Tag: BMRCL

  • ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ ಖಚಿತ – ಬಿಜೆಪಿ ಕಾರ್ಯಕರ್ತರ ಸಮಾವೇಶ, ರೋಡ್ ಶೋಗೆ ಕೊಕ್

    ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ ಖಚಿತ – ಬಿಜೆಪಿ ಕಾರ್ಯಕರ್ತರ ಸಮಾವೇಶ, ರೋಡ್ ಶೋಗೆ ಕೊಕ್

    ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದ (Yellow Line) ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು (PM Modi) ಬೆಂಗಳೂರಿಗೆ (Bengaluru)ಬರುವುದು ಖಚಿತ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಆ.10ರಂದು ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲು ಬರುತ್ತಿದ್ದಾರೆ. ಪ್ರಧಾನಿಯವರು ಬರುವ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಸಂಬಂಧ ತಯಾರಿ ನಡೆಯುತ್ತಿರುವ ಬಗ್ಗೆ ಇಂದು ಪರಿಶೀಲನೆ ಮಾಡುತ್ತಿದ್ದೇನೆ. ಪ್ರಧಾನಿಯವರ ಬೇರೆ ಬೇರೆ ಕಾರ್ಯಕ್ರಮಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ದೊರೆತಿಲ್ಲ. ಬರುತ್ತೀವಿ ಎಂದು ಹೇಳಿದ್ದಾರಷ್ಟೇ. ಟೈಮ್ ಟು ಟೈಮ್ ಪ್ರೋಗ್ರಾಮ್ ಬಗ್ಗೆ ಇನ್ನೂ ಮಾಹಿತಿ ತಿಳಿಸಿಲ್ಲ ಎಂದರು.ಇದನ್ನೂ ಓದಿ: ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ವಾಪಸ್‌

    ಆಗಸ್ಟ್ 10ರ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಆಗಸ್ಟ್ 10ರಂದು ಪ್ರಧಾನಿಯವರು ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆ ಮತ್ತು ವಂದೇ ಭಾರತ್ ರೈಲು ಉದ್ಘಾಟನೆಯಷ್ಟೇ ಮಾಡಲಿದ್ದಾರೆ. ಉಳಿದಂತೆ ಜಯನಗರ ಶಾಲಿನಿ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಹಾಗೂ ರಾಗಿಗುಡ್ಡ ಟು ಜಯನಗರದವರೆಗೆ ರೋಡ್ ಶೋ ಇರುವುದಿಲ್ಲ. ಇವರೆಡೂ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಭಾಗವಹಿಸುವುದಿಲ್ಲ ಎಂದು ಹೇಳಿದರು.

    ಒಂದು ವರ್ಷದ ನಂತರ ಮೋದಿಯವರ ಆಗಮನದ ನಿರೀಕ್ಷೆಯಲ್ಲಿದ್ದ (BJP) ಬಿಜೆಪಿ, ಕಾರ್ಯಕರ್ತರ ಸಮಾವೇಶ ಹಾಗೂ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿತ್ತು. ಈ ಕಾರ್ಯಕ್ರಮಗಳು ರದ್ದಾದ ಹಿನ್ನೆಲೆ ಬಿಜೆಪಿ ನಾಯಕರಿಗೆ ನಿರಾಸೆಯಾಗಿದೆ.ಇದನ್ನೂ ಓದಿ: ನಿಜವಾದ ಭಾರತೀಯ ಯಾರೆಂದು ನಿರ್ಧರಿಸೋದು ಸುಪ್ರೀಂಕೋರ್ಟ್ ನ್ಯಾಯಾಧೀಶರ ವ್ಯಾಪ್ತಿಗೆ ಬರಲ್ಲ – ಪ್ರಿಯಾಂಕಾ ಗಾಂಧಿ

  • ನಮ್ಮ ಮೆಟ್ರೋದಲ್ಲಿ ಮೊದಲ ಬಾರಿ ಅಂಗಾಂಗ ಸಾಗಾಟ – ತುರ್ತು ಕಸಿಗಾಗಿ ಯಕೃತ್ ಸಾಗಣೆ

    ನಮ್ಮ ಮೆಟ್ರೋದಲ್ಲಿ ಮೊದಲ ಬಾರಿ ಅಂಗಾಂಗ ಸಾಗಾಟ – ತುರ್ತು ಕಸಿಗಾಗಿ ಯಕೃತ್ ಸಾಗಣೆ

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಮೊದಲ ಬಾರಿಗೆ ಅಂಗಾಂಗ ಸಾಗಣೆ ಮಾಡಲಾಗಿದೆ. ಶುಕ್ರವಾರ ರಾತ್ರಿ ತುರ್ತು ಕಸಿಗಾಗಿ ಆಸ್ಪತ್ರೆಗೆ ಯಕೃತ್ ಸಾಗಾಟ ಮಾಡಲಾಗಿದೆ.

    ಟ್ರಾಫಿಕ್ ಜಾಮ್‍ನಿಂದ ತಪ್ಪಿಸಿಕೊಳ್ಳಲು ಮೆಟ್ರೋ ದಲ್ಲಿ ಯಕೃತ್ ಸಾಗಿಸಲಾಗಿದೆ. ವೈಟ್ ಫೀಲ್ಡ್ ನಿಲ್ದಾಣದಿಂದ ಆರ್‌ಆರ್‌ ನಗರಕ್ಕೆ ಸಾಗಾಟ ಮಾಡಲಾಗಿದೆ. ಇದನ್ನೂ ಓದಿ: ನಮ್ಮ ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆ ತೆರೆಯಲು ದಿನಾಂಕ ಫಿಕ್ಸ್‌

    ಆರ್‌ಆರ್‌ ನಗರ (RR Nagar) ಮೆಟ್ರೋ ನಿಲ್ದಾಣದಿಂದ ಆಂಬುಲೆನ್ಸ್ ಮೂಲಕ ಸ್ಪರ್ಶ ಆಸ್ಪತ್ರೆಗೆ ಯಕೃತ್‍ನ್ನು ಕೊಂಡೊಯ್ಯಲಾಗಿದೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಆಗಸ್ಟ್‌ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆ ಸಾಧ್ಯತೆ

     

