Tag: BMRCL

  • ನಾಳೆಯಿಂದ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ – ಮುಂಜಾನೆ 5ರಿಂದಲೇ ರೈಲು ಸಂಚಾರ

    ನಾಳೆಯಿಂದ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ – ಮುಂಜಾನೆ 5ರಿಂದಲೇ ರೈಲು ಸಂಚಾರ

    ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್​ಸಿಎಲ್) ನಿರ್ಧರಿಸಿದೆ.

    ಇಷ್ಟು ದಿನ ಬೆಳಗ್ಗೆ 6ಗಂಟೆಗೆ ಆರಂಭವಾಗುತ್ತಿದ್ದ ಮೆಟ್ರೋ ರೈಲು ಸಂಚಾರ ಸೇವೆಗಳು ಡಿಸೆಂಬರ್ 20ರಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11ರವರೆಗೆ ಲಭ್ಯವಿರುತ್ತದೆ ಎಂದು ಬಿಎಂಆರ್‍ಸಿಎಲ್ ಪ್ರಕಟಿಸಿದೆ. ಇದನ್ನೂ ಓದಿ: ಮಹಾತ್ಮರ ಪುತ್ಥಳಿ ಹಾಳು ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ: ಬಿಎಸ್‍ವೈ

    namma metro

    ಕೋವಿಡ್‍ಗೂ ಮುನ್ನ ಇದ್ದ ವೇಳಾಪಟ್ಟಿಯಂತೆಯೇ ಮೆಟ್ರೋ ಸೇವೆಗಳು ಎಂದಿನಂತೆ ಡಿಸೆಂಬರ್ 20ರಿಂದ ಪ್ರಾರಂಭವಾಗಲಿದೆ ಎಂದು ಬಿಎಂಆರ್​ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ರೈಲು ಟರ್ಮಿನಲ್ ನಿಲ್ದಾಣಗಳಾದ ಕೆಂಗೇರಿ, ಸಿಲ್ಕ್ ಇನ್‍ಸ್ಟಿಟ್ಯೂಟ್, ನಾಗಸಂದ್ರ ಮತ್ತು ಬೈಯಪ್ಪನಹಳ್ಳಿಯಿಂದ ಬೆಳಿಗ್ಗೆ 5 ಗಂಟೆಗೆ ಹೊರಡಲಿದೆ. ಈ ನಿಲ್ದಾಣಗಳಿಂದ ಕೊನೆಯದಾಗಿ ರಾತ್ರಿ 11 ಗಂಟೆಗೆ ರೈಲು ಸಂಚರಿಸಲಿದೆ ಮತ್ತು ಎಂದಿನಂತೆ ಪ್ರತಿ ಭಾನುವಾರ ಬೆಳಗ್ಗೆ 7 ಗಂಟೆಗೆ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ಪ್ರಸಿದ್ಧ ವಾಸ್ತುಶಿಲ್ಪಿ ರಿಚರ್ಡ್ ರೋಜರ್ಸ್ ನಿಧನ

    ನಗರದ ಮುಖ್ಯ ನಿಲ್ದಾಣ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್)ನಿಂದ ಕೊನೆಯ ರೈಲು ರಾತ್ರಿ 11.30 ಕ್ಕೆ ಸಂಚಾರ ಮಾಡಲಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

  • ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ – 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್

    ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ – 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್

    ಬೆಂಗಳೂರು: ನಗರದ ಸಿಲ್ಕ್ ಬೋರ್ಡ್ ಬಳಿಯ ನಮ್ಮ ಮೆಟ್ರೋ ಕಾಮಗಾರಿ ವೇಳೆ ಸಂಭವಿಸಬೇಕಾಗಿದ್ದ ಭಾರೀ ಅನಾಹುತ ತಪ್ಪಿದೆ.

    ನಮ್ಮ ಮೆಟ್ರೋ ಫೇಸ್ -2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಮೆಟ್ರೋ ಸಗ್ಮೆಂಟ್ಸ್ ಜೋಡಿಸುವ ಯಂತ್ರ ಅರ್ಧಕ್ಕೆ ತುಂಡಾಗಿ  ನಲವತ್ತು ಅಡಿ ಎತ್ತರದಿಂದ ಕ್ರೇನ್ ಕೆಳಗೆ ಬಿದ್ದಿದೆ. ಬೆಳಗ್ಗೆ 6:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಭಾರೀ ಅನಾಹುದಿಂದ ನೂರಾರು ಮೆಟ್ರೋ ಕಾರ್ಮಿಕರು ಪಾರಾಗಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    Namma Metro

    ಸಿಲ್ಕ್ ಬೋರ್ಡ್, ಕೆ ಆರ್ ಪುರಂ ಮಾರ್ಗವಾಗಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಇದಾಗಿದ್ದು, ಲಾಂಚಿಂಗ್ ಗಾರ್ಡ್ ಎಂಬ ಬೃಹತ್ ಯಂತ್ರ ಆಯ ತಪ್ಪಿ ದಿಢೀರ್ ಕೆಳಗೆ ಬಿದ್ದಿದೆ. ಇದೀಗ ಯಂತ್ರವನ್ನು ಮೇಲೆತ್ತಲು ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್ ಅಂತ ಕತ್ತು ಕೊಯ್ಯುತ್ತಾನೆ: ಜಮೀರ್ ಅಹ್ಮದ್

    ಸದ್ಯ ಈ ಅವಘಡ ಕುರಿತಂತೆ ಬಿಎಂಆರ್‌ಸಿಎಲ್, ಘಟನೆ ಮೆಕ್ಯಾನಿಕಲ್ ಫೇಲ್ಯೂರ್‌ನಿಂದ ಸಂಭವಿಸಿದ್ದು ಮತ್ತು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇದೀಗ ಲಾಂಚಿಂಗ್ ಗರ್ಡರ್ ಅನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.

  • ನಮ್ಮ ಮೆಟ್ರೋ ರೈಲು ಸೇವಾವಧಿ ವಿಸ್ತರಣೆ

    ನಮ್ಮ ಮೆಟ್ರೋ ರೈಲು ಸೇವಾವಧಿ ವಿಸ್ತರಣೆ

    ಬೆಂಗಳೂರು: ನಗರದಲ್ಲಿ ಕೊರೊನಾದಿಂದಾಗಿ ನೈಟ್ ಕರ್ಫ್ಯೂ ವಿಧಿಸಲಾಗಿತ್ತು. ಇದರಿಂದ ಮೆಟ್ರೋ ಸೇವೆಗೆ ಅವಧಿ ನಿಗದಿ ಪಡಿಸಿತ್ತು. ಆದರೆ ಇದೀಗ ಬೆಂಗಳೂರು ನಮ್ಮ ಮೆಟ್ರೋ ರೈಲು ಸೇವೆಯ ಅವಧಿ ವಿಸ್ತರಣೆಗೊಂಡಿದೆ.

    ಈ ಕುರಿತಂತೆ ಬಿಎಂಆರ್‌ಸಿಎಲ್(BMRCL) ಆದೇಶ ಹೊರಡಿಸಿದ್ದು, ನಗರದಲ್ಲಿ ಮೆಟ್ರೋ ರೈಲು ಸಂಚಾರ ಸೇವೆಯು ಸೆಪ್ಟೆಂಬರ್ 18ರ ಶನಿವಾರದಿಂದ ಬೆಳಗ್ಗೆ 6ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಇರಲಿದೆ ಎಂಬುದಾಗಿ ತಿಳಿಸಿದೆ. ಇದನ್ನೂ ಓದಿ: ಸರ್ಕಾರದಿಂದ್ಲೇ ಹುಚ್ಚಗಣಿ ದೇವಸ್ಥಾನ ಪುನರ್ ನಿರ್ಮಾಣ- ಸಂಪುಟ ಸಭೆಯಲ್ಲಿ ತೀರ್ಮಾನ ನಿರೀಕ್ಷೆ

    ಮೆಜೆಸ್ಟಿಕ್‍ನ ಕೆಂಪೇಗೌಡ ಮೆಟ್ರೋ ನಿಲ್ದಾಣ, ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳಿಂದ ರಾತ್ರಿ 9.30ಕ್ಕೆ ಕೊನೆಯ ಮೆಟ್ರೋ ರೈಲು ಹೊರಡಲಿದೆ. ಜೊತೆಗೆ ಬೆಳಿಗ್ಗೆ 7ರ ಬದಲಾಗಿ 6 ಗಂಟೆಯಿಂದಲೇ ಮೆಟ್ರೋ ರೈಲು ಸೇವೆ ಆರಂಭಗೊಳ್ಳಲಿದೆ. ರಾತ್ರಿ 9 ಗಂಟೆಗೆ ಕೊನೆಗೊಳ್ಳುತ್ತಿದ್ದಂತ ಮೆಟ್ರೋ ರೈಲು ಸಂಚಾರ ನಾಳೆಯಿಂದ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಇದನ್ನೂ ಓದಿ: ಹಾಸನದಲ್ಲಿ ಲಘು ಭೂಕಂಪನ- ರಿಕ್ಟರ್ ಮಾಪನದಲ್ಲಿ 2.3 ತೀವ್ರತೆ ದಾಖಲು

  • ಕೆಂಗೇರಿ ಮೆಟ್ರೋ ವೇದಿಕೆ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಕನ್ನಡ ಮಾಯ

    ಕೆಂಗೇರಿ ಮೆಟ್ರೋ ವೇದಿಕೆ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಕನ್ನಡ ಮಾಯ

    ಬೆಂಗಳೂರು: ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಿರ್ಮಾಣವಾಗಿರುವ ಮೆಟ್ರೋ ನೇರಳೆ ಮಾರ್ಗ ಇಂದು ಉದ್ಘಾಟನೆಯಾಗಿದೆ. ಈ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಸಂಪೂರ್ಣ ಇಂಗ್ಲಿಷ್ ಪದಗಳ ಬಳಕೆಮಾಡಿ ಕನ್ನಡ ಮಾಯಾವಾಗುವಂತೆ ಮಾಡಿದ್ದಾರೆ.

    ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಕೆಂಗೇರಿ ಮೆಟ್ರೋ ನಿಲ್ದಾಣದ ಮುಖ್ಯ ವೇದಿಕೆ ಕಾರ್ಯಕ್ರಮದಲ್ಲಿ ಸಂಪೂರ್ಣ ಇಂಗ್ಲಿಷ್ ಪದಗಳ ಬಳಕೆ ಮಾಡಲಾಗಿತ್ತು. ಇದನ್ನೂ ಓದಿ: ಮೈಸೂರು ರಸ್ತೆ To ಕೆಂಗೇರಿ – ಮೆಟ್ರೋ ಮಾರ್ಗ ಉದ್ಘಾಟನೆ

    ವೇದಿಕೆಯ ಹಿಂಭಾಗದಲ್ಲಿದ್ದ ಬ್ಯಾನರ್‌ನಲ್ಲಿ ಒಂದೇ ಒಂದು ಕನ್ನಡ ಪದ ಬಳಕೆ ಮಾಡದೆ ಬಿಎಂಆರ್​ಸಿಎಲ್ ಕಾರ್ಯಕ್ರಮ ಆಯೋಜಿಸಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರದ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ, ಸಿಎಂ ಬಸವರಾಜ ಬೊಮ್ಮಾಯಿ, ಸಂಸದರಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ, ಸಚಿವರಾದ ವಿ ಸೋಮಣ್ಣ, ಆರ್. ಅಶೋಕ್, ಮುನಿರತ್ನ, ಎಸ್ ಟಿ ಸೋಮಶೇಖರ್, ಗೋಪಾಲಯ್ಯ ಉಪಸ್ಥಿತರಿದ್ದರು.

    ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಬಂದ ಮೊದಲ ಟ್ರೈನ್ ಉದ್ಘಾಟನೆ ಬಳಿಕ ಸಂಚಾರ ಆರಂಭಿಸಿತು. ಮಹಿಳಾ ಲೋಕೋಪೈಲೆಟ್ ನಿಂದ ಮೊದಲ ರೈಲಿನ ಸಂಚಾರ ಆರಂಭಗೊಂಡಿತು. ಉದ್ಘಾಟನೆ ಬಳಿಕ ನಾಯಂಡಹಳ್ಳಿ ನಿಲ್ದಾಣದಿಂದ ಕೆಂಗೇರಿವರೆಗೂ ಮೆಟ್ರೋ ಸಂಚಾರಿಸಿತು. ಮೊದಲ ಮೆಟ್ರೋದಲ್ಲಿ ಬಿಎಂಆರ್‍ಸಿಎಲ್ ಸಿಬ್ಬಂದಿ ಸಂಚಾರ ಮಾಡಿದರು. ಇದನ್ನೂ ಓದಿ: ದೇಶದ ವಿವಿಧ ರಾಜ್ಯಗಳ ಮಂಗಳಸೂತ್ರ ವಿನ್ಯಾಸದ ಮಾಹಿತಿ

  • ಮೈಸೂರು ರಸ್ತೆ To ಕೆಂಗೇರಿ – ಮೆಟ್ರೋ ಮಾರ್ಗ ಉದ್ಘಾಟನೆ

    ಮೈಸೂರು ರಸ್ತೆ To ಕೆಂಗೇರಿ – ಮೆಟ್ರೋ ಮಾರ್ಗ ಉದ್ಘಾಟನೆ

    ಬೆಂಗಳೂರು: ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಿರ್ಮಾಣವಾಗಿರುವ ಮೆಟ್ರೋ ನೇರಳೆ ಮಾರ್ಗವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ.

    ಮೆಟ್ರೋ ನೇರಳೆ ಮಾರ್ಗದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರದ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ, ಸಂಸದ ತೇಜಸ್ವಿ ಸೂರ್ಯ, ಸಚಿವರಾದ ವಿ ಸೋಮಣ್ಣ, ಆರ್. ಅಶೋಕ್, ಮುನಿರತ್ನ, ಎಸ್ ಟಿ ಸೋಮಶೇಖರ್ ಗೋಪಾಲಯ್ಯ ಉಪಸ್ಥಿತರಿದ್ದರು. ಇದನ್ನೂ ಓದಿ: ಬೊಮ್ಮಾಯಿ ಮುಖ್ಯಮಂತ್ರಿ ಆದ್ಮೇಲೆ ಕೋವಿಡ್ ಕಡಿಮೆ ಆಗುತ್ತಿದೆ: ಪ್ರಭು ಚವ್ಹಾಣ್

    ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಬಂದ ಮೊದಲ ಟ್ರೈನ್ ಉದ್ಘಾಟನೆ ಬಳಿಕ ಸಂಚಾರ ಆರಂಭಿಸಿತು. ಮಹಿಳಾ ಲೋಕೋಪೈಲೆಟ್ ನಿಂದ ಮೊದಲ ರೈಲಿನ ಸಂಚಾರ ಆರಂಭಗೊಂಡಿತು. ಉದ್ಘಾಟನೆ ಬಳಿಕ ನಾಯಂಡಹಳ್ಳಿ ನಿಲ್ದಾಣದಿಂದ ಕೆಂಗೇರಿವರೆಗೂ ಮೆಟ್ರೋ ಸಂಚಾರಿಸಿತು. ಮೊದಲ ಮೆಟ್ರೋದಲ್ಲಿ ಬಿಎಂಆರ್‍ ಸಿಎಲ್ ಸಿಬ್ಬಂದಿ ಸಂಚಾರ ಮಾಡಿದರು.

    ರೈಲು ಸಂಚರಿಸಲು ಏಪ್ರಿಲ್ ನಿಂದ ಟ್ರಯಲ್ ರನ್ ನಡೆಸಿದ್ದ ಮೆಟ್ರೋ ನಿಗಮ ಇಂದಿನಿಂದ ಸಂಚಾರ ಆರಂಭಿಸಿದೆ. 7.5 ಕೀಮಿ ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು, ನಾಯಂಡಹಳ್ಳಿಯಿಂದ ಕೆಂಗೇರಿ ಬಸ್ ಟರ್ಮಿನಲ್ ವರೆಗಿನ ನೇರಳೆ ಮೆಟ್ರೋ ಮಾರ್ಗ ವಿಸ್ತರಿಸಿದೆ. ಅಧಿಕೃತವಾಗಿ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ಹಳಿಗೆ ಬರಲಿದೆ. ಪ್ರತಿ 10 ನಿಮಿಷಕ್ಕೆ ಒಮ್ಮೆ ಮೆಟ್ರೋ ಸಂಚರಿಸಲಿದೆ. ಒಟ್ಟು 7.5 ಕೀಮಿ ದೂರದಲ್ಲಿ 6 ಸ್ಟೇಷನ್ ಇರಲಿದ್ದು, ಆಗಸ್ಟ್ 11 ಹಾಗೂ 12 ರಂದು ಸುರಕ್ಷತಾ ಪರೀಕ್ಷೆ ನಡೆಸಲಾಗಿತ್ತು. 1,560 ಕೋಟಿ ವೆಚ್ಚದಲ್ಲಿ ಮೆಟ್ರೋ ಮಾರ್ಗ ನಿರ್ಮಾಣವಾಗಿದೆ. ಇದನ್ನೂ ಓದಿ: ಮೈಸೂರು ಗ್ಯಾಂಗ್‍ರೇಪ್ – ಆರೋಪಿ ಮೇಲಿದೆ 10 ಕೇಸ್‍ಗಳು

  • ಗ್ರಾಮದಲ್ಲಿ ನಿಲ್ದಾಣ ಮಾಡುವಂತೆ ‘ನಮ್ಮ ಮೆಟ್ರೋ’ ಪಿಲ್ಲರ್ ಏರಿ ಪ್ರತಿಭಟನೆ

    ಗ್ರಾಮದಲ್ಲಿ ನಿಲ್ದಾಣ ಮಾಡುವಂತೆ ‘ನಮ್ಮ ಮೆಟ್ರೋ’ ಪಿಲ್ಲರ್ ಏರಿ ಪ್ರತಿಭಟನೆ

    ಬೆಂಗಳೂರು/ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲದ ಅಂಚೆಪಾಳ್ಯದ ಬಳಿ ನಮ್ಮ ಮೆಟ್ರೋ ನಿಲ್ದಾಣ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು.

    ನಿರ್ಮಾಣ ಹಂತದಲ್ಲಿರುವ ಪಿಲ್ಲರ್ ಗಳನ್ನ ಏರಿದ ಯುವಕರು ಮಹಾತ್ಮ ಗಾಂಧಿಜೀ ಹಾಗೂ ಅಂಬೇಡ್ಕರ್ ಫೋಟೋಗಳನ್ನ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಇತ್ತ ನೂರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದರು. ಈ ಹಿಂದೆ ನಮ್ಮ ಮೆಟ್ರೋ ಅಧಿಕಾರಿಗಳು ಅಂಚೆಪಾಳ್ಯದ ಬಳಿ ಮೆಟ್ರೋ ನಿಲ್ದಾಣ ಮಾಡುವ ಭರವಸೆ ನೀಡಿದ್ದರು. ಆದರೆ ಏಕಾಏಕಿ ರಸ್ತೆ ಹಾಗೂ ನಿಲ್ದಾಣವನ್ನ ಸಹ ಮಾಡುವುದಿಲ್ಲ ಎಂಬುದಕ್ಕೆ ಆಕ್ರೋಶಗೊಂಡು ಗ್ರಾಮಸ್ಥರು ಮೆಟ್ರೋ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

    ಸ್ಥಳದಲ್ಲಿ ಮಾದನಾಯಕನಹಳ್ಳಿ ಪೊಲೀಸರು ಮೊಕ್ಕಾಂ ಹೂಡಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್ ರಸ್ತೆಯಲ್ಲಿ ಕುಳಿತು ಪ್ರತಿಭಟಿಸುತ್ತಿದ್ದ, ಪ್ರತಿಭಟನಾ ಸ್ಥಳಕ್ಕೆ ಬಿಎಂಆರ್ ಸಿಎಲ್ ಎಂಡಿ ಬರುವಂತೆ ಆಗ್ರಹಿಸುತ್ತಿದ್ದರು. ಪ್ರತಿಭಟನೆಯಲ್ಲಿ ಮಹಿಳೆಯರು ಸಹ ಭಾಗಿಯಾಗಿದ್ದು, ಪಟ್ಟುಬಿಡದೇ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೂಡಲೇ ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ತಂದರು. ಇದನ್ನೂ ಓದಿ: ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ

    ಸ್ಥಳಕ್ಕೆ ನೆಲಮಂಗಲ ಉಪ ವಿಭಾಗದ ಡಿವೈಎಸ್ ಪಿ ಜಗದೀಶ್, ನಮ್ಮ ಮೆಟ್ರೋ ಮುಖ್ಯ ಇಂಜಿನಿಯರ್ ಕಲ್ಲಪ್ಪ ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಮಾತನಾಡಿ, ಉನ್ನತ ಅಧಿಕಾರಿಗಳೊಂದಿಗೆ ಮತ್ತೆ ಸಭೆ ನಡೆಸುವ ಭರವಸೆ ನೀಡಿದರು. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದೆ ಉಗ್ರ ರೂಪದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಇದನ್ನೂ ಓದಿ; ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ವ್ಯಾಕ್ಸಿನ್ ಸೆಪ್ಟೆಂಬರ್​​​ಗೆ ಲಭ್ಯ – ಬೆಲೆ 750 ರೂ.

  • ಮಹಿಳೆಯ ದೂರು ದಾಖಲಿಸಿಕೊಳ್ಳದೆ ಸತಾಯಿಸಿದ ಮೆಟ್ರೋ ಸಿಬ್ಬಂದಿ

    ಮಹಿಳೆಯ ದೂರು ದಾಖಲಿಸಿಕೊಳ್ಳದೆ ಸತಾಯಿಸಿದ ಮೆಟ್ರೋ ಸಿಬ್ಬಂದಿ

    ಬೆಂಗಳೂರು: ಮೆಟ್ರೋ ಸ್ಮಾರ್ಟ್ ಕಾರ್ಡ್ ಕಳೆದುಕೊಂಡು ಅದರಲ್ಲಿರುವ ಹಣ ರಿಫಂಡ್ ಮಾಡಿಕೊಡಿ ಎಂದು ದೂರು ಕೊಟ್ಟು ಕಳೆದ ನಾಲ್ಕು ದಿನಗಳಿಂದ ಮಹಿಳೆಯೊಬ್ಬರು ಬೈಯಪ್ಪನಹಳ್ಳಿ ಮೆಟ್ರೋ ಅಡ್ಮಿನ್ ಕಚೇರಿಗೆ ಅಲೆದಾಡಿ, ದುಂಬಾಲು ಬಿದ್ದರೂ ಮೆಟ್ರೋ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯ ತೋರಿಸಿದ ಘಟನೆ ನಡೆದಿದೆ.

    ಪವಿತ್ರಾ ಎಂಬವರು ಕಳೆದ ನಾಲ್ಕು ದಿನದ ಹಿಂದೆ ಬೈಯಪ್ಪನಹಳ್ಳಿಯಿಂದ ಹೊಸಹಳ್ಳಿಗೆ ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ತಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಕಳೆದುಕೊಂಡಿದ್ದಾರೆ. ಕಳೆದುಕೊಂಡಿರುವ ಮೆಟ್ರೋ ಕಾರ್ಡ್ ನಲ್ಲಿ 900 ರೂ.ಗೂ ಹೆಚ್ಚು ಹಣವಿತ್ತು. ಹೀಗಾಗಿ ಕಳೆದುಕೊಂಡಿರುವ ಕಾರ್ಡ್ ಗೆ ಮತ್ತೊಂದು ನಕಲಿ ಕಾರ್ಡ್ ಕೊಟ್ಟು, ಹಣ ರೀಫಂಡ್ ಮಾಡಿ ಅಂತ ಬೈಯಪ್ಪನ ಹಳ್ಳಿ ಮೆಟ್ರೋ ಅಧಿಕಾರಿಗಳಿಗೆ ಹಾಗೂ ಕೇಂದ್ರ ಕಚೇರಿಗೂ ಕೈಬರಹ ಹಾಗೂ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.

    ಎರಡು ಬಾರಿ ದೂರು ಕೊಟ್ಟಾಗಲೂ ಅಧಿಕಾರಿಗಳು ಸ್ಪಂದಿಸಿಲ್ಲ. ಮೂರನೇ ಬಾರಿಗೆ ಸ್ಪಂದಿಸಿದ ಕೇಂದ್ರ ಕಚೇರಿಯ ಅಧಿಕಾರಿಗಳು , ಕಳೆದುಕೊಂಡ ಕಾರ್ಡ್ ನಲ್ಲಿರುವ ಹಣವನ್ನ ಹಿಂದಿರುಗಿಸಲು ಆಗೋದಿಲ್ಲ. ಅಂತಹ ಸೇವೆ ನಮ್ಮಲ್ಲಿ ಇಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಕೆರಳಿದ ಪವಿತ್ರಾ, ಪ್ರಯಾಣಿಕರ ಅನುಕೂಲಕ್ಕಾಗಿ ಎಂದು ಸ್ಮಾರ್ಟ್ ಕಾರ್ಡ್ ಜಾರಿಗೆ ತಂದಿದ್ದೀರಾ. ಅದೇ ಕಾರ್ಡ್ ನಿಂದ ಸಮಸ್ಯೆಯಾದಾಗ ಯಾಕೆ ಪರಿಹಾರ ನೀಡಲು ಆಗುವುದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮುಖ್ಯವಾಗಿ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಕೊಂಡ ಬಳಿಕ ರಿಚಾರ್ಜ್ ಆದ ಹಣ ಬಿ.ಎಂ.ಆರ್.ಸಿ.ಎಲ್ ಹಣಕಾಸು ವಿಭಾಗಕ್ಕೆ ಹೋಗುತ್ತೆ. ಸೇವೆಯಲ್ಲಿರುವ ಕಾರ್ಡ್, ಕಳೆದುಕೊಂಡರೆ ಅದರಲ್ಲಿರುವ ಹಣವನ್ನು ಮರಳಿ ಕೊಡುವ ವ್ಯವಸ್ಥೆ ಬಿ.ಎಂ.ಆರ್.ಸಿ.ಎಲ್ ಮಾಡಿಕೊಂಡಿಲ್ಲ. ಗ್ರಾಹಕರೇ ಈ ವಿಷಯದಲ್ಲಿ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಮಹಿಳೆ ಪವಿತ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಬಿ.ಎಂ.ಆರ್.ಸಿ.ಎಲ್ ಗೆ ಹಣ ಮಾಡೋದಷ್ಟೆ ಮಾನದಂಡವಲ್ಲ. ಪ್ರಯಾಣಿಕರ ದೂರುಗಳಿಗೂ ಸ್ಪಂದಿಸಬೇಕು. ಒಂದು ಮಹಿಳೆಯ ದೂರು ಸ್ವೀಕರಿಸಲು ಇಷ್ಟೊಂದು ತಾತ್ಸರ ಮಾಡ್ತಾರೆ ಅಂತಾದರೆ, ಪ್ರಯಾಣಿಕರ ಬಗ್ಗೆ ಇವರಿಗೆಷ್ಟು ಕಾಳಜಿಯಿದೆ ಅನ್ನೋದು ಗೊತ್ತಾಗುತ್ತೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

  • ಮೆಟ್ರೋದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ಅಳವಡಿಕೆಗೆ ಮುಂದಾದ BMRCL

    ಮೆಟ್ರೋದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ಅಳವಡಿಕೆಗೆ ಮುಂದಾದ BMRCL

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ಅಳವಡಿಕೆಗೆ ಬಿಎಂಆರ್‌ಸಿಎಲ್ ಮುಂದಾಗಿದೆ. ಈ ನಿಟ್ಟಿನಲ್ಲಿ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಅಗತ್ಯವಿರುವ ಏಕೀಕೃತ ದರ ಸಂಗ್ರಹ ದ್ವಾರಗಳನ್ನು ಅಳವಡಿಸಲಾಗಿದೆ.

    ನಿಲ್ದಾಣದಲ್ಲಿ ಆಟೋಮೆಟಿಕ್ ಫೇರ್ ಕಲೆಕ್ಷನ್ ಗೇಟ್ (ಎಎಫ್‍ಸಿ) ಪಕ್ಕದಲ್ಲೇ ‘ಸ್ವಾಗತ್’ ಎಂಬ ಒಂದು ಜೋಡಿ ಏಕೀಕೃತ ದರ ಸಂಗ್ರಹ ದ್ವಾರಗಳನ್ನು ಬೈಯಪ್ಪನಹಳ್ಳಿಯಲ್ಲಿ ಅಳವಡಿಸಲಾಗಿದೆ. ಆದರೆ ತಾಂತ್ರಿಕವಾಗಿ ಜೋಡಣೆ ಮಾಡಿ ಕಾರ್ಯಾಚರಣೆಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ.

