Tag: Boats

  • ಗಂಗೊಳ್ಳಿಯಲ್ಲಿ ಅಗ್ನಿ ಅವಘಡ – ಹೊತ್ತಿ ಉರಿದ 7 ಬೋಟ್‍ಗಳು

    ಗಂಗೊಳ್ಳಿಯಲ್ಲಿ ಅಗ್ನಿ ಅವಘಡ – ಹೊತ್ತಿ ಉರಿದ 7 ಬೋಟ್‍ಗಳು

    ಉಡುಪಿ: ಅಗ್ನಿ ಅವಘಡದಿಂದಾಗಿ (Fire Accident) 7 ಮೀನುಗಾರಿಕಾ ಬೋಟ್‍ಗಳು (Boats) ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಗಂಗೊಳ್ಳಿಯಲ್ಲಿ (Gangolli) ನಡೆದಿದೆ.

    ದೀಪಾವಳಿ (Deepavali) ಪೂಜೆಯ ವೇಳೆ ಹಚ್ಚಿದ ಪಟಾಕಿಯಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ. ಬೈಂದೂರು ಹಾಗೂ ಗಂಗೊಳ್ಳಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ರವಾನೆ ಮಾಡಲಾಗಿದೆ. ದುರಂತದಲ್ಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಇದನ್ನೂ ಓದಿ: ಟೈಗರ್ 3 ಪ್ರದರ್ಶನ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್: ತಪ್ಪಿದ ಅನಾಹುತ

    ಬೋಟ್‍ಗಳನ್ನು ದುರಸ್ತಿ ಮತ್ತು ಪೇಂಟಿಂಗ್ ಕಾರ್ಯಕ್ಕೆ ದಡದಲ್ಲಿ ಇರಿಸಲಾಗಿತ್ತು. ಬೋಟ್‍ಗಳ ಮೇಲೆ ತೆಂಗಿನ ಗರಿಗಳನ್ನು ಹಾಸಲಾಗಿತ್ತು. ಆರಂಭದಲ್ಲಿ ಬೋಟ್ ಮೇಲೆ ಹಾಸಿದ್ದ ತೆಂಗಿನ ಗರಿಗಳಿಗೆ ಬೆಂಕಿ ತಗುಲಿದೆ. ಬಳಿಕ ಬೋಟ್‍ಗಳಿಗೆ ವ್ಯಾಪಿಸಿದ್ದು ಭಾರೀ ಪ್ರಮಾಣದ ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪಟಾಕಿಗೆ ಹೊಗೆಮಯವಾದ ಬೆಂಗ್ಳೂರು – ಎಲ್ಲೆಲ್ಲಿ ಎಷ್ಟು ವಾಯುಮಾಲಿನ್ಯ?

  • ಬೋಟ್ ಮಗುಚಿ 8 ಮಂದಿ ಮೀನುಗಾರರು ನಾಪತ್ತೆ

    ಬೋಟ್ ಮಗುಚಿ 8 ಮಂದಿ ಮೀನುಗಾರರು ನಾಪತ್ತೆ

    ಇಸ್ಲಾಮಾಬಾದ್: ಅರಬ್ಬಿ ಸಮುದ್ರದಲ್ಲಿ ಎರಡು ಮೀನುಗಾರಿಕಾ ಬೋಟ್‍ಗಳು ಮಗುಚಿ, 8 ಮಂದಿ ನಾಪತ್ತೆಯಾಗಿದ್ದಾರೆ.

    ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ ದೋಣಿಗಳು ದೇಶದ ದಕ್ಷಿಣ ಸಿಂಧ್ ಪ್ರಾಂತ್ಯದ ಥಟ್ಟಾ ಕರಾವಳಿ ಪ್ರದೇಶದ ಅರಬ್ಬಿ ಸಮುದ್ರದಲ್ಲಿ ಮುಳುಗಿವೆ. 8 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬಿಜೆಪಿಗೆ ಮತ್ತೊಂದು ಶಾಕ್‌ – ಗೋವಾ ಮಾಜಿ ಸಿಎಂ ಪರ್ಸೇಕರ್‌ ರಾಜೀನಾಮೆ

    ಇಬ್ರಾಹಿಂ ಹೈದರಿ ಪ್ರದೇಶದಿಂದ ಹೊರಟಿದ್ದ ಅಲ್-ಸಿದ್ದಿಕ್ ಮತ್ತು ಅಲ್-ಬಹ್ರಿಯಾ ಹೆಸರಿನ ಎರಡು ಮೀನುಗಾರಿಕಾ ದೋಣಿಗಳು ಮಗುಚಿವೆ. ರಕ್ಷಣಾ ಪಡೆಗಳು ಸುಮಾರು 25 ಮೀನುಗಾರರನ್ನು ರಕ್ಷಿಸಿದ್ದು, ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೃತ ವ್ಯಕ್ತಿಯ ದೇಹದ ಪಕ್ಕ ಸಿಕ್ತು 124 ಹಾವುಗಳು!

    ಥಟ್ಟಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿನ ಅತಿಯಾದ ಗಾಳಿಯೇ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲೇ ದ್ವಂದ್ವ – ನೈಟ್ ಕರ್ಫ್ಯೂ ಬಗ್ಗೆ ಡಿಕೆಶಿ, ಸಿದ್ದು ಭಿನ್ನ ಅಭಿಪ್ರಾಯ

  • ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ

    ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ

    ಅಮರಾವತಿ: ಮೀನುಗಾರರ 2 ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ 7 ಮಂದಿ ಗಾಯಗೊಂಡಿದ್ದು, 6 ದೋಣಿಗಳಿಗೆ ಬೆಂಕಿ ಹಚ್ಚಿ ಸುಟ್ಟಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

    ಬಂಗಾಳಕೊಲ್ಲಿಯ ನಿರ್ಬಂಧಿತ ಪ್ರದೇಶದಲ್ಲಿ ರಿಂಗ್ ನೆಟ್ ಬಳಕೆಗೆ ಸಂಬಂಧಿಸಿ ವಾದ ನಡೆದಿತ್ತು. ವಾದ ಮಿತಿ ಮೀರಿ ಪರಸ್ಪರ ಕಿತ್ತಾಟ ನಡೆದಿದೆ. ಜೊತೆಗೆ ಒಬ್ಬರ ದೋಣಿ ಮೇಲೆ ಇನ್ನೊಬ್ಬರು ದಾಳಿ ನಡೆಸಿದ್ದಾರೆ. ಇದರಿಂದಾಗಿ ಹಲವರು ದೋಣಿಯಿಂದ ಕೆಳಗೆ ಬಿದ್ದು ಗಾಯಗಳಾಗಿದೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು, ಮೀನುಗಾರರನ್ನು ಸಮಾಧಾನಪಡಿಸಿ ಹೆಚ್ಚಿನ ಅನಾಹುತಗಳನ್ನು ತಡೆದಿದ್ದಾರೆ.

    POLICE JEEP

    ಈ ಹಿಂದೆಯೂ ಸಾಂಪ್ರದಾಯಿಕ ಬಲೆ ಬಳಸುವ ಮೀನುಗಾರರು ಮತ್ತು ರಿಂಗ್ ನೆಟ್‌ಗಳನ್ನು ಬಳಸುವವರ ನಡುವೆ ಗಲಾಟೆ ನಡೆದಿತ್ತು. ಕರಾವಳಿಯ 8 ಕಿಮೀ ವ್ಯಾಪ್ತಿಯಲ್ಲಿ ರಿಂಗ್ ನೆಟ್ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಆದರೂ ಇದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಈ ಬಗ್ಗೆ ಪೊಲೀಸ್ ಕಮಿಷನರ್ ಮನೀಶ್ ಕುಮಾರ್ ಸಿನ್ಹಾ ಮಾತನಾಡಿ, ಗಲಾಟೆ ನಡೆದ ವಾಸವಾನಿಪಾಲೆಂ ಮತ್ತು ಜಲಾರಿಪೇಟಾ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

    ಸಾಂಪ್ರದಾಯಿಕ ಮೀನುಗಾರರು ಈ ಬಲೆಗಳ ಬಳಕೆಯನ್ನು ವಿರೋಧಿಸುತ್ತಾರೆ. ಏಕೆಂದರೆ ಅದು ಸುತ್ತಲಿರುವ ಎಲ್ಲಾ ಮೀನುಗಳನ್ನು ಸೆರೆಹಿಡಿಯುತ್ತದೆ. ಇದರಿಂದಾಗಿ ಸ್ಥಳೀಯ ಮೀನುಗಾರರಿಗೆ ನಷ್ಟವಾಗುತ್ತದೆ. ಇದರಿಂದಾಗಿ 2020ರ ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶ ಸರ್ಕಾರವು ರಿಂಗ್ ನೆಟ್‌ಗಳನ್ನು ಬಳಸುವುದನ್ನು ನಿಷೇಧಿಸಿತ್ತು. ಇದನ್ನೂ ಓದಿ: ಆಸ್ತಿ ವಿವಾದಕ್ಕೆ 70ರ ತಂದೆಯ ಕತ್ತು ಸೀಳಿ ಹತ್ಯೆಗೈದ ಮಗ

  • ಭಟ್ಕಳದಿಂದ ಬಂದ ಬೋಟುಗಳನ್ನು ತಂಗಲು ಬಿಡದ ಗಂಗೊಳ್ಳಿ ಜನ

    ಭಟ್ಕಳದಿಂದ ಬಂದ ಬೋಟುಗಳನ್ನು ತಂಗಲು ಬಿಡದ ಗಂಗೊಳ್ಳಿ ಜನ

    – ಗಂಗೊಳ್ಳಿ ಬಂದರಲ್ಲಿ ಮೀನುಗಾರರ ಜಟಾಪಟಿ

    ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಜಟಾಪಟಿ ನಡೆದಿದ್ದು, ಭಟ್ಕಳದಿಂದ ಬಂದ ದೋಣಿಗಳನ್ನು ವಾಪಾಸ್ ಕಳುಹಿಸಲಾಗಿದೆ.

    ಪರ್ಷಿಯನ್ ಮಾದರಿಯ ಎಂಟು ದೋಣಿಗಳು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಿಂದ ಗಂಗೊಳ್ಳಿಗೆ ಬಂದಿದ್ದವು. ಲಾಕ್‍ಡೌನ್ ಇರುವ ಸಂದರ್ಭದಲ್ಲಿ ಬೋಟ್ ಬಂದಿರೋದರಿಂದ ಗಂಗೊಳ್ಳಿ ಮತ್ತು ಭಟ್ಕಳದ ಮೀನುಗಾರರ ನಡುವೆ ವಾಗ್ವಾದ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹಲವು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಉಡುಪಿಗೂ ಅದನ್ನು ಹರಿಸಬೇಡಿ ಎಂದು ಮೀನುಗಾರರು ತಗಾದೆ ತೆಗೆದಿದ್ದಾರೆ. ಪರ್ಶಿಯನ್ ದೋಣಿಗಳನ್ನು ಬಂದರಿನಲ್ಲಿ ಲಂಗರು ಹಾಕಲು ಇಲ್ಲಿನ ಮೀನುಗಾರರು ಅಡ್ಡಿಪಡಿಸಿದ್ದಾರೆ. ಪರ್ಶಿಯನ್ ಬೋಟ್ ನಲ್ಲಿ ಹೊರ ರಾಜ್ಯದ ಕಾರ್ಮಿಕರು ಇದ್ದರು ಎಂಬುದು ಜಗಳಕ್ಕೆ ಮೂಲ ಕಾರಣವಾಗಿತ್ತು. ಜಗಳ ತಾರಕಕ್ಕೇರುತ್ತಿದ್ದಂತೆ ಸ್ಥಳೀಯ ಮೀನುಗಾರಿಕಾ ಅಧಿಕಾರಿಗಳು ಬಂದರಿಗೆ ದೌಡಾಯಿಸಿದ್ದಾರೆ. ಲಾಕ್‍ಡೌನ್ ಸಂಪೂರ್ಣವಾಗಿ ತೆರವು ಆಗುವ ತನಕ, ಮೀನುಗಾರಿಕೆ ಆರಂಭವಾಗುವವರೆಗೆ ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಯ ದೋಣಿಗಳು ಎಲ್ಲೂ ಸಂಚರಿಸಬಾರದು ಎಂದು ಮೀನುಗಾರರು ಒತ್ತಾಯಿಸಿದರು.

    ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಅಂಜನಾದೇವಿ ಮಾತನಾಡಿ, ಗಂಗೊಳ್ಳಿ ಬಂದರಿಗೆ ಭಟ್ಕಳದಿಂದ ಎಂಟು ದೋಣಿಗಳು ಬರುತ್ತಿವೆ ಎಂಬ ಮಾಹಿತಿ ಬಂತು. ತಕ್ಷಣ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದೆ. ಸುಮಾರು ಇಪ್ಪತ್ತು ಮಂದಿ ಹೊರ ರಾಜ್ಯದ ಮತ್ತು ಹೊರ ಜಿಲ್ಲೆಯ ಮೀನುಗಾರರು ಇರುವುದು ನಮಗೆ ಗೊತ್ತಾಗಿದೆ. ಅವರೆಲ್ಲರ ಮಾಹಿತಿಗಳನ್ನು ಕಲೆ ಹಾಕಿದ್ದೇವೆ. ದೋಣಿಗಳ ಸಮೇತ ಅವರನ್ನು ವಾಪಸ್ ಕಳುಹಿಸಿದ್ದೇವೆ. ಉತ್ತರ ಕನ್ನಡ ಜಿಲ್ಲೆಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ರವಾನಿಸುತ್ತೇನೆ ಎಂದರು.