Tag: BMTCm Bus Pass

  • ವಿದ್ಯಾರ್ಥಿಗಳಿಗೆ ದೀಪಾವಳಿ ಸಿಹಿ ನೀಡಿದ ಬಿಎಂಟಿಸಿ

    ವಿದ್ಯಾರ್ಥಿಗಳಿಗೆ ದೀಪಾವಳಿ ಸಿಹಿ ನೀಡಿದ ಬಿಎಂಟಿಸಿ

    ಬೆಂಗಳೂರು: ನವೆಂಬರ್ 17ರಿಂದ ಕಾಲೇಜಿಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದೀಪಾವಳಿ ಸಿಹಿ ನೀಡಿದೆ.

    ಕೊರೊನಾ ಹಿನ್ನೆಲೆ ಮಾರ್ಚ್ ಅಂತ್ಯದಲ್ಲಿ ಬಂದ್ ಆಗಿದ್ದ ಕಾಲೇಜುಗಳು ನವೆಂಬರ್ 17ರಂದು ಆರಂಭಗೊಳ್ಳುತ್ತಿವೆ. ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕಳೆದ ವರ್ಷದ ಪಾಸ್ ತೋರಿಸಿ ಉಚಿತವಾಗಿ ಪ್ರಯಾಣಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ. ಮುಂದಿನ ಪಾಸ್ ಆದೇಶದವರೆಗೂ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.

    ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ತಾಂತ್ರಿಕ/ವೈದ್ಯಕೀಯ ವಿದ್ಯಾರ್ಥಿಗಳು ಹಳೆಯ ಅಂದ್ರೆ 2019-2020ರ ಸಾಲಿನಲ್ಲಿ ನೀಡಲಾಗಿದ್ದ ಬಸ್ ಪಾಸ್ ಅಥವಾ ಸ್ಮಾರ್ಟ್ ಕಾರ್ಡ್ ನಿರ್ವಾಹಕರಿಗೆ ತೋರಿಸಬೇಕು ಎಂದು ಬಿಎಂಟಿಸಿ ಹೇಳಿದೆ.