ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ತಾಂತ್ರಿಕ ಸಮಸ್ಯೆ ಉಂಟಾಗಿ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ಸುಮಾರು ಒಂದು ಗಂಟೆಗಳ ಕಾಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳು ತಿಳಿಸಿದ್ದಾರೆ. ಚಲಿಸುತ್ತಿದ್ದ ಮೆಟ್ರೋ ರೈಲಿನ ಡೋರ್ ಓಪನ್ ಆಗಿದ್ದು, ಮತ್ತೆ ಕ್ಲೋಸ್ ಆಗಿಲ್ಲ ಎಂದು ತಿಳಿದುಬಂದಿದೆ.
ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಹೊರ ಬರಲು ಹರಸಾಹಸಪಟ್ಟಿದ್ದಾರೆ. ನೇರಳೆ ಮಾರ್ಗದ ಚಲ್ಲಘಟ್ಟದಿಂದ ವೈಟ್ ಫೀಲ್ಡ್ ಕಡೆ ಸಂಚರಿಸುತ್ತಿದ್ದ ರೈಲು, ಟ್ರ್ಯಾಕ್‌ನ ಅರ್ಧ ಮಾರ್ಗದಲ್ಲಿ ನಿಂತಿದೆ. ಯಾವ ನಿಲ್ದಾಣದ ಬಳಿ ಮೆಟ್ರೋ ರೈಲು ನಿಂತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಕನಸಿನ ಕೂಸು ಸುರಂಗ ರಸ್ತೆ (Tunnel Road) ನಿರ್ಮಾಣ ಮಾಡಲು ಸಿದ್ಧತೆ ಮಾಡಿದ ಸಮಗ್ರ ಯೋಜನಾ ವರದಿಯಲ್ಲಿ (DPR) ಲೋಪದೋಷಗಳಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಸಂಚಾರ ದಟ್ಟಣೆ ತಡೆಗಟ್ಟಲು 18 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳದಿಂದ (Hebbala) ಸಿಲ್ಕ್ ಬೋರ್ಡ್‌ವರೆಗೆ (Silk Board) 19 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಡಿಪಿಆರ್ ಮಾಡಲಾಗಿದೆ.
ಈ ಟನಲ್ ರಸ್ತೆಗೆ ವಿವಾದ ಜೋರಾಗುತ್ತಿದ್ದಂತೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಕಾರ್ಯನಿರ್ವಾಹಕ ನಿರ್ದೇಶಕ (ಸಿವಿಲ್) ಸಿದ್ದನಗೌಡ ಹೆಗರಡ್ಡಿ ನೇತೃತ್ವದಲ್ಲಿ ಐವರ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಡಿಪಿಆರ್ ಅಧ್ಯಯನ ಮಾಡಿ ಹಲವು ದೋಷಗಳನ್ನು ಎತ್ತಿ ತೋರಿಸಿದೆ. ಇದನ್ನೂ ಓದಿ: ಟ್ರಂಪ್ ಭಾಷಣಕ್ಕೆ ಅಡ್ಡಿ – ಇಬ್ಬರು ಇಸ್ರೇಲ್ ಸಂಸದರನ್ನು ಹೊರದಬ್ಬಿದ ಸಿಬ್ಬಂದಿ
ಡಿಪಿಆರ್‌ನಲ್ಲಿರುವ ಲೋಪ ದೋಷಗಳೇನು?
ತರಾತುರಿಯಲ್ಲಿ ಡಿಪಿಆರ್ ತಯಾರಿಕೆ ಮಾಡಲಾಗಿದೆ. ಸುರಂಗ ರಸ್ತೆ ಯೋಜನೆ ದೊಡ್ಡ ಯೋಜನೆಯಾಗಿದ್ದು 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಮಾಡಲಾಗಿದೆ. 4 ಕಡೆ ಮಣ್ಣಿನ ಪರೀಕ್ಷೆ ಮಾಡಿ ಈ ಯೋಜನೆ ಮಾಡುವುದು ಸಾಧುವಲ್ಲ. ಇದನ್ನೂ ಓದಿ: ದೇಶದ ಮೊದಲ ಆದಾಯ ಸಮೀಕ್ಷೆ ಫೆಬ್ರವರಿಯಲ್ಲಿ ಆರಂಭ
ಹೆಬ್ಬಾಳ ಟು ಸಿಲ್ಕ್ ಬೋರ್ಡ್‌ವರೆಗೆ ರೆಡ್ ಲೈನ್ ಮೆಟ್ರೋ ಮಾರ್ಗ ಬರುತ್ತಿದೆ. ಲಾಲ್‌ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ?
ಪೀಕ್ ಅವರ್ ಟ್ರಾಫಿಕ್ ಗಣನೆಗೆ ತೆಗೆದುಕೊಂಡಿಲ್ಲ ಮತ್ತು ಹೆಬ್ಬಾಳ ನಾಲಾ ಡೈವರ್ಷನ್ ಸರಿಯಿಲ್ಲ. ಬೃಹತ್ ಯೋಜನೆಗೆ 10 ವರ್ಷ ಅಲ್ಲ 25 ವರ್ಷ ಬೇಕಾಗಬಹುದು. ಪಾದಚಾರಿ ಮಾರ್ಗ, ನೀರಿನ ಒಳಚರಂಡಿ ಸೇರಿದಂತೆ ಹೈಡ್ರಾಲಿಕ್ ವಿನ್ಯಾಸ, ವಿಪತ್ತು ನಿರ್ವಹಣೆ ಬಗ್ಗೆ ಉಲ್ಲೇಖ ಇಲ್ಲ.
ಭೂಸ್ವಾಧಿನ ಹೇಗೆ ಎನ್ನುವುದರ ಬಗ್ಗೆ ಉಲ್ಲೇಖ ಆಗಿಲ್ಲ. ಪರಿಸರ ಕಾಳಜಿ, ಸಾರಿಗೆ ವ್ಯವಸ್ಥೆ ನಿರ್ವಹಣೆ ಮಾಹಿತಿ ಇಲ್ಲ. ಸಂಚಾರ ಸಂಬಂಧ ಮೂಲಭೂತವಾಗಿ ದೋಷಪೂರಿತವಾಗಿದೆ. ದುರ್ಬಲ ಸಂಚಾರ ಅಧ್ಯಯನ ಮತ್ತು ಪ್ರಾಥಮಿಕ ಡೇಟಾ ಕೊರತೆಯಿದೆ. ಬಿಎಂಟಿಸಿ, ಮೆಟ್ರೋ, ಉಪನಗರ ರೈಲುಗಳ ಅನುಕೂಲದ ಮಾಹಿತಿ ಉಲ್ಲೇಖಿಸಿಲ್ಲ.
