Tag: Body weight

  • ಪಾತ್ರಕ್ಕಾಗಿ 69 ಕೆಜಿಯಿಂದ, 85 ಕೆಜಿಗೆ ತೂಕ ಏರಿಸಿಕೊಂಡ ಫರ್ಹಾನ್ ಅಖ್ತರ್‌

    ಪಾತ್ರಕ್ಕಾಗಿ 69 ಕೆಜಿಯಿಂದ, 85 ಕೆಜಿಗೆ ತೂಕ ಏರಿಸಿಕೊಂಡ ಫರ್ಹಾನ್ ಅಖ್ತರ್‌

    ಮುಂಬೈ: ಸದಾ ಡಿಫರೆಂಟ್ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಬಾಲಿವುಡ್ ನಟ ಫರ್ಹಾನ್ ಅಖ್ತರ್‌, ತೂಫಾನ್ ಚಿತ್ರಕ್ಕಾಗಿ ತಮ್ಮ ದೇಹ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಧಡೂತಿ ದೇಹ ಹೊಂದಿದ್ದ ಫರ್ಹಾನ್ ಅಖ್ತರ್‌ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬಾಲಿವುಡ್‍ನಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಅಭಿನಯಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿಸಲು ಫರ್ಹಾನ್ ಅಖ್ತರ್‌, ತೂಫನ್ ಚಿತ್ರಕ್ಕಾಗಿ ತಮ್ಮ ದೇಹ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಫರ್ಹಾನ್ ಅಖ್ತರ್‌ ಬಾಕ್ಸರ್ ಅಜೀಜ್ ಅಲಿ ಖಾನ್ ಆಗಿ ಕಾಣಿಸಿಕೊಂಡಿದ್ದು, ಬಾಕ್ಸರ್ ಆಗುವುದಕ್ಕೂ ಮುನ್ನ ಪುಡಿ ರೌಡಿಯಾಗಿದ್ದವರು, ನಂತರ ಬಾಕ್ಸಿಂಗ್ ಕಲಿಯುತ್ತಾರೆ. ಈ ಮಧ್ಯೆ ಬಾಕ್ಸಿಂಗ್ ತೊರೆಯುವ ಸಂದರ್ಭ ಬರುತ್ತದೆ. ಆಗ ಬಾಕ್ಸಿಂಗ್ ಬಿಟ್ಟಾಗ ಅಜೀಜ್ ದಪ್ಪ ಆಗುತ್ತಾರೆ.

    ತೂಫಾನ್ ಚಿತ್ರದಲ್ಲಿ ಬರುವ ಇದೊಂದು ಸಣ್ಣ ಪಾತ್ರಕ್ಕೆ ಫರ್ಹಾನ್ 69.9 ಕೆಜಿ ದೇಹ ತೂಕವನ್ನು 85 ಕೆ.ಜಿಗೆ ಏರಿಸಿಕೊಂಡಿದ್ದಾರೆ. ಬಳಿಕ ತೂಕ ಇಳಿಸಿಕೊಂಡು ಮತ್ತೆ ಸಿಕ್ಸ್ ಪ್ಯಾಕ್ ಮಾಡಿದ್ದಾರೆ.

    ಸದ್ಯ ಸಿಕ್ಸ್ ಪ್ಯಾಕ್ ಜೊತೆಗೆ ತೂಕ ಏರಿಸಿಕೊಂಡಿರುವ ಫೋಟೋವನ್ನು ಫರ್ಹಾನ್ ಅಖ್ತರ್‌ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಜೀಜ್​​ ಅಲಿಯವರ ಪಾತ್ರಕ್ಕಾಗಿ ತೂಫಾನ್ ಚಿತ್ರದಲ್ಲಿ ಹಲವು ಆಕಾರ ಮತ್ತು ಶೇಪ್‍ಗಳು. 18 ತಿಂಗಳ ಶ್ರಮ, ಪ್ರತಿ ಬೆವರಿನ ಹನಿ, ನೋಯುತ್ತಿರುವ ಸ್ನಾಯುಗಳು ಮತ್ತು ತೂಕ ಏರಿಸಿಕೊಂಡಿದ್ದು, ಇಳಿಸಿಕೊಂಡಿರುವುದು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ತೂಫಾನ್ ಚಿತ್ರಕ್ಕೆ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಆ್ಯಕ್ಷನ್ ಕಟ್ ಹೇಳಿದ್ದು, ಜುಲೈ 16ರಂದು ಈ ಸಿನಿಮಾ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿತ್ತು. 2013 ರಲ್ಲಿ ಭಾಗ್ ಮಿಲ್ಖಾ ಭಾಗ್ ಸಿನಿಮಾದ ಮೂಲಕ ಬಾಲಿವುಡ್‍ಗೆ ಎಂಟ್ರಿಕೊಟ್ಟ ಫರ್ಹಾನ್ ಅಖ್ತರ್‌ ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಕಂಡಿದ್ದರು. ಇದನ್ನೂ ಓದಿ:1.31 ಲಕ್ಷ ಬೆಲೆ ವೈನ್- ಪ್ರಿಯಾಂಕಾಗೆ ಪತಿಯಿಂದ ವಿಶೇಷ ಗಿಫ್ಟ್

     

    View this post on Instagram

     

    A post shared by Farhan Akhtar (@faroutakhtar)

  • ಬೆಂಡೆಕಾಯಿ ಸೇವಿಸಿ ದೇಹದ ತೂಕ ಇಳಿಸಿಕೊಳ್ಳಿ

    ಬೆಂಡೆಕಾಯಿ ಸೇವಿಸಿ ದೇಹದ ತೂಕ ಇಳಿಸಿಕೊಳ್ಳಿ

    ಬೆಂಡೆಕಾಯಿ ಹಲವು ಜನರಿಗೆ ಇಷ್ಟ. ಮತ್ತೆ ಕೆಲವರಿಗೆ ವಾಸನೆ ಹಾಗೂ ಅಂಟು ಇರುವ ಕಾರಣ ಬೆಂಡೆಕಾಯಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಬೆಂಡೆಕಾಯಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ವಿಷಯ ಹಲವರಿಗೆ ಗೊತ್ತಿಲ್ಲ. ಹೊಟ್ಟೆಯ ಸಮಸ್ಯೆ ಇದ್ದವರಿಗೆ ಬೆಂಡೆಕಾಯಿ ಸೇವಿಸಿದರೆ ತುಂಬಾ ಉಪಯೋಗ ಆಗಲಿದೆ.

    ಈಗಿನ ಕಾಲದಲ್ಲಿ ಜನರು ತಮ್ಮ ತೂಕ ಹೆಚ್ಚಾಗಿದೆ ಎಂದು ಚಿಂತಿಸುತ್ತಿರುತ್ತಾರೆ. ಆದರೆ ಬೆಂಡೆಕಾಯಿಯ ನೀರನ್ನು ಕುಡಿದರೆ ಅದು ನಮ್ಮ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ಬೆಂಡೆಕಾಯಿ ನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ತುಂಬಾ ಉಪಯೋಗವಾಗುತ್ತದೆ. ಬೆಂಡೆಕಾಯಿ ಸೇವಿಸಿದರೆ, ದೇಹದ ಮೆಟಾಬಾಲಿಸಂ ಸಿಸ್ಟಂ ಸರಿ ಇರಿಸುತ್ತದೆ. ಅಲ್ಲದೆ ಜೀರ್ಣಕ್ರಿಯೆ ಸರಿ ಮಾಡಿ, ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಬೆಂಡೆಕಾಯಿಯಲ್ಲಿ ಕಾರ್ಬೋಹೈಡ್ರೆಟ್, ಪ್ರೋಟಿನ್, ವಿಟಮಿನ್ ಕೆ, ಎ ಹಾಗೂ ಸಿ ಅಂಶ ಹೊಂದಿದೆ. ಇದನ್ನು ಹೊರತುಪಡಿಸಿ ಪೋಟ್ಯಾಶಿಯಂ, ಕ್ಯಾಲಿಶಿಯಂ, ಮ್ಯಾಗ್ನೀಶಿಯಂ ಅಂಶ ಕೂಡ ಇರುತ್ತದೆ. ಬೆಂಡೆಕಾಯಿ ಸೇವಿಸುವುದರಿಂದ ಅದರಲ್ಲಿ ಇರುವ ಫೈಬರ್ ನಿಂದ ಹೊಟ್ಟೆಯಲ್ಲಿನ ಮಲಬದ್ಧತೆ, ಡೈಯೇರಿಯಾ ಹಾಗೂ ಹೊಟ್ಟೆಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

    ಇದನ್ನು ಹೊರತುಪಡಿಸಿ ಬೆಂಡೆಕಾಯಿಯಲ್ಲಿ ಇರುವ ವಿಟಮಿನ್ – ಎ ಅಂಶ ಕಣ್ಣುಗಳಿಗೆ ತುಂಬಾ ಉಪಯೋಗವಾಗುತ್ತದೆ. ಬೆಂಡೆಕಾಯಿಯಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ ಹಾಗೂ ಬಿಟಾ ಕ್ಯಾರೋಟಿನ್‍ನಿಂದ ತ್ವಚೆ ತಾಜಾವಾಗಿ ಇಡಲು ಸಹಾಯ ಮಾಡುತ್ತದೆ.