Tag: boat

  • Uttara Kannada | ಬೇಲಿಕೇರಿ ಬಂದರಿನಲ್ಲಿ ಬೋಟ್ ಮುಳುಗಡೆ

    Uttara Kannada | ಬೇಲಿಕೇರಿ ಬಂದರಿನಲ್ಲಿ ಬೋಟ್ ಮುಳುಗಡೆ

    ಕಾರವಾರ: ಬಂದರಿನ ಬಳಿ ತೆರಳುತಿದ್ದ ಬೋಟಿಗೆ (Boat) ತಳಭಾಗದಲ್ಲಿ ಕಲ್ಲು ತಾಗಿ ಮುಳುಗಡೆಯಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ (Ankola) ತಾಲೂಕಿನ ಬೇಲಿಕೇರಿ ಬಂದರಿನಲ್ಲಿ ನಡೆದಿದೆ.

    ಶ್ರೀಕಾಂತ್ ತಾಂಡೇಲ್ ಎಂಬುವಬರಿಗೆ ಸೇರಿದ ದುರ್ಗಾ ಪ್ರಸಾದ್ ಹೆಸರಿನ ಪರ್ಷಿಯನ್ ಬೋಟ್ ಇದಾಗಿದ್ದು, ಮೀನುಗಾರಿಕೆಗೆ ತೆರಳಲು ಬೋಟ್ ಸಿದ್ಧಪಡಿಸಿ ತೆರಳುವಾಗ ಕಲ್ಲು ಹೊಡೆದು ಬೋಟ್ ಮುಳುಗಡೆಯಾಗಿ ಲಕ್ಷಾಂತರ ಮೌಲ್ಯದ ವಸ್ತುಗಳು ನಷ್ಟವಾಗಿದೆ. ಶುಕ್ರವಾರ ಇದೇ ಭಾಗದಲ್ಲಿ ಪರ್ಷಿಯನ್ ಬೋಟ್ ಮುಳುಗಡೆಯಾಗಿತ್ತು. ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು ಚುನಾವಣೆ – 50% ಮಹಿಳಾ ಮೀಸಲಾತಿ ಮಾಡೋಣ: ಡಿಕೆ ಶಿವಕುಮಾರ್‌

    ಬಂದರಿನಲ್ಲಿ ಹೂಳು ತೆಗೆಯದೇ ಇರುವುದರಿಂದ ಬೋಟ್ ಮುಳುಗಡೆಯಾಗುತ್ತಿದೆ. ಬಂದರು ಬಳಿ ಹೂಳು ತುಂಬಿ ಅನಾಹುತ ಸೃಷ್ಟಿಯಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: BETL ಅಧಿಕಾರಿಗಳ ನಿರ್ಲಕ್ಷ್ಯ – ಹೊಸೂರು ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್

  • ಮಹಾರಾಷ್ಟ್ರದಲ್ಲಿ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆ

    ಮಹಾರಾಷ್ಟ್ರದಲ್ಲಿ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆ

    ಮುಂಬೈ: ಅರಬ್ಬಿ ಸಮುದ್ರದಲ್ಲಿ (Arabian Sea) ಮೀನುಗಾರರನ್ನು (Fisherman) ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ (Boat Capsized) ಮೂವರು ನಾಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ (Maharashtra) ರಾಯಗಢ (Raigad) ಜಿಲ್ಲೆಯಲ್ಲಿ ನಡೆದಿದೆ.

    ದೋಣಿ ಖಾಂಡೇರಿಯಿಂದ ಅಲಿಬಾಗ್ ಬಳಿಯ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ದೋಣಿ ಮಗುಚಿದೆ. ಕೂಡಲೇ ಎಚ್ಚೆತ್ತ ಮೀನುಗಾರರು ನೀರಿಗೆ ಹಾರಿದ್ದಾರೆ. 8 ಮಂದಿ ಮೀನುಗಾರರ ಪೈಕಿ 5 ಮಂದಿ ಈಜಿಕೊಂಡು ದಡ ಸೇರಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಳೆಯಬ್ಬರ – ಪಾಯ ಕುಸಿದು ಪಕ್ಕಕ್ಕೆ ವಾಲಿದ 4 ಅಂತಸ್ತಿನ ಕಟ್ಟಡ

    ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ನಾಪತ್ತೆಯಾಗಿರುವ ಮೂವರು ಮೀನುಗಾರರನ್ನು ಪತ್ತೆಹಚ್ಚಲು ಪೊಲೀಸರು ಮತ್ತು ಸ್ಥಳೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಜೊತೆಗೆ ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿದೆ. ಇನ್ನು ಈಜಿ ದಡ ಸೇರಿದ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: ಭಾರತ-ಪಾಕ್‌ನಂತೆಯೇ ಥಾಯ್ಲೆಂಡ್‌-ಕಾಂಬೋಡಿಯಾ ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್‌

  • Udupi | ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರುಪಾಲು

    Udupi | ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರುಪಾಲು

    ಉಡುಪಿ: ನಾಡದೋಣಿ (Boat) ಮಗುಚಿ ಮೂವರು ಮೀನುಗಾರರು (Fishermen) ನೀರುಪಾಲಾಗಿರುವ ಘಟನೆ ಉಡುಪಿ (Udupi) ಜಿಲ್ಲೆ ಬೈಂದೂರು (Baindur) ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ.

    ಸುರೇಶ್ ಖಾರ್ವಿ (45), ರೋಹಿತ್ ಖಾರ್ವಿ (38), ಜಗ್ಗು ಯಾನೆ ಜಗದೀಶ್ ಖಾರ್ವಿ (36) ನೀರುಪಾಲಾದ ಮೀನುಗಾರರು. ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆ  ವಾಪಸ್ ಆಗುವಾಗ ದೋಣಿ ಮಗುಚಿದೆ. ಇದನ್ನೂ ಓದಿ: 65 ಕೋಟಿ ವಹಿವಾಟು – ವೀಸಾ ಹಿಂದಿಕ್ಕಿ ವಿಶ್ವದಲ್ಲೇ ಈಗ UPI ನಂಬರ್ 1

    ದೋಣಿ ಮಗುಚಿದ ವೇಳೆ ಓರ್ವ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಇನ್ನಿಬ್ಬರು ಕೂಡ ನೀರುಪಾಲಾಗಿದ್ದಾರೆ. ಸದ್ಯ ನೀರುಪಾಲಾದ ಮೀನುಗಾರರಿಗೆ ಸಮುದ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಬಳ್ಳಾರಿ | ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಸಾವು

  • ರಾಯಗಢ ಕರಾವಳಿಯಲ್ಲಿ ಅನುಮಾನಾಸ್ಪದ ದೋಣಿ ಪತ್ತೆ – ಹೈ ಅಲರ್ಟ್‌ ಘೋಷಣೆ

    ರಾಯಗಢ ಕರಾವಳಿಯಲ್ಲಿ ಅನುಮಾನಾಸ್ಪದ ದೋಣಿ ಪತ್ತೆ – ಹೈ ಅಲರ್ಟ್‌ ಘೋಷಣೆ

    ಮುಂಬೈ: ಮಹಾರಾಷ್ಟ್ರದ ರಾಯಗಢ (Maharashtra’s Raigad) ಜಿಲ್ಲೆಯ ರೇವದಂಡ ಕರಾವಳಿಯ ಬಳಿ ಅನುಮಾನಾಸ್ಪದ ದೋಣಿಯೊಂದು (Suspicious Boat) ಪತ್ತೆಯಾಗಿದ್ದು ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

    ರೇವದಂಡದ ಕೊರ್ಲೈ ಕರಾವಳಿಯಿಂದ ಎರಡು ನಾಟಿಕಲ್ ಮೈಲುಗಳ ದೂರದಲ್ಲಿ ಭದ್ರತಾ ಸಿಬ್ಬಂದಿ ದೋಣಿಯನ್ನು ನೋಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪತ್ತೆಯಾದ ದೋಣಿ ಬೇರೆ ದೇಶದ ಗುರುತುಗಳನ್ನು ಹೊಂದಿದ್ದು ರಾಯಗಢ ಕರಾವಳಿಗೆ ತೇಲಿ ಹೋಗಿರಬಹುದು ಎಂದು ಅವರು ಹೇಳಿದರು.  ಇದನ್ನೂ ಓದಿ: ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು? ಮೊಬೈಲ್ ವಿಕಿರಣದಿಂದಲೂ ಹೃದಯಕ್ಕೆ ಘಾಸಿ ಆಗ್ತಿದ್ಯಾ?

