Tag: BMTC Driver

  • ಡ್ರೈವಿಂಗ್ ಬಗ್ಗೆ ಚಾಲಕರಿಗೆ ಸರಿಯಾಗಿ ತರಬೇತಿ ಕೊಡಿ – ಸಾರ್ವಜನಿಕರಿಂದ ಬಿಎಂಟಿಸಿಗೆ ದೂರು

    ಡ್ರೈವಿಂಗ್ ಬಗ್ಗೆ ಚಾಲಕರಿಗೆ ಸರಿಯಾಗಿ ತರಬೇತಿ ಕೊಡಿ – ಸಾರ್ವಜನಿಕರಿಂದ ಬಿಎಂಟಿಸಿಗೆ ದೂರು

    ಬೆಂಗಳೂರು: ಬಿಎಂಟಿಸಿ ಚಾಲಕರಿಗೆ (BMTC Drivers) ಡ್ರೈವಿಂಗ್‌ ಬಗ್ಗೆ ಸರಿಯಾಗಿ ತರಬೇತಿ ಕೊಡಿ ಅಂತ ಸಾರ್ವಜನಿಕರು ಬಿಎಂಟಿಸಿಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ.

    ಬಿಎಂಟಿಸಿ (BMTC( ಚಾಲಕರಿಂದ ರಾಂಗ್ ಸೈಡ್ ಡ್ರೈವಿಂಗ್, ಸಿಗ್ನಲ್ ಜಂಪ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಡಿಯೋ ಕಳುಹಿಸಿ ಬಿಎಂಟಿಸಿ ಹಾಗೂ ಸಾರಿಗೆ ಸಚಿವರನ್ನ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕಲಬುರಗಿ | ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹಿಂದೂ ಕಾರ್ಯಕರ್ತರಿಂದ ಸಿದ್ಧತೆ

    ಹೆಬ್ಬಾಳ ಮತ್ತು ಕೆ.ಆರ್ ಪುರಂ ರಸ್ತೆಯಲ್ಲಿ ಬಿಎಂಟಿಸಿ ಚಾಲಕರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಿದೆ. ಎರಡೂ ಕಡೆ ರ‍್ಯಾಶ್‌ ಡ್ರೈವಿಂಗ್‌ ಬಗ್ಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ. ಸದ್ಯ ಈ ಬಗ್ಗೆ ಬಿಎಂಟಿಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: 300 ಮಕ್ಕಳ ಮೇಲೆ ವೈದ್ಯನಿಂದ ರೇಪ್ – ನಾನು `ಶಿಶುಕಾಮಿ’ ಎಂದು ತಪ್ಪೊಪ್ಪಿಕೊಂಡ ಆರೋಪಿ

    ದೂರಿನ ದೃಶ್ಯ -1
    ಹೆಬ್ಬಾಳದ ಭದ್ರಪ್ಪ ವೃತ್ತದಿಂದ ಬರುವ ಬಿಎಂಟಿಸಿ ಬಸ್‌ಗಳು ಯೂ-ಟರ್ನ್ ತೆಗೆದುಕೊಳ್ಳಬೇಕಾಗುತ್ತದೆ. ಆದ್ರೆ ಬಿಎಂಟಿಸಿ ಚಾಲಕರು ಮೊದಲು ಸರ್‌ ರಸ್ತೆಗೆ ಬರುತ್ತಾರೆ ಇದರಿಂದ ವಾಹನಗಳು ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.

    ದೃಶ್ಯ – 2
    ಬಿಎಂಟಿಸಿ ಚಾಲಕ ಕೆ.ಆರ್ ಪುರಂ ಬಳಿ ಸಿಗ್ನಲ್ ಜಂಪ್ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆಗಳೂ ಹೆಚ್ಚಾಗಿವೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

  • ಚಲಾಯಿಸುತ್ತಿರುವಾಗಲೇ ಹೃದಯಾಘಾತ – ಬಿಎಂಟಿಸಿ ಚಾಲಕ ಸಾವು

    ಚಲಾಯಿಸುತ್ತಿರುವಾಗಲೇ ಹೃದಯಾಘಾತ – ಬಿಎಂಟಿಸಿ ಚಾಲಕ ಸಾವು

    – ನಿರ್ವಾಹಕನ ಸಮಯಪ್ರಜ್ಞೆಯಿಂದಾಗಿ ತಪ್ಪಿದ ಭಾರಿ ಅನಾಹುತ

    ಬೆಂಗಳೂರು: ಬಿಎಂಟಿಸಿ (BMTC) ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಶವಂತಪುರ (Yeshwanthapur)ಬಳಿ ನಡೆದಿದೆ.

