Tag: BMC

  • ಸತ್ಯಕ್ಕಾಗಿ ಸರ್ಕಾರದ ವಿರುದ್ಧ ಮಗಳ ಹೋರಾಟ: ಕಂಗನಾ ಪೋಷಕರು

    ಸತ್ಯಕ್ಕಾಗಿ ಸರ್ಕಾರದ ವಿರುದ್ಧ ಮಗಳ ಹೋರಾಟ: ಕಂಗನಾ ಪೋಷಕರು

    – ಬಿಜೆಪಿ ಸೇರ್ಪಡೆಯಾದ ಕಂಗನಾ ಕುಟುಂಬ

    ಮುಂಬೈ: ಜನರು ಕಂಗನಾ ರಣಾವತ್ ಅವರನ್ನು ಬೆಂಬಲಿಸುತ್ತಿರುವುದನ್ನು ಕಂಡು ತುಂಬಾ ಸಂತೋಷವಾಯಿತು. ಸತ್ಯಕ್ಕಾಗಿ ಸರ್ಕಾರವನ್ನೇ ಎದರು ಹಾಕಿಕೊಂಡು ಅವಳು ಮಾಡುತ್ತಿರುವ ಹೋರಾಟವನ್ನು ಕಂಡು ಹೆಮ್ಮೆಯಾಗುತ್ತಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ತಾಯಿ ಆಶಾ ರಣಾವತ್ ಹಾಗೂ ತಂದೆ ಅಮರ್‍ದೀಪ್ ರಣಾವತ್ ಭಾವುಕರಾದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಜನರು ಮಾತ್ರವಲ್ಲ ಕರ್ಣಿ ಸೇನೆ ಹಾಗೂ ಬಿಜೆಪಿ ಸೇರಿ ಹಲವು ರಾಜಕೀಯ ಪಕ್ಷಗಳು ಸಹ ಕಂಗನಾ ರಣಾವತ್ ಅವರಿಗೆ ಬೆಂಬಲ ನೀಡುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ. ಸತ್ಯಕ್ಕಾಗಿ ಹೋರಾಡುತ್ತಿರುವ ಮಗಳ ಕುರಿತು ಹೆಮ್ಮೆಯಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ

    ದಶಕಗಳಿಂದ ನಮ್ಮ ಕುಟುಂಬ ಕಾಂಗ್ರೆಸ್‍ಗೆ ಬೆಂಬಲ ನೀಡುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ನಮಗೆ ತುಂಬಾ ಸಹಾಯ ಮಾಡಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞರಾಗಿದ್ದೇವೆ. ಹೀಗಾಗಿ ನಾವು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದೇವೆ ಎಂದು ಆಶಾ ರಣಾವತ್ ಘೋಷಿಸಿದ್ದಾರೆ.

    ವಿಡಿಯೋ ನೋಡಿದ ಕಂಗನಾ ರಣಾವತ್ ಅವರು ತುಂಬಾ ಭಾವಕರಾಗಿದ್ದು, ರೀಟ್ವೀಟ್ ಮಾಡಿ, ಅವರು ನನ್ನ ಕಚೇರಿ ಧ್ವಂಸಗೊಳಿಸಿದಾಗ ಅಮ್ಮನ ಎಚ್ಚರಿಕೆ ನೀಡುತ್ತಿದ್ದ ಸಂದರ್ಭ ನನ್ನ ಕಣ್ಣ ಮುಂದೆ ಬಂತು. ಅಂದಿನಿಂದ ಅವಳ ಕರೆಗಳನ್ನು ನಾನು ಸ್ವೀಕರಿಸಿರಲಿಲ್ಲ. ಇದು ನನಗೆ ಒಂದು ಕ್ಷಣ ಕಣ್ಣ ಮುಂದೆ ಬಂದು ಹೋಯಿತು. ಇಡೀ ವಿಷಯವನ್ನು ಅವರು ಕೊಂಡೊಯ್ದ ರೀತಿ ತುಂಬಾ ಆಶ್ಚರ್ಯವಾಯಿತು ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಕಂಗನಾ ಮೇಲೆ ವೈಯಕ್ತಿಕ ದ್ವೇಷವಿಲ್ಲ: ಶಿವಸೇನೆ

    ಕಂಗನಾ ರಣಾವತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಕ್ಕೆ ಬುಧವಾರವಷ್ಟೇ ಟ್ವೀಟ್ ಮಾಡಿದ್ದ ಆಶಾ ರಣಾವತ್, ಉದ್ಧವ್ ಠಾಕ್ರೆ ಇಂದು ನನ್ನ ಮಗಳು ಕಂಗನಾಳ ಕಚೇರಿಯನ್ನು ಮಾತ್ರ ನೀವು ಪುಡಿ ಮಾಡಿಲ್ಲ. ದಿವಂಗತ ಬಾಳಾ ಸಾಹೇಬ್ ಠಾಕ್ರೆಯವರ ಆತ್ಮವನ್ನು ಪುಡಿ ಮಾಡಿದ್ದೀರಿ ಎಂದು ಕಿಡಿ ಕಾರಿದ್ದರು.

    ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಕಟ್ಟಡ ನೆಲಸಮಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನ ಬಾಂಬೆ ಹೈಕೋರ್ಟ್ ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ. ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಎಂಸಿ(ಬೃಹತ್ ಮುಂಬೈ ಕಾರ್ಪೋರೇಷನ್) ಪರ ವಕೀಲರು, ನ್ಯಾಯಾಲಯ ಬುಧವಾರ ಆದೇಶ ನೀಡಿದ ನಂತರ ಕಟ್ಟಡ ನೆಲಸಮ ಮಾಡುವ ಕೆಲಸಗಳನ್ನು ನಿಲ್ಲಿಸಲಾಗಿದೆ. ಆದ್ರೆ ಸದ್ಯವಿರುವ ಸ್ಥಿತಿಯಲ್ಲಿಯೇ ಕಟ್ಟಡವಿರುವಂತೆ ಇರಬೇಕು ಎಂದರು. ಇತ್ತ ಕಂಗನಾ ಪರ ವಕೀಲರಾದ ರಿಜ್ವಾನ್ ಸಿದ್ಧಿಕಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನ ಒಟ್ಟಾಗಿಸಬೇಕಿದೆ. ನನ್ನ ಕಕ್ಷಿದಾರರು ಬುಧವರ ಮುಂಬೈಗೆ ಆಗಮಿಸಿದ್ದಾರೆ. ಫೈಲ್ ಸಿದ್ಧ ಮಾಡಿಕೊಳ್ಳಲು ನ್ಯಾಯಾಲಯ ಸಮಯ ನೀಡಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು.

