Tag: Bluewhale

  • ಅಂದು ಬ್ಲೂವೇಲ್, ಇಂದು ಪಬ್ ಜಿ- ನಿಮ್ಹಾನ್ಸ್ ಸೇರೋ ರೋಗಿಗಳ ಸಂಖ್ಯೆ ಹೆಚ್ಚಾಯ್ತು!

    ಅಂದು ಬ್ಲೂವೇಲ್, ಇಂದು ಪಬ್ ಜಿ- ನಿಮ್ಹಾನ್ಸ್ ಸೇರೋ ರೋಗಿಗಳ ಸಂಖ್ಯೆ ಹೆಚ್ಚಾಯ್ತು!

    ಬೆಂಗಳೂರು: ಬ್ಲೂವೇಲ್ ಆಯ್ತು, ಈಗ ಪಬ್ ಜಿ ಕ್ರೇಜ್‍ಗೆ ಬೆಂಗಳೂರಿನ ಯುವ ಸಮೂಹ ಬಲಿಯಾಗುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

    ಹೌದು, ಹಿಂದೆ ಬ್ಲೂವೇಲ್ ನಂತಹ ಡೆಡ್ಲಿ ಗೇಮ್ ಸಾಕಷ್ಟು ಜನರ ಬಲಿ ಪಡೆದಿತ್ತು. ಆದ್ರೆ ಈಗ ಬಂದಿರುವ ಪಬ್ ಜಿ ಕೂಡ ಬ್ಲೂವೇಲ್‍ನಂತೆ ಡೆಡ್ಲಿ ಗೇಮ್ ಆಗಿ ಮಾರ್ಪಾಡಾಗುತ್ತಿದೆ. ಇತ್ತೀಚೆಗೆ ಪಬ್ ಜಿ ಗೇಮ್ ಗೆ ಸಾವಿರಾರು ಜನರು ಅಡಿಕ್ಟ್ ಆಗಿಹೋಗಿದ್ದಾರೆ. ಅದರಲ್ಲೂ ಯುವ ಪೀಳಿಗೆ ಪಬ್ ಜಿ ಗೇಮ್‍ನಲ್ಲಿಯೇ ಬಹುತೇಕ ಮುಳುಗಿ ಹೋಗಿದೆ.

    ಈ ಪಬ್ ಜಿ ಗೇಮ್ ಕ್ರೇಜ್ ರಾಜಧಾನಿಯಲ್ಲಿ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಎಲ್ಲಿ ನೋಡಿದರೂ ಪಬ್ ಜಿ ಆಡುವ ಜನರೇ ಕಾಣಸಿಗುತ್ತಾರೆ. ಪಬ್ ಜಿ ಆಡುವವರು ಯಾವಾಗಲು ನಾವು ಸೈನಿಕರು ಎನ್ನುವ ಭ್ರಮೆಯಲ್ಲಿಯೇ ಇರುತ್ತಾರೆ. ಪಬ್ ಜಿ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿರುತ್ತಾರೆ.

    ಪ್ರತಿ ತಿಂಗಳು ನಿಮ್ಹಾನ್ಸ್ ಆಸ್ಪತ್ರೆಗೆ ಏನಿಲ್ಲಾ ಅಂದ್ರು ಸುಮಾರು 40 ಪಬ್ ಜಿ ಗೇಮ್‍ನಿಂದ ಮಾನಸಿಕ ಖಿನ್ನತೆಗೆ ಒಳಗಾದ ಕೇಸ್‍ಗಳು ದಾಖಲಾಗುತ್ತಿದೆ. ಇಲ್ಲಿಯವರೆಗೆ ಪಬ್ ಜಿ ಗೇಮ್ ಕ್ರೇಜ್‍ಗೆ ಸಂಬಂಧಿತ ಸರಿ ಸುಮಾರು 120 ಮೆಂಟಲ್ ಹೆಲ್ತ್ ಕಂಡಿಷನ್ ಕೇಸ್‍ಗಳು ನಿಮ್ಹಾನ್ಸ್‍ನಲ್ಲಿ ದಾಖಲಾಗಿದೆ.

