Tag: BMW X1

  • ರಾಖಿ ಸಾವಂತ್‌ಗೆ ದುಬಾರಿ ಕಾರು ಕೊಡಿಸಿದ್ದು ಯಾರು? ವೀಡಿಯೋ ಸಮೇತ ಸಾಕ್ಷಿ ಇದೆ

    ರಾಖಿ ಸಾವಂತ್‌ಗೆ ದುಬಾರಿ ಕಾರು ಕೊಡಿಸಿದ್ದು ಯಾರು? ವೀಡಿಯೋ ಸಮೇತ ಸಾಕ್ಷಿ ಇದೆ

    ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಕಾಂಟ್ರವರ್ಸಿ ಕ್ವೀನ್ ಎಂದೇ ಫೇಮಸ್. ಈಕೆ ಹೋದ ಕಡೆಯಲ್ಲ ಕಾಂಟ್ರವರ್ಸಿ ಇದ್ದೆ ಇರುತ್ತೆ. ಕೆಲವೊಮ್ಮೆ ಅಭಿಮಾನಿಗಳಿಗೆ ಅವರೇ ಗಾಸಿಪ್ ಮೈ ಮೇಲೆ ಎಳೆದುಕೊಳ್ಳುತ್ತಾರೆ ಎಂದು ಅನ್ನಿಸಿದೆ. ಈ ನಡುವೆ ಈಗ ರಾಖಿ ಹೊಸ ದುಬಾರಿ ಕಾರನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

    ಕೆಲವು ತಿಂಗಳ ಹಿಂದೆ ರಾಖಿ ಕಾರ್ ಶೋರೋಮ್‌ನ ಹೊರಗೆ ಕಾಣಿಸಿಕೊಂಡಾಗ, ಆಕೆಯನ್ನು ಮಾಧ್ಯಮಗಳು ನೀವು ಹೊಸ ಕಾರನ್ನು ಖರೀದಿಸುತ್ತಿರಾ ಎಂದು ಪ್ರಶ್ನಿಸಿದ್ದವು ಆಗ ಈ ನಟಿ, ಇಂತಹ ಐಷಾರಾಮಿ ಕಾರನ್ನು ಖರೀದಿಸಲು ನಾನು ಸಲ್ಮಾನ್ ಖಾನ್ ಅಲ್ಲ ಎಂದು ಪ್ರಾಮಾಣಿಕವಾಗಿ ಉತ್ತರಿಸಿದ್ದರು. ಆದರೆ ಈಗ ರಾಖಿ ಬಿಎಂಡಬ್ಲ್ಯು ಎಕ್ಸ್ 1 ನ ಮಾಲೀಕರಾಗಿದ್ದಾರೆ. ಈ ಕಾರನ್ನು ರಾಖಿ ಅವರಿಗೆ ಸ್ನೇಹಿತರಾದ ಆದಿಲ್ ಖಾನ್ ದುರಾನಿ ಮತ್ತು ಹೇರ್ ಅಂಡ್ ಸ್ಕೀನ್ ತಜ್ಞ ಶೆಲ್ಲಿ ಲಾಥರ್ ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ರಾಖಿ ಫೋಟೋ ಜೊತೆ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Rakhi Sawant (@rakhisawant2511)

    ಪೋಸ್ಟ್‌ನಲ್ಲಿ ಏನಿದೆ?
    ರಾಖಿ ತನಗೆ ಬಂದ ಗ್ರೇಟ್ ಸಪ್ರ್ರೈಸ್ ಗಿಫ್ಟ್ ಕುರಿತು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಸರ್ ಪ್ರೈಸ್ ಉಡುಗೊರೆಗಾಗಿ ತನ್ನ ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ. ವೀಡಿಯೋದಲ್ಲಿ, ನಟ ಆದಿಲ್ ಮತ್ತು ಶೆಲ್ಲಿಯೊಂದಿಗೆ ಹೊಸ ಐಷಾರಾಮಿ ಕಾರಿನ ಮುಂದೆ ರಾಖಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ:  ಗರ್ಭಿಣಿ ಮಹಿಳೆಯ ಮೊದಲ ಕೆಲಸದ ರಹಸ್ಯ ಬಿಚ್ಚಿಟ್ಟ ನಟಿ ಪ್ರಣಿತಾ

     

    View this post on Instagram

     

    A post shared by Rakhi Sawant (@rakhisawant2511)

    ನನಗೆ ಇಂತಹ ದೊಡ್ಡ ಆಶ್ಚರ್ಯವನ್ನು ನೀಡಿದ ನನ್ನ ಆತ್ಮೀಯ ಸ್ನೇಹಿತ ಶೆಲ್ಲಿ ಲಾಥರ್ ಮತ್ತು ಆದಿಲ್ ಅವರಿಗೆ ತುಂಬಾ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿಸದ್ದಾರೆ. ವೀಡಿಯೋದಲ್ಲಿ ಹೊಸ ಕಾರಿನ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ವೀಡಿಯೋದಲ್ಲಿ ಕಾಣಬಹುದು.