Tag: boat

  • ನಟಿ ಅಮೃತಾ ಆತ್ಮಹತ್ಯೆ: ‘ದೋಣಿ’ ಕಥೆಯ ಹಿಂದಿದೆ ಅನುಮಾನ

    ನಟಿ ಅಮೃತಾ ಆತ್ಮಹತ್ಯೆ: ‘ದೋಣಿ’ ಕಥೆಯ ಹಿಂದಿದೆ ಅನುಮಾನ

    ಡೀ ಕುಟುಂಬ ಮದುವೆಯ ಸಡಗರದಲ್ಲಿ ಸಂಭ್ರಮಿಸುತ್ತಿದ್ದರೆ, ಆ ಕುಟುಂಬಕ್ಕೆ ನೇಣು ಹಾಕಿಕೊಂಡು ಶಾಕ್ ನೀಡಿದ್ದರು ಖ್ಯಾತ ಭೋಜಪುರಿ ನಟಿ ಅಮೃತಾ ಪಾಂಡೆ (Amrita Pandey). ಮುಂಬೈನಲ್ಲಿ ವಾಸವಿದ್ದ ಅಮೃತಾ, ಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾಗಲ್ಪುರಕ್ಕೆ ಬಂದಿದ್ದರು. ಈ ಸಮಯದಲ್ಲಿ ಅವರು ಅಪಾರ್ಟ್‍ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು.

    ಸಾವಿಗೆ ಇಂಥದ್ದೇ ಕಾರಣ ಎಂದು ತಿಳಿದು ಬಂದಿಲ್ಲ. ಆದರೆ, ಸಾವಿಗೂ ಮುನ್ನ ಅವರು ವಾಟ್ಸಪ್ ಸ್ಟೇಟಸ್ ಹಾಕಿದ್ದು, ಅದು ಅನುಮಾನ ಮೂಡಿಸುವಂತಿತ್ತು. ಸ್ಟೇಟಸ್ ಹಾಕಿ ಒಂದು ಗಂಟೆ ನಂತರ ಅಮೃತಾ ಶವವಾಗಿ ಪತ್ತೆಯಾಗಿದ್ದರು. ಈ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ದೋಣಿಯ ಕುರಿತಾದ ಬರಹವಿತ್ತು.

     

    ವಾಟ್ಸಪ್ ಸ್ಟೇಟಸ್ ನಲ್ಲಿ ಅವರು ಅವನ ಜೀವನ 2 ದೋಣಿಯಲ್ಲಿ (Boat) ನಡೆಯುತ್ತಿದೆ. ನಾನು ನನ್ನ ದೋಣೆಯನ್ನು ಮುಳುಗಿಸಿಕೊಳ್ಳುವ ಮೂಲಕ, ಅವನಿಗೆ ದೋಣಿಗೆ ಸುಗಮ ದಾರಿ ಮಾಡಿಕೊಡುವೆ ಎಂದು ಬರೆದುಕೊಂಡಿದ್ದರು. ಈ ದೋಣಿಯ ಅರ್ಥ ಅವರ ಪತಿ ಎಂದು ಹೇಳಲಾಗುತ್ತಿದೆ. ನಟಿಯ ಪತಿಗೆ ಮತ್ತೊಂದು ಸಂಬಂಧವಿತ್ತಾ? ಇದೇ ಕಾರಣಕ್ಕೆ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುತ್ತ ತನಿಖೆ ನಡೆಯುತ್ತಿದೆ.

  • ಅಬ್ಬರದ ಮಳೆಗೆ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ – 4 ಮಂದಿ ಮೀನುಗಾರರ ರಕ್ಷಣೆ

    ಅಬ್ಬರದ ಮಳೆಗೆ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ – 4 ಮಂದಿ ಮೀನುಗಾರರ ರಕ್ಷಣೆ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಅಬ್ಬರದ ಗಾಳಿ ಜೊತೆ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಭಟ್ಕಳದಲ್ಲಿ (Bhatkal) ಅರಬ್ಬಿ ಸಮುದ್ರದಲ್ಲಿ (Arabian Sea) ಮೀನುಗಾರಿಕೆಗೆ (Fishing) ತೆರಳಿದ್ದ ಬೋಟ್ ಮುಳುಗಡೆಯಾಗಿದೆ.