    ಕಂಗನಾ ಪರ ವಕೀಲರ ವಾದ ಪ್ರತಿವಾದ ಮಂಡಿಸಿದ ಬಿಎಂಸಿ ಪರ ವಕೀಲರು, ಸೋಮವಾರದೊಳಗೆ ತಮ್ಮ ಅರ್ಜಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಾಗಿ ರಿಜ್ವಾನ್ ಸಿದ್ಧಿಕಿ, ಬದಲಾವಣೆ ಕುರಿತು ಪಿಸಿಶನ್ ಫೈಲ್ ಮಾಡಬೇಕು ಎಂದರು. ವಕೀಲ ಸಿದ್ಧಿಕಿ, ಕಂಗನಾ ವರ ಮನೆಗೆ ನೀರು ಮತ್ತು ವಿದ್ಯುತ್ ಸಂಪರ್ಕವಿಲ್ಲ ಎಂದರು. ಕೊನೆನೆಗೆ ನ್ಯಾಯಾಲಯದ ಅರ್ಜಿ ವಿಚಾರಣೆಯನ್ನ ಸೆ.22ಕ್ಕೆ ಮುಂದೂಡಿ, ಮುಂದಿನ ಆದೇಶದವರೆಗೂ ಕಟ್ಟಡ ನೆಲಸಮ ಮಾಡುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ಇದನ್ನೂ ಓದಿ:

    ಕಟ್ಟಡದ ಒಳವಿನ್ಯಾಸ ನೆಲಸಮ ಬಳಿಕ ಇಂದು ತಮ್ಮ ಕಚೇರಿಗೆ ಕಂಗನಾ ಭೇಟಿ ನೀಡಿದ್ದರು. 10 ನಿಮಿಷ ಕಚೇರಿಯೊಳಗಿದ್ದ ಕಂಗನಾ ನಿರಾಶೆಗೊಂಡು ಹೊರ ಬಂದಿದ್ದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಕಾರ್ ಹತ್ತಿ ಹೊರಟರು. ಇದನ್ನೂ ಓದಿ: ಶಿವಸೇನೆ ಧಮ್ಕಿ -ನಟಿ ಕಂಗನಾ ರಣಾವತ್‍ಗೆ ವೈ ದರ್ಜೆಯ ಭದ್ರತೆ

    ಇತ್ತ ಶಿವಸೇನೆಯ ಸಂಸದ ಸಂಜಯ್ ರಾವತ್, ಈ ಘಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷಕ್ಕೆ ಮತ್ತು ಕಂಗನಾಗೂ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ. ಬಿಎಂಸಿ ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳುವ ಮೂಲಕ ಪಕ್ಷ ಮತ್ತು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೇಳಿ ಬಂದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

    ಅಹಂಕಾರ ನೆಲಸಮ ಆಗುತ್ತೆ: ಬುಧವಾರ ಮುಂಬೈಗೆ ವೈ ದರ್ಜೆಯಲ್ಲಿ ಬಂದಿಳಿದ ಕಂಗನಾ ರಣಾವತ್ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಉದ್ಧವ್ ಠಾಕ್ರೆ ಫಿಲಂ ಮಾಫಿಯಾ ಜೊತೆ ಶಾಮೀಲಾಗಿ ಮನೆ ನಾಶ ಮಾಡಿ ನನ್ನ ವಿರುದ್ಧ ಸೇಡು ತೀರಿಸಿಕೊಂಡೆ ಎಂದು ತಿಳಿದುಕೊಂಡಿದ್ದೀಯಾ?. ಇಂದು ನನ್ನ ಮನೆ ನೆಲಸಮ ಆಗಿರಬಹುದು, ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ. ಇದು ಸಮಯದಾಟ, ಪ್ರತಿ ಬಾರಿ ಒಂದೇ ಆಗಿರಲ್ಲ. ಕಾಶ್ಮೀರಿ ಪಂಡಿತರ ಮೇಲೆ ಏನಾಗುತ್ತಿತ್ತು ಎಂಬುವುದು ಇಂದು ನನಗೆ ಅರ್ಥವಾಗಿದೆ. ನಾನು ಕೇವಲ ಅಯೋಧ್ಯೆ ಮಾತ್ರವಲ್ಲ, ಕಾಶ್ಮೀರದ ಕುರಿತು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಮಾತು ನೀಡುತ್ತಾನೆ. ಸಿನಿಮಾಗಳ ಮೂಲಕ ದೇಶದ ಜನರನ್ನ ಎಚ್ಚರಿಸುವ ಕೆಲಸ ಮಾಡುತ್ತೇನೆ. ಈ ರೀತಿ ಕೆಲಸಗಳ ನಡೆಯುತ್ತಿರುವ ಬಗ್ಗೆ ಕೇಳಿದ್ದೆ. ಆದ್ರೆ ಇಂದು ನನ್ನೊಂದಿಗೆ ನಡೆದಿದೆ. ಉದ್ಧವ್ ಠಾಕ್ರೆಯ ಕ್ರೂರತ್ವದ ಭಯೋತ್ಪಾದನೆ ನನ್ನೊಂದಿಗೆ ನಡೆದಿರೋದು ಒಳ್ಳೆಯದು ಆಯ್ತು. ಕಾರಣ ಇದಕ್ಕೆ ಕೆಲ ಮಹತ್ವದ ಕಾರಣವಿದೆ. ಜೈ ಹಿಂದ್, ಜೈ ಮಹಾರಾಷ್ಟ್ರ.

    https://www.youtube.com/watch?v=NTzTq3q2OAA

  • ಕಂಗನಾ ಕಚೇರಿ ನೆಲಸಮ ಅರ್ಜಿ- ಸೆ.22ಕ್ಕೆ ವಿಚಾರಣೆ ಮುಂದೂಡಿಕೆ

    ಕಂಗನಾ ಕಚೇರಿ ನೆಲಸಮ ಅರ್ಜಿ- ಸೆ.22ಕ್ಕೆ ವಿಚಾರಣೆ ಮುಂದೂಡಿಕೆ

    -ಕೋರ್ಟ್ ನಲ್ಲಿ ಬಿಎಂಸಿ ಹೇಳಿದ್ದೇನು?
    -ನೆಲಸಮದಿಂದ ಕಂಗನಾಗೆ ನಷ್ಟವಾಗಿದೆಷ್ಟು?

    ಮುಂಬೈ: ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ ಕಟ್ಟಡ ನೆಲಸಮಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನ ಬಾಂಬೆ ಹೈಕೋರ್ಟ್ ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ.

    ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಎಂಸಿ(ಬೃಹತ್ ಮುಂಬೈ ಕಾರ್ಪೋರೇಷನ್) ಪರ ವಕೀಲರು, ನ್ಯಾಯಾಲಯ ಬುಧವಾರ ಆದೇಶ ನೀಡಿದ ನಂತರ ಕಟ್ಟಡ ನೆಲಸಮ ಮಾಡುವ ಕೆಲಸಗಳನ್ನು ನಿಲ್ಲಿಸಲಾಗಿದೆ. ಆದ್ರೆ ಸದ್ಯವಿರುವ ಸ್ಥಿತಿಯಲ್ಲಿಯೇ ಕಟ್ಟಡವಿರುವಂತೆ ಇರಬೇಕು ಎಂದರು. ಇತ್ತ ಕಂಗನಾ ಪರ ವಕೀಲರಾದ ರಿಜ್ವಾನ್ ಸಿದ್ಧಿಕಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನ ಒಟ್ಟಾಗಿಸಬೇಕಿದೆ. ನನ್ನ ಕಕ್ಷಿದಾರರು ಬುಧವರ ಮುಂಬೈಗೆ ಆಗಮಿಸಿದ್ದಾರೆ. ಫೈಲ್ ಸಿದ್ಧ ಮಾಡಿಕೊಳ್ಳಲು ನ್ಯಾಯಾಲಯ ಸಮಯ ನೀಡಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು.

