ್ಸ್. ಒಟ್ನಲ್ಲಿ ಶಿಲ್ಪಾ ಶೆಟ್ಟಿ ವಡಾಪಾವ್ ತಿಂದ್ರೋ ಬಿಟ್ರೋ ಆದರೆ ಹಾಕಿರುವ ಪೋಸ್ಟ್ ನೋಡುತ್ತಿದ್ದರೆ ವಡಾಪಾವ್ ತಿನ್ನುವ ಆಸೆಯಾಗೋದು ಗ್ಯಾರಂಟಿ. ಇದನ್ನೂ ಓದಿ: 700 ವರ್ಷಗಳ ಹಿಂದಿನ ಕಥೆಗೆ ಶ್ರೀಮುರಳಿ ನಾಯಕ: ಹೊಸ ಚಿತ್ರಕ್ಕೆ ಮುಹೂರ್ತ

  • ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್‌ ಆರಂಭಿಸಿದ ಕಾಂತಾರ

    ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್‌ ಆರಂಭಿಸಿದ ಕಾಂತಾರ

    ಹಿಂದಿಯಲ್ಲೂ ಕಾಂತರ: ಚಾಪ್ಟರ್‌ 1 (Kantara Chapter 1) ಈಗ ಕಮಾಲ್‌ ಮಾಡಲು ಆರಂಭಿಸಿದೆ. ಬಿಡುಗಡೆಯಾದ ಮೂರು ದಿನದಲ್ಲಿ 52 ಕೋಟಿ ರೂ. ಗಳಿಸಿದೆ.

    ಗುರುವಾರ 18.50 ಕೋಟಿ, ಶುಕ್ರವಾರ 13.50 ಕೋಟಿ ರೂ., ಶನಿವಾರ 20 ಕೋಟಿ ರೂ. ಗಳಿಸಿದೆ. ಮೊದಲ ವಾರದಲ್ಲಿ 70 ಕೋಟಿ ರೂ. ಗಳಿಸುವ ಸಾಧ್ಯತೆಯಿದೆ.

    ದಸರಾ ರಜೆ ಇದ್ದ ಕಾರಣ ಶುಕ್ರವಾರ ಕಲೆಕ್ಷನ್‌ ಕಡಿಮೆಯಾಗಿತ್ತು. ಆದರೆ ಶನಿವಾರ ಭರ್ಜರಿ ಕಲೆಕ್ಷನ್‌ ಮಾಡಿತ್ತು ಭಾನುವಾರವೂ ಉತ್ತಮ ಕಲೆಕ್ಷನ್‌ ಮಾಡುವ ಸಾಧ್ಯತೆಯಿದೆ.  ಇದನ್ನೂ ಓದಿ:  ರಾಷ್ಟ್ರಪತಿ ಭವನದಲ್ಲಿ ‘ಕಾಂತಾರ’ ಪ್ರದರ್ಶನ – ರಿಷಬ್‌ ಚಿತ್ರತಂಡದ ಜೊತೆ ದ್ರೌಪದಿ ಮುರ್ಮು ಸಿನಿಮಾ ವೀಕ್ಷಣೆ

     

    2022ರಲ್ಲಿ ಬಿಡುಗಡೆಯಾದ ಕಾಂತಾರ ಆರಂಭದಲ್ಲಿ ಹಿಂದಿಯಲ್ಲಿ (Hindi) ಕಡಿಮೆ ಸಂಖ್ಯೆಯಲ್ಲಿ ಜನ ವೀಕ್ಷಣೆ ಮಾಡಿದ್ದರು. ನಂತರ ನಿಧಾನವಾಗಿ ಪ್ರಚಾರ ಪಡೆಯುತ್ತಿದ್ದಂತೆ ಅಂತಿಮವಾಗಿ ಅಂದಾಜು 96 ಕೋಟಿ ರೂ. ಗಳಿಸಿತ್ತು. ಎಲ್ಲಾ ಭಾಷೆಗಿಂತಲೂ ಅತಿ ಹೆಚ್ಚು ಕಲೆಕ್ಷನ್‌ ಹಿಂದಿಯಲ್ಲಿ ಆಗಿತ್ತು. ಟ್ರೆಂಡ್‌ ಗಮನಿಸಿದರೆ ಈ ಬಾರಿಯೂ ಇದೇ ಪುನಾರವರ್ತನೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ:  ಭಾನುವಾರವೂ ಹೌಸ್‌ಫುಲ್‌ – ಬೆಂಗಳೂರಿನಲ್ಲಿ ದಾಖಲೆ ಬರೆದ ಕಾಂತಾರ