    ಅಬ್ಬರದ ಮಳೆಗೆ ಓಂ ಗಣೇಶ್ ಹೆಸರಿನ ಮಹಾದೇವ ಖಾರ್ವಿ ಎಂಬವರಿಗೆ ಸೇರಿದ ಬೋಟ್ (Boat) ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ ನಾಲ್ಕು ಜನ ಮೀನುಗಾರರನ್ನು (Fishermen) ರಕ್ಷಣೆ ಮಾಡಲಾಗಿದೆ. ಘಟನೆಯಿಂದ ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ಇದನ್ನೂ ಓದಿ: ನನ್ನ ಹೇಳಿಕೆಯಿಂದ ನೇಹಾ ಪೋಷಕರಿಗೆ ಬೇಸರವಾಗಿದ್ದರೆ ವಿಷಾದವಿರಲಿ: ಪರಮೇಶ್ವರ್

    ಕರಾವಳಿ ಭಾಗದ ಕಾರವಾರ, ಅಂಕೋಲ, ಕುಮಟಾ, ಭಟ್ಕಳ ಭಾಗದಲ್ಲಿ ಗುಡುಗು ಸಹಿತ ಮಳೆ ಪ್ರಾರಂಭವಾಗಿದ್ದು, ಬಿಸಿಲಿನ ಅಬ್ಬರಕ್ಕೆ ಇದೇ ಮೊದಲ ಬಾರಿಗೆ ವರುಣ ಕರಾವಳಿ ಭಾಗದಲ್ಲಿ ತಂಪೆರೆದಿದ್ದಾನೆ. ಇದನ್ನೂ ಓದಿ: ನನ್ನ ಮಗ ತಪ್ಪು ಮಾಡಿದ್ದಾನೆ.. ಅವನಿಗೆ ಶಿಕ್ಷೆ ಆಗಲೇಬೇಕು: ಕೊಲೆಗಾರ ಫಯಾಜ್‌ ತಾಯಿ ಕಣ್ಣೀರು

  • ಜಮ್ಮು ಕಾಶ್ಮೀರದಲ್ಲಿ ದೋಣಿ ಮುಳುಗಡೆ – ಶಾಲಾ ಮಕ್ಕಳು ಸೇರಿದಂತೆ ಹಲವರು ನಾಪತ್ತೆ

    ಜಮ್ಮು ಕಾಶ್ಮೀರದಲ್ಲಿ ದೋಣಿ ಮುಳುಗಡೆ – ಶಾಲಾ ಮಕ್ಕಳು ಸೇರಿದಂತೆ ಹಲವರು ನಾಪತ್ತೆ

    ಶ್ರೀನಗರ: ಗಂಡಾಬಾಲ್‌ನಿಂದ ಶ್ರೀನಗರದ (Srinagar) ಬಟ್ವಾರಕ್ಕೆ ಶಾಲಾ ಮಕ್ಕಳು ಮತ್ತು ಸ್ಥಳೀಯರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು (Boat) ಝೇಲಂ ನದಿಯಲ್ಲಿ (Jhelum River) ಮುಳುಗಿದ ಪರಿಣಾಮ ಶಾಲಾ ಮಕ್ಕಳು ಸೇರಿ ಹಲವರು ನಾಪತ್ತೆಯಾಗಿದ್ದಾರೆ.

    ಘಟನಾ ಸ್ಥಳಕ್ಕೆ ಆಗಮಿಸಿದ ರಾಜ್ಯ ವಿಪತ್ತು ಪರಿಹಾರ ಪಡೆ ನಾಪತ್ತೆಯಾದ ಪ್ರಯಾಣಿಕರಿಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬೆಂಗಳೂರಿನ ಕಂಪನಿಯಿಂದ ‘ಸೂರ್ಯ ತಿಲಕ ಯಂತ್ರ’ ಕೊಡುಗೆ – ಏನಿದರ ವೈಶಿಷ್ಟ್ಯ?

    ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಝೇಲಂ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಇದನ್ನೂ ಓದಿ: ಸೇತುವೆಯಿಂದ ಬಸ್‌ ಕೆಳಗೆ ಬಿದ್ದು 5 ಮಂದಿ ಸಾವು

  • ಹರಾನಿ ಸರೋವರದಲ್ಲಿ ದೋಣಿ ಮುಳುಗಿ 9 ಮಕ್ಕಳು ಸೇರಿ 12 ಮಂದಿ ದಾರುಣ ಸಾವು

    ಹರಾನಿ ಸರೋವರದಲ್ಲಿ ದೋಣಿ ಮುಳುಗಿ 9 ಮಕ್ಕಳು ಸೇರಿ 12 ಮಂದಿ ದಾರುಣ ಸಾವು

    – ಮೃತರ ಕುಟುಂಬಸ್ಥರಿಗೆ PMNRFನಿಂದ ತಲಾ 2 ಲಕ್ಷ ಪರಿಹಾರ
    – ರಾಜ್ಯ ಸರ್ಕಾರದಿಂದ ಮೃತ ಕುಟುಂಬಗಳಿಗೆ ತಲಾ ರೂ. 4 ಲಕ್ಷ

    ಗಾಂಧೀನಗರ: ಗುಜರಾತ್‌ನ ವಡೋದರದ (Gujrat Vadodara) ಹರಾನಿ ಸರೋವರದಲ್ಲಿ (Harani Lake) ದೋಣಿ ಮುಳುಗಿ 9 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ.

    ಅಧಿಕಾರಿಗಳ ಪ್ರಕಾರ, ವಿಹಾರಕ್ಕೆಂದು ತೆರಳಿದ್ದ ದೋಣಿಯಲ್ಲಿ (Boat) 23 ಮಕ್ಕಳು ಮತ್ತು ನಾಲ್ವರು ಶಿಕ್ಷಕರು ಇದ್ದರು. ಘಟನೆ ನಡೆದ ಕೂಡಲೇ ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿ ಕೆರೆಯಿಂದ ಐವರು ಮಕ್ಕಳನ್ನು ರಕ್ಷಣೆ ಮಾಡಿದೆ. ಉಳಿದ ವಿದ್ಯಾರ್ಥಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ವಡೋದರಾದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಾರ್ಥ್ ಬ್ರಹ್ಮಭಟ್ ಅವರು, ವಿಹಾರಕ್ಕೆಂದು ಬಂದಿದ್ದ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಹರಾನಿ ಸರೋವರದಲ್ಲಿ ಮಗುಚಿ ಬಿದ್ದಿದೆ. ಅಗ್ನಿಶಾಮಕ ದಳವು ಇದುವರೆಗೆ 7 ವಿದ್ಯಾರ್ಥಿಗಳನ್ನು ರಕ್ಷಿಸಿದೆ, ನಾಪತ್ತೆಯಾದವರಿಗಾಗಿ ಶೋಧ ನಡೆಯುತ್ತಿದೆ. ಅಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮೊದಲೇ ಸ್ಥಳೀಯರು ಕೆಲವು ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.

    PMNRFನಿಂದ ಪರಿಹಾರ: ವಡೋದರದ ಹರಾನಿ ಸರೋವರದಲ್ಲಿ ದೋಣಿ ಮುಳುಗಿ ಆಗಿರುವ ಜೀವಹಾನಿಯಿಂದ ನೊಂದಿದ್ದೇನೆ. ಈ ದುಃಖದ ಸಮಯದಲ್ಲಿ ಮೃತರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಸ್ಥಳೀಯಾಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುತ್ತದೆ. ಗಾಯಾಳುಗಳಿಗೆ ರೂ. 50,000 ನೀಡಲಾಗುವುದು ಎಂದು PMO ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

    ಈ ದುರಂತ ಘಟನೆಯ ನಂತರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಸಂತಾಪ ವ್ಯಕ್ತಪಡಿಸಿದ್ದಾರೆ. ವಡೋದರದ ಹರನಿ ಸರೋವರದಲ್ಲಿ ನಡೆದ ಅವಘಡ ಅತ್ಯಂತ ಹೃದಯ ವಿದ್ರಾವಕವಾಗಿದೆ. ಪ್ರಾಣ ಕಳೆದುಕೊಂಡ ಅಮಾಯಕ ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈ ಸಮಯದಲ್ಲಿ ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಆಶಿಸುತ್ತೇನೆ.  ಅವಘಡದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ರೂ. 4 ಲಕ್ಷ ಹಾಗೂ ಗಾಯಗೊಂಡವರಿಗೆ ರೂ. 50,000 ಪರಿಹಾರ ನೀಡುತ್ತದೆ  ಎಂದು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • ಅರಬ್ಬಿ ಸಮುದ್ರದಲ್ಲಿ 26 ಜನ ಮೀನುಗಾರರ ರಕ್ಷಣೆ

    ಅರಬ್ಬಿ ಸಮುದ್ರದಲ್ಲಿ 26 ಜನ ಮೀನುಗಾರರ ರಕ್ಷಣೆ

    ಕಾರವಾರ: ಎಂಜಿನ್ ಸಮಸ್ಯೆಯಿಂದ ಅರಬ್ಬಿ ಸಮುದ್ರದಲ್ಲಿ (Arabian Sea) ದಾರಿ ತಪ್ಪಿದ್ದ ಬೋಟನ್ನು (Boat) ಸುರಕ್ಷಿತವಾಗಿ ಕೋಸ್ಟ್ ಗಾರ್ಡ್ (Coast Guard) ಸಿಬ್ಬಂದಿ ಕಾರವಾರದ (Karwar) ವಾಣಿಜ್ಯ ಬಂದರಿಗೆ ಕರೆತಂದಿದ್ದಾರೆ.

    ಗೋವಾ ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟ್ ಇದಾಗಿದ್ದು, ಇದರಲ್ಲಿದ್ದ 26 ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. 3 ಕನ್ನಡಿಗರು ಸೇರಿ 26 ಮಂದಿ ಕಾರ್ಮಿಕರಿದ್ದ ಮೀನುಗಾರಿಕಾ ಬೋಟ್ ಇದಾಗಿದ್ದು, ಗೋವಾದ ಪಣಜಿ ಮೂಲಕ ಅಂಕೋಲ ತಾಲೂಕಿನ ಬೇಲಿಕೇರಿ ಬಂದರು ಬಳಿ ಮೀನುಗಾರಿಕೆ ನಡೆಸುತಿತ್ತು. ಈ ವೇಳೆ ಎಂಜಿನ್ ಸಮಸ್ಯೆಯಾಗಿ 30 ನಾಟಿಕಲ್ ಮೈಲು ದೂರದವರೆಗೆ ಬೋಟ್ ತೇಲಿ ಹೋಗಿದೆ. ಇದನ್ನೂ ಓದಿ: 9 ಸಾವಿರ ಸಾರಿಗೆ ಸಿಬ್ಬಂದಿ ನೇಮಕ: ರಾಮಲಿಂಗಾರೆಡ್ಡಿ

    ಇನ್ನು ಬಾಹ್ಯ ಸಂಪರ್ಕ ಕಡಿದುಹೋದ ಹಿನ್ನೆಲೆ 4 ದಿನ ಸಮುದ್ರದಲ್ಲೇ ಕಾಲ ಕಳೆದ ಮೀನುಗಾರರು ಬೇರೆ ಬೋಟು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ ಸಂಕಷ್ಟದಲ್ಲಿದ್ದರು. ಇಂದು ಬೆಳಗ್ಗೆ ಬೋಟಿನ ಲೋಕೇಶನ್ ಪತ್ತೆಹಚ್ಚಿದ ಕೋಸ್ಟ್‌ಗಾರ್ಡ್‌ನವರು ಮೀನುಗಾರರನ್ನು ಸಂಪರ್ಕಿಸಿ ಸ್ಥಳೀಯ ಮೀನುಗಾರರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಹಾಳಾಗಿದ್ದ ಬೋಟ್ ಅನ್ನು ಮತ್ತೊಂದು ಮೀನುಗಾರಿಕಾ ಬೋಟ್ ಸಹಾಯದಿಂದ ಕಾರವಾರದ ವಾಣಿಜ್ಯ ಬಂದರಿಗೆ ಕರೆತರಲಾಗಿದೆ. ಇದನ್ನೂ ಓದಿ: ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ – ತಿದ್ದುಪಡಿ ಮಸೂದೆ ಮಂಡನೆ : ಏನು ಬದಲಾವಣೆ?

  • ಶ್ರೀಲಂಕಾ ನೌಕಾಪಡೆಯಿಂದ 37 ಭಾರತೀಯ ಮೀನುಗಾರರ ಬಂಧನ – 5 ದೋಣಿಗಳು ವಶ

    ಶ್ರೀಲಂಕಾ ನೌಕಾಪಡೆಯಿಂದ 37 ಭಾರತೀಯ ಮೀನುಗಾರರ ಬಂಧನ – 5 ದೋಣಿಗಳು ವಶ

    ಕೊಲಂಬೊ: ಶ್ರೀಲಂಕಾ ನೌಕಾಪಡೆಯು (Sri Lanka Navy) ಭಾನುವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 37  ಭಾರತೀಯ ಮೀನುಗಾರರನ್ನು (Indian Fishermen) ಬಂಧಿಸಿದ್ದು, ಐದು ದೋಣಿಗಳನ್ನು (Boat) ವಶಪಡಿಸಿಕೊಂಡಿದೆ.

    ಗೌಪ್ಯ ಮೂಲಗಳ ಪ್ರಕಾರ, ಶ್ರೀಲಂಕಾದ ನೀರಿನಲ್ಲಿ ಚೀನಾದ ನೌಕಾಪಡೆಯ ಬೇಹುಗಾರಿಕಾ ಹಡಗು ಲಂಗರು ಹಾಕಿದ ನಂತರ ನೌಕಾಪಡೆಯು ಗಸ್ತು ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಮೊದಲನೇ ಪ್ರಕರಣದಲ್ಲಿ ತಲೈಮನ್ನಾರ್ ಬಳಿ ಮೀನುಗಾರಿಕೆ ನಡೆಸುತ್ತಿದ್ದ ರಾಮೇಶ್ವರಂನ (Rameswaram) 23 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸುತ್ತುವರಿದಿವೆ. ನಂತರ ಅವರನ್ನು ಬಂಧಿಸಿದ್ದು, ಅವರ ಮೂರು ದೋಣಿಗಳನ್ನು ತಲೈಮನ್ನಾರ್ ನೌಕಾ ಶಿಬಿರಕ್ಕೆ ಕರೆದೊಯ್ಯುವ ಮೊದಲು ವಶಪಡಿಸಿಕೊಳ್ಳಲಾಯಿತು. ಇದನ್ನೂ ಓದಿ: ಹಾಟ್‍ಟಬ್‍ನಲ್ಲಿ ನಟ ಶವವಾಗಿ ಪತ್ತೆ

    ಮತ್ತೊಂದು ಘಟನೆಯಲ್ಲಿ ನೆಡುಂತೀವು ಬಳಿ 14 ಮೀನುಗಾರರನ್ನು ಬಂಧಿಸಲಾಗಿದ್ದು, ಅವರ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಅವರನ್ನು ಮಾಯಿಲಟ್ಟಿ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಅಕ್ಟೋಬರ್ 14 ರಿಂದ, ಶ್ರೀಲಂಕಾ ನೌಕಾಪಡೆಯು 64 ಮೀನುಗಾರರನ್ನು ಬಂಧಿಸಿದೆ ಮತ್ತು ಪ್ರತ್ಯೇಕ ಘಟನೆಗಳಲ್ಲಿ 10 ದೋಣಿಗಳನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅವಘಡ – 32 ಮಂದಿ ಸಜೀವ ದಹನ
    ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಶನಿವಾರ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರಿಗೆ ಪತ್ರ ಬರೆದಿದ್ದು, ಮಾಲ್ಡೀವ್ಸ್ ಕೋಸ್ಟ್ ಗಾರ್ಡ್ ವಶದಲ್ಲಿರುವ 12 ಮೀನುಗಾರರನ್ನು ಮತ್ತು ಅವರ ಮೀನುಗಾರಿಕಾ ದೋಣಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಗುಂಡಿನ ದಾಳಿ ನಡೆಸಿದ್ದ ಶೂಟರ್ 2 ದಿನಗಳ ಬಳಿಕ ಶವವಾಗಿ ಪತ್ತೆ
    ಅಕ್ಟೋಬರ್ 1 ರಂದು ತೂತುಕುಡಿ ಜಿಲ್ಲೆಯಿಂದ ಮೀನುಗಾರಿಕೆಗೆ ತೆರಳಿದ ಮೀನುಗಾರರನ್ನು ಅಕ್ಟೋಬರ್ 23 ರಂದು ಬಂಧಿಸಲಾಯಿತು ಎಂದು ಪತ್ರದಲ್ಲಿ ಸ್ಟಾಲಿನ್ ಉಲ್ಲೇಖಿಸಿದ್ದಾರೆ. ಅವರನ್ನು ಬಿಡುಗಡೆ ಮಾಡಲು ಮಾಲ್ಡೀವ್ಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವಂತೆ ಜೈಶಂಕರ್ ಅವರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ದಾಳಿ ನಡೆಸಿ ಹಮಾಸ್‌ ಕಮಾಂಡರ್‌ ಹತ್ಯೆ; 36 ಮಂದಿ ಬಂಧಿಸಿದ ಇಸ್ರೇಲ್‌ ರಕ್ಷಣಾ ಪಡೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೊಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 17 ಮಂದಿ ಸಾವು

    ರೊಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 17 ಮಂದಿ ಸಾವು

    ನೇಪ್ಯಿಡಾವ್: ಮ್ಯಾನ್ಮಾರ್‌ನ (Myanmar) ರಾಖೈನ್ ಪ್ರಾಂತ್ಯದಿಂದ ರೊಹಿಂಗ್ಯಾ (Rohingya) ವಲಸಿಗರನ್ನು ಮಲೇಷ್ಯಾಕ್ಕೆ ಹೊತ್ತೊಯ್ಯುತ್ತಿದ್ದ ಬೋಟ್ (Boat) ಸಮುದ್ರದಲ್ಲಿ ಮುಳುಗಿ 17 ಜನ ಮೃತಪಟ್ಟ ಘಟನೆ ನಡೆದಿದೆ.