  • ನಮ್ಮ ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆ ತೆರೆಯಲು ದಿನಾಂಕ ಫಿಕ್ಸ್‌

    ನಮ್ಮ ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆ ತೆರೆಯಲು ದಿನಾಂಕ ಫಿಕ್ಸ್‌

    ಬೆಂಗಳೂರು: ನಮ್ಮ ಮೆಟ್ರೋಗಳಲ್ಲಿ (Namma Metro) ನಂದಿನಿ ಮಳಿಗೆ (Nandini Shop) ಓಪನ್‌ಗೆ ದಿನಾಂಕ ನಿಗದಿ ಆಗಿದೆ. ಪ್ರಾರಂಭಿಕವಾಗಿ ಮೂರು ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆಗಳು ನಿರ್ಮಾಣ ಆಗಿದೆ. ಈ ತಿಂಗಳ ಅಂತ್ಯದಲ್ಲಿ ನಮ್ಮ ಮೆಟ್ರೋಗಳಲ್ಲಿ ನಂದಿನಿ ಮಳಿಗೆಗಳು ಓಪನ್ ಆಗಲಿವೆ. ಕೆಎಂಎಫ್, ಬಿಎಂಆರ್‌ಸಿಎಲ್‌ ಮಳಿಗೆಗಳ ಓಪನ್‌ಗೆ ಸಿದ್ಧತೆ ಮಾಡಿವೆ.

    ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳ ಓಪನ್‌ಗೆ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವಕಾಶ ನೀಡಿದ್ದರು. 10 ಮೆಟ್ರೋ ನಿಲ್ದಾಣಗಳಲ್ಲಿ ಓಪನ್ ಮಾಡ್ತೇವೆ ಎಂದಿದ್ದರು. ಈಗ ಪ್ರಾರಂಭಿಕವಾಗಿ 3 ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆಗಳ ನಿರ್ಮಾಣ ಸಿದ್ಧವಾಗಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ, ಸೆಂಟ್ರಲ್ ಕಾಲೇಜ್ ಮೆಟ್ರೋ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ನಿರ್ಮಾಣ ಆಗಿದೆ. ಇದನ್ನೂ ಓದಿ: ಸಚಿವ ಬೈರತಿ ಸುರೇಶ್ ಪಿಎಸ್ ಮನೆ ಮೇಲೆ ʻಲೋಕಾʼ ದಾಳಿ – ಭಾರೀ ಪ್ರಮಾಣದ ಆಸ್ತಿ ದಾಖಲೆ ವಶಕ್ಕೆ

    ಇನ್ನೂ ಈ ತಿಂಗಳ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನಂದಿನಿ ಮಳಿಗೆಯು ಸಾರ್ವಜನಿಕರ ಸೇವೆಗೆ ಸಿಗಲಿದೆ. ಈ ಬಗ್ಗೆ ಕೆಎಂಎಫ್ ಎಂಡಿ ಶಿವಸ್ವಾಮಿ ಈಗಾಗಲೇ 3 ಮೆಟ್ರೋ ನಿಲ್ದಾಣಗಳಲ್ಲಿ ಸೇವೆಗೆ ಸಿದ್ಧವಾಗ್ತಿವೆ. ಮುಂದಿನ ವಾರದಲ್ಲಿ ಉದ್ಘಾಟನೆ ಮಾಡೋದಕ್ಕೆ ಪ್ಲ್ಯಾನ್ ಮಾಡುತ್ತಿದ್ದೇವೆ. ಎಲ್ಲಾ ರೀತಿಯ ನಂದಿನಿ ಉತ್ಪನ್ನಗಳು ಇಲ್ಲಿ ಸಿಗಲಿವೆ. 3 ಮೆಟ್ರೋ ಸ್ಟೇಷನ್‌ಗಳನ್ನ ಹೊರತುಪಡಿಸಿ ಉಳಿದ ಕಡೆಗಳಲ್ಲೂ ಮಳಿಗೆ ತೆರೆಯಲು ಪ್ಲ್ಯಾನ್ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಮುಂದಿನ ಉಪರಾಷ್ಟ್ರಪತಿ ಆಯ್ಕೆ – ಮೋದಿ ವಿದೇಶಿ ಪ್ರವಾಸದ ಬಳಿಕ ಅಂತಿಮ ನಿರ್ಧಾರ

    ಒಟ್ಟಾರೆ ನಮ್ಮ‌ ಮೆಟ್ರೋ ನಿಲ್ದಾಣದಲ್ಲಿ ಈ ತಿಂಗಳ ಅಂತ್ಯಕ್ಕೆ ನಂದಿನಿ ಮಳಿಗೆಗಳ ಓಪನ್ ಆಗ್ತಿದ್ದು, ಉಳಿದ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ಯಾವಾಗಿನಿಂದ ಓಪನ್ ಆಗಲಿವೆ. ಬೇರೆ ಬ್ರ್ಯಾಂಡ್‌ಗಳಿಗೆ ಮಣೆ ಹಾಕದೇ ನಂದಿನಿಗೆ ಹೆಚ್ಚು ಉತ್ತೇಜನ ನೀಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಆಗಸ್ಟ್‌ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆ ಸಾಧ್ಯತೆ

    ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಆಗಸ್ಟ್‌ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆ ಸಾಧ್ಯತೆ

    ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ನಮ್ಮ ಮೆಟ್ರೋ (Namma Metro) ಗುಡ್ ನ್ಯೂಸ್ ಕೊಟ್ಟಿದ್ದು, ಆಗಸ್ಟ್‌ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆಯಾಗುವ ಸಾಧ್ಯತೆಯಿದೆ.ಇದನ್ನೂ ಓದಿ: ಹಾವೇರಿ | ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – ಐವರಿಗೆ ಗಾಯ

    ಲಕ್ಷಾಂತರ ಜನ ಐಟಿ-ಬಿಟಿ ಉದ್ಯೋಗಿಗಳ ಕನಸಿನ ಯೋಜನೆಯಾದ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆಗೆ ಕಾಲ ಸಮೀಪಿಸುತ್ತಿದೆ. ಮಂಗಳವಾರ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡದಿಂದ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮೆಟ್ರೋ ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದು, ಜು.25ರವರೆಗೆ ಪರಿಶೀಲನೆ ಮುಂದುವರಿಯಲಿದೆ.