    ಮೊದಲ ಕಾಂತಾರ  ಸಿನಿಮಾ ಸುಮಾರು 16 ಕೋಟಿ ರೂ.ನಲ್ಲಿ ನಿರ್ಮಾಣಗೊಂಡರೆ ಅಂದಾಜು 400 ಕೋಟಿ ರೂ. ಗಳಿಸಿತ್ತು. ಕಾಂತರ: ಚಾಪ್ಟರ್‌ 1 ಸಿನಿಮಾವನ್ನು ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ‌ಕಾಂತಾರ ಭರ್ಜರಿ ಪ್ರದರ್ಶನ – ಅತಿ ಹೆಚ್ಚು ಗಳಿಕೆ ಮಾಡಿದ 2ನೇ ಕನ್ನಡ ಸಿನಿಮಾ ದಾಖಲೆ

  • ರಾಮಾಯಣ ಆಧರಿತ ʻರಾಮಲೀಲಾʼದಲ್ಲಿ ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಆಯ್ಕೆ

    ರಾಮಾಯಣ ಆಧರಿತ ʻರಾಮಲೀಲಾʼದಲ್ಲಿ ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಆಯ್ಕೆ

    – ವಿಹೆಚ್‌ಪಿ, ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ

    ಮಾದಕ ನಟಿ ಪೂನಂ ಪಾಂಡೆಯ (Poonam Pandey) ಟಾಪ್‌ಲೆಸ್‌ ಅವತಾರಗಳು ಹೊಸದೇನಲ್ಲ. ಆಗಾಗ್ಗೆ ತನ್ನ ಮೈಮಾಟವನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶನಕ್ಕೀಡುವ ಮೂಲಕ ಗಮನ ಸೆಳೆಯುತ್ತಿರುವ ನಟಿ ಈಗ ಹೊಸ ವಿಷಯಕ್ಕೆ ಸುದ್ದಿಯಾಗಿದ್ದಾರೆ.

    2013ರಲ್ಲಿ ʻನಶಾʼ ಸಿನಿಮಾ ಮೂಲಕ ಬಾಲಿವುಡ್‌ಗೆ (Bollywood) ಎಂಟ್ರಿಯಾದ ಪೂನಂ ಪಾಂಡೆ 2018ರ ಬಳಿಕ ಸಿನಿಮಾದಲ್ಲಿ ಅವಕಾಶ ಸಿಗದೇ ಹಿರಿತೆರೆಗಳಿಂದ ದೂರ ಉಳಿದಿದ್ದಾರೆ. ಆಗಾಗ್ಗೆ ವೆಬ್‌ಸಿರೀಸ್‌ ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ತಿದ್ದರೂ, ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಸದಾ ಆಕ್ಟೀವ್‌ ಆಗಿರ್ತಾರೆ. ʻಲವ-ಕುಶʼ ರಾಮಲೀಲಾʼ (Luv Kush Ramlila)‌ ನಾಟಕದಲ್ಲಿ ಮಂಡೋದರಿ ಪಾತ್ರಕ್ಕೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಇದು ಪೂನಂ ಪಾಂಡೆ ಅಭಿಮಾನಿಗಳಿಗೆ ಖುಷಿಯ ವಿಚಾರವೇ ಆದ್ರೂ, ಹಿಂದೂಪರ ಸಂಘಟನೆಗಳು ಹಾಗೂ ವಿಶ್ವಹಿಂದೂ ಪರಿಷತ್‌ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

    ಈ ವರ್ಷ ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆಯಲಿರುವ ರಾಮಾಯಣ ಆಧರಿತ ನಾಟಕ ʻರಾಮಲೀಲಾʼದಲ್ಲಿ ರಾವಣನ ಪತ್ನಿಯಾದ ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಅವರನ್ನ ಆಯ್ಕೆ ಮಾಡಲಾಗಿದೆ. ಪೂನಂ ಜೊತೆಗೆ ರಾವಣನ ಪಾತ್ರದಲ್ಲಿ ಬಣ್ಣ ಹಚ್ಚಲು ನಟ ಆರ್ಯ ಬಬ್ಬರ್ (Arya Babbar) ಸಜ್ಜಾಗಿದ್ದಾರೆ. ಇದನ್ನೂ ಓದಿ: ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು

    ರಾವಣನ ಪತ್ನಿ ಮಂಡೋದರಿ ಪಾತ್ರ ನಿರ್ವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಪೂನಂ ಪಾಂಡೆ ಸಂತಸ ವ್ಯಕ್ತಪಡಿಸಿದ್ದಾರೆ, ರಾಮಲೀಲಾ ಸಮಿತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಐತಿಹಾಸಿಕ ಹಾಗೂ ಭವ್ಯವಾದ ಕಾರ್ಯಕ್ರಮದ ಭಾಗವಾಗೋದಕ್ಕೆ ಅವಕಾಶ ಸಿಕ್ಕಿರುವುದು ನನಗೆ ಸಂತೋಷ ಮತ್ತು ಹೆಮ್ಮೆ ಇದೆ. ರಾಮಲೀಲಾ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಆಚರಣೆಯಾಗಿದೆ. ಈ ಕಾರ್ಯಕ್ರಮದ ಭಾಗವಾಗುತ್ತಿರುವುದು ನಿಜಕ್ಕೂ ನನ್ನ ಅದೃಷ್ಟ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ರಾವಣ ಪಾತ್ರಧಾರಿ ನಟ ಆರ್ಯ ಬಬ್ಬರ್ ಕೂಡ ಧನ್ಯವಾದ ಅರ್ಪಿಸಿದ್ದಾರೆ.

    ಮಂಡೋದರಿ ಯಾರು ..?
    ಮಂಡೋದರಿಯು ಅಸುರ ರಾಜನಾದ ಮಾಯಾಸುರ ಮತ್ತು ಸುಂದರಿ ಅಪ್ಸರೆಯ ಮಗಳು. ಮಂಡೋದರಿ ಕೂಡ ತನ್ನ ತಾಯಿಯಂತೆ ಅತ್ಯಂತ ಸುಂದರಿಯೂ, ಗುಣವಂತಳೂ ಆಗಿದ್ದಳು. ಮಂಡೋದರಿಯ ಸೌಂದರ್ಯಕ್ಕೆ ಮರುಳಾದ ರಾವಣ ಆಕೆಯನ್ನು ವಿವಾಹವಾಗುತ್ತಾನೆ. ರಾವಣ ಮತ್ತು ಮಂಡೋದರಿಗೆ ಜನಿಸಿದ ಮಕ್ಕಳೇ ಮೇಘನಾಥ ಮತ್ತು ಅಕ್ಷಯ ಕುಮಾರ. ಈಕೆಯನ್ನು ರಾಮಾಯಣದಲ್ಲಿ ಮಹಾನ್‌ ಪತಿವ್ರತೆ ಎಂದು ಉಲ್ಲೇಖಿಸಲಾಗಿದೆ. ರಾವಣ ಎಷ್ಟೇ ಹೀನ ಕಾರ್ಯಗಳನ್ನು ಮಾಡಿದರೂ ಆಕೆ ಅವನನ್ನು ಸರಿ ದಾರಿಗೆ ತರಲು ಪ್ರಯತ್ನಿಸಿದವಳೇ ಹೊರತು ಆತನಿಂದ ದೂರಾದವಳಲ್ಲ. ಇದನ್ನೂ ಓದಿ: ನಮ್ಮ ಮೇಲೆ ಅತ್ಯಾಚಾರ ಮಾಡೋದನ್ನ ಈಗಲಾದ್ರೂ ನಿಲ್ಲಿಸಿ; ಟ್ರೈನಿ ವೈದ್ಯೆ ಕೇಸ್‌ ಬಗ್ಗೆ ಪೂನಂ ಪಾಂಡೆ ಪ್ರತಿಕ್ರಿಯೆ

    ವಿರೋಧ ಏಕೆ?
    ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಅವರ ಆಯ್ಕೆಯನ್ನು ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಕೆಲ ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಸದಾ ತುಂಡುಡುಗೆಯಲ್ಲಿ ಸುತ್ತುವ ನಟಿಯನ್ನು ಪೌರಾಣಿಕ ಪಾತ್ರಕ್ಕೆ ಆಯ್ಕೆ ಮಾಡಿರುವುದು ಸರಿಯಲ್ಲ ಕೂಡಲೇ ಆಯ್ಕೆಯನ್ನು ಕೈಬಿಡುವಂತೆ ಒತ್ತಾಯಿಸಿವೆ. ಇದನ್ನೂ ಓದಿ: ಬೆತ್ತಲೆ ಫೋಟೋ ಹರಿಬಿಟ್ಟು, ನಾನು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದ ಪೂನಂ ಪಾಂಡೆ

    2018ರ ಬಳಿಕ ಸಿನಿಮಾ ಅವಕಾಶ ಸಿಗದೇ ವಂಚಿತವಾಗಿರುವ ಪೂನಂ ಪಾಂಡೆ ಕೊನೆಯದ್ದಾಗಿ ʻಹನಿಮೂನ್‌ ಸೂಟ್‌ ರೂಮ್‌ ನಂ.911ʼ ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ʻಲಾಕಪ್‌ʼ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.