    ಕಂಗನಾ ಪರ ವಕೀಲರ ವಾದ ಪ್ರತಿವಾದ ಮಂಡಿಸಿದ ಬಿಎಂಸಿ ಪರ ವಕೀಲರು, ಸೋಮವಾರದೊಳಗೆ ತಮ್ಮ ಅರ್ಜಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಾಗಿ ರಿಜ್ವಾನ್ ಸಿದ್ಧಿಕಿ, ಬದಲಾವಣೆ ಕುರಿತು ಪಿಸಿಶನ್ ಫೈಲ್ ಮಾಡಬೇಕು ಎಂದರು. ವಕೀಲ ಸಿದ್ಧಿಕಿ, ಕಂಗನಾ ವರ ಮನೆಗೆ ನೀರು ಮತ್ತು ವಿದ್ಯುತ್ ಸಂಪರ್ಕವಿಲ್ಲ ಎಂದರು. ಕೊನೆನೆಗೆ ನ್ಯಾಯಾಲಯದ ಅರ್ಜಿ ವಿಚಾರಣೆಯನ್ನ ಸೆ.22ಕ್ಕೆ ಮುಂದೂಡಿ, ಮುಂದಿನ ಆದೇಶದವರೆಗೂ ಕಟ್ಟಡ ನೆಲಸಮ ಮಾಡುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ಇದನ್ನೂ ಓದಿಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ

    ಮಾಧ್ಯಮಗಳ ಜೊತೆ ಮಾತನಾಡಿದ ವಕೀಲ ರಿಜ್ವಾನ್ ಸಿದ್ಧಿಕಿ, ಕನಸಿನ ಕಚೇರಿ ಕಟ್ಟಡ ನೆಲಸಮ ಮಾಡಿದ್ದರಿಂದ ಕಂಗನಾ ನೊಂದುಕೊಂಡಿದ್ದಾರೆ. ಆದ್ರೆ ಕಂಗನಾ ಓರ್ವ ಶಕ್ತಿಶಾಲಿ ಮಹಿಳೆಯಾಗಿದ್ದು, ಕಾನೂನಿನಲ್ಲಿ ನಂಬಿಕೆ ಹೊಂದಿದ್ದಾರೆ. ಬಿಎಂಸಿ ಅಕ್ರಮ ಪ್ರವೇಶ ನಡೆಸಿ ಕಟ್ಟಡ ಒಳಾಂಗಣವನ್ನ ಕೆಡವಿದೆ. ಬಿಎಂಸಿ ನಡೆಸಿದ ಕಾರ್ಯಚರಣೆಯಿಂದ ಕಂಗನಾ ಅವರಿಗೆ ಅಂದಾಜು 2 ಕೋಟಿ ರೂ. ನಷ್ಟವಾಗಿದೆ. ಬಿಎಂಸಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಆ್ಯಕ್ಷನ್ ತೆಗೆದುಕೊಳ್ಳುವದರ ಕುರಿತು ಚಿಂತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿವಸೇನಾ ಅಲ್ಲ ಸೋನಿಯಾ ಸೇನಾ – ಮಹಾ ಸರ್ಕಾರದ ಮೇಲೆ ಮತ್ತೆ ಕಂಗನಾ ಕಿಡಿ

    ಕಟ್ಟಡದ ಒಳವಿನ್ಯಾಸ ನೆಲಸಮ ಬಳಿಕ ಇಂದು ತಮ್ಮ ಕಚೇರಿಗೆ ಕಂಗನಾ ಭೇಟಿ ನೀಡಿದ್ದರು. 10 ನಿಮಿಷ ಕಚೇರಿಯೊಳಗಿದ್ದ ಕಂಗನಾ ನಿರಾಶೆಗೊಂಡು ಹೊರ ಬಂದಿದ್ದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಕಾರ್ ಹತ್ತಿ ಹೊರಟರು. ಇದನ್ನೂ ಓದಿ: ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ

    ಇತ್ತ ಶಿವಸೇನೆಯ ಸಂಸದ ಸಂಜಯ್ ರಾವತ್, ಈ ಘಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷಕ್ಕೆ ಮತ್ತು ಕಂಗನಾಗೂ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ. ಬಿಎಂಸಿ ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳುವ ಮೂಲಕ ಪಕ್ಷ ಮತ್ತು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೇಳಿ ಬಂದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಕಂಗನಾ ಮೇಲೆ ವೈಯಕ್ತಿಕ ದ್ವೇಷವಿಲ್ಲ: ಶಿವಸೇನೆ

    ಅಹಂಕಾರ ನೆಲಸಮ ಆಗುತ್ತೆ: ಬುಧವಾರ ಮುಂಬೈಗೆ ವೈ ದರ್ಜೆಯಲ್ಲಿ ಬಂದಿಳಿದ ಕಂಗನಾ ರಣಾವತ್ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಉದ್ಧವ್ ಠಾಕ್ರೆ ಫಿಲಂ ಮಾಫಿಯಾ ಜೊತೆ ಶಾಮೀಲಾಗಿ ಮನೆ ನಾಶ ಮಾಡಿ ನನ್ನ ವಿರುದ್ಧ ಸೇಡು ತೀರಿಸಿಕೊಂಡೆ ಎಂದು ತಿಳಿದುಕೊಂಡಿದ್ದೀಯಾ?. ಇಂದು ನನ್ನ ಮನೆ ನೆಲಸಮ ಆಗಿರಬಹುದು, ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ. ಇದು ಸಮಯದಾಟ, ಪ್ರತಿ ಬಾರಿ ಒಂದೇ ಆಗಿರಲ್ಲ. ಕಾಶ್ಮೀರಿ ಪಂಡಿತರ ಮೇಲೆ ಏನಾಗುತ್ತಿತ್ತು ಎಂಬುವುದು ಇಂದು ನನಗೆ ಅರ್ಥವಾಗಿದೆ. ನಾನು ಕೇವಲ ಅಯೋಧ್ಯೆ ಮಾತ್ರವಲ್ಲ, ಕಾಶ್ಮೀರದ ಕುರಿತು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಮಾತು ನೀಡುತ್ತಾನೆ. ಸಿನಿಮಾಗಳ ಮೂಲಕ ದೇಶದ ಜನರನ್ನ ಎಚ್ಚರಿಸುವ ಕೆಲಸ ಮಾಡುತ್ತೇನೆ. ಈ ರೀತಿ ಕೆಲಸಗಳ ನಡೆಯುತ್ತಿರುವ ಬಗ್ಗೆ ಕೇಳಿದ್ದೆ. ಆದ್ರೆ ಇಂದು ನನ್ನೊಂದಿಗೆ ನಡೆದಿದೆ. ಉದ್ಧವ್ ಠಾಕ್ರೆಯ ಕ್ರೂರತ್ವದ ಭಯೋತ್ಪಾದನೆ ನನ್ನೊಂದಿಗೆ ನಡೆದಿರೋದು ಒಳ್ಳೆಯದು ಆಯ್ತು. ಕಾರಣ ಇದಕ್ಕೆ ಕೆಲ ಮಹತ್ವದ ಕಾರಣವಿದೆ. ಜೈ ಹಿಂದ್, ಜೈ ಮಹಾರಾಷ್ಟ್ರ ಇದನ್ನೂ ಓದಿ: ಶಿವಸೇನೆ ಧಮ್ಕಿ -ನಟಿ ಕಂಗನಾ ರಣಾವತ್‍ಗೆ ವೈ ದರ್ಜೆಯ ಭದ್ರತೆ

  • ಶಿವಸೇನಾ ಅಲ್ಲ ಸೋನಿಯಾ ಸೇನಾ – ಮಹಾ ಸರ್ಕಾರದ ಮೇಲೆ ಮತ್ತೆ ಕಂಗನಾ ಕಿಡಿ

    ಶಿವಸೇನಾ ಅಲ್ಲ ಸೋನಿಯಾ ಸೇನಾ – ಮಹಾ ಸರ್ಕಾರದ ಮೇಲೆ ಮತ್ತೆ ಕಂಗನಾ ಕಿಡಿ

    – ಅಧಿಕಾರಕ್ಕಾಗಿ ಬಾಳಾಸಾಹೇಬರ ಸಿದ್ಧಾಂತವನ್ನೇ ಮಾರಿದ್ದಾರೆ

    ಮುಂಬೈ: ಮಹಾರಾಷ್ಟ್ರ ಸರ್ಕಾರ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಜಟಾಪಟಿ ಮುಂದುವರೆದಿದ್ದು, ಇಂದು ಕೂಡ ಬಾಲಿವುಡ್ ಕ್ವೀನ್ ಕಂಗನಾ ಶಿವಸೇನಾದ ಮೇಲೆ ಕಿಡಿಕಾರಿದ್ದಾರೆ.

    ಬುಧವಾರ ಬಿಎಂಸಿ (ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಶನ್) ಕಂಗನಾ ಅವರ ಮನೆ ಮತ್ತು ಕಚೇರಿಯನ್ನು ಒಡೆದು ಹಾಕಿತ್ತು. ಈಗ ಈ ಪ್ರಕರಣ ಕೋರ್ಟಿನಲ್ಲಿದ್ದು, ಇಂದು ಇದರ ಪ್ರಕರಣ ವಿಚಾರಣೆ ನಡೆಯಲಿದೆ. ಇದಕ್ಕೂ ಮುನ್ನಾ ಕಂಗನಾ ಅವರು, ಶಿವಸೇನಾವನ್ನು ಸೋನಿಯಾ ಸೇನೆ ಎಂದು ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಂಗನಾ, ಯಾವ ಸಿದ್ಧಾಂತವನ್ನು ಇಟ್ಟುಕೊಂಡು ಬಾಳಾ ಸಾಹೇಬ್ ಠಾಕ್ರೆ ಅವರು ಶಿವಸೇನಾವನ್ನು ಕಟ್ಟಿದರೋ, ಇಂದು ಅಧಿಕಾರಕ್ಕಾಗಿ ಅದೇ ಸಿದ್ಧಾಂತವನ್ನು ಮಾರಾಟ ಮಾಡುವ ಮೂಲಕ ಶಿವಸೇನಾ ಈಗ ಸೋನಿಯಾ ಸೇನೆ ಆಗಿದೆ. ಗೂಂಡಾಗಳು ನನ್ನ ಮನೆಯನ್ನು ಒಡೆದು ಹಾಕಿದ್ದಾರೆ. ಅವರನ್ನು ನಾಗರಿಕ ಅಧಿಕಾರಿಗಳು ಎಂದು ಕರೆಯಬೇಡಿ, ಅದು ಸಂವಿಧಾನದಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಿನ್ನೆಯಿಂದ ಸರಣಿ ಟ್ವೀಟ್ ಮಾಡುತ್ತಿರುವ ಕಂಗನಾ, ಇಂದು ನನ್ನ ಧ್ವನಿಯನ್ನು ಮುಚ್ಚಿಸಲು ಪ್ರಯತ್ನ ಮಾಡಿದರೆ ಅದು ನಾಳೆ ಕೋಟಿ ಜನರ ಪ್ರತಿಧ್ವನಿಯಾಗಿ ಬದಲಾಗುತ್ತೆ. ಉದ್ಧವ್ ಠಾಕ್ರೆ ಗ್ಯಾಂಗ್ ಮತ್ತು ಕರಣ್ ಜೋಹರ್ ಗ್ಯಾಂಗ್ ನನ್ನ ಮನೆ ಆಫೀಸ್ ಅನ್ನು ಒಡೆದು ಹಾಕಿದೆ. ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತದೆ. ಆದರೆ ನಾನು ಸತ್ತರೂ ನಿಮ್ಮ ಬಂಡವಾಳವನ್ನು ಬಹಿರಂಗ ಮಾಡುತ್ತೇನೆ ಎಂದು ಕಂಗನಾ ಸವಾಲ್ ಎಸೆದಿದ್ದಾರೆ.

    ಬುಧವಾರ ಟ್ವೀಟ್ ಮಾಡಿದ್ದ ಕಂಗನಾ, ನಾನು ಯಾವತ್ತೂ ತಪ್ಪು ಮಾಡುವುದಿಲ್ಲ ಎಂದು ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಹೀಗಾಗಿಯೇ ನಾನು ಹೇಳಿದ್ದು, ನನ್ನ ಮುಂಬೈ ಈಗ ಪಿಓಕೆ ಆಗಿದೆ ಎಂದು ಟ್ವೀಟ್ ಮಾಡಿ, ಅಧಿಕಾರಿಗಳು ಮನೆಯನ್ನು ಒಡೆದು ಹಾಕುತ್ತಿರುವ ಫೋಟೋವನ್ನು ಹಾಕಿದ್ದರು. ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಜಾಪ್ರಭುತ್ವದ ಕಗ್ಗೋಲೆ ಬಾಬರ್ ಮತ್ತು ಅವನ ಸೈನಿಕರು ಎಂದು ವ್ಯಂಗ್ಯವಾಡಿದ್ದರು.

    ನಾನು ಮುಂಬೈಗೆ ಬರಲು ವಿಮಾನ ನಿಲ್ದಾಣದಲ್ಲಿದ್ದಾಗ, ಮಹಾರಾಷ್ಟ್ರ ಸರ್ಕಾರ ಮತ್ತು ಅವರ ಗೂಂಡಾಗಳು ನನ್ನ ಮನೆ ಮತ್ತು ಕಚೇರಿಯನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಒಡೆದು ಹಾಕಿದ್ದಾರೆ. ಅವರು ಒಡೆದು ಹಾಕಲಿ. ನಾನು ಮುಂಬೈಗಾಗಿ ನನ್ನ ರಕ್ತವನ್ನು ಬೇಕಾದರೂ ಕೊಡಲು ಸಿದ್ಧವಿದ್ದೇನೆ. ಅವರು ಏನೇ ಕಿತ್ತುಕೊಂಡರೂ ನನ್ನ ಹೋರಾಟದ ಗುಣವನ್ನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಕಂಗನಾ ಟ್ವೀಟ್ ಮಾಡಿದ್ದರು.

  • ನನ್ನ ಮನೆಯಂತೆ ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ: ಸಿಎಂ ಠಾಕ್ರೆ ವಿರುದ್ಧ ಕಂಗನಾ ಪ್ರಹಾರ

    ನನ್ನ ಮನೆಯಂತೆ ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ: ಸಿಎಂ ಠಾಕ್ರೆ ವಿರುದ್ಧ ಕಂಗನಾ ಪ್ರಹಾರ

    -ಸಿಎಂ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ
    -ವಿಮಾನ ನಿಲ್ದಾಣದ ಮುಂಭಾಗ ಕಪ್ಪು ಬಾವುಟ ಪ್ರದರ್ಶನ

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಮನೆ ಮತ್ತು ಕಚೇರಿ ನೆಲಸಮ ಮಾಡಿರುವ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಏಕವಚನದಲ್ಲಿ ಪ್ರಹಾರ ನಡೆಸಿದ್ದಾರೆ.

