Tag: boat fire

  • ಬೋಟ್‌ಗೆ ಬೆಂಕಿ ಹೊತ್ತಿಕೊಂಡು 40 ಹೈಟಿಯನ್ ವಲಸಿಗರು ಸಾವು

    ಬೋಟ್‌ಗೆ ಬೆಂಕಿ ಹೊತ್ತಿಕೊಂಡು 40 ಹೈಟಿಯನ್ ವಲಸಿಗರು ಸಾವು

    ಪೋರ್ಟ್-ಔ-ಪ್ರಿನ್ಸ್: ಹೈಟಿಯ (Haitian migrants) ಉತ್ತರ ಕರಾವಳಿಯಲ್ಲಿ ಬೋಟ್‌ಗೆ ಬೆಂಕಿ ಹೊತ್ತಿಕೊಂಡು 40 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಯುಎನ್‌ ಏಜೆನ್ಸಿ ತಿಳಿಸಿದೆ.

    ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ (IOM) ಹೈಟಿಯ ಕೋಸ್ಟ್ ಗಾರ್ಡ್, ಅವಘಡದಲ್ಲಿ ಸಿಲುಕಿದ್ದ 41 ಮಂದಿಯನ್ನು ರಕ್ಷಿಸಿದೆ. ಅವರಲ್ಲಿ 11 ಜನರು ಸುಟ್ಟಗಾಯಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಮೀಸಲಾತಿ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ 105 ಮಂದಿ ಸಾವು – 300ಕ್ಕೂ ಹೆಚ್ಚು ಭಾರತೀಯರು ತವರಿಗೆ!

    ಬೋಟ್‌ನಲ್ಲಿ ಪ್ರಯಾಣಿಕನೊಬ್ಬ ವೂಡೂ ಆಚರಣೆಗಾಗಿ ಮೇಣದಬತ್ತಿ ಹೊತ್ತಿಸಿದ್ದಾನೆ. ಈ ವೇಳೆ ಬೆಂಕಿ ಬೋಟ್‌ಗೆ ತಗುಲಿ ಹೊತ್ತಿ ಉರಿದಿದೆ ಎಂದು ಪೊಲೀಸ್‌ ವಕ್ತಾರ ಅರಾಲ್ಡ್‌ ಜೀನ್‌ ತಿಳಿಸಿದ್ದಾರೆ.

    80 ಕ್ಕೂ ಹೆಚ್ಚು ಜನರನ್ನು ಹೊತ್ತ ಬೋಟ್‌ ಬುಧವಾರ ಲಬಾಡಿ ಬಂದರಿನಿಂದ ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳಿಗೆ 150 ಮೈಲಿ (240 ಕಿಲೋಮೀಟರ್) ಪ್ರಯಾಣದ ಮಾರ್ಗದಲ್ಲಿ ಹೊರಟಿತ್ತು. ಗಡಿ ಭಾಗಗಳಲ್ಲಿ ಕ್ರಿಮಿನಲ್‌ ಗ್ಯಾಂಗ್‌ಗಳ ಹಿಂಸಾಚಾರದಿಂದಾಗಿ ಜನರು ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನೂ ಓದಿ: Microsoft Outage: ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಲ್ಲೋಲ ಕಲ್ಲೋಲ; ಇದು ಸೈಬರ್‌ ದಾಳಿಯಲ್ಲ – ಕ್ರೌಡ್‌ಸ್ಟ್ರೈಕ್‌ ಸಿಇಒ ಸ್ಪಷ್ಟನೆ!

  • ಸಮುದ್ರದಲ್ಲೇ ಹೊತ್ತಿ ಉರಿದ ಬೋಟ್- 7 ಮಂದಿ ಮೀನುಗಾರರ ರಕ್ಷಣೆ!

    ಸಮುದ್ರದಲ್ಲೇ ಹೊತ್ತಿ ಉರಿದ ಬೋಟ್- 7 ಮಂದಿ ಮೀನುಗಾರರ ರಕ್ಷಣೆ!

    ಕಾರವಾರ: ಇಲ್ಲಿನ ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ಉಡುಪಿ ಮೂಲದ ವರದಾ ಹೆಸರಿನ ಬೋಟೊಂದು ಬೆಂಕಿ ಅವಘಡಕ್ಕೆ ಒಳಗಾಗಿ ದೋಣಿಯಲ್ಲಿದ್ದ ಏಳು ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

    ಘಟನೆ ಆಗಿದ್ದು ಹೇಗೆ?
    ಉಡುಪಿ ಜಿಲ್ಲೆಯ ಮಲ್ಪೆಯ ವರದಾ ಹೆಸರಿನ (ನೋಂದಣಿ ಸಂಖ್ಯೆ IND KA 02 MM 4495) ದೋಣಿಯು ಲೈಟ್ ಹೌಸ್ ನಡುಗಡ್ಡೆಯಿಂದ 10 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತಿತ್ತು. ಈ ವೇಳೆ ಇಂಜಿನ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿತ್ತು. ಅವಘಡದ ಬಗ್ಗೆ ಮಾಹಿತಿ ಪಡೆದ ನವ ಮಂಗಳೂರಿನ ಕೋಸ್ಟ್ ಗಾರ್ಡ್ ಅಧಿಕಾರಿಗಳು, ತಕ್ಷಣ ಕಾರವಾರದ ‘ಸಿ 155’ ಗಸ್ತು ನೌಕೆಯಲ್ಲಿ ರಕ್ಷಣಾ ಸಿಬ್ಬಂದಿಯನ್ನು ಕಾರವಾರಕ್ಕೆ ಕಳುಹಿಸಿಕೊಟ್ಟರು. ಇದನ್ನೂ ಓದಿ: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟ – 7 ಮಂದಿಗೆ ಗಾಯ

    ಇನ್ನು ಧಗಿಸುತಿದ್ದ ದೋಣಿಯಲ್ಲಿ ಮೀನುಗಾರರು ಸಹ ಇದ್ದಿದ್ದರಿಂದ ದೋಣಿಯಲ್ಲಿದ್ದ ಮೀನುಗಾರರನ್ನು ಸಮೀಪದಲ್ಲಿದ್ದ ಮತ್ತೊಂದು ಮೀನುಗಾರಿಕಾ ದೋಣಿ ವಜ್ರಕ್ಕೆ ಸ್ಥಳೀಯ ಮೀನುಗಾರರು ರಕ್ಷಿಸಿ ರವಾನಿಸಿದರು. ಬಳಿಕ ಬೆಂಕಿಯನ್ನು ನಂದಿಸಲಾಯಿತು. ರಕ್ಷಿಸಲಾದ ಎಲ್ಲ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಹಳೇ ವೈಷಮ್ಯಕ್ಕೆ ಗ್ರಾ.ಪಂ ಉಪಾಧ್ಯಕ್ಷನ ಕೊಲೆ

    ಬೆಂಕಿ ಹೊತ್ತಿಕೊಂಡ ದೋಣಿಯನ್ನು ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿಗೆ ಎಳೆದು ತರಲಾಗಿದೆ. ಕರಾವಳಿ ಭದ್ರತಾ ಪಡೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.‌