  • `ಕ್ರಿಶ್-4′ ಹೃತಿಕ್‌ಗೆ ನಾಯಕಿಯಾಗ್ತಾರಾ ಶ್ರೀವಲ್ಲಿ?

    `ಕ್ರಿಶ್-4′ ಹೃತಿಕ್‌ಗೆ ನಾಯಕಿಯಾಗ್ತಾರಾ ಶ್ರೀವಲ್ಲಿ?

    ಭಾರತೀಯ ಚಿತ್ರರಂಗದಲ್ಲಿ ಸದ್ಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಮತ್ತೆ ಬಾಲಿವುಡ್‌ನಿಂದ ಅವಕಾಶವೊಂದು ಅರಸಿ ಬಂದಿದೆ. ಸಲ್ಮಾನ್‌ಖಾನ್ ಜೊತೆ ನಟಿಸಿದ ಸಿಕಂದರ್ ಸಿನಿಮಾ ಮಕಾಡೆ ಮಲಗಿದ್ರೂ ಅವರಿಗೆ ಬಾಲಿವುಡ್‌ನಲ್ಲಿ ಅವಕಾಶಗಳು ಕಮ್ಮಿಯಾಗಿಲ್ಲ. ಅನಿಮಲ್ ಹಾಗೂ ಛಾವಾ ಸಿನಿಮಾದ ಬಿಗ್ ಸಕ್ಸಸ್ ರಶ್ಮಿಕಾಗೆ ಮತ್ತೊಂದು ಅವಕಾಶ ಕಲ್ಪಿಸಿದೆ.

    ರಶ್ಮಿಕಾ ಮಂದಣ್ಣ ನಟಿಸಿದ ದಕ್ಷಿಣ ಭಾರತದ ಪುಷ್ಪ ಹಾಗೂ ಪುಷ್ಪ-2 ಸಿನಿಮಾದ ಬ್ಲಾಕ್‌ಬಸ್ಟರ್ ಹಿಟ್ ಇತಿಹಾಸ ಸೇರಿದೆ. ಸದ್ಯ ಬಾಲಿವುಡ್‌ನಲ್ಲಿ ಕ್ರಿಶ್-4 ಸಿನಿಮಾದ ಸ್ಟಾರ್‌ಕ್ಯಾಸ್ಟ್ ಆಯ್ಕೆ ನಡೆಯುತ್ತಿದೆ. ಸಿನಿಮಾದ ನಾಯಕರಾಗಿ ಹೃತಿಕ್‌ ರೋಷನ್ (Hrithik Roshan) ಇದ್ರೆ ನಾಯಕಿಯಾಗಿ ರಶ್ಮಿಕಾಗೆ ಮಣೆಹಾಕುತ್ತಿದೆಯಂತೆ ಚಿತ್ರತಂಡ. ಅಂದಹಾಗೆ ಕ್ರಿಶ್-4 ಸಿನಿಮಾವನ್ನ ಗ್ರೀಕ್‌ಗಾಡ್ ಹೃತಿಕ್ ರೋಷನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

    ಕ್ರಿಶ್ ಸರಣಿಗಳನ್ನ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶನ ಮಾಡಿದ್ದರು. ಈ ಬಾರಿ ನಿರ್ದೇಶನದ ಜವಾಬ್ದಾರಿ ಕೂಡಾ ಹೃತಿಕ್ ರೋಷನ್ ಮೇಲೆ ಬಿದ್ದಿದೆ. ಪುಷ್ಪ ಸಿನಿಮಾ ಮೂಲಕ ಶ್ರೀವಲ್ಲಿಯಾಗಿ ಖ್ಯಾತಿ ಪಡೆದಿರೋ ರಶ್ಮಿಕಾ ಬಾಲಿವುಡ್‌ನಲ್ಲೂ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ರಿಶ್, ಕ್ರಿಶ್-3 ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ದರು. ಸದ್ಯ ಪ್ರಿಯಾಂಕ ಚೋಪ್ರಾ ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ರಶ್ಮಿಕಾ ಅವರನ್ನ ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ ಎನ್ನಲಾಗ್ತಿದೆ.

  • ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ

    ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ

    ಬಾಲಿವುಡ್ (Bollywood) ನಟಿ ದಿಶಾ ಪಟಾನಿ (Disha Patani) ಅವರ ಮನೆ ಬಳಿ ಇತ್ತೀಚೆಗೆ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ದುಷ್ಕರ್ಮಿಗಳು ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    disha patani 3

    ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರೋಹ್ಟಕ್‌ ಮೂಲದ ರವೀಂದ್ರ ಅಲಿಯಾಸ್ ಕಲ್ಲು ಮತ್ತು ಹರಿಯಾಣದ ಸೋನಿಪತ್ ನಿವಾಸಿ ಅರುಣ್ ಹತ್ಯೆಯಾಗಿದ್ದಾರೆ. ಇಬ್ಬರೂ ಗೋಲ್ಡಿ ಬ್ರಾರ್ ಗ್ಯಾಂಗ್‌ನ ಸಕ್ರಿಯ ಸದಸ್ಯರಾಗಿದ್ದರು. ಜೊತೆಗೆ ಬಹು ಕ್ರಿಮಿನಲ್‌ ಪ್ರಕರಣಗಳಲ್ಲಿ ಮೋಸ್ಟ್‌ ವಾಂಟೆಡ್‌ಗಳಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ʻಇದಿನ್ನೂ ಟ್ರೈಲರ್‌ʼ ಗೋಲ್ಡಿ ಬ್ರಾರ್ ಗ್ಯಾಂಗ್ ವಾರ್ನಿಂಗ್‌

    disha patani 4

    ಇಂದು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF)ಯ ನೋಯ್ಡಾ ಘಟಕ ಹಾಗೂ ದೆಹಲಿ ಪೊಲೀಸರ ಅಪರಾಧ ಗುಪ್ತಚರ (CI) ಘಟಕ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಮುಂಭಾಗದಲ್ಲಿದ್ದ ಪೊಲೀಸ್‌ ಘಟಕದ ಮೇಲೆ ಶಂಕಿತರು ಗುಂಡಿನ ದಾಳಿಗೆ ಮುಂದಾದ್ರು, ಬಳಿಕ ಪೊಲೀಸರು ಪ್ರತಿದಾಳಿ ನಡೆಸಿದರು. ಈ ವೇಳೆ ಗಾಯಗೊಂಡಿದ್ದ‌ ಶಂಕಿತರು ಬಳಿಕ ಸಾವನ್ನಪ್ಪಿದರು. ಘಟನಾ ಸ್ಥಳದಿಂದ, ಅಧಿಕಾರಿಗಳು ಗ್ಲಾಕ್ ಪಿಸ್ತೂಲ್, ಜಿಗಾನಾ ಪಿಸ್ತೂಲ್ ಮತ್ತು ಬಹು ಲೈವ್ ಕಾರ್ಟ್ರಿಡ್ಜ್‌ಗಳು ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಕಿನಿಯಲ್ಲಿ ಶಿವಲಿಂಗ ನಟಿ ಚಿಲ್‌ – ಪಡ್ಡೆ ಹೈಕ್ಳ ಮೈಬಿಸಿ ಹೆಚ್ಚಿಸಿದ ವೇದಿಕಾ