    ಶಿವಸೇನೆಯ ಬೆದರಿಕೆ ನಡುವೆಯೂ ಇಂದು ಮಧ್ಯಾಹ್ನ ಮುಂಬೈಗೆ ಬಂದಿಳಿದ ಕಂಗನಾ, ಟ್ವಿಟ್ಟರ್ ನಲ್ಲಿ ನೆಲಸಮವಾಗಿರುವ ಕಟ್ಟಡದ ವಿಡಿಯೋ ಹಾಕಿ ಪ್ರಜಾಪ್ರಭುತ್ವದ ಕೊಲೆ ಆಗುತ್ತಿದೆ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಜೊತೆ ವಿಡಿಯೋ ಮೂಲಕ ಮಹಾರಾಷ್ಟ್ರ ಸರ್ಕಾರ ಮತ್ತು ಫಿಲಂ ಮಾಫಿಯಾ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.

    ಕಂಗನಾ ಹೇಳಿದ್ದೇನು?: ಉದ್ಧವ್ ಠಾಕ್ರೆ ಫಿಲಂ ಮಾಫಿಯಾ ಜೊತೆ ಶಾಮೀಲಾಗಿ ಮನೆ ನಾಶ ಮಾಡಿ ನನ್ನ ವಿರುದ್ಧ ಸೇಡು ತೀರಿಸಿಕೊಂಡೆ ಎಂದು ತಿಳಿದುಕೊಂಡಿದ್ದೀಯಾ?. ಇಂದು ನನ್ನ ಮನೆ ನೆಲಸಮ ಆಗಿರಬಹುದು, ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ. ಇದು ಸಮಯದಾಟ, ಪ್ರತಿ ಬಾರಿ ಒಂದೇ ಆಗಿರಲ್ಲ. ಕಾಶ್ಮೀರಿ ಪಂಡಿತರ ಮೇಲೆ ಏನಾಗುತ್ತಿತ್ತು ಎಂಬುವುದು ಇಂದು ನನಗೆ ಅರ್ಥವಾಗಿದೆ. ನಾನು ಕೇವಲ ಅಯೋಧ್ಯೆ ಮಾತ್ರವಲ್ಲ, ಕಾಶ್ಮೀರದ ಕುರಿತು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಮಾತು ನೀಡುತ್ತಾನೆ. ಸಿನಿಮಾಗಳ ಮೂಲಕ ದೇಶದ ಜನರನ್ನ ಎಚ್ಚರಿಸುವ ಕೆಲಸ ಮಾಡುತ್ತೇನೆ. ಈ ರೀತಿ ಕೆಲಸಗಳ ನಡೆಯುತ್ತಿರುವ ಬಗ್ಗೆ ಕೇಳಿದ್ದೆ. ಆದ್ರೆ ಇಂದು ನನ್ನೊಂದಿಗೆ ನಡೆದಿದೆ. ಉದ್ಧವ್ ಠಾಕ್ರೆಯ ಕ್ರೂರತ್ವದ ಭಯೋತ್ಪಾದನೆ ನನ್ನೊಂದಿಗೆ ನಡೆದಿರೋದು ಒಳ್ಳೆಯದು ಆಯ್ತು. ಕಾರಣ ಇದಕ್ಕೆ ಕೆಲ ಮಹತ್ವದ ಕಾರಣವಿದೆ. ಜೈ ಹಿಂದ್, ಜೈ ಮಹಾರಾಷ್ಟ್ರ. ಇದನ್ನೂ ಓದಿ: ಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ

    ಮುಂಬೈನ ಪಾಲಿ ಹಿಲ್ಸ್ ನಲ್ಲಿರುವ ಕಂಗನಾ ರಣಾವತ್ ಕಚೇರಿ ಕಟ್ಟಡವನ್ನ ಬಿಎಂಸಿ ಇಂದು ಬೆಳಗ್ಗೆ ನೆಲಸಮ ಮಾಡಲು ಮುಂದಾಗಿತ್ತು. ಮಧ್ಯಾಹ್ನ ಹೈಕೋರ್ಟ್ ನೆಲಸಮ ಕಾರ್ಯಕ್ಕೆ ತಡೆ ನೀಡಿದ ಹಿನ್ನೆಲೆ ಬಿಎಂಸಿ ಅಧಿಕಾರಿಗಳು ಹಿಂದಿರುಗಿದ್ದಾರೆ. ಆದ್ರೆ ಕಟ್ಟಡದ ಒಳಭಾಗ ಭಾಗಶಃ ಕೆಡವಲಾಗಿದ್ದು, ಸದ್ಯದ ಒಳ ಭಾಗದ ವಿಡಿಯೋಗಳನ್ನ ಕಂಗನಾ ಶೇರ್ ಮಾಡಿಕೊಂಡಿದ್ದಾರೆ.

    https://twitter.com/KanganaTeam/status/1303634456658366464

    ಬಿಎಂಸಿಗೆ ಹೈಕೋರ್ಟ್ ಚಾಟಿ: ಹೈಕೋರ್ಟ್ ನೀಡಿದ ಆದೇಶವನ್ನ ಬಿಎಂಸಿ ಪಾಲನೆ ಮಾಡೋದರಲ್ಲಿ ವಿಫಲವಾದಂತೆ ಕಾಣಿಸುತ್ತಿದೆ. ನೋಟಿಸ್ ನೀಡಿದ 24 ಗಂಟೆಯೊಳಗೆ ಕಚೇರಿ ಮತ್ತು ಮನೆ ನೆಲಸಮ ಮಾಡುವ ಆತುರವೇನಿತ್ತು? ಇಂದು ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುವ ವಿಷಯ ತಿಳಿಸಿದಿದ್ದರೂ ಬಿಎಂಸಿ ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎಂದು ಹೈಕೋರ್ಟ್ ಬಿಎಂಸಿಗೆ ಚಾಟಿ ಬೀಸಿದೆ. ಇದನ್ನೂ ಓದಿ: ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ

    ಬಾಂಬೆ ಹೈಕೋರ್ಟ್ 26 ಮಾರ್ಚ್ 2020ರಂದು ರಾಜ್ಯ ಸರ್ಕಾರ, ಬಿಎಂಸಿ ಮತ್ತು ಸಂಬಂಧಿತ ವಿಭಾಗಗಳು ಯಾರ ವಿರುದ್ಧವೂ ಆತುರದ ನಿರ್ಧಾರಗಳನ್ನ ತೆಗೆದುಕೊಳ್ಳುವಂತಿಲ್ಲ ಎಂದು ಆದೇಶ ನೀಡಿತ್ತು. ಮಾರ್ಚ್ 26ರ ಆದೇಶಕ್ಕೆ ಸಂಬಂಧಿಸಿದಂತೆ ಆಗಸ್ಟ್ 31ಕ್ಕೆ ಹೈಕೋರ್ಟ್ ವಿಚಾರಣೆ ನಡೆಸಿ, ಆದೇಶದ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿತ್ತು. ಈ ಕಾಲಾವಧಿಯಲ್ಲಿ ಯಾರೇ ಸಮಸ್ಯೆ ಅನುಭವಿಸಿದ್ರೂ ಹೈಕೋರ್ಟ್ ಬಾಗಿಲು ತಟ್ಟಬಹುದು ಎಂದು ನ್ಯಾಯಾಲಯ ಹೇಳಿತ್ತು.

    ಮಧ್ಯಾಹ್ನ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗ ಭಾರತೀಯ ಕಮ್ಗರ್ ಸೇನಾ ಮತ್ತು ಶಿವಸೇನಾ ಕಾರ್ಯಕರ್ತರು ಕಂಗಾನ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಶಿವಸೇನಾ ಬೆದರಿಕೆ ಹಿನ್ನೆಲೆ ಕೇಂದ್ರ ಸರ್ಕಾರ ಕಂಗನಾ ರಣಾವತ್‍ಗೆ ಕೇಂದ್ರ ಸರ್ಕಾರ ವೈ ದರ್ಜೆಯ ಭದ್ರತೆ ನೀಡಿದೆ.

    ಮುಂಬೈಗೆ ಆಗಮಿಸಿರುವ ಕಂಗನಾ ರಣಾವತ್ ಏಳು ದಿನಗಳಲ್ಲಿ ಹಿಂದಿರುಗಲಿದ್ದಾರೆ. ಏಳು ದಿನಗಳಲ್ಲಿ ಹಿಂದಿರುಗುವ ದಾಖಲೆಗಳನ್ನ ಬಿಎಂಸಿ ಮುಂದೆ ಹಾಜರುಪಡಿಸದಿದ್ದಲ್ಲಿ 14 ದಿನ ಹೋಂ ಕ್ವಾರಂಟೈನ್ ನಲ್ಲಿ ಕಂಗನಾ ಅವರನ್ನ ಇರಿಸುವ ಸಾಧ್ಯತೆಗಳಿವೆ. ಇದನ್ನೂ ಓದಿ: ಶಿವಸೇನೆ ಧಮ್ಕಿ -ನಟಿ ಕಂಗನಾ ರಣಾವತ್‍ಗೆ ವೈ ದರ್ಜೆಯ ಭದ್ರತೆ

    ನಾನು ಯಾವತ್ತೂ ತಪ್ಪು ಮಾಡುವುದಿಲ್ಲ ಎಂದು ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಹೀಗಾಗಿಯೇ ನಾನು ಹೇಳಿದ್ದು, ನನ್ನ ಮುಂಬೈ ಈಗ ಪಿಓಕೆ ಆಗಿದೆ ಎಂದು ಟ್ವೀಟ್ ಮಾಡಿ, ಅಧಿಕಾರಿಗಳು ಮನೆಯನ್ನು ಒಡೆದು ಹಾಕುತ್ತಿರುವ ಫೋಟೋವನ್ನು ಹಾಕಿದ್ದಾರೆ. ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಜಾಪ್ರಭುತ್ವದ ಕಗ್ಗೊಲೆ ಬಾಬರ್ ಮತ್ತು ಅವನ ಸೈನಿಕರು ಎಂದು ವ್ಯಂಗ್ಯವಾಡಿದ್ದರು.

  • ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ

    ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ

    – ಬೆದರಿಕೆ ನಡುವೆಯೂ ಇಂದು ಮುಂಬೈಗೆ ಆಗಮಿಸಿದ ನಟಿ
    – ಶಿವಸೇನೆ, ಬಿಎಂಸಿ ವಿರುದ್ಧ ನೆಟ್ಟಿಗರು ಗರಂ

    ಮುಂಬೈ: ನಗರದಲ್ಲಿರುವ ನಟಿ ಕಂಗನಾ ರಣಾವತ್ ಅವರ ಮನೆ ಮತ್ತು ಆಫೀಸ್ ಅನ್ನು ಅಕ್ರಮವಾಗಿ ಮಾರ್ಪಾಡು ಮಾಡಲಾಗಿದೆ ಎಂದು ಆರೋಪಿಸಿ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್(ಬಿಎಂಸಿ) ಕೆಡವಿ ಹಾಕಿದೆ.

    ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟಿ ಕಂಗನಾ ರಣಾವತ್ ಅವರು, ಶಿವಸೇನಾ ವಿರುದ್ಧ ಮಾತನಾಡಿದ್ದಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ನನ್ನನ್ನು ಟಾರ್ಗೆಟ್ ಮಾಡಿದೆ. ಹೀಗಾಗಿ ಬಿಎಂಸಿಯನ್ನು ಉಪಯೋಗಿಸಿಕೊಂಡು ನನ್ನ ಮನೆ ಮತ್ತು ಆಫೀಸ್ ಅನ್ನು ಒಡೆದು ಹಾಕಿದೆ ಎಂದು ಆರೋಪ ಮಾಡಿದ್ದಾರೆ.

    ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಂಗನಾ, ನಾನು ಯಾವತ್ತೂ ತಪ್ಪು ಮಾಡುವುದಿಲ್ಲ ಎಂದು ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಹೀಗಾಗಿಯೇ ನಾನು ಹೇಳಿದ್ದು, ನನ್ನ ಮುಂಬೈ ಈಗ ಪಿಓಕೆ ಆಗಿದೆ ಎಂದು ಟ್ವೀಟ್ ಮಾಡಿ, ಅಧಿಕಾರಿಗಳು ಮನೆಯನ್ನು ಒಡೆದು ಹಾಕುತ್ತಿರುವ ಫೋಟೋವನ್ನು ಹಾಕಿದ್ದಾರೆ. ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಜಾಪ್ರಭುತ್ವದ ಕಗ್ಗೋಲೆ ಬಾಬರ್ ಮತ್ತು ಅವನ ಸೈನಿಕರು ಎಂದು ವ್ಯಂಗ್ಯವಾಡಿದ್ದಾರೆ.

    ಮುಂಬೈನ ಪಾಲಿ ಹಿಲ್ಸ್‍ನಲ್ಲಿರುವ ಕಂಗನಾ ಅವರು ಕಚೇರಿಯಲ್ಲಿ 14 ಬಗೆಯ ನಿಯಮ ಉಲ್ಲಂಘನೆಗಳನ್ನು ಪಟ್ಟಿ ಮಾಡಿದ್ದೇವೆ. ಜೊತೆಗೆ ಆಕೆ ಬಾಂದ್ರಾ ಪ್ರದೇಶದಲ್ಲಿರುವ ಬಂಗಲೆಯಲ್ಲಿ ಕೂಡ ಅಕ್ರಮವಾದ ಕೆಲ ರಚನೆಗಳು ಕಂಡು ಬಂದಿವೆ. ಹೀಗಾಗಿ ನಾವು ಅವುಗಳನ್ನು ನೆಲಸಮ ಮಾಡಿ ಅವರಿಗೆ ವಿಳಾಸದಲ್ಲಿಯೇ ನೋಟಿಸ್ ನೀಡಲಾಗಿದೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

    ನಾನು ಮುಂಬೈಗೆ ಬರಲು ವಿಮಾನ ನಿಲ್ದಾಣದಲ್ಲಿ ಇದ್ದಾಗ, ಮಹಾರಾಷ್ಟ್ರ ಸರ್ಕಾರ ಮತ್ತು ಅವರ ಗೂಂಡಾಗಳು ನನ್ನ ಮನೆಗ ಮತ್ತು ಆಫೀಸ್‍ಗೆ ಹೋಗಿ ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿ ಅದನ್ನು ಒಡೆದು ಹಾಕಿದ್ದಾರೆ. ಅವರು ಒಡೆದು ಹಾಕಲಿ. ನಾನು ಮುಂಬೈಗಾಗಿ ನನ್ನ ರಕ್ತವನ್ನು ಬೇಕಾದರೂ ಕೊಡಲು ಸಿದ್ಧವಿದ್ದೇನೆ. ಅವರು ಏನೇ ಕಿತ್ತುಕೊಂಡರೂ ನನ್ನ ಹೋರಾಟದ ಗುಣವನ್ನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಟ್ವೀಟ್ ಕಂಗನಾ ಟ್ವೀಟ್ ಮಾಡಿದ್ದಾರೆ.

