Tag: bollwood

  • 1 ಸೆಕೆಂಡ್ ರೀಲ್ಸ್‌ ಮಾಡಿದ ದೀಪಿಕಾ ಪಡುಕೋಣೆ ಫುಲ್‌ ಟ್ರೆಂಡಿಂಗ್

    1 ಸೆಕೆಂಡ್ ರೀಲ್ಸ್‌ ಮಾಡಿದ ದೀಪಿಕಾ ಪಡುಕೋಣೆ ಫುಲ್‌ ಟ್ರೆಂಡಿಂಗ್

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣ್‌ವೀರ್ ಸಿಂಗ್ (Ranveer Singh) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಕಣ್ಣು ಹೊಡೆಯುತ್ತಾ ನಟಿ ರೀಲ್ಸ್ ಮಾಡಿರುವ ವಿಡಿಯೋವನ್ನು ಅಭಿಮಾನಿಗಳ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.

    ಒಂದು ಸೆಕೆಂಡಿನ ರೀಲ್ಸ್ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. ದೀಪಿಕಾರ ಕಣ್ಣೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಾರ್ಯಕ್ರಮಕ್ಕೆ ರೆಡಿಯಾಗುತ್ತಿರುವ ವೇಳೆ, ಈ ವಿಡಿಯೋವನ್ನು ಮಾಡಲಾಗಿದೆ. ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಪಡೆದುಕೊಂಡಿದೆ. ಇದನ್ನೂ ಓದಿ:ಇನ್ಸ್ಟಾಗ್ರಾಂನಲ್ಲಿ ನರೇಂದ್ರ ಮೋದಿಯನ್ನು ಹಿಂದಿಕ್ಕಿದ ಶ್ರದ್ಧಾ ಕಪೂರ್


    ಅಂದಹಾಗೆ, ದೀಪಿಕಾ ಪಡುಕೋಣೆ ದಂಪತಿ ಚೊಚ್ಚಲ ಮಗುವನ್ನು ಸೆಪ್ಟೆಂಬರ್‌ನಲ್ಲಿ ಬರಮಾಡಿಕೊಳ್ಳಲಿದ್ದಾರೆ. ಮಗುವಿನ ಆಗಮನಕ್ಕಾಗಿ ನಟಿಯ ಪರಿವಾರ ಎದುರು ನೋಡುತ್ತಿದೆ.

    ಇನ್ನೂ ‘ಕಲ್ಕಿ 2898 ಎಡಿ’ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಪ್ರಭಾಸ್ ಜೊತೆ ನಟಿಸಿದ್ದ ದೀಪಿಕಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಮುಂಬರುವ ‘ಸಿಂಗಂ ಅಗೇನ್’ ಸಿನಿಮಾದಲ್ಲಿ ಲೇಡಿ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ.

  • ಅಭಿಮಾನಿಯ ಅಭಿಮಾನಕ್ಕೆ ಕಣ್ಣೀರಿಟ್ಟ ತಮನ್ನಾ ಭಾಟಿಯಾ

    ಅಭಿಮಾನಿಯ ಅಭಿಮಾನಕ್ಕೆ ಕಣ್ಣೀರಿಟ್ಟ ತಮನ್ನಾ ಭಾಟಿಯಾ

    ಕ್ಷಿಣ ಭಾರತದ ಖ್ಯಾತ ನಟಿ ಭಾಟಿಯಾ (Tamannaah Bhatia)  ಕಣ್ಣೀರಿಟ್ಟಿದ್ದಾರೆ. ಅದೊಂದು ಪ್ರೀತಿಗೆ ಭಾವುಕರಾಗಿದ್ದಾರೆ. ಇದಕ್ಕೆಲ್ಲ ಹಾಲಿ ಬಾಯ್‌ಫ್ರೆಂಡ್ ವಿಜಯ್ ವರ್ಮಾ (Vijay Varma) ಕಾರಣ ಎಂದು ತಿಳಿಯಬೇಡಿ. ಇದು ಬೇರೊಬ್ಬರ ಕಕ್ಕುಲಾತಿಗೆ ಸುರಿದ ಪನ್ನೀರು. ಯಾಕೆ ಅತ್ತಿದ್ದು ಮಿಲ್ಕಿಬ್ಯೂಟಿ? ಅದ್ಯಾರು ಇಂಥ ಘಟನೆಗೆ ಕಾರಣರಾದರು? ಹಾಲು ಜೇನಿನ ಕಥನ ನಿಮ್ಮ ಮುಂದೆ. ಇದನ್ನೂ ಓದಿ:ಜಿಮ್ಮಿ ಚಿತ್ರದ ಕ್ಯಾರೆಕ್ಟರ್ ಟೀಸರ್ : ಸ್ಯಾಂಡಲ್ ವುಡ್ ನಿಂದ ಪ್ರಶಂಸೆ

