Tag: boat

  • ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ

    ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ

    ಬ್ರೆಸಿಲಿಯಾ: 3 ದಿನದಲ್ಲಿ ಮುಗಿಯಬೇಕಿದ್ದ ಮೀನುಗಾರಿಕೆ ಈ ರೀತಿ ಕಷ್ಟಕ್ಕೆ ಸಿಲುಕಿಸುತ್ತದೆ ಎಂದು ಆ ವ್ಯಕ್ತಿಗೆ ತಿಳಿದಿರಲಿಲ್ಲವೇನೋ. ಈಜು ಬರದ ಬ್ರೆಜಿಲ್‌ನ ವ್ಯಕ್ತಿ ಅಟ್ಲಾಂಟಿಕ್ ಮಹಾಸಾಗರದಲ್ಲಿ 11 ದಿನಗಳ ಕಾಲ ಕೇವಲ ಒಂದು ತೇಲುವ ಫ್ರೀಜರ್ ಮೂಲಕ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ. ಕೊನೆಗೂ ಆತನನ್ನು ಬೇರೊಂದು ಮೀನುಗಾರರ ಗುಂಪು ರಕ್ಷಿಸಿದೆ.

    11 ದಿನ ಸಮುದ್ರದಲ್ಲಿ ಈ ರೀತಿಯ ಕಷ್ಟದಲ್ಲೂ ಬದುಕಿ ಬಂದ ವ್ಯಕ್ತಿ ರೊಮಾಲ್ಡೋ ಮ್ಯಾಸೆಡೊ ರಾಡ್ರಿಗಸ್ ಈ ಬಗ್ಗೆ ಮಾಧ್ಯಮದವರೊಂದಿಗೆ ವಿವರಿಸುತ್ತಾ, ನಾನು ಆಗಸ್ಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದೆ. ಮೀನುಗಾರಿಕೆಯ ಮಧ್ಯದಲ್ಲಿ ನಾನಿದ್ದ ದೋಣಿ ಸಮುದ್ರದಲ್ಲಿ ಮುಳುಗಲಾರಂಭಿಸಿತ್ತು. ಆದರೂ ನಾನು ನನ್ನ ಆತ್ಮವನ್ನು ಮುಳುಗಲು ಬಿಡಲಿಲ್ಲ. ಅದರಂತೆಯೇ ದೇವರು ನನಗೆ ಒಂದು ಅವಕಾಶ ಕೊಟ್ಟ ಎಂದು ಹೇಳಿದರು.

    ನನ್ನ ದೋಣಿ ಮುಳುಗಲಾರಂಭಿಸಿದರೂ ಅದರಲ್ಲಿದ್ದ ತೇಲುವ ಫ್ರೀಜರ್ ಮುಳುಗುತ್ತಿರಲಿಲ್ಲ. ಒಂದು ಬಾರಿ ನನಗೆ ದೇವರೇ ಅದನ್ನು ವರವಾಗಿ ನೀಡಿದ್ದ ಎನಿಸಿತು. ನಾನು ಫ್ರೀಜರ್‌ನಲ್ಲಿದ್ದ 11 ದಿನ ಹಲವು ಅಗ್ನಿ ಪರೀಕ್ಷೆಗಳನ್ನು ಎದುರಿಸಿದ್ದೇನೆ. ಒಂದು ಬಾರಿ ಫ್ರೀಜರ್‌ನಲ್ಲೂ ನೀರು ಹೊಕ್ಕಿತ್ತು. ಅದನ್ನು ನಾನು ತನ್ನ ಕೈಯಿಂದಲೇ ತೆಗೆದು ಹೊರ ಹಾಕಿದ್ದೆ. ಇನ್ನೊಂದು ಬಾರಿ ದೊಡ್ಡ ದೊಡ್ಡ ಶಾರ್ಕ್ ಮೀನುಗಳು ನನ್ನನ್ನು ಸುತ್ತುವರಿದಿದ್ದವು. ಆದರೂ ನಾನು ನನ್ನ ಕುಟುಂಬದವರನ್ನು ನೆನೆಸಿಕೊಂಡು, ಆ ಪರಿಸ್ಥಿತಿಯನ್ನು ಎದುರಿಸಿದೆ. ಅನ್ನ, ನೀರಿಲ್ಲದಿದ್ದರೂ 11 ದಿನ ನಾನು ಜೀವಂತವಾಗಿದ್ದೆ ಎಂದು ವಿವರಿಸಿದ್ದಾರೆ.

    11 ದಿನಗಳ ಸಾವು ಬದುಕಿನ ಹೋರಾಟದ ಬಳಿಕ ಕೊನೆಗೂ ನಾನಿದ್ದ ಸ್ಥಳಕ್ಕೆ ಒಂದು ದೋಣಿ ಬಂದೇ ಬಿಟ್ಟಿತು. ಆ ದೋಣಿಯಲ್ಲಿದ್ದವರು ಫ್ರೀಜರ್‌ನಲ್ಲಿ ಯಾರೂ ಇಲ್ಲ ಎಂದು ಊಹಿಸುವುದು ಬೇಡವೆಂದು ನಾನು ನನ್ನ ಕೈ, ಕಾಲುಗಳನ್ನು ಮೇಲೆತ್ತಿ, ಸಹಾಯಕ್ಕಾಗಿ ಕರೆದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಮರಳು ಸಾಗಣೆ- ಟೋಲ್ ಗೇಟನ್ನು ಮುರಿದ 13 ಟ್ರ್ಯಾಕ್ಟರ್‌ಗಳು

