Tag: boat

  • ಭಾರೀ ಗಾತ್ರದ ಅಲೆಗೆ ಮೀನುಗಾರಿಕಾ ದೋಣಿ ಮುಳುಗಡೆ

    ಭಾರೀ ಗಾತ್ರದ ಅಲೆಗೆ ಮೀನುಗಾರಿಕಾ ದೋಣಿ ಮುಳುಗಡೆ

    ಉಡುಪಿ: ಭಾರೀ ಗಾತ್ರದ ಅಲೆಗೆ ಮೀನುಗಾರಿಕಾ ದೋಣಿ ಮುಳುಗಡೆಯಾಗಿದ್ದು, ದೋಣೀಯಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿಶಿರೂರಿನ ಕಡಲ ತೀರದಲ್ಲಿ ಈ ಘಟನೆ ನಡೆದಿದೆ. ಮೀನುಗಾರರು ಮೀನುಗಾರಿಕೆಗೆಂದು ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಭಾರಿ ಗಾತ್ರದ ದೋಣಿ ಮುಳುಗಿದೆ. ತಕ್ಷಣ ಅಲ್ಲೇ ಮತ್ತೊಂದು ದೋಣಿಯಲ್ಲಿದ್ದ ಸ್ಥಳೀಯ ಮೀನುಗಾರರಿಂದ ರಕ್ಷಣಾ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿದ್ದ ನವಜೋತ್‌ ಸಿಂಗ್‌ ಸಿಧು ಆಸ್ಪತ್ರೆಗೆ ದಾಖಲು

    ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕರಾವಳಿ ಕಾವಲು ಪಡೆ ತಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೀನುಗಾರರ ರಕ್ಷಣೆಗೆ ಕರಾವಳಿ ಕಾವಲು ಪಡೆಯು ಸಾಥ್ ನೀಡಿದೆ. ಇದನ್ನೂ ಓದಿ: ಕುವೆಂಪು, ನಾಡಗೀತೆಗೆ ಅವಮಾನ- ರೋಹಿತ್ ಚಕ್ರತೀರ್ಥರ ಮೇಲೆ ಮುಗಿಬಿದ್ದ ಕಾಂಗ್ರೆಸ್

  • 1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ – ಸಮುದ್ರದಲ್ಲಿ ಚೇಸಿಂಗ್ ವೀಡಿಯೋ ನೋಡಿ

    1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ – ಸಮುದ್ರದಲ್ಲಿ ಚೇಸಿಂಗ್ ವೀಡಿಯೋ ನೋಡಿ

    ನವದೆಹಲಿ: ಲಕ್ಷದ್ವೀಪದಿಂದ ದೋಣಿ ಮೂಲಕ ತಮಿಳುನಾಡಿಗೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದವರನ್ನು ಲಕ್ಷದ್ವೀಪ ಕರಾವಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಚೇಸಿಂಗ್ ಮಾಡಿ ಬಂಧಿಸಿದ ರೋಚಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸುಮಾರು 1 ನಿಮಿಷ 30 ಸೆಕೆಂಡ್ ಇರುವ ವೀಡಿಯೋದಲ್ಲಿ ಕಗ್ಗತ್ತಲಿನಲ್ಲಿ ಸಾಗುತ್ತಿದ್ದ ಬೆಂಬಿಡದೇ ಹಿಂಬಾಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಾರಕಕ್ಕೇರಿದ ಆಡಳಿತಮಂಡಳಿ, ಕಾರ್ಯನಿರ್ವಹಣಾಧಿಕಾರಿ ಜಟಾಪಟಿ

    ಅರಬ್ಬಿ ಸಮುದ್ರದಲ್ಲಿ ದೋಣಿ ಮೂಲಕ ತಮಿಳುನಾಡಿಗೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದವರನ್ನು ಲಕ್ಷದ್ವೀಪ ಕರಾವಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಶುಕ್ರವಾರ ದಾಳಿ ನಡೆಸಿತ್ತು. ಈ ವೇಳೆ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಸುಮಾರು 1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.  ಇದನ್ನೂ ಓದಿ: ಜೂನ್ 21ರಂದು ಮೈಸೂರಿಗೆ ಬರಲಿದ್ದಾರೆ ಪ್ರಧಾನಿ ಮೋದಿ

    ‘ಲಿಟಲ್ ಜೀಸಸ್’ ಮತ್ತು ‘ಪ್ರಿನ್ಸ್’ ಎಂಬ ದೋಣಿಯಲ್ಲಿ ಡ್ರಗ್ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಸದ್ಯ ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ತಿಳಿಸಿದೆ.

  • ಭಟ್ಕಳದಲ್ಲಿ 4 ಬೋಟ್ ಮುಳುಗಡೆ – ಲಕ್ಷಾಂತರ ರೂಪಾಯಿ ಆಸ್ತಿಗೆ ಹಾನಿ

    ಭಟ್ಕಳದಲ್ಲಿ 4 ಬೋಟ್ ಮುಳುಗಡೆ – ಲಕ್ಷಾಂತರ ರೂಪಾಯಿ ಆಸ್ತಿಗೆ ಹಾನಿ

    ಕಾರವಾರ: ಇಲ್ಲಿನ ಬಂದರಿನಲ್ಲಿ ಲಂಗರು ಹಾಕಿದ್ದ 4 ಬೋಟುಗಳು ಪಲ್ಟಿಯಾಗಿ ಮುಳುಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ.

    ಬಂದರು ಪ್ರದೇಶದಲ್ಲಿ ಹೂಳು ತುಂಬಿದ್ದು ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಮತ್ತಷ್ಟು ಹೂಳು ಸಂಗ್ರಹವಾಗಿದ್ದು, ಭಟ್ಕಳದ ದುರ್ಗಾಂಬಿಕಾ ದೇವಿ, ಶ್ರೀ ನಿತ್ಯಾನಂದ, ಜೈನ ಜಟಗಾ, ಗಗನ 3 ಹೆಸರಿನ ಬೋಟುಗಳು ನೀರಿನಲ್ಲಿ ಮುಳುಗಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ. ಇದನ್ನೂ ಓದಿ: ಪಿಎಸ್ಐ ಅಕ್ರಮ ಲಾಜಿಕಲ್ ಎಂಡ್‍ಗೆ ತೆಗೆದುಕೊಂಡು ಹೋಗ್ತೀವಿ: ಆರಗ ಜ್ಞಾನೇಂದ್ರ

    ಮುಳುಗಿದ ಬೋಟುಗಳನ್ನು ಸ್ಥಳೀಯ ಮೀನುಗಾರರ ಸಹಾಯದಿಂದ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಒಂದು ಬೋಟ್ ಅನ್ನು ರಕ್ಷಣೆ ಮಾಡಲಾಗಿದೆ.

  • ರಿವರ್ ರ‍್ಯಾಫ್ಟಿಂಗ್ ವೇಳೆ ನದಿಗೆ ಸಿಲುಕಿದ ಬೋಟ್: ಕೂದಲೆಳೆ ಅಂತರದಲ್ಲಿ 12 ಜೀವಗಳು ಪಾರು

    ರಿವರ್ ರ‍್ಯಾಫ್ಟಿಂಗ್ ವೇಳೆ ನದಿಗೆ ಸಿಲುಕಿದ ಬೋಟ್: ಕೂದಲೆಳೆ ಅಂತರದಲ್ಲಿ 12 ಜೀವಗಳು ಪಾರು

    ಕಾರವಾರ: ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿ ರಿವರ್ ರ‍್ಯಾಫ್ಟಿಂಗ್ ಮಾಡುತ್ತಿದ್ದ ಬೋಟ್ ಇದ್ದಕ್ಕಿದ್ದಂತೆ ನದಿಗೆ ಸಿಲುಕಿ, ಮುಳುಗುವ ಹಂತ ತಲುಪಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ 12 ಜನರ ಜೀವ ಉಳಿದಿದೆ.

    ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ಘಟನೆ ಸಂಭವಿಸಿದ್ದು, ಕೊಂಚದಲ್ಲೇ 12 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದಲ್ಲೇ ಇದ್ದ ಪ್ರವಾಸಿಗರ ಸಮಯಪ್ರಜ್ಞೆ ಹಾಗೂ ರಕ್ಷಣಾ ಕಾರ್ಯದಿಂದ 12 ಮಂದಿ ಬದುಕುಳಿಯುವಂತಾಗಿದೆ. ಇದನ್ನೂ ಓದಿ: ಅಮರನಾಥ ಯಾತ್ರೆ – ಕೇಂದ್ರ ಗೃಹ ಇಲಾಖೆಯಿಂದ ಭದ್ರತಾ ಪರಿಶೀಲನೆ

    RIVER RESCUE

    ಹೌದು… ರಬ್ಬರ್ ಬೋಟ್‌ನಲ್ಲಿ 6 ಕ್ಕಿಂತ ಹೆಚ್ಚು ಮಂದಿ ರಿವರ್ ರ‍್ಯಾಫ್ಟಿಂಗ್‌ ಮಾಡುವಂತಿಲ್ಲ. ಆದರೆ, ಖಾಸಗಿ ಆಯೋಜಕರು ಅನುಮತಿಯಿಲ್ಲದೇ 12 ಜನ ಪ್ರವಾಸಿಗರನ್ನು ರಿವರ್ ರ‍್ಯಾಫ್ಟಿಂಗ್ ಬೋಟ್ ನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ. ಈ ವೇಳೆ ಬೋಟ್ ಮೇಲಿನ ಭಾರ ಹೆಚ್ಚಾಗಿ ಮುಳುಗುವ ಹಂತ ತಲುಪಿದೆ. ಕೆಲ ಮಕ್ಕಳೂ ನೀರಿಗೆ ಬಿದ್ದಿದ್ದಾರೆ. ಸಮೀಪದಲ್ಲೇ ಇದ್ದ ಪ್ರವಾಸಿಗರು ರಕ್ಷಣೆಗೆ ಬರಲಾಗಿ 12 ಮಂದಿ ಜೀವ ಉಳಿದಿದೆ. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ

    ಘಟನೆ ಸಂಬಂಧ ಜೋಯಿಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಮಲ್ಪೆ ಬಂದರಿನಲ್ಲಿ ಬಲೆಗೆ ಬಿತ್ತು 250 ಕೆ.ಜಿಯ ಗರಗಸ ಮೀನು..!

    ಮಲ್ಪೆ ಬಂದರಿನಲ್ಲಿ ಬಲೆಗೆ ಬಿತ್ತು 250 ಕೆ.ಜಿಯ ಗರಗಸ ಮೀನು..!

    ಉಡುಪಿ: ಅತ್ಯಂತ ಅಪರೂಪದ ಗರಗಸ ಮೀನು (Sawfish) ಮಲ್ಪೆ ಬಂದರಿನಲ್ಲಿ ಮೀನುಗಾರರ ಬಲೆ ಬಿದ್ದಿದೆ. ಇದನ್ನು ಇಂಗ್ಲಿಷ್ ನಲ್ಲಿ ಕಾರ್ಪೆಂಟರ್ ಶಾರ್ಕ್ (Carpenter Shark) ಎಂದು ಕರೆಯಲಾಗುತ್ತಿದೆ. ಈ ವಿಶೇಷ ಮೀನನ್ನು ನೋಡಲು ಜನಸಮೂಹವೇ ಸ್ಥಳದಲ್ಲಿ ನೆರೆದಿತ್ತು.

    ಬಲೆಗೆ ಬಿದ್ದ ಸುಮಾರು 250 ಕೆ.ಜಿಯ ಈ ಮೀನನ್ನು ಬೋಟಿನಲ್ಲಿ ಬಂದರಿಗೆ ತರಲಾಗಿತ್ತು. ನಂತರ ಅಲ್ಲಿಂದ ಕ್ರೇನ್ ಮೂಲಕ ಎತ್ತಲಾಯಿತು. ಬಳಿಕ ಲಾರಿ ಮೂಲಕ ಮಂಗಳೂರಿಗೆ ಸಾಗಿಸಲಾಯಿತು. ಮೀನಿನ ಮುಖದ ಭಾಗದಲ್ಲಿ ಗರಗಸದಂತೆ ಹೋಲುವ ಉದ್ದದ ಅಲಗು ಇದ್ದು, ನೋಡಲು ಜನಸಾಗರವೇ ಸ್ಥಳದಲ್ಲಿ ಜಮಾಯಿಸಿತ್ತು. ಇದನ್ನೂ ಓದಿ: DCC ಬ್ಯಾಂಕ್‌ನಲ್ಲಿ ಕಳ್ಳತನ- 4.37ಕೋಟಿ ನಗದು, 1.63ಕೋಟಿ ಮೌಲ್ಯದ ಚಿನ್ನಾಭರಣ ವಶ

    ಹಲವು ಇದರ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಇದೀಗ ಅವುಗಳು ವೈರಲ್ ಆಗಿವೆ. ಈ ಅಪರೂಪದ ಮೀನುಗಳು ಆಳಸಮುದ್ರದಲ್ಲಿ ಮಾತ್ರ ಇರುತ್ತವೆ. ಸದ್ಯ ಈ ಮೀನುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಅಳಿವಿನಂಚಿನಲ್ಲಿರುವ ಸಂತತಿ ಎಂದು ಹೇಳಲಾಗುತ್ತಿದೆ. ಶಾರ್ಕ್ ಜಾತಿಯ ಮೀನುಗಳಲ್ಲಿ ಇದು ಕೂಡ ಒಂದಾಗಿದ್ದು, ನೋಡಲು ತುಂಬಾನೇ ಆಕರ್ಷಕವಾಗಿರುತ್ತವೆ.

  • ದೋಣಿಗಳ ಮೇಲೆ ಭಾರೀ ಗಾತ್ರದ ಕಲ್ಲು ಜರಿದು 7 ಮಂದಿ ಸಾವು, 9 ಮಂದಿಗೆ ಗಾಯ

    ದೋಣಿಗಳ ಮೇಲೆ ಭಾರೀ ಗಾತ್ರದ ಕಲ್ಲು ಜರಿದು 7 ಮಂದಿ ಸಾವು, 9 ಮಂದಿಗೆ ಗಾಯ

    ಬ್ರೆಸಿಲಿಯಾ: ಜಲಪಾತವೊಂದರ ಬಳಿ ಭಾರೀ ಗಾತ್ರದ ಕಲ್ಲಿನ ಗೋಡೆ ಜರಿದು ದೋಣಿಗಳಲ್ಲಿ ಬಂದಿದ್ದ ಪ್ರವಾಸಿಗರಲ್ಲಿ 7 ಮಂದಿ ಸಾವನ್ನಪಿದ್ದಾರೆ ಹಾಗೂ 9 ಮಂದಿಗೆ ತೀವ್ರವಾದ ಗಾಯಗಳಾಗಿವೆ. ಘಟನೆ ಬ್ರೆಜಿಲ್‌ನ ಮಿನಾಸ್ ಗೈಸ್ ರಾಜ್ಯದ ಜನಪ್ರಿಯ ಪ್ರವಾಸಿ ತಾಣವಾದ ಕ್ಯಾಪಿಟೋಲಿಯೋ ಕಣಿವೆಯಲ್ಲಿ ಶನಿವಾರ ನಡೆದಿದೆ.

    ಶನಿವಾರ ಜಲಪಾತದ ಸರೋವರದ ಕಡೆ ಹಲವು ದೋಣಿಗಳಲ್ಲಿ ಪ್ರವಾಸಿಗರು ಹೋಗಿದ್ದರು. ಈ ಸಂದರ್ಭದಲ್ಲಿ ಜಲಪಾತದ ಕಲ್ಲಿನ ಒಂದು ಭಾಗ ಮುರಿದು ಎರಡು ದೋಣಿಗಳ ಮೇಲೆ ಅಪ್ಪಳಿಸಿದೆ. ಪರಿಣಾಮ ಎರಡು ದೋಣಿಗಳಲ್ಲಿದ್ದ 7 ಜನರು ಮೃತಪಟ್ಟಿದ್ದಾರೆ. ಇನ್ನೂ ನೀರಿನಲ್ಲಿ ಕಾಣೆಯಾಗಿರುವ ಮೂವರ ಹುಡುಕಾಟ ನಡೆಯುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಮರ‍್ರೆಯಲ್ಲಿ ಭಾರೀ ಹಿಮಪಾತ – 10 ಮಕ್ಕಳು ಸೇರಿ 22 ಮಂದಿ ಬಲಿ

    23 ಮಂದಿ ಇತರ ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಭಾರೀ ಗಾತ್ರದ ಕಲ್ಲಿನ ಭಾಗ ಮುರಿದು ಬೀಳುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡುತ್ತಿವೆ. ಇದನ್ನೂ ಓದಿ: ರೈಲಿನಿಂದ ಬಿದ್ದ ಪ್ರಯಾಣಿಕನ ರಕ್ಷಣೆ

    ಕಳೆದ ಎರಡು ವಾರಗಳಿಂದ ಭಾರೀ ಮಳೆಯಾಗಿದ್ದು, ಬಂಡೆ ಕಲ್ಲು ಜರಿಯಲು ಮೂಲ ಕಾರಣ ಇದೇ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

  • 43 ತಮಿಳುನಾಡಿನ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

    43 ತಮಿಳುನಾಡಿನ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

    ಚೆನ್ನೈ: ಶ್ರೀಲಂಕಾಕ್ಕೆ ಸೇರಿದ ಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ 43 ತಮಿಳುನಾಡಿನ ಮೀನುಗಾರರನ್ನು ಮತ್ತು ಆರು ದೋಣಿಗಳನ್ನು ಶ್ರೀಲಂಕಾದ ನೌಕಾಪಡೆ ವಶಕ್ಕೆ ಪಡೆದಿದೆ.

    ಶನಿವಾರ ರಾತ್ರಿ ಸಮುದ್ರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ 43 ತಮಿಳುನಾಡಿನ ಮೀನುಗಾರರೊಂದಿಗೆ, 6 ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.

    ಮೀನುಗಾರರು ಡಿಸೆಂಬರ್ 18 ರಂದು 500ಕ್ಕೂ ಹೆಚ್ಚು ದೋಣಿಗಳಲ್ಲಿ ಇಲ್ಲಿಂದ ಹೊರಟ್ಟಿದ್ದು, ಕಚ್ಚತೀವು ದ್ವೀಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಅವರಲ್ಲಿ 43 ಮಂದಿಯನ್ನು ಬಂಧಿಸಿ ಆರು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

    ಬಂಧನದ ನಂತರ ಅವರನ್ನು ಕಂಗೆಸಂತುರೈ ಶಿಬಿರಕ್ಕೆ ಕರೆದೊಯ್ಯಲಾಯಿತು ಎಂದು ಮೀನುಗಾರರ ಸಂಘದ ನಾಯಕ ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

    ಘಟನೆಯ ಬಳಿಕ ರಾಮನಾಥಪುರದ ಸಂಸದ ಕೆ.ನವಾಸ್ ಕಣಿ ಅವರು ಕೇಂದ್ರ ಸಚಿವರೊಂದಿಗೆ ಮಾತಾನಾಡಿ ಮೀನುಗಾರರು ಮತ್ತು ಅವರ ದೋಣಿಗಳ ಬಿಡುಗಡೆಗೆ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

  • ಮೀನು ಹಿಡಿಯಲು ಹೋಗಿ ದೋಣಿ ಮಗುಚಿ ಯುವಕ ಸಾವು

    ಮೀನು ಹಿಡಿಯಲು ಹೋಗಿ ದೋಣಿ ಮಗುಚಿ ಯುವಕ ಸಾವು

    ಚಾಮರಾಜನಗರ: ಮೀನು ಹಿಡಿಯಲು ಹೋಗಿ ದೋಣಿ ಮಗುಚಿ ಯುವಕ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ವರುಣ್ ಮೃತನಾಗಿದ್ದಾನೆ. ಈತ ಶಿವನಸಮುದ್ರ ಗ್ರಾಮದ ನಿವಾಸಿಯಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ಹರಿಯುವ ಶಿವನಸಮುದ್ರ ಬಳಿ ಮೀನು ಹಿಡಿಯಲು ಹೋದ ವೇಳೆ ಪ್ರಾಣ ಕಳೆದುಕೊಂಡಿದ್ದಾನೆ.

    ವರುಣ್ ಹಾಗೂ ರವಿ ಮೀನು ಹಿಡಿಯಲು ಹೋಗಿದ್ದರು. ದೋಣಿ ಮಗುಚಿದ ಪರಿಣಾಮ ವರುಣ್ ಸಾವನ್ನಪ್ಪಿದ್ದು,ರವಿ ಈಜಿ ದಡ ಸೇರಿದ್ದಾನೆ. ಇದೀಗ ಮೃತ ಯುವಕನ ಶೋಧ ಕಾರ್ಯ ನಡೆದಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಗಾಂಧಿವಾದಿ ಎಸ್.ಎನ್.ಸುಬ್ಬರಾವ್ ನಿಧನಕ್ಕೆ ಸಿಎಂ ಸಂತಾಪ

  • ಬೋಟ್ ಪಲ್ಟಿ – ಸಮುದ್ರ ಪಾಲಾಗುತ್ತಿದ್ದ ಆರು ಜನರ ರಕ್ಷಣೆ

    ಬೋಟ್ ಪಲ್ಟಿ – ಸಮುದ್ರ ಪಾಲಾಗುತ್ತಿದ್ದ ಆರು ಜನರ ರಕ್ಷಣೆ

    ಕಾರವಾರ: ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಜಲಕ್ರೀಡೆಯಲ್ಲಿ ಭಾಗಿಯಾಗಿದ್ದಾಗ ಬೋಟ್ ನಿಂದ ಬಿದ್ದು ಸಮುದ್ರದಲ್ಲಿ ಸಿಲುಕಿದ್ದ ನಾಲ್ಕು ಜನ ಮಕ್ಕಳು ಸೇರಿ ಆರು ಜನ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ನಡೆದಿದೆ.

    ಹುಬ್ಬಳ್ಳಿಯಿಂದ ಕುಟುಂಬ ಸಮೇತರಾಗಿ ಬಂದಿದ್ದ ಪ್ರವಾಸಿಗರು ಕಾರವಾರ ಕಡಲತೀರದಲ್ಲಿ ಡ್ರೈವಿನ್ ಜಲಸಾಹಸ ಕ್ರೀಡೆಯ ಬೋಟ್ ಹತ್ತಿದ್ದರು. ಈ ವೇಳೆ ಸಮುದ್ರದಲ್ಲಿ ಬೋಟ್ ಮಗುಚಿ ಮಕ್ಕಳ ಸಮೇತ ಸಮುದ್ರಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್

    ಅಲ್ಲಿದ್ದ ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ನಾಲ್ಕು ಜನ ಮಕ್ಕಳು ಸೇರಿ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮಹಿಳೆ ಮೇಲೆ ಆಟೋ ಚಾಲಕ ಸೇರಿದಂತೆ ಮೂವರಿಂದ ಸಾಮೂಹಿಕ ಅತ್ಯಾಚಾರ

  • ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ – 6 ಮಂದಿ ಮೀನುಗಾರರ ರಕ್ಷಣೆ

    ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ – 6 ಮಂದಿ ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಅಳಿವೆ ಪ್ರದೇಶದಲ್ಲಿ ನಡೆದಿದೆ.

    ಇಂದು ಹೊನ್ನಾವರದ ಬಂದರಿನಿಂದ ಶ್ರೀಕೃಷ್ಣ ಭಂಡಾರಿ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಬಳಿಕ ಮೀನು ಹಿಡಿದುಕೊಂಡು ವಾಪಸ್ ಬರುವಾಗ ಜಲ ಮಾರ್ಗದ ಮಧ್ಯದ ಅಳಿವೆ ಪ್ರದೇಶದಲ್ಲಿ ಹೂಳು ತುಂಬಿದ್ದರಿಂದ ಇಂಜಿನ್‍ನಲ್ಲಿ ಸಮಸ್ಯೆ ಕಂಡು ಬಂದು ಮುಳುಗಡೆ ಆಗಿದೆ. ಇದರಿಂದಾಗಿ ಬೋಟ್‍ನಲ್ಲಿದ್ದ ಮೀನುಗಾರರು ಅಪಾಯಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಇಂಧನ ಬೆಲೆ ಫ್ಲೆಕ್ಸಿಬಲ್ ಇರುತ್ತೆ, ಏನೂ ಸಮಸ್ಯೆ ಆಗಲ್ಲ: ನಾರಾಯಣಗೌಡ ಉಡಾಫೆ

    ಬೋಟ್‍ನಲ್ಲಿದ್ದ 6 ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಶ್ರೀಕೃಷ್ಣ ಭಂಡಾರಿ ಹೆಸರಿನ ಶಿವರಾಮ ಶ್ರೀಯಾನ್ ಮಾಲೀಕತ್ವದ ಬೋಟ್ ಇದಾಗಿದ್ದು, ಬೋಟ್ ಮುಳುಗಡೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿದೆ. ಇದನ್ನೂ ಓದಿ: ಅವೈಜ್ಞಾನಿಕ ಮೀನುಗಾರಿಕೆ – ಕಡಲ ಜೀವಿಗಳಿಗೆ ತಂದ ಆತಂಕ