    ದಿಶಾ ಪಟಾನಿ ಮನೆ ಬಳಿ ಏನಾಗಿತ್ತು?
    ಉತ್ತರ ಪ್ರದೇಶದ ಬರೇಲಿಯಲ್ಲಿರುವ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆ ಹೊರಗೆ ಇದೇ ಸೆ.12ರಂದು ಬೆಳಗ್ಗಿನ ಜಾವ 3:30ರ ಸುಮಾರಿಗೆ ಗುಂಡಿನ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರರಿಂದ ನಾಲ್ಕು ಸುತ್ತು ಗುಂಡು (Fire) ಹಾರಿಸಿ ಎಸ್ಕೇಪ್‌ ಆಗಿದ್ದರು. ಗುಂಡಿನ ದಾಳಿ ನಡೆದ ಮನೆಯಲ್ಲಿ ದಿಶಾ ಪಟಾನಿ ಕುಟುಂಬ ವಾಸವಿತ್ತು. ಆ ಸಮಯದಲ್ಲಿ ದಿಶಾ ಅವರ ತಂದೆ ನಿವೃತ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಸಿಂಗ್ ಪಟಾನಿ, ತಾಯಿ ಅಕ್ಕ ಖುಷ್ಬು ಪಟಾನಿ ಇದ್ದರು. ಬಳಿಕ ಗೋಲ್ಡಿ ಬ್ರಾರ್ ಗ್ಯಾಂಗ್ ಗುಂಡಿನ ದಾಳಿ ಹೊಣೆ ಹೊತ್ತುಕೊಂಡಿತ್ತು. ಇದನ್ನೂ ಓದಿ: ʻಕೊತ್ತಲವಾಡಿʼ ಕಿರಿಕ್‌ – ಸಹನಟಿ ಸ್ವರ್ಣ ವಿರುದ್ಧ ದೂರು ದಾಖಲು

    Disah

    ಗುಂಡಿನ ದಾಳಿಗೆ ಕಾರಣ ಏನು?
    ದಾಳಿ ಹೊಣೆ ಗೊತ್ತಿದ್ದ ಗೋಲ್ಡಿ ಬ್ರಾರ್‌ ಗ್ಯಾಂಗ್‌ ಅದಕ್ಕೆ ಕಾರಣ ಉಲ್ಲೇಖಿಸಿ ಪತ್ರವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ʻಎಲ್ಲಾ ಸಹೋದರರಿಗೆ ರಾಮ್ ರಾಮ್… ನಾನು, ವೀರೇಂದ್ರ ಚರಣ್, ಮಹೇಂದ್ರ ಶರಣ್ (ದೆಲಾನಾ). ಸಹೋದರರೇ, ಇಂದು ಖುಷ್ಬೂ ಪಟಾನಿ/ದಿಶಾ ಪಟಾನಿ (ಬಾಲಿವುಡ್ ನಟಿ) ಮನೆಯಲ್ಲಿ (ವಿಲ್ಲಾ ನಂ. 40, ಸಿವಿಲ್ ಲೈನ್ಸ್, ಬರೇಲಿ, ಯುಪಿ) ನಡೆದ ಗುಂಡಿನ ದಾಳಿಯನ್ನು ನಾವು ಮುಗಿಸಿದ್ದೇವೆ. ಅವರು ನಮ್ಮ ಪೂಜ್ಯ ಸಂತರನ್ನು (ಪ್ರೇಮಾನಂದ ಜಿ ಮಹಾರಾಜ್ ಮತ್ತು ಅನಿರುದ್ಧಾಚಾರ್ಯ ಜಿ ಮಹಾರಾಜ್) ಅವಮಾನಿಸಿದ್ದಾರೆ. ಅಲ್ಲದೇ ನಮ್ಮ ಸನಾತನ ಧರ್ಮವನ್ನು ಅವಮಾನಿಸಲು ಪ್ರಯತ್ನಿಸಿದರು. ನಮ್ಮ ದೇವತೆಗಳ ಮೇಲಿನ ಅವಮಾನ ಸಹಿಸಲಾಗದು. ಇದು ಕೇವಲ ಟ್ರೈಲರ್‌ ಅಷ್ಟೇ. ಮುಂದಿನ ಬಾರಿ, ಅವರು ಅಥವಾ ಬೇರೆ ಯಾರಾದರೂ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿಸಿದ್ರೆ, ಅವರ ಮನೆಯಲ್ಲಿ ಯಾರೂ ಜೀವಂತವಾಗಿ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು.

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌

    ಬಾಲಿವುಡ್‌ ಸ್ಟಾರ್‌ಗಳಾದ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಆದಾಗ್ಯೂ, ಕತ್ರಿನಾ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗು ಅಕ್ಟೋಬರ್-ನವೆಂಬರ್‌ನಲ್ಲಿ ಜನಿಸಲಿದೆ ಎಂದು ಮೂಲಗಳು ದೃಢಪಡಿಸಿವೆ.