ಹಳದಿ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ
ಇಂದು ಒಂದು ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣದಿಂದ10:15ಗಂಟೆಯಿಂದ ಹಳದಿ ಮಾರ್ಗದ ರೈಲುಗಳು 25 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತಿವೆ. ಪ್ರಯಾಣಿಕರು ಈ ಕುರಿತು ಗಮನಿಸಿ ಇದರಿಂದ ಆದ ಅನಾನುಕೂಲತೆಗೆ ಸಹಕರಿಸಬೇಕೆಂದು ವಿನಂತಿಸಲಾಗಿದೆ.
ಸಹಿ/-
ಸಾರ್ವಜನಿಕ ಸಂಪರ್ಕಧಿಕಾರಿ
ಬೆ.ಮೇ.ರೈ.ನಿ.ನಿ
ಆರ್‌ವಿ ಕಾಲೇಜ್ ರಸ್ತೆಯಿಂದ (RV College Road) ಬೊಮ್ಮಸಂದ್ರದವರೆಗೆ ಸಾಗುವ ಹಳದಿ ಮಾರ್ಗದ ಮೆಟ್ರೋ ಸೇವೆಗೆ ಇದೇ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
19.15 ಕಿ.ಮೀ ಉದ್ದದ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿದ್ದು 3 ಮೆಟ್ರೋ ಲೈನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಒಟ್ಟು ನಾಲ್ಕು ರೈಲುಗಳು ಈಗ ಸಂಚಾರ ನಡೆಸುತ್ತಿದ್ದು ಶೀಘ್ರವೇ 5ನೇ ರೈಲು ಸೇರ್ಪಡೆಯಾಗುವ ಸಾಧ್ಯತೆಯಿದೆ.
– ಇದೇ ತಿಂಗಳಾಂತ್ಯಕ್ಕೆ ಮತ್ತೊಂದು ರೈಲು ಕೂಡ ಆಗಮನ ಸಾಧ್ಯತೆ
ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ನೀಡಿದ್ದು, ಇದೇ ಸೆ.15ಕ್ಕೆ ನಾಲ್ಕನೇ ಮೆಟ್ರೋ ಟ್ರ್ಯಾಕಿಗಿಳಿಯಲಿದೆ. ಈ ಮೂಲಕ ಪ್ರಯಾಣಿಕರು ಕಾಯುವ ಸಮಸ್ಯೆ ಕಡಿಮೆಯಾಗಲಿದೆ.
ಯೆಲ್ಲೋ ಲೈನ್ (Yellow Line) ಮೆಟ್ರೋ ಆರಂಭವಾದರೂ ಕೂಡ ಈ ಭಾಗದ ಪ್ರಯಾಣಿಕರಿಗೆ ಸಮಸ್ಯೆ ತಪ್ಪಿರಲಿಲ್ಲ. ಕಡಿಮೆ ಸಂಖ್ಯೆಯ ಟ್ರೈನ್‌ಗಳ ಓಡಾಟದಿಂದಾಗಿ ಪ್ರಯಾಣಿಕರು ಕಾಯುವಂತಾಗಿತ್ತು. ಕಳೆದೊಂದು ತಿಂಗಳಿನಿಂದ ಕಷ್ಟನೋ, ಸುಖನೋ ಹೇಗೋ ಅಡ್ಜೆಸ್ಟ್ ಮಾಡಿಕೊಂಡು ಓಡಾಟ ಮಾಡುತ್ತಿದ್ದವರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ.ಇದನ್ನೂ ಓದಿ: ಇಂದಿನಿಂದ ಏಷ್ಯಾಕಪ್| ಭಾರತ – ಪಾಕ್ ಮೂರು ಬಾರಿ ಮುಖಾಮುಖಿ?
ಹೌದು. ಕಳೆದ ತಿಂಗಳು ಆ.10ರಂದು ಮಾರ್ಗ ಓಪನ್ ಆದರೂ, ಈ ಭಾಗದ ಪ್ರಯಾಣಿಕರು ಉಳಿದ ಮಾರ್ಗದ ಪ್ರಯಾಣಿಕರಂತೆ ಪೂರ್ಣಪ್ರಮಾಣದಲ್ಲಿ ಸಂಚಾರ ಮಾಡೋಕೆ ಸಾಧ್ಯ ಆಗಿರಲಿಲ್ಲ. ಒಂದು ಟ್ರೈನ್‌ನಿಂದ ಮತ್ತೊಂದು ಟ್ರೈನ್ ಓಡಾಟ ನಡುವಿನ ಸಮಯ 25 ನಿಮಿಷಗಳ ಗ್ಯಾಪ್ ಇತ್ತು. ಇದರಿಂದಾಗಿ ಪ್ರಯಾಣಿಕರು ಹೆಚ್ಚು ಕಾಯಬೇಕಿತ್ತು. ಜೊತೆಗೆ ಜನಸಂದಣಿ ಕೂಡ ಉಂಟು ಮಾಡಿತ್ತು. ಸದ್ಯ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೊನೆಗೂ ನಾಲ್ಕನೇ ರೈಲು ಇದೇ 15ರಿಂದ ಟ್ರ‍್ಯಾಕ್‌ಗೆ ಇಳಿಯಲಿದೆ.
ಈ ಬಗ್ಗೆ ಖುದ್ದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, ಈ ಸಂಬಂಧ ಎಲ್ಲಾ ಸಿದ್ಧತೆಗಳು ಕೂಡ ಆರಂಭವಾಗಿದೆ. ಸದ್ಯ ಈ ಟ್ರೈನ್ ಓಡಾಟ ಆರಂಭವಾದರೆ ಸದ್ಯ 25 ನಿಮಿಷ ಇರುವ ಟ್ರೈನ್‌ಗಳ ನಡುವಿನ ಓಡಾಟದ ಸಮಯ 15 ನಿಮಿಷಕ್ಕೆ ಇಳಿಕೆ ಸಾಧ್ಯತೆ ಇದೆ.