    ಮಿಲ್ಕಿ ಬ್ಯೂಟಿ ತಮನ್ನಾ ಕೆಲವು ತಿಂಗಳಿಂದ ಭರ್ಜರಿ ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್ ನಟ ವಿಜಯ್ ವರ್ಮಾ ನನ್ನ ಬಾಯ್ ಫ್ರೆಂಡ್ ಎಂದು ಹೇಳಿದ್ದು, ಆತನೂ ‘ನನ್ನ ಟೊಮ್ಯಾಟೊ’ ಎಂದು ಕಿಸಿದಿದ್ದು…ಎಲ್ಲವೂ ಬಿಸ್ಸಿಬಿಸಿ ದೋಸೆ. ಜೊತೆಗೆ ಲಸ್ಟ್ ಸ್ಟೋರೀಸ್ ವೆಬ್ ಸೀರೀಸ್‌ನಲ್ಲಿ ಇದೇ ತಮನ್ನಾ ಬೆಡ್‌ರೂಮ್ ದೃಶ್ಯಗಳಲ್ಲಿ ಬಿಂಕವನ್ನು ಫ್ಯಾನಿಗೆ ನೇತು ಹಾಕಿ ನಟಿಸಿದ್ದು, ಓಹೋಹೋ ತಮನ್ನಾ ಕೊಟ್ಟೇಯಾ ಮೃಷ್ಟಾನ್ನ ಎಂದು ಪಡ್ಡೆಗಳು ಬಾಯಿ ಚಪ್ಪರಿಸಿದ್ದರು. ಈಗ ಅಭಿಮಾನಿಯೊಬ್ಬಳು ಕಣ್ಣೀರು ಹಾಕಿಸಿದ್ದಾಳೆ ನೋಡಿ.

    ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ತಮನ್ನಾರನ್ನು ಭೇಟಿ ಮಾಡಿದ ಮಹಿಳಾ ಅಭಿಮಾನಿಯೊಬ್ಬಳು (Fan) ಕೈ ಮೇಲೆ ‘ತಮನ್ನಾ ಐ ಲವ್ ಯು’ ಎಂದು ಅಚ್ಚೆ (Tattoo) ಹಾಕಿಸಿಕೊಂಡಿದ್ದನ್ನು ತೋರಿಸಿದ್ದಾಳೆ. ಹಾಗೆಯೇ ತಮನ್ನಾ ಪಾದ ಮುಟ್ಟಿ ನಮಸ್ಕಾರ ಮಾಡಿದ್ದಾಳೆ. ಆಕೆಯ ಪ್ರೀತಿ ಕಂಡು, ಇಂಥ ಅಭಿಮಾನಕ್ಕೆ ನಾನು ಯೋಗ್ಯಳಲ್ಲ ಎಂದು ತಮನ್ನಾ ಕೂಡ ಕಣ್ಣು ಒರೆಸಿಕೊಂಡಿದ್ದಾರೆ. ತಮನ್ನಾ ಕಣ್ಣೀರಿಗೆ ಭಕ್ತಗಣ ಕೂಡ ಅಳಬ್ಯಾಡ್ ಕಣೇ ಸುಮ್ಕಿರೇ ನಮ್ ಮುದ್ದಿನ ರಾಣಿ ಹಾಡಿಗೆ ಧ್ವನಿಯಾಗಿದ್ದಾರಂತೆ.