    ಹೈ ಅಲರ್ಟ್‌ ಘೋಷಣೆಯಾದ ಬೆನ್ನಲ್ಲೇ ರಾಯಗಢ ಪೊಲೀಸ್, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (ಬಿಡಿಡಿಎಸ್), ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್‌ಟಿ), ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳ ತಂಡಗಳು ಸ್ಥಳಕ್ಕೆ ಧಾವಿಸಿವೆ.

    ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಅಂಚಲ್ ದಲಾಲ್, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಕರಾವಳಿಗೆ ತಲುಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

  • ಬೆಂಗ್ಳೂರು ರಸ್ತೆಗೆ ಟೈಟಾನಿಕ್ ಬೋಟ್ ಇಳಿಸಿದ ಊಬರ್!

    ಬೆಂಗ್ಳೂರು ರಸ್ತೆಗೆ ಟೈಟಾನಿಕ್ ಬೋಟ್ ಇಳಿಸಿದ ಊಬರ್!

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಮಳೆಯಾಗಿದ್ದು, ನಗರದ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಬೆಂಗಳೂರಿನ ಈ ಪರಿಸ್ಥಿತಿಯನ್ನು ಊಬರ್ ಕಂಪನಿ(Ubar)  ವ್ಯಂಗ್ಯ ಮಾಡಿದೆ.

     

    View this post on Instagram

     

    A post shared by Uber India (@uber_india)

    ಹೌದು, ಬೆಂಗಳೂರಿಗೆ(Bengaluru) ಟೈಟಾನಿಕ್(Titanic Boat) ಬೋಟ್‌ನ ವ್ಯವಸ್ಥೆಯಿದೆ ಎನ್ನುವ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಂ ಹಂಚಿಕೊಂಡಿದೆ. ಈ ರೀತಿಯಾಗಿ ಬೆಂಗಳೂರಿನ ತುಂಬೆಲ್ಲಾ ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವುದನ್ನು ಊಬರ್ ಕಂಪನಿಯು ಲೇವಡಿ ಮಾಡಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ಆಕ್ಷೇಪಾರ್ಹ ವಿಡಿಯೋ ಅಪ್ಲೋಡ್‌ – ಪೇಜ್‌ ವಿರುದ್ಧ ಎಫ್‌ಐಆರ್‌

    ಊಬರ್ ಸರ್ವಿಸ್ ಲಿಸ್ಟ್ನಲ್ಲಿ ಈ ಫೋಟೋ ಹಾಕಿದ್ದು, ಒಂದು ನಿಮಿಷದಲ್ಲಿ ವೇಗವಾಗಿ ಟೈಟಾನಿಕ್ ಬೋಟ್ ಸೇವೆ ಸಿಗಲಿದೆ. ಕೇವಲ 149 ರೂ. ಹಣಕ್ಕೆ ಈ ಸೇವೆ ಒದಗಿಸಲಾಗುವುದು ಎಂದು ಬೆಂಗಳೂರಿನ ಸ್ಥಿತಿಯನ್ನ ಆಡಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹೈವೇಯಲ್ಲಿ ನಿಂತ ಬಸ್ಸನ್ನು ತಳ್ಳಿದ ಮಹಿಳೆಯರು

    ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿದ್ದವು. ಇನ್ನು ಕೆಲವು ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದರು. ಇದೀಗ ಬೆಂಗಳೂರಿನ ಈ ಸ್ಥಿತಿಯನ್ನು ಊಬರ್ ಕಂಪನಿ ಟ್ರೋಲ್ ಮಾಡಿದೆ.