    ದೆಹಲಿ ಮೆಟ್ರೋ ಹಾಗೂ ಸರ್ಕಾರಿ ಬಸ್‍ಗಳಲ್ಲಿ ಪ್ರಾಯೋಗಿಕವಾಗಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬಳಕೆಯಲ್ಲಿದೆ. ಈ ಕಾರ್ಡ್ ಒಮ್ಮೆ ಬಳಕೆಗೆ ಬಂದರೆ ಪ್ರಯಾಣಿಕರು ದೆಹಲಿ, ಚೆನ್ನೈ, ಸೇರಿದಂತೆ ಯಾವುದೇ ಮೆಟ್ರೋದಲ್ಲಿ ಈ ಕಾರ್ಡ್ ಬಳಸಬಹುದಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

    ಭಾರತ್ ಎಲೆಕ್ಟ್ರಾನಿಕ್ಸ್ ಲಿ. (ಬಿಇಎಲ್) ಹಾಗೂ ಸೆಂಟರ್ ಫಾರ್ ಡೆವಲಪ್‍ಮೆಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್ (ಸಿಡಿಎಸಿ) ಸಹಯೋಗದಲ್ಲಿ ಈ ಗೇಟ್‍ಗಳು ಪೂರೈಕೆಯಾಗಿವೆ. ಈ ಸೇವೆ ಆರಂಭಗೊಂಡರೆ ಪ್ರಯಾಣಿಕರು ದೇಶದ ಯಾವುದೇ ಮೆಟ್ರೋದಲ್ಲಿ ಬಳಸುವ ಕಾರ್ಡ್ ಗಳನ್ನು ಮೆಟ್ರೋದಲ್ಲಿ ಬಳಸಿ ಪ್ರಯಾಣಿಸಬಹುದು. ಈ ಸೇವೆ ಏಪ್ರಿಲ್ ನಿಂದ ಜಾರಿಗೆ ಬರುವ ಸಾಧ್ಯತೆಯಿದೆ.

  • ಡಿ.31ರಂದು ಮಧ್ಯರಾತ್ರಿ 2ರವರೆಗೂ ಮೆಟ್ರೋ ಸೇವೆ ವಿಸ್ತರಣೆ

    ಡಿ.31ರಂದು ಮಧ್ಯರಾತ್ರಿ 2ರವರೆಗೂ ಮೆಟ್ರೋ ಸೇವೆ ವಿಸ್ತರಣೆ

    – ಕುಡಿದು ಅಸಭ್ಯ ವರ್ತನೆ ಮಾಡಿದರೆ ಕಿಕ್ ಔಟ್

    ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನೆಲೆ ಡಿ.31ರಂದು ಮಧ್ಯರಾತ್ರಿ 2ಗಂಟೆ ವರೆಗೂ ಮೆಟ್ರೋ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

    ಡಿಸೆಂಬರ್ 31ರಂದು ಮಧ್ಯರಾತ್ರಿ 2ಗಂಟೆ ವರೆಗೂ ಮೆಟ್ರೋ ಸಂಚರಿಸಲಿದ್ದು, 50 ರೂ. ಮೇಲ್ಪಟ್ಟು ಟಿಕೆಟ್ ಖರೀದಿಸಿದವರಿಗೆ ಬಂಪರ್ ಕೊಡುಗೆಯನ್ನು ಸಹ ನೀಡಿದೆ. ಆದರೆ ಕುಡಿದು ಪ್ರಯಾಣಿಸುವವರಿಗೆ ಎಚ್ಚರಿಕೆ ನೀಡಿದ್ದು, ಕುಡಿದು ಅಸಭ್ಯವಾಗಿ ವರ್ತಿಸಿದರೆ ಕಿಕ್ ಔಟ್ ಮಾಡುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ.

    ಹೊಸ ವರ್ಷದ ಹಿಂದಿನ ದಿನ ಮಧ್ಯರಾತ್ರಿ ಎಂ.ಜಿ ರಸ್ತೆ, ಬ್ರಿಗೇಟ್ ರಸ್ತೆ ಬಳಿ ಸಂಭ್ರಮಾಚರಣೆಗೆ ಸಾವಿರಾರು ಜನ ಸೇರುತ್ತಾರೆ. ಈ ಸಮಯದಲ್ಲಿ ಸಾಕಷ್ಟು ಜನ ಮೆಟ್ರೋದಲ್ಲೇ ಪ್ರಯಾಣಿಸುತ್ತಾರೆ. ಹೀಗಾಗಿ ಟ್ರಿನಿಟಿ ಮೆಟ್ರೋ ಸ್ಟೇಷನ್, ಎಂಜಿ ರಸ್ತೆ, ಕಬ್ಬನ್ ಪಾರ್ಕಿನಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಈ ಮೂರು ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

    ಅಲ್ಲದೆ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ತೆರಳುವವರಿಗೆ ಟಿಕೆಟ್ ನೀಡಲು ಕಷ್ಟವಾಗುವುದರಿಂದ ಪೇಪರ್ ಟಿಕೆಟ್ ನೀಡಲು ಮೆಟ್ರೋ ನಿರ್ಧರಿಸಿದೆ. ಸಂಜೆ 4 ಗಂಟೆಗೆ ಎಲ್ಲಾ ಮೆಟ್ರೋ ಸ್ಟೇಷನ್ ನಲ್ಲಿ ಪೇಪರ್ ಟಿಕೆಟ್ ಕೊಡಲಾಗುತ್ತದೆ. ಅಲ್ಲದೆ 50 ರೂ.ಗಿಂತ ಹೆಚ್ಚು ಟಿಕೆಟ್ ಪಡೆದರೆ ಬೆಂಗಳೂರಿನ ಯಾವ ಮೆಟ್ರೋ ನಿಲ್ದಾಣದಲ್ಲಿ ಬೇಕಾದರೂ ಸಂಚರಿಸಬಹು ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

    ಮೆಟ್ರೋನಲ್ಲಿ ಡ್ರಿಂಗ್ಸ್ ಮಾಡುವವರು ಸಂಚರಿಸಬಹುದು. ಆದರೆ ಕುಡಿದ ಮತ್ತಿನಲ್ಲಿ ಅಸಭ್ಯ ವರ್ತನೆ ಮಾಡಿದರೆ ಅವರನ್ನು ಆ ಕ್ಷಣವೇ ಮೆಟ್ರೋಯಿಂದ ಕಿಕ್ ಔಟ್ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

  • ಮೆಟ್ರೋ ನಿಲ್ದಾಣಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಕಾರ್ಡ್ ವಿತರಣೆ

    ಮೆಟ್ರೋ ನಿಲ್ದಾಣಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಕಾರ್ಡ್ ವಿತರಣೆ

    ಬೆಂಗಳೂರು: ಮೆಟ್ರೊ ನಿಲ್ದಾಣಗಳಲ್ಲಿ ಕಾರು ಮತ್ತು ಬೈಕ್‍ಗಳನ್ನು ನಿಲ್ಲಿಸಿ ತೆರಳುವ ಪ್ರಯಾಣಿಕರಿಗೆ ಪಾರ್ಕಿಂಗ್ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ.

    ಬಿಎಂಆರ್ ಸಿಎಲ್ ನಿಂದ ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಗಳು ಈ ಕಾರ್ಡ್ ಗಳನ್ನು ನೀಡುತ್ತಿದ್ದಾರೆ. ಇದುವರೆಗೆ ಮೆಟ್ರೋ ನಿಲ್ದಾಣಗಳಲ್ಲಿ ಕಾರು ಮತ್ತು ಬೈಕ್‍ಗಳನ್ನು ನಿಲ್ಲಿಸಿ ತೆರಳುವ ಪ್ರಯಾಣಿಕರಿಗೆ ರಶೀದಿ ನೀಡಲಾಗುತ್ತಿತ್ತು. ಈಗ ರಶೀದಿ ಬದಲು ಈ ಸ್ಮಾರ್ಟ್ ‘ಪಾರ್ಕಿಂಗ್ ಕಾರ್ಡ್’ಗಳನ್ನು ನೀಡಲಾಗುತ್ತಿದೆ. ಈಗಾಗಲೇ ಮೈಸೂರು ರೋಡ್ ಮೆಟ್ರೋ ಮತ್ತು ಯಲಚೇನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಡ್ ವಿತರಿಸಲಾಗಿದೆ.

    ಈ ಕಾರ್ಡ್ ನ್ನು ಪ್ರಯಾಣಿಕರು ತಮ್ಮ ಗಾಡಿಯನ್ನು ತೆಗೆದುಕೊಂಡು ಹೋಗುವಾಗ ವಾಪಾಸ್ ಮಾಡಬೇಕು. ಈ ಸ್ಮಾರ್ಟ್ ಕಾರ್ಡ್ ನಲ್ಲಿ ಪಾರ್ಕಿಂಗ್ ಸಮಯ, ಚಾರ್ಜ್ ಮತ್ತಿತರ ವಿವರಗಳು ಸಿಗುತ್ತವೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 11.30ರ ವರೆಗೆ ಪಾರ್ಕಿಂಗ್ ಸೇವೆ ಲಭ್ಯವಿರಲಿದೆ. ಆದರೆ ರಾತ್ರಿ ಪಾರ್ಕಿಂಗ್‍ಗೆ ಅವಕಾಶವಿಲ್ಲ. ಒಂದು ವೇಳೆ ಸ್ಮಾರ್ಟ್ ಪಾರ್ಕಿಂಗ್ ಕಾರ್ಡ್ ಕಳೆದುಕೊಂಡರೆ 100 ರೂ. ದಂಡ ಮತ್ತು ಪಾರ್ಕಿಂಗ್ ಶುಲ್ಕ ಪಾವತಿಸಬೇಕಾಗುತ್ತದೆ. ಈ ಕಾರ್ಡ್ ನಿಂದ ತಮ್ಮ ತಮ್ಮ ವಾಹನಗಳು ಸುರಕ್ಷಿತವಾಗಿರುತ್ತವೆಂದು ವಾಹನ ಸವಾರರು ಹರ್ಷ ವ್ಯಕ್ತಪಡಿಸಿದ್ದಾರೆ.