    ಇನ್ನೊಂದು ಟ್ವೀಟ್ ಮಾಡಿರುವ, ನನ್ನ ಮನೆಯನ್ನು ಅಕ್ರಮವಾಗಿ ಕಟ್ಟಿದ್ದರೆ, ಅದನ್ನು ಈಗಲೇ ಒಡೆಯಬೇಕಿತ್ತಾ? ಕೊರೊನಾ ಕಾರಣದಿಂದ ಸೆಪ್ಟಂಬರ್ 30ವರೆಗೆ ಸುಪ್ರೀಂ ಕೋರ್ಟ್ ಯಾವುದೇ ರೀತಿಯ ಮನೆಗಳನ್ನು ಕೆಡವುವಂತಿಲ್ಲ ಎಂದು ಹೇಳಿದೆ. ಫ್ಯಾಸಿಸಮ್ ಎಂದರೆ ಏನು ಎಂಬುದನ್ನು ಬಾಲಿವುಡ್ ಈಗ ನೋಡುತ್ತಿದೆ ಎಂದು ಕಂಗನಾ ಹೇಳಿದ್ದಾರೆ. ಜೊತೆಗೆ ನಾನು ಪ್ರೀತಿ ಇಂದು ಹಲವಾರು ವರ್ಷದಿಂದ ಕಟ್ಟಿದ ಮನೆಯನ್ನು ಕೆಡವಲು ನನಗೆ ಎಚ್ಚರಿಕೆಯ ನೋಟಿಸ್ ಕಳುಹಿಸಲಾಗಿದೆ. ಅವರು ಮನೆಯನ್ನು ಕೆಡವಬಹುದು ನನ್ನ ಆತ್ಮಬಲವನ್ನು ಅಲ್ಲ ಎಂದು ಕಂಗನಾ ತಿಳಿಸಿದ್ದಾರೆ.

    https://twitter.com/ANI/status/1303585390146666497

    ಈ ಮೊದಲು ಕಂಗನಾ ರಣಾವತ್ ಅವರು, ಮುಂಬೈಯನ್ನು ಪಿಓಕೆ ಎಂದು ಹೇಳಿದ್ದರು. ಇದಕ್ಕೆ ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದ ಶಿವಸೇನಾ ನಾಯಕರು ಕಂಗನಾ ಮುಂಬೈಗೆ ಬರುವುದು ಬೇಡ ಎಂದು ಹೇಳಿದ್ದರು. ಜೊತೆಗೆ ಕೆಲವರು ಬೆದರಿಕೆಯನ್ನು ಹಾಕಿದ್ದರು. ಆದರೆ ಇದಕ್ಕೆ ಭಯಪಡದ ಕಂಗನಾ ಇಂದು ಮುಂಬೈಗೆ ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಅವರಿಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಿದೆ.

    ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸುತ್ತಿರುವ ಮುಂಬೈ ಪೊಲೀಸರು ಹಾಗೂ ಶಿವಸೇನೆಯ ಸರ್ಕಾರದ ವಿರುದ್ಧ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಶಿವಸೇನೆ ಹಾಗೂ ಎನ್‍ಸಿಪಿ ಕಾರ್ಯಕರ್ತರು ನಟಿ ಮುಂಬೈಗೆ ಆಗಮಿಸಬಾರದು, ಅವರು ಮುಂಬೈನಿಂದ ದೂರ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರು. ಬಳಿಕ ಎಂಪಿ ಸಂಜಯ್ ರಾವತ್ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರ ಮಧ್ಯೆಯೂ ಕಂಗನಾ ಇಂದು ಮುಂಬೈಗೆ ಆಗಮಿಸಿಸುತ್ತಿದ್ದಾರೆ.

  • ಚರಂಡಿಗೆ ಬಿದ್ದಿರುವ ಮಗ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ – ತಂದೆ

    ಚರಂಡಿಗೆ ಬಿದ್ದಿರುವ ಮಗ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ – ತಂದೆ

    ಮುಂಬೈ: ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆ ಬುಧವಾರ ರಾತ್ರಿ ಮೂರು ವರ್ಷದ ಬಾಲಕ ತೆರೆದ ಚರಂಡಿಗೆ ಬಿದ್ದಿದ್ದು, ಈ ಬಾಲಕನನ್ನು ಹುಡುಕುವ ಕಾರ್ಯ ಗುರುವಾರ ಬೆಳಗ್ಗೆಯಿಂದ ಆರಂಭಗೊಂಡಿದೆ. ಆದರೆ ಬಾಲಕನ ಸುಳಿವು ಮಾತ್ರ ಸಿಕ್ಕಿಲ್ಲ.

    ಇದರಿಂದ ಮನನೊಂದ ಬಾಲಕ ದಿವ್ಯನಾಶ್ ಅವರ ಕುಟುಂಬ ಸಹನೆಯನ್ನು ಕಳೆದುಕೊಂಡಿದ್ದು, ಆತನ ತಂದೆ ನನ್ನ ಮಗ ಇವತ್ತು ಪತ್ತೆಯಾಗದೇ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

    ಬುಧವಾರ ರಾತ್ರಿ ಅಂಬೇಡ್ಕರ್ ನಗರದಲ್ಲಿ ಸುಮಾರು ರಾತ್ರಿ 10.24ರ ವೇಳೆಗೆ ಮನೆಯಲ್ಲಿ ಊಟ ಮುಗಿಸಿ ಹೊರಗೆ ಬಂದ ಬಾಲಕ ರಸ್ತೆಯ ಬದಿಯಲ್ಲಿರುವ ತೆರೆದ ಚರಂಡಿಗೆ ಬಿದ್ದಿದ್ದಾನೆ. ಬಾಲಕ ಚರಂಡಿಗೆ ಬೀಳುತ್ತಿರುವ ಭಯಾನಕ ದೃಶ್ಯ ಪಕ್ಕದಲ್ಲಿನ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಬಾಲಕನನ್ನು ಹುಡುಕಲು ಅಗ್ನಿ ಶಾಮಕ ದಳ, ಎನ್‍ಡಿಆರ್‍ಎಫ್ ಮತ್ತು ಬಿಎಂಸಿಯ ಹಲವಾರು ತಂಡಗಳು ಸ್ಥಳಕ್ಕೆ ಬಂದು ಶೋಧ ಕಾರ್ಯ ನಡೆಸುತ್ತೇವೆ. ಆದರೆ ಶೋಧ ಕಾರ್ಯ ಆರಂಭವಾಗಿ 20 ಗಂಟೆಗಳು ಕಳೆದರೂ ಬಾಲಕ ದಿವ್ಯನಾಶ್‍ನ ಸುಳಿವು ಇನ್ನೂ ಸಿಕ್ಕಿಲ್ಲ.