    ಇಷ್ಟೇಲ್ಲಾ ಅಭಿಮಾನದ ನಡುವೆ ನಟಿ ತಮನ್ನಾ, ವಿಜಯ್ ವರ್ಮಾ ಜೊತೆಗಿನ ಲವ್ ಮ್ಯಾಟರ್. `ಜೀ ಕರ್ದಾ’ ಸಿನಿಮಾದಲ್ಲಿನ ತಮನ್ನಾ ಸಖತ್ ಬೋಲ್ಡ್ & ಹಾಟ್ ಆಗಿ ಕಾಣಿಸಿಕೊಂಡಿರೋದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಒಟ್ನಲ್ಲಿ ಎಲ್ಲಾ ಕಡೆ ತಮನ್ನಾ ಬಗ್ಗೆ ಸುದ್ದಿಯೋ ಸುದ್ದಿ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಜೂನ್‌ 9-10ರಂದು ನಡೆಯಲಿದೆ ಅಭಿಷೇಕ್‌- ಅವಿವಾ ಮದುವೆ

    ಜೂನ್‌ 9-10ರಂದು ನಡೆಯಲಿದೆ ಅಭಿಷೇಕ್‌- ಅವಿವಾ ಮದುವೆ

    ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್- ಅವಿವಾ ಬಿದ್ದಪ್ಪ (Aviva Bidapa) ಮದುವೆ ದಿನಾಂಕ ಫಿಕ್ಸ್ ಆಗಿದೆ. ಈ ಮೂಲಕ ಸುಮಲತಾ ಅಂಬರೀಶ್ (Sumalatha Ambareesh) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಹಲವು ವರ್ಷಗಳ ಅಭಿ- ಅವಿವಾ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.

    ಫ್ಯಾಷನ್ ಈವೆಂಟ್‌ವೊಂದರಲ್ಲಿ ಅಭಿಷೇಕ್-ಅವಿವಾ ಭೇಟಿ, 3-4 ವರ್ಷಗಳ ಡೇಟಿಂಗ್ ನಂತರ ಇತ್ತೀಚಿಗೆ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಜೊತೆ ಇದೀಗ ಹಸೆಮಣೆ ಏರಲು ಅಂಬಿ ಪುತ್ರ ಸಜ್ಜಾಗಿದ್ದಾರೆ. ಇದನ್ನೂ ಓದಿ:ಕೆಂಪು ಗುಲಾಬಿ ಅವತಾರ ತಾಳಿದ ನಟಿ ಕಿಯಾರಾ

    ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೆ ಸ್ಯಾಂಡಲ್‌ವುಡ್ ಸ್ಟಾರ್ ವೆಡ್ಡಿಂಗ್‌ಗೆ ಸಾಕ್ಷಿಯಾಗಲಿದೆ. ನಟ ಅಭಿಷೇಕ್- ಅವಿವಾ ವಿವಾಹ ಇದೇ ಜೂನ್ 9 ಮತ್ತು 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಜೂನ್ 12ರಂದು ಮಂಡ್ಯದಲ್ಲಿ ಆರತಕ್ಷತೆ ಮತ್ತು ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಸುಮಾರು 10 ಸಾವಿರ ಅತಿಥಿಗಳು ಭಾಗಿಯಾಗುವ ಸಾಧ್ಯತೆ ಇದೆ.

    ಏಪ್ರಿಲ್ 5ರಂದು ಅಭಿಷೇಕ್ (Abhishek Ambareesh) ಮತ್ತು ಸುಮಲತಾ ಅಂಬರೀಷ್ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ಪತ್ರ ನೀಡಿದ್ದರು. ಈ ವಿಷಯವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಫೋಟೊ ಸಹಿತ ಹಂಚಿಕೊಂಡಿದ್ದರು. ಈ ಮೂಲಕ ಗಣ್ಯರನ್ನು ಆಹ್ವಾನಿಸಲು ಆರಂಭಿಸಿದ್ದರು.

    ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಮದುವೆಗೆ ಕೇಂದ್ರದ ಪ್ರಮುಖ ರಾಜಕಾರಣಿಗಳ ಜೊತೆಗೆ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಇನ್ನೂ ಹಲವು ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್‌ನಿಂದ ಶತ್ರುಘ್ನ ಸಿನ್ಹಾ ಇನ್ನೂ ಹಲವು ಪ್ರಮುಖ ತಾರೆಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಮದುವೆಗೆ ಆಭರಣ, ವಸ್ತ್ರಗಳ ಖರೀದಿ ಜೋರಾಗಿ ನಡೆದಿದ್ದು, ಸ್ವತಃ ವಸ್ತ್ರ ವಿನ್ಯಾಸಕಿ ಆಗಿರುವ ಅವಿವಾ ಬಿದ್ದಪ್ಪ ಅವರೇ ತಮ್ಮ ಹಾಗೂ ಅಭಿಷೇಕ್ ತೊಡಲಿರುವ ಉಡುಗೆಯನ್ನು ಡಿಸೈನ್ ಮಾಡುತ್ತಿರುವುದು ವಿಶೇಷ.

  • ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಸ್ಟಾರ್ ನಟನ ಸಿನಿಮಾದಿಂದ ಪೂಜಾ ಔಟ್

    ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಸ್ಟಾರ್ ನಟನ ಸಿನಿಮಾದಿಂದ ಪೂಜಾ ಔಟ್

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ(Pooja Hegde) ಇತ್ತೀಚೆಗಷ್ಟೇ ಸಲ್ಮಾನ್ ಖಾನ್ (Salman Khan) ಜೊತೆಗಿನ ಡೇಟಿಂಗ್ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಈ ಬೆನ್ನಲ್ಲೇ ಸ್ಟಾರ್ ನಟನ ಸಿನಿಮಾಗೆ ಪೂಜಾ ಗುಡ್ ಬೈ ಹೇಳಿದ್ದಾರೆ.

    ಸೌತ್ ಮತ್ತು ಬಾಲಿವುಡ್‌ನಲ್ಲಿ (Bollywood)  ಕಮಾಲ್ ಮಾಡ್ತಿರುವ ನಟಿ ಪೂಜಾ ಹೆಗ್ಡೆ, ಈ ವರ್ಷ ತೆರೆ ಕಂಡ ಮೂರು ಸಿನಿಮಾಗಳು ಕಲೆಕ್ಷನ್ ವಿಚಾರದಲ್ಲಿ ಮುಗ್ಗರಿಸಿತ್ತು. ವಿಜಯ್ ದೇವರಕೊಂಡ ನಟನೆಯ `ಜನ ಗಣ ಮನ’ ಸಿನಿಮಾಗೆ ನಾಯಕಿಯಾದ್ರು. ಶೂಟಿಂಗ್‌ ಶುರುವಾಗುವ ಮುಂಚೆನೇ ಶೂಟಿಂಗ್‌ಗೆ ತೆರೆಬಿದ್ದಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಜೊತೆಗಿನ ಲವ್ ರಿಲೇಷನ್‌ಶಿಪ್ ಬಗ್ಗೆ ನಟಿ ಸಖತ್ ಸುದ್ದಿಯಾಗಿದ್ದರು. ಈ ಬೆನ್ನಲ್ಲೇ ಇದೀಗ ಪವನ್ ಕಲ್ಯಾಣ್ (Pawan Kalyan) ನಟನೆಯ ಸಿನಿಮಾದಿಂದ ಪೂಜಾ ಹೊರನಡೆದಿದ್ದಾರೆ. ಇದನ್ನೂ ಓದಿ: ಐಶ್ವರ್ಯ ರೈ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಕೆ ಮಾಡಿದ ವಿದೇಶಿಗರು ಅಂದರ್

    ಪವನ್ ಕಲ್ಯಾಣ್ ನಟನೆಯ `ಉಸ್ತಾದ್ ಭಗತ್ ಸಿಂಗ್’ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿ ಫಿಕ್ಸ್ ಆಗಿದ್ದರು. ಆದರೆ ಈಗ ಈ ಚಿತ್ರದಲ್ಲಿ ಪೂಜಾ ನಟಿಸುತ್ತಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಬೇರೇ ಸಿನಿಮಾಗಳಲ್ಲಿ ಬ್ಯುಸಿಯಿರುವ ಕಾರಣ, ಡೇಟ್ಸ್ ಹೊಂದಾಣಿಕೆಯಾಗದೇ ಈ ಚಿತ್ರವನ್ನ ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