    ಬೋಟ್‍ನಲ್ಲಿ 50 ಕ್ಕೂ ಹೆಚ್ಚು ಜನ ಇದ್ದರು ಎನ್ನಲಾಗಿದೆ. ಹುಡುಕಾಟದ ವೇಳೆ 17 ಶವಗಳನ್ನು ಪತ್ತೆಹಚ್ಚಲಾಗಿದೆ. ಬದುಕುಳಿದವರಲ್ಲಿ ಎಂಟು ಪುರುಷರಿದ್ದಾರೆ. ದುರ್ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖೆ ನಡೆಸುತ್ತಿದ್ದಾರೆ. ಕಣ್ಮರೆಯಾದ 25 ಮಂದಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಾರವಾರ ನೌಕಾನೆಲೆಯಲ್ಲಿ ಬೋಟ್ ಇಂಜಿನ್‍ಗೆ ಬೆಂಕಿ – ತಪ್ಪಿದ ಅನಾಹುತ

    ರಾಖೈನ್ ಪ್ರಧಾನವಾಗಿ ಬೌದ್ಧ ಮ್ಯಾನ್ಮಾರ್‍ನ ಪ್ರದೇಶವಾಗಿದ್ದು, ಸುಮಾರು 6 ಲಕ್ಷ ರೊಹಿಂಗ್ಯಾ ಮುಸ್ಲಿಮರನ್ನು ಹೊಂದಿದೆ. ಅವರನ್ನು ನೆರೆಯ ಬಾಂಗ್ಲಾದೇಶದಿಂದ ವಲಸಿಗರು ಎಂದು ವರ್ಗೀಕರಿಸಲಾಗಿದೆ. ಈ ಪ್ರದೇಶದಲ್ಲಿ ಪೌರತ್ವ ನಿರಾಕರಿಸಿರುವುದರಿಂದ ಅವರು ಸಮಸ್ಯೆಗಳನ್ನು ಎದುರಿಸುತ್ತಾರೆ.

    ರೊಹಿಂಗ್ಯಾ ಜನಾಂಗ ರಾಖೈನ್‍ನಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗುವುದಕ್ಕೆ ತೀವ್ರವಾದ ಮಿಲಿಟರಿ ಬಿಕ್ಕಟ್ಟು ಕಾರಣವಾಗಿದೆ. ಕೊಲೆ ಹಾಗೂ ಲೈಂಗಿಕ ಹಿಂಸೆ ಸೇರಿದಂತೆ ವ್ಯಾಪಕವಾದ ದೌರ್ಜನ್ಯದಿಂದ ಅವರ ವಲಸೆ ನಿರಂತರವಾಗಿ ಮುಂದುವರೆಯುತ್ತಿದೆ. ಇದನ್ನೂ ಓದಿ: ಬೈಡನ್‌ಗೆ ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಎಫ್‌ಬಿಐ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ- 9 ಮಂದಿಯ ರಕ್ಷಣೆ

    ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ- 9 ಮಂದಿಯ ರಕ್ಷಣೆ

    ಉಡುಪಿ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಪಲ್ಟಿಯಾಗಿದ್ದು, 9 ಮಂದಿ ಮೀನುಗಾರರ (Fishermen Rescued) ರಕ್ಷಣೆ ಮಾಡಲಾಗಿದೆ.

    ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪುಂದ ತಾರಾಪತಿಯಿಂದ ಬೆಳಗ್ಗೆ ದೋಣಿ ಮೀನುಗಾರಿಕೆಗೆ ತೆರಳಿತ್ತು. ಪುಂಡಲೀಕ ಅವರ ಒಡೆತನ ಶ್ರೀ ದುರ್ಗಾಪರಮೇಶ್ವರಿ ಹೆಸರಿನ ದೋಣಿ ಇದಾಗಿದ್ದು, 9 ಮಂದಿ ಮೀನುಗಾರರು ತೆರಳಿದ್ರು. ಇದನ್ನೂ ಓದಿ: ನಿನ್ನ ರಕ್ತ ಕುಡಿಯುತ್ತೇನೆಂದು ಗೆಳೆಯನ ಕುತ್ತಿಗೆಗೆ ಕಚ್ಚಿದವ ಹೆಣವಾದ!

    5 ನಾಟಿಕಲ್ ಮೈಲುಗಳ ದೂರದಲ್ಲಿ ದೋಣಿ ಪಲ್ಟಿಯಾಗಿದ್ದು, ಸಮೀಪದ ದೋಣಿಗಳಿಗೆ ಮಾಹಿತಿ ರವಾನೆ ಹಿನ್ನೆಲೆಯಲ್ಲಿ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಅಪಘಾತಕ್ಕೀಡಾದ ದೋಣಿಯಲ್ಲಿದ್ದ ನೀರನ್ನು ಖಾಲಿ ಮಾಡಿ ಬಳಿಕ ದೋಣಿಯನ್ನು ಮರವಂತೆ ಬಂದರಿಗೆ ರವಾನೆ ಮಾಡಲಾಗಿದೆ.

    ಅಪಘಾತದಲ್ಲಿ ದೋಣಿಯಲ್ಲಿದ್ದ ಬಲೆ, ಇಂಜಿನ್ ಹಾನಿಯಾಗಿದ್ದು, ಒಟ್ಟು 2 ಲಕ್ಷಕ್ಕೂ ಅಧಿಕ ನಷ್ಟವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೋಟ್ ಮುಳುಗಿ ಮದುವೆಯಿಂದ ಹಿಂದಿರುಗುತ್ತಿದ್ದ 103 ಮಂದಿ ದುರ್ಮರಣ- ಹಲವರು ನಾಪತ್ತೆ

    ಬೋಟ್ ಮುಳುಗಿ ಮದುವೆಯಿಂದ ಹಿಂದಿರುಗುತ್ತಿದ್ದ 103 ಮಂದಿ ದುರ್ಮರಣ- ಹಲವರು ನಾಪತ್ತೆ

    ನೈಜೀರಿಯಾ: ಮದುವೆ (Marriage) ಯಿಂದ ಹಿಂದಿರುಗುತ್ತಿದ್ದಾಗ ದೋಣಿ ಮಗುಚಿ, ಮಕ್ಕಳು ಸೇರಿದಂತೆ ಕನಿಷ್ಠ 103 ಜನರು ಸಾವನ್ನಪ್ಪಿದ ಘಟನೆ ಎಂದು ಉತ್ತರ ನೈಜೀರಿಯಾ (Nigeria) ದಲ್ಲಿ ನಡೆದಿದೆ.

    ರಾಜ್ಯದ ರಾಜಧಾನಿ ಇಲೋರಿನ್‍ನಿಂದ 160 ಕಿಲೋಮೀಟರ್ ದೂರದಲ್ಲಿರುವ ಕ್ವಾರಾ ರಾಜ್ಯದ ಪಟೇಗಿ ಜಿಲ್ಲೆಯ ನೈಜರ್ ನದಿಯಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಹಲವು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯ ನಡೆದಿದೆ. ಇದುವರೆಗೆ 100 ಜನರನ್ನು ರಕ್ಷಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

    ನೀರಿನಲ್ಲಿ ಮುಳುಗಿದವರಲ್ಲಿ ಹೆಚ್ಚಿನವರು ಸಂಬಂಧಿಕರಾಗಿದ್ದು, ಅವರು ಮದುವೆಗೆ ಬಂದಿದ್ದರು. ತಡರಾತ್ರಿಯವರೆಗೂ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ಸ್ಥಳೀಯ ಮುಖ್ಯಸ್ಥ ಅಬ್ದುಲ್ ಗಣ ಲುಕ್ಪಾಡಾ ಹೇಳಿದ್ದಾರೆ. ಇದನ್ನೂ ಓದಿ: ಬಾಲಕನನ್ನು ಕೊಂದು ತಿಂದ ಮೊಸಳೆಯನ್ನೇ ಥಳಿಸಿ ಹತ್ಯೆಗೈದ್ರು- ವೀಡಿಯೋ ವೈರಲ್