    ಕತ್ರಿನಾ ಗರ್ಭಧಾರಣೆಯ ಬಗ್ಗೆ ಹಲವು ತಿಂಗಳುಗಳಿಂದ ಊಹಾಪೋಹಗಳು ಹರಡುತ್ತಿದ್ದವು. ಆದರೆ, ದಂಪತಿ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಫ್ಯಾನ್ಸ್‌ಗೆ ಕಿಚ್ಚ ಸುದೀಪ್ ಗುಡ್‌ನ್ಯೂಸ್

    ಬ್ಯಾಡ್ ನ್ಯೂಜ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕತ್ರಿನಾ ಕೈಫ್ ಗರ್ಭಧಾರಣೆಯ ವದಂತಿಯ ಬಗ್ಗೆ ವಿಕ್ಕಿ ಕೌಶಲ್ ಅವರನ್ನು ಪ್ರಶ್ನಿಸಲಾಯಿತು. ಈ ಬಗ್ಗೆ ಒಳ್ಳೆಯ ಸುದ್ದಿ ಬಂದರೆ, ನಾವು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷಪಡುತ್ತೇವೆ. ಆದರೆ ಸದ್ಯಕ್ಕೆ ಊಹಾಪೋಹಗಳಲ್ಲಿ ಯಾವುದೇ ಸತ್ಯವಿಲ್ಲ. ಅಲ್ಲಿಯವರೆಗೆ ಬ್ಯಾಡ್ ನ್ಯೂಜ್ ಚಿತ್ರವನ್ನು ಆನಂದಿಸಿ, ನಾವು ಒಳ್ಳೆಯ ಸುದ್ದಿಯೊಂದಿಗೆ ಖಂಡಿತ ನಿಮ್ಮ ಮುಂದೆ ಬರುತ್ತೇವೆ ಎಂದು ತಿಳಿಸಿದ್ದಾರೆ.

    ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ 2021 ರಲ್ಲಿ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದ ಸುಂದರವಾದ ಸ್ಥಳದಲ್ಲಿ ವಿವಾಹವಾದರು. ಕತ್ರಿನಾ-ವಿಕ್ಕಿ ಅವರ ವಿವಾಹದಲ್ಲಿ ಆಪ್ತರು ಹಾಜರಿದ್ದರು. ಇದನ್ನೂ ಓದಿ: ಉಪೇಂದ್ರ ದಂಪತಿ ಫೋನ್ ಹ್ಯಾಕ್ – ಸೈಬರ್ ವಂಚಕರು ದೋಚಿದ್ದೆಷ್ಟು ಹಣ?

  • ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ʻಇದಿನ್ನೂ ಟ್ರೈಲರ್‌ʼ ಗೋಲ್ಡಿ ಬ್ರಾರ್ ಗ್ಯಾಂಗ್ ವಾರ್ನಿಂಗ್‌

    ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ʻಇದಿನ್ನೂ ಟ್ರೈಲರ್‌ʼ ಗೋಲ್ಡಿ ಬ್ರಾರ್ ಗ್ಯಾಂಗ್ ವಾರ್ನಿಂಗ್‌

    ಉತ್ತರ ಪ್ರದೇಶದ ಬರೇಲಿಯಲ್ಲಿರುವ ಬಾಲಿವುಡ್ (Bollywood) ನಟಿ ದಿಶಾ ಪಟಾನಿ (Disha Patani) ಅವರ ಮನೆ ಹೊರಗೆ ಶುಕ್ರವಾರ ತಡರಾತ್ರಿ ಗುಂಡಿನ ದಾಳಿ ನಡೆದಿದೆ.

    ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಬೆಳಗ್ಗಿನ ಜಾವ 3:30ರ ಸುಮಾರಿಗೆ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದಿಶಾ ಪಟಾನಿ ಅವರ ಮನೆಯ ಮೇಲೆ ಮೂರರಿಂದ ನಾಲ್ಕು ಸುತ್ತು ಗುಂಡು (Fire) ಹಾರಿಸಿದ್ದಾರೆ. ಗೋಲ್ಡಿ ಬ್ರಾರ್ ಗ್ಯಾಂಗ್ ಗುಂಡಿನ ದಾಳಿ ಹೊಣೆಯನ್ನ ಹೊತ್ತುಕೊಂಡಿದೆ. ಸದ್ಯ ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