ಇನ್ನೂ ನಾಲ್ಕನೇ ಟ್ರೈನ್ ಗುಡ್ ನ್ಯೂಸ್ ಜೊತೆಗೆ, ಇದೇ ತಿಂಗಳ ಅಂತ್ಯಕ್ಕೆ ಮತ್ತೊಂದು ಟ್ರೈನ್ ಸೆಟ್ ಕೂಡ ಬೆಂಗಳೂರು ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಟ್ರೈನ್ ಪೂರೈಕೆ ಮಾಡುತ್ತಿರುವ ರೈಲು ತಯಾರಿಕಾ ಸಂಸ್ಥೆ ಟಿಟಿಗರ್ ಕೂಡ ಸಪ್ಲೈ ಮಾಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಒಂದೊಮ್ಮೆ ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್ ಎರಡು ಅಥವಾ ಮೂರನೇ ವಾರಕ್ಕೆ ಐದನೇ ಟ್ರೈನ್ ಕೂಡ ಟ್ರ‍್ಯಾಕ್‌ಗೆ ಇಳಿದು ಸಂಚಾರ ಆರಂಭಿಸುವ ಸಾಧ್ಯತೆ ಇದೆ.ಇದನ್ನೂ ಓದಿ: ಮೈಸೂರು | ಮಾಲ್‌ನ ನಾಲ್ಕನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವು
ಬೆಂಗಳೂರು: ಬಿಎಂಆರ್‌ಸಿಎಲ್ (BMRCL) ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದು, ಮುಂದಿನ ವಾರದಿಂದಲೇ ನಾಲ್ಕನೇ ರೈಲು ಟ್ರ‍್ಯಾಕಿಗಿಳಿಯಲಿದೆ.
ಹೌದು, ನಮ್ಮ ಮೆಟ್ರೋದ (Namma Metro) ಯೆಲ್ಲೋ ಲೈನ್‌ನಲ್ಲಿ (Yellow Line) ಪ್ರಸ್ತುತ ಕೇವಲ ಮೂರು ರೈಲುಗಳು ಮಾತ್ರ ಸಂಚರಿಸುತ್ತಿವೆ. ಈ ಹಿನ್ನೆಲೆ ಪ್ರಯಾಣಿಕರು ಒಂದು ಮೆಟ್ರೋಗಾಗಿ 25 ನಿಮಿಷ ಕಾಯಬೇಕಿದೆ. ಸದ್ಯ ಬಿಎಂಆರ್‌ಸಿಎಲ್ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಈಗಾಗಲೇ ನಾಲ್ಕನೇ ರೈಲು ಬೆಂಗಳೂರಿಗೆ (Bengaluru) ಆಗಮಿಸಿದ್ದು, ಸೆಪ್ಟೆಂಬರ್ ಎರಡನೇ ವಾರದಲ್ಲಿಯೇ ಟ್ರ‍್ಯಾಕಿಗಿಳಿದು ಕಾರ್ಯಾರಂಭಿಸಲಿದೆ. ಈ ಮೂಲಕ ಪ್ರತಿ 15 ರಿಂದ 20 ನಿಮಿಷಕ್ಕೊಂದು ರೈಲು ಸಂಚಾರ ಮಾಡಲಿವೆ.ಇದನ್ನೂ ಓದಿ: ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಕೆಜಿಎಫ್ ಬಾಬುಗೆ ಲೋಕಾಯುಕ್ತ ನೋಟಿಸ್
ಆ.11ರಿಂದ ನಮ್ಮ ಮೆಟ್ರೋದ ಮೂರು ಮಾರ್ಗದಲ್ಲಿ ಪ್ರತಿ ದಿನ 10 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದಾರೆ. ಆದರೆ ಯೆಲ್ಲೋ ಲೈನ್‌ನಲ್ಲಿ ಕೇವಲ ಮೂರು ರೈಲುಗಳಿರುವ ಕಾರಣದಿಂದಾಗಿ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ನಾಲ್ಕನೇ ರೈಲು ಸೇರ್ಪಡೆಗೊಂಡ ನಂತರ ಅಕ್ಟೋಬರ್ ತಿಂಗಳಲ್ಲಿ ಕೋಲ್ಕತ್ತಾದಿಂದ ಐದನೇ ರೈಲು ಕೂಡ ಆಗಮಿಸಲಿದೆ. ನಂತರ ಪ್ರತಿ ತಿಂಗಳು ಒಂದರಂತೆ ಮೆಟ್ರೋ ರೈಲು ಸೆಟ್ ನಮ್ಮ ಮೆಟ್ರೋಗೆ ಸೇರ್ಪಡೆಯಾಗಲಿದೆ.
2026ರ ಮಾರ್ಚ್ ವೇಳೆಗೆ ಯೆಲ್ಲೋ ಲೈನ್‌ನ ಎಲ್ಲಾ ರೈಲುಗಳು ಆಗಮಿಸಿ ಕಾರ್ಯಾರಂಭಿಸಲಿದ್ದು, ಆ ಬಳಿಕ ಗ್ರೀನ್ ಮತ್ತು ಪರ್ಪಲ್ ಲೈನ್ ರೀತಿಯಲ್ಲಿ ಯೆಲ್ಲೋ ಲೈನ್‌ನಲ್ಲಿಯೂ ಕೂಡ ಐದು ನಿಮಿಷಕ್ಕೊಂದರಂತೆ ರೈಲುಗಳು ಸಂಚರಿಸಲಿವೆ.ಇದನ್ನೂ ಓದಿ:‘ಮಹಾನ್’ ಚಿತ್ರ ಒಪ್ಪಿಕೊಂಡ ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ
– 2030ರಿಂದ 2031ಕ್ಕೆ ಆರೆಂಜ್ ಲೈನ್ ಪ್ರಾಜೆಕ್ಟ್ ವಿಸ್ತರಣೆ
ಬೆಂಗಳೂರು: ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದ ಬೆಂಗಳೂರಿನ ಆರೆಂಜ್ ಲೈನ್ ಮೆಟ್ರೋ (Orange Line Metro) ಸಂಬಂಧ ಕಹಿ ಸುದ್ದಿ ಹೊರ ಬಿದ್ದಿದೆ. ಈ ಮಾರ್ಗದ ಕಾಮಗಾರಿ ಆರಂಭಕ್ಕೂ ಮುನ್ನವೇ ಮುಕ್ತಾಯದ ಅವಧಿಯನ್ನು 2030ರಿಂದ 2031ಕ್ಕೆ ವಿಸ್ತರಣೆ ಮಾಡಲಾಗಿದೆ.