    ಮೃತ ಚಾಲಕನನ್ನು ಕಿರಣ್ (29) ಎಂದು ಗುರತಿಸಲಾಗಿದ್ದು, ಬಿಎಂಟಿಸಿ ಡಿಪೋ 40ರಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಇದನ್ನೂ ಓದಿ: Tungabhadra Dam | ಡ್ಯಾಂಗೆ ಬೋರ್ಡ್ ಅಧಿಕಾರಿಗಳ ಭೇಟಿ, 33 ಗೇಟ್ ಬದಲಾವಣೆಗೆ ಚಿಂತನೆ

    ನೆಲಮಂಗಲದಿಂದ ಯಶವಂತಪುರ ಕಡೆಗೆ ಬರುತ್ತಿದ್ದ ಬಸ್‌ನ್ನು ಕಿರಣ್ ಚಲಾಯಿಸುತ್ತಿದ್ದರು. ಚಲಿಸುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಬಸ್ ಅಡ್ಡಾದಿಡ್ಡಿ ನುಗುತ್ತಾ ಎದುರಾಗಿದ್ದ ಇನ್ನೊಂದು ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಹಾಗೆಯೇ ಮುಂದೆ ಸಾಗಿದೆ. ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ.

    ಎದೆ ನೋವಿನಿಂದಾಗಿ ಚಾಲಕ ಕುಸಿದು ಬೀಳುತ್ತಿದ್ದಂತೆ, ಕಂಡಕ್ಟರ್ ತಕ್ಷಣ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನಲ್ಲಿದ್ದು, ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಯಾವುದೇ ಅವಘಡ ಸಂಭವಿಸಿಲ್ಲ. ಚಾಲಕ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಎರಡನೇ ಬಾರಿ ಅಧ್ಯಕ್ಷರಾಗಿ ಟ್ರಂಪ್‌ ಕಮಾಲ್‌ – ಭಾರತಕ್ಕೆ ಏನು ಲಾಭ?

  • ಚಲಿಸುತ್ತಿದ್ದಾಗಲೇ BMTC ಬಸ್‌ ಚಾಲಕನಿಗೆ ಹೃದಯಾಘಾತ – ಟ್ರಾಫಿಕ್ ಪೊಲೀಸರ ಸಮಯ ಪ್ರಜ್ಞೆಯಿಂದ ಬಚಾವ್‌!

    ಚಲಿಸುತ್ತಿದ್ದಾಗಲೇ BMTC ಬಸ್‌ ಚಾಲಕನಿಗೆ ಹೃದಯಾಘಾತ – ಟ್ರಾಫಿಕ್ ಪೊಲೀಸರ ಸಮಯ ಪ್ರಜ್ಞೆಯಿಂದ ಬಚಾವ್‌!

    ‌- 45 ಪ್ರಯಾಣಿಕರು ಗ್ರೇಟ್‌ ಎಸ್ಕೇಪ್‌

    ಬೆಂಗಳೂರು: ಚಲಿಸುತ್ತಿರುವಾಗಲೇ ಬಿಎಂಟಿಸಿ ಚಾಲಕನಿಗೆ (BMTC Bus Driver) ಹೃದಯಾಘಾತ ಕಾಣಿಸಿಕೊಂಡಿದ್ದು, ಸಂಚಾರ ಪೊಲೀಸರ ಸಮಯ ಪ್ರಜ್ಞೆಯಿಂದ ಜೀವ ಉಳಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಶಾಂತಿನಗರದ ಜೋಡಿ ರಸ್ತೆ ಬಳಿ ಘಟನೆ ನಡೆದಿದೆ. KA51AJ6905 ಬಸ್‌ ಚಾಲನೆ ಮಾಡುತ್ತಿದ್ದ ವೇಳೆ ಚಾಲಕ ವೀರೇಶ್‌ಗೆ ಏಕಾಏಕಿ ಹೃದಯಾಘಾತ (Heart Attack) ಸಂಭವಿಸಿದೆ. ನಡುರಸ್ತೆಯಲ್ಲೇ ಬಸ್‌ ಸ್ಲೋ ಆಗಿದ್ದನ್ನ ಕಂಡು ಸಮೀಪದಲ್ಲಿದ್ದ ಟ್ರಾಫಿಕ್‌ ಪೊಲೀಸರು ಓಡೋಡಿ ಬಂದಿದ್ದಾರೆ.

    ಹಲಸೂರು ಟ್ರಾಫಿಕ್‌ ಪೊಲೀಸ್‌ (Halasur Traffic Police) ಆರ್‌. ರಘುಕುಮಾರ್‌ ಬಸ್‌ ಬಳಿ ನೋಡಿದಾಗ, ಚಾಲಕ ಎದೆ ಬಿಗಿ ಹಿಡಿದುಕೊಂಡು ಒಂದು ಕಡೆಗೆ ಚಾಲಕ ವಾಲಿದ್ದನ್ನು ನೋಡಿದ್ದಾರೆ. ಬಳಿಕ ಹ್ಯಾಂಡ್‌ ಬ್ರೇಕ್‌ ಹಾಕಿ ಬಸ್‌ ನಿಲ್ಲಿಸಿ, ಚಾಲಕನ್ನು ಕೆಳಗಿಳಿಸಿದ್ದಾರೆ. ನಂತರ ಅಂಬುಲೆನ್ಸ್‌ಗೂ ಕಾಯದೇ ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾಫಿಕ್‌ ಪೊಲೀಸರ ಸಮಯಪ್ರಜ್ಞೆಯಿಂದ 45 ಪ್ರಯಾಣಿಕರು ಬಚಾವ್‌ ಆಗಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿರುವುದು ಸ್ಪಷ್ಟವಾಗಿದೆ: ರಾಮಜನ್ಮಭೂಮಿ ಪ್ರಧಾನ ಅರ್ಚಕ

    ಟ್ರಾಫಿಕ್‌ ಪೊಲೀಸರ ಸಮಯಪ್ರಜ್ಞೆಗೆ ಸಾರ್ವಜನಿಕರು ಭೇಷ್‌ ಎಂದಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ ಧ್ರುವಿ ಪಟೇಲ್‌ಗೆ ಮಿಸ್ ಇಂಡಿಯಾ ವರ್ಲ್ಡ್‌ವೈಡ್ ಕಿರೀಟ! 

  • Bengaluru | ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿ – ಚಾಲಕ ವಶಕ್ಕೆ

    Bengaluru | ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿ – ಚಾಲಕ ವಶಕ್ಕೆ

    ಬೆಂಗಳೂರು: ಬಿಎಂಟಿಸಿ ಬಸ್‌ ಅಪಘಾತಕ್ಕೆ (BMTC Bus Accident) ವಿಶೇಷ ಚೇತನ ಬಲಿಯಾಗಿರುವ ಘಟನೆ ನಗರದ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಡೆದಿದೆ.

    ಯಶವಂತಪುರದಿಂದ ಬಸ್‌ ಮೆಜೆಸ್ಟಿಕ್‌ಗೆ ಬರುತ್ತಿದ್ದ ವೇಳೆ ಮೆಜೆಸ್ಟಿಕ್‌ ಬಿಎಂಟಿಸಿ ಬಸ್ ನಿಲ್ದಾಣದ (Majestic Bus Stop) ಎಂಟ್ರಿ ಗೇಟ್‌ ಬಳಿ ಅವಘಡ ಸಂಭವಿಸಿದೆ. ಘಟನೆಗೆ ಅತಿವೇಗದ ಚಾಲನೆಯೇ ಕಾರಣ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ದಶಕದ ಬಳಿಕ ಸಚಿವ ಸಂಪುಟ ಸಭೆ- 11,770 ಕೋಟಿ ರೂ. ಅನುದಾನಕ್ಕೆ ಸಂಪುಟ ಅಸ್ತು

    ಘಟನೆಗೆ ಕಾರಣವಾದ ಬಿಎಂಟಿಸಿ ಚಾಲಕ ಗೋಪಾಲಯ್ಯನನ್ನ ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಸದಸ್ಯರ ಮೇಲೆ ದಾಳಿ, ಸಾವಿರಾರು ಪೇಜರ್‌ ಸ್ಫೋಟ – 8 ಸಾವು, 2 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರ ಗಾಯ

  • ಕೊನೆಗೂ ಬಿಎಂಟಿಸಿ ಚಾಲಕ, ನಿರ್ವಾಹಕರ ಅಕೌಂಟ್‍ಗೆ ಬಿತ್ತು ಸಂಬಳ

    ಕೊನೆಗೂ ಬಿಎಂಟಿಸಿ ಚಾಲಕ, ನಿರ್ವಾಹಕರ ಅಕೌಂಟ್‍ಗೆ ಬಿತ್ತು ಸಂಬಳ

    ಬೆಂಗಳೂರು: ಬಿಎಂಟಿಸಿ ಚಾಲಕರು, ನಿರ್ವಾಹಕರಿಗೆ ವೇತನ ವಿಳಂಬದ ಬಗ್ಗೆ ಪಬ್ಲಿಕ್ ಟಿವಿ ವರದಿ ನೋಡಿ ಎಚ್ಚೆತ್ತ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಇಂದು ಸಭೆ ಕರೆದು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಾರಿಗೆ ಇಲಾಖೆಯ ನಾಲ್ಕು ನಿಗಮ ಎಂಡಿಗಳಿಗೆ ಮೌಖಿಕ ಆದೇಶ ನೀಡಿ ಇಂದು ಮಧ್ಯಾಹ್ನದೊಳಗೆ ವೇತನ ನೀಡಿ ವರದಿ ನೀಡುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಕೊನೆಗೂ ಬಿಎಂಟಿಸಿ ಚಾಲಕ, ನಿರ್ವಾಹಕರ ಅಕೌಂಟ್‍ಗೆ ಸಂಬಳ ಬಂದಿದೆ.

    ಪಬ್ಲಿಕ್ ಟಿವಿ ವರದಿ ನೋಡಿ ಎಚ್ಚೆತ್ತ ಸಾರಿಗೆ ಸಚಿವರು ವೇತನ ನೀಡುವ ಕುರಿತು ಶಾಂತಿನಗರದ ಕೆಎಸ್‌ಆರ್‌ಟಿಸಿ ಮುಖ್ಯ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದರು. ಸಭೆಯಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಸಚಿವರು, ಚಾಲಕ, ನಿರ್ವಾಹಕರ ಅಕೌಂಟ್‍ಗೆ ಸಂಬಳ ವಿಳಂಬ ಯಾಕಾಯ್ತು ಎಂದು ಪ್ರಶ್ನೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಯಾವುದೇ ತಾರತಮ್ಯ ಮಾಡದೇ ಎಷ್ಟೇ ಕಷ್ಟವಿದ್ದರೂ ಸಂಬಳ ನೀಡಬೇಕು. ಸಾರಿಗೆ ಸಂಸ್ಥೆ ಮಲತಾಯಿ ಧೋರಣೆ ತೋರಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಬೇಸರಗೊಂಡ ಬಹುತೇಕ ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರು ಆಯುಧ ಪೂಜೆ ಮಾಡದೇ ನೋವಿನಲ್ಲೇ ಬಸ್ ಚಾಲನೆ ಮಾಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ನೋಡಿ ಎಚ್ಚೆತ್ತು, ದಸರಾ ಹಬ್ಬಕ್ಕೆ ಸಂಬಳ ಕೊಡಲು ಸಾಧ್ಯವಾಗದ ಕಾರಣಕ್ಕೆ ಚಾಲಕ, ನಿರ್ವಾಹಕರಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಿತ್ರದುರ್ಗದಲ್ಲಿ ಕ್ಷಮೆ ಯಾಚಿಸಿದ್ದರು.

    ಸದ್ಯ ಪಬ್ಲಿಕ್ ಟಿವಿಯ ಬಿಗ್ ಇಂಪ್ಯಾಕ್ಟ್ ನಿಂದ ಬಿಎಂಟಿಸಿ ಚಾಲಕ, ನಿರ್ವಹಕರ ಖಾತೆಗೆ ಸಂಬಳ ತಲುಪಿದೆ. ಸಂಬಳ ವಿಳಂಬ ಸಂಬಂಧ ಸಭೆ ಮುಗಿದ ಬಳಿಕ ಸಾರಿಗೆ ಸಚಿವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಪಬ್ಲಿಕ್ ಟಿವಿಯಲ್ಲಿ ಬಂದಿದ್ದ ವರದಿಯನ್ನ ನನ್ನ ಗಮನದಲ್ಲಿಟ್ಟುಕೊಂಡಿದ್ದೇನೆ. ವರದಿ ನೋಡಿದ ಕೂಡಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಎಲ್ಲಾ ಅಧಿಕಾರಿಗಳ ಜೊತೆ ಫೋನಿನಲ್ಲಿ ಮಾತಾಡಿ, ವಿಶೇಷ ಸಂದರ್ಭದಲ್ಲಿ ಬೇರೆ ಕೆಲಸ ಕಾರ್ಯಗಳನ್ನ ನಿಲ್ಲಿಸಿ ಸಂಬಳವನ್ನ ಕೊಡಿ ಎಂದು ಹೇಳಿದ್ದೆ. ಇಂದು ಚಾಲಕ ನಿರ್ವಾಹಕರಿಗೆ ಸಂಬಳ ಕೊಡಲಾಗಿದೆ ಎಂದು ತಿಳಿಸಿದರು.

    ಗುರುವಾರ ವಿಧಾನ ಮಂಡಲ ಅಧಿವೇಶನ ವಿಚಾರವಾಗಿ ಮಾತನಾಡಿ, ವಿರೋಧ ಪಕ್ಷದವರು ಏನು ಪ್ರಸ್ತಾಪ ಮಾಡುತ್ತಾರೋ, ಅದಕ್ಕೆ ಸರಿಯಾದ ಮಾಹಿತಿ ಕೊಡುತ್ತೇವೆ. ವಿರೋಧ ಪಕ್ಷದವರು ತಮ್ಮ ಧ್ವನಿ ಹೆಚ್ಚಾದ ಮೇಲೆ ಕೇಂದ್ರದ ನೆರೆ ಪರಿಹಾರ ಬಂತು ಹೇಳುತ್ತಿದ್ದಾರೆ. ಆದರೆ ಕೋಳಿ ಕೂಗಿದ ಮೇಲೆ ಸೂರ್ಯೋದಯ ಆಗಲ್ಲ, ಸೂರ್ಯ ತನ್ನ ಕ್ರಿಯೆ ತಾನು ಮಾಡುತ್ತೆ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ಕೊಟ್ಟರು.

    ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಮಾಹಿತಿಯಿಲ್ಲ. ಸಂಜೆ ಎಲ್ಲಾ ಸಚಿವರು ಸೇರುತ್ತಿದ್ದೇವೆ. ನಮ್ಮಲ್ಲಿ ಬಣಗಳು, ಭಿನ್ನಮತಗಳು ಇಲ್ಲ, ನಾವೆಲ್ಲ ಒಟ್ಟಿಗಿದ್ದೇವೆ. ನಾವು ಮಾಧ್ಯಮಗಳನ್ನ ದೂರು ಇಡುವುದು ಕಾಲ್ಪನಿಕ ಕಥೆಗಳು ಅಷ್ಟೇ. ಮಾಧ್ಯಮಗಳಿಗೆ ನಿರ್ಬಂಧ ಹೇರಬಾರದು ಎನ್ನುವುದು ನನ್ನ ಹಾಗೂ ನಮ್ಮ ಸರ್ಕಾರದ ನಿಲುವು ಎಂದು ಹೇಳಿದರು.