    ಈ ಘಟನೆಯು ಪ್ರದೇಶದಲ್ಲಿ ಕೋಲಾಹಲ ಸೃಷ್ಟಿಸಿದ್ದು ಮಾಹಿತಿ ಪಡೆದ ನಂತರ, ದಿಶಾ ಪಟಾನಿ ಅವರ ಮನೆ ಮುಂದೆ ಭಾರೀ ಪೊಲೀಸ್ ಪಡೆ ನಿಯೋಜಿಸಲಾಗಿದೆ.  ಇದನ್ನೂ ಓದಿ: ರಾಮನ ಪಾತ್ರಕ್ಕಾಗಿ ಮಾಂಸಾಹಾರ, ಮದ್ಯ ಸೇವನೆ ಬಿಟ್ಟಿದ್ದರಂತೆ ರಣ್‌ಬೀರ್ ಕಪೂರ್

    ದಾಳಿ ಹೊಣೆ ಹೊತ್ತುಕೊಂಡಿರುವ ಗೋಲ್ಡಿ ಬ್ರಾರ್‌ ಗ್ಯಾಂಗ್‌ ಸೋಷಿಯಲ್‌ ಮೀಡಿಯಾ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ. ಹಿಂದಿಯಲ್ಲಿ ಬರೆಯಲಾದ ಪೋಸ್ಟ್‌ನಲ್ಲಿ ಇಬ್ಬರು ಪುರುಷರ ಹೆಸರನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಇದು ಚಿತ್ರೋದ್ಯಮಕ್ಕೆ ನೀಡಲಾದ ಎಚ್ಚರಿಕೆ ಎಂದೂ ಕೂಡ ಬರೆದುಕೊಂಡಿದೆ.

    ಪತ್ರದಲ್ಲಿ ಏನಿದೆ?
    ಎಲ್ಲಾ ಸಹೋದರರಿಗೆ ರಾಮ್ ರಾಮ್… ನಾನು, ವೀರೇಂದ್ರ ಚರಣ್, ಮಹೇಂದ್ರ ಶರಣ್ (ದೆಲಾನಾ).
    ಸಹೋದರರೇ, ಇಂದು ಖುಷ್ಬೂ ಪಟಾನಿ/ದಿಶಾ ಪಟಾನಿ (ಬಾಲಿವುಡ್ ನಟಿ) ಮನೆಯಲ್ಲಿ (ವಿಲ್ಲಾ ನಂ. 40, ಸಿವಿಲ್ ಲೈನ್ಸ್, ಬರೇಲಿ, ಯುಪಿ) ನಡೆದ ಗುಂಡಿನ ದಾಳಿಯನ್ನು ನಾವು ಮುಗಿಸಿದ್ದೇವೆ. ಅವರು ನಮ್ಮ ಪೂಜ್ಯ ಸಂತರನ್ನು (ಪ್ರೇಮಾನಂದ ಜಿ ಮಹಾರಾಜ್ ಮತ್ತು ಅನಿರುದ್ಧಾಚಾರ್ಯ ಜಿ ಮಹಾರಾಜ್) ಅವಮಾನಿಸಿದ್ದಾರೆ. ಅಲ್ಲದೇ ನಮ್ಮ ಸನಾತನ ಧರ್ಮವನ್ನು ಅವಮಾನಿಸಲು ಪ್ರಯತ್ನಿಸಿದರು. ನಮ್ಮ ದೇವತೆಗಳ ಮೇಲಿನ ಅವಮಾನ ಸಹಿಸಲಾಗದು. ಇದು ಕೇವಲ ಟ್ರೈಲರ್‌ ಅಷ್ಟೇ. ಮುಂದಿನ ಬಾರಿ, ಅವರು ಅಥವಾ ಬೇರೆ ಯಾರಾದರೂ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿಸಿದ್ರೆ, ಅವರ ಮನೆಯಲ್ಲಿ ಯಾರೂ ಜೀವಂತವಾಗಿ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.  ಇದನ್ನೂ ಓದಿ: ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್

    ಇನ್ನೂ ಘಟನೆ ಬಳಿಕ ನೆರೆಹೊರೆಯ ಜನ ಭಯಭೀತರಾಗಿದ್ದಾರೆ. ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಇಬ್ಬರು ಬೈಕ್ ಸವಾರರು ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಏತನ್ಮಧ್ಯೆ, ಗುಂಡು ಹಾರಿಸಿದ ಯುವಕರನ್ನು ಹಿಡಿಯಲು ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಬರೇಲಿ ಎಸ್‌ಎಸ್‌ಪಿ ಅನುರಾಗ್ ಆರ್ಯ ಹೇಳಿದ್ದಾರೆ. ಇದರೊಂದಿಗೆ, ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಸ್ಕ್ಯಾನ್ ಮಾಡಲಾಗುತ್ತಿದೆ.