ಇತ್ತೀಚೆಗಷ್ಟೇ ಪ್ರಧಾನಿ ಮೋದಿ (PM Modi), ಹಳದಿ ಲೈನ್ ಮೆಟ್ರೋ ಉದ್ಘಾಟನೆ ಮಾಡಿ ಅದೇ ದಿನ ಆರೆಂಜ್ ಲೈನ್‌ಗೆ ಶಂಕುಸ್ಥಾಪನೆ ಮಾಡಿದ್ದರು. ಆದರೆ ಇದೀಗ ಬಹುನಿರೀಕ್ಷಿತ ಮಾರ್ಗದ ಕಾಮಗಾರಿ ಮುಕ್ತಾಯದ ಸಮಯಾವಕಾಶ ಮತ್ತೊಂದು ವರ್ಷ ಮುಂದಕ್ಕೆ ಹೋಗಿದೆ. ಈ ಮೂಲಕ 2030ಕ್ಕೆ ಮುಕ್ತಾಯವಾಗಬೇಕಿದ್ದ ಮಾರ್ಗಕ್ಕೆ ಹೆಚ್ಚುವರಿ ಒಂದು ವರ್ಷ ಕಾಯಬೇಕಾಗಿದೆ. ಇದನ್ನೂ ಓದಿ: ಮೋದಿ ಸಂಚಾರಕ್ಕೆ ಜಿನ್‌ಪಿಂಗ್ ಮೆಚ್ಚಿನ ಕಾರು ನೀಡಿದ ಚೀನಾ!
ಹೌದು, ಇದು ಬೆಂಗಳೂರಿನ (Bengaluru) ಬಹುನಿರೀಕ್ಷಿತ ಮಾರ್ಗಗಳಲ್ಲಿ ಒಂದಾದ ಕಿತ್ತಾಳೆ ಮಾರ್ಗದ ಬಗೆಗಿನ ಸುದ್ದಿ. ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆಯನ್ನು ಸಂಪರ್ಕಿಸುವ ಈ ಮಾರ್ಗದ ಕಾಮಗಾರಿಯ ಅವಧಿಯನ್ನು 2031ರ ಮೇ ತನಕ ವಿಸ್ತರಿಸಲಾಗಿದೆ. ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ, ಕಿತ್ತಳೆ ಮಾರ್ಗದ ಕಾಮಗಾರಿಗೆ ಐದೂವರೆ ವರ್ಷಗಳ ಕಾಲಾವಧಿ ತೆಗೆದುಕೊಳ್ಳಲಿದೆ. ಈ ವರ್ಷದ ನವೆಂಬರ್‌ನಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದ್ದು, ಡಿಸೆಂಬರ್-ಜನವರಿಯಲ್ಲಿ ಕಾಮಗಾರಿ ಆರಂಭವಾಗುವ ಗುರಿಯಿದೆ. ಆರಂಭದಲ್ಲಿ 2029 ಅಥವಾ 2030ರಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯಿತ್ತು. ಆದರೆ, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಎರಡೂ ಕಾರಿಡಾರ್‌ಗಳಲ್ಲಿ ಡಬಲ್ ಡೆಕ್ಕರ್ ಮಾರ್ಗ ನಿರ್ಮಾಣದ ನಿರ್ಧಾರದಿಂದ ಕಾಮಗಾರಿಯ ಅವಧಿ ಒಂದು ವರ್ಷ ಹೆಚ್ಚಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆ ಬಗ್ಗೆ ನಿಮಗೆಷ್ಟು ಗೊತ್ತು?
ಈ ವಿಳಂಬದಿಂದ ಯೋಜನೆಯ ವೆಚ್ಚವು 5% ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚಾಗುವ ಸಂಭವವಿದೆ. 44.65 ಕಿ.ಮೀ ಉದ್ದದ ಈ ಮಾರ್ಗವನ್ನ ಎರಡು ಫೇಸ್‌ಗಳಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕಾರಣ ಡಬ್ಬಲ್ ಡೆಕ್ಕರ್ ನಿರ್ಮಾಣ ಮಾಡಬೇಕಿರೋ ಹಿನ್ನೆಲೆ ಹೆಚ್ಚುವರಿ ಸಮಯ ಬೇಕಾಗಲಿದೆ. ಇದೇ ಕಾರಣಕ್ಕೆ ಸದ್ಯ ಮಾರ್ಗದ ಪ್ರಾಜೆಕ್ಟ್ ಮುಕ್ತಾಯ 2031ರ ಸಮಯ ತೆಗೆದುಕೊಳ್ಳಲಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 15,611 ಕೋಟಿ ರೂ. ಗಳಾಗಿದ್ದು, ವಿಳಂಬದಿಂದ ಈ ವೆಚ್ಚ 5% ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
2021ರಲ್ಲಿ ರಾಜ್ಯ ಸರ್ಕಾರ ಈ ಯೋಜನೆಗೆ ಒಪ್ಪಿಗೆ ನೀಡಿ ಸಮಗ್ರ ಯೋಜನಾ ವರದಿ(ಡಿಪಿಆರ್)ಅನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಕೇಂದ್ರ ಸರ್ಕಾರ ಕಳೆದ ವರ್ಷ ಅನುಮೋದನೆ ನೀಡಿತ್ತು. ಜಪಾನ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿಯಿಂದ 6,770 ಕೋಟಿ ರೂ. ಸಾಲದ ಒಪ್ಪಂದವು ನವೆಂಬರ್‌ನಲ್ಲಿ ಏರ್ಪಡಲಿದೆ. ಈ ಅನುದಾನವು ರೈಲ್ವೆ ಬೋಗಿಗಳ ವೆಚ್ಚ ಮತ್ತು ಇತರ ಕಾಮಗಾರಿಗಳಿಗೆ ಬಳಕೆಯಾಗಲಿದೆ.
ಒಟ್ಟಾರೆ ಮಾರ್ಗದ ನಿರ್ಮಾಣ ಕಾರ್ಯ ಸಂಪೂರ್ಣ ಮುಕ್ತಾಯವಾಗಬೇಕಾದರೆ, ಸದ್ಯದ ಅಂದಾಜಿನ ಪ್ರಕಾರ 2031ರ ಮೇ ಎನ್ನಲಾಗ್ತಿದೆ. ಆದರೆ ಯಲ್ಲೋ ಮಾರ್ಗದಲ್ಲಾದಂತ ಸಮಸ್ಯೆಯಾದ್ರೆ, ಹೆಚ್ಚುವರಿ ಸಮಯ ಮೀರಿ, ಇನ್ನಷ್ಟು ಸಮಯ ತೆಗೆದುಕೊಂಡರು ಅಚ್ಚರಿ ಪಡಬೇಕಿಲ್ಲ.
ಬೆಂಗಳೂರು: ನಮ್ಮ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಇದೀಗ ನಂದಿನಿ ಪಾರ್ಲರ್‌ಗಳು (Nandini Parlour) ಆರಂಭವಾಗಿದ್ದು, 175ಕ್ಕೂ ಅಧಿಕ ನಂದಿನಿ ಉತ್ಪನ್ನಗಳು (Nandini Products) ಗ್ರಾಹಕರಿಗೆ ಲಭ್ಯವಾಗುತ್ತಿವೆ.
ಹೌದು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಮ್ಮ ಹೆಮ್ಮೆಯ ನಂದಿನಿ ಪಾರ್ಲರ್‌ಗೆ ಅವಕಾಶ ಕೊಡದೇ ಅಮುಲ್ (Amul) ಪಾರ್ಲರ್‌ಗಳಿಗೆ ಅವಕಾಶ ಕೊಟ್ಟಿದೆ ಎಂದು ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು. ಇದೆಲ್ಲದರ ನಂತರ ಕಡೆಗೂ ನಂದಿನಿ ಪಾರ್ಲರ್‌ಗಳು ಮೆಟ್ರೋ ನಿಲ್ದಾಣದಲ್ಲಿ ಕಾರ್ಯಾರಂಭ ಮಾಡಿವೆ.ಇದನ್ನೂ ಓದಿ: ಕರ್ನಾಟಕದ ಗಡಿಯಿಂದ 19 ಕಿ.ಮೀ ದೂರದಲ್ಲಿ ನಿರ್ಮಾಣವಾಗಲಿದೆ ಹೊಸೂರು ವಿಮಾನ ನಿಲ್ದಾಣ!
ಕೆಎಂಎಫ್ (KMF) ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲದೇ ಇದ್ದದ್ದೇ ಇದಕ್ಕೆ ಕಾರಣ ಅನ್ನೋದು ಗೊತ್ತಾಗಿತ್ತು. ಬೆಂಗಳೂರು ಮೆಟ್ರೋ ರೈಲು ನಿಗಮ ಹಂಚಿಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪಕ್ಷಪಾತ ಮಾಡಿಲ್ಲ ಎಂದು ಸ್ಪಷ್ಟಪಡಿಸಿತ್ತು. ನಂತರ ನಂದಿನಿ ಪಾರ್ಲರ್‌ಗೆ 10 ಕಡೆ ಅವಕಾಶ ಮಾಡಿಕೊಡಲಾಗಿತ್ತು. ಈಗ ಕೊನೆಗೂ ಮೂರು ಕಡೆ ನಂದಿನಿ ಪಾರ್ಲರ್‌ಗಳು ಆರಂಭವಾಗಿದ್ದು, ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ.
ಪ್ರಾರಂಭಿಕವಾಗಿ ಮೂರು ಪಾರ್ಲರ್‌ಗಳನ್ನ ಸಿಎಂ, ಕೆಎಂಎಫ್ ಎಂಡಿ ಹಾಗೂ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಅವರು ನಾಡಪ್ರಭು ಕೆಂಪೇಗೌಡ ಮೆಟ್ರೋ (Nadaprabhu Kempegowda Metro Station) ನಿಲ್ದಾಣದಲ್ಲಿ ಉದ್ಘಾಟನೆ ಮಾಡಿದರು. ಅದರಂತೆ ಮೆಜೆಸ್ಟಿಕ್, ಕೋಣನಕುಂಟೆ ಮೆಟ್ರೋ ನಿಲ್ದಾಣ, ಸೆಂಟ್ರಲ್ ಕಾಲೇಜು ಬಳಿ ಪ್ರಾರಂಭಗೊಂಡಿವೆ.
ಇನ್ನು ಈ ನಂದಿನಿ ಪಾರ್ಲರ್‌ಗಳಲ್ಲಿ ಸುಮಾರು 175ಕ್ಕೂ ಹೆಚ್ಚು ನಂದಿನಿ ಉತ್ಪನ್ನಗಳು ದೊರೆಯುತ್ತಿವೆ. ಇದರ ಜೊತೆಗೆ ಹಲವು ಹೊಸ ಉತ್ಪನ್ನಗಳನ್ನೂ ಪರಿಚಯಿಸಲಾಗಿದೆ. ಗೌರಿ-ಗಣೇಶ ಹಬ್ಬ, ದಸರಾ ಹಬ್ಬಗಳಲ್ಲಿ ಹೆಚ್ಚಾಗಿ ನಂದಿನಿ ಉತ್ಪನ್ನ ಬಳಸಿ ನಮ್ಮ ರೈತರಿಗೆ ಪರೋಕ್ಷವಾಗಿ ಸಪೋರ್ಟ್ ಮಾಡಿ ಎಂದು ಕೆಎಂಎಫ್ ಎಂಡಿ ತಿಳಿಸಿದ್ದಾರೆ.
ಇನ್ನುಳಿದ 7 ಪಾರ್ಲರ್‌ಗಳನ್ನು ಆದಷ್ಟು ಬೇಗ ಶುರು ಮಾಡಲು ಸಿದ್ಧತೆತೆಗಳು ನಡೆಯುತ್ತಿದ್ದು, ಇನ್ನಷ್ಟು ನಿಲ್ದಾಣಗಳಲ್ಲಿ ನಂದಿನಿ ಪಾರ್ಲರ್ ಪ್ರಾರಂಭಿಸಲು ಕೆಎಂಎಫ್ ಜಾಗ ಕೇಳಲು ನಿರ್ಧರಿಸಿದೆ. ಜೊತೆಗೆ ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ 500ಕ್ಕೂ ಹೆಚ್ಚು ಪಾರ್ಲರ್ ಶುರು ಮಾಡುವ ಗುರಿಯನ್ನು ಕೆಎಂಎಫ್ ಹೊಂದಿದೆ.ಇದನ್ನೂ ಓದಿ: ತಿಮರೋಡಿ ಮನೆ ಮೇಲೆ ಎಸ್‌ಐಟಿ ದಾಳಿ – ಪೊಲೀಸರಿಂದ ತೀವ್ರ ಶೋಧ
ಬೆಂಗಳೂರು: ಯೆಲ್ಲೋ ಮಾರ್ಗ ಮೆಟ್ರೋ (Yellow Metro) ಓಪನ್ ಆಗಿ ಒಂದು ವಾರ ಕಳೆದಿದೆ. ಆದರೆ ಅರ್ಧಗಂಟೆಗೊಂದು ರೈಲು ಸಂಚಾರವಿರುವ ಕಾರಣ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಶೀಘ್ರವೇ ಈ ಸಮಸ್ಯೆಗೆ ಮುಕ್ತಿ ಸಿಗಲಿದ್ದು, 15 ನಿಮಿಷಕ್ಕೊಂದು ರೈಲು ಸಂಚರಿಸಲಿವೆ.