  • ಅರಬ್ಬಿ ಸಮುದ್ರದಲ್ಲಿ ನೋಡನೋಡುತ್ತಿದ್ದಂತೆ ಮುಳುಗಿದ ಬೋಟ್ – 6 ಮೀನುಗಾರರ ರಕ್ಷಣೆ

    ಅರಬ್ಬಿ ಸಮುದ್ರದಲ್ಲಿ ನೋಡನೋಡುತ್ತಿದ್ದಂತೆ ಮುಳುಗಿದ ಬೋಟ್ – 6 ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಮರಳುತ್ತಿದ್ದ ಬೋಟ್ ಸಮುದ್ರದಲ್ಲಿ ಕಲ್ಲಿಗೆ ತಾಗಿ ಮುಳುಗಡೆಯಾಗಿ ಆರು ಜನ ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಭಟ್ಕಳದ ಬಂದರು ಬಳಿ ನಡೆದಿದೆ.

    ಉಡುಪಿ ಜಿಲ್ಲೆಯ ಬ್ರಹ್ಮಾವರದ ಸುರೇಶ್ ಎಂಬುವರಿಗೆ ಸೇರಿದ ಬೋಟ್ ಬ್ರಹ್ಮಾವರದಿಂದ ಕುಮಟಾ ಭಾಗದಲ್ಲಿ ಮೀನುಗಾರಿಕೆ ನಡೆಸಿ ಭಟ್ಕಳ ಬಂದರಿಗೆ ಬರುತ್ತಿತ್ತು. ಮೀನನ್ನು ಇಳಿಸಲು ಬರುತ್ತಿದ್ದಾಗ ಭಟ್ಕಳ ಬಂದರು ಭಾಗದ ಸಮುದ್ರದಲ್ಲಿ ಬೋಟಿನ ತಳಭಾಗಕ್ಕೆ ಕಲ್ಲುಬಂಡೆ ಹೊಡೆದಿದೆ.

    ಈ ವೇಳೆ ತಳಭಾಗದಲ್ಲಿ ಬೋಟ್ ಸೀಳುಬಿಟ್ಟು ನೀರು ಹೊಕ್ಕಿದ್ದು ಸಮುದ್ರದಲ್ಲೇ ಮುಳುಗಿದೆ. ಬೋಟಿನಲ್ಲಿ ಮೀನುಗಳು  ಹಾಗೂ ಹಲವು ಸಾಮಾನುಗಳಿದ್ದು ಎಲ್ಲವೂ ನೀರುಪಾಲಾಗಿದ್ದು 50 ಲಕ್ಷ ರೂ. ಹೆಚ್ಚು ನಷ್ಟವಾಗಿದೆ. ರಕ್ಷಣೆಗೊಂಡ ಎಲ್ಲಾ ಮೀನುಗಾರರು ಸುರಕ್ಷಿತವಾಗಿದ್ದು ಭಟ್ಕಳ ಬಂದರಿನಲ್ಲಿ ಆಶ್ರಯ ಪಡೆದಿದ್ದಾರೆ.

     

  • ಕಾರವಾರ | ಅರಬ್ಬಿ ಸಮುದ್ರದಲ್ಲಿ ಮುಳುಗಿದ ಬೋಟ್- 8 ಮೀನುಗಾರರ ರಕ್ಷಣೆ

    ಕಾರವಾರ | ಅರಬ್ಬಿ ಸಮುದ್ರದಲ್ಲಿ ಮುಳುಗಿದ ಬೋಟ್- 8 ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಉಡುಪಿ (Udupi) ಜಿಲ್ಲೆಯ ಮಲ್ಪೆ (Malpe) ಮೂಲದ ಸೀ ಹಂಟರ್ ಹೆಸರಿನ ಬೋಟ್‌ನ (Boat) ತಳಭಾಗದ ಕಬ್ಬಿಣದ ವೆಲ್ಡಿಂಗ್ ಬಿಟ್ಟು ಹೋದ ಪರಿಣಾಮ ಮುಳುಗಿದೆ. ಬೋಟ್‌ನಲ್ಲಿದ್ದ 8 ಜನ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

    ಮಲ್ಪೆಯಿಂದ ಮಹಾರಾಷ್ಟ್ರದ (Maharashtra) ಕಡೆ ಈ ಬೋಟ್ ಚಲಿಸುತಿತ್ತು. ಕಾರವಾರದಿಂದ 9 ನಾಟಿಕನ್ ಮೈಲುದೂರದ ಲೈಟ್ ಹೌಸ್ ಬಳಿ ಚಲಿಸುತಿದ್ದ ವೇಳೆ ಬೋಟ್ ತಳಭಾಗದ ಕಬ್ಬಿಣದ ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿದೆ. ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಇಂಜಿನ್ ಭಾಗಕ್ಕೆ ನೀರು ತುಂಬಿದೆ. ತಕ್ಷಣ ಸ್ಥಳೀಯ ಮೀನುಗಾರರು ಎಂಟು ಜನ ಮೀನುಗಾರರನ್ನು ರಕ್ಷಣೆಮಾಡಿದ್ದಾರೆ.