    ಕೊನೆಗೂ ತನ್ನ ಜೀವವನ್ನು ಉಳಿಸಿಕೊಂಡ ರಾಡ್ರಿಗಸ್‌ನನ್ನು ಆ ದೋಣಿಯಲ್ಲಿದ್ದವರು ಸುರಿನಾಮ್ ದೇಶದ ದಡಕ್ಕೆ ಕರೆದುಕೊಂಡು ಹೋಗಿ, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಆತನ ಬಳಿ ಯಾವುದೇ ವಲಸೆಯ ದಾಖಲೆಗಳಿಲ್ಲದಿದ್ದರಿಂದ ಅಲ್ಲಿನ ಪೊಲೀಸರು ಬಳಿಕ ಆತನನ್ನು 2 ವಾರಗಳ ಕಾಲ ವಶಕ್ಕೆ ಪಡೆದಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ

    Live Tv
    [brid partner=56869869 player=32851 video=960834 autoplay=true]

  • ಪವಿತ್ರ ಗಂಗಾನದಿಯಲ್ಲಿ ಮೋಜು ಮಸ್ತಿ – ಹುಕ್ಕಾ ಸೇವಿಸಿ, ಚಿಕನ್‌ ಅಡುಗೆ ಮಾಡಿದ ಯುವಕರು

    ಪವಿತ್ರ ಗಂಗಾನದಿಯಲ್ಲಿ ಮೋಜು ಮಸ್ತಿ – ಹುಕ್ಕಾ ಸೇವಿಸಿ, ಚಿಕನ್‌ ಅಡುಗೆ ಮಾಡಿದ ಯುವಕರು

    ಲಕ್ನೋ: ಗಂಗಾ ನದಿಯ ಮಧ್ಯದಲ್ಲಿ ದೋಣಿ ಮೂಲಕ ಪ್ರಯಾಣಿಸುತ್ತಿದ್ದ ಕೆಲ ಯವಕರು ಹುಕ್ಕಾ ಪೈಪ್ ಉಪಯೋಗಿಸಿ ಧೂಮಪಾನ ಹಾಗೂ ಚಿಕನ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಈ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ದಾರಗಂಜ್‌ನಲ್ಲಿರುವ ನಾಗವಾಸುಕಿ ಮಂದಿರದ ಸಮೀಪ ನಡೆದಿದೆ. ಹಿಂದೂಗಳ ಪ್ರಮುಖ ಯಾತ್ರಾ ಕೇಂದ್ರದಲ್ಲಿ ಈ ರೀತಿಯ ಘಟನೆ ಸಂಭವಿಸಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

    ಘಟನೆಗೆ ಸಂಬಂಧಿಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಬೋಟ್‌ನಲ್ಲಿ ಮೋಜು ಮಸ್ತಿ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ಅಂಡರ್ ಪಾಸ್‍ನಲ್ಲಿ ಸಿಲುಕಿದ ಕಾಲೇಜ್ ಬಸ್- ವಿದ್ಯಾರ್ಥಿಗಳ ರಕ್ಷಣೆ

    POLICE JEEP

    ಕಳೆದ ವಾರ ಗಂಗಾ ಮತ್ತು ಯಮುನಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾದಾಗ ಪ್ರಯಾಗರಾಜ್‌ನ ಹಲವಾರು ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದವು. ರಾಜಾಪುರ, ಬಘರಾ, ದಾರಗಂಜ್ ಮತ್ತು ಇತರ ಹಲವಾರು ಸ್ಥಳಗಳಲ್ಲಿ ತಗ್ಗು ಪ್ರದೇಶದ ಕಾಲೋನಿಗಳಲ್ಲಿ ನೀರು ಸಂಗ್ರಹವಾಗಿದೆ. ನಗರದಲ್ಲಿ ಪ್ರವಾಹದಂತಹ ಪರಿಸ್ಥಿತಿಯ ನಡುವೆ ಆಡಳಿತವು ದೋಣಿ ವಿಹಾರಕ್ಕೆ ನಿರ್ಬಂಧಗಳನ್ನು ವಿಧಿಸಿದೆ. ಇದನ್ನೂ ಓದಿ: ಸಿದ್ದು ವಿರುದ್ಧ ಶ್ರೀರಾಮುಲು ವಾಗ್ದಾಳಿ- ಕೆಲವೇ ನಿಮಿಷದಲ್ಲಿ ಟ್ವೀಟ್ ಡಿಲೀಟ್

    Live Tv
    [brid partner=56869869 player=32851 video=960834 autoplay=true]

  • ಎಕೆ 47 ಪತ್ತೆಯಾದ ದೋಣಿ ಆಸ್ಟ್ರೇಲಿಯಾ ಪ್ರಜೆಗೆ ಸೇರಿದೆ: ಫಡ್ನವೀಸ್

    ಎಕೆ 47 ಪತ್ತೆಯಾದ ದೋಣಿ ಆಸ್ಟ್ರೇಲಿಯಾ ಪ್ರಜೆಗೆ ಸೇರಿದೆ: ಫಡ್ನವೀಸ್

    ಮುಂಬೈ: ಮಹಾರಾಷ್ಟ್ರ ಬೀಚ್‍ನಲ್ಲಿ ಎರಡು ದೋಣಿಗಳು ಪತ್ತೆಯಾಗಿದ್ದು ಹೈ ಅಲರ್ಟ್ ಘೋಷಣೆಯಾಗಿದೆ.