ಕಳೆದೊಂದು ವಾರದ ಹಿಂದಷ್ಟೇ ಬಹುನಿರೀಕ್ಷಿತ ಯೆಲ್ಲೋ ಲೈನ್ ಮೆಟ್ರೋ ಮಾರ್ಗ ಓಪನ್ ಆಗಿದೆ. ಮಾರ್ಗ ಓಪನ್ ಆದರೂ ಪೂರ್ಣ ಪ್ರಮಾಣದ ರೈಲುಗಳು ಬರದಿರುವ ಕಾರಣ ಅರ್ಧ ಗಂಟೆಗೊಮ್ಮೆ ಸಿಗುವ ರೈಲಿನಲ್ಲೇ ಸವಾರರು ಹೈರಾಣಾಗಿ ಓಡಾಟ ಮಾಡುತ್ತಿದ್ದಾರೆ. ಹೀಗಾಗಿ ಈ ಮಾರ್ಗದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದ್ದು, ಶೀಘ್ರದಲ್ಲೇ ಹೆಚ್ಚುವರಿ ರೈಲಿನ ಟೆಸ್ಟಿಂಗ್ ಆರಂಭಿಸಲಿದೆ.ಇದನ್ನೂ ಓದಿ: ಥಮಾ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ರಶ್ಮಿಕಾ ಮಂದಣ್ಣ
ಹೌದು. ಸದ್ಯ ಈ ಮಾರ್ಗದಲ್ಲಿ ಮೂರು ಸೆಟ್ ರೈಲು ಮಾತ್ರ ಓಡಾಟ ಮಾಡುತ್ತಿರುವ ಕಾರಣ ಪ್ರತಿ 25 ನಿಮಿಷಕ್ಕೊಂದು ರೈಲು ಸಂಚರಿಸುತ್ತಿವೆ. ಇದರಿಂದಲೇ ಈ ಮಾರ್ಗದಲ್ಲಿ ಅತಿ ಹೆಚ್ಚು ಜನಸಂದಣಿ ಉಂಟಾಗುತ್ತಿದೆ. ಸದ್ಯ ನಾಲ್ಕನೇ ರೈಲಿನ ಆರು ಬೋಗಿಗಳು ಹೆಬ್ಬಗೋಡಿ ಡಿಪೋ ತಲುಪಿವೆ. ರೈಲನ್ನು ಸ್ಥಿರ ಪರೀಕ್ಷೆಗಳಿಗಾಗಿ ಇನ್ಸ್ಪೆಕ್ಷನ್ ಬೇಲೈನ್‌ಗೆ ಕೊಂಡೊಯ್ಯಲಾಗಿದೆ. ಇದೇ ವಾರ ಡೈನಾಮಿಕ್ ಪರೀಕ್ಷೆಗಾಗಿ ಇದನ್ನು ಹಳದಿ ಮಾರ್ಗದ ಹಳಿಗಳಲ್ಲಿ ಓಡಿಸುವ ಸಾಧ್ಯತೆ ಇದೆ. ಕನಿಷ್ಠ ಎರಡು ವಾರಗಳ ಕಾಲ ಹೊಸ ರೈಲಿನ ಪರೀಕ್ಷೆಗೆ ಸಮಯ ಬೇಕಿದೆ. ಟ್ರ‍್ಯಾಕ್ ಪರೀಕ್ಷೆ ಸಂಪೂರ್ಣವಾಗಿ ಯಶಸ್ಸು ಕಂಡರೆ ಮುಂದಿನ ವಾರಂತ್ಯಕ್ಕೆ ಹೊಸ ರೈಲು ಕೂಡ ಮಾರ್ಗಕ್ಕೆ ಇಳಿಯುವ ಸಾಧ್ಯತೆ ಇದೆ.
ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನ ಸಾಲು ಸಾಲು ರಜೆಯಿದ್ದ ಹಿನ್ನೆಲೆ ಹೆಚ್ಚಿನವರು ಊರಿಗೆ ತೆರಳಿರುತ್ತಾರೆ. ಈ ಹಿನ್ನೆಲೆ ಸೋಮವಾರ ಬೆಳಿಗ್ಗೆ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 6:30ಕ್ಕೆ ಪ್ರಾರಂಭವಾಗುವ ಯೆಲ್ಲೋ ಮೆಟ್ರೋ ಸೋಮವಾರ ಬೆಳಿಗ್ಗೆ 5 ಗಂಟೆಯಿಂದಲೇ ಪ್ರಾರಂಭವಾಗಲಿದೆ. ಮೊದಲ ಮೆಟ್ರೋ ರೈಲು ಸೇವೆ ಆರ್.ವಿ ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳಿಂದ ಹೊರಡಲಿವೆ.