    ಮುಳುಗುವ ಹಂತದಲ್ಲಿದ್ದ ಬೋಟ್‌ನ್ನು ದಡಕ್ಕೆ ತರಲು ಪ್ರಯತ್ನ ಪಟ್ಟರೂ, ಮಾರ್ಗ ಮಧ್ಯದಲ್ಲೇ ಬೋಟ್ ಮುಳುಗಡೆಯಾಗಿದೆ. ಬೋಟ್ ಮುಳುಗಡೆಯಿಂದ 1 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ.

  • ಬ್ರಿಟನ್‌ಗೆ ತೆರಳುತ್ತಿದ್ದ ವಲಸಿಗರ ದೋಣಿ ಮುಳುಗಿ ಮಗು ಸಾವು

    ಬ್ರಿಟನ್‌ಗೆ ತೆರಳುತ್ತಿದ್ದ ವಲಸಿಗರ ದೋಣಿ ಮುಳುಗಿ ಮಗು ಸಾವು

    ಪ್ಯಾರಿಸ್: ಬ್ರಿಟನ್‌ಗೆ (Britain) ತೆರಳುತ್ತಿದ್ದ ವಲಸಿಗರ ದೋಣಿಯೊಂದು ಗುರುವಾರ ರಾತ್ರಿ ಫ್ರಾನ್ಸ್‌ನ (France) ಕರಾವಳಿಯ ಕಾಲುವೆಯಲ್ಲಿ ಮುಳುಗಿ ಮಗು ಸಾವನ್ನಪ್ಪಿದೆ ಎಂದು ಫ್ರೆಂಚ್ ಕಡಲ ಅಧಿಕಾರಿಗಳು ತಿಳಿಸಿದ್ದಾರೆ.

    ಅಪಘಾತವು ಫ್ರೆಂಚ್ ಪಟ್ಟಣವಾದ ವಿಸ್ಸಾಂಟ್‌ನಲ್ಲಿ ಸಂಭವಿಸಿದ್ದು, ಕಾಲುವೆ ಮತ್ತು ಉತ್ತರ ಸಮುದ್ರದ ಉಸ್ತುವಾರಿ ನೌಕಾ ಅಧಿಕಾರಿ ಎಎಫ್‌ಪಿಗೆ ತಿಳಿಸಿದರು. ಘಟನೆಯಲ್ಲಿ 65 ಜನರನ್ನು ರಕ್ಷಿಸಲಾಗಿದೆ ಆದರೆ ಒಂದು ಮಗು ಸಾವನ್ನಪ್ಪಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮುಂದಿನ ವಾರ ರಷ್ಯಾಗೆ ಪ್ರಧಾನಿ ಮೋದಿ ಭೇಟಿ

    ಈ ಮೊದಲು ಸೆ. 3 ರಂದು 6 ಮಂದಿ ಸಾವನ್ನಪ್ಪಿದರು. 2018 ರಿಂದ ಈವರೆಗೆ ಕಾಲುವೆಯನ್ನು ದಾಟಲು ಪ್ರಯತ್ನಿಸುವಾಗ ಒಟ್ಟು 52 ಜನ ವಲಸಿಗರು ಸಾವನ್ನಪ್ಪಿದ್ದಾರೆ ಎಂದು ದಾಖಲೆಯಾಗಿದೆ. ಅಧಿಕೃತ ಬ್ರಿಟಿಷ್ ಅಂಕಿಅಂಶಗಳ ಪ್ರಕಾರ, ಬ್ರಿಟನ್‌ಗೆ ದೋಣಿಗಳಲ್ಲಿ ಆಗಮಿಸುವ ವಲಸಿಗರ ಸಂಖ್ಯೆ 2020ಕ್ಕೆ ಹೋಲಿಸಿದರೆ ಈ ವರ್ಷ ಸರಾಸರಿ 53 ಆಗಿದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಭದ್ರತಾ ಸಿಬ್ಬಂದಿಯ ವಿಚಾರಣೆ ನಡೆಸಿದ ಮುಂಬೈ ಪೊಲೀಸರು

    ಯುಕೆ ಹೋಮ್ ಆಫೀಸ್ ಅಂಕಿಅಂಶಗಳ ಪ್ರಕಾರ ಜ.1ರಿಂದ 26,000 ಕ್ಕೂ ಹೆಚ್ಚು ವಲಸಿಗರು ಬ್ರಿಟನ್ ತೀರಕ್ಕೆ ಬಂದಿಳಿದ್ದಾರೆ. ಇದನ್ನೂ ಓದಿ: ಹುಲಿ ದಾಳಿಗೆ ಹಸು ಸಹಿತ ಹೊಟ್ಟೆಯಲ್ಲಿದ್ದ ಕರು ಬಲಿ – ಮುಂದುವರಿದ ವ್ಯಾಘ್ರನ ಅಟ್ಟಹಾಸ

  • ತರಬೇತಿ ವೇಳೆ ಬೋಟ್ ಮುಳುಗಿ ಇಬ್ಬರು ಕಮಾಂಡೋಗಳ ದುರ್ಮರಣ

    ತರಬೇತಿ ವೇಳೆ ಬೋಟ್ ಮುಳುಗಿ ಇಬ್ಬರು ಕಮಾಂಡೋಗಳ ದುರ್ಮರಣ

    ಬೆಳಗಾವಿ: ನೆರೆಯ ಮಹಾರಾಷ್ಟ್ರದ (Maharashtra) ತಿಲಾರಿ ಡ್ಯಾಂನಲ್ಲಿ ರಿವರ್ ಕ್ರಾಸಿಂಗ್ (River Crossing) ತರಬೇತಿಗೆ ಹೋಗಿದ್ದ ಬೆಳಗಾವಿ ಕಮಾಂಡೋ ಸೆಂಟರ್‌ನ ಇಬ್ಬರು ಕಮಾಂಡೋಗಳು (Commando) ಬೋಟ್ (Boat) ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

    ಬೆಳಗಾವಿಯ (Belagavi) ಜೆಎಲ್ ವಿಂಗ್ ಕಮಾಂಡೋ ತರಬೇತಿ ಕೇಂದ್ರದ ರಾಜಸ್ಥಾನ ಮೂಲದ ವಿಜಯ್ ಕುಮಾರ್ ದಿನವಾಲ್ (28) ಹಾಗೂ ಪಶ್ಚಿಮ ಬಂಗಾಳದ ದಿವಾಕರ್ ರಾಯ್(26) ಮೃತಪಟ್ಟಿದ್ದಾರೆ. ಇಬ್ಬರು ಜವಾನರು ಕಮಾಂಡೋ ಸೆಂಟರ್‌ನ ಸೈನಿಕರಿಗೆ ರಿವರ್ ಕ್ರಾಸಿಂಗ್ ತರಬೇತಿ ನೀಡುತ್ತಿದ್ದರು. ಬೋಟ್‌ನಲ್ಲಿ ರಿವರ್ ಕ್ರಾಸಿಂಗ್ ಮಾಡುತ್ತಿದ್ದ ಆರು ಜನ ಸೈನಿಕರ ಪೈಕಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಬದುಕುಳಿದಿದ್ದಾರೆ. ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಸರ್ಕಾರಿ ಬಸ್ – ಬಾಲಕ ಸ್ಥಳದಲ್ಲೇ ಸಾವು!