    ಈ ವಿಚಾರವಾಗಿ ಮಾತನಾಡಿರುವ ಬಾಲಕನ ತಂದೆ, “ಈ ಘಟನೆಗೆ ಬಿಎಂಸಿಯವರೇ ಕಾರಣ. ಅವರು ನನ್ನ ಮಗನನ್ನು ವಾಪಸ್ ತಂದುಕೊಡುತ್ತರಾ? ನನಗೆ ನನ್ನ ಮಗಬೇಕು. ಅವನು ಇವತ್ತು ಸಿಗದೆ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

    ಈ ಘಟನೆಯಿಂದ ಬಾಲಕನ ಕುಟುಂಬ ವಿಚಲಿತಗೊಂಡಿದ್ದು, ಬಾಲಕನ ತಾಯಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಈ ವಿಚಾರವಾಗಿ ಬಿಎಂಸಿ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಘಟನೆ ನಡೆಯಲು ಅವರೇ ಕಾರಣ. ಈ ಚರಂಡಿಯ ವಿಚಾರವಾಗಿ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೆಲ ಸ್ಥಳೀಯರು ಮತ್ತು ಕುಟುಂಬದವರು ಸೇರಿ 30 ನಿಮಿಷ ರಸ್ತೆ ತಡೆ ನಡೆಸಿದರು. ಬಾಲಕ ಬಿದ್ದ ಸಮಯದಲ್ಲಿ ಚರಂಡಿಯಲ್ಲಿ ನೀರು ರಭಸದಿಂದ ಹರಿಯುತಿತ್ತು ಮತ್ತು 3 ಕಿ.ಮೀ ನಂತರ ಚರಂಡಿ ಕೊನೆಯಾಗುತ್ತದೆ. ನಂತರ ಅ ನೀರು ಅರಬ್ಬಿ ಸಮುದ್ರಕ್ಕೆ ಹರಿಯುತ್ತದೆ. ನೀರಿನ ರಭಸ ಜಾಸ್ತಿ ಇರುವ ಕಾರಣ ಬಾಲಕ ಸಮುದ್ರ ಸೇರಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

  • ಮುಂಬೈನ ರಸ್ತೆ ಗುಂಡಿಗಳನ್ನು ಮುಚ್ಚಲು ಕಾಂಗ್ರೆಸ್ ಕಾರ್ಯಕರ್ತರಿಂದ ಕಾರ್ಯಕ್ರಮ

    ಮುಂಬೈನ ರಸ್ತೆ ಗುಂಡಿಗಳನ್ನು ಮುಚ್ಚಲು ಕಾಂಗ್ರೆಸ್ ಕಾರ್ಯಕರ್ತರಿಂದ ಕಾರ್ಯಕ್ರಮ

    ಮುಂಬೈ: ಮುಂಬೈ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಂಬೈನ ರಸ್ತೆ ಗುಂಡಿಗಳನ್ನು ಮುಚ್ಚಲು ‘ಆವೊ ಪಾಥ್ ಹೋಲ್ಸ್ ಗಿಣೇ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದರು. ಕಾಂಗ್ರೆಸ್ ಕಾರ್ಯಕರ್ತರೇ ಸ್ವತಃ ಗುಂಡಿಯನ್ನು ಮುಚ್ಚುವ ಮೂಲಕ ಬಿಜೆಪಿ ಮತ್ತು ಶಿವಸೇನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್‍ನ ಸಿಟಿ ಯೂನಿಟ್ ಮುಖ್ಯಸ್ಥ ಸಂಜಯ್ ನಿರುಪಮ್ ಮಾತನಾಡುತ್ತಾ, ಶಿವಸೇನಾ ಮತ್ತು ಬಿಜೆಪಿ ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಶನ್ ನಿಂದ ಹೊರಬರಬೇಕಿದೆ. ಇಲ್ಲವಾದರೆ ನಾಗರಿಕರನ್ನು ನಗರದ ಗುಂಡಿ ಬಿದ್ದಿರುವ ರಸ್ತೆಗಳಿಂದ ಮುಕ್ತವಾಗಿಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

    ಬಿಎಂಸಿಯೂ ಗುಂಡಿಗಳನ್ನು ಮುಕ್ತಗೊಳಿಸಲು 48 ಗಂಟೆಗಳ ಗಡುವು ನೀಡಿದ್ದು, ಅದು ಕೊನೆಗೊಂಡಿದೆ. ಆದರೂ ಬಹುತೇಕ ರಸ್ತೆಗಳನ್ನು ದುರಸ್ತಿ ಮಾಡಲು ಬಿಎಂಸಿ ವಿಫಲವಾಗಿದೆ. ಬಿಎಂಸಿ ನಿರಾಸಕ್ತಿ ಮತ್ತು ಅಸಮರ್ಥತೆಯಿಂದ ಮುಂಬೈ ನಿವಾಸಿಗಳು ತೊಂದರೆಪಡುವಂತಾಗಿದೆ. ಅಷ್ಟೇ ಅಲ್ಲದೇ ಮುಂಬೈನಲ್ಲಿ ಈ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಹಲವರು ಸಾವನ್ನಪ್ಪುತ್ತಿದ್ದಾರೆ ಎಂದು ನಿರೂಪಮ್ ವಾಗ್ದಾಳಿ ನಡೆಸಿದರು.

    ಬಿಎಂಸಿಯ ಸಾಮಾನ್ಯ ಸಭೆಯಲ್ಲಿ ಹೆಚ್ಚುವರಿ ಮುನಿಸಿಪಲ್ ಕಮೀಷನರ್ ವಿಜಯ್ ಸಿಂಘಾಲ್ ಅವರು ರಸ್ತೆಗಳನ್ನು ಸರಿಪಡಿಸಲು 48 ಗಂಟೆಗಳ ಭರವಸೆಯನ್ನು ನೀಡಿದ್ದು, ಕಾರ್ಪೋರೇಟರ್‍ಗಳು ರಸ್ತೆಗಳ ಗುಂಡಿಗಳಿಗೆ ಸಂಬಂಧಿಸಿದಂತೆ ನಾಗರಿಕ ಆಡಳಿತ ಸಭೆಯನ್ನು ಸಹ ನಡೆಸಿದ್ದರು.

    ಈ ಗುಂಡಿಗಳನ್ನು ಮುಕ್ತಗೊಳಿಸಲು ಒಟ್ಟು 2,500 ಟನ್ಸ್ ಸಿಮೆಂಟ್ ಮಿಶ್ರಣದ ಅವಶ್ಯಕತೆ ಇದೆ. ಆದರೆ ಬರೀ 40 ಟನ್ಸ್ ಮಾತ್ರ ಸ್ಟಾಕ್ ಇದೆ. ಹಾಗಾಗಿ ಇದರಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುದಿಲ್ಲ. ಇದಕ್ಕೆ ಬಿಜೆಪಿ ಮತ್ತು ಶಿವಸೇನಾ ಕಾರಣವಾದ್ದರಿಂದ ಬಿಎಂಸಿಯಿಂದ ಹೊರಬರಬೇಕು ಎಂದು ಗುಂಡಿ ರಿಪೇರಿಂಗ್ ಡ್ರೈವ್‍ನಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನಿರೂಪಮ್ ಹೇಳಿದರು.