    ಹೀಗಾಗಿ ಆಗಸ್ಟ್ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ನ್ಯಾ.ವರ್ಮಾ ವಾಗ್ದಂಡನೆ ಪ್ರಕ್ರಿಯೆಗೆ 200 ಹೆಚ್ಚು ಸಂಸದರ ಸಹಿ – ವಜಾ ಹೇಗೆ ಮಾಡಲಾಗುತ್ತೆ?

  • ನೆಟ್‌ವರ್ಕ್ ಸಮಸ್ಯೆ ನಿವಾರಣೆ – ಇನ್ಮುಂದೆ ಮೆಟ್ರೋ ಮಾರ್ಗಗಳಲ್ಲಿ ವೈಫೈ

    ನೆಟ್‌ವರ್ಕ್ ಸಮಸ್ಯೆ ನಿವಾರಣೆ – ಇನ್ಮುಂದೆ ಮೆಟ್ರೋ ಮಾರ್ಗಗಳಲ್ಲಿ ವೈಫೈ

    ಬೆಂಗಳೂರು: ನಮ್ಮ ಮೆಟ್ರೋದ (Namma Metro) ಸುರಂಗ ಮಾರ್ಗಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ವೈಫೈ ಅಳವಡಿಸಲು ಬಿಎಂಆರ್‌ಸಿಎಲ್ (BMRCL) ಮುಂದಾಗಿದೆ.

    ಮೆಟ್ರೋ ಮಾರ್ಗಗಳಲ್ಲಿ ಉಂಟಾಗುವ ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ಬಿಎಂಆರ್‌ಸಿಎಲ್, ಮೆಟ್ರೋ ನಿಲ್ದಾಣಗಳಲ್ಲಿ ಐಬಿಎಸ್, ಬಿಟಿಎಸ್ ಸೆಲ್ಯುಲಾರ್ ಟವರ್ ಮತ್ತು ಪೋಲ್‌ಗಳನ್ನು ಇಟ್ಟು ವೈಫೈ ಮೂಲಕ ಗ್ರಾಹಕರಿಗೆ 4G, 5G ಸೇವೆ ಒದಗಿಸಲು ಮುಂದಾಗಿದೆ.ಇದನ್ನೂ ಓದಿ: 40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ಮಂದಿಗೆ ನೋಟಿಸ್‌: ವಾಣಿಜ್ಯ ತೆರಿಗೆ ಇಲಾಖೆ

    ನಮ್ಮ ಮೆಟ್ರೋ ಎರಡನೇ ಹಂತದ ಸುರಂಗ ಹಾಗೂ ಎತ್ತರಿಸಿದ ಮಾರ್ಗದಲ್ಲಿ ನಿರಂತರ ಮತ್ತು ಸುಗಮ ಮೊಬೈಲ್ ಸಂಪರ್ಕ ಒದಗಿಸಲು ಅಡ್ವಾನ್‌ಸ್ಡ್ ಕಮ್ಯೂನಿಕೇಶನ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಕಂಪನಿ ಸಂಸ್ಥೆಯೊಂದಿಗೆ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ಮೆಟ್ರೋ ಮಾರ್ಗದ ಅಲ್ಲಲ್ಲಿ ಪ್ರಯಾಣಿಕರಿಗೆ ಉಂಟಾಗುತ್ತಿರುವ ನೆಟ್‌ವರ್ಕ್ ಸಮಸ್ಯೆ ತಪ್ಪಲಿದೆ. ವಿಶೇಷವಾಗಿ ಭೂಗತ ಮಾರ್ಗವಿರುವ ಡೈರಿ ವೃತ್ತದಿಂದ ನಾಗವಾರದವರೆಗೆ 12 ನಿಲ್ದಾಣಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

    ಪ್ರಯಾಣ ದರದ ಹೊರತಾಗಿ ನಿಗಮಕ್ಕೆ ಆದಾಯ (ವೈ-ಫೈಗೆ ವಿಧಿಸುವ ಶುಲ್ಕದ ರೂಪದಲ್ಲಿ) ಕೂಡ ಬರಲಿದೆ. ಇದು 13 ವರ್ಷಗಳ ಪರವಾನಗಿ ಅವಧಿಯ ಒಪ್ಪಂದವಾಗಿದೆ. ಈ ವೇಳೆ ಬಿಎಂಆರ್‌ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಸಿಸ್ಟಮ್ಸ್) ಎ.ಎಸ್. ಶಂಕರ್ ಎಸಿಇಎಸ್‌ಇ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಎನ್. ಮಝರ್ ಸಹಿಹಾಕಿದರು. ಬಿಎಂಆರ್‌ಸಿಎಲ್ ನಿರ್ದೇಶಕ ಸುಮಿತ್ ಭಟ್ನಾಗರ್ ಹಾಗೂ ಎಸಿಇಎಸ್ ಸಿಇಒ ಡಾ.ಅಕ್ರಮ್ ಅಬುರಾಸ್ ಹಾಗೂ ಅಧಿಕಾರಿಗಳು ಇದ್ದರು.ಇದನ್ನೂ ಓದಿ: ಭಾರೀ ಮಳೆಗೆ ಭೂಕುಸಿತ, ಓರ್ವ ಮಹಿಳೆ ಸಾವು – ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

  • ಮೆಟ್ರೋ ದರ ಏರಿಕೆ| ನೀವಿಷ್ಟು ಪ್ರಬಲರಾಗಿದ್ದರೂ ನಿಮಗೆ ವರದಿ ಸಿಗುತ್ತಿಲ್ಲವೇ? – ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ನೋಟಿಸ್‌ ಜಾರಿ

    ಮೆಟ್ರೋ ದರ ಏರಿಕೆ| ನೀವಿಷ್ಟು ಪ್ರಬಲರಾಗಿದ್ದರೂ ನಿಮಗೆ ವರದಿ ಸಿಗುತ್ತಿಲ್ಲವೇ? – ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ನೋಟಿಸ್‌ ಜಾರಿ

    – 2 ವಾರಗಳಲ್ಲಿ ಉತ್ತರಿಸುವಂತೆ ಸೂಚನೆ
    – ಕರ್ನಾಟಕ ಸರ್ಕಾರ ವರದಿಯನ್ನು ರಹಸ್ಯವಾಗಿ ಇಡೋದು ಯಾಕೆ – ತೇಜಸ್ವಿ ಪ್ರಶ್ನೆ

    ಬೆಂಗಳೂರು: ನಮ್ಮ ಮೆಟ್ರೋ ದರ (Namma Metro Fare) ನಿಗದಿ ಸಂಬಂಧ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ (BMRCL) ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿ 2 ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ.

    ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಶುಲ್ಕ ನಿಗದಿ ಸಮಿತಿ (FFC) ವರದಿಯನ್ನು ಬಹಿರಂಗ ಪಡಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು ನ್ಯಾ.ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠದಲ್ಲಿ ನಡೆಯಿತು.

    ವಿಚಾರಣೆ ವೇಳೆ, ನೀವಿಷ್ಟು ಪ್ರಬಲರಾಗಿದ್ದೂ ನಿಮಗೆ ವರದಿ ಸಿಗುತ್ತಿಲ್ಲವೇ ಎಂದು ನ್ಯಾಯಮೂರ್ತಿಗಳು ತೇಜಸ್ವಿ ಸೂರ್ಯ ಪರ ವಕೀಲರಿಗೆ ಪ್ರಶ್ನಿಸಿದರು.  ಇದನ್ನೂ ಓದಿ: ಕೋವಿಡ್ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ: ದಿನೇಶ್ಗುಂಡೂರಾವ್ಸ್ಪಷ್ಟನೆ

    ಡಿಸೆಂಬರ್ ತಿಂಗಳಲ್ಲೇ ದರ ನಿಗದಿ ಸಮಿತಿ ವರದಿ ನೀಡಿದ್ದರೂ ಬಿಎಂಆರ್‌ಸಿಎಲ್‌ ವರದಿ ನೀಡುತ್ತಿಲ್ಲ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರೂ ಸಮಿತಿ ವರದಿ ಬಹಿರಂಗಪಡಿಸಿಲ್ಲ ಎಂದು ವಕೀಲರು ಉತ್ತರಿಸಿದರು. ಕೊನೆಗೆ ಬಿಎಂಆರ್‌ಸಿಎಲ್‌ಗೆ ನೋಟಿಸ್‌ ಜಾರಿ ಮಾಡಿದ ಕೋರ್ಟ್‌ ಅರ್ಜಿ ವಿಚಾರಣೆಯನ್ನು 2 ವಾರ ಮುಂದೂಡಿಕೆ ಮಾಡಿತು.

    ಅರ್ಜಿಯಲ್ಲಿ ಏನಿತ್ತು?
    ದರ ನಿಗದಿ ಸಮಿತಿಯ ತಜ್ಞರು ವಿದೇಶಿ ಪ್ರವಾಸವನ್ನು ಕೈಗೊಂಡು ಅಲ್ಲಿನ ಮೆಟ್ರೋ ದರವನ್ನು ಪರಿಶೀಲಿಸಿದ ಬಳಿಕ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು. ಈ ವರದಿಯ ನಂತರ ಬಿಎಂಆರ್‌ಸಿಎಲ್ 130% ರವರೆಗೆ ಮೆಟ್ರೋ ರೈಲು ಟಿಕೆಟ್ ದರವನ್ನು ಏರಿಕೆ ಮಾಡಿದೆ.

    ದರ ಏರಿಕೆ ಬಳಿಕ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಕುಸಿದಿದೆ. ದರ ನಿಗದಿ ಸಮಿತಿ ವರದಿಯನ್ನು ನೀಡುವಂತೆ ಬಿಎಂಆರ್‌ಸಿಎಲ್‌ ಅನ್ನು ಕೇಳಿದ್ದರೂ ನೀಡಿಲ್ಲ. ಅಂತಿಮವಾಗಿ ಮಾಹಿತಿ ಹಕ್ಕು ಕಾಯ್ದೆಯ (RTI Act) ಅಡಿ ಪ್ರಶ್ನಿಸಿದ್ದರೂ ಉತ್ತರ ನೀಡಿಲ್ಲ. ಹೀಗಾಗಿ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗ ಪಡಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಒಂದೂವರೆ ತಿಂಗಳ ಗಂಡು ಮಗುವನ್ನು ನೀರಿನ ಹಂಡೆಯಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ

     

    ತೇಜಸ್ವಿ ಕಿಡಿ:
    ಶುಲ್ಕ ನಿಗದಿ ಸಮಿತಿ (FFC) ವರದಿಯನ್ನು ಬಿಎಂಆರ್‌ಸಿಎಲ್ ಮತ್ತು ಕರ್ನಾಟಕ ಸರ್ಕಾರ ರಹಸ್ಯವಾಗಿಡುವುದು ಆಕ್ರೋಶದ ಸಂಗತಿ. ಬೆಂಗಳೂರು ಮೆಟ್ರೋ ಈಗ ಭಾರತದಲ್ಲಿ ಅತ್ಯಂತ ದುಬಾರಿಯಾಗಿದ್ದು ಅನೇಕ ಮಧ್ಯಮ ವರ್ಗದ ಪ್ರಯಾಣಿಕರಿಗೆ ಇದು ಕೈಗೆಟುಕುವಂತಿಲ್ಲ.

    ದೆಹಲಿ ಸೇರಿದಂತೆ ದೇಶದ ಇತರ ಪ್ರತಿಯೊಂದು ಮೆಟ್ರೋ ವ್ಯವಸ್ಥೆಯು ತನ್ನ ಶುಲ್ಕ ನಿಗದಿ ಸಮಿತಿಯ ವರದಿಗಳನ್ನು ಸಾರ್ವಜನಿಕಗೊಳಿಸಿರುವಾಗ ಬಿಎಂಆರ್‌ಸಿಎಲ್‌ ಯಾಕೆ ಈ ವರದಿಯನ್ನು ಬಹಿರಂಗ ಪಡಿಸುತ್ತಿಲ್ಲ. ಸರ್ಕಾರ ಏನನ್ನು ಮರೆಮಾಡಲು ಪ್ರಯತ್ನಿಸುತ್ತಿದೆ?

    ಮೂರು ತಿಂಗಳಿನಿಂದ ಪದೇ ಪದೇ ಮನವಿ ಮಾಡಲಾಗಿತ್ತು. ನಂತರ ಆರ್‌ಟಿಐ ಅರ್ಜಿಗಳ ಹೊರತಾಗಿಯೂ ವರದಿಯನ್ನು ರಹಸ್ಯವಾಗಿಡಲಾಗಿದೆ. ಇಲ್ಲಿ ಯಾವುದೇ ರಾಷ್ಟ್ರೀಯ ಭದ್ರತಾ ಕಾಳಜಿ ಇಲ್ಲ. ಹಾಗಾದರೆ ಇಷ್ಟೊಂದು ಗೌಪ್ಯತೆ ಏಕೆ? ಸಿಎಂ ಸಿದ್ದರಾಮಯ್ಯನವರು ಈ ವರದಿಯನ್ನು ಬಿಡುಗಡೆ ಮಾಡಲು ನಿರಾಕರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

  • ಬೆಂಗಳೂರಿಗರಿಗೆ ಗುಡ್ ನ್ಯೂಸ್ – ಹಳದಿ ಮಾರ್ಗಕ್ಕೆ ಆ.15 ರೊಳಗೆ ಚಾಲನೆ

    ಬೆಂಗಳೂರಿಗರಿಗೆ ಗುಡ್ ನ್ಯೂಸ್ – ಹಳದಿ ಮಾರ್ಗಕ್ಕೆ ಆ.15 ರೊಳಗೆ ಚಾಲನೆ

    ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದೆ. ಆಗಸ್ಟ್ 15ರ ಒಳಗೆ ಹಳದಿ ಮಾರ್ಗಕ್ಕೆ (Yellow Line) ಚಾಲನೆ ನೀಡಲಾಗುವುದು ಎಂದು ಬಿಎಂಆರ್‌ಸಿಎಲ್ (BMRCL) ಎಂಡಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.

    ಯೆಲ್ಲೊ ಲೈನ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ನಮಗೆ ಎರಡು ಮನವಿ ಬಂದಿದೆ. ಯೆಲ್ಲೋ ಲೈನ್ ಆರಂಭ ಮಾಡೋಕೆ ಈಗಾಗಲೇ ಮೂರು ಕೋಚ್ ಬಂದಿದೆ. ಎಲ್ಲಾ ರೆಗ್ಯುಲಾರಿಟೀಸ್ ಒಂದು ತಿಂಗಳ ಒಳಗೆ ಆಗಬಹುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರು | ಹಿಂದೂ ಮುಖಂಡನ ಮೊಬೈಲ್‍ನಲ್ಲಿ ಕರಾವಳಿ ರಾಜಕಾರಣಿಯ 50 ಅಶ್ಲೀಲ ವಿಡಿಯೋ!

    ಸೇಫ್ಟಿ ಟೆಸ್ಟ್ ಏಜೆನ್ಸಿ ಇದೆ. ಅವರು ಎಲ್ಲಾ ಚೆಕ್ ಮಾಡ್ತಾರೆ. ಮುಂದಿನ ವಾರದ ಒಳಗೆ ಸೇಫ್ಟಿ ಅಸೆಸ್ಮೆಂಟ್ ಟೆಸ್ಟ್ ಮುಗಿಯಬಹುದು. 17 ಕಿ.ಮೀನಲ್ಲಿ 17 ಸ್ಟೇಷನ್ ಇದೆ. ನಾವು ಸರ್ಕಾರದ ಮುಂದೆ ಹೋಗ್ತೇವೆ. ಎಲ್ಲಾ ಮಾಡೋದ ಅಥವಾ ಮೂರ್ನಾಲ್ಕು ಸ್ಟೇಷನ್‌ನಲ್ಲಿ ಮಾತ್ರ ಓಡ್ಸೋದಾ ನೋಡ್ತೀವಿ ಎಂದು ಹೇಳಿದ್ದಾರೆ.

    ನಾವು ಆಗಸ್ಟ್ ತಿಂಗಳಲ್ಲಿ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಚಾಲನೆ ಕೊಡ್ತೀವಿ. ಜಯನಗರದಲ್ಲಿ ಅಂಡರ್ ಪಾಸ್‌ಗೆ ಮನವಿ ಕೊಟ್ಟಿದ್ದಾರೆ. ಸರ್ಕಾರ ಫಂಡಿಂಗ್ ಕೊಡುತ್ತಾ ಅಥವಾ ಇಲ್ಲವಾ ಅನ್ನುವ ಬಗ್ಗೆ ನೋಡ್ಬೇಕು ಎಂದಿದ್ದಾರೆ. ಇದನ್ನೂ ಓದಿ: ಕಾಟಾಚಾರದ ಸರ್ವೇಗೆ 3.6 ಕೋಟಿ ವೆಚ್ಚ – ಬೇಕರಿ, ಅಂಗಡಿಗಳಿಗೂ ಜಾತಿ ಸಮೀಕ್ಷೆ ಸ್ಟಿಕ್ಕರ್!

    ಹಳದಿ ಲೈನ್ ಮೆಟ್ರೋ ವಿಳಂಬದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬಿಎಂಆರ್‌ಸಿಎಲ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ನಾಗರಿಕರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ವ್ಯಾಪಕ ಟೀಕೆ ಬೆನ್ನಲ್ಲೇ ಬಿಎಂಆರ್‌ಸಿಎಲ್ ಎಂಡಿ ಪ್ರತಿಕ್ರಿಯೆ ನೀಡಿದ್ದಾರೆ.

  • ಮೆಟ್ರೋ ದರ ಏರಿಕೆಯಿಂದ BMTCಗೆ ಬಂಪರ್ – ಆದಾಯ 7.25 ಕೋಟಿಗೆ ಏರಿಕೆ

    ಮೆಟ್ರೋ ದರ ಏರಿಕೆಯಿಂದ BMTCಗೆ ಬಂಪರ್ – ಆದಾಯ 7.25 ಕೋಟಿಗೆ ಏರಿಕೆ

    -ಪ್ರತಿನಿತ್ಯ 2 ಲಕ್ಷ ಪ್ರಯಾಣಿಕರ ಹೆಚ್ಚಳ, 35 ಲಕ್ಷ ರೂ. ಹೆಚ್ಚುವರಿ ಆದಾಯ

    ಬೆಂಗಳೂರು: ಬಿಎಂಆರ್‌ಸಿಎಲ್ (BMRCL) ದರ ಏರಿಕೆ ಮಾಡಿದ್ದು, ನಮ್ಮ ಮೆಟ್ರೋಗೆ (Namma Matro) ಅನೂಕೂಲವಾಗುವುದಕ್ಕಿಂತ ಹೆಚ್ಚಾಗಿ ಬಿಎಂಟಿಸಿಗೆ (BMTC) ಭಾರಿ ಉಪಯೋಗ ಆಗಿದೆ. ಈ ಮೂಲಕ ಆದಾಯ 7.25 ಕೋಟಿ ರೂ.ಗೆ ಏರಿಕೆಯಾಗಿದೆ.

    ಹೌದು, ಮೆಟ್ರೋ, ಬಿಎಂಟಿಸಿ ಎರಡು ಕೂಡ ಬೆಂಗಳೂರಿನ (Bengaluru) ಸಂಚಾರ ಜೀವನಾಡಿ. ನಿತ್ಯ ನಗರದ ಲಕ್ಷಾಂತರ ಜನ ಬಳಕೆ ಮಾಡುವ ಸಾರಿಗೆ ಸಂಪರ್ಕ. ದಿನನಿತ್ಯ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು ಈ ಎರಡು ಸಾರಿಗೆಗಳನ್ನು ಬಳಕೆ ಮಾಡುತ್ತಾರೆ. ಆದರೆ ಈ ಸಾರಿಗೆ ನಡುವೆ ನಗರದ ಹಲವು ಕಡೆ ಸಾಮಾನ್ಯವಾಗಿ ಪೈಪೋಟಿ ಇದೆ. ಆದರೆ ಕಳೆದ ನಾಲ್ಕೈದು ತಿಂಗಳ ಹಿಂದೆ ನಮ್ಮ ಮೆಟ್ರೋ ಟಿಕೆಟ್ ದರ (Metro Ticket Fare) ಏರಿಕೆ ಮಾಡಿತ್ತು. ಇದ್ರಿಂದ ಕೊಂಚ ಹಿನ್ನಡೆ ಉಂಟಾಗಿದ್ದು, ಬಿಎಂಟಿಸಿಗೆ ಭಾರಿ ಲಾಭ ಬಂದಿದೆ.ಇದನ್ನೂ ಓದಿ: ನಂದಿಬೆಟ್ಟದಲ್ಲಿಂದು ಸಚಿವ ಸಂಪುಟ ಸಭೆ – ಬಯಲು ಸೀಮೆ ಜಿಲ್ಲೆಗಳಿಗೆ ಸಿಗುತ್ತಾ ಭರಪೂರ ಕೊಡುಗೆ?

    ಕಳೆದ ಫೆಬ್ರವರಿಯಲ್ಲಿ ದರ ಪರಿಷ್ಕರಣೆಯಾಗಿ ಮೆಟ್ರೋ ದರ ಹೆಚ್ಚಳವಾಗಿತ್ತು. ಇದರಿಂದ ಬಿಎಂಆರ್‌ಸಿಎಲ್‌ಗೆ ಆದಾಯ ಹೆಚ್ಚಳವಾಗಿದ್ದರೂ ಕೂಡ ರೈಡರ್ ಶಿಪ್‌ನಲ್ಲಿ ಇಳಿಮುಖ ಉಂಟಾಗಿದೆ. ಹೀಗಾಗಿ ಮೆಟ್ರೋ ಬಿಟ್ಟ ಪ್ರಯಾಣಿಕರು ಬಿಎಂಟಿಸಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಜೊತೆಗೆ ಕನೆಕ್ಟಿವಿಟಿ ವಿಚಾರದಲ್ಲಿ ಕೂಡ ಬಿಎಂಟಿಸಿ ಮುಂದೆ ಇದ್ದ ಕಾರಣ ಅನೇಕರು ಮತ್ತೆ ಬಿಎಂಟಿಸಿಯತ್ತ ಮುಖ ಮಾಡಿದ್ದರು. ಪರಿಣಾಮ ನಿತ್ಯ ಸಂಚಾರ ಮಾಡುತ್ತಿದ್ದ ಪ್ರಯಾಣಿಕರಿಗಿಂತ ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಎಂಟಿಸಿಗೆ ನಿತ್ಯ 2 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

    ಇನ್ನೂ ಈ ಹಿಂದೆ ನಿತ್ಯ ಬಿಎಂಟಿಸಿಯಲ್ಲಿ ಸರಾಸರಿ 40 ಲಕ್ಷ ಪ್ರಯಾಣಿಕರ ಓಡಾಟ ಇತ್ತು. ನಿತ್ಯದ ಆದಾಯ 6.90 ಕೋಟಿ ರೂ. ಇತ್ತು. ಆದರೆ ಮೆಟ್ರೋ ದರ ಏರಿಕೆ ಬಳಿಕ ನಿತ್ಯ ಸರಾಸರಿ 42 ಲಕ್ಷ ಪ್ರಯಾಣಿಕರು ಹಾಗೂ ಆದಾಯದಲ್ಲಿ 7.25 ಕೋಟಿ ರೂ.ಗೆ ಏರಿಕೆ ಆಗಿದೆ. ಅಷ್ಟೇ ಅಲ್ಲ ಈ ಹಿಂದೆ ನಿತ್ಯ ನಗರದಲ್ಲಿ 6,900 ಬಸ್‌ಗಳಿಂದ 54 ಸಾವಿರ ಟ್ರಿಪ್ ಮಾಡಲಾಗುತ್ತಿತ್ತು. ಸದ್ಯ ಹೆಚ್ಚುವರಿ 2 ಸಾವಿರ ಡಿಪೋದಲ್ಲಿದ್ದ ಬಸ್‌ಗಳನ್ನ ಕೂಡ ರಸ್ತೆಗಿಳಿಸುವ ಮೂಲಕ 54 ಸಾವಿರ ಇದ್ದ ಟ್ರಿಪ್‌ಗಳನ್ನ 8 ಸಾವಿರ ಹೆಚ್ಚಳ ಮಾಡಿ, 62 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾದ ಕಾರಣ ಸದ್ಯ ಬಿಎಂಟಿಸಿ ಈ ನಿರ್ಧಾರಕ್ಕೆ ಬಂದಿದ್ದು, ಇದು ಮತ್ತಷ್ಟು ಲಾಭ ಹೆಚ್ಚಳಕ್ಕೂ ಕಾರಣವಾಗಿದೆ.

    ಒಟ್ಟಾರೆ ಬಿಎಂಟಿಸಿ ಮೆಟ್ರೋ ದರ ಏರಿಕೆಯ ಲಾಭ ಪಡೆದು ಆದಾಯವನ್ನು ಹೆಚ್ಚಳ ಮಾಡಿಕೊಂಡಿದೆ. ಮೆಟ್ರೋದ ಉಳಿದ ಮಾರ್ಗಗಳು ಓಪನ್ ಆದ ಬಳಿಕವೂ ಹೀಗೆ ಪರಿಸ್ಥಿತಿ ಮುಂದುವರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ: ಮಂಗಳೂರಿನ ಸಹಕಾರಿ ಬ್ಯಾಂಕ್‌ನಲ್ಲಿ `ಗೋಲ್ಡ್’ ಗೋಲ್‌ಮಾಲ್ – ಗ್ರಾಹಕರು ಅಡವಿಟ್ಟ ಚಿನ್ನವನ್ನೇ ಎಗರಿಸಿದ ಕ್ಯಾಷಿಯರ್

  • KMF ನಿರ್ಲಕ್ಷ್ಯದಿಂದ ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆ ಹಾಕಲು ಅವಕಾಶ ಸಿಕ್ಕಿಲ್ಲ – ಭೀಮಾ ನಾಯಕ್

    KMF ನಿರ್ಲಕ್ಷ್ಯದಿಂದ ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆ ಹಾಕಲು ಅವಕಾಶ ಸಿಕ್ಕಿಲ್ಲ – ಭೀಮಾ ನಾಯಕ್

    ಬೆಂಗಳೂರು: ಕೆಎಂಎಫ್ (KMF) ನಿರ್ಲಕ್ಷ್ಯದಿಂದಾಗಿ ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆ ಹಾಕಲು ಸಾಧ್ಯವಾಗಿಲ್ಲ ಎಂದು ಮಾಜಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ (Bhima Naik) ಆರೋಪಿಸಿದ್ದಾರೆ.

    ನಮ್ಮ ಮೆಟ್ರೋದಲ್ಲಿ ನಂದಿನಿ (Nandini) ಮಳಿಗೆಗೆ ಅವಕಾಶ ಕೊಡದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಕೆಎಂಎಫ್ ಕಡೆಯಿಂದ ನಿರ್ಲಕ್ಷ್ಯ ಆಗಿರಬಹುದು. ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಈಗ ನಂದಿನಿಗೆ ಅವಕಾಶ ಕೊಡಲಾಗುತ್ತದೆ ಎಂದು ಮಾತುಕತೆ ನಡೆಯುತ್ತಿದೆ. ಮುಂದೆ ಏನಾಗುತ್ತದೆ ಎಂದು ಕಾದುನೋಡಬೇಕು ಎಂದಿದ್ದಾರೆ.ಇದನ್ನೂ ಓದಿ: ಗೃಹ ಲಕ್ಷ್ಮಿ ಹಣ ಮೇ ತಿಂಗಳದ್ದು ಮಾತ್ರ ಬಾಕಿಯಿದೆ: ಹೆಬ್ಬಾಳ್ಕರ್

    ಕೆಎಂಎಫ್ ಟೆಂಡರ್‌ನಲ್ಲಿ ಭಾಗಿಯಾಗಬೇಕಿತ್ತು. ಆದರೆ ಯಾಕೆ ಭಾಗಿಯಾಗಿಲ್ಲ ಎಂದು ಗೊತ್ತಿಲ್ಲ. ಟೆಂಡರ್‌ನಲ್ಲಿ ಭಾಗಿಯಾಗದೇ ಇರುವುದು ತಪ್ಪು. ನಮ್ಮ ಲೋಪ ಇದೆ. ಮೊದಲೇ ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತಾಡಬೇಕಿತ್ತು. ಮಾಹಿತಿ ಕೊರತೆಯಿಂದಾಗಿ ಹೀಗೆ ಆಗಿರಬಹುದು ಎಂದು ತಿಳಿಸಿದ್ದಾರೆ.

    ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಮ್ಮ ನಂದಿನಿಗೆ ಮನ್ನಣೆ ಕೊಡದೇ ಹೊರರಾಜ್ಯದ ಅಮುಲ್‌ಗೆ ಆದ್ಯತೆ ಕೊಟ್ಟು ಕಿಯೋಸ್ಕ್‌ಗಳನ್ನು ಸ್ಥಾಪಿಸಿದ್ದು ಕನ್ನಡಿಗರ ಆಕ್ರೋಶ ಕಾರಣವಾಗಿತ್ತು. ಗುಜರಾತ್ (Gujarat) ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಅಥವಾ ಅಮುಲ್ ಜೊತೆ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಪರವಾನಗಿ ಒಪ್ಪಂದಕ್ಕೆ ಬಿಎಂಆರ್‌ಸಿಎಲ್ (BMRCL) ಸಹಿ ಹಾಕಿದೆ. ಈ ಮೂಲಕ ನಮ್ಮ ರಾಜ್ಯದ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್‌ನ ಅಮುಲ್ ಬ್ರ‍್ಯಾಂಡ್ ಅನ್ನು ಪ್ರಮೋಷನ್ ಮಾಡಲಾಗುತ್ತಿದೆ. ಇದರಿಂದ ನಮ್ಮೂರ ನಂದಿನಿಗೆ ಬಿಎಂಆರ್‌ಸಿಎಲ್ ಅವಕಾಶ ಕೊಡದೇ ಇರೋದಕ್ಕೆ ಕನ್ನಡಿಗರು ಕೆಂಡವಾಗಿದ್ದರು.ಇದನ್ನೂ ಓದಿ: ಹೊಸ ಸಿನಿಮಾದ ರಗಡ್ ಲುಕ್ನಲ್ಲಿ ಕಾಣಿಸಿಕೊಂಡ ಅಜಯ್ ರಾವ್