    ಬೆಳಗಾವಿಯ ಕಮಾಂಡೋ ತರಬೇತಿ ವಿಭಾಗದ ಇಬ್ಬರು ಸೈನಿಕರು ರಿವರ್ ಕ್ರಾಸಿಂಗ್ ತರಬೇತಿ ಪಡೆಯಲು ತಿಲ್ಲಾರಿ ಡ್ಯಾಂ ಹಿನ್ನೀರಿನ ಜಲಪ್ರದೇಶಕ್ಕೆ ತೆರಳಿದ್ದರು. ಹಿನ್ನೀರಿನ ಒಂದು ದಡದಿಂದ ಇನ್ನೊಂದು ದಡಕ್ಕೆ ಬೋಟ್‌ನಲ್ಲಿ ಆರು ಜನ ಸೈನಿಕರು ತೆರಳಿದ್ದರು. ಮಧ್ಯದಲ್ಲಿಯೇ ಬೋಟ್ ಮುಳುಗಿದ್ದರಿಂದ ಇಬ್ಬರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸಾವಿನ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿ ಎಸ್ಕೇಪ್ ಆಗಿದ್ದ ಸಂಬಂಧಿಕರು ಅರೆಸ್ಟ್

  • ಭಾರೀ ಗಾಳಿಗೆ ನದಿಯಲ್ಲಿ ದೋಣಿ ಮಗುಚಿ 6 ಮಂದಿ ನೀರುಪಾಲು

    ಭಾರೀ ಗಾಳಿಗೆ ನದಿಯಲ್ಲಿ ದೋಣಿ ಮಗುಚಿ 6 ಮಂದಿ ನೀರುಪಾಲು

    ಬೆಳಗಾವಿ/ಮುಂಬೈ: ಮಹಾರಾಷ್ಟ್ರದಲ್ಲಿ (Maharastra) ಭಾರೀ ಗಾಳಿ ಬೀಸಿ ದೋಣಿ ಮುಗುಚಿ ಭೀಕರ ಅವಘಡ ಸಂಭವಿಸಿದ್ದು, ಒಂದು ವರ್ಷದ ಮಗು ಸೇರಿ ಆರು ಮಂದಿ ನೀರು ಪಾಲಾಗಿರುವ ಘಟನೆ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ನಡೆದಿದೆ.

    ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದೋಣಿ (Boat) ಮುಗುಚಿ 6 ಮಂದಿ ನೀರು ಪಾಲಾಗಿದ್ದಾರೆ. ಉಜ್ಜನಿ ಜಲಾಶಯದ ಹಿನ್ನೀರಿನಲ್ಲಿ ಕುಟುಂಬಸ್ಥರು ದೋಣಿ ವಿಹಾರಕ್ಕೆ ತೆರಳಿದ್ದರು. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಉಜ್ಜನಿ ಜಲಾಶಯದಲ್ಲಿ ಗೋಕುಳ ಜಾಧವ್(30) ಕೋಮಲ್ ಜಾಧವ್(26) ಶುಭ ಜಾಧವ್(1) ಮಾಹಿ ಜಾಧವ್(3) ನೀರು ಪಾಲಾಗಿದ್ದಾರೆ.

    ಇನ್ನೂ ಅದೇ ದೋಣಿಯಲ್ಲಿ ಮತ್ತಿಬ್ಬರು ವಿಹಾರಿಗಳು ಸಹ ಪಯಣಿಸುತ್ತಿದ್ದು, ಅವರೂ ನೀರು ಪಾಲಾಗಿದ್ದಾರೆ. ಕುಗ್ಗಾಂವ್ ಗ್ರಾಮದ ಅನುರಾಗ್ ಅವಘಡೆ, ಗೌರವ್ ಡೋಂಗರೆ ನೀರುಪಾಲುದವರು. ನೀರುಪಾಲಾಗಿರುವವರ ಹುಡುಕಾಟಕ್ಕೆ ರಾಷ್ತ್ರೀಯ ವಿಪತ್ತು ನಿರ್ವಹಣಾ ದಳ (NDRF) ತಂಡದ ಸಿಬ್ಬಂದಿ ಆಗಮಿಸಿದ್ದಾರೆ. ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ಮುಂದುವರಿಸಿದ್ದಾರೆ. ಇದನ್ನೂ ಓದಿ: HDK ಅಫಿಡವಿಟ್, ಅಶೋಕ್ ರೈಟಿಂಗ್‌ನಲ್ಲಿ ಕೊಡ್ಲಿ- ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ಟಾಂಗ್