Tag: body donate

  • ದೇಹದಾನ, ಅಂಗಾಂಗದಾನಕ್ಕೆ ಮುಂದಾಗಿ ಮಾದರಿಯಾದ ನಟ ರಾಜವರ್ಧನ್

    ದೇಹದಾನ, ಅಂಗಾಂಗದಾನಕ್ಕೆ ಮುಂದಾಗಿ ಮಾದರಿಯಾದ ನಟ ರಾಜವರ್ಧನ್

    ನುಷ್ಯ ಸತ್ತ ಮೇಲೂ ಸಾರ್ಥಕ ಬಾಳು ಬಾಳಬೇಕು ಅಂದ್ರೆ ದೇಹ ಮಣ್ಣಾಗುವ ಬದಲು ದೇಹದಾನ (Body Donate) ಮಾಡಬೇಕೆಂದು ಹೇಳ್ತಾರೆ. ಇದೀಗ ಯುವ ನಟ ರಾಜವರ್ಧನ್ (Actor Rajavardhan) ಅಂತಹದ್ದೇ ಕಾರ್ಯಕ್ಕೆ ಮುಂದಾಗಿದ್ದಾರೆ. ದೇಹದಾನ ಮಾಡಲು ಒಪ್ಪಿರುವ ನಟ ಇತರರಿಗೆ ಮಾದರಿಯಾಗಿದ್ದಾರೆ.

    ಅಂಗಾಂಗ ಬೇಡಿಕೆಯುಳ್ಳವರ ಉಪಯೋಗಕ್ಕೆ ಬರುವುದನ್ನ ತೀರ್ಮಾನಿಸುವುದು ನಮ್ಮ ಕೈಯಲ್ಲಿರುತ್ತದೆ. ದಿವಂಗತ ನಟ ಲೋಕೇಶ್ ಸೇರಿದಂತೆ ಹಲವರು ದೇಹದಾನ ಮಾಡಿ ಸಾರ್ಥಕರಾಗಿದ್ದಾರೆ. ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಕೂಡ ನೇತ್ರದಾನ ಮಾಡಿ ಮಾದರಿಯಾಗಿದ್ದರು. ಇದೇ ಹಾದಿಯಾಗಿ ನಟ ರಾಜವರ್ಧನ್ ಅವರು ಅಂಗಾಂಗ ದಾನ ಮಾಡೋದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಹೃದಯ ಗೆದ್ದ ಮೆಗಾ ಸ್ಟಾರ್ – ಚಿರಂಜೀವಿ ರಿಯಲ್ ಹೀರೋ ಎಂದ ಫ್ಯಾನ್ಸ್

    ನೇತ್ರದಾನಕ್ಕೆ (Eye Donate) ಅನೇಕರಿಗೆ ಸ್ಫೂರ್ತಿಯಾದವರು ಡಾ.ರಾಜ್‌ಕುಮಾರ್, ದೇಹದಾನವೂ ಇನ್ನೂ ಶ್ರೇಷ್ಠವಾದ ದಾನ. ಉಸಿರು ಚೆಲ್ಲಿದ ಮೇಲೆ ಆರೋಗ್ಯವಂತ ಅಂಗಾಂಗ ಮಣ್ಣಾಗೋ ಬದಲು ಉಪಯುಕ್ತರಿಗೆ ಜೀವ ನೀಡಿದ್ರೆ ಎಷ್ಟೋ ಜನರನ್ನ ಉಳಿಸಬಹುದು. ದಾನಿಗಳು ಸತ್ತ ಮೇಲೂ ನಮ್ಮೊಂದಿಗೆ ಬದುಕುತ್ತಾರೆ. ಇದನ್ನೂ ಓದಿ: `ಕೆಲಸ ಇದೆ ಮತ್ತೆ ಸಿಗ್ತೀನಿ’ ಅಂತ ಇನ್‌ಸ್ಟಾದಿಂದ ದಿಢೀರ್ ದೂರಾದ ರಾಜ್ ಬಿ ಶೆಟ್ಟಿ

    ಇದೀಗ ನಟ ರಾಜವರ್ಧನ್ ಬಿಜಿಎಸ್ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮವೊಂದರರಲ್ಲಿ ಪಾಲ್ಗೊಂಡು ಅದೇ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಹಾಗೂ ದೇಹದಾನ ಮಾಡೋದಾಗಿ ಘೋಷಿಸಿದ್ದಾರೆ. ಅಂದಹಾಗೆ ರಾಜವರ್ಧನ್ ತಂದೆ ಡಿಂಗ್ರಿ ನಾಗರಾಜ್ ಕೂಡ ದೇಹದಾನ ಮಾಡಿದ್ದಾರೆ.

  • ಅಪ್ಪು ಪ್ರೇರಣೆ – ಅಭಿಮಾನಿಗಳಿಂದ ನೇತ್ರದಾನದ ಜೊತೆಗೆ ದೇಹದಾನಕ್ಕೆ ನೋಂದಣಿ

    ಅಪ್ಪು ಪ್ರೇರಣೆ – ಅಭಿಮಾನಿಗಳಿಂದ ನೇತ್ರದಾನದ ಜೊತೆಗೆ ದೇಹದಾನಕ್ಕೆ ನೋಂದಣಿ

    ಯಾದಗಿರಿ: ನಟ ಪುನೀತ್ ರಾಜಕುಮಾರ್ ತಮ್ಮ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದರು. ನೇತ್ರದಾನ ಮಾಡಿದ ಅಪ್ಪು ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿದ್ದು, ಈಗ ಅವರ ಅಭಿಮಾನಿ ದೇವರುಗಳು ಸಹ ಅಪ್ಪು ಮಾರ್ಗವನ್ನು ಅನುಸರಿಸಿದ್ದಾರೆ.

    ಯಾದಗಿರಿ ನಗರದ ಗಂಜ್ ಬಳಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಅಪಾರ ಅಭಿಮಾನಿಗಳು ಕೇವಲ ನೇತ್ರದಾನ ಮಾಡುವುದು ಮಾತ್ರವಲ್ಲದೆ, ದೇಹ ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಯಾದಗಿರಿ ನಗರದ ನಿವಾಸಿಗಳಾದ ಹನುಮಯ್ಯ ಹಾಗೂ ಮಲ್ಲಿಕಾರ್ಜುನ ದಂಪತಿ ದೇಹದಾನಕ್ಕೆ ನೊಂದಣಿ ಮಾಡಿಕೊಂಡಿದ್ದಾರೆ. 52 ಮಂದಿ ಅಪ್ಪು ಅಭಿಮಾನಿಗಳು ನೇತ್ರದಾನಕ್ಕೂ ಸಹ ನೋಂದಣಿ ಮಾಡಿಕೊಂಡಿದ್ದಾರೆ.

    ಅಪ್ಪು ಅಭಿಮಾನಿಗಳಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ರಾಯಚೂರಿನ ರಿಮ್ಸ್ ಆಸ್ಪತ್ರೆ ಸಹಯೋಗದಲ್ಲಿ ಅವರ ಅಭಿಮಾನಿಗಳು ಈ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