    ಘಟನೆಗೆ ಸಂಬಂಧಿಸಿ ಸುದ್ದಿಗೋಷ್ಠಿ ನಡೆಸಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಶಸ್ತ್ರಾಸ್ತ್ರಗಳೊಂದಿಗೆ ಮಹಾರಾಷ್ಟ್ರದ ಬೀಚ್‍ನಲ್ಲಿ ಪತ್ತೆಯಾಗಿದ್ದ ದೋಣಿಯು ಆಸ್ಟ್ರೇಲಿಯಾದ ಪ್ರಜೆ ಹನಾ ಲಾಂಡರ್‌ಗನ್‍ಗೆ ಸೇರಿದೆ. ದೋಣಿಯು ಆಸ್ಟ್ರೇಲಿಯಾದಿಂದ ಇಂಗ್ಲೆಂಡ್‍ಗೆ ಹೋಗುತ್ತಿತ್ತು. ಈ ವೇಳೆ ಸಮುದ್ರದಲ್ಲಿ ಇಂಜಿನ್ ಹಾಳಾಗಿದೆ. ಈ ವೇಳೆ ಕೊರಿಯಾದ ಮೂಲಕ ಬೋಟ್‍ನಲ್ಲಿದ್ದ ಜನರನ್ನು ರಕ್ಷಿಸಲಾಯಿತು. ಭಾರೀ ಎತ್ತರದ ಅಲೆಗಳು ಬೀಸುತ್ತಿದ್ದ ಕಾರಣ ಬೋಟ್ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಆ ಬೋಟ್ ಹರಿಹರೇಶ್ವರ ಬೀಚ್‍ಗೆ ತಲುಪಿದೆ ಎಂದರು.

    ದೋಣಿಯಲ್ಲಿ ಮೂರು ಎಕೆ 47 ರೈಫಲ್‍ಗಳು ಪತ್ತೆಯಾಗಿವೆ. ಅರ್ಧ ಮುರಿದ ಸ್ಥಿತಿಯಲ್ಲಿ ದೋಣಿ ಕೋಕನ್ ಕರಾವಳಿಯತ್ತ ಬಂದಿದೆ. ಕೇಂದ್ರೀಯ ಸಂಸ್ಥೆಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಯಾವುದೇ ಘಟನೆಯನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಘಟನೆಗೆ ಸಂಬಂಧಿಸಿ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಕೂಡ ಕೆಲಸ ಮಾಡುತ್ತಿದೆ. ಅಗತ್ಯ ಬಿದ್ದರೆ ಹೆಚ್ಚುವರಿ ಪಡೆಯನ್ನೂ ನಿಯೋಜಿಸಲಾಗುವುದು. ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆಗೆ ಬಿಗಿಭದ್ರತೆಗಳನ್ನು ಕೈಗೊಳ್ಳಲು ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಹೇಳಿದರು.

    ಮಹಾರಾಷ್ಟ್ರದ ರಾಯಗಢದಲ್ಲಿ ಹೈ ಅಲರ್ಟ್ ನಡುವೆ, ಎರಡು ದೋಣಿಗಳು ಪತ್ತೆಯಾಗಿವೆ. ಹರಿಹರೇಶ್ವರ ಕಡಲತೀರದಲ್ಲಿ ಒಂದು ದೋಣಿ ಪತ್ತೆಯಾಗಿದ್ದು, ಅದರಲ್ಲಿ ಕಸ್ಟಮ್ ನಿರ್ಮಿತ ಬಾಕ್ಸ್‍ನಲ್ಲಿ 3 ಎಕೆ-47 ರೈಫಲ್‍ಗಳು ಮತ್ತು ಮದ್ದು ಗುಂಡುಗಳು ಪತ್ತೆಯಾಗಿತ್ತು. ಮತ್ತೊಂದು ಭರನ್ ಖೋಲ್ ಕಿನಾರಾ ಬಳಿ ಪತ್ತೆಯಾಗಿದ್ದು, ಅದರಲ್ಲಿ ಲೈಫ್ ಜಾಕೆಟ್ ಮತ್ತು ಕೆಲವು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಆ ದೋಣಿಯಲ್ಲಿ ಕೆಲವು ದಾಖಲೆಗಳು ಕಂಡುಬಂದಿವೆ. ಸರ್ಕಾರಿ ನೌಕರಿ ಕೊಡಿಸುವುದಾಗಿ ಮೋಸ – ಸ್ವಾಮೀಜಿ ಅರೆಸ್ಟ್

    ಘಟನೆ ಸಂಬಂಧಿಸಿ ರಾಯಗಢ ಜಿಲ್ಲೆ ಹಾಗೂ ಸಮೀಪದ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ದೋಣಿ ಪತ್ತೆಯಾದ ಸ್ಥಳವು ಮುಂಬೈನಿಂದ 200ಕಿ.ಮೀ ಹಾಗೂ ಪುಣೆಯಿಂದ 120 ಕಿ.ಮೀ ದೂರದಲ್ಲಿದ್ದು, ಗಣೇಶ ಚೌತಿಗೆ ಹಬ್ಬಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಇರುವುವಾಗಲೇ ಶಸ್ತ್ರಾಸ್ತ್ರ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು. ಹಬ್ಬಕ್ಕೂ ಮುನ್ನ ಎಕೆ 47 ಒಳಗೊಂಡ ದೋಣಿ ಪತ್ತೆ – ಮಹಾರಾಷ್ಟ್ರದಲ್ಲಿ ಹೈ ಅಲರ್ಟ್

    Live Tv
    [brid partner=56869869 player=32851 video=960834 autoplay=true]

  • ಹಬ್ಬಕ್ಕೂ ಮುನ್ನ ಎಕೆ 47 ಒಳಗೊಂಡ ದೋಣಿ ಪತ್ತೆ – ಮಹಾರಾಷ್ಟ್ರದಲ್ಲಿ ಹೈ ಅಲರ್ಟ್

    ಹಬ್ಬಕ್ಕೂ ಮುನ್ನ ಎಕೆ 47 ಒಳಗೊಂಡ ದೋಣಿ ಪತ್ತೆ – ಮಹಾರಾಷ್ಟ್ರದಲ್ಲಿ ಹೈ ಅಲರ್ಟ್

    ಮುಂಬೈ: ಎಕೆ 47 ರೈಫಲ್ ಹಾಗೂ ಮದ್ದುಗುಂಡುಗಳನ್ನು ಒಳಗೊಂಡ ಅನೇಕ ಶಸ್ತ್ರಾಸ್ತ್ರಗಳಿದ್ದ ದೋಣಿಯೊಂದು ಮಹಾರಾಷ್ಟ್ರದ ರಾಯಗಢದ ಸಮುದ್ರದಲ್ಲಿ ಪತ್ತೆ ಆಗಿದೆ.

    ರಾಯಗಢದ ಹರಿಹರೇಶ್ವರ ಬೀಚ್ ಬಳಿ ಬೋಟ್ ಪತ್ತೆ ಆಗಿದ್ದು, ಅದರಲ್ಲಿ ಅನೇಕ ಮದ್ದುಗುಂಡುಗಳು ಹಾಗೂ 3 ಎಕೆ 47 ರೈಫೆಲ್‍ಗಳು ಪತ್ತೆಯಾಗಿವೆ. ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆ ಪ್ರದೇಶವನ್ನು ಹೈಅಲರ್ಟ್ ಎಂದು ಘೋಷಿಸಿದ್ದಾರೆ.

    ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧಿಸಿ ರಾಯಗಢ ಜಿಲ್ಲೆ ಹಾಗೂ ಸಮೀಪದ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ದೋಣಿ ಪತ್ತೆಯಾದ ಸ್ಥಳವು ಮುಂಬೈನಿಂದ 200ಕಿ.ಮೀ ಹಾಗೂ ಪುಣೆಯಿಂದ 120 ಕಿ.ಮೀ ದೂರದಲ್ಲಿದ್ದು, ಗಣೇಶ ಹಬ್ಬಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಇರುವಾಗಲೇ ಶಸ್ತ್ರಾಸ್ತ್ರ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 26/11 ಮುಂಬೈ ದಾಳಿ ಮಾದರಿಯಲ್ಲಿಯೇ ಮತ್ತೊಂದು ದಾಳಿ ನಡೆಸುವ ಯೋಜನೆ ಇದು ಎಂದು ಹೇಳಲಾಗಿದೆ. ಇದನ್ನೂ ಓದಿ: ಅತ್ತ ರಣರೋಚಕ ಕಬಡ್ಡಿ ಫೈನಲ್ ಪಂದ್ಯಾಟ – ಇತ್ತ ಕಟ್ಟಿಗೆ ಹಿಡಿದು ಬಡಿದಾಡಿಕೊಂಡ ಯುವಕರ ಗುಂಪು

    ಮೂಲಗಳ ಪ್ರಕಾರ ಈ ಬೋಟ್‍ನ ನೋದಾಯಿತ ಸಂಖ್ಯೆಯು ಇಂಗ್ಲೆಂಡ್ ಸೇರಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಎಟಿಎಸ್ ಮುಖ್ಯಸ್ಥ ವಿನೀತ್ ಅಗರವಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಭಯೋತ್ಪಾದನೆಯ ಕೋನದಲ್ಲಿ ತನಿಖೆ ನಡೆಸಲಾಗುವುದು ಎಂದು ಭಯೋತ್ಪಾದನಾ ನಿಗ್ರಹ ದಳ ತಿಳಿಸಿದೆ.

    ಘಟನೆಯ ಕುರಿತು ವಿಶೇಷ ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿರುವುದಾಗಿ ರಾಯಗಢ ಶಾಸಕಿ ಅದಿತಿ ತಟ್ಕರೆ ಹೇಳಿದ್ದಾರೆ. ಈ ಘಟನೆಯು ದೊಡ್ಡ ಹಬ್ಬಕ್ಕೆ ಮುನ್ನಾ ದಿನ ಬಂದಿರುವುದರಿಂದ ಭದ್ರತಾ ಭಯವನ್ನು ಉಂಟುಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

    Live Tv
    [brid partner=56869869 player=32851 video=960834 autoplay=true]

  • ಯಮುನೆಯಲ್ಲಿ ದೋಣಿ ಮುಳುಗಿ 17 ಜನ ನಾಪತ್ತೆ – ಮೂವರ ಶವ ಪತ್ತೆ

    ಯಮುನೆಯಲ್ಲಿ ದೋಣಿ ಮುಳುಗಿ 17 ಜನ ನಾಪತ್ತೆ – ಮೂವರ ಶವ ಪತ್ತೆ

    ಲಕ್ನೋ: 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ದೋಣಿ ನದಿಯಲ್ಲಿ ಮುಳುಗಿ, ಅದರಲ್ಲಿದ್ದ 17 ಜನರು ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಯಮುನಾ ನದಿಯಲ್ಲಿ ನಡೆದಿದೆ. ಗುರುವಾರ ನಡೆದ ಘಟನೆಯಲ್ಲಿ ಇಲ್ಲಿಯವರೆಗೆ ಕೇವಲ ಮೂವರ ಮೃತದೇಹ ಹೊರ ತೆಗೆಯಲಾಗಿದೆ, 13 ಜನರನ್ನು ರಕ್ಷಿಸಲಾಗಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

    ಗುರುವಾರ ಫತೇಪುರ್ ಜಿಲ್ಲೆಯ ಮರ್ಕಾದಿಂದ ಜರೌಲಿ ಘಾಟ್‌ಗೆ ತೆರಳುತ್ತಿದ್ದ ದೋಣಿ ನದಿಯಲ್ಲಿ ಮಗುಚಿ ಬಿದ್ದಿದೆ. ಅದರಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇಬ್ಬರು ಮಹಿಳೆಯರು ಹಾಗೂ ಮಗುವಿನ ಶವ ನದಿಯಿಂದ ಹೊರತೆಗೆಯಲಾಗಿದೆ. ಇದನ್ನೂ ಓದಿ: ಪಂಚಾಯತ್‌ ದಲಿತ ಅಧ್ಯಕ್ಷರು ಕುರ್ಚಿಯಲ್ಲಿ ಕೂರುವಂತಿಲ್ಲ, ಸ್ವಾತಂತ್ರ್ಯ ದಿನ ಧ್ವಜ ಹಾರಿಸುವಂತಿಲ್ಲ: ಸರ್ವೇಯಿಂದ ತಾರತಮ್ಯ ಬೆಳಕಿಗೆ

    ಜಿಲ್ಲೆಯ ಮಾರ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಡಿಐಜಿ ಮಿಶ್ರಾ ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಸಹಾಯಕ್ಕಾಗಿ ಪ್ರಯಾಗ್‌ರಾಜ್‌ನಿಂದ ಡೈವರ್‌ಗಳನ್ನೂ ಕರೆಸಲಾಗಿದೆ. ಇದನ್ನೂ ಓದಿ: ಶೀಘ್ರವೇ ಉದ್ಘಾಟನೆಗೊಳ್ಳಲಿದೆ ದೆಹಲಿ-ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಚಿವರಾದ ರಾಕೇಶ್ ಸಚನ್ ಮತ್ತು ರಾಮಕೇಶ್ ನಿಶಾದ್ ಅವರನ್ನು ಸ್ಥಳಕ್ಕೆ ತಲುಪುವಂತೆ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ವಿಪತ್ತು ಪರಿಹಾರ ನಿಧಿಯಿಂದ ತಲಾ 4 ಲಕ್ಷ ರೂ. ಆರ್ಥಿಕ ನೆರವು ನೀಡಲು ಸೂಚನೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕುಟುಂಬ ಪ್ರವಾಸ ದುರಂತ ಅಂತ್ಯ – ದೋಣಿ ಮುಳುಗಿ 8 ಮಂದಿ ಸಾವು

    ಕುಟುಂಬ ಪ್ರವಾಸ ದುರಂತ ಅಂತ್ಯ – ದೋಣಿ ಮುಳುಗಿ 8 ಮಂದಿ ಸಾವು

    ರಾಂಚಿ: ಪ್ರವಾಸಕ್ಕೆಂದು ದೋಣಿಯಲ್ಲಿ ತೆರಳಿದ್ದ ಒಂದೇ ಕುಟುಂಬದ 8 ಸದಸ್ಯರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

    ಜಾರ್ಖಂಡ್‌ನ ಕೊಡೆರ್ಮಾ ಜಿಲ್ಲೆಯ ಪಂಚಖೆರೋ ಅಣೆಕಟ್ಟಿನಲ್ಲಿ ಭಾನುವಾರ ದೋಣಿ ಮುಳುಗಿದ್ದು, ಒಂದೇ ಕುಟುಂಬದ 8 ಜನರು ಸಾವನ್ನಪ್ಪಿದ್ದಾರೆ. ದೋಣಿಯನ್ನು ಬಾಡಿಗೆ ಪಡೆದು ವಿಹಾರಕ್ಕೆ ತೆರಳಿದ್ದ ಕುಟುಂಬ ದುರಂತ ಅಂತ್ಯ ಕಂಡಿದೆ. ಇದನ್ನೂ ಓದಿ: ಕುಡಿದು ವಾಹನ ಚಲಾಯಿಸಿದ್ರೆ ರಕ್ತದಾನ ಮಾಡುವ ಶಿಕ್ಷೆ

    ದೋಣಿಯಲ್ಲಿ ತೆರಳಿದ್ದ 9 ಜನರ ಪೈಕಿ ಕೇವಲ ಒಬ್ಬರು ಮಾತ್ರವೇ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ. ಶಿವಂ ಸಿಂಗ್(17), ಪಾಲಕ್ ಕುಮಾರಿ(14), ಸೀತಾರಾಮ್ ಯಾದವ್(40), ಸೇಜಲ್ ಕುಮಾರಿ(16), ಹರ್ಷಲ್ ಕುಮಾರ್(8), ಭಾವಾ(5), ರಾಹುಲ್ ಕುಮಾರ್(16) ಹಾಗೂ ಅಮಿತ್ ಕುಮಾರ್(14) ಸಾವನ್ನಪ್ಪಿದ್ದು, ಪ್ರದೀಪ್ ಕುಮಾರ್ ಈಜಿ ದಡ ಸೇರಿದ್ದಾರೆ. ಇದನ್ನೂ ಓದಿ: ಸ್ಪೈಸ್‌ಜೆಟ್ ವಿಮಾನ ಹಾರಾಟ ನಿಲ್ಲಿಸಿ – ದೆಹಲಿ ಹೈಕೋರ್ಟ್‌ನಲ್ಲಿ ಮನವಿ

    ಈಜಿ ದಡ ಸೇರಿದ ಪ್ರದೀಪ್ ಘಟನೆ ಬಗ್ಗೆ ಸ್ಥಳೀಯರಲ್ಲಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಹಾಗೂ ಶೋಧ ಕಾರ್ಯ ನಡೆಸಿದೆ. ಘಟನೆ ಬಗ್ಗೆ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಸಂತಾಪ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರವಾಹದ ನಡುವೆಯೂ ಮದುವೆಯಾಗಲು ದೋಣಿ ಏರಿ ಹೊರಟ ವಧು

    ಪ್ರವಾಹದ ನಡುವೆಯೂ ಮದುವೆಯಾಗಲು ದೋಣಿ ಏರಿ ಹೊರಟ ವಧು

    ಅಮರಾವತಿ: ಆಂಧ್ರಪ್ರದೇಶದ ಕರಾವಳಿ ಭಾಗದ ಕೋನಸೀಮಾ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಆವರಿಸಿದೆ. ಸಂಪೂರ್ಣ ನೀರು ತುಂಬಿಕೊಂಡಿದ್ದು ಕೆಲ ಕಡೆ ರಸ್ತೆಗಳೇ ಕಾಣದಂತಾಗಿದೆ. ಹೊಲ-ಗದ್ದೆ, ತೋಟಗಳೂ ಜಲಾವೃತವಾಗಿವೆ. ಈ ನಡುವೆಯೂ ವಧು ಮದುವೆಯಾಗಲು ತನ್ನ ಕುಟುಂಬದೊಂದಿಗೆ ದೋಣಿಯಲ್ಲಿ ವರನ ಮನೆಗೆ ತೆರಳಿದ್ದಾರೆ.

    https://mobile.twitter.com/umasudhir/status/1547814747512647680?ref_src=twsrc%5Etfw%7Ctwcamp%5Etweetembed%7Ctwterm%5E1547814747512647680%7Ctwgr%5E%7Ctwcon%5Es1_&ref_url=http%3A%2F%2Fapi-news.dailyhunt.in%2F

    ಆಂಧ್ರಪ್ರದೇಶದ ಅಶೋಕ್ ಮತ್ತು ಪ್ರಶಾಂತಿ ಎಂಬ ಜೋಡಿ ಕಳೆದ ಆಗಸ್ಟ್‌ನಲ್ಲಿ ಮದುವೆಯಾಗಬೇಕಿತ್ತು. ಆದರೆ ಅವರು ಇದೇ ಜುಲೈನಲ್ಲಿ ಮದುವೆಯಾಗಲು ಬಯಸಿದ್ದರು. ಇದಕ್ಕೆ ಕುಟುಂಬಸ್ಥರೂ ಒಪ್ಪಿಗೆ ನೀಡಿ ಮದುವೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಕನ್ನಡದಲ್ಲೂ ನಟಿಸಿರುವ ಈ ನಟಿ ಮಕ್ಕಳ ಚಿಕಿತ್ಸೆಗೆ 67 ಲಕ್ಷ ದಾನ

    ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಲವು ಪ್ರದೇಶಗಳು ಜಲಾವೃತವಾಗಿವೆ. ಆದರೂ ವಧು ಪ್ರಶಾಂತಿ ಕುಟುಂಬ ಮತ್ತು ಸಂಬಂಧಿಕರು ಸಕಲ ಸಿದ್ಧತೆಯೊಂದಿಗೆ ವರ ಅಶೋಕ್ ಮನೆಗೆ ದೋಣಿಯಲ್ಲಿ ಹೊರಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೋಣಿ ದುರಂತ- ಮಕ್ಕಳು ಸೇರಿ 22 ಮಂದಿ ದುರ್ಮರಣ

    ದೋಣಿ ದುರಂತ- ಮಕ್ಕಳು ಸೇರಿ 22 ಮಂದಿ ದುರ್ಮರಣ

    ಟ್ರಿಪೋಲಿ: ಲಿಬಿಯಾ ಕರಾವಳಿಯಲ್ಲಿ ನಡೆದ ದೋಣಿ ದುರಂತದಲ್ಲಿ ಮೂವರು ಮಕ್ಕಳು ಸೇರಿದಂತೆ 22 ಜನರು ಸಾವನ್ನಪ್ಪಿದ ಘಟನೆ ನಡೆದಿದೆ.

    ಜೂನ್ 22ರಂದು 83 ವಲಸಿಗರು ಲಿಬಿಯಾದ ಝುವರಾ ನಗರದಿಂದ ರಬ್ಬರ್ ಬೋಟ್‍ನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ದೋಣಿ ದುರಂತ ಉಂಟಾಗಿದೆ. ಘಟನೆ ನಡೆದ 9 ದಿನಗಳ ಬಳಿಕ 61 ಜನರನ್ನು ಲಿಬಿಯಾ ಕರಾವಳಿ ಪಡೆ ರಕ್ಷಿಸಿದೆ. ಇದರಲ್ಲಿ ಹೆಚ್ಚಿನವರು ಮಾಲಿಯನ್ ಪ್ರಜೆಗಳಾಗಿದ್ದರು ಎಂದು ವಿಶ್ವಸಂಸ್ಥೆಯ ವಲಸಿಗರ ಅಂತಾರಾಷ್ಟ್ರೀಯ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ನೋಡಲ್ಲ ಅಂದ್ರೆ ಮುಖ ನೋಡಲ್ಲ, ಮಾತಾಡಲ್ಲ ಅಂದ್ರೆ ಮಾತಾಡಲ್ಲ ಅಷ್ಟೇ – ಇದು ಸಿದ್ದು ವರಸೆ

    ನೀರಿನಲ್ಲಿ ಮುಳುಗಿ ಮತ್ತು ನಿರ್ಜಲೀಕರಣದಿಂದ 22 ಮಂದಿ ವಲಸಿಗರು ಮೃತಪಟ್ಟಿದ್ದಾರೆ ಎಂದು ಬದಕುಳಿದವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಬದುಕುಳಿದವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಅವರೆಲ್ಲರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟ ರೋಪ್ ವೇ ನಿರ್ಧಾರ ಕೈ ಬಿಟ್ಟ ಜಿಲ್ಲಾಡಳಿತ

    Live Tv
    [brid partner=56869869 player=32851 video=960834 autoplay=true]

  • ಅಸ್ಸಾಂನಲ್ಲಿ ಭೀಕರ ಪ್ರವಾಹ – ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ಸ್ವತಃ ಅಂಬಿಗರಾದ ಸಚಿವ

    ಅಸ್ಸಾಂನಲ್ಲಿ ಭೀಕರ ಪ್ರವಾಹ – ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ಸ್ವತಃ ಅಂಬಿಗರಾದ ಸಚಿವ

    ದಿಸ್ಪುರ: ಅಸ್ಸಾಂ ಜನತೆ ಕಳೆದ 15 ದಿನಗಳಿಂದ ಪ್ರವಾಹದ ಭೀಕರತೆಗೆ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಅಸ್ಸಾಂನ ಸಚಿವರೊಬ್ಬರು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜನರ ನೆರವಿಗೆ ನಿಂತು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಾತ್ರರಾಗಿದ್ದಾರೆ.

    ಹೌದು, ರಾಜ್ಯದ ಮುಳುಗಡೆಯಾದ ಪ್ರದೇಶದಲ್ಲಿ ಸಾರಿಗೆ ಸಚಿವ ಪರಿಮಾಲ್ ಸುಕ್ಲಬೈದ್ಯ ಅವರು ಸ್ವತಃ ಅಂಬಿಗನಾಗಿ ದೋಣಿ ಮೂಲಕ, ಡಯಾಲಿಸಿಸ್‌ ಮಾಡಿಸಬೇಕಿದ್ದ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ಮುಸ್ಲಿಂ ಯುವಕರಿಗೆ ಉತ್ತೇಜನ – ವಿಶೇಷ ಅಭಿಯಾನ

    ಸುಕ್ಲಬೈದ್ಯ ಅವರು ಮರದ ದೋಣಿಗೆ ಸ್ವತಃ ಅಂಬಿಗರಾಗಿ ಹುಟ್ಟು ಹಾಕಿ ಬರಾಕ್ ಕಣಿವೆಯ ಪ್ರವಾಹ ಪೀಡಿತ ಪ್ರದೇಶದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

    ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳು ಮತ್ತು ಅದರ ಉಪನದಿಗಳು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಉಕ್ಕಿ ಹರಿಯುತ್ತಿವೆ. ರಾಜ್ಯದ ಒಟ್ಟು 36 ಜಿಲ್ಲೆಗಳ ಪೈಕಿ 32 ರಲ್ಲಿ ಭೂಪ್ರದೇಶಗಳು ಮುಳುಗಡೆಯಾಗಿವೆ. ಸಾರಿಗೆ ಸಚಿವರು ಕ್ಯಾಚಾರ್‌ನ ಸಿಲ್ಚಾರ್‌ನಲ್ಲಿ ಮೊಕ್ಕಾಂ ಹೂಡಿದ್ದು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಮೂರು ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ಬರಾಕ್ ಕಣಿವೆಯಲ್ಲಿನ ಪ್ರವಾಹ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 5 ಸ್ಟಾರ್‌ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಫುಲ್‌ ಬಿಂದಾಸ್ – ದಿನದ ಖರ್ಚು ಎಷ್ಟು ಗೊತ್ತಾ?‌

    ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗುರುವಾರ ಮತ್ತಷ್ಟು ಭೀಕರವಾಗಿದ್ದು, 30 ಜಿಲ್ಲೆಗಳಲ್ಲಿ 45.34 ಲಕ್ಷ ಜನರು ಇನ್ನೂ ಸಂಕಷ್ಟದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv

  • ದೋಣಿ ಸಮಸ್ಯೆ – ಪ್ರಾಣ ಉಳಿಸಿಕೊಳ್ಳಲು ನೀರಿಗೆ ಹಾರಿದ ನಾಲ್ವರಲ್ಲಿ ಓರ್ವ ಯುವಕ ಸಾವು

    ದೋಣಿ ಸಮಸ್ಯೆ – ಪ್ರಾಣ ಉಳಿಸಿಕೊಳ್ಳಲು ನೀರಿಗೆ ಹಾರಿದ ನಾಲ್ವರಲ್ಲಿ ಓರ್ವ ಯುವಕ ಸಾವು

    ಹೈದರಾಬಾದ್: ಫ್ಲೋರಿಡಾದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ತೆಲಂಗಾಣದ 25 ವರ್ಷದ ವಿದ್ಯಾರ್ಥಿಯೊಬ್ಬ ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

    ಮೃತ ದುರ್ದೈವಿಯನ್ನು ಯಶವಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಇವರು ರಾಜಣ್ಣ-ಸಿರ್ಸಿಲ್ಲಾ ಜಿಲ್ಲೆಯ ವೇಮುಲವಾಡ ನಿವಾಸಿಯಾಗಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಹೈದರಾಬಾದ್‍ನಲ್ಲಿ ಬಿಟೆಕ್ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.

    ಭಾನುವಾರ ಯಶವಂತ್ ತನ್ನ ಸ್ನೇಹಿತರಾದ ಚರಣ್, ಮೈಸೂರ, ಶ್ರೀಕರ್ ಮತ್ತು ರ್ವರಿ ಅವರೊಂದಿಗೆ ಪಾಂಟೂನ್ ಬೋಟ್ ನಿಂದ ಪಶ್ಚಿಮ ಫ್ಲೋರಿಡಾ ಕ್ರ್ಯಾಬ್ ದ್ವೀಪಕ್ಕೆ ಹೊರಟಿದ್ದರು. ಈ ಮಧ್ಯೆ ದೋಣಿಯಲ್ಲಿ ಸಮಸ್ಯೆ ಕಂಡು ಬಂದಿದ್ದು, ನಂತರ ಕೆಲವರು ಪ್ರಾಣವನ್ನು ಉಳಿಸಿಕೊಳ್ಳಲು ನೀರಿಗೆ ಹಾರಿದ್ದಾರೆ. ಇದನ್ನೂ ಓದಿ: ರಾಜ್‍ ಠಾಕ್ರೆ ಆಸ್ಪತ್ರೆಗೆ ದಾಖಲು- ನಾಳೆ ಶಸ್ತ್ರಚಿಕಿತ್ಸೆ

    ಈ ವೇಳೆ ಸಮುದ್ರದ ಅಲೆಯಲ್ಲಿ ಯಶವಂತ್ ಕುಮಾರ್ ಕೊಚ್ಚಿ ಹೋಗಿದ್ದಾರೆ. ನೀರಿನಲ್ಲಿ ಮುಳುಗಿದ್ದ ಉಳಿದ ನಾಲ್ವರನ್ನು ಒಕಲೂಸಾ ಕೌಂಟಿ ಶೆರಿಫ್ಸ್ ಆಫೀಸ್ (ಒಸಿಎಸ್‍ಒ ಹಡಗು) ಎಫ್‍ಡಬ್ಲೂ ಹಡಗು ಮತ್ತು ಯುಎಸ್‍ಸಿಜಿ ಹಡಗಿನ ಮೂಲಕ ರಕ್ಷಿಸಲಾಗಿದೆ. ಆದರೆ ಅಲೆಗಳು ಹೆಚ್ಚಾಗಿದ್ದ ಕಾರಣ ಯಶವಂತ್ ದೋಣಿಯನ್ನು ತಲುಪಲು ಸಾಧ್ಯವಾಗಲಿಲ್ಲ.

    ಘಟನೆ ವೇಳೆ ನಾಪತ್ತೆಯಾಗಿದ್ದ ಯಶವಂತ್ ಮೃತದೇಹ ಸೋಮವಾರ ರಾತ್ರಿ ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಮಾಡುವಂತೆ ಸಿಎಂಗೆ ರಮೇಶ್ ಕುಮಾರ್ ಪತ್ರ