    ಬೈಕ್ ನಲ್ಲಿ ಸಮಾರಂಭಕ್ಕೆ ಆಗಮಿಸಿದ ಅವರು, ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿದ ಪರಿಣಾಮ ಬೋಟ್ ನಲ್ಲಿ ತೆರಳಬೇಕಾಯಿತು. ದೋಣಿಯಲ್ಲಿ ಸುಮಾರು 300 ಜನ ಇದ್ದರು, ಹೀಗಾಗಿ ಬೋಟ್ ಓವರ್ ಲೋಡ್ ಆಗಿತ್ತು. ದೋಣಿ ಚಲಿಸುತ್ತಿದ್ದಾಗ ಒಂದು ದೊಡ್ಡ ಮರದ ದಿಮ್ಮಿಗೆ ಬಡಿದು ಎರಡು ಭಾಗವಾಗಿ ದುರ್ಘಟನೆ ಸಂಭವಿಸಿದೆ. ಮಂಗಳವಾರ ಸಂಜೆ ಹೊತ್ತಿಗೆ ಎಲ್ಲರ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಅವರು ವಿವರಿಸಿದರು.

    ಇದು ಹಲವು ವರ್ಷಗಳಿಂದ ಕಂಡ ಅತ್ಯಂತ ಭೀಕರ ದೋಣಿ ದುರಂತ ಎಂದು ಸ್ಥಳೀಯರು ಹೇಳಿದ್ದಾರೆ.

  • ಅರಬ್ಬೀ ಸಮುದ್ರದಲ್ಲಿ ದೋಣಿ ಮುಳುಗಡೆ – 12 ಮೀನುಗಾರರ ರಕ್ಷಣೆ

    ಅರಬ್ಬೀ ಸಮುದ್ರದಲ್ಲಿ ದೋಣಿ ಮುಳುಗಡೆ – 12 ಮೀನುಗಾರರ ರಕ್ಷಣೆ

    – 1.50 ಕೋಟಿ ರೂ. ಹಾನಿ

    ಕಾರವಾರ: ಅರಬ್ಬೀ ಸಮುದ್ರದಲ್ಲಿ (Arabian Sea) ಅಬ್ಬರದ ಗಾಳಿ ಹಾಗೂ ಅಲೆಗಳ ಹೊಡೆತಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಯಾಗಿದ್ದು (Boat Sinking) 12 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ (Ankola) ತಾಲೂಕಿನಲ್ಲಿ ನಡೆದಿದೆ.

    ಮಂಗಳವಾರ ಅಂಕೋಲದ ಬೆಳ್ಳಂಬಾರಿನ ಕಡಲ ತೀರದಿಂದ ಅರಬ್ಬೀ ಸಮುದ್ರಕ್ಕೆ ಚಂದ್ರಾವತಿ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಸುಭಾಷ್ ಖಾರ್ವಿ ಎಂಬವರಿಗೆ ಸೇರಿದ ಪರ್ಶಿಯನ್ ಬೋಟ್ ಇದಾಗಿತ್ತು. ಹವಾಮಾನ ವೈಪರಿತ್ಯದಿಂದಾಗಿ ಸಮುದ್ರದಲ್ಲಿ ಹೆಚ್ಚಿನ ಗಾಳಿ ಹಾಗೂ ದೊಡ್ಡ ಅಲೆಗೆ ಬೋಟ್‌ನ ತಳಭಾಗದ ಫೈಬರ್ ಕಿತ್ತು ಹೋಗಿದ್ದು ಬಳಿಕ ಬೋಟ್‌ನ ಒಳಭಾಗಕ್ಕೆ ನೀರು ನುಗ್ಗಿ ಮುಳುಗಲು ಪ್ರಾರಂಭಿಸಿತು. ಇದನ್ನೂ ಓದಿ: ಕೆಮ್ಮಿನ ಸಿರಪ್ ರಫ್ತಿಗೂ ಮುನ್ನ ಪರೀಕ್ಷೆ ಕಡ್ಡಾಯಗೊಳಿಸಿದ ಕೇಂದ್ರ

    ತಕ್ಷಣ ಹತ್ತಿರದಲ್ಲಿದ್ದ ಇನ್ನೊಂದು ಬೋಟ್‌ನಲ್ಲಿದ್ದವರು ಮುಳುಗುತ್ತಿದ್ದ ಬೋಟ್‌ನಿಂದ 12 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಬೋಟ್ ಮುಳುಗಡೆಯಿಂದಾಗಿ ಅಂದಾಜು 1.50 ಕೋಟಿ ರೂ. ಹಾನಿಯಾಗಿದೆ. ಇದನ್ನೂ ಓದಿ: ಯುಪಿಎಸ್‍ಸಿ ಫಲಿತಾಂಶ ಪ್ರಕಟ – ಲೇಡಿಸ್‍ಗೆ ಫಸ್ಟ್ 4 ರ‍್ಯಾಂಕ್