    ಸದ್ಯ ಪೂಜಾ ನಟಿಸಿರುವ `ಸರ್ಕಸ್’ (Circus) ಚಿತ್ರ ರಿಲೀಸ್‌ಗೆ ರೆಡಿಯಿದೆ. ಸಲ್ಮಾನ್ ಜೊತೆಗಿನ `ಕಿಸಿ ಕಾ ಭಾಯ್ ಕಿಸಿ ಕಾ ಜಾನ್’ ಚಿತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಗ್ರರಿಂದ ಹತ್ಯೆಯಾಗಿದ್ದ ಕಾಶ್ಮೀರಿ ಗಾಯಕಿಯ ಪಾತ್ರದಲ್ಲಿ ಕಂಗನಾ ರಣಾವತ್

    ಉಗ್ರರಿಂದ ಹತ್ಯೆಯಾಗಿದ್ದ ಕಾಶ್ಮೀರಿ ಗಾಯಕಿಯ ಪಾತ್ರದಲ್ಲಿ ಕಂಗನಾ ರಣಾವತ್

    ಬಾಲಿವುಡ್‌ನ ವಿವಾದಿತ ನಟಿ ಕಂಗನಾ ರಣಾವತ್ ಮತ್ತೆ ಸುದ್ದಿಯಲ್ಲಿ ಸುದ್ದಿಯಲ್ಲಿದ್ದಾರೆ. ಇಂದಿರಾ ಗಾಂಧಿ ಅವರ ಬಯೋಪಿಕ್‌ನಲ್ಲಿ ನಟಿಸುತ್ತಿರುವ ಬೆನ್ನಲ್ಲೇ ಕಂಗನಾ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಉಗ್ರರಿಂದ ಹತ್ಯೆಯಾಗಿದ್ದ ಕಾಶ್ಮೀರಿ ಗಾಯಕಿಯ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ.

    ʻತಲೈವಿʼ ಚಿತ್ರದ ನಂತರ ಇಂದಿರಾ ಗಾಂಧಿ ಅವರ ಜೀವನದ ಕಥೆ ಹೇಳಲು ಸಜ್ಜಾಗಿರುವ ಬೆನ್ನಲ್ಲೇ ಮತ್ತೊಂದು ನೈಜ ಕಥೆಗೆ ಕಂಗನಾ ಓಕೆ ಅಂದಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ `ಕಾಶ್ಮೀರಿ ಫೈಲ್ಸ್’ ಚಿತ್ರ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಇದೇ ಕಥೆ ತೆರೆಯ ಮೇಲೆ ನೋಡಿರದ ಇನ್ನಷ್ಟು ಕಥೆಯನ್ನ ಮಧುರ್ ಭಂಡಾರ್ಕರ್ ನಿರ್ದೇಶಿಸಲು ಹೊರಟಿದ್ದಾರೆ. ಇದನ್ನೂ ಓದಿ:‘ಗಾಳಿಪಟ 2’ ಟ್ರೇಲರ್ ಮೂಲಕ ಮತ್ತೊಮ್ಮೆ ಗೆದ್ದ ಯೋಗರಾಜ್ ಭಟ್

    ಮಧುರ್ ಭಂಡಾರ್ಕರ್ ಈಗ ಉಗ್ರರಿಂದ ಹತ್ಯೆಯಾಗಿದ್ದ ಕಾಶ್ಮೀರಿ ಗಾಯಕಿಯ ಕಥೆಯನ್ನ ತೆರೆಯ ಮೇಲೆ ತೋರಿಸಲು ಸಜ್ಜಾಗಿದ್ದಾರೆ. ಈ ಪಾತ್ರಕ್ಕೆ ಕಂಗನಾ ಸೂಕ್ತ ಎಂದೇನಿಸಿ ನಟಿಯ ಬಳಿ ಮಾತನಾಡಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಕಾಶ್ಮೀರ ಇನ್ನಷ್ಟು ಕಥೆ ಹೊರ ಬೀಳೋದು ಗ್ಯಾರೆಂಟಿ ಅಂತಿದೆ ಬಿಟೌನ್ ಬಳಗ. ಅಷ್ಟಕ್ಕೂ ಈ ಸಿನಿಮಾ ಬಗ್ಗೆ ಮಧುರ್ ಮತ್ತು ಕಂಗನಾ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್‌ಗೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಎಂಟ್ರಿ?

    ಬಾಲಿವುಡ್‌ಗೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಎಂಟ್ರಿ?

    ಕ್ರಿಕೆಟ್ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಬಾಲಿವುಡ್ ರಂಗಕ್ಕೆ ಎಂಟ್ರಿ ಕೊಡಲಿದ್ದಾರಂತೆ. ಈಗಾಗಲೇ ಸೋಷಿಯಲ್ ಮೀಡಿಯಾದ ಸೆನ್ಸೆಷನಲ್ ಸ್ಟಾರ್ ಆಗಿರೋ ಸಾರಾ ನಟನೆಯತ್ತ ಮುಖ ಮಾಡಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿನ ಭಾರೀ ಸದ್ದು ಮಾಡ್ತಿದೆ.

    ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಯಾವ ನಟಿಯರಿಗೂ ಕಮ್ಮಿಯಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಶೂಟ್ ಮತ್ತು ವಿಡಿಯೋ ಮೂಲಕ ಈಗಾಗಲೇ ಹವಾ ಕ್ರಿಯೇಟ್ ಮಾಡಿದ್ದಾರೆ. ಬ್ಯೂಟಿ ಕ್ವೀನ್ ಸಾರಾಗೆ ಈಗಾಗಲೇ ಅಪಾರ ಅಭಿಮಾನಿಗಳ ಬಳಗವಿದೆ. ಇನ್ನು 2021ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಸಾರಾ ಕಾಲಿಟ್ಟಿದ್ದರು. ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್ ಮೂಲಕ ಸಾರಾ ಲಾಂಚ್ ಆಗಲಿದ್ದಾರೆ ಎಂಬ ಮಾತುಗಳು ಬಿಟೌನ್‌ನಲ್ಲಿ ಕೇಳಿ ಬರುತ್ತಿದೆ.

    ಈಗಾಗಲೇ ಸಾಕಷ್ಟು ಜನಪ್ರಿಯ ಬಟ್ಟೆ ಬ್ರ್ಯಾಂಡ್‌ಗಳಿಗೆ ಸಾರಾ ರಾಯಭಾರಿಯಾಗಿದ್ದಾರೆ. ಈ ಮೂಲಕ ಸಾರಾ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡೋದಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಜತೆಗೆ ನಟನೆಯ ತರಬೇತಿ ಕೂಡ ಪಡೆಯುತ್ತಿದ್ದಾರೆ. ಸಾರಾ ಪ್ರತಿ ಹೆಜ್ಜೆಯಲ್ಲೂ ಸಚಿನ್ ದಂಪತಿ ಬೆಂಬಲ ಇದ್ದೆ ಇರುತ್ತದೆ. ಹಾಗಾಗಿ ಸಾರಾ ಕನಸಿಗೆ ಬೆಂಬಲ ಸೂಚಿಸಿದ್ದಾರಂತೆ. ಇದನ್ನೂ ಓದಿ: ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

     

    View this post on Instagram

     

    A post shared by Sara Tendulkar (@saratendulkar)

    ಬಾಲಿವುಡ್ ಸ್ಟಾರ್ ಕಿಡ್‌ಗಳ ಮಕ್ಕಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದು ಹೊಸ ವಿಚಾರವೇನಲ್ಲ ಆದರೆ ಕ್ರಿಕೆಟ್ ತಾರೆಯ ಮಗಳಾಗಿರುವ ಸಾರಾ ತೆಂಡೂಲ್ಕರ್, ಬಾಲಿವುಡ್ ಎಂಟ್ರಿಯ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇನ್ನು ಅದ್ಯಾವ ಸ್ಟಾರ್ ಜತೆ ನಾಯಕಿಯಾಗಿ ಸಾರಾ  ಕಾಣಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ.