Tag: Bob Cut

  • ಬಾಬ್ ಕಟ್ ಮಾಡಿಸಿಕೊಂಡು ಬಾಲಿಗೆ ಹಾರಿದ ನಟಿ ಸಮಂತಾ

    ಬಾಬ್ ಕಟ್ ಮಾಡಿಸಿಕೊಂಡು ಬಾಲಿಗೆ ಹಾರಿದ ನಟಿ ಸಮಂತಾ

    ನಾರೋಗ್ಯದ ಕಾರಣದಿಂದಾಗಿ ಸಿನಿಮಾ ರಂಗಕ್ಕೆ ಅಲ್ಪವಿರಾಮ ಹೇಳಿರುವ ನಟಿ ಸಮಂತಾ (Samantha), ಅಮೆರಿಕಾಗೆ ಹಾರುವ ಮುನ್ನ ಟೆಂಪಲ್ ರನ್ (Temple Run) ಮಾಡಿದ್ದರು. ಸ್ವಲ್ಪ ದಿನಗಳ ಕಾಲ ಸದ್ಗುರು ಆಶ್ರಮದಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಬಾಬ್ ಕಟ್ (Bob Cut) ಮಾಡಿಕೊಂಡು ಬಾಲಿಗೆ (Bali)  ಹಾರಿದ್ದಾರೆ. ಅಲ್ಲಷ್ಟು ದಿನಗಳನ್ನು ಕಳೆದು ಅವರು ಅಮೆರಿಕಾಗೆ ಹಾರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಇತರ ಭಕ್ತಾಧಿಗಳ ಜೊತೆಗೆ ನೆಲಹಾಸಿನ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ತಮ್ಮ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಕೆಲವು ಹೊತ್ತಿಗೆ ಮುಂಚೆ ಏನಾದರೂ ತಿರುವುತ್ತಾ, ಮುರಿಯುತ್ತಾ, ಮೈಯಿ ಕೆರೆಯುತ್ತಾ, ಯೋಚನೆಗಳ ಪ್ರವಾಹಗಳಲ್ಲಿ ಇರುತ್ತಿದ್ದೆ. ಇವುಗಳನ್ನು ಮಾಡದೆ ಸುಮ್ಮನೆ ಕೂರುವುದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿದ್ದೆ. ಆದರೆ ಇಂದು ಸತತವಾಗಿ ಧ್ಯಾನಮಗ್ನಳಾಗಿದ್ದೆ. ಧ್ಯಾನ ನನ್ನ ಶಕ್ತಿ ಎಂದು ಅರಿತುಕೊಂಡೆ. ಧ್ಯಾನ ನನ್ನ ಸಂವಹನ, ನನಗೆ ಸ್ಪಷ್ಟನೆಯನ್ನು ನೀಡುತ್ತದೆ ಎಂದು ಅರಿತುಕೊಂಡೆ. ಇಷ್ಟು ಸರಳವಾದ ಕಾರ್ಯವೊಂದರಲ್ಲಿ ಇಷ್ಟು ಶಕ್ತಿ ಅಡಗಿರುತ್ತದೆ ಎಂದು ತಿಳಿದಿರಲಿಲ್ಲ ಎಂದು ಸಮಂತಾ ಬರೆದುಕೊಂಡಿದ್ದಾರೆ.  ಇದನ್ನೂ ಓದಿ:ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?

    ವೈಯಕ್ತಿಕ ಜೀವನದ ಅದ್ಯಾವ ವಿಷಯವನ್ನೂ ಸಮಂತಾ ಮುಚ್ಚಿಡೋದೇ ಇಲ್ಲ. ಇದೀಗ ಶೂಟಿಂಗ್ ಇಲ್ಲದೇ ಇದ್ದಾಗ ದಿನಚರಿ ಹೇಗಿರುತ್ತೆ ಅನ್ನೋದ್ರ ಬಗ್ಗೆ ಸಮಂತಾ ಮನಬಿಚ್ಚಿದ್ದಾರೆ. ಬೆಳಗ್ಗೆ ಬೇಗ ಏಳುವುದು, ಬಳಿಕ ರುದ್ರಾಕ್ಷಿ ಹಿಡಿದು ಧ್ಯಾನ ಮಾಡುವುದು, ಬಳಿಕ ಯೋಗ. ಹೀಗೆ ಕಟ್ಟುನಿಟ್ಟಿನ ದಿನಚರಿಯನ್ನು ಅವರು ಅನುಸರಿಸುತ್ತಾರೆ.

     

    ಸಮಂತಾ ಅವರು ಸಿಟಾಡೆಲ್, ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ (Kushi) ಸಿನಿಮಾವನ್ನು ಮುಗಿಸಿಕೊಟ್ಟಿದ್ದಾರೆ. ಎರಡು ಪ್ರಾಜೆಕ್ಟ್‌ನಲ್ಲೂ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಜೊತೆಗಿನ ಡಿವೋರ್ಸ್, ಅನಾರೋಗ್ಯದ ಸಮಸ್ಯೆ ಇರೋದ್ರಿಂದ ಇದೆಲ್ಲದರಿಂದ ಅವರಿಗೆ ಬಿಡುವು ಬೇಕಾಗಿದೆ. ಆರೋಗ್ಯ ಮತ್ತು ಮನಸ್ಸಿಗೆ ರಿಲಾಕ್ಸೇಷನ್ ಬೇಕಾಗಿದೆ. ಹಾಗಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಅವರು ಬ್ಯುಸಿಯಾಗಿರುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀನು ವ್ಯಭಿಚಾರಿ, ನಿನ್ನ ಧ್ವನಿ ನಾಯಿಯಂತಿದೆ – ಮಹಿಳೆಗೆ ನೆರೆಮನೆಯರಿಂದ ಕಿರುಕುಳ

    ನೀನು ವ್ಯಭಿಚಾರಿ, ನಿನ್ನ ಧ್ವನಿ ನಾಯಿಯಂತಿದೆ – ಮಹಿಳೆಗೆ ನೆರೆಮನೆಯರಿಂದ ಕಿರುಕುಳ

    ಮುಂಬೈ: ಮಹಿಳೆಯೊಬ್ಬಳು ತನ್ನ ಕೂದಲನ್ನು ಕತ್ತರಿಸಿದ್ದಕ್ಕೆ ನೆರೆಮನೆಯವರಿಂದ ಕಿರುಕುಳಕ್ಕೆ ಒಳಗಾಗಿದ್ದಾಳೆ.

    ಸಂತ್ರಸ್ತೆಯು ಖಾಸಗಿ ಸಂಸ್ಥೆಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಡಿಸೆಂಬರ್‍ನಲ್ಲಿ ಮನೆ ಬದಲಾಯಿಸಿ ಅಪಾರ್ಟ್‍ಮೆಂಟ್ ನಲ್ಲಿ ವಾಸಿಸಲು ಆರಂಭಿಸಿದ್ದಾಳೆ. ಈ ವೇಳೆ 53 ವರ್ಷದ ಮಹಿಳೆಯೊಬ್ಬಳು ಸಂತ್ರಸ್ತೆ ನೋಡಲು ಮಂಗಳಮುಖಿಯಂತಿದ್ದಾಳೆ. ಆಕೆಯ ಧ್ವನಿ ನಾಯಿಯ ಧ್ವನಿಯಂತೆ ಇದೆ ಎಂದು ಹೇಳಿದ್ದಾಳೆ. ಇದರಿಂದ ಬೇಸರಗೊಂಡ ಸಂತ್ರಸ್ತೆ ಇದೀಗ ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಈ ವಿಚಾರವಾಗಿ ಸಂತ್ರಸ್ತೆಯ ವಕೀಲರಾದ ಸಿದ್ದೇಶ್ ಬೋರ್ಕರ್, ಮಹಿಳೆ ಸಂತ್ರಸ್ತೆ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದು, ಆಕೆಯನ್ನು ಮಂಗಳಮುಖಿ ಎಂದು ಅವಮಾನ ಮಾಡಿದ್ದಾಳೆ. ಸಂತ್ರಸ್ತೆಯು ಒಬ್ಬಂಟಿಯಾಗಿ ವಾಸಿಸುತ್ತಿರುವುದನ್ನೇ ಗುರಿಯಾಗಿಸಿಕೊಂಡು ಆರೋಪಿ ಆಕೆಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

    ಮನೆ ಬದಲಿಸಿ ಸಂತ್ರಸ್ತೆ ಮೊದಲು ಅಪಾರ್ಟ್‍ಮೆಂಟ್ ಗೆ ಬಂದಾಗ ಮಹಿಳೆ ಆಕೆಗೆ ತಿಂಡಿ ನೀಡುತ್ತಿದ್ದಳು. ಆದರೆ ಸಂತ್ರಸ್ತೆ ತಿಂಡಿ ಇಷ್ಟವಾಗುತ್ತಿಲ್ಲ ಎಂದು ತಿಳಿಸಿದಾಗ ಮಹಿಳೆ ಸಂತ್ರಸ್ತೆಗೆ ತಿಂಡಿ ನೀಡುವುದನ್ನು ನಿಲ್ಲಿಸಿ ಅಷ್ಟು ದಿನ ನೀಡಿದ ತಿಂಡಿಗೆ ಹಣ ಪಾವತಿಸುವಂತೆ ತಿಳಿಸಿದ್ದಳು. ಅಲ್ಲದೆ ಡಿಸೆಂಬರ್ 12 ರಂದು ಮಹಿಳೆ ಮನೆಯಲ್ಲಿ ಆಕೆಯ ಮಗ ಪಾರ್ಟಿಯನ್ನು ಆಯೋಜಿಸಿ ಜೋರು ವಾಲ್ಯೂಮ್ ನೀಡಿ ಮುಂಜಾನೆ 3ವರೆಗೂ ಮ್ಯೂಸಿಕ್ ಹಾಕಿದ್ದಾನೆ. ಮುಂಜಾನೆಯಾದರೂ ಮ್ಯೂಸಿಕ್ ನಿಲ್ಲದ ಕಾರಣ ಸಂತ್ರಸ್ತೆ ಮಹಿಳೆ ಮನೆಯ ಬಾಗಿಲು ತಟ್ಟಿ ವಾಲ್ಯೂಮ್ ಕಡಿಮೆ ಮಾಡಲು ವಿನಂತಿಸಿದ್ದಾಳೆ. ಆದರೆ ಸಂತ್ರಸ್ತೆ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ತದನಂತರ ಸಂತ್ರಸ್ತೆ ಆರೋಪಿ ಕುಟುಂಬದೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ.

    ಈ ಕಾರಣಕ್ಕೆ ಆರೋಪಿ ನನ್ನನ್ನು ಹುಚ್ಚಿ, ಪುರುಷ ಅಥವಾ ಮಹಿಳೆಯೋ ಎಂದು ಪ್ರಶ್ನಿಸಿದ್ದಾಳೆ. ಜೊತೆಗೆ ನನ್ನ ಧ್ವನಿ ನಾಯಿ ಧ್ವನಿಯನ್ನು ಹೋಲುತ್ತದೆ ಎಂದು ಹೇಳಿದ್ದಾಳೆ. ಜೊತೆಗೆ ನನ್ನನ್ನು ವೇಶ್ಯೆ ಎಂಬ ಅವಾಚ್ಯ ಪದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾಳೆ ಎಂದು ಸಂತ್ರಸ್ತೆ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾಳೆ.