Tag: boat

  • ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ

    ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ

    – ರಕ್ಷಣೆಗೆ ಕ್ಸಿ ಜಿನ್‌ಪಿಂಗ್ ಆದೇಶ

    ಬೀಜಿಂಗ್: ಮೀನುಗಾರಿಕೆಗೆ ತೆರಳಿದ್ದ ಚೀನಾದ (China) ದೋಣಿಯೊಂದು (Fishing Boat) ಹಿಂದೂ ಮಹಾಸಾಗರದಲ್ಲಿ (Indian Ocean) ಮುಳುಗಡೆಯಾಗಿದ್ದು, ಅದರಲ್ಲಿದ್ದ 39 ಜನರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

    ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದೋಣಿಯಲ್ಲಿ ಚೀನಾದ 17 ಪ್ರಜೆಗಳು, ಇಂಡೋನೇಷ್ಯಾದ 17 ಜನ ಹಾಗೂ ಫಿಲಿಪೈನ್ಸ್‌ನ ಐವರು ಇದ್ದರು ಎಂದು ಚೀನಾ ಸೆಂಟ್ರಲ್ ಟೆಲಿವಿಷನ್ (CCTV) ತಿಳಿಸಿದೆ.

    ಇದೀಗ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಹಾಗೂ ಪ್ರಧಾನಿ ಲಿ ಕಿಯಾಂಗ್ (Li Qiang)ವಿದೇಶಗಳಲ್ಲಿರುವ ಚೀನಾದ ರಾಜತಾಂತ್ರಿಕರಿಗೆ ಹಾಗೂ ಕೃಷಿ ಮತ್ತು ಸಾರಿಗೆ ಸಚಿವಾಲಯಗಳಿಗೆ ಬದುಕುಳಿದವರನ್ನು ಹುಡುಕಲು ಹಾಗೂ ರಕ್ಷಿಸಲು ಆದೇಶಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಲೇಡಿ ಡಾನ್‌ನಿಂದ ಉದ್ಯಮಿ ಮೇಲೆ ಹಲ್ಲೆ

    ಆಸ್ಟ್ರೇಲಿಯಾ ಮತ್ತು ಇತರ ಹಲವು ದೇಶಗಳಿಂದ ರಕ್ಷಣಾ ತಂಡಗಳು ಹುಡುಕಾಟಕ್ಕಾಗಿ ಘಟನಾ ಸ್ಥಳಕ್ಕೆ ತೆರಳಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಚೀನಾ 2 ಹಡಗುಗಳನ್ನು ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕಕ್ಕೆ ಹಾರಲಿದ್ದಾರೆ ರಾಹುಲ್ – 10 ದಿನ ಪ್ರವಾಸ

  • ದೋಣಿ ದುರಂತ- ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಕೇರಳ ಸರ್ಕಾರ

    ದೋಣಿ ದುರಂತ- ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಕೇರಳ ಸರ್ಕಾರ

    ತಿರುವನಂತಪುರಂ: ಪ್ರವಾಸಿ ದೋಣಿ (Tourist Boat) ಮುಳುಗಡೆಯಾಗಿ 22 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಕೇರಳ ಸರ್ಕಾರ (Kerala Government) ಘೋಷಣೆ ಮಾಡಿದೆ.

    ಪ್ರವಾಸಿ ದೋಣಿ ದುರಂತ ಸಂಬಂಧ ಕೇರಳ ಸರ್ಕಾರವು ಸಂಪೂರ್ಣ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಕೂಡ ಸರ್ಕಾರವೇ ಭರಿಸಲಿದೆ. ಪೊಲೀಸ್ ವಿಶೇಷ ತನಿಖಾ ತಂಡವು ಈ ಸಂಬಂಧ ತನಿಖೆ ನಡೆಸಲಿದೆ ಎಂದು ಸಿಎಂಒ ಮಾಹಿತಿ ನೀಡಿದೆ.

    ಇತ್ತ ಘಟನೆಯಲ್ಲಿ ಮೃತಪಟ್ಟ ಕುಟುಂಬಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಂತಾಪ ಸೂಚಿಸಿದ್ದು, ಪರಿಹಾರ ನಿಧಿಯಿಂದ 2 ಲಕ್ಷ ರೂ. ಘೋಷಿಸಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ದೋಣಿ ದುರಂತದಿಂದ ಪ್ರಾಣಹಾನಿಯಾಗಿರುವುದು ನೋವು ತಂದಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಪಿಎಂಎನ್‍ಆರ್ ಎಫ್‍ನಿಂದ 2 ಲಕ್ಷ ರೂ.ವನ್ನು ಮೃತರ ಮುಂದಿನ ಸಂಬಂಧಿಕರಿಗೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್‍ನಲ್ಲಿ ತಿಳಿಸಿದ್ದರು.

    ಏನಿದು ಘಟನೆ?: ಸುಮಾರು 30 ಮಂದಿಯಿದ್ದ ಪ್ರವಾಸಿ ದೋಣಿಯು ಭಾನುವಾರ ಮಲಪ್ಪುರಂನ ತನೂರಿನ ತೂವಲ್ತೀರಂ ಕಡಲತೀರದ ಸಮೀಪ ಸಂಜೆ 7 ಗಂಟೆ ಸುಮಾರಿಗೆ ಮುಳುಗಡೆಯಾಗಿತ್ತು. ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, ಸುಮಾರು 7 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇದನ್ನೂ ಓದಿ: ಪ್ರವಾಸಿ ದೋಣಿ ಮುಳುಗಡೆ – ಮಕ್ಕಳು ಸೇರಿದಂತೆ 22 ಮಂದಿ ನೀರುಪಾಲು

    ಈ ಸಂಬಂಧ ಮಲಪ್ಪುರಂ ಪೊಲೀಸರು ಮಾಧ್ಯಮದ ಜೊತೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆಯ ಬಳಿಕ ದುರಂತ ಸಂಬಂಧ ತನಿಖೆ ನಡೆಸುತ್ತೇವೆ. ಹೆಚ್ಚಿನ ಜನ ಹಾಕಿಕೊಂಡು ಹೋಗಿರುವುದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಆದರೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಘಟನೆಯ ಬಳಿಕ ದೋಣಿಯ ಮಾಲೀಕ ನಜಾರ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದ್ದಾರೆ.

  • ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ – 14 ಮೀನುಗಾರರ ರಕ್ಷಣೆ

    ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ – 14 ಮೀನುಗಾರರ ರಕ್ಷಣೆ

    ಕಾರವಾರ: ಮೀನುಗಾರಿಕೆಗೆ (Fishing) ತೆರಳಿದ್ದ ಬೋಟ್ (Boat) ಮುಳುಗಡೆಯಾಗಿ (Drown) 14 ಜನ ಮೀನುಗಾರರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavara) ಭಾಗದ ಆಳ ಸಮುದ್ರದಲ್ಲಿ ನಡೆದಿದೆ.

    ಎರಡು ದಿನದ ಹಿಂದೆ ಹೊನ್ನಾವರದ ಕಾಸರಕೋಡಿನಿಂದ (Kasarkod) ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಹೆಚ್.ಎಮ್ ಅಂಗಳೂರು ಎಂಬ ಹೆಸರಿನ ಮೀನುಗಾರಿಕಾ ಬೋಟ್ ತಳಭಾಗದಲ್ಲಿ ಒಡೆದುಹೋಗಿ ಬೋಟ್‌ಗೆ ನೀರು ತುಂಬಿತ್ತು. ಇದನ್ನೂ ಓದಿ: ಚಿನ್ನದ ಗಣಿಯಲ್ಲಿ ಬೆಂಕಿ ದುರಂತ – 27 ಕಾರ್ಮಿಕರು ಸಾವು

    ಈ ವೇಳೆ ಅಲ್ಲಿಯೇ ಮೀನುಗಾರಿಕೆ ಮಾಡುತ್ತಿದ್ದ ಅನಸೂಯ ಎಂಬ ಹೆಸರಿನ ಬೋಟ್ ಮೂಲಕ 14 ಜನ ಮೀನುಗಾರರ ರಕ್ಷಣೆ ಮಾಡಿ ಹೊನ್ನಾವರದ ಕಾಸರಕೋಡ ಬಂದರಿಗೆ ಸುರಕ್ಷಿತವಾಗಿ ಕರೆತರಲಾಗಿದೆ. ಇದನ್ನೂ ಓದಿ: ಪ್ರವಾಸಿ ದೋಣಿ ಮುಳುಗಡೆ – ಮಕ್ಕಳು ಸೇರಿದಂತೆ 22 ಮಂದಿ ನೀರುಪಾಲು

  • ಹಿಂದೂ ಮಹಾಸಾಗರದಲ್ಲಿ ಮುಳುಗಿದ ವಲಸಿಗರ ದೋಣಿ – 34 ಮಂದಿ ಸಾವು

    ಹಿಂದೂ ಮಹಾಸಾಗರದಲ್ಲಿ ಮುಳುಗಿದ ವಲಸಿಗರ ದೋಣಿ – 34 ಮಂದಿ ಸಾವು

    ಮಡಗಾಸ್ಕರ್: ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿ ಹಿಂದೂ ಮಹಾಸಾಗರದಲ್ಲಿ ಮುಳುಗಿ 34 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ. ಈ ದೋಣಿ ಮಯೊಟ್ಟೆ ದ್ವೀಪದ ಕಡೆಗೆ ಸಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದೋಣಿಯಲ್ಲಿ ಒಟ್ಟು 58 ಮಂದಿ ವಲಸಿಗರು ಪ್ರಯಾಣಿಸುತ್ತಿದ್ದರು. ದೋಣಿ ರಹಸ್ಯವಾಗಿ ತೆರಳುತ್ತಿತ್ತು. ಮಡಗಾಸ್ಕರ್‌ನ ವಾಯುವ್ಯ ಕರಾವಳಿಯಲ್ಲಿ ಶನಿವಾರ ರಾತ್ರಿ ದೋಣಿ ಮುಳುಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅವಘಡಕ್ಕೆ ಸಿಲುಕಿ ಮುಳುಗುತ್ತಿದ್ದ 24 ಮಂದಿಯನ್ನು ರಕ್ಷಿಸಲಾಗಿದೆ. ಮೂವರು ಮಕ್ಕಳು ಸೇರಿ 34 ಮೃತದೇಹಗಳನ್ನು ಹೊರತೆಗೆಯಲಾಗಿದೆ.

    ರಕ್ಷಿಸಲ್ಪಟ್ಟವರಲ್ಲಿ ಒಬ್ಬ ಗರ್ಭಿಣಿ ಹೊರತು ಉಳಿದವರು ದಡಕ್ಕೆ ಬಂದೊಡನೆ ಎಸ್ಕೇಪ್‌ ಆಗಿದ್ದಾರೆ. ವಲಸಿಗರನ್ನು ಅಕ್ರಮವಾಗಿ ಸಾಗಿಸುತ್ತಿರುವ ಇಬ್ಬರು ಶಂಕಿತ ಕಳ್ಳಸಾಗಣೆದಾರರನ್ನು ಬಂಧಿಸಲು ಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಕನ್ಯಾಕುಮಾರಿಯಲ್ಲಿ ಮಂಗಳೂರಿನ ಮೀನುಗಾರರ ಮೇಲೆ ಹಲ್ಲೆ

    ಕನ್ಯಾಕುಮಾರಿಯಲ್ಲಿ ಮಂಗಳೂರಿನ ಮೀನುಗಾರರ ಮೇಲೆ ಹಲ್ಲೆ

    ಮಂಗಳೂರು: ಕನ್ಯಾಕುಮಾರಿ (Kanyakumari) ಸಮುದ್ರದಲ್ಲಿ (Sea) ಮಂಗಳೂರಿನ (Mangaluru) ಮೀನುಗಾರರ ಮೇಲೆ ಕಲ್ಲೆಸೆದು ಹಲ್ಲೆ ನಡೆಸಿದ ಘಟನೆ ನಡೆದಿದೆ.

    ಆಳ ಸಮುದ್ರದ ಮೀನುಗಾರಿಕೆಗೆ ಮಂಗಳೂರಿನಿಂದ ಸುಮಾರು ಏಳೆಂಟು ಬೋಟ್‍ಗಳು (Boat) ಕನ್ಯಾಕುಮಾರಿ ಬಳಿ ತೆರಳಿದ್ದರು. ಈ ವೇಳೆ ತಮಿಳುನಾಡಿನ ಕನ್ಯಾಕುಮಾರಿ ಬಳಿ ಮಂಗಳೂರು ಮೀನುಗಾರರು (Fishermen) ಮೀನುಗಾರಿಕೆ ನಡೆಸುತ್ತಿದ್ದಾಗ ತಮಿಳು ಮೀನುಗಾರರು ಅವರನ್ನು ತಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಉಗ್ರ ಟೆಕ್ಕಿಯ ಬಂಧನ

    ಅದಾದ ಬಳಿಕ ಸಮುದ್ರದ ಮಧ್ಯೆಯೇ ಹತ್ತಾರು ಬೋಟ್‍ಗಳಿಂದ ಸುತ್ತುವರಿದು ಮಂಗಳೂರಿನ ಮೀನುಗಾರರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲುಗಳನ್ನು ಎಸೆಯುತ್ತಿರುವ ವೀಡಿಯೋ ಮೀನುಗಾರರಿಂದ ಲಭ್ಯವಾಗಿದೆ. ಘಟನೆ ವೇಳೆ ಮಂಗಳೂರಿನ ಏಳೆಂಟು ಮೀನುಗಾರರಿಗೆ ಕಲ್ಲೇಟಿನಿಂದಾಗಿ ಗಾಯಗಳಾಗಿದೆ. ಇದನ್ನೂ ಓದಿ: ಗುಂಡಿಕ್ಕಿ ಬಿಜೆಪಿ ಜಿಲ್ಲಾಧ್ಯಕ್ಷನ ಕೊಲೆ- ನಕ್ಸಲರ ಕೈವಾಡ ಶಂಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಲೇಷ್ಯಾದಲ್ಲಿ ದೋಣಿ ಅಪಘಾತ: ನಟ ವಿಜಯ್  ಆಂಟನಿ ಚಿಕಿತ್ಸೆಗೆ ಸ್ಪಂದನೆ

    ಮಲೇಷ್ಯಾದಲ್ಲಿ ದೋಣಿ ಅಪಘಾತ: ನಟ ವಿಜಯ್ ಆಂಟನಿ ಚಿಕಿತ್ಸೆಗೆ ಸ್ಪಂದನೆ

    ಪಿಚ್ಚೈಕಾರನ್ 2 (Picchaikaran 2) ಸಿನಿಮಾದ ಶೂಟಿಂಗ್ ವೇಳೆ ದೋಣಿ (boat) ಅಪಘಾತದಲ್ಲಿ (accident) ತೀವ್ರ ಗಾಯಗೊಂಡಿದ್ದ ತಮಿಳಿನ ಖ್ಯಾತ ನಟ ವಿಜಯ್ ಆಂಟನಿ (Vijay Antony) ಸ್ಥಿತಿ ಗಂಭೀರ ಎಂದು ಹೇಳಲಾಗಿತ್ತು. ಅವರನ್ನು ಮಲೇಷ್ಯಾದಿಂದ ಚೆನ್ನೈಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ವಿಜಯ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದೂ ಹೇಳಿದ್ದಾರೆ.

    ‘ಪಿಚ್ಚೈಕಾರನ್ 2’ ಸಿನಿಮಾದ ಶೂಟಿಂಗ್ ದೋಣಿಯೊಂದರಲ್ಲಿ ನಡೆಯುತ್ತಿದ್ದ ಸಾಹಸ ಸನ್ನಿವೇಶದ ದೃಶ್ಯದಲ್ಲಿ ದೋಣಿ ಅಪಘಾತಕ್ಕೀಡಾಗಿತ್ತು. ಕೂಡಲೇ ವಿಜಯ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿತ್ರೀಕರಣದಲ್ಲಿ ಭಾಗಿಯಾಗಿದ್ದವರ ಹೇಳಿಕೆಯ ಪ್ರಕಾರ, ‘ಸಮುದ್ರ ಮಧ್ಯ ದೋಣಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಒಂದು ದೋಣಿ ಮತ್ತೊಂದು ದೋಣಿಯನ್ನು ಅಟ್ಟಿಸಿಕೊಂಡು ಬರುವ ದೃಶ್ಯ ಅದಾಗಿತ್ತು. ರಭಸವಾಗಿ ದೋಣಿಗಳು ಬರುವ ವೇಳೆಯಲ್ಲಿ ಒಂದು ದೋಣಿ ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ವಿಜಯ್ ಆಂಟನಿ ತೀವ್ರವಾಗಿ ಗಾಯಗೊಂಡಿದ್ದರು. ಇದನ್ನೂ ಓದಿವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ `ಸತ್ಯ’ ಸೀರಿಯಲ್ ಖ್ಯಾತಿಯ ಸಾಗರ್- ಸಿರಿ ರಾಜು

    ಮಲೇಷ್ಯಾದ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ವಿಜಯ್ ಕುಟುಂಬ ಮಲೇಷ್ಯಾಗೆ ಪ್ರಯಾಣ ಬೆಳೆಸಿತ್ತು. ಅಲ್ಲದೇ, ಅವರನ್ನು ಚೆನ್ನೈಗೆ ಕರೆತರುವ ಕುರಿತು ಪತ್ನಿ ಫಾತಿಮಾ ಹೇಳಿಕೆ ನೀಡಿದ್ದರು. ಅದರಂತೆ ಚೆನ್ನೈಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೊದಲು ಸ್ಥಿತಿ ಚಿಂತಾಜನಕವಾಗಿದ್ದರಿಂದ ವಿಜಯ್ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದರು.

    ಅಪಘಾತದ ರಭಸಕ್ಕೆ ವಿಜಯ್ ಅವರ ಹಲ್ಲು ಮತ್ತು ದವಡೆಗೆ ತೀವ್ರತರಹದ ಪೆಟ್ಟು ಬಿದ್ದಿದೆ. ಮೂಳೆಗಳು ಮುರಿದಿವೆ ಎಂದು ಹೇಳಲಾಗುತ್ತಿದೆ. ಮಲೇಷ್ಯಾದ ಆಸ್ಪತ್ರೆಯಲ್ಲಿ ವಿಜಯ್ ಇರುವಾಗ ಪ್ರಜ್ಞಾಹೀನರಾಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರಿಗೆ ಪ್ರಜ್ಞೆ ಕೂಡ ಬಂದಿದೆ. ಪಿಚ್ಚೈಕಾರನ್ 2 ಸಿನಿಮಾವನ್ನು ಬೇಸಿಗೆಯಲ್ಲಿ ಬಿಡುಗಡೆ ಮಾಡುವುದಾಗಿ ಮೊನ್ನೆಯಷ್ಟೇ ಘೋಷಿಸಿ ಅವರು ಚಿತ್ರೀಕರಣದಲ್ಲಿ ತೊಡಗಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೈಜೀರಿಯಾದಲ್ಲಿ ಹಡಗು ಮುಳುಗಿ 10 ಸಾವು, 60 ಜನ ನಾಪತ್ತೆ

    ನೈಜೀರಿಯಾದಲ್ಲಿ ಹಡಗು ಮುಳುಗಿ 10 ಸಾವು, 60 ಜನ ನಾಪತ್ತೆ

    ಅಬುಜಾ: ಹಡಗೊಂದು (Ship) ಮುಳುಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ 10 ಜನರು ಸಾವನ್ನಪ್ಪಿದ್ದು, ಸುಮಾರು 60 ಜನರು ನಾಪತ್ತೆಯಾಗಿರುವ ಘಟನೆ ನೈಜೀರಿಯಾದ (Nigeria) ಅನಂಬ್ರಾ (Anambra) ರಾಜ್ಯದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಹಡಗಿನಲ್ಲಿ 85 ಜನರಿದ್ದರು. ಭಾರೀ ಅಲೆಗಳ ನಡುವೆ ಹಡಗು ಮುಳುಗಿದ್ದು, ಅದರಲ್ಲಿದ್ದ 10 ಜನರು ಸಾವನ್ನಪ್ಪಿದ್ದಾರೆ. 60 ಜನ ನಾಪತ್ತೆಯಾಗಿದ್ದು, ಅವರ ರಕ್ಷಣೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ಪರ ಘೋಷಣೆ

    ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಇದು ಸ್ಥಳೀಯವಾಗಿ ತಯಾರಿಸಲಾದ ಹಡಗಾಗಿದ್ದು, ಸಮುದ್ರಕ್ಕೆ ಇಳಿದ ಕೆಲವೇ ಹೊತ್ತಿನಲ್ಲಿ ಅದರ ಎಂಜಿನ್ ಹಾಳಾಗಿದೆ. ಬಳಿಕ ಭಾರೀ ಪ್ರಮಾಣದ ಅಲೆಗಳಿಗೆ ಸಿಲುಕಿ ಹಡಗು ಮುಳುಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹ್ಸಾ ಅಮಿನಿ ಸಾವು ಖಂಡಿಸಿ ಪ್ರತಿಭಟನೆ – ಇರಾನ್‌ ಸರ್ಕಾರಿ ಟಿವಿ ಹ್ಯಾಕ್‌ ಮಾಡಿದ ಪ್ರತಿಭಟನಾಕಾರರು

    ಈಗಾಗಲೇ 15 ಜನರನ್ನು ರಕ್ಷಿಸಲಾಗಿದೆ. ನೈಜೀರಿಯಾ ಸೇನೆಯ ಮಿಲಿಟರಿ ವಿಪತ್ತು ನಿರ್ವಹಣಾ ಘಟಕ ಶೋಧಕಾರ್ಯಕ್ಕೆ ಸಹಾಯ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಾಲಯ ಆಚರಣೆ – ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ 24 ಮಂದಿ ಸಾವು

    ಮಹಾಲಯ ಆಚರಣೆ – ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ 24 ಮಂದಿ ಸಾವು

    ಢಾಕಾ: ಬಾಂಗ್ಲಾದೇಶದ (Bangladesh) ಪಂಚಗಢ್‌ನ ಕರಟೋಯಾ ನದಿಯಲ್ಲಿ (Karatoya River) ಭಾನುವಾರ ದೋಣಿ (Boat) ಮುಳುಗಿ 24 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಮಹಾಲಯ ಆಚರಣೆ ಹಿನ್ನೆಲೆ ಔಲಿಯಾ ಘಾಟ್‌ನಿಂದ ಬದ್ಧೇಶ್ವರ ದೇವಸ್ಥಾನದ ಕಡೆ ಹೋಗುತ್ತಿದ್ದ ದೋಣಿ ಮುಳುಗಿದೆ. ದೋಣಿಯಲ್ಲಿ ಬೋಡಾ, ಪಂಚ್‌ಪಿರ್, ಮಾರಿಯಾ ಹಾಗೂ ಬಂಘಾರಿ ಪ್ರದೇಶದ ಹಿಂದೂ ಸಮುದಾಯದ ಜನರು ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ದೋಣಿಯಲ್ಲಿ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಯಾಣಿಕರನ್ನು ಕೂರಿಸಲಾಗಿತ್ತು. ದೋಣಿ ನದಿಯ ಮಧ್ಯ ಭಾಗಕ್ಕೆ ಹೋಗುತ್ತಿದ್ದಂತೆ ಅದು ಮಗುಚಿ ಬಿದ್ದಿದೆ. ಘಟನೆಯಲ್ಲಿ ಕೆಲವರು ಈಜಿ ದಡ ಸೇರಿದ್ದಾರೆ. ಆದರೆ ಹೆಚ್ಚಿನವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 108 ಅಂಬುಲೆನ್ಸ್ ಕರೆ ಸ್ವೀಕಾರ ಸೇವೆ ಪುನರಾರಂಭಗೊಂಡಿದೆ: ಆರೋಗ್ಯ ಇಲಾಖೆ ಸ್ಪಷ್ಟನೆ

    ಘಟನೆಯ ಮಾಹಿತಿ ಸಿಕ್ಕ ತಕ್ಷಣ ಪಂಚಗಢ ಜಿಲ್ಲಾಧಿಕಾರಿ ಮೊಹಮ್ಮದ್ ಜಹುರುಲ್ ಇಸ್ಲಾಂ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆಯ ತನಿಖೆಗೆ 5 ಸದಸ್ಯರ ತಂಡವನ್ನು ರಚಿಸಲಾಗಿದೆ. ನಾಪತ್ತೆಯಾದವರ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬೋಡಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಸುಜೋಯ್ ಕುಮಾರ್ ರಾಯ್ ತಿಳಿಸಿದ್ದಾರೆ.

    ಬಾಂಗ್ಲಾದೇಶದಲ್ಲಿ ಲಕ್ಷಾಂತರ ಜನರು ರಾಜಧಾನಿ ಢಾಕಾ ಅಥವಾ ಪ್ರಮುಖ ನಗರಗಳಿಗೆ ಪ್ರಯಾಣಿಸಲು ದೋಣಿಗಳನ್ನೇ ಅವಲಂಬಿಸಿದ್ದಾರೆ. ದೇಶದಲ್ಲಿ ಬಳಸಲಾಗುವ ಸುಮಾರು ಶೇ.95 ರಷ್ಟು ಮಧ್ಯಮ ಹಾಗೂ ಸಣ್ಣ ಗಾತ್ರದ ದೋಣಿಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ತೂಕ ಇಳಿಸಿ, 10 ಲಕ್ಷ ಬಹುಮಾನ ಗೆಲ್ಲಿ – ಉದ್ಯೋಗಿಗಳಿಗೆ ಫಿಟ್‌ನೆಸ್ ಚ್ಯಾಲೆಂಜ್ ಹಾಕಿದ ಸಿಇಒ

    Live Tv
    [brid partner=56869869 player=32851 video=960834 autoplay=true]

  • ಜನರನ್ನು ರಕ್ಷಣೆ ಮಾಡಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿ ನೀರುಪಾಲು – ಈಜಿ ಪ್ರಾಣಾಪಾಯದಿಂದ ಪಾರು

    ಜನರನ್ನು ರಕ್ಷಣೆ ಮಾಡಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿ ನೀರುಪಾಲು – ಈಜಿ ಪ್ರಾಣಾಪಾಯದಿಂದ ಪಾರು

    ಬಳ್ಳಾರಿ: ಜೀವದ ಹಂಗು ತೊರೆದು ಜನರ ರಕ್ಷಣೆ ಮಾಡಲು ಹೊರಟಿದ್ದ, ಅಗ್ನಿಶಾಮಕ ದಳದ ಸಿಬ್ಬಂದಿಯ ಬೋಟ್ (Boat) ಮುಳುಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಬಳ್ಳಾರಿ (Bellary) ಜಿಲ್ಲೆಯ ಸಿರಗುಪ್ಪಾ ತಾಲೂಕಿನ ಬಲಕುಂದಿ ಗ್ರಾಮದಲ್ಲಿ ನಡೆದಿದೆ.

    ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ತಾಲೂಕಿನ ಬಲಕುಂದಿ ಗ್ರಾಮದ ಬಳಿ ಇರುವ ಶನೇಶ್ವರ ದೇವಾಲಯದಲ್ಲಿ ಮಳೆಯಿಂದಾಗಿ (Rain) ನೀರಿನಲ್ಲಿ ಸಿಲುಕಿದ್ದ ನಾಲ್ಕು ಜನರನ್ನು ರಕ್ಷಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರೆಳಿದ್ದರು. ಈ ವೇಳೆ ಅವರ ಬೋಟ್ ಮಗುಜಿ ಬಿದ್ದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಕೊನೆಗೆ ಇನ್ನೊಂದು ಬೋಟ್ ಮೂಲಕ ಇತರ ಸಿಬ್ಬಂದಿ ತೆರಳಿ ರಕ್ಷಣೆ ಮಾಡಿದ್ದಾರೆ. ಪ್ರಾಣದ ಹಂಗು ತೊರೆದು ತಮ್ಮ ಪ್ರಾಣ ರಕ್ಷಣೆ ಮಾಡುವುದರ ಜೊತೆಗೆ ಉಳಿದ ನಾಲ್ಕು ಜನರನ್ನು ರಕ್ಷಣೆ ಮಾಡಿದ್ದಾರೆ.

    ಇಂದು ಬೆಳಗ್ಗೆ ಶನೇಶ್ವರ ದೇವಸ್ಥಾನದಲ್ಲಿ ಸಿಲುಕಿಕೊಂಡಿದ್ದ ನಾಲ್ಕು ಜನರ ರಕ್ಷಣೆಗಾಗಿ ಅಗ್ನಿಶಾಮಕದಳದ ಸಿಬ್ಬಂದಿ ತೆರಳಿದ್ದರು. ಈ ವೇಳೆ ಅಗ್ನಿಶಾಮಕದಳದ ಸಿಬ್ಬಂದಿ ಇದ್ದ ಬೋಟ್ ಮಗುಜಿ ಬಿದ್ದಿದೆ. ಬಳಿಕ ಅಗ್ನಿಶಾಮಕದಳದ ಸಿಬ್ಬಂದಿ ಈಜಿಕೊಂಡು ಶನೇಶ್ವರ ದೇವಸ್ಥಾನಕ್ಕೆ ತೆರಳಿದ್ದಾರೆ. ಆ ಬಳಿಕ ಇನ್ನೊಂದು ಬೋಟ್ ತರಿಸಿ ಅಲ್ಲಿದ್ದವರನ್ನು ರಕ್ಷಣೆ ಮಾಡಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಅನೇಕ ಬಡಾವಣೆಗಳಿಗೆ ಬೋಟ್‍ನಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ

    ಅನೇಕ ಬಡಾವಣೆಗಳಿಗೆ ಬೋಟ್‍ನಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ

    ಬೆಂಗಳೂರು: ಅನೇಕ ಬಡಾವಣೆಗಳಲ್ಲಿ ನೀರು ತುಂಬಿಕೊಂಡು ಬೋಟ್ (Boat) ನಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಬೋಟ್‍ನಲ್ಲಿ ತಿರುಗಾಡುವ ಪರಿಸ್ಥಿತಿ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಇಂದು ಬೆಂಗಳೂರಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸೋಮವಾರ ಹಾಗೂ ಮಂಗಳವಾರ ಜಾಸ್ತಿ ಮಳೆ ಬಿದ್ದಿದೆ. ರಸ್ತೆಗಳಲ್ಲಿ, ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಸುಮಾರು 12 ಅಡಿ ನೀರು ಇತ್ತು. ಈಗ 4 ಅಡಿ ನೀರು ಇದೆ. ಮನೆಯೆಲ್ಲಾ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದರು. ಇದನ್ನೂ ಓದಿ: ವಾಸಕ್ಕೆ ಯೋಗ್ಯವಲ್ಲ ಎನ್ನುವವರು ಬೆಂಗಳೂರಿಗೆ ಬರಬೇಡಿ: ಮುನಿರತ್ನ

    ನಮ್ಮ ಸರ್ಕಾರದಲ್ಲಿ ಇರುವಾಗ ರಾಜಕಾಲುವೆಗಳನ್ನು ತೆರವುಗೊಳಿಸುವ ಕ್ರಮ ಕೈಗೊಂಡಿದ್ದೇವೆ. ಈಗಿನ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ನಮ್ಮ ಸರ್ಕಾರದಲ್ಲಿ 1953 ಒತ್ತುವರಿ ಜಾಗವನ್ನು ನಾವು ಐಡೆಂಟಿಟಿ ಮಾಡಿದ್ದೇವೆ. 1,300 ಒತ್ತುವರಿ ಜಾಗವನ್ನು ತೆರವು ಮಾಡಿದ್ದೀವಿ. 653 ಒತ್ತವರಿ ಜಾಗವನ್ನು ಇನ್ನೂ ಉಳ್ಕೊಂಡಿವೆ. ನಮ್ಮ ಸರ್ಕಾರ (Government) ಬಿದ್ಹೋಯ್ತು. ನಾವು ಮುಂದುವರಿಸಲಿಲ್ಲ. ಈ ಬಿಜೆಪಿ (BJP) ಸರ್ಕಾರ ಇದನ್ನು ಮುಂದುವರಿಸಿದರೆ ಈ ಪರಿಸ್ಥಿತಿ ಆಗ್ತಿರಲಿಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ (Siddaramaiah) ಕಿಡಿಕಾರಿದರು. ಇದನ್ನೂ ಓದಿ: ಉಗ್ರ ಯಾಕೂಬ್ ಮೆಮನ್ ಸಮಾಧಿ ಸೌಂದರ್ಯೀಕರಣ – ಉದ್ಧವ್‌ ವಿರುದ್ಧ ಬಿಜೆಪಿ ಕಿಡಿ

    ಇಂದಿನ ಸ್ಥಿತಿಗೆ ಹಿಂದಿನ ಸರ್ಕಾರ ಕಾರಣ ಅಂತಾ ಸಿಎಂ ಹೇಳ್ತಾರೆ. ಅವರು ಬಂದು ಮೂರು ವರ್ಷ ಆಯ್ತಲ್ಲ ಏನು ಮಾಡಿದ್ದಾರೆ ಹೇಳಲಿ. ಎಷ್ಟು ಒತ್ತುವರಿ ತೆರವು ಮಾಡಿದ್ದೀವಿ ಅನ್ನೋದನ್ನ ಹೇಳಲಿ. ಎಟಿ ರಾಮಸ್ವಾಮಿ (AT Ramaswamy) ವರದಿ ಮೇಲೆ ಒತ್ತುವರಿ ತೆರವು ಮಾಡಿದ್ವಿ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಹಿಂದಿನ ಸರ್ಕಾರದ ಬಗ್ಗೆ ಹೇಳ್ತಾರೆ. ಬೆಂಗಳೂರನ್ನು ಅನಗತ್ಯವಾಗಿ ಹೆಚ್ಚು ಮಾಡಿಬಿಟ್ರು. 110 ಹಳ್ಳಿಗಳನ್ನು ಸೇರಿಸಿಬಿಟ್ರು. ಒಂದೂವರೆ ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ. ಒಬ್ಬರೇ ಕಮಿಷನರ್ ಹೇಗೆ ನಿರ್ವಹಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

    ಒತ್ತುವರಿ ತೆರವಿಗೆ ಕೂಡ ಬಿಜೆಪಿ ವಿರೋಧ ಮಾಡಿದ್ರು. ಶಾಸಕ ಸುರೇಶ್ ಕುಮಾರ್ (Suresh Kumar) ನೇತೃತ್ವದಲ್ಲಿ ವಿರೋಧ ಮಾಡಿದ್ರು. ಇವತ್ತು ನಾಗರೀಕರಿಗೆ ಸಾಕಷ್ಟು ತೊಂದರೆಯಾಗಿದೆ. ಅವರು ಅಳಲು ತೋಡಿಕೊಂಡಿದ್ದಾರೆ. ಇಲ್ಲಿನ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಏನು ಮಾಡ್ತಿದ್ದಾರೆ. ಬೈರತಿ ಬಸವರಾಜು, ಸತೀಶ್ ರೆಡ್ಡಿ ಏನು ಮಾಡ್ತಿದ್ದಾರೆ. 17 ವರ್ಷದಲ್ಲಿ ಐದು ವರ್ಷ ನಾವಿದ್ವಿ ಉಳಿದ ಕಾಲ ಅವರೇ ಇದ್ದದ್ದು ಅಲ್ವಾ. ಜನರ ದಿಕ್ಕು ತಪ್ಪಿಸಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಒತ್ತುವರಿ ಆಗಲು ಯಾರು ಕಾರಣ..? ಶಾಸಕರೇ ಅಲ್ವಾ. ವಿಧಾನಸಭೆಯಲ್ಲಿ ಇದನ್ನು ನಾನು ಪ್ರಸ್ತಾಪ ಮಾಡುತ್ತೇನೆ. ಬ್ರಾಂಡ್ ಬೆಂಗಳೂರು ಹೆಸರಿಗೆ ಧಕ್ಕೆಯಾಗ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಒಂದು ಖ್ಯಾತಿ ಇದೆ. ಅದನ್ನು ಉಳಿಸಿಕೊಳ್ಳೊ ಪ್ರಯತ್ನ ನಾವು ಮಾಡಬೇಕು ಎಂದರು.

    Live Tv
    [brid partner=56869869 player=32851 video=960834 autoplay=true]