Tag: boat

  • ಬಿರುಗಾಳಿ ಸಹಿತ ಮಳೆಗೆ ಬೋಟ್ ಮುಳುಗಡೆ- 15 ಜನರ ರಕ್ಷಣೆ

    ಬಿರುಗಾಳಿ ಸಹಿತ ಮಳೆಗೆ ಬೋಟ್ ಮುಳುಗಡೆ- 15 ಜನರ ರಕ್ಷಣೆ

    ಕಾರವಾರ: ರಾಜ್ಯದ ಹಲವೆಡೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಇದರಿಂದಾಗಿ ಹಲವೆಡೆ ಅನುಆಹುತಗಳು ಸಂಭವಿಸಿವೆ. ಅದೇ ರೀತಿ ಉತ್ತರ ಕನ್ನಡದ ಹೊನ್ನಾವರ ಸಮೀಪ ಬಿರುಗಾಳಿ ಸಹಿತ ಭಾರೀ ಮಳೆಗೆ ಆಳ ಸಮುದ್ರದಲ್ಲಿ ಬೋಟ್ ಮುಳುಗಡೆಯಾಗಿದ್ದು, 15 ಮೀನುಗಾರರನ್ನು ರಕ್ಷಿಸಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಹೊನ್ನಾವರ, ಶಿರಸಿ, ಸಿದ್ದಾಪುರ ಭಾಗದಲ್ಲಿ ಗಾಳಿ ಸಹಿತ ಅಬ್ಬರದ ಮಳೆ ಸುರಿದಿದ್ದು, ಗಾಳಿ ಅಬ್ಬರಕ್ಕೆ ಆಳ ಸಮುದ್ರದಲ್ಲಿ ಬೋಟ್ ಮುಳುಗಡೆಯಾಗಿ ಅದರಲ್ಲಿದ್ದ ಹದಿನೈದು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಹೊನ್ನಾವರ ಬಂದರಿನಿಂದ 40 ನಾಟಿಕಲ್ ಮೈಲು ದೂರದಲ್ಲಿ ಘಟನೆ ನೆಡೆದಿದ್ದು ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ದುರ್ಗಾ ಭೈರವಿ ಎನ್ನುವ ಬೋಟ್ ಮುಳುಗಡೆಯಾಗಿದೆ.

    ಆಳ ಸಮುದ್ರದಲ್ಲಿ ಗಾಳಿ ರಭಸ ಹೆಚ್ಚಾಗಿದ್ದರಿಂದ ಮುಳುಗಡೆಯಾಗಿದೆ. ಮುಳುಗುತ್ತಿದ್ದ ಬೋಟ್ ನಲ್ಲಿದ್ದ ಹದಿನೈದು ಮೀನುಗಾರರನ್ನು ಮತ್ತೊಂದು ಮೀನುಗಾರಿಕಾ ಬೋಟ್‍ನವರು ರಕ್ಷಿಸಿದ್ದಾರೆ.

  • ಕೋಲ್ಕತ್ತಾದಲ್ಲಿ ಮೊದಲ ದೋಣಿ ಗ್ರಂಥಾಲಯ ಆರಂಭ

    ಕೋಲ್ಕತ್ತಾದಲ್ಲಿ ಮೊದಲ ದೋಣಿ ಗ್ರಂಥಾಲಯ ಆರಂಭ

    ಕೋಲ್ಕತ್ತಾ: ರಾಜ್ಯದಲ್ಲಿ ದೋಣಿಯಲ್ಲಿ ಪ್ರಯಾಣಿಸುವಾಗ ಸಮಯವನ್ನು ಓದಿನಲ್ಲಿ ಕಳೆಯಲೆಂದು ಮಕ್ಕಳಿಗಾಗಿ ದೋಣಿಯಲ್ಲಿ ಲೈಬ್ರರಿಯನ್ನು ತೆರೆಯುವ ಮೂಲಕ ಸಾರಿಗೆ ನಿಗಮವು ಹೊಸ ಪ್ರಯತ್ನಕ್ಕೆ ಮುಂದಾಗಿದೆ.

     

    ದೋಣಿಯಲ್ಲಿ ಪ್ರಯಾಣ ಬೆಳೆಸುವ ಮಕ್ಕಳಿಗಾಗಿ 500 ಬೇರೆ ಬೇರೆ ಹೆಸರಾಂತ ಲೇಖಕರ ಪುಸ್ತಕಗಳನ್ನು ಹೊಂದಿದ ಲೈಬ್ರರಿಯನ್ನು ಕೊಲ್ಕತ್ತಾದ ಸಾರಿಗೆ ನಿಗಮ ಮತ್ತು ಸ್ಥಳೀಯ ಪುಸ್ತಕ ಮಳಿಗೆಯ ಕೂಡುವಿಕೆಯಲ್ಲಿ ದೋಣಿಯಲ್ಲೇ ಪ್ರಾರಂಭಿಸಿದೆ.

    ಈ ಗ್ರಂಥಾಲಯ ಸ್ಥಾಪನೆಯ ಮುಖ್ಯ ಉದ್ದೇಶ ಏನೆಂದರೆ ಹೊಗ್ಲಿ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುವಾಗ ಕೊಲ್ಕತ್ತಾದ ವಿಶೇಷತೆಯನ್ನು ತಿಳಿಸುವ ಸಣ್ಣ ಪ್ರಯತ್ನ ಇದಾಗಿದ್ದು, ದೋಣಿಯಲ್ಲಿ ಸಂಚರಿಸುವ ಮಕ್ಕಳಿಗಾಗಿ 500 ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಇಟ್ಟಿದ್ದೇವೆ. ಇದು ಇಂಗ್ಲೀಷ್ ಮತ್ತು ಬೆಂಗಾಳಿ ಭಾಷೆಯಲ್ಲಿದೆ. ಮಿಲೇನಿಯಮ್ ಪಾರ್ಕ್ ನಿಂದ ಬೇಲೂರು ಮಠ ಜೆಟ್ಟಿಗೆ ಪ್ರಯಾಣಿಸಲು 3 ಗಂಟೆಯ ಬೇಕಾಗುತ್ತದೆ ಈ ಹೊತ್ತನ್ನು ಓದಿನಲ್ಲಿ ಕಳೆಯಲಿ ಎಂಬ ಉದ್ದೇಶವನ್ನು ಹೊಂದಿದ್ದೇವೆ. ಪ್ರತಿದಿನ ದೋಣಿಯು ಮೂರು ಬಾರಿ ಈ ಮಾರ್ಗವಾಗಿ ಸಂಚರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದೋಣಿ ಲೈಬ್ರರಿಯಲ್ಲಿ ಮಕ್ಕಳಿಗೆ 50 ರೂಪಾಯಿ ಮತ್ತು ಹಿರಿಯರಿಗೆ 100 ರೂಪಾಯಿ ಟಿಕೆಟ್ ದರವನ್ನು ನಿಗದಿ ಪಡಿಸಲಾಗಿದೆ. ಈ ಪುಸ್ತಕಗಳ ಪೈಕಿ ಕಥೆ, ಕಾದಂಬರಿ, ಮತ್ತು ಕವನಗಳನ್ನು ಹೊಂದಿರುವ ಪುಸ್ತಕಗಳನ್ನು ಪ್ರಯಾಣಿಕರಿಗಾಗಿ ಕಲ್ಪಿಸಿಕೊಟ್ಟಿದ್ದಾರೆ. ಇದರೊಂದಿಗೆ ದೋಣಿಯಲ್ಲಿ ಉಚಿತ ವೈಫೈ ಸೌಲಭ್ಯವು ಇದೆ.

  • ತಳಭಾಗದ ಫೈಬರ್ ಒಡೆದು ಬೋಟ್ ಮುಳುಗಡೆ – 8 ಮಂದಿಯ ರಕ್ಷಣೆ

    ತಳಭಾಗದ ಫೈಬರ್ ಒಡೆದು ಬೋಟ್ ಮುಳುಗಡೆ – 8 ಮಂದಿಯ ರಕ್ಷಣೆ

    ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್ ನ ತಳಭಾಗದಲ್ಲಿ ಫೈಬರ್ ಒಡೆದು ಸಮುದ್ರದಲ್ಲಿ ಮುಳುಗುತ್ತಿರುವ 8 ಮಂದಿ ಮೀನುಗಾರರನ್ನು ಇಂದು ರಾತ್ರಿ ಕರಾವಳಿ ಕಾವಲುಪಡೆ ಪೊಲೀಸರು ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

    ಉಡುಪಿಯ ಮಲ್ಪೆ ಮೂಲದ ಶ್ರೀ ಸೌಪರ್ಣಿಕ ಎಂಬ ಹೆಸರಿನ ಬೋಟ್ ಇದಾಗಿದ್ದು ಭಾನುವಾರ ಮೀನುಗಾರಿಕೆಗೆ ಕಾರವಾರ ಭಾಗದ ಅರಬ್ಬಿ ಸಮುದ್ರಕ್ಕೆ ತೆರಳಿತ್ತು. ಈ ವೇಳೆ ತಳಭಾಗದಲ್ಲಿ ಫೈಬರ್ ಒಡೆದು ಹೋಗಿದ್ದು ಬೋಟ್ ಮುಳುಗುವ ಹಂತ ತಲುಪಿತ್ತು. ಇದೇ ಸಂದರ್ಭದಲ್ಲಿ ಬೋಟ್ ನಲ್ಲಿದ್ದ ಮೀನುಗಾರರು ರಕ್ಷಣೆಗಾಗಿ ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ತಕ್ಷಣ ಸ್ಥಳಕ್ಕೆ ಆಗಮಿಸಿದ ಕರಾವಳಿ ಕಾವಲು ಪಡೆಯ ನಿಶ್ಚಲ್ ಕುಮಾರ್ ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ನ ಅಸಿಸ್ಟೆಂಟ್ ಕಮಾಂಡೆಂಟ್ ಶಶಾಂಕ್ ಕುಮಾರ್ ರವರ ತಂಡ ಬೋಟ್ ಹಾಗೂ ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

  • ಮಂಗಳೂರಿನಲ್ಲಿ ಮೀನುಗಾರಿಕಾ ಬೋಟ್ ದುರಂತ – 6 ಜನ ನಾಪತ್ತೆ, ಇಬ್ಬರ ಮೃತದೇಹ ಪತ್ತೆ

    ಮಂಗಳೂರಿನಲ್ಲಿ ಮೀನುಗಾರಿಕಾ ಬೋಟ್ ದುರಂತ – 6 ಜನ ನಾಪತ್ತೆ, ಇಬ್ಬರ ಮೃತದೇಹ ಪತ್ತೆ

    ಮಂಗಳೂರು: ಸಮುದ್ರ ಮಧ್ಯೆ ನಡೆದ ಬೋಟ್ ದುರಂತದಲ್ಲಿ ಆರು ಮಂದಿ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ದಕ್ಕೆಯಿಂದ ನಿನ್ನೆ ಮುಂಜಾನೆ ಮೀನುಗಾರಿಕೆಗೆ ತೆರಳಿದ್ದ ಶ್ರೀರಕ್ಷಾ ಹೆಸರಿನ ಪರ್ಸೀನ್ ಬೋಟ್ ದುರಂತಕ್ಕೀಡಾಗಿದೆ. 25 ಜನರ ತಂಡ ಪರ್ಸೀನ್ ಬೋಟ್‍ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಇನ್ನೇನು ಮೀನುಗಾರಿಕೆ ಮುಗಿಸಿ ವಾಪಾಸು ದಡಕ್ಕೆ ಆಗಮಿಸುತ್ತಿದ್ದರು. ತಡರಾತ್ರಿ ಮೀನು ತುಂಬಿಸಿಕೊಂಡು ವಾಪಸ್ ಬರುವಾಗ ಅಳಿವೆ ಬಾಗಿಲು ಸಮೀಪ ಬೋಟು ತಿರುವು ಪಡೆಯುವ ವೇಳೆ ಪಲ್ಟಿಯಾಗಿದೆ.

    ಘಟನೆಯಲ್ಲಿ ಆರು ಜನ ಕಣ್ಮರೆಯಾಗಿದ್ದರೆ, 19 ಜನ ಇನ್ನೊಂದು ಸಣ್ಣ ಡಿಂಕಿ ಬೋಟ್ ಮೂಲಕ ದಡ ಸೇರಿದ್ದಾರೆ. ನಾಪತ್ತೆಯಾದ ಎಲ್ಲರೂ ಮಂಗಳೂರು ಮೂಲದವರೆ ಆಗಿದ್ದಾರೆ. ಬೋಟ್ ಸಂಪೂರ್ಣ ಪಲ್ಟಿಯಾಗಿದ್ದರಿಂದ ಮೀನುಗಾರರಿಗೆ ವೈಯರ್ ಲೆಸ್ ಮೂಲಕ ರಕ್ಷಣೆಗೆ ಸಂದೇಶ ನೀಡುವುದಕ್ಕೆ ಸಾಧ್ಯವಾಗಿಲ್ಲ. ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮುಳುಗುತಜ್ಞರು, ಕೋಸ್ಟಲ್ ಗಾರ್ಡ್ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

    ಸದ್ಯ ನಾಪತ್ತೆಯಾಗಿರುವ ಆರು ಜನರಲ್ಲಿ ಬೊಕ್ಕಪಟ್ನ ನಿವಾಸಿಗಳಾದ ಪ್ರೀತಂ, ಪಾಡುರಂಗ ಸುವರ್ಣ ಎಂಬವರ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ನಾಲ್ಕೂ ಜನ ಝಿಯಾವುಲ್ಲ, ಅನ್ಸಾರ್, ಹಸೈನಾರ್, ಚಿಂತನ್‍ಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಘಟನೆಯಿಂದಾಗಿ ಕಡಲಮಕ್ಕಳು ಆತಂಕಕ್ಕೀಡಾಗಿದ್ದಾರೆ. ಮೃತ ಕುಟಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇವರನ್ನೇ ನಂಬಿದ್ದ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂಬ ಒತ್ತಾಯವು ಕೇಳಿಬಂದಿದೆ.

  • ಭಾರೀ ಅಲೆಗಳ ಹೊಡೆತಕ್ಕೆ ಬೋಟ್ ಪಲ್ಟಿ- 22 ಜನರಲ್ಲಿ 6 ಮಂದಿ ನಾಪತ್ತೆ

    ಭಾರೀ ಅಲೆಗಳ ಹೊಡೆತಕ್ಕೆ ಬೋಟ್ ಪಲ್ಟಿ- 22 ಜನರಲ್ಲಿ 6 ಮಂದಿ ನಾಪತ್ತೆ

    ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಗೊಂಡು 6 ಮಂದಿ ನಾಪತ್ತೆಯಾಗಿದ್ದಾರೆ.

    ಪಣಂಬೂರಿನಿಂದ ಹಲವು ನಾಟಿಕಲ್ ದೂರದಲ್ಲಿ ಮಂಗಳೂರಿನ ಬೋಳಾರದ ಶ್ರೀರಕ್ಷಾ ಹೆಸರಿನ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬೋಟ್ ನಲ್ಲಿ 22 ಮಂದಿ ಇದ್ದು, ಇದರಲ್ಲಿ 6 ಮಂದಿ ನಾಪತ್ತೆಯಾಗಿದ್ದಾರೆ.

    ನಿನ್ನೆ ಸಂಜೆ 6.30ರ ಸುಮಾರಿಗೆ ಹಿಡಿದ ಮೀನನ್ನು ತುಂಬಿಸುವ ವೇಳೆ ಭಾರೀ ಅಲೆಗಳ ಹೊಡೆತಕ್ಕೆ ಬೋಟ್ ಪಲ್ಟಿಯಾಗಿದೆ. ಬೋಟ್ ನಲ್ಲಿದ್ದವರು ಉಳ್ಳಾಲ, ಮಂಗಳೂರು ಹಾಗೂ ತಮಿಳುನಾಡು ಮೂಲದ ಮೀನುಗಾರರು ಎಂಬ ಮಾಹಿತಿ ಲಭಿಸಿದೆ.

    ದುರಂತದ ಮಾಹಿತಿ ಅರಿತ ಕೂಡಲೇ ನಾಪತ್ತೆಯಾದ ಮೀನುಗಾರರ ರಕ್ಷಣೆಗೆ ಹಲವು ಬೋಟ್ ಗಳು ಸ್ಥಳಕ್ಕೆ ದೌಡಾಯಿಸಿದವು. ಅಲ್ಲದೆ ಮೀನುಗಾರರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿತ್ತು.

  • ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ಜೋಡಿ ಸಾವು – ಕಾರಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು

    ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ಜೋಡಿ ಸಾವು – ಕಾರಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು

    ಮೈಸೂರು: ಇತ್ತೀಚೆಗೆ ನವಜೋಡಿಯೊಂದು ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ನೀರಿಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರತ್ಯಕ್ಷದರ್ಶಿಗಳು ಅದರ ಕಾರಣ ಬಿಚ್ಚಿಟ್ಟಿದ್ದಾರೆ.

    ಹೌದು. ಪೊಲೀಸರ ಮುಂದೆ ಪ್ರತ್ಯಕ್ಷದರ್ಶಿಗಳು ತಮ್ಮ ಹೇಳಿಕೆ ದಾಖಲಿಸಿದ್ದು, ಹೀಲ್ಡ್ ಚಪ್ಪಲಿ ಹಾಗೂ ಭಾರವಾದ ಡ್ರೆಸ್ ಧರಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಜೋಡಿ ಫೋಟೋಶೂಟ್ ವೇಳೆ ಏಕಾಏಕಿ ತೆಪ್ಪ ಮಗುಚಿ ಬಿದ್ದಿದೆ. ತೆಪ್ಪ ಮಗುಚಲು ಹೀಲ್ಡ್ ಚಪ್ಪಲಿ, ಭಾರದ ಡ್ರೆಸ್ ಕೂಡ ಕಾರಣ ಎಂದು ಅವರು ಪೊಲೀಸರ ಮುಂದೆ ವಿವರಿಸಿದ್ದಾರೆ.

    ಮೈಸೂರಿನಿಂದ ಫೋಟೋಶೂಟ್‍ಗಾಗಿ ಮುಡುಕುತೊರೆಗೆ ಆಗಮಿಸಿದ್ದ ಜೋಡಿ, ನದಿ ನೋಡಿದ ಮೇಲೆ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ನಿರ್ಧಾರ ಮಾಡಿದರು. ಹೀಗಾಗಿ ಹೈಹೀಲ್ಡ್ ಚಪ್ಪಲಿ ಹಾಕಿಕೊಂಡು ತೆಪ್ಪ ಹತ್ತಿದ ಶಶಿಕಲಾ, ಕೆಲಕಾಲ ನಿಂತುಕೊಂಡೇ ಇದ್ದರು. ನಂತರ ಕುಳಿತುಕೊಳ್ಳಲು ಹೋದಾಗ ಹೀಲ್ಡ್ ಚಪ್ಪಲಿ ಸ್ಲಿಪ್ ಆಗಿದ್ದು, ತೆಪ್ಪ ಏಕಾಏಕಿ ಮಗುಚಿದೆ. ಪರಿಣಾಮ ಈಜುಬಾರದೆ ಚಂದ್ರು ಹಾಗೂ ಶಶಿಕಲಾ ಇಬ್ಬರೂ ಮೃತಪಟ್ಟಿದ್ದಾರೆ.

    ಘಟನೆ ಸಂಬಂಧ ಫೋಟೋಗ್ರಾಫರ್ ಕೀರ್ತಿ, ನಾವಿಕ ಮೂಗಪ್ಪ ಮೇಲೂ ಪ್ರಕರಣ ದಾಖಲು ಮಾಡಲಾಗಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ – ತೆಪ್ಪ ಮುಳುಗಿ ನವಜೋಡಿ ಸಾವು

  • ನಿಷೇಧವಿದ್ರೂ ಹಣಕ್ಕಾಗಿ ಕಾವೇರಿ ನದಿಯಲ್ಲಿ ಡೇಂಜರಸ್ ತೆಪ್ಪದ ಸವಾರಿ!

    ನಿಷೇಧವಿದ್ರೂ ಹಣಕ್ಕಾಗಿ ಕಾವೇರಿ ನದಿಯಲ್ಲಿ ಡೇಂಜರಸ್ ತೆಪ್ಪದ ಸವಾರಿ!

    – ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ

    ಚಾಮರಾಜನಗರ: ಕೊರೊನಾ ಭಯ, ಲಾಕ್‍ಡೌನ್‍ನಿಂದ ಕಳೆದ ಏಳೆಂಟು ತಿಂಗಳಿನಿಂದ ಮನೆಯಲ್ಲಿಯೇ ಇದ್ದ ಜನ ಈಗ ಪ್ರವಾಸಿ ತಾಣಗಳತ್ತ ಮುಖ ಮಾಡ್ತಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗ ದಂಡೇ ನೆರೆದಿದೆ. ಮೋಜು ಮಸ್ತಿಯ ಮೂಡ್‍ನಲ್ಲಿರೋ ಜನ ಕೊಂಚ ಮೈಮರೆತಂತೆ ಕಾಣುತ್ತಿದೆ. ಇದನ್ನೇ ಬಂಡವಾಳ ಮಾಡ್ಕೊಂಡಿರೋರು ಜನರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ.

    ಹೌದು. ಕಾವೇರಿ ಮೈದುಂಬಿ ಹರಿಯುತ್ತಿದ್ದು ಕೊಳ್ಳೆಗಾಲದ ಭರಚುಕ್ಕಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಇಲ್ಲಿನವರು ಪ್ರವಾಸಿಗರಿಗೆ ತೆಪ್ಪದ ಸವಾರಿ ನಡೆಸುತ್ತಿದ್ದಾರೆ. ಭರಚುಕ್ಕಿ, ಮಧ್ಯರಂಗನಾಥಸ್ವಾಮಿ, ಶಿಂಷಾದ ಮಾರಮ್ಮ, ವೆಸ್ಲಿ ಸೇತುವೆ ವೀಕ್ಷಣೆಗೆ ಬರುವ ಪ್ರವಾಸಿಗರು ತೆಪ್ಪದ ಸವಾರಿ ಮಾಡ್ತಿದ್ದಾರೆ.

    ಕೆಲವು ವರ್ಷಗಳ ಹಿಂದೆಯೇ ಇಲ್ಲಿ ತೆಪ್ಪದ ಸವಾರಿಯನ್ನು ನಿಷೇಧಿಸಲಾಗಿದೆ. ಆದರೆ ಇದನ್ನು ಲೆಕ್ಕಿಸದ ಕೆಲವರು ತೆಪ್ಪದ ಸವಾರಿ ನಡೆಸುತ್ತಿದ್ದಾರೆ. ತೆಪ್ಪವೇರೋ ಪ್ರವಾಸಿಗರಿಗೆ ಲೈಫ್ ಜಾಕೆಟ್‍ಗಳನ್ನು ಕೊಡ್ತಿಲ್ಲ. ಸ್ವಲ್ಪ ಹೆಚ್ಚುಕಡಿಮೆಯಾದ್ರೂ ಕಾವೇರಿಯಲ್ಲಿ ಲೀನವಾಗೋದು ಗ್ಯಾರೆಂಟಿಯಾಗಿದೆ. ಇದನ್ನೂ ಓದಿ: ಪ್ರವಾಸಿಗರ ಚೆಲ್ಲಾಟ ಪೊಲೀಸರಿಗೆ ಸಂಕಟ – ಕೊರೊನಾಗೆ ಡೋಂಟ್‍ಕೇರ್, ಬಿಂದಾಸ್ ಮಸ್ತಿ

    ವಿಷಯ ತಿಳಿದ ಬಳಿಕ ಎಚ್ಚೆತ್ತ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕಾನೂನು ಬಾಹಿರವಾಗಿ ತೆಪ್ಪ ನಡೆಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇನ್ನಾದರೂ ಡೇಂಜರ್ ತೆಪ್ಪದ ಸವಾರಿಗೆ ಬ್ರೇಕ್ ಬೀಳಬೇಕಿದೆ. ಪ್ರವಾಸದ ಜೋಶ್‍ನಲ್ಲಿರೋ ಜನ ಸಹ ಪ್ರವಾಸಿಸ್ಥಳಗಳಲ್ಲಿನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಗಮನ ಹರಿಸಬೇಕಿದೆ.

  • ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಪುಟ್ಟ ಕಂದಮ್ಮನ ರಕ್ಷಣೆ

    ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಪುಟ್ಟ ಕಂದಮ್ಮನ ರಕ್ಷಣೆ

    ಯಾದಗಿರಿ: ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಪುಟ್ಟ ಕಂದಮ್ಮನನ್ನು ರಕ್ಷಣೆ ಮಾಡಲಾಗಿದೆ.

    ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ರೋಜಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಭೀಮಾ ನದಿ ಹಿನ್ನೀರು ಗ್ರಾಮ ನಡುಗಡ್ಡೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬೋಟ್ ಮೂಲಕ ಸಂಚಾರ ಮಾಡುತ್ತಿದ್ದರು.

    ಹೀಗೆ ರಜಿಯಾ ಬೇಗಂ ಅವರು ಕೂಡ ತನ್ನ ಪುಟ್ಟ ಮಗುವಿನೊಂದಿಗೆ ತೆಪ್ಪದಲ್ಲಿ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ ಏಕಾಏಕಿ ತೆಪ್ಪ ಅಲುಗಾಡಿ ಮಗು ರಜಿಯಾ ಅವರ ಕೈಯಿಂದ ಜಾರಿ ಬಿದ್ದು, ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿತ್ತು.

    ಕೂಡಲೇ ತೆಪ್ಪ ನಡೆಸುವವರ ಗಮನಕ್ಕೆ ಬಂದಿದ್ದು, ಅವರ ಸಮಯ ಪ್ರಜ್ಞೆಯಿಂದ ಮಗುವನ್ನು ರಕ್ಷಣೆ ಮಾಡಿ ತಾಯಿಯ ಮಡಿಲಿಗೆ ಒಪ್ಪಿಸಲಾಗಿದೆ.

  • ಮೀನುಗಾರಿಕೆ ದೋಣಿ ಮುಳುಗಡೆ- ಅಚ್ಚರಿ ರೀತಿಯಲ್ಲಿ 7 ಮೀನುಗಾರರು ಪಾರು

    ಮೀನುಗಾರಿಕೆ ದೋಣಿ ಮುಳುಗಡೆ- ಅಚ್ಚರಿ ರೀತಿಯಲ್ಲಿ 7 ಮೀನುಗಾರರು ಪಾರು

    ಕಾರವಾರ: ಮರಳುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ನದಿಯಲ್ಲಿ ಮುಳುಗಿದ ಘಟನೆ ನಡೆದಿದ್ದು, ಅಚ್ಚರಿ ರೀತಿಯಲ್ಲಿ 7 ಮೀನುಗಾರರನ್ನು ರಕ್ಷಿಸಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಘಟನೆ ನಡೆದಿದೆ. ತಾಲೂಕಿನ ಮಾನೀರ್ ಗ್ರಾಮದ ಸಮೀಪ ಅಘನಾಶಿನಿ ನದಿಯಲ್ಲಿ ಈ ಅವಘಡ ಸಂಭವಿಸಿದ್ದು, ದೋಣಿಯಲ್ಲಿದ್ದ 7 ಮಂದಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತರರ ಮೀನುಗಾರರೇ ಅವರನ್ನು ರಕ್ಷಿಸುವ ಮೂಲಕ ಜೀವ ಉಳಿಸಿದ್ದಾರೆ. ಸದ್ಯ ಯಾವುದೇ ದುರ್ಘಟನೆ ನಡೆಯದಂತೆ ಪಾರಾಗಿದ್ದಾರೆ.

    ತಾಲೂಕಿನ ದೀವಗಿಯ ನಿತ್ಯ ಅಂಬಿಗ ಅವರಿಗೆ ಸೇರಿದ ದೋಣಿ ಇದಾಗಿದ್ದು, ಬೆಳಗ್ಗೆ ಎಂದಿನಂತೆ ಮರಳುಗಾರಿಕೆಗೆ ತೆರಳಿದ್ದರು. ಈ ವೇಳೆ ದೋಣಿಯ ಮೇಲೆ ಭಾರ ಹೆಚ್ಚಾದ ಪರಿಣಾಮ ನದಿಯಲ್ಲಿ ಮಗುಚಿದೆ. ಈ ವೇಳೆ ದೋಣಿಯಲ್ಲಿದ್ದ 7 ಜನ ನದಿಯಲ್ಲಿ ಬಿದ್ದಿದ್ದಾರೆ. ಇದನ್ನು ಕಂಡ ಹತ್ತಿರದ ಮತ್ತೊಂದು ದೋಣಿಯ ಮೀನುಗಾರರು ತಕ್ಷಣವೇ ಎಚ್ಚೆತ್ತುಕೊಂಡು ದೋಣಿಯಲ್ಲಿ ಒಟ್ಟು 7 ಜನ ಮೀನುಗಾರರನ್ನು ರಕ್ಷಿಸಿದ್ದಾರೆ. ಇದರಿಂದಾಗಿ ದೋಣಿಯಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಬೋಟ್‍ನಲ್ಲಿ ಲವ್ ಪ್ರಪೋಸ್, ಯುವಕನಿಗೆ ಒದ್ದ ಪ್ರೇಯಸಿ- ವಿಡಿಯೋ

    ಬೋಟ್‍ನಲ್ಲಿ ಲವ್ ಪ್ರಪೋಸ್, ಯುವಕನಿಗೆ ಒದ್ದ ಪ್ರೇಯಸಿ- ವಿಡಿಯೋ

    – ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

    ನವದೆಹಲಿ: ಹಲವರು ತಮ್ಮ ಪ್ರೇಯಸಿಗೆ ವಿಶೇಷವಾಗಿ ಲವ್ ಪ್ರಪೋಸ್ ಮಾಡಬೇಕೆಂಬ ಕನಸು ಕಂಡಿರುತ್ತಾರೆ. ಹಲವರು ಅದೇ ರೀತಿ ಪ್ರಪೋಸ್ ಮಾಡುತ್ತಾರೆ. ಹೀಗೆ ವಿಶೇಷವಾಗಿ ಪ್ರಪೋಸ್ ಮಾಡಲು ಹೋಗಿ ಇಲ್ಲೊಬ್ಬ ಪ್ರೇಯಸಿಯಿಂದ ಒದಿಸಿಕೊಂಡ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಥಿಯೋ ಶಾಂತೋನಾಸ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಟ್ವೀಟ್ ಮಾಡಲಾಗಿದ್ದು, ಇನ್ನೊಂದು ಬೋಟ್‍ನಲ್ಲಿ ಕುಳಿತಿದ್ದ ಗೆಳತಿಗೆ ಪ್ರಪೋಸ್ ಮಾಡಲು ವ್ಯಕ್ತಿ ಬೋಟ್ ನಲ್ಲಿ ತೆರಳಿದ್ದು, ತನ್ನದೇ ಸಪೋರ್ಟ್‍ನಿಂದ ಬೋಟ್ ಮೇಲೆ ನಿಂತು. ಗೆಳತಿ ಬಳಿ ತೆರಳಿದ್ದಾನೆ. ಇನ್ನೊಂದು ಬೋಟ್‍ನಲ್ಲಿ ಯುವತಿ ಸಹ ತನ್ನ ಬಾಯ್‍ಫ್ರೆಂಡ್ ಬಳಿಗೆ ಬೋಟ್ ತರಲು ಯತ್ನಿಸಿದ್ದಾಳೆ.

    ಹೀಗೆ ಬೋಟ್ ನಿಧಾನವಾಗಿ ಚಲಿಸುತ್ತಿರುವಾಗ ತನ್ನ ಬಾಯ್ ಫ್ರೆಂಡ್‍ಗೆ ಕಿಸ್ ನೀಡಲು ಯುವತಿ ಪ್ರಯತ್ನಿಸಿದ್ದಾಳೆ. ಈ ವೇಳೆ ಅವಳ ಕಾಲು ಜಾರಿದ್ದು, ಬೋಟ್‍ನಲ್ಲೇ ಬಿದ್ದಿದ್ದಾಳೆ. ಆದರೆ ಯುವತಿ ಕಾಲು ಬಾಯ್‍ಫ್ರೆಂಡ್ ಎದೆಗೆ ತಾಗಿದ್ದು, ತಕ್ಷಣ ಬೋಟ್‍ನ ವೇಗ ಹೆಚ್ಚಳವಾಗಿದೆ. ಆಗ ಯುವತಿ ಗೆಳೆಯ ನೀರಿನಲ್ಲಿ ಬಿದ್ದಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    https://twitter.com/TheoShantonas/status/1310241716096643078

    ಘಟನೆಯಲ್ಲಿ ಜೋಡಿಗೂ ಸಹ ಯಾವುದೇ ರೀತಿಯ ಗಾಯಗಳಾಗಿಲ್ಲ. ಸ್ವಲ್ಪ ಸಮಯದ ಬಳಿಕ ದಡ ಸೇರಿದ್ದಾರೆ. ದಡ ಸೇರುತ್ತಿದ್ದಂತೆ ಅಲ್ಲಿದ್ದವರು ಗಾಯಗಳಾಗಿರುವ ಕುರಿತು ಪ್ರಶ್ನಿಸಿದ್ದು, ಎಲ್ಲ ಸರಿಯಾಗಿದೆ. ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಖುಷಿ ವಿಚಾರವೆಂದರೆ ನನ್ನ ಪ್ರಪೋಸಲ್‍ನ್ನು ಅವಳು ಒಪ್ಪಿಕಂಡಳು, ಎಸ್ ಅಂದಳು ಎಂದು ಯುವಕ ತಿಳಿಸಿದ್ದಾನೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದು, ಲಕ್ಷಾಂತರ ವ್ಯೂವ್ಸ್ ಪಡೆದಿದೆ. ನೆಟ್ಟಿಗರು ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಹಲವರು ಕಮೆಂಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.