    ಡೆಡ್ಲಿ ಗೇಮ್ ನಿಂದ ಯುವ ಸಮೂಹ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದೆ. ಈ ಆಟದಿಂದ ಸಾಕಷ್ಟು ಜನರ ಜೀವನ ಹಾಳಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೂ ಪಬ್ ಜಿ ಗೇಮ್ ಪ್ರಭಾವ ಬೀರುತ್ತಿದೆ. ಇದರಿಂದ ಹೆಚ್ಚಾಗಿ ವಿದ್ಯಾರ್ಥಿಗಳು ಮನಸಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ಮನೋಶಾಸ್ರ್ತಜ್ಞ ಶ್ರೀಧರ್ ಆಟದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

    ಮೊದಲು ಬ್ಲೂವೇಲ್ ಗೇಮ್ ಕ್ರೇಜ್ ಜಗತ್ತಿನಾದ್ಯಂತ ಭಯ ಹುಟ್ಟಿಸಿತ್ತು. ಈಗ ಪಬ್ ಜಿ ಗೇಮ್ ಎಲ್ಲಿ ಬ್ಲೂವೇಲ್ ರೀತಿ ತಮ್ಮ ಮಕ್ಕಳನ್ನು ಬಲಿ ಪಡೆಯುತ್ತೋ ಎಂದು ಪೋಷಕರು ಚಿಂತಿಸುವಂತಾಗಿದೆ.

    ಏನಿದು ಪಬ್ ಜಿ?
    ಪಬ್ ಜಿ ಎನ್ನುವುದು ಒಂದು ಬ್ಯಾಟಲ್ ಫೀಲ್ಡ್ ಗೇಮ್ (ಯುದ್ಧ ಭೂಮಿ ಆಟ). ಈ ಆಟದ ಸಂಪೂರ್ಣ ಭೂಪಟವನ್ನು ಆಟಗಾರಿಗೆ ಮೊದಲು ತೋರಿಸಲಾಗುತ್ತದೆ. ಬಳಿಕ ಆಟಗಾರರು ತಮಗೆ ಬೇಕಾದ ಪ್ರದೇಶವನ್ನು ಆಯ್ದುಕೊಂದು ಆ ಪ್ರದೇಶಕ್ಕೆ ವಿವಾನದಿಂದ ಕೆಳಗೆ ಹಾರಿ ಮನೆಗಳತ್ತ ಓಡ್ತಾರೆ. ಆಟಗಾರರಿದ್ದ ಪ್ರದೇಶದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು, ಮೆಡಿಕಲ್ ಕಿಟ್‍ಗಳನ್ನು, ಯುದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದೆ ಸಾಗುತ್ತಾರೆ. ಆಟಗಾರರು ಇಳಿದ ಪ್ರದೇಶದ ಸುತ್ತ ವೃತ್ತವೊಂದು ಸಣ್ಣದಾಗುತ್ತೆ. ಆಗ ಅಲ್ಲಿದ್ದ ನೂರಾರು ಜನರ ಜೊತೆ ಹೋರಾಡಿ ಉಳಿದರೇ ಗೆದ್ದಂತೆ, ಮೃತಪಟ್ಟರೆ ಸೋತಂತೆ. ಈ ಆಟದ ವಿಶೇಷ ಏನೆಂದರೆ ಸ್ನೇಹಿತರ ಜೊತೆ ಸೇರಿ ಆಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ಲೂವೇಲ್‍ ಆಟಕ್ಕೆ ಬಲಿಯಾದ 12ರ ಬಾಲಕ!

    ಬ್ಲೂವೇಲ್‍ ಆಟಕ್ಕೆ ಬಲಿಯಾದ 12ರ ಬಾಲಕ!

    ಕಲಬುರಗಿ: ನೇಣು ಬಿಗಿದುಕೊಂಡು 12 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಮಹಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.

    ಸಮರ್ಥ್(12) ಬ್ಲೂವೇಲ್‍ಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಸಮರ್ಥ್ ಬ್ಲೂವೇಲ್ ಗೇಮ್‍ನ ಟಾಸ್ಕ್ ಗೆ ಬಲಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಸಮರ್ಥ್ ಖಾಸಗಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದನು. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನದ ಮೊದಲು ಆತ ಏಕಾಂಗಿಯಾಗಿದ್ದನು ಎಂದು ತಿಳಿದು ಬಂದಿದೆ.

    ಸಮರ್ಥ್ ಎರಡು ದಿನದ ಮೊದಲು ಮನೆಯಲ್ಲೇ ಬ್ಲೂವೇಲ್ ಗೇಮ್‍ನ ಸಿಡಿಯನ್ನು ತಂದಿದ್ದಾನೆ. ಅಲ್ಲದೇ ಆತ ತನ್ನ ಎರಡು ಕೈಗಳನ್ನು ಕಟ್ಟಿಕೊಳ್ಳೋಕ್ಕೆ ಪ್ರಯತ್ನಿಸುತ್ತಿದ್ದನು. ಪೋಷಕರು ಈ ವಿಷಯದ ಬಗ್ಗೆ ಆತನನ್ನು ಕೇಳಿದ್ದಾಗ ಇದು ಶಾಲೆಯಲ್ಲಿ ಹೇಳಿಕೊಟ್ಟ ಚಟುವಟಿಕೆ ಎಂದು ಸುಳ್ಳು ಹೇಳುತ್ತಿದ್ದನಂತೆ. ಆತನ ಮಾತು ನಿಜವೆಂದು ನಂಬಿ ಪೋಷಕರು ನಿರ್ಲಕ್ಷಿಸಿದ್ದರು.

    ಸಮರ್ಥ್ ಎರಡು ದಿನದ ಹಿಂದೆ ತನ್ನ ಹಣದಲ್ಲಿ ವೇಲ್ ಖರೀದಿಸಿದ್ದನು. ಸದ್ಯ ಸಮರ್ಥ್ ಸೋಮವಾರ ಸಂಜೆ ಸುಮಾರು 7 ಗಂಟೆಗೆ ಆಟವಾಡುತ್ತಾ ಹಠ ಮಾಡಿ ತಾಯಿಗೆ ಪಾನಿಪುರಿ ತರಲು ಕಳುಹಿಸಿದ್ದಾನೆ. ಈ ಸಂದರ್ಭದಲ್ಲಿ ಬ್ಲೂವೇಲ್‍ನ ಸಾವಿನ ಟಾಸ್ಕ್ ಎದುರಾಗಿದ್ದು, ಸಮರ್ಥ್ ವೇಲ್ ನನ್ನು ಫ್ಯಾನಿಗೆ ಬಿಗಿದು ನೇಣಿಗೆ ಶರಣಾಗಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಸದ್ಯ ಈ ಬಗ್ಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಏನಿದು ಬ್ಲೂ ವೇಲ್ ಗೇಮ್?: ಇದು ರಷ್ಯಾ ಮೂಲದ ಭಯಾನಕ ಆನ್ ಲೈನ್ ಆಟವಾಗಿದ್ದು, ಇದನ್ನು ಮಾರಣಾಂತಿಕ ಬ್ಲೂ ವೇಲ್ ಗೇಮ್ ಅಥವಾ ಬ್ಲೂ ವೇಲ್ ಚಾಲೆಂಜ್ ಅಂತನೂ ಕರೆಯುತ್ತಾರೆ. ಈ ಆಟದಲ್ಲಿ ಸಂಗೀತಾ ಕೇಳುವುದು, ಬೆಳಗ್ಗೆ ಬೇಗ ಏಳುವುದು ಸೇರಿದಂತೆ 50 ಟಾಸ್ಕ್ ಗಳಿರುತ್ತವೆ. ಇದರಲ್ಲಿ ಕೊನೆಯ ಆಟ ಎತ್ತರದ ಕಟ್ಟಡದಿಂದ ಕೆಳಗೆ ಜಿಗಿಯುವುದು ಆಗಿರುತ್ತದೆ. ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವ ಮುನ್ನ ವ್ಯಕ್ತಿ ಸಾಕ್ಷಿಗೆ ಫೋಟೋಗಳನ್ನು ಕಳುಹಿಸಬೇಕು. ನಂತರ ಕಟ್ಟಡದಿಂದ ಹಾರಬೇಕು ಎಂದಾಗಿರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv