Tag: boiled rice

  • ಕರಾವಳಿಗರಿಗೆ ಪಡಿತರ ಕಾರ್ಡ್ ಮೂಲಕ ಕುಚ್ಚಿಲಕ್ಕಿ ವಿತರಣೆ: ಸಚಿವ ಕೋಟ

    ಕರಾವಳಿಗರಿಗೆ ಪಡಿತರ ಕಾರ್ಡ್ ಮೂಲಕ ಕುಚ್ಚಿಲಕ್ಕಿ ವಿತರಣೆ: ಸಚಿವ ಕೋಟ

    ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಕಾರ್ಡ್ ಮೂಲಕ ಕುಚ್ಚಿಲಕ್ಕಿ ವಿತರಣೆ ಮಾಡುವುದಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಘೋಷಣೆ ಮಾಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ಪಡಿತರ ಕಾರ್ಡ್ ಮೂಲಕ ಬಡವರಿಗೆ ಕುಚ್ಚಿಲಕ್ಕಿ ವಿತರಣೆ ಮಾಡಲು ಕೇಂದ್ರ ಅನುಮತಿ ನೀಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ತಿಂಗಳಿಗೆ 1 ಲಕ್ಷ ಕ್ವಿಂಟಾಲ್ ಅಕ್ಕಿ ಬಿಡುಗಡೆಯಾಗುತ್ತದೆ. ಇದಕ್ಕೆ ಸಹಕರಿಸಿದ ಸಂಸದರು ಹಾಗೂ ಎರಡು ಜಿಲ್ಲೆಯ ಶಾಸಕರು ಅಭಿನಂದನಾರ್ಹರು. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಹೋರಾಟವನ್ನು ಮಾತುಕತೆಯನ್ನು ಮಾಡಿದ ನಂತರ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.

    ನಾನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಈ ಪ್ರಯತ್ನ ಮಾಡಿದ್ದೆ. ಕುಚ್ಚಿಲಕ್ಕಿ ವಿತರಿಸಲು ಶಿಫಾರಸು ಮಾಡಿದ ಮುಖ್ಯಮಂತ್ರಿ, ಆಹಾರ ಸಚಿವ ಉಮೇಶ್ ಕತ್ತಿ, ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿಗೆ ಧನ್ಯವಾದ ಸಲ್ಲಿಕೆ ಮಾಡುತ್ತೇನೆ. ಎಂ4, ಜಯಾ ತಳಿಯ ಅಕ್ಕಿಯನ್ನು ಖರೀದಿ ಮಾಡಿ ವಿನಿಯೋಗಿಸುತ್ತೇವೆ ಎಂದರು. ಇದನ್ನೂ ಓದಿ: ಕಟೀಲ್, ಸಿದ್ದರಾಮಯ್ಯಗೆ ಕಂಟಕವಾಗ್ತಾರೆ: ಕೋಟ ಶ್ರೀನಿವಾಸ ಪೂಜಾರಿ

    ಈಗಾಗಲೇ ಕೆಲವೆಡೆಯಿಂದ ಭತ್ತ ಖರೀದಿಯಾಗಿದೆ. ಖರೀದಿ ಮಾಡಿದ ಭತ್ತವನ್ನು ಮೊದಲು ವಿತರಣೆ ಮಾಡುತ್ತೇವೆ. ಹೊಸ ಖರೀದಿಯ ಸಂದರ್ಭ ಕುಚ್ಚಿಲಕ್ಕಿಯನ್ನು ಖರೀದಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್‍ನವ್ರು ರೈಲು, ಬಸ್ ಯಾವುದಲ್ಲಾದ್ರೂ ಹೋಗ್ಲಿ, ಆದ್ರೆ ಸಂದರ್ಭ ನೋಡಿ ಪ್ರತಿಭಟನೆ ಮಾಡ್ಲಿ: ಸುಧಾಕರ್

  • ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ

    ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ

    ರಾಗಿ, ಗೋಧಿ ಬಳಸಿ ವಿಧ ವಿಧವಾದ ದೋಸೆ ಮಾಡುವ ನಾವು ಪಾಲಕ್ ದೋಸೆ ಮಾಡಲು ಒಮ್ಮೆ ಟ್ರೈ ಮಾಡಬಹುದಾಗಿದೆ.  ಪಾಲಕ್  ಸೊಪ್ಪನ್ನು ಬಳಸಿ ನೀವು ರುಚಿ ರುಚಿಯಾದ ದೋಸೆ ಮಾಡಬಹುದು.  ನಿಮ್ಮ ಹಸಿವನ್ನು ಇಂಗಿಸಿ ನಾಲಗೆಯಲ್ಲಿ ಆ ರುಚಿ ಹೆಚ್ಚು ಹೊತ್ತು ಇರುವಂತೆ ಈ ದೋಸೆ ಮಾಡುತ್ತದೆ. ರಾಗಿ ದೋಸೆ, ಗೋಧಿ ದೋಸೆಗಳಿಗಿಂತ ಈ ದೋಸೆ ವಿಭಿನ್ನವಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಕುಚ್ಚಲಕ್ಕಿ- 2 ಕಪ್
    * ಉದ್ದಿನ ಬೇಳೆ -1 ಕಪ್
    * ಕಡಲೆ ಬೇಳೆ – ಅರ್ಧ ಕಪ್
    * ಹೆಸರು ಬೇಳೆ – ಅರ್ಧ ಕಪ್
    * ತೊಗರಿ ಬೇಳೆ – ಅರ್ಧ ಕಪ್
    * ಅವಲಕ್ಕಿ – 1 ಕಪ್
    * ಮೆಂತ್ಯ – 1 ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:

    * ಕುಚ್ಚಲಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ, ಹೆಸರು ಬೇಳೆ ಮತ್ತು ತೊಗರಿ. ಅವಲಕ್ಕಿಯನ್ನು ನೀರಿನಲ್ಲಿ ನೆನೆಹಾಕಿಟ್ಟಿರಬೇಕು.
    * ಈಗ ಕುಚ್ಚಲಕ್ಕಿಯನ್ನು ಅವಲಕ್ಕಿ, ಬೇಳೆಗಳ ಜೊತೆಗೆ ಮಿಕ್ಸಿಯಲ್ಲಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು 8-9 ಗಂಟೆಗಳ ಕಾಲ ಹುದುಗು ಬರಲು ಬಿಡಿ. ನಂತರ ದೋಸೆ ಮಾಡಲು ಹಿಟ್ಟು ಸಿದ್ಧವಾದಂತೆ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ದೋಸೆ ಕಾವಲಿಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
    * ನಂತರ ಅದರ ಮೇಲೆ ಹಿಟ್ಟನ್ನು ಹಾಕಿ, ದೋಸೆಯನ್ನು ಮಾಡಿ. ಇದನ್ನು ನೀವು ತೆಂಗಿನ ಕಾಯಿ ಚಟ್ನಿ ಜೊತೆ ತಿಂದರೆ ರುಚಿಯಾಗಿರುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್