  • ಅಮೂಲ್‌ಗೆ ಮಣೆಹಾಕಿದ್ದ BMRCLಗೆ ಮುಖಭಂಗ- ಮೆಟ್ರೋ ನಿಲ್ದಾಣಗಳಲ್ಲಿ 20 ನಂದಿನಿ ಮಳಿಗೆ ತೆರೆಯಲು ಅವಕಾಶ

    ಅಮೂಲ್‌ಗೆ ಮಣೆಹಾಕಿದ್ದ BMRCLಗೆ ಮುಖಭಂಗ- ಮೆಟ್ರೋ ನಿಲ್ದಾಣಗಳಲ್ಲಿ 20 ನಂದಿನಿ ಮಳಿಗೆ ತೆರೆಯಲು ಅವಕಾಶ

    ಬೆಂಗಳೂರು: ಕರ್ನಾಟಕದ ಬ್ರ್ಯಾಂಡ್‌ ನಂದಿನಿಯನ್ನು ಕಡೆಗಣಿಸಿ, ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ (Amul) ಮಳಿಗೆಗಳನ್ನು ತೆರೆಯಲು ನಮ್ಮ ಮೆಟ್ರೋ (Namma Metro) ಮುಂದಾಗಿತ್ತು. ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮೆಟ್ರೋ ನಿಲ್ದಾಣದಲ್ಲಿ 20 ನಂದಿನಿ ಮಳಿಗೆಗಳನ್ನು ರಿಯಾಯಿತಿ ದರದಲ್ಲಿ ತೆರೆಯಲು BMRCL ಒಪ್ಪಿದೆ.

    BMRCL ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಅಮೂಲ್ ಸಂಸ್ಥೆಯ ಕಿಯೋಸ್ಕ್ಗಳನ್ನು ತೆರೆಯಲು ಅವಕಾಶ ಕೊಟ್ಟಿತ್ತು. ಈ ಬಗ್ಗೆ ಗುಜರಾತ್ ಮಿಲ್ಕ್ ಫೆಡರೇಶನ್ ಜೊತೆ ಒಪ್ಪಂದಕ್ಕೆ ಸಹಿ ಕೂಡ ಹಾಕಿತ್ತು. ರಾಜ್ಯದ ರೈತರ ಹೆಮ್ಮೆಯ ಕೆಎಂಎಫ್ ನಂದಿನಿಗೆ ಮಣೆ ಹಾಕಿರಲಿಲ್ಲ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಸಾವು ಗೆದ್ದು ಬಂದಿದ್ದ ವಿಶ್ವಾಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

    ಈ BMRCLನ ನಿರ್ಧಾರದ ಬಗ್ಗೆ ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಮಧ್ಯೆ ಪ್ರವೇಶಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರು, BMRCL ಗ್ಲೋಬಲ್ ಟೆಂಡರ್ ಕರೆದಿದ್ದರು. ಅದಕ್ಕೆ ಅಮೂಲ್‌ನವರು ಅರ್ಜಿ ಹಾಕಿದ್ದರು. ಬೇರೆ ಯಾರೂ ಅರ್ಜಿ ಹಾಕಿದ ಕಾರಣ ಅವರಿಗೆ ಕೊಟ್ಟಿದ್ದರು. ಈಗ 10ರಲ್ಲಿ 8 ಕೆಎಂಎಫ್‌ಗೆ ಕೊಡೋಕೆ ಹೇಳಿದ್ದೇನೆ ಎಂದಿದ್ದರು. ಅಲ್ಲದೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಹ ನಮ್ಮ ಬೆಂಬಲ ಯಾವತ್ತಿಗೂ ನಂದಿನಿಗೆ ಎಂದು ಹೇಳಿದರು. ಇದನ್ನೂ ಓದಿ: ಏನಿಲ್ಲ ಏನಿಲ್ಲ ಅನ್ನುತ್ತಲೇ ಒಂದೇ ಕಾರ್‌ನಲ್ಲಿ ಹೊರಟ ರಶ್ಮಿಕಾ, ದೇವರಕೊಂಡ

    ಇನ್ನೂ ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ BMRCL ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಹಾಗೂ ಕೆಎಂಎಫ್ ಎಂಡಿ ಶಿವಸ್ವಾಮಿ ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ದರು. ಡಿಸಿಎಂ ಹೇಳಿದಂತೆ 8 ಕಡೆ ನಂದಿನಿ ಮಳಿಗೆಗಳು ಓಪನ್ ಮಾಡಲು ಹಾಗೂ ಸರ್ಕಾರದ ನಿರ್ದೇಶನದಂತೆ 2 ಕಡೆಗಳಲ್ಲಿ ಮಾತ್ರ ಅಮೂಲ್‌ಗೆ ಅವಕಾಶ ನೀಡಲಾಗುವುದು ಎಂದರು. ಇದನ್ನೂ ಓದಿ: ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ರದ್ದು – ವಿಧಾನಸೌಧಕ್ಕೆ ಶಿಫ್ಟ್

    ಇನ್ನೂ ಮೀಟಿಂಗ್ ನಂತರ ಮಾತನಾಡಿದ ಕೆಎಂಎಫ್ (KMF) ಎಂಡಿ ಶಿವಸ್ವಾಮಿ, ನಗರದ 20 ಮೆಟ್ರೋ ನಿಲ್ದಾಣದಲ್ಲಿ ರಿಯಾಯಿತಿ ದರದಲ್ಲಿ ನಂದಿನಿ ಮಳಿಗೆ ತೆಗೆಯಲು BMRCL ಅವಕಾಶ ಕೊಡ್ತೇವೆ. ಈ ಹಿಂದೆ 2020-22ರಲ್ಲಿ ಮೆಟ್ರೋ ನಿಲ್ದಾಣದಲ್ಲಿ ಮಳಿಗೆ ತೆರೆಯಲು BMRCL ಟೆಂಡರ್ ಕರೆದಿತ್ತು. ಆಗ ಕೆಎಂಎಫ್ ಈ ಟೆಂಡರ್‌ನಲ್ಲಿ ಭಾಗಿ ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ನಂದಿನಿ ಮಳಿಗೆ ಇರಲಿದೆ ಎಂದಿದ್ದಾರೆ.