Tag: boat

  • ಮೀನುಗಾರಿಕೆಗೆ ತೆರಳಿದ್ದ ಮಂಗ್ಳೂರು ಬೋಟ್ ಸಮುದ್ರ ಮಧ್ಯೆ ಸುಟ್ಟು ಬೂದಿಯಾಯ್ತು!

    ಮೀನುಗಾರಿಕೆಗೆ ತೆರಳಿದ್ದ ಮಂಗ್ಳೂರು ಬೋಟ್ ಸಮುದ್ರ ಮಧ್ಯೆ ಸುಟ್ಟು ಬೂದಿಯಾಯ್ತು!

    ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರ ಮಧ್ಯೆ ಸುಟ್ಟು ಬೂದಿಯಾದ ಘಟನೆ ಮಂಗಳೂರು ಬಳಿಯ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

    ಮಂಗಳೂರಿನ ಮೀನುಗಾರಿಕಾ ಧಕ್ಕೆಯಿಂದ ಐದು ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿದ್ದು ಬೋಟಿನಲ್ಲಿದ್ದ ಸಿಬ್ಬಂದಿಯನ್ನು ಬೇರೆ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ. ಬಳಿಕ ಸುಟ್ಟು ಹೋದ ಬೋಟನ್ನು ಧಕ್ಕೆಗೆ ಎಳೆದು ತರಲಾಗಿದೆ.

    ಬೋಟ್‍ಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ. ಘಟನೆಯಿಂದಾಗಿ ಸುಮಾರು 50 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

  • ದೋಣಿ ದುರಂತ- ಮಕ್ಕಳು ಸೇರಿ 6 ಜನ ನೀರುಪಾಲು

    ದೋಣಿ ದುರಂತ- ಮಕ್ಕಳು ಸೇರಿ 6 ಜನ ನೀರುಪಾಲು

    ಲಕ್ನೋ: ದೋಣಿ ಮುಗುಚಿ ಮಕ್ಕಳು ಸೇರಿದಂತೆ ಆರು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಹ್ರಾಯ್ಚ್‍ನಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಬಹ್ರಾಯ್ಚ್ ಸಮೀಪವಿರುವ ಸರಯು ನದಿಯಲ್ಲಿ ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ. ಮೃತರನ್ನು ರಾಜೇಶ್ (25), ಬ್ರಿಜೇಶ್ (20), ಮಗನ್ (17), ವಿಜಯ್ (16), ತಿರಿತ್ (12) ಮತ್ತು ಶಕಿಲ್(12) ಎಂದು ಗುರುತಿಸಲಾಗಿದೆ.

    ಮೃತ ದುರ್ದೈವಿಗಳು ಬಹ್ರಾಯ್ಚ್ ಹತ್ತಿರದ ಗೋಪಾಲ್‍ಪುರ್ ಮತ್ತು ಬೆಹ್ತಾ ಗ್ರಾಮದವರೆಂದು ತಿಳಿದುಬಂದಿದೆ. ಪಕ್ಕದ ರಾಮ್ಗೊನ್ ಹಳ್ಳಿಯಲ್ಲಿ ಜಾತ್ರೆ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದರು.

    ದೋಣಿಯಲ್ಲಿ ಒಟ್ಟು ಒಂಬತ್ತು ಜನರಿದ್ದರು. ಅದರಲ್ಲಿ ಮೂವರು ಈಜಿಕೊಂಡು ದಡ ಸೇರಿದ್ದಾರೆ. ಮೃತದೇಹಗಳನ್ನ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಬಹ್ರಾಯ್ಚ್ ಪೊಲೀಸ್ ಅಧಿಕಾರಿ ಅಜಯ್ ದೀಪ್ ಸಿಂಗ್ ಹೇಳಿದ್ದಾರೆ.

  • ಮೀನುಗಾರಿಕೆ ಬೋಟ್ ಮುಳುಗಡೆ- 23 ಮೀನುಗಾರರ ರಕ್ಷಣೆ

    ಮೀನುಗಾರಿಕೆ ಬೋಟ್ ಮುಳುಗಡೆ- 23 ಮೀನುಗಾರರ ರಕ್ಷಣೆ

    ಕಾರವಾರ: ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಬೋಟ್ ಅಳಿವೆಗೆ ಸಿಲುಕಿ ಮುಳುಗಡೆಯಾದ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಗೋಡು ಅಳಿವೆ ತೀರದಲ್ಲಿ ರಾತ್ರಿ ವೇಳೆ ನೆಡೆದಿದೆ.

    ಯಾಸಿನ್ ಹೆಸರಿನ ಯಾಂತ್ರಿಕ ಬೋಟ್‍ನಲ್ಲಿ ಸುಮಾರು 23 ಮೀನುಗಾರರಿದ್ದು, ಅಳಿವೆಯಲ್ಲಿ ಸಿಲುಕಿದ್ದವರನ್ನು ಮೂರು ಬೋಟ್‍ಗಳ ಮೂಲಕ ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಕಾಸರಗೋಡು ಬಂದರು ತೀರದ ಬಳಿ ಹೆಚ್ಚು ಹೂಳು ತುಂಬಿದ್ದರಿಂದಾಗಿ ಈ ಅವಘಡ ನೆಡೆದಿದೆ.

    ಕಳೆದ ಎರಡು ತಿಂಗಳಲ್ಲಿ ಎರಡನೇ ಪ್ರಕರಣ ಇದಾಗಿದ್ದು, ಬಂದರು ಇಲಾಖೆ ಹೂಳನ್ನು ತೆಗೆಸದ ಕಾರಣ ಈ ರೀತಿಯ ಘಟನೆ ನೆಡೆಯುತ್ತಿದೆ. ಇದರಿಂದ ಮೀನುಗಾರರು ಮೀನುಗಾರಿಕೆಗೆ ತೆರಳದಂತಹ ಸ್ಥಿತಿಗೆ ತಲುಪಿದೆ.

    ಈ ಘಟನೆಯ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 60 ಜನರಿದ್ದ ದೋಣಿ ಯಮುನಾ ನದಿಯಲ್ಲಿ ಮಗುಚಿಬಿದ್ದು ದುರಂತ – 19 ಸಾವು

    60 ಜನರಿದ್ದ ದೋಣಿ ಯಮುನಾ ನದಿಯಲ್ಲಿ ಮಗುಚಿಬಿದ್ದು ದುರಂತ – 19 ಸಾವು

    ಲಕ್ನೋ: ಉತ್ತರಪ್ರದೇಶದ ಭಾಗ್ಪತ್ ಬಳಿ 60 ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಯಮುನಾ ನದಿಯಲ್ಲಿ ಮಗುಚಿಬಿದ್ದು ದುರಂತ ಸಂಭವಿಸಿದೆ. ಈ ಅವಘಡದಲ್ಲಿ ಸುಮಾರು 19 ಜನ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನಷ್ಟು ಮಂದಿ ಮುಳುಗಿರುವ ಆತಂಕ ವ್ಯಕ್ತವಾಗಿದೆ.

     

    ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಕೊಂಡೊಯ್ಯುತ್ತಿದ್ದುದ್ದರಿಂದ ಮಗುಚಿಬಿದ್ದಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು, ಈಗಾಗಲೇ 12 ಮಂದಿಯನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆ ನಡೆದ ಸಂದರ್ಭದಲ್ಲಿ ಜನರಿಂದ ಕಕ್ಕಿರಿದಿದ್ದ ದೋಣಿ ಹರಿಯಾಣ ಕಡೆಗೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • ಸೆಲ್ಫಿ ಕ್ಲಿಕ್ಕಿಸುತ್ತಲೇ ಸಾವಿನ ಮನೆ ಸೇರಿದ್ರು- ವೈರಲಾಯ್ತು ಯುವಕರ ಕೊನೇ ಕ್ಷಣದ ವಿಡಿಯೋ

    ಸೆಲ್ಫಿ ಕ್ಲಿಕ್ಕಿಸುತ್ತಲೇ ಸಾವಿನ ಮನೆ ಸೇರಿದ್ರು- ವೈರಲಾಯ್ತು ಯುವಕರ ಕೊನೇ ಕ್ಷಣದ ವಿಡಿಯೋ

    ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ದೋಣಿ ಮಗುಚಿ 8 ಯುವಕರು ದಾರುಣವಾಗಿ ಮೃತಪಟ್ಟಿರೋ ಘಟನೆ ಇಂದು ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ಯುವಕರು ಸೆಲ್ಫಿ ವಿಡಿಯೋ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಾಗ್ಪುರದಿಂದ 25 ಕಿ.ಮೀ ದೂರದಲ್ಲಿರೋ ವೇನಾ ಜಲಾಶಯದಲ್ಲಿ ಈ ಅವಘಡ ಸಂಭವಿಸಿದೆ. ಭಾನುವಾರ ಸಂಜೆ 11 ಮಂದಿ ಯುವಕರು ಎಂಜಾಯ್ ಮಾಡಲೆಂದು ವೇನಾ ಜಲಾಶಯಕ್ಕೆ ಬಂದಿದ್ದರು. ಅಂತೆಯೇ ದೋಣಿ ವಿಹಾರ ಮಾಡುತ್ತಾ ತಮ್ಮೊಂದಿಗೆ ಎಂಜಾಯ್ ಮಾಡಲು ಬಾರದ ಸ್ನೇಹಿತನ್ನು ಕಿಚಾಯಿಸುತ್ತಾ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಬಳಿಕ ಅದನ್ನು ಫೇಸ್ ಬುಕ್‍ಗೆ ಅಪ್ ಲೋಡ್ ಮಾಡಿದ್ದಾರೆ. ಹೀಗೆ ಎಂಜಾಯ್ ಮಾಡುತ್ತಿದ್ದ ವೇಳೆಯಲ್ಲಿಯೇ ದೋಣಿ ಮಗುಚಿ ಯುವಕರು ನೀರುಪಾಲಾಗಿದ್ದಾರೆ. ಆದ್ರೆ ಘಟನೆಯಲ್ಲಿ ಮೂವರು ಯುವಕರನ್ನು ರಕ್ಷಿಸಲಾಗಿದೆ.

    ಇದಕ್ಕೂ ಮೊದಲು ಮೂವರು ನಾವಿಕರ ಜೊತೆ 8 ವಿದ್ಯಾರ್ಥಿಗಳು ತಮ್ಮನ್ನು ಅಣೆಕಟ್ಟಿನ ಹತ್ತಿರ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು ಎಂಬುವುದಾಗಿ ವರದಿಯಾಗಿದೆ. ದೋಣಿ ಮಗುಚಿ ಬೀಳುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿಯೊಬ್ಬರು ಮುಳುಗುತಜ್ಞರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅವರು ಸ್ಥಳಕ್ಕೆ ದೌಡಾಯಿಸಿ ಮೂವರನ್ನು ರಕ್ಷಿಸಿದ್ದಾರೆ ಅಂತ ವರದಿಯಾಗಿದೆ.

    ನೀರುಪಾಲಾದ ಯುವಕರಲ್ಲಿ ಓರ್ವನ ಶವ ಪತ್ತೆಯಾಗಿದ್ದು, ಉಳಿದ 7 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಶೋಧ ಕಾರ್ಯಕ್ಕಾಗಿ ಈಗಾಲೇ ಎರಡು ತಂಡಗಳಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಇಂದು ಮುಂಜಾನೆಯೇ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

    ಯುವಕರ ತಂಡವೊಂದು ಪ್ರವಾಸಕ್ಕೆಂದು ವೇನಾ ಜಲಾಶಯಕ್ಕೆ ಬಂದಿದ್ದರು. ಅಂತೆಯೇ ಅವರು ಮೀನುಗಾರಿಕಾ ದೋಣಿಯನ್ನು ಎಂಜಾಯ್ ಮಾಡಲು ಬಳಸಿದ್ದರು. ಹೀಗೆ ಎಂಜಾಯ್ ಮಾಡುತ್ತಿರುವಾಗಲೇ ದೋಣಿ ಮಗುಚಿ ಯುವಕರು ನೀರುಪಾಲಾಗಿದ್ದಾರೆ. ವಿಡಿಯೋದಲ್ಲಿರುವ ವಿದ್ಯಾರ್ಥಿಗಳೆಲ್ಲರೂ 20ರಿಂದ 25 ವರ್ಷದೊಳಗಿನವರಾಗೆ ಕಾಣುತ್ತಾರೆ ಅಂತ ಪೊಲೀಸ್ ಅಧಿಕಾರಿ ಸುರೇಶ್ ಭಯೋತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    https://www.youtube.com/watch?v=FcyW-PXLGK4

  • ದೋಣಿಗೆ ಹಡಗು ಡಿಕ್ಕಿ: ಮೂವರು ಮೀನುಗಾರರ ದುರ್ಮರಣ

    ದೋಣಿಗೆ ಹಡಗು ಡಿಕ್ಕಿ: ಮೂವರು ಮೀನುಗಾರರ ದುರ್ಮರಣ

    ಕೊಚ್ಚಿ: ಪನಾಮ ಹಡಗೊಂದು ಮೀನುಗಾರರ ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೀನುಗಾರರು ಮೃತಪಟ್ಟು 11 ಮಮದಿ ಗಾಯಗೊಂಡ ಘಟನೆ ಕೊಚ್ಚಿಯಲ್ಲಿ ಇಂದು ಮುಂಜಾನೆ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಓರ್ವ ಮೀನುಗಾರ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಹುಡುಕಾಟ ಮುಂದುವರೆದಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.

    ದೋಣಿಯಲ್ಲಿ 14 ಮಂದಿ ಮೀನುಗಾರರಿದ್ದರು. ನಸುಕಿನ ಜಾವ ಸುಮಾರು 2 ಗಂಟೆಯ ವೇಳೆ ಈ ಅವಘಡ ಸಂಭವಿಸಿದೆ. ಕೂಡಲೇ ದೋಣಿಯಲ್ಲಿದ್ದ ಮೀನುಗಾರರನ್ನು ಬೇರೊಂದು ಮೀನುಗಾರಿಕಾ ದೋಣಿಯವರು ಬಂದು ರಕ್ಷಿಸಿದ್ದಾರೆ ಅಂತಾ ಹೇಳಿದ್ದಾರೆ.

    ಕಾರ್ಯಾಚರಣೆಗಿಳಿದ ಕರಾವಳಿ ರಕ್ಷಣಾ ಪಡೆಗಳು ಸಮುದ್ರದಲ್ಲಿ ಭಾರೀ ಶೋಧ ನಡೆಸಿ ಪನಾಮಾದ ಅಂಬೆರ್ ಹಡಗನ್ನು ಸಿಬ್ಬಂದಿಗಳ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಕೇರಳದ ಕಡಲ ತೀರದಲ್ಲಿ ಇದು ಎರಡನೇಯ ಅವಘಡವಾಗಿದೆ. ಈ ಹಿಂದೆ ವಿದೇಶಿ ಹಡಗೊಂದು ಅವಘಡಕ್ಕೆ ತುತ್ತಾಗಿತ್ತು.

  • ಬಂಗಾಳಕೊಲ್ಲಿಯಲ್ಲಿ ದೋಣಿ ದುರಂತ – 9 ಪ್ರವಾಸಿಗರ ಸಾವು

    ಬಂಗಾಳಕೊಲ್ಲಿಯಲ್ಲಿ ದೋಣಿ ದುರಂತ – 9 ಪ್ರವಾಸಿಗರ ಸಾವು

    ಟುಟಿಕೋರಿನ್: ಬಂಗಾಳಕೊಲ್ಲಿಯಲ್ಲಿ ಭೀಕರ ದೋಣಿ ದುರಂತ ಸಂಭವಿಸಿದೆ. ಭಾನುವಾರ ಸಂಜೆ 5.30ರ ವೇಳೆಯಲ್ಲಿ ಪ್ರವಾಸಿಗರಿದ್ದ ಬೋಟ್ ಮಗುಚಿಬಿದ್ದು 9 ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಟುಟಿಕೋರಿನ್‍ನಿಂದ 60 ಕಿ.ಮೀ ದೂರದಲ್ಲಿರುವ ಮನಪ್ಪಾಡು ಎಂಬಲ್ಲಿ ನಡೆದಿದೆ.

    ಐವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 9 ಮಂದಿಯ ಶವಗಳು ಸಿಕ್ಕಿವೆ. ರಕ್ಷಣಾ ಕಾರ್ಯದಲ್ಲಿ 11 ಮಂದಿಯನ್ನ ರಕ್ಷಿಸಲಾಗಿದೆ ಎಂದು ಟುಟಿಕೋರಿನ್ ಜಿಲ್ಲಾಧಿಕಾರಿ ಎಂ ರವಿಕುಮಾರ್ ತಿಳಿಸಿದ್ದಾರೆ.

    ಮಧುರೈ ಮತ್ತು ತಿರುಚ್ಚಿಯ ಮೂರು ಕುಟುಂಬಗಳು ಬೋಟ್‍ಗಳನ್ನ ಬುಕ್ ಮಾಡಿದ್ದಾರೆಂಬ ಮಾಹಿತಿ ಸದ್ಯಕ್ಕೆ ದೊರೆತಿದೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚಿನ ಮಂದಿ ಬೋಟ್‍ನಲ್ಲಿ ಪ್ರಯಾಣಿಸುತ್ತಿದ್ದುದೇ ಘಟನೆಗೆ ಕಾರಣ ಎಂದು ಹೇಳಲಾಗ್ತಿದೆ.

  • ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿಯಿತು ಬೋಟ್!

    ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿಯಿತು ಬೋಟ್!

    ಕಾರವಾರ: ಆಕಸ್ಮಿಕವಾಗಿ ಅರಬಿ ಸಮುದ್ರದಲ್ಲಿದ್ದ ಬೋಟ್‍ಗೆ ಬೆಂಕಿ ತಗುಲಿ ಬೋಟ್ ಹೊತ್ತಿ ಉರಿದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ಘಟನೆ ನಡೆದಿದೆ.

    ಖಾದರ್ ಸಾಬ್ ಅಬ್ದುಲ್ ರಜಾಕ್ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು, ಅಡುಗೆ ತಯಾರಿಸುವ ವೇಳೆ ಬೋಟ್‍ನ ಡಿಸೇಲ್ ಟ್ಯಾಂಕ್‍ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದಾಗಿ ಬೋಟ್‍ನಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಈ ಬೋಟ್‍ನಿಂದ ಅನತಿ ದೂರದಲ್ಲಿದ್ದ ಮತ್ತೊಂದು ಬೋಟ್‍ನಲ್ಲಿದ್ದವರು ಬೆಂಕಿಗಾಹುತಿಯಾಗುತ್ತಿದ್ದ ಬೋಟ್‍ನತ್ತ ಧಾವಿಸಿದ್ದಾರೆ. ಈ ವೇಳೆ ಬೋಟ್‍ನಲ್ಲಿದ್ದ ಇಬ್ಬರನ್ನ ರಕ್ಷಿಸಲಾಗಿದೆ.

    ಅಲ್ಲದೆ ಇನ್ನೊಂದು ಬೋಟ್‍ನ ಸಹಾಯದಿಂದ ಬೆಂಕಿಯನ್ನು ನಂದಿಸುವ ಕಾರ್ಯವನ್ನೂ ಮಾಡಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=vY4lPJ-cl38&feature=youtu.be