Tag: BN Nagendra

  • Valmiki Scam | 45 ದಿನಗಳ ಬಳಿಕ ಮಾಜಿ ಸಚಿವ ನಾಗೇಂದ್ರ ಜಾಮೀನಿಗೆ ಅರ್ಜಿ ಸಲ್ಲಿಕೆ

    Valmiki Scam | 45 ದಿನಗಳ ಬಳಿಕ ಮಾಜಿ ಸಚಿವ ನಾಗೇಂದ್ರ ಜಾಮೀನಿಗೆ ಅರ್ಜಿ ಸಲ್ಲಿಕೆ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಬಹುಕೋಟಿ ಹಗರಣ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಮಾಜಿ ಸಚಿವ ಬಿ.ಎನ್‌ ನಾಗೇಂದ್ರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಬಂಧನವಾಗಿ 45 ದಿನಗಳು ಕಳೆದ ಬಳಿಕ ಜನಪ್ರತಿನಿಧಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

    3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ:
    ಇದೇ ಆಗಸ್ಟ್‌ 5ರಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಪೊಲೀಸರು 12 ಮಂದಿ ಆರೋಪಿಗಳ ವಿರುದ್ಧ 3ನೇ ಎಸಿಎಂಎಂ ಕೋರ್ಟ್‌ನಲ್ಲಿ ಚಾರ್ಜ್ ಶೀಟ್ (Charge Sheet) ಸಲ್ಲಿಕೆ ಮಾಡಿದ್ದರು. ಇದನ್ನೂ ಓದಿ: Valmiki Corporation Scam | ಮತ್ತೆ 7.5 ಕೋಟಿ ಹಣ ಜಪ್ತಿ – ನಾಗೇಂದ್ರ ನ್ಯಾಯಾಂಗ ಬಂಧನ ವಿಸ್ತರಣೆ

    ಈ ಹಿಂದೆ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು ಪ್ರಥಮ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಈ ದೋಷಾರೋಪಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ (Nagendra), ಬಸನಗೌಡ ದದ್ದಲ್ (Basanagouda Daddal) ಅವರ ಹೆಸರನ್ನು ಕೈಬಿಡಲಾಗಿತ್ತು. ಇದನ್ನೂ ಓದಿ: Valmiki Scam | ಜೇಬು ತುಂಬಿಸಿದವರು ಎಷ್ಟು ಮಂದಿ? ಎಷ್ಟು ಹಣ ಹೋಗಿದೆ? ಚಿನ್ನ ಎಷ್ಟು ಸಿಕ್ಕಿದೆ?

    ಸುಮಾರು 3,072 ಪುಟಗಳ ಚಾರ್ಜ್ ಶೀಟ್‌ನಲ್ಲಿ ಸತ್ಯನಾರಾಯಣ ವರ್ಮಾ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ಸಾಯಿ ತೇಜ ಸೇರಿ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ತನಿಖೆ ವೇಳೆ ಸುಮಾರು 45 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು. ಇದನ್ನೂ ಓದಿ: Valmiki Scam | ಜೈಲಿಗೆ ಹೋಗೋ ಭಯಕ್ಕೆ ಚಂದ್ರಶೇಖರ್‌ ಆತ್ಮಹತ್ಯೆ

  • Valmiki Corporation Scam | ಮತ್ತೆ 7.5 ಕೋಟಿ ಹಣ ಜಪ್ತಿ – ನಾಗೇಂದ್ರ ನ್ಯಾಯಾಂಗ ಬಂಧನ ವಿಸ್ತರಣೆ

    Valmiki Corporation Scam | ಮತ್ತೆ 7.5 ಕೋಟಿ ಹಣ ಜಪ್ತಿ – ನಾಗೇಂದ್ರ ನ್ಯಾಯಾಂಗ ಬಂಧನ ವಿಸ್ತರಣೆ

    ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್‌ಗೆ (Valmiki Corporation Scam) ಸಂಬಂಧಿಸಿದಂತೆ ಇತ್ತ ಚಾರ್ಜ್‌ಶೀಟ್‌ ಸಲ್ಲಿಸಿರುವ ವಿಶೇಷ ತನಿಖಾ ತಂಡ (SIT) ತನ್ನ ಭೇಟೆಯನ್ನು ಮುಂದುವರಿಸಿದೆ. ಸೋಮವಾರ (ಆ.5) ಮತ್ತೆ 7.5 ಕೋಟಿ ರೂ.ಗಳನ್ನು ಜಪ್ತಿ ಮಾಡಿದೆ.

    ಫಸ್ಟ್ ಫಿನಾನ್ಸ್ ಬ್ಯಾಂಕ್ಸ್‌ನ ಅಧ್ಯಕ್ಷ ಸತ್ಯನಾರಾಯಣ ಇಟ್ಕಾರಿ ಬಳಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಆರ್‌ಬಿಎಲ್‌ ಬ್ಯಾಂಕ್‌ನಲ್ಲಿದ್ದ (RBL Bank) ಇಟ್ಕಾರಿ ಖಾತೆಯಿಂದಲೇ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಮೂಲಕ ಈವರೆಗೆ ಎಸ್‌ಐಟಿ ಒಟ್ಟು 57 ಕೋಟಿ ರೂ.ಗಳನ್ನು ಜಪ್ತಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಮ್ಮ ಹೋರಾಟದ ಬಿಸಿಗೆ ಕಾಂಗ್ರೆಸ್ ಸರ್ಕಾರ ಒಂಟಿ ಕಾಲಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣ: ವಿಜಯೇಂದ್ರ

    ನಾಗೇಂದ್ರ ನ್ಯಾಯಾಂಗ ಬಂಧನ ವಿಸ್ತರಣೆ:
    ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್‌ನಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಮಾಜಿ ಸಚಿವ ಬಿ.ಎನ್‌ ನಾಗೇಂದ್ರ ಅವರ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಸೋಮವಾರ (ಆ.5) ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಾಗೇಂದ್ರ (BN Nagendra) ಅವರನ್ನು ಹಾಜರುಪಡಿಸಲಾಗಿತ್ತು. ನಾಗೇಂದ್ರ ಅವರು ಜಾಮೀನಿಗೆ ಅರ್ಜಿ ಹಾಕದೇ ಇರುವ ಕಾರಣ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಯಿತು. ಆಗಸ್ಟ್ 14ರ ವರೆಗೂ ಇಬ್ಬರ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌- ಆರೋಪಿಯನ್ನು ಕರೆ ತಂದು ಮರು ಸೃಷ್ಟಿ ಹೇಗೆ ಮಾಡಲಾಯ್ತು?

    3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ:
    ಈವರೆಗೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ಸುಮಾರು 3,072 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಸತ್ಯಾರಾಯಣ ವರ್ಮಾ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ಸಾಯಿ ತೇಜ ಸೇರಿ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ತನಿಖೆಯ ವೇಳೆ ಸುಮಾರು 45 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು. ಈ ಬೆನ್ನಲ್ಲೇ ಮತ್ತೊಂದು ದಾಳಿ ನಡೆಸಿ ಅಪಾರ ಪ್ರಮಾಣದ ಹಣವನ್ನು ಜಪ್ತಿ ಮಾಡಿದೆ. ಇದನ್ನೂ ಓದಿ: ಮೈಸೂರು ಚಲೋ ಪಾದಯಾತ್ರೆ ವೇಳೆ ಹೃದಯಾಘಾತ – ಬಿಜೆಪಿ ಕಾರ್ಯಕರ್ತೆ ಸಾವು

  • Valmiki Corporation Scam | ಹೈದರಾಬಾದ್‌ನಲ್ಲೇ ಬೀಡುಬಿಟ್ಟ ಎಸ್‌ಐಟಿ – ಒಟ್ಟು 16 ಕೆಜಿ ಚಿನ್ನ ಜಪ್ತಿ

    Valmiki Corporation Scam | ಹೈದರಾಬಾದ್‌ನಲ್ಲೇ ಬೀಡುಬಿಟ್ಟ ಎಸ್‌ಐಟಿ – ಒಟ್ಟು 16 ಕೆಜಿ ಚಿನ್ನ ಜಪ್ತಿ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಕೇಸ್‌ (Valmiki Corporation Corruption Case) ರಾಜಕೀಯ ಕೆಸರೆಚಾಟಕ್ಕೆ ಕಾರಣವಾಗಿದೆ. ಎಸ್‌ಐಟಿ ತನಿಖೆ ಮಧ್ಯೆಯೇ ಇಸಿಐಆರ್ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿಗಮದ ಮಾಜಿ ಸಚಿವ ಬಿ.ನಾಗೇಂದ್ರರನ್ನ (BN Nagendra) ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ (SIT Team) ಹೈದರಾಬಾದ್‌ನಲ್ಲೇ ಬೀಡುಬಿಟ್ಟಿದೆ.

    ಎಸ್‌ಐಟಿ ತನಿಖೆ ಚುರುಕುಗೊಳಿಸಿದ್ದು, ಈವರೆಗೂ 37 ಕೋಟಿ ರೂ.ಗಿಂತಲೂ ಅಧಿಕ ಹಣ ಹಾಗೂ 16 ಕೆ.ಜಿಗೂ ಹೆಚ್ಚು ಚಿನ್ನವನ್ನ ವಶಪಡಿಸಿಕೊಂಡಿದೆ. ಹೈದ್ರಾಬಾದ್‌ನಲ್ಲೇ ಬೀಡುಬಿಟ್ಟಿರೋ ಎಸ್‌ಐಟಿ ಸೈಬರ್ ತಜ್ಞರ ತಂಡ, ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ–ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಸತ್ಯನಾರಾಯಣ ವರ್ಮಾಗೆ ಸಂಬಂಧಿಸಿದ ಕಚೇರಿ ಹಾಗೂ ಕೆಲ ಹಣಕಾಸು ವ್ಯವಹಾರದ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇರೋದು ಹಗರಣಗಳಲ್ಲಿ ಮುಳುಗಿರುವ ಸರ್ಕಾರ: ನಿಖಿಲ್ ಕುಮಾರಸ್ವಾಮಿ

    ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ಬಳಿಕ ನಗದು ಸಂಗ್ರಹ ಮಾಡಿದ್ದ ಹಿನ್ನೆಲೆ, ಎಲ್ಲಾ ಬ್ಯಾಂಕ್ ಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಮೂಲ ಖಾತೆದಾರರನ್ನ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಳ್ಳುತ್ತಿರುವ ತಂಡ ಸತ್ಯನಾರಾಯಣ ವರ್ಮನನ್ನ ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಲಾಗುತ್ತಿದೆ. ಇನ್ನು ಸತ್ಯನಾರಾಯಣ ವರ್ಮಾ ವಿಚಾರಣೆ ಮಾಡಲು ಇಡಿ (ED) ಸಹ ಮುಂದಾಗಿದ್ದು, ಎಸ್‌ಐಟಿ ಕಸ್ಟಡಿ ಮುಗಿಯುತ್ತಿದ್ದಂತೆ ವಶಕ್ಕೆ ಪಡೆಯಲು ಮುಂದಾಗಿದೆ. ಇದನ್ನೂ ಓದಿ: ದರ್ವೇಶ್ ಗ್ರೂಪ್‌ನಿಂದ ವಂಚನೆ – ಸಿಐಡಿ ದಾಳಿ ವೇಳೆ ಕೋಟ್ಯಂತರ ರೂ. ಪತ್ತೆ

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೈದರಾಬಾದ್‌ನ ಎರಡು ಸ್ಥಳಗಳಲ್ಲಿ ಶೋಧ ನಡೆಸಿದ್ದ ಎಸ್‌ಐಟಿ, 6 ಕೆಜಿ ಚಿನ್ನ ಹಾಗೂ 2.50 ಕೋಟಿ ರೂ. ನಗದು ಹಣವನ್ನ ವಶಪಡಿಸಿಕೊಂಡಿತ್ತು. ಆರೋಪಿ ಸತ್ಯನಾರಾಯಣ ವರ್ಮನಿಂದ 5 ಕೆಜಿ ಚಿನ್ನ ಹಾಗೂ ಕಾಕಿ ಶ್ರೀನಿವಾಸ್‌ನಿಂದ 1 ಕೆಜಿ ಚಿನ್ನವನ್ನ ಜಪ್ತಿ ಮಾಡಿಕೊಂಡಿತ್ತು. ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರನ್ನು ಮರು ಸ್ಥಾಪನೆ ಮಾಡೇ ಮಾಡ್ತೀವಿ – ಡಿಕೆಶಿಗೆ ನಿಖಿಲ್ ಸವಾಲ್

  • ಕೆಪಿಸಿಸಿ ಸಭೆ ಹಗರಣ ಮುಚ್ಚಿಹಾಕೋದಕ್ಕಾ? ಸಿಎಂ ರಾಜೀನಾಮೆ ಪಡೆಯೋಕಾ? – ರಾಗಾಗೆ ಅಶ್ವಥ್‌ ನಾರಾಯಣ್‌ ಪ್ರಶ್ನೆ

    ಕೆಪಿಸಿಸಿ ಸಭೆ ಹಗರಣ ಮುಚ್ಚಿಹಾಕೋದಕ್ಕಾ? ಸಿಎಂ ರಾಜೀನಾಮೆ ಪಡೆಯೋಕಾ? – ರಾಗಾಗೆ ಅಶ್ವಥ್‌ ನಾರಾಯಣ್‌ ಪ್ರಶ್ನೆ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣವನ್ನು (Valmiki Corporation Corruption Scam) ಮುಚ್ಚಿ ಹಾಕೋದಕ್ಕಾಗಿ ಕೆಪಿಸಿಸಿ ಕಚೇರಿಯಲ್ಲಿ (KPCC Office) ಸಭೆ ನಡೆಸಲು ರಾಹುಲ್ ಗಾಂಧಿ ಬಂದಿದ್ದಾರಾ? ಅಥವಾ ಮುಖ್ಯಮಂತ್ರಿಯವರ ರಾಜೀನಾಮೆ ಪಡೆಯಲು ಸಭೆ ಕರೆದಿದ್ದೀರಾ? ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್‌ ನಾರಾಯಣ್‌ (Ashwath Narayan) ಅವರು ಪ್ರಶ್ನಿಸಿದರು.

    ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯದ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತರ ಹಣವನ್ನು ಲೂಟಿ ಹೊಡೆದ ಸರ್ಕಾರ ಇದು. ನೀವು ಈ ಸರ್ಕಾರದ ರಾಜೀನಾಮೆ ಪಡೆಯಲು ಬಂದಿದ್ದೀರಾ? ಎಂದು ರಾಹುಲ್‌ ಗಾಂಧಿ ಅವರಿಗೆ ಕೇಳಿದರು. ಇದನ್ನೂ ಓದಿ: ಪೆನ್‌ಡ್ರೈವ್ ಹಂಚಿದವರು ತನಿಖಾಧಿಕಾರಿ ಎದುರೇ ಸಂಭ್ರಮಾಚರಣೆ ಮಾಡ್ತಾರೆ: ವಕೀಲ ಗೋಪಾಲಗೌಡ ಆರೋಪ

    ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ (Basavanagouda Daddal) ರಾಜೀನಾಮೆ ಪಡೆಯುತ್ತೀರಾ? ಪಕ್ಷದಿಂದ ಉಚ್ಚಾಟಿಸುತ್ತೀರಾ? ಅವರನ್ನ ಬಂಧಿಸುತ್ತೀರಾ? ಸಾಕ್ಷಿ ನಾಶ ಮಾಡುವ ಬಗ್ಗೆ ಮಹತ್ವದ ಸಭೆ ನಡೆಸಿದ್ದ ಸಚಿವ ಶರಣಪ್ರಕಾಶ್ ಪಾಟೀಲರನ್ನು ಬಂಧಿಸುವಿರಾ? ಅವರ ಉಚ್ಚಾಟನೆ ಮಾಡುವಿರಾ? ಎಂದು ಪ್ರಶ್ನೆಗಳ ಮಳೆ ಸುರಿಸಿದರು. ಇದನ್ನೂ ಓದಿ: ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಸಿಬ್ಬಂದಿ ಕರ್ತವ್ಯದಿಂದ ಅಮಾನತು – ಬಳಿಕ ಅರೆಸ್ಟ್‌!

    ಹಗರಣದ ಹಿಂದೆ ದೊಡ್ಡ ಜಾಲವೇ ಇದ್ದಂತಿದೆ, ಎಲ್ಲರೂ ಅನುಕೂಲ ಪಡೆದುಕೊಂಡಂತೆ ಕಾಣುತ್ತಿದೆ. ಹಾಗಾಗಿ ಎಲ್ಲ ಸಂದೇಹಗಳಿಗೆ ಉತ್ತರ ಕೊಟ್ಟು ಕ್ರಮ ವಹಿಸಬೇಕು. ಕರ್ಮಕಾಂಡ ಮಾಡಿ ಭಂಡತನದಲ್ಲಿ ಏನೂ ಉತ್ತರ ಕೊಡದೇ ನಾಗೇಂದ್ರ (BN Nagendra) ಅವರ ರಾಜೀನಾಮೆಯನ್ನು ಅತ್ಯಂತ ಕಷ್ಟಪಟ್ಟು ಪಡೆದಿದ್ದಾರೆ. ಅವರ ಬಂಧನವೂ ಆಗಬೇಕಿತ್ತು, ಬಂಧಿಸುವ ಕಾರ್ಯವನ್ನು ಸಿಬಿಐನವರಿಗೆ ಬಿಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಇವಿಎಂ ಸತ್ತಿದ್ಯಾ ಅಥವಾ ಬದುಕಿದ್ಯಾ? – ವಿಪಕ್ಷ ನಾಯಕರನ್ನ ಲೇವಡಿ ಮಾಡಿದ ಮೋದಿ

    ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿದೆ:
    ರಾಜ್ಯದ ಇಡೀ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರದಲ್ಲಿದೆ. ದಲಿತರ ಹಣ ಬೇರೆ ರಾಜ್ಯಕ್ಕೆ ವರ್ಗಾವಣೆ ಆಗಿದೆ. ಸಾಕ್ಷಿ ನಾಶಕ್ಕೆ ನಿಮ್ಮಲ್ಲಿ ಏನು ಉತ್ತರ ಇದೆ? ಮುಖ್ಯಮಂತ್ರಿಗಳಿಗೆ ಕಿಂಚಿತ್ತೂ ನೈತಿಕತೆ, ಮೌಲ್ಯ ಇದ್ದರೆ, ಏನಾದರೂ ನಿಮ್ಮ ಅನುಭವಕ್ಕೆ ಗೌರವ ಇದ್ದರೇ ಮೊದಲು ರಾಜೀನಾಮೆ ಕೊಡಿ. ನಿಮ್ಮ ಇಲಾಖೆಯಡಿಯಲ್ಲೇ ಹಗರಣ ಆಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ ಅಶ್ವಥ್‌ ನಾರಾಯಣ್‌ ಒತ್ತಾಯಿಸಿದರು.

    ಎಲ್ಲರ ಭಾಗಿತ್ವ, ಸರ್ಕಾರದ ಸಹಮತ ಇಲ್ಲದೇ, ಎಲ್ಲರ ಗಮನಕ್ಕೆ ಬಾರದೇ ರಾಜ್ಯದ ಖಜಾನೆಯಿಂದ ಹಣ ವರ್ಗಾವಣೆ ಮಾಡಲು ಹೇಗೆ ಸಾಧ್ಯ? ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್‌ ಅವರು ತಮ್ಮ ಅಫಿಡವಿಟ್‍ನಲ್ಲಿ ಸಾಕ್ಷಿ ನಾಶ ಆಗದಂತೆ ನೋಡಿಕೊಳ್ಳಲು ಕೋರಿದ್ದಾರೆ. ಮೇ 25ನೇ ತಾರೀಕು ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಕೊಠಡಿಯಲ್ಲಿ ಈ ಹಗರಣಕ್ಕೆ ಸಂಬಂಧಪಟ್ಟಂತೆ ಸಚಿವ ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ- ಶಾಸಕ ಬಸವನಗೌಡ ದದ್ದಲ್ ಜೊತೆ ಈ ಪ್ರಕರಣದ ಚರ್ಚೆ ನಡೆದಿದೆ. ಆದ್ದರಿಂದ ಆ ಸಭೆಯ ಸಿಸಿಟಿವಿ ಫೂಟೇಜ್ ಅನ್ನೂ ಸಂರಕ್ಷಿಸುವಂತೆ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವುದಾಗಿ ತಿಳಿಸಿದರು.

  • ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ – ಸಚಿವ ನಾಗೇಂದ್ರ ತಲೆದಂಡಕ್ಕೆ ವಿಜಯೇಂದ್ರ ಆಗ್ರಹ!

    ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ – ಸಚಿವ ನಾಗೇಂದ್ರ ತಲೆದಂಡಕ್ಕೆ ವಿಜಯೇಂದ್ರ ಆಗ್ರಹ!

    – ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ ಸಿಬಿಐಗೆ ವಹಿಸಲು ಬಿಗಿ ಪಟ್ಟು

    ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ (Valmiki Corporation Corruption Scam) ಸಚಿವ ನಾಗೇಂದ್ರ ತಲೆದಂಡಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಿರಿಯ ನಾಯಕರು ಒತ್ತಾಯಿಸಿದ್ದಾರೆ. ಅಲ್ಲದೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಈ ಸಂಬಂಧ ವಿಜಯೇಂದ್ರ (BY Vijayendra) ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ವಿಜೇಂದ್ರ ಎಕ್ಸ್‌ ಖಾತೆಯಲ್ಲಿ ಏನಿದೆ?
    ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನು ದಿಕ್ಕು ತಪ್ಪಿಸಿ ಭ್ರಷ್ಟರನ್ನು ರಕ್ಷಿಸುವ ಉದ್ದೇಶದಿಂದ ಎಸ್ಐಟಿ ರಚನೆ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಆರೋಪಿತರನ್ನು ರಕ್ಷಿಸಲು ಹೊರಟಿದೆ. ಎಸ್.ಐ.ಟಿ ರಚನೆ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು ಇದನ್ನು ಭಾರತೀಯ ಜನತಾ ಪಾರ್ಟಿಯು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.

    ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರ್ ಅವರು ಸಾವಿಗೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ಈಗಾಗಲೇ ಉಲ್ಲೇಖವಾಗಿರುವಂತೆ ಸ್ವತಃ ಸಚಿವ ಬಿ.ಎನ್‌ ನಾಗೇಂದ್ರ ಹೆಸರಿರುವುದು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಈಗಾಗಲೇ ಸಂಪುಟದಿಂದ ಮುಖ್ಯಮಂತ್ರಿಗಳು ವಜಾಗೊಳಿಸಬೇಕಿತ್ತು ಆದರೆ ಈವರೆಗೂ ಆರೋಪ ಹೊತ್ತವರನ್ನು ಅವ್ಯವಹಾರದ ಜಾಲದಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ.

    ಪರಿಶಿಷ್ಟ ಪಂಗಡದ ಹಿತಾಸಕ್ತಿಗೆ ದ್ರೋಹ ಬಗೆದು ಹಣ ದುರುಪಯೋಗ ಮಾಡಿಕೊಂಡಿರುವುದರ ವಿರುದ್ಧ ಹಾಗೂ ಅಮೂಲ್ಯ ಜೀವವೊಂದು ಆತ್ಮಹತ್ಯೆಗೆ ಈಡಾಗಿರುವುದರ ಕುರಿತು ಈ ಸರ್ಕಾರ ಎಳ್ಳಷ್ಟೂ ತಲೆ ಕೆಡಿಸಿಕೊಳ್ಳದೆ, ಯೂನಿಯನ್ ಬ್ಯಾಂಕ್ ಮೇಲೆ ಗೂಬೆ ಕೂರಿಸಲು ಹೊರಟಿದೆ. ಸದ್ಯ ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿನ್ನೆಲೆಯಲ್ಲಿ ಗತ್ಯಂತರವಿಲ್ಲದೇ ಎಸ್ಐಟಿ ರಚಿಸಿ ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದೆ.

    ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಂತರಾಜ್ಯ ವ್ಯಾಪ್ತಿಯಲ್ಲಿ ದುರುಪಯೋಗವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಸರ್ಕಾರದ ಬಹುದೊಡ್ಡ ಹಗರಣವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ಹೊರತುಪಡಿಸಿ ಇನ್ಯಾವ ಬಗೆಯ ತನಿಖೆಯನ್ನು ರಾಜ್ಯ ಬಿಜೆಪಿ ಒಪ್ಪುವುದಿಲ್ಲ, ಸಿಬಿಐ ತನಿಖೆಯ ಬೇಡಿಕೆಗೆ ಸರ್ಕಾರ ಒಪ್ಪುವವರೆಗೂ, ಆರೋಪಿತ ಸಚಿವ ಬಿ.ನಾಗೇಂದ್ರ ಸ್ಥಾನ ತೆರವಾಗಿ ಅವರಿಗೆ ತಕ್ಕ ಶಿಕ್ಷೆಯಾಗುವವರೆಗೂ ತಾರ್ಕಿಕ ಅಂತ್ಯಕ್ಕೆ ನಾವು ಹೋರಾಟವನ್ನು ಕೊಂಡೊಯ್ಯಲಿದ್ದೇವೆ ಎಂದು ಎಚ್ಚರಿಸಿದ್ದಾರೆ.