Attention passengers: Yellow Line Services to begin at 5:00 am on Monday 18th August 2025
Check the media release for more details. pic.twitter.com/s9ZmCQxQ2z
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸುಗಮಗೊಳಿಸಲು ಈ ಬೆಳಗಿನ ಸೇವೆಯ ಲಾಭವನ್ನು ಪಡೆದುಕೊಳ್ಳಬೇಕು. ಇನ್ನೂ ಈ ಹಿಂದೆ ಘೋಷಿಸಿದಂತೆ, ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದ ಮೆಟ್ರೋಗಳು ಸೋಮವಾರದಂದು ಸಾಮಾನ್ಯವಾಗಿ ಬೆಳಿಗ್ಗೆ 4:15 ರಿಂದಲೇ ಕಾರ್ಯನಿರ್ವಹಿಸುತ್ತವೆ. ಹಳದಿ ಮಾರ್ಗದ ಮೆಟ್ರೋ ಮಂಗಳವಾರ (ಆ.19) ಎಂದಿನಂತೆ ಬೆಳಿಗ್ಗೆ 6:30ಕ್ಕೆ ಕಾರ್ಯರಂಭಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ರಿಸಲ್ಟ್ ಪ್ರಕಟವಾದ ಬಳಿಕ ದೂರು ದಾಖಲಿಸದೇ ಆರೋಪ ಮಾಡೋದು ಸಂವಿಧಾನಕ್ಕೆ ಮಾಡೋ ಅವಮಾನ: ಚುನಾವಣಾ ಆಯೋಗ
– ಮೆಟ್ರೋ ಸೇವೆ ಕೊಡಲು ಬಿಜೆಪಿಗೆ ಇರುವ ಅರ್ಜೆಂಟ್ ಕಾಂಗ್ರೆಸ್‌ಗೆ ಇಲ್ಲ – ಸಂಸದ
ಬೆಂಗಳೂರು: ಬೆಂಗಳೂರಿನ ಮೆಟ್ರೋ (Bengaluru Metro) ಕನೆಕ್ಟಿವಿಟಿ ಸುಮಾರು 100 ಕಿ.ಮೀ ತಲುಪಲು ಅದಕ್ಕೆ ನರೇಂದ್ರ ಮೋದಿಯವರ (Narendra Modi) ಸರ್ಕಾರ ಮತ್ತು ಪ್ರಧಾನಿಯವರು ಬೆಂಗಳೂರಿನ ಮೂಲಭೂತ ಸೌಕರ್ಯಕ್ಕೆ ಕೊಟ್ಟ ಆದ್ಯತೆಯೇ ಕಾರಣ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2014ರಲ್ಲಿ ಮೋದಿಯವರು ಪ್ರಧಾನಿ ಆಗುವುದಕ್ಕೆ ಮೊದಲು ಬೆಂಗಳೂರಿನ ಮೆಟ್ರೋ ಕನೆಕ್ಟಿವಿಟಿ ಇದ್ದದ್ದು ಸುಮಾರು 7.5 ಕಿ.ಮೀ. ಆ.10ರಂದು ಯೆಲ್ಲೋ ಲೈನ್ ಉದ್ಘಾಟನೆಯ ನಂತರ ಬೆಂಗಳೂರಿನ ಮೆಟ್ರೋ ಕನೆಕ್ಟಿವಿಟಿ ಸುಮಾರು 100 ಕಿ.ಮೀ ತಲುಪಲಿದೆ. ದೆಹಲಿ ನಂತರ ಅತಿ ಹೆಚ್ಚು ಕನೆಕ್ಟಿವಿಟಿ ಇರುವ, ವಿಸ್ತರಣೆ ಆಗುತ್ತಿರುವ ಮೆಟ್ರೊ ಇದು ಎಂದು ವಿವರ ನೀಡಿದರು. ಇದನ್ನೂ ಓದಿ: ಟ್ರಂಪ್ ಸುಂಕ ಮೋದಿ ವಿದೇಶಾಂಗ ನೀತಿಯ ದುರಂತ: ಮಲ್ಲಿಕಾರ್ಜುನ ಖರ್ಗೆ ಆರೋಪ
ಪ್ರಧಾನಿಯವರನ್ನು ಯಾರು ಕರೆಸಿದರು ಎಂಬುದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಬೆಂಗಳೂರಿನ ಮೆಟ್ರೋ ಆದಷ್ಟು ಬೇಗ ಉದ್ಘಾಟನೆ ಆಗಬೇಕು, ವಿಳಂಬ ಸಲ್ಲದೆಂದು ಪ್ರಧಾನಿಯವರು ದಿನಾಂಕ ನಿಗದಿಪಡಿಸಿ ಬರುತ್ತಿದ್ದಾರೆ. ಅವರು ಕರ್ನಾಟಕ, ದೆಹಲಿ ಮಾತ್ರವಲ್ಲ ಭಾರತದ ಪ್ರಧಾನಿ. ಅವರ ಆಗಮಿಸುವಿಕೆಯನ್ನು ರಾಜ್ಯ ಸರ್ಕಾರ, ಬಿಜೆಪಿ, ಇಲ್ಲಿನ ಜನತೆ ಉತ್ಸಾಹ, ಹಬ್ಬದಂತೆ ಸ್ವಾಗತಿಸಲು ಸಜ್ಜಾಗಬೇಕಿದೆ. ಅಂತೆಯೇ ಅವರ ಸ್ವಾಗತ ಕಾರ್ಯಕ್ಕೆ ಎಲ್ಲರೂ ಸಜ್ಜಾಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿಯಿಂದ ಯೆಲ್ಲೋ ಮೆಟ್ರೋ ಲೈನ್ ಲೋಕಾರ್ಪಣೆ; ಪ್ರಧಾನಿ ಸ್ವಾಗತಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ
ಯೆಲ್ಲೋ ಲೈನಿನ ಮೆಟ್ರೊ ಬಗ್ಗೆ ಸಿಎಂ, ಡಿಸಿಎಂ ತಲೆ ಕೆಡಿಸಿಕೊಂಡಿಲ್ಲ.
ರಾಜ್ಯ ಸರ್ಕಾರ ಅದರಲ್ಲೂ ವಿಶೇಷವಾಗಿ ಉಪಮುಖ್ಯಮಂತ್ರಿಗಳು ಬುಧವಾರ ಯೆಲ್ಲೋ ಲೈನಿನ ಮೆಟ್ರೋದಲ್ಲಿ ಓಡಾಡಿದರು. ಇದು ಶೇ 50-50ರ ಯೋಜನೆ. ನಮ್ಮದೂ ದೊಡ್ಡ ಕೊಡುಗೆ ಇದೆ ಎಂದಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳು ಯೆಲ್ಲೋ ಲೈನಿನ ಮೆಟ್ರೋ ಬಗ್ಗೆ ಒಂದು ದಿನವೂ ತಲೆ ಕೆಡಿಸಿಕೊಂಡಿಲ್ಲ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು. ಆ.10ರಂದು ಪ್ರಧಾನಿಯವರು ಉದ್ಘಾಟಿಸಲು ಆಗಮಿಸುತ್ತಾರೆ ಎಂದ ತಕ್ಷಣ, ಬುಧವಾರ ಪ್ರಚಾರ ಗಿಟ್ಟಿಸಿಕೊಳ್ಳಲು ಟೂರ್ ಹೊಡೆಯಲು ಶುರು ಮಾಡಿದ್ದಾರೆ. ಈ ಮೆಟ್ರೋ ಲೈನಿನ ಕೆಲಸ 2018ರಲ್ಲಿ ಆರಂಭವಾಗಿತ್ತು. 2021ಕ್ಕೆ ಇದು ಪೂರ್ಣಗೊಳ್ಳಬೇಕಿತ್ತು. ಕೋವಿಡ್‌ನಿಂದ ಕೆಲವು ಸಮಸ್ಯೆಗಳಾದವು. ಭೂಮಿ ಸ್ವಾಧೀನದಲ್ಲೂ ಕೆಲವು ಸಮಸ್ಯೆಗಳಾದವು. ಆಗ ಕಾಂಗ್ರೆಸ್ಸಿನವರು, ಇನ್ನೊಬ್ಬರಾಗಲಿ ಸಹಾಯಕ್ಕೆ ಬರಲಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕಾರವಾರ| ಧಾರಾಕಾರ ಮಳೆಗೆ ಕುಸಿದ 2 ಮನೆಗಳು
ಪೂರ್ಣಾವಧಿ ಎಂ.ಡಿ ನೇಮಕ ಮಾಡಿರಲಿಲ್ಲ:
ಕೋವಿಡ್ ಅವಧಿಯಲ್ಲಿ ಯಡಿಯೂರಪ್ಪ ಅವರ ಸರ್ಕಾರವಿತ್ತು. ಕೋವಿಡ್ ಮಧ್ಯದಲ್ಲೂ ಸಿವಿಲ್ ಕೆಲಸಗಳು ನಮ್ಮ ಸರ್ಕಾರದ ಅವಧಿಯಲ್ಲಿ ನಡೆಯಿತು. ಕಾರ್ಮಿಕರನ್ನು ಕರೆಸಲು ಸಮಸ್ಯೆ ಆಗಿದ್ದು, ನಾವು ಆಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆವು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದರು. ಹೆಚ್ಚು ಕೆಲಸವೂ ಆಗಿತ್ತು. ಬಳಿಕ ಬೊಮ್ಮಾಯಿಯವರ ಅವಧಿಯಲ್ಲಿ 95% ಸಿವಿಲ್ ಕಾಮಗಾರಿ ನಾವೇ ಪೂರ್ಣಗೊಳಿಸಿದ್ದೆವು. ಇವರ ಸರ್ಕಾರವೇ ಇರಲಿಲ್ಲ; ಇವರ ಸರ್ಕಾರವು ಬಿಎಂಆರ್‌ಸಿಎಲ್‌ಗೆ ಒಬ್ಬ ಪೂರ್ಣಾವಧಿ ಎಂ.ಡಿ ನೇಮಕಕ್ಕೆ ಮುಂದಾಗಲಿಲ್ಲ ಎಂದು ದೂರಿದರು. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು
ಕಳೆದ ವರ್ಷ ಜನವರಿಯಲ್ಲಿ 3 ತಿಂಗಳ ಹೋರಾಟದ ಬಳಿಕ ರಾಜ್ಯ ಸರ್ಕಾರವು ಮೊದಲ ಬಾರಿ ಪೂರ್ಣಾವಧಿ ಎಂ.ಡಿಯನ್ನು ಬೆಂಗಳೂರು ಮೆಟ್ರೋಗೆ ನೇಮಕ ಮಾಡಿತು. ಕೋಚ್ ಉತ್ಪಾದನಾ ಪ್ರದೇಶಕ್ಕೆ ನಾನು 3 ಬಾರಿ ಹೋಗಿ ಬಂದಿದ್ದೇನೆ. ಪೂರ್ಣಾವಧಿ ಎಂ.ಡಿ ಇಲ್ಲದ ಕಾರಣ ಎಂ.ಡಿ ಬಂದಿರಲಿಲ್ಲ. ರಾಜ್ಯ ಸರ್ಕಾರ ಬುಧವಾರ ಸಬರ್ಬನ್ ರೈಲಿಗೆ ಇನ್ನೊಬ್ಬ ಅಧಿಕಾರಿಯನ್ನು ನೇಮಿಸಿದೆ. ಅವರಿಗೆ ಇನ್ನೊಂದು ಇಲಾಖೆಯ ಪ್ರಭಾರ ಹುದ್ದೆ ಕೊಟ್ಟಿದೆ. ಸಬರ್ಬನ್ ರೈಲಿನ 4 ಕಾರಿಡಾರ್ ಕೆಲಸ ಇವತ್ತು ನಿಂತಿದೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಟ್ರಂಪ್ ಸುಂಕ ಶಾಕ್ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್ ಭೇಟಿ
ವೀಸಾ ಸಮಸ್ಯೆ ಬಗ್ಗೆಯೂ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮಾತನಾಡಿಲ್ಲ, ಟ್ವೀಟ್ ಮಾಡಿಲ್ಲ. ಕೇಂದ್ರದ ಸಚಿವರ ಜೊತೆಗೆ ಮಾತನಾಡಿಲ್ಲ. ಆರ್‌ಸಿಬಿ ಕ್ರಿಕೆಟ್ ಮ್ಯಾಚ್ ಗೆದ್ದಾಗ ಇವರೇ ಏನೋ ಸಿಕ್ಸರ್, ಫೋರ್ ಹೊಡೆದ ರೀತಿ ರಾಜ್ಯ ಸರ್ಕಾರ ಪೋಸ್ ಕೊಟ್ಟಿತ್ತು ಎಂದು ಟೀಕಿಸಿದರು. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು
6 ಬಾರಿ ಕಾಗೆ ಹಾರಿಸಿದರು:
ಕ್ರಿಕೆಟ್ ಪಂದ್ಯದ ಅಷ್ಟೊಂದು ಕ್ರೆಡಿಟ್ ತೆಗೆದುಕೊಳ್ಳಲು ನಿಂತವರು ಇನ್ನು ಮೆಟ್ರೋದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಬರದೇ ಇರುತ್ತಾರಾ ಎಂದು ಕೇಳಿದರು. ಭೂಸ್ವಾಧೀನ, ವೀಸಾ ಸಮಸ್ಯೆಗಳು ಇದ್ದಾಗ ನೀವೆಲ್ಲಿದ್ದೀರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಉದ್ಘಾಟನೆಗೆ ಇನ್ನು 15 ದಿನ, ಇನ್ನು ಒಂದು ತಿಂಗಳು ಎಂದು 6 ಬಾರಿ ಕಾಗೆ ಹಾರಿಸಿದ್ದಾರೆ. ಮೊನ್ನೆ ನಾವೆಲ್ಲರೂ ಯೆಲ್ಲೋ ಲೈನಿನ ಪ್ರದೇಶದ 7 ಶಾಸಕರು, ಇಬ್ಬರು ಸಂಸದರು, ನಮ್ಮ ಜಿಲ್ಲಾಧ್ಯಕ್ಷರು, ನೂರಾರು ಜನ ಸಾರ್ವಜನಿಕರು ಸೇರಿ ಪ್ರಯತ್ನ ಮಾಡಿ ಹೋರಾಟ ಮಾಡಿ ಗಲಾಟೆ ಮಾಡಿದಾಗ ಆಗಸ್ಟ್ 15ರೊಳಗೆ ಮಾಡುತ್ತೇವೆ ಎಂದಿದ್ದರು ಎಂದು ವಿವರಿಸಿದರು. ಇದನ್ನೂ